Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಜಾತಿ ಸಮೀಕ್ಷೆಯನ್ನು ವಿಪ್ರರೇಕೆ...

ಜಾತಿ ಸಮೀಕ್ಷೆಯನ್ನು ವಿಪ್ರರೇಕೆ ಕಡೆಗಣಿಸುತ್ತಿದ್ದಾರೆ?

ಕೆ.ಎನ್. ಲಿಂಗಪ್ಪಕೆ.ಎನ್. ಲಿಂಗಪ್ಪ21 Oct 2025 9:10 AM IST
share
ಜಾತಿ ಸಮೀಕ್ಷೆಯನ್ನು ವಿಪ್ರರೇಕೆ ಕಡೆಗಣಿಸುತ್ತಿದ್ದಾರೆ?

ಸಮಗ್ರ ಕರ್ನಾಟಕದ ಎಲ್ಲ ರೀತಿಯ ಅಭಿವೃದ್ಧಿಯ ಉದ್ದೇಶದಿಂದ ಸಮಸ್ತ ಜನರ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸಮೀಕ್ಷೆಗಳನ್ನು ಆಯೋಗ ನಡೆಸುತ್ತಿದೆ. ಇದು ಕೇವಲ ತಲೆ ಎಣಿಕೆಯ ಕಾರ್ಯವಲ್ಲ. ಸಕಲ ಜಾತಿಗಳು ಯಾವ ಯಾವ ಕ್ಷೇತ್ರದಲ್ಲಿ ಯಾವ ಮಟ್ಟದಲ್ಲಿ ಏಳಿಗೆ ಹೊಂದಿವೆ ಎಂಬುದನ್ನು ಅರಿಯ ಬೇಕಾಗಿರುವುದರಿಂದ ನಾಡಿನ ಸಮಗ್ರ ಜಾತಿಯ ಜನರ ಸಮೀಕ್ಷೆ ಕಾರ್ಯವಿದು. ಯಾರೊಬ್ಬರಿಗೂ ಸೀಮಿತವಾದುದಲ್ಲ ಎಂಬುದನ್ನು ಮೊದಲು ತಿಳಿಯಬೇಕು. ಸಮೀಕ್ಷೆಯಲ್ಲಿ ಭಾಗವಹಿಸುವುದನ್ನು ನಿರಾಕರಿಸುವ ಮೊದಲು ನೂರು ಬಾರಿ ಯೋಚನೆ ಮಾಡಬೇಕು.

ಮೊನ್ನೆಯಷ್ಟೇ, ಆ ಸಮುದಾಯಕ್ಕೆ ಸೇರಿದ ಸ್ನೇಹಿತನೋರ್ವ, ದೂರವಾಣಿ ಕರೆ ಮಾಡಿ ‘‘ಈ ದಿನ ಗಣತಿದಾರ ಸಮೀಕ್ಷೆ ಮಾಡುವ ಸಲುವಾಗಿ ಮನೆಗೆ ಬಂದಿದ್ದರು. ಆದರೆ ಸಮೀಕ್ಷೆಗೆ ಸಂಬಂಧಿಸಿದ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಕೊಡುವ ಉಸಾಬರಿಗೆ ನಾವು ಹೋಗಲಿಲ್ಲ. ಕೇವಲ ಧರ್ಮದ ಕಾಲಂನಲ್ಲಿ ‘ಹಿಂದೂ’ ಎಂದು ಬರೆಸಿದೆವು ಅಷ್ಟೇ’’ ಎಂದರು. ಏಕೆ ಹಾಗೆ ಉದಾಸೀನ ಮಾಡಿದಿರಿ ಎಂಬ ಪ್ರಶ್ನೆಗೆ ಅವರಿಂದ ಬಂದ ಉತ್ತರದಿಂದ ಆಶ್ಚರ್ಯವೂ ಮತ್ತು ಕೋಪವೂ ಒಮ್ಮೆಲೆ ಬಂದವೆನ್ನಿ. ಆದರೆ ನಾನೇನು ಮಾತಾಡುವ ಹಾಗಿಲ್ಲ. ಏಕೆಂದರೆ ಕರ್ನಾಟಕದ ಉಚ್ಚ ನ್ಯಾಯಾಲಯವೇ, ಪ್ರಶ್ನೆಗಳೆಲ್ಲದಕ್ಕೂ ಉತ್ತರಿಸಲು ಗಣತಿದಾರರು ಸಾರ್ವಜನಿಕರನ್ನು ಒತ್ತಾಯ ಪಡಿಸುವ ಹಾಗಿಲ್ಲ ಎಂದು ಫರ್ಮಾನು ಹೊರಡಿಸಿದೆ ಮತ್ತು ಅದಕ್ಕೆ ಪ್ರತಿಯಾಗಿ ನ್ಯಾಯಾಲಯದ ಆದೇಶದಂತೆ ಹಿಂದುಳಿದ ವರ್ಗಗಳ ಆಯೋಗ ಮತ್ತು ಸರಕಾರ ಪ್ರಮಾಣಪತ್ರವನ್ನೂ ಸಲ್ಲಿಸಿವೆ.

ನ್ಯಾಯಾಲಯದ ಫರ್ಮಾನು ಒತ್ತಟ್ಟಿಗಿರಲಿ, ವೈದಿಕ ಸಮುದಾಯವೇಕೆ ಇಂಥ ನಕಾರಾತ್ಮಕ ಭಾವನೆ ತಳೆದಿದೆ ಎಂಬುದೇ ಚರ್ಚಾಸ್ಪದ. ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಕಾಯ್ದೆಗೆ ತಿದ್ದುಪಡಿ ತಂದ ಅನುಸಾರ ಕರ್ನಾಟಕದ ಸರ್ವ ಜನಾಂಗದ ಸಮಗ್ರ ಮಾಹಿತಿಯನ್ನು ಸಂಗ್ರಹಿಸುವುದು ಅಗತ್ಯವಾಗಿದೆ. ಹೀಗಿರುವಲ್ಲಿ ನ್ಯಾಯಾಲಯದ ನಿರ್ಬಂಧ ಸರಿಯೇ ಎಂಬ ಪ್ರಶ್ನೆ ಮೂಲಭೂತವಾಗಿ ಉದ್ಭವಿಸುತ್ತದೆ. ಈ ದಿಸೆಯಲ್ಲಿ ಸರಕಾರ ಮತ್ತು ಆಯೋಗ ಯಾವ ನಿಲುವನ್ನು ಹೊಂದಿವೆ ಎಂಬುದನ್ನು ಬಿಟ್ಟು ಕೊಟ್ಟಿಲ್ಲ. ಅದೇ ಈಗ, ಮಾಹಿತಿ ಕೊಡುವುದು ಬೇಡ ಎನ್ನುವವರಿಗೆ ಹೊಸ ಬ್ರಹ್ಮಾಸ್ತ್ರ ಸಿಕ್ಕಿದಂತಾಗಿದೆ.

ಉಚ್ಚ ನ್ಯಾಯಾಲಯ ವಿಧಿಸಿರುವ ಅಧಿಷರತ್ತುಗಳನ್ನು ಸ್ವಾರ್ಥಕ್ಕಾಗಿ ಉಪಯೋಗಿಸಿಕೊಂಡ ವೈದಿಕರು, ಶಾಸನಬದ್ಧ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ಬಗ್ಗೆ ಕೊಂಕು ನುಡಿಯ ತೊಡಗಿದರು. ಅಂಥವರಲ್ಲಿ ಪ್ರಮುಖರಾಗಿ ಕಾಣಿಸಿಕೊಳ್ಳುವವರು, ಶಾಸನ ರಚಿಸುವ ಶಾಸನ ಸಭೆಯಲ್ಲಿ ಭಾಗವಹಿಸುವ ಶಾಸಕ-ಲೋಕಸಭಾ-ರಾಜ್ಯಸಭಾ ಸದಸ್ಯರುಗಳೇ ಆಗಿರುವರು. ಕೇಂದ್ರ ಮಂತ್ರಿ ಮತ್ತು ಧಾರವಾಡ ಉತ್ತರ ಕ್ಷೇತ್ರದ ಲೋಕಸಭಾ ಸದಸ್ಯ ಪ್ರಹ್ಲಾದ ಜೋಶಿಯವರು ಸಮೀಕ್ಷೆ ಬಗ್ಗೆ ಅಪಸ್ವರವೆತ್ತಿದರು. ಅವರ ನಿರ್ಧಾರ ಅವರ ಪಕ್ಷದ ನಿಲುವೇ ಇರಬೇಕು. ಮತ್ತೊಬ್ಬ ಕೇಂದ್ರ ಮಂತ್ರಿ ಸೋಮಣ್ಣನವರು ರಾಜಕೀಯಕ್ಕೆ ಪದಾರ್ಪಣೆ ಮಾಡಿ ಅರ್ಧಶತಕವೇ ಕಳೆದಿದೆ. ರಾಜಕೀಯ ಕ್ಷೇತ್ರದಲ್ಲಿ ಸಂಪೂರ್ಣ ಮಾಗಿದ್ದಾರೆ. ಸಮೀಕ್ಷೆ ಬಗ್ಗೆ ಇವರು ‘‘ಮೇಲ್ಜಾತಿಯವರನ್ನು ಹಣಿಯಲು ಜಾತಿ ಸಮೀಕ್ಷೆ ನಡೆಸಲಾಗುತ್ತಿದೆ’’ ಎಂಬ ಅಣಿಮುತ್ತನ್ನು ಉದುರಿಸಿದ್ದಾರೆ. ಈ ಮಂತ್ರಿಯವರ ಮಾತನ್ನು ಕೇಳಿದಾಗ ಅಯ್ಯೋ ಪಾಪ ಎಂಬ ಮರುಕ ಉಂಟಾಗುತ್ತದೆ. ಇವರು ತುಮಕೂರು ಲೋಕಸಭಾ ಕ್ಷೇತ್ರದ ಸದಸ್ಯ. ಇವರು ಸ್ವಲ್ಪ ಹಿಂದಿರುಗಿ ನೋಡಿಕೊಳ್ಳಲಿ ಇವರಿಗೆ ಕೇವಲ ಮೇಲ್ಜಾತಿಯವರಷ್ಟೇ ವೋಟು ಕೊಟ್ಟು ಗೆಲ್ಲಿಸಿದ್ದಾರೆಯೇ ಎಂಬುದನ್ನು. ಇವರ ಮಾತನ್ನು ಒಮ್ಮೆ ದಲಿತರು ಮತ್ತು ಹಿಂದುಳಿದ ವರ್ಗದವರು ವಿಮರ್ಶೆಗೆ ಒಳಪಡಿಸುವುದು ಉತ್ತಮ. ಹೀಗೆ ಹೇಳುವವರ ಸರದಿ ಮುಂದುವರಿಯುತ್ತದೆ. ಹಾಗೆ ಇವರನ್ನು ಅನುಸರಿಸಿ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಮತಿಮಾಗದ ತೇಜಸ್ವಿ ಸೂರ್ಯ ಅವರು ಕೂಡಾ ‘ಸಮೀಕ್ಷೆಯಲ್ಲಿ ಯಾವ ಬ್ರಾಹ್ಮಣನೂ ಕೂಡ ಭಾಗವಹಿಸುವುದಿಲ್ಲ’ ಎಂಬ ಮಾತನ್ನು ಸಾರ್ವತ್ರಿಕ ಗೊಳಿಸಿರುವರು. ಇವರಿಗೂ ಮುಂಚೆಯೇ ವಯೋವೃದ್ಧ ಹಿರಿಯ ನ್ಯಾಯವಾದಿ ಬಿ.ವಿ. ಆಚಾರ್ಯ ಸಮಸ್ತ ಬ್ರಾಹ್ಮಣರಿಗೂ ಅನ್ವಯಿಸುವಂತೆ ಸಮೀಕ್ಷೆಯಲ್ಲಿ ಭಾಗವಹಿಸಬಾರದು ಎಂದು ಕರೆಯಿತ್ತಿರುವುದು ವಕೀಲಿಕೆಗೆ ಅವಮಾನ ಮಾಡಿದಂತಾಗಿದೆ. ಮಗದೊಬ್ಬ ಉದ್ಯಮಿ, ಮೋಹನದಾಸ ಪೈ ಕೇಂದ್ರದ ಭಾಜಪ ಸರಕಾರದ ಪರವಾಗಿ ಸಮಯ ಬಂದಾಗ ಜೈ ಎನ್ನುವ ಇವರೂ ಕೂಡ ಸಮೀಕ್ಷೆಯನ್ನು ವಿರೋಧಿಸಿರುವುದು ವಿಶೇಷವೇನಿಲ್ಲ ಬಿಡಿ. ಸಮೂಹ ಸನ್ನಿಗೆ ಒಳಪಟ್ಟವರಂತೆ ಒಬ್ಬರಾದ ಮೇಲೆ ಒಬ್ಬರು ವಿಪ್ರರಾರೂ ಸಮೀಕ್ಷೆಯಲ್ಲಿ ಭಾಗವಹಿಸದಂತೆ ಕರೆ ಕೊಡುತ್ತಾ ಹೋದರು. ಇಂತಹವರೆಲ್ಲ ನೀಡಿದ ಕರೆಯ ಪರಿಣಾಮವೋ ಏನೋ ಬ್ರಾಹ್ಮಣರು ಓಗೊಟ್ಟಂತೆ ಕಾಣಿಸುತ್ತಿದೆ. ಬ್ರಾಹ್ಮಣರು ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಯಾವ ಮಟ್ಟದಲ್ಲಿ ಪಾಲ್ಗೊಂಡಿದ್ದಾರೆ ಎಂಬುದು ಸಮೀಕ್ಷೆ ಪೂರ್ಣಗೊಂಡ ನಂತರವೇ ತಿಳಿದು ಬರುತ್ತದೆ.

ಇದೆಲ್ಲಕ್ಕಿಂತ ಹೆಚ್ಚಿಗೆ ಸುದ್ದಿ ಮಾಧ್ಯಮಗಳಲ್ಲಿ ಪ್ರಚಾರ ಪಡೆದುಕೊಂಡಿದ್ದು ನಾರಾಯಣ ಮೂರ್ತಿ ದಂಪತಿ ಸಮೀಕ್ಷೆಯಲ್ಲಿ ಪಾಲ್ಗೊಳ್ಳಲು ನಿರಾಕರಿಸಿದ್ದು. ಈ ದಂಪತಿಯ ನಿರಾಕರಣೆಯ ಬಗ್ಗೆ ನಾಡಿನೆಲ್ಲೆಡೆ ಪ್ರಖರ ವಿರೋಧ ವ್ಯಕ್ತವಾಯಿತಲ್ಲದೆ, ಅವರ ಸಂಸ್ಥೆಗೆ ಸರಕಾರದಿಂದ ಪಡೆದ ಸೌಲಭ್ಯ ಸವಲತ್ತುಗಳ ಬಗ್ಗೆ, ವಾಸ್ತವ ಅಂಶಗಳಿಂದ ಕೂಡಿದ ಬಿರುನಡಿಗಳ ಸುರಿಮಳೆಯೇ ಆಯಿತು. ಇಂಥವರಿಗೆ ಮಾರುತ್ತರ ಕೊಟ್ಟವರಲ್ಲಿ ಪ್ರಮುಖರೆಂದರೆ, ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್. ಅವರ ಮಾತುಗಳಂತೆ ‘‘ತಮ್ಮ ಸಂಸ್ಥೆಗಳನ್ನು ಜಗದಗಲ ಬೆಳೆಸಲು ಜನರಿಂದ ಆಯ್ಕೆಯಾದ ಸರಕಾರದಿಂದಲೇ ಅನೇಕ ಸವಲತ್ತುಗಳನ್ನು ಪಡೆಯುವ ಆ ಸಂಸ್ಥೆಗಳ ಮಾಲಕರು, ಜನರ ಏಳಿಗೆಗಾಗಿ ನಡೆಯುತ್ತಿರುವ ಸಮೀಕ್ಷೆಯನ್ನೇ ತಿರಸ್ಕರಿಸುವುದು ಆತ್ಮಸಾಕ್ಷಿಗೆ ಬಗೆಯುವ ದ್ರೋಹ ಮಾತ್ರವಲ್ಲ, ಉದ್ಧಟತನದ ಪರಮಾವಧಿ. ಸರಳತೆ ಶ್ರೀಮಂತಿಕೆಯನ್ನು ಮುಚ್ಚಿಡಬಹುದೇ ಹೊರತು, ಜಾತಿಗ್ರಸ್ಥ ಮನಸ್ಥಿತಿಯನ್ನಲ್ಲ’’. ಹಾಗೆಯೇ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಡಾ. ದ್ವಾರಕಾನಾಥ್ ಅವರು ಹೀಗೆ ಮಾರ್ನುಡಿದರು- ‘‘ಜಾತಿ ಮೂಲದ ಬಡತನ ವಿರುವ ದೇಶವಿದು. ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ ಹಿಂದುಳಿದ ಅತ್ಯಂತ ನಿರ್ಗತಿಕ ಮತ್ತು ಬಡ ಜಾತಿಗಳಿಗೆ ಸರಕಾರಿ ಸವಲತ್ತು, ಅನುದಾನ, ನಿವೇಶನ, ವಸತಿ, ಶಿಕ್ಷಣ, ಮೀಸಲಾತಿ ಇತ್ಯಾದಿಗಳನ್ನು ನೀಡಲು ಮಾಡುತ್ತಿರುವ ಸಮೀಕ್ಷೆಗೆ ಇವರು ಸಹಕರಿಸಿಲ್ಲ ಅಂದರೆ ಇವರು ಬಡವರ, ನಿರ್ಗತಿಕರ, ಅಸಹಾಯಕ ಬದ್ಧ ವಿರೋಧಿಗಳಷ್ಟೇ ಅಲ್ಲ; ಇವರು ಕರ್ಮಠ ಯಥಾಸ್ಥಿತಿವಾದಿಗಳು, ಜಾತಿವಾದಿಗಳೂ ಹೌದು.’’

ಸಾಮಾಜಿಕ ಶೈಕ್ಷಣಿಕ ಸಮೀಕ್ಷೆ ಸರ್ವಜಾತಿಗಳನ್ನು ಒಳಗೊಂಡಂತಿರಬೇಕು ಎಂಬುದಕ್ಕೆ ಹಲವು ಆಧಾರಗಳನ್ನು ನೀಡಬಹುದು. ಮೊದಲಿಗೆ, ಮಂಡಲ್ ಆಧಾರಿತ ಮೀಸಲಾತಿ ವರದಿಯನ್ನು ಕಟುವಾಗಿ ವಿರೋಧಿಸಿ ಪ್ರಶ್ನಿಸಿದ ರಿಟ್ ಅರ್ಜಿಯ ಮೇಲೆ, ಸರ್ವೋಚ್ಚ ನ್ಯಾಯಾಲಯ ಇಂದ್ರಾ ಸಹಾನಿ vs ಭಾರತ ಒಕ್ಕೂಟ ಪ್ರಕರಣದಲ್ಲಿ ನೀಡಿದ ನಿರ್ದೇಶನ. ಪ್ರಕರಣದ ತೀರ್ಪಿನ ಪ್ಯಾರಾ 859ರಲ್ಲಿ ಹೀಗೆ ಸ್ಪಷ್ಟಪಡಿಸಲಾಗಿದೆ: ‘‘ಹಿಂದುಳಿದ ವರ್ಗಗಳನ್ನು ಹೇಗೆ ಗುರುತಿಸಬೇಕೆಂಬುದನ್ನು ಸಂವಿಧಾನದಲ್ಲಾಗಲಿ ಅಥವಾ ಕಾನೂನಿನಲ್ಲಾಗಲಿ ಸ್ಪಷ್ಟಪಡಿಸಿರುವುದಿಲ್ಲ. ನ್ಯಾಯಾಲಯಗಳು ಕೂಡ ಅದರ ಬಗ್ಗೆ ನಿರ್ದಿಷ್ಟ ಮಾರ್ಗದರ್ಶಕ ಸೂತ್ರಗಳನ್ನು ಕೊಡಲಾಗುವುದಿಲ್ಲ. ಆದರೆ ಅದನ್ನು ಗುರುತಿಸಲು ರೂಪಿಸಲಾದ ಪ್ರಾಧಿಕಾರವು ತನ್ನ ಸಮೀಕ್ಷೆಯಲ್ಲಿ ಸಮಸ್ತ ಜನಸಂಖ್ಯೆಯೂ ಒಳಗೊಂಡಿರಬೇಕು. ಸರ್ವೋಚ್ಚ ನ್ಯಾಯಾಲಯ ಇನ್ನೂ ಅನೇಕ ಪ್ರಕರಣಗಳಲ್ಲಿ, ಪ್ರಾಯೋಗಿಕ ದತ್ತಾಂಶಗಳ ಅವಶ್ಯಕತೆಯ ಬಗ್ಗೆ ತೀರ್ಪಿತ್ತಿದೆ’’.

ಸರ್ವೋಚ್ಚ ನ್ಯಾಯಾಲಯದ ಈ ನಿರ್ದೇಶನವನ್ನು ಅನುಸರಿಸಿ ರಾಷ್ಟ್ರದ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಹಾಗೂ ಒಕ್ಕೂಟ ಸರಕಾರವೂ ಕಾಯ್ದೆಗಳನ್ನು ರೂಪಿಸಿದವು. ಆ ನಿಮಿತ್ತ ಕರ್ನಾಟಕ ಸರಕಾರವು, ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಕಾಯ್ದೆ-1995ನ್ನು ಜಾರಿಗೊಳಿಸಿತು. ಮೂಲ ಕಾಯ್ದೆಯ ಸೆಕ್ಷನ್ 9(2)ರಲ್ಲಿ ‘ಹಿಂದುಳಿದ ವರ್ಗ’ ಎಂದು ಇದ್ದ ಪದಪುಂಜವನ್ನು ‘ರಾಜ್ಯದ ಸಮಸ್ತ ನಾಗರಿಕರು’ ಎಂದು 2014ರಲ್ಲಿ ತಿದ್ದುಪಡಿ ಮಾಡಲಾಯಿತು. ಈ ಬಗ್ಗೆ ಆಯೋಗ ಮತ್ತು ಮುಖ್ಯಮಂತ್ರಿಗಳು ಸಮೀಕ್ಷೆಯಲ್ಲಿ ಯಾರು ಭಾಗವಹಿಸಬೇಕು ಎಂಬುದನ್ನು ಹೇಳಿರುವುದೇ ಅಲ್ಲದೆ ಅನೇಕ ಬಾರಿ ಜಾಹೀರಾತು ನೀಡುವುದರ ಮೂಲಕ ಸ್ಪಷ್ಟಪಡಿಸಲಾಗಿದೆ.

ಇಷ್ಟೇ ಅಲ್ಲದೇ, ಆಯೋಗ ಸಮೀಕ್ಷೆಯ ಉದ್ದೇಶದಿಂದ ಹೊರಡಿಸಿರುವ ಕೈಪಿಡಿಯಲ್ಲಿ ಸಮೀಕ್ಷೆಯ ಉದ್ದೇಶವನ್ನು ಹೀಗೆ ಹೇಳಿದೆ: 1. ರಾಜ್ಯದ ಎಲ್ಲಾ ವರ್ಗಗಳ/ಜಾತಿಗಳ ಸಾಮಾಜಿಕ, ಶೈಕ್ಷಣಿಕ ಮತ್ತು ಔದ್ಯೋಗಿಕ ಸ್ಥಿತಿಗತಿಗಳ ಕುರಿತು ಸಮೀಕ್ಷೆ ಮುಖಾಂತರ ಸಮಗ್ರ ಅಂಕಿ-ಅಂಶಗಳನ್ನು ಸಂಗ್ರಹಿಸುವುದು. 2. ಸಮೀಕ್ಷೆಯಲ್ಲಿ ಅನುಸರಿಸಿದ ವಿವಿಧ ಮಾನದಂಡಗಳ ಆಧಾರದ ಮೇಲೆ ಸಂಗ್ರಹಿಸಿದ ಅಂಕಿ-ಅಂಶಗಳ ಹಿನ್ನೆಲೆಯಲ್ಲಿ ಹಿಂದುಳಿದ ವರ್ಗಗಳನ್ನು ಗುರುತಿಸಿ ಅವರ ಸರ್ವತೋಮುಖ ಅಭಿವೃದ್ಧಿಗಾಗಿ ಪೂರಕವಾದ ಕಾರ್ಯಕ್ರಮಗಳನ್ನು ರೂಪಿಸುವುದು( ಪುಟ10, ಪ್ಯಾರಾ11).

ಇಷ್ಟೆಲ್ಲಾ ಅಧಿಕೃತ ಆಧಾರಗಳಿದ್ದರೂ ಇವರು ಸಮೀಕ್ಷೆಯಲ್ಲಿ ಪಾಲ್ಗೊಳ್ಳಲು ಹಿಂದೇಟು ಹಾಕುತ್ತಿರುವುದು ಏಕೆ? ಹಿಂದೊಮ್ಮೆ ಯೋಗೇಂದ್ರ ಯಾದವ್ ಲೇಖನವೊಂದರಲ್ಲಿ ಹೇಳಿರುವಂತೆ: ಮೇಲುಜಾತಿಯವರಿಗೆ ತಮ್ಮ ಶ್ರೀಮಂತಿಕೆ ಎಲ್ಲಿ ಬಯಲುಗೊಳ್ಳುತ್ತದೋ ಎಂಬ ಆತಂಕ ಇರಬಹುದು. ಮೀಸಲಾತಿ ವಿಷಯದಲ್ಲಿ ಇವರಿಗಿರುವ ಅಸೂಯೆ - ಅಸಹನೆಯೇ ಇಂಥ ನಿರಾಕರಣೆಗೆ ಇರುವ ಪ್ರಬಲ ಕಾರಣ. ಆದರೆ ಯಾವುದೇ ಆಯೋಗದ ವರದಿ ಇಲ್ಲದೆ ಎರಡೇ ದಿನದಲ್ಲಿ ಸಂಸತ್ತಿನಲ್ಲಿ ಸಂವಿಧಾನದ ಅನುಚ್ಛೇದ 46ನ್ನು ಅಪವ್ಯಾಖ್ಯಾನ ಮಾಡಿ ಅಂಗೀಕಾರಗೊಂಡ, ಇ.ಡಬ್ಲ್ಯು.ಎಸ್. ಮೀಸಲಾತಿಯನ್ನು ಮಾತ್ರ ತುಟಿ ಎರಡು ಮಾಡದೆ ಮೌನ ಸಮ್ಮತಿ ನೀಡುತ್ತಾರೆ. ಹಾಗಾದರೆ ಇದು ಮೀಸಲಾತಿ ಅಲ್ಲವೇ?

ನಾವು ಹಿಂದುಳಿದ ವರ್ಗದ ಮೀಸಲಾತಿಗೊಳಪ್ಪಟ್ಟಿಲ್ಲ ಆದ್ದರಿಂದ ಸಮೀಕ್ಷೆಗೆ ಒಳಪಡುವುದಿಲ್ಲ ಎಂಬುದು ಇವರ ತರ್ಕ. ಸಮೀಕ್ಷೆ ಕೇವಲ ಹಿಂದುಳಿದವರಿಗೆ ಮಾತ್ರ ಎಂಬ ನಂಬಿಕೆ ಇವರದು. ಆದರೆ ಹಿಂದುಳಿದವರನ್ನು ಗುರುತಿಸಲು ಹಾಗೂ ಎಲ್ಲಾ ಜಾತಿಗಳ ಆರ್ಥಿಕ ಸ್ಥಿತಿಗತಿಗಳನ್ನು ಅರಿಯಲು ಸಮೀಕ್ಷೆ ಬೇಕು ಎಂಬುದನ್ನು ಏಕೆ ಇವರು ಮರೆಯುತ್ತಾರೆ. ಇವರ ಜಾತಿಯಲ್ಲಿ ಬಡವರಿಲ್ಲವೇ? ಸರಕಾರ ಕೊಡ ಮಾಡುತ್ತಿರುವ, ಗ್ಯಾರಂಟಿ ಯೋಜನೆಗಳು ಕೇವಲ ಹಿಂದುಳಿದ ವರ್ಗಗಳಿಗೆ ಸೀಮಿತವಾಗಿವೆಯೇ. ಈ ಜಾತಿಗೆ ಸೇರಿದ ಮಹಿಳೆಯರು ಪುಕ್ಕಟ್ಟೆ ಬಸ್ಸಿನಲ್ಲಿ ಪ್ರಯಾಣ(ಶಕ್ತಿ) ಮಾಸಿಕ 2 ಸಾವಿರ ರೂಪಾಯಿ (ಗೃಹಲಕ್ಷ್ಮಿ)ಪಡೆಯುತ್ತಿಲ್ಲವೇ? ಹಾಗೆಯೇ ಕೆಲ ಬಡವರು 200 ಯೂನಿಟ್‌ನಷ್ಟು ಪುಕ್ಕಟ್ಟೆ ವಿದ್ಯುತ್ (ಗೃಹ ಜ್ಯೋತಿ)ಪಡೆಯುತ್ತಿಲ್ಲವೇ? ಕೇಂದ್ರ ಸರಕಾರ ಮಾರ್ಚ್ 2027ರಿಂದ, ಜಾತಿ- ಜನಗಣತಿ ನಡೆಸಲಾಗುವುದು ಎಂದು ಹೇಳಿದೆ. ಆಗಲೂ ಇವರು ಗಣತಿ ಕಾರ್ಯದಲ್ಲಿ ಭಾಗವಹಿಸುವುದನ್ನು ನಿರಾಕರಿಸುವರೆ? ಅದನ್ನೂ ಕೂಡ ಈಗಲೇ ಹೇಳಿಬಿಡಬೇಕಾಗಿತ್ತು. ಬಡವರಿಗಾಗಿ ಕಾರ್ಯಕ್ರಮ ಯಾವುದೇ ಪಕ್ಷದ ಗುತ್ತಿಗೆ ಅಲ್ಲ.

ಸಮಗ್ರ ಕರ್ನಾಟಕದ ಎಲ್ಲ ರೀತಿಯ ಅಭಿವೃದ್ಧಿಯ ಉದ್ದೇಶದಿಂದ ಸಮಸ್ತ ಜನರ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸಮೀಕ್ಷೆಗಳನ್ನು ಆಯೋಗ ನಡೆಸುತ್ತಿದೆ. ಇದು ಕೇವಲ ತಲೆ ಎಣಿಕೆಯ ಕಾರ್ಯವಲ್ಲ. ಸಕಲ ಜಾತಿಗಳು ಯಾವ ಯಾವ ಕ್ಷೇತ್ರದಲ್ಲಿ ಯಾವ ಮಟ್ಟದಲ್ಲಿ ಏಳಿಗೆ ಹೊಂದಿವೆ ಎಂಬುದನ್ನು ಅರಿಯ ಬೇಕಾಗಿರುವುದರಿಂದ ನಾಡಿನ ಸಮಗ್ರ ಜಾತಿಯ ಜನರ ಸಮೀಕ್ಷೆ ಕಾರ್ಯವಿದು. ಯಾರೊಬ್ಬರಿಗೂ ಸೀಮಿತವಾದುದಲ್ಲ ಎಂಬುದನ್ನು ಮೊದಲು ತಿಳಿಯಬೇಕು. ಸಮೀಕ್ಷೆಯಲ್ಲಿ ಭಾಗವಹಿಸುವುದನ್ನು ನಿರಾಕರಿಸುವ ಮೊದಲು ನೂರು ಬಾರಿ ಯೋಚನೆ ಮಾಡಬೇಕು. ಇದು ಯಾವುದೇ ಪಕ್ಷದ ಅಥವಾ ಧರ್ಮದ ಅಥವಾ ಜಾತಿಯ ಕಾರ್ಯಕ್ರಮವಲ್ಲ; ಪ್ರಜಾಪ್ರಭುತ್ವ ರೀತಿಯಲ್ಲಿ ಆರಿಸಿ ಬಂದ ಸರಕಾರ ನೀಡಿದ ಜನಪರ ಕಾರ್ಯಕ್ರಮವೆಂದು ಎಲ್ಲರೂ ಭಾವಿಸಬೇಕು. ಹಾಗೆ ತಿಳಿದಾಗಲೇ ಸಮಾಜದಲ್ಲಿ ಸಾಮರಸ್ಯ, ಸಹನೆ, ಸಹಬಾಳ್ವೆ, ಶಾಂತಿ ಮತ್ತು ಧರ್ಮಾತೀತ ಭಾವನೆ ಮೂಡಲು ಸಾಧ್ಯ.

share
ಕೆ.ಎನ್. ಲಿಂಗಪ್ಪ
ಕೆ.ಎನ್. ಲಿಂಗಪ್ಪ
Next Story
X