Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಬಿಹಾರದಲ್ಲಿ ಫಲಬಿಟ್ಟ ಹೂಕೋಸು!

ಬಿಹಾರದಲ್ಲಿ ಫಲಬಿಟ್ಟ ಹೂಕೋಸು!

ನವೀನ್ ಸೂರಿಂಜೆನವೀನ್ ಸೂರಿಂಜೆ17 Nov 2025 3:53 PM IST
share
ಬಿಹಾರದಲ್ಲಿ ಫಲಬಿಟ್ಟ ಹೂಕೋಸು!
ಬಿಹಾರ: ಯಾರ ಗೆಲುವು?

ಚುನಾವಣೆಗಾಗಿಯೇ ಬಿಜೆಪಿ ಕಳೆದ 10 ತಿಂಗಳಲ್ಲಿ ಕೋಮುಗಲಭೆಗಳನ್ನು ನಡೆಸಿದೆ. ಹಾಗಾಗಿಯೇ ಚುನಾವಣಾ ಫಲಿತಾಂಶ ಬರುತ್ತಿದ್ದಂತೆ ಬಿಹಾರದ ಸಚಿವರು ‘ಬಿಹಾರ ಹೂಕೋಸು ಕೃಷಿಯನ್ನು ಅನುಮೋದಿಸಿದೆ’ ಎಂದು ಆಘಾತಕಾರಿ ಹೇಳಿಕೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿಯೂ ಚುನಾವಣಾ ವಿಶ್ಲೇಷಣೆ ನಡೆಸಬೇಕಿದೆ. 1989ರಲ್ಲಿ ಬಿಹಾರದ ಭಾಗಲ್ಪುರದ ಯಾದವ-ಮುಸ್ಲಿಮರ ಭಾವೈಕ್ಯದ ಪ್ರದೇಶಗಳಲ್ಲಿ ಹಿಂದುತ್ವ ಕಾರ್ಯಕರ್ತರು ನೂರಾರು ಮುಸ್ಲಿಮರನ್ನು ಕೊಂದು ಹಾಕಿದ್ದರು. ಮುಸ್ಲಿಮರ ಶವಗಳನ್ನು ಗದ್ದೆಯಲ್ಲಿ ಹೂತು ಅದರ ಮೇಲೆ ಹೂಕೋಸು ಕೃಷಿ ನಡೆಸಲಾಗಿತ್ತು. ಇಂತಹ ಅಮಾನವೀಯ ಪ್ರಕರಣವನ್ನು ಖುದ್ದು ಬಿಹಾರ ಸಚಿವರೇ ಬಿಹಾರ ಚುನಾವಣೆಯೊಂದಿಗೆ ಥಳಕು ಹಾಕಿದ್ದಾರೆ.

ಆರ್‌ಜೆಡಿಯ ಎಂವೈ (ಯಾದವ-ಮುಸ್ಲಿಮ್) ಸೂತ್ರವನ್ನು ಒಡೆಯಲೆಂದೇ ಬಿಜೆಪಿ ಇಲ್ಲಿ ಕೋಮುಗಲಭೆಗಳನ್ನು ನಡೆಸಿದೆ. ಈ ಕೋಮುಗಲಭೆಗಳಿಗೆ ಮುಹರ‌್ರಂ ಮೆರವಣಿಗೆ, ಐ ಲವ್ ಮುಹಮ್ಮದ್ ಬ್ಯಾನರ್‌ಗಳು, ಹಿಂದುತ್ವವಾದಿಗಳ ಮೆರವಣಿಗೆಯನ್ನು ಬಳಸಿಕೊಂಡಿತ್ತು.

ಬಿಹಾರದಲ್ಲಿ ಕಟಿಹಾರ್, ದರ್ಭಾಂಗಾ ಮತ್ತು ಮುಝಪ್ಫರ್‌ಪುರ, ಮೋತಿಹಾರಿ ಸೇರಿದಂತೆ 10 ಜಿಲ್ಲೆಗಳಲ್ಲಿ ಕಳೆದ ಹತ್ತು ತಿಂಗಳಲ್ಲಿ ಕೋಮು ಗಲಭೆಗಳು ನಡೆದವು. ದರ್ಭಾಂಗದ ಮೆರವಣಿಗೆಯ ವೇಳೆ ಮುಹರ‌್ರಂಗೆ ಸಂಬಂಧಪಡದ ವ್ಯಕ್ತಿಯೊಬ್ಬ ಪೊಲೀಸ್ ಅಧಿಕಾರಿಗೆ ಚೂರಿ ಹಾಕಿದ. ಇದು ಕೋಮುಗಲಭೆಗೆ ಕಾರಣವಾಗಿ ಓರ್ವ ಸಾವನ್ನಪ್ಪಿದ. ಮುಝಪ್ಫರ್‌ಪುರದಲ್ಲಿ ಎರಡು ಸಮುದಾಯಗಳ ನಡುವೆ ನಡೆದ ಘರ್ಷಣೆಯಲ್ಲಿ ಇಬ್ಬರು ಗಾಯಗೊಂಡಿದ್ದರು. ಸಮಷ್ಟಿಪುರ, ಭಾಗಲ್ಪುರ, ಗೋಪಾಲ್ಗಂಜ್, ಅರಾರಿಯಾ, ಕಿಶನ್‌ಗಂಜ್, ಪೂರ್ಣಿಯಾ, ಸಿತಾಮರಿ, ಸಿಮಾನ್, ಜಮೂ, ಶೇಕ್ಪುರೆ, ಮೊಕಾಮಗಳಲ್ಲಿ ಕೋಮುಗಲಭೆ ನಡೆಸಲಾಯಿತು.

‘ಈ ಎಲ್ಲಾ ಕೋಮುಗಲಭೆಗಳು ಕೆಲವೇ ತಿಂಗಳುಗಳಲ್ಲಿ ಎದುರುಗೊಳ್ಳಲಿರುವ ಚುನಾವಣಾ ತಂತ್ರಗಾರಿಕೆಗಳಾಗಿವೆ ಎಂದು ಕೋಮುಗಲಭೆ ನಡೆದ ಸಂದರ್ಭದಲ್ಲೇ ಸ್ಥಳೀಯ ಬಿಹಾರಿ ಪತ್ರಿಕೆಗಳು ವರದಿ ಮಾಡಿದ್ದವು. ಮುಸ್ಲಿಮರು ಮತ್ತು ಯಾದವರು ಹೆಚ್ಚಾಗಿರುವ ಪ್ರದೇಶಗಳನ್ನೇ ಕೋಮುಗಲಭೆಗೆ ಆಯ್ಕೆ ಮಾಡಲಾಗಿತ್ತು. ತೇಜಸ್ವಿ ಯಾದವ್‌ಗೆ ಯಾದವರು ಮತ್ತು ಮುಸ್ಲಿಮರ ಬೆಂಬಲ ಇರುವುದು ಕೂಡಾ ಇದಕ್ಕೆ ಕಾರಣ ಎಂದು ಸ್ಥಳೀಯ ಮುಸ್ಲಿಮ್ ಮುಖಂಡ ಅಬ್ದುಲ್ ಮಸ್ತಾನ್ ಮಾಹಿತಿ ನೀಡಿದರು.

ಮುಝಪ್ಫರ್‌ಪುರ ಜಿಲ್ಲೆಯ ಮಿನಾಪುರ ವಿಧಾನಸಭಾ ಕ್ಷೇತ್ರದಲ್ಲಿ ಯಾದವರು ಮತ್ತು ಮುಸ್ಲಿಮರು ನಿರ್ಣಾಯಕವಾಗಿರುವ ಕ್ಷೇತ್ರ. ಈ ಕ್ಷೇತ್ರದಲ್ಲಿ ಆಡಳಿತಾರೂಢ ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಶಾಸಕ ಮುನ್ನಾ ಯಾದವ್ 2015 ರಿಂದ 2025 ರವರೆಗೆ ಅಂದರೆ ಹತ್ತು ವರ್ಷಗಳಿಂದ ಶಾಸಕರಾಗಿದ್ದಾರೆ. ಈ ಬಾರಿ ಅವರು ಆರ್‌ಜೆಡಿ ಸೇರುವ ಸೂಚನೆಯನ್ನು ಜನವರಿ ವೇಳೆಯಲ್ಲೇ ನೀಡಿದ್ದರು. ಮುಸ್ಲಿಮ್ - ಯಾದವರ ಚುನಾವಣಾ ಸೂತ್ರದಲ್ಲಿ ಆರ್‌ಜೆಡಿಯಿಂದ ಗೆಲ್ಲುವ ಯೋಜನೆ ಹಾಕಿದ್ದರು. ಆದರೆ ಚುನಾವಣೆಗೆ ಕೇವಲ ಎರಡು ತಿಂಗಳ ಹಿಂದೆಯಷ್ಟೇ ಮೀನಾಪುರದಲ್ಲಿ ದೊಡ್ಡ ಕೋಮುಗಲಭೆ ನಡೆದು ನೂರಾರು ಮನೆಗಳಿಗೆ ಬೆಂಕಿ ಹಚ್ಚಲಾಯಿತು. ಪರಿಣಾಮವಾಗಿ ಜೆಡಿಯು ಹಾಲಿ ಶಾಸಕರಾಗಿ

ಆರ್‌ಜೆಡಿಯಲ್ಲಿ ಸ್ಪರ್ಧಿಸಿದ್ದ ಶಾಸಕ ಮುನ್ನಾ ಯಾದವ್‌ರನ್ನು ಸೋಲಿಸಲು ನಡೆಸಿದ ಯತ್ನ ಎಂದು ಸ್ಥಳೀಯ ಪತ್ರಕರ್ತ ಬಿನೇಶ್ ಯಾದವ್ ನಮಗೆ ಮಾಹಿತಿ ನೀಡಿದ್ದರು. ಅದರಂತೆಯೇ ಮೀನಾಪುರದ ಫಲಿತಾಂಶ ಬಂದಿದೆ. ಎರಡು ಅವಧಿಗೆ ಜೆಡಿಯು ಶಾಸಕರಾಗಿ ಆರ್‌ಜೆಡಿಗೆ ಬಂದು ಸ್ಪರ್ಧಿಸಿದ್ದ ಮುನ್ನಾ ಯಾದವ್ ಸೋಲನ್ನಪ್ಪಿದ್ದಾರೆ. ಜೆಡಿಯುನಲ್ಲಿ ಹೊಸದಾಗಿ ಸ್ಪರ್ಧಿಸಿದ ಹೊಸ ಮುಖ ಅಜಯ್ ಕುಮಾರ್ ಗೆಲುವು ಸಾಧಿಸಿದ್ದಾರೆ. ಈ ಕೋಮಗಲಭೆ ಪಕ್ಕದ

ಮುಝಪ್ಫರ್‌ಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕರ ಮೇಲೂ ಪರಿಣಾಮ ಬಿದ್ದಿದೆ. ಇಲ್ಲಿ ಹಾಲಿ ಶಾಸಕರಾಗಿದ್ದ ಬಿಜೇಂದ್ರ ಚೌಧರಿ ಸೋಲನ್ನಪ್ಪಿದ್ದಾರೆ.

ಮಂಗಳೂರಿನಂತೆ ಮುಝಪ್ಫರ್‌ಪುರ ಜಿಲ್ಲೆಯಲ್ಲೂ ಕೆಲ ಪ್ರದೇಶಗಳಲ್ಲಿ ಸಂಜೆ 5 ಗಂಟೆಯ ಬಳಿಕ ಜನ ಸಂಚಾರವೇ ಇರುವುದಿಲ್ಲ. ‘ಐ ಲವ್ ಮುಹಮ್ಮದ್’ ಬ್ಯಾನರ್ ಹರಿಯುವ ಮೂಲಕ ಹಲವು ಕಡೆ ಕೋಮುಗಲಭೆಗಳು ನಡೆದವು. ಇದು ಕೂಡಾ ಜನರಲ್ಲಿ ಭಯ ಸೃಷ್ಟಿಸಿತ್ತು.

ಹಾಗಂತ, ನಿತೀಶ್ ಸರಕಾರದ ಹತ್ತು ಸಾವಿರ ರೂ. ನೇರ ಪಾವತಿ ಯೋಜನೆ ಪರಿಣಾಮ ಬೀರಿಲ್ಲ ಎಂದಲ್ಲ. ಇದಕ್ಕಾಗಿ ನಿತೀಶ್ ಸರಕಾರದ ಜಾತಿಗಣತಿಯನ್ನು ಎನ್‌ಡಿಎ ಬಳಸಿಕೊಂಡಿತ್ತು. ಚುನಾವಣೆಯ ಮಾದರಿ ನೀತಿ ಸಂಹಿತೆ ಜಾರಿಗೆ ಬರುವ ಸ್ವಲ್ಪ ಮೊದಲು 1 ಕೋಟಿಗೂ ಹೆಚ್ಚು ಅಕೌಂಟ್‌ಗಳಿಗೆ ಹತ್ತು ಸಾವಿರ ರೂ. ಗಳನ್ನು ಹಾಕಲಾಯಿತು. ಇದು ಗರಿಷ್ಠ ಸಂಖ್ಯೆಯ ಅನಕ್ಷರಸ್ಥ ಬಡ ಮಹಿಳೆಯರನ್ನು ಎನ್‌ಡಿಎ ಪರವಾಗಿ ಮತಹಾಕಿಸುವಲ್ಲಿ ಯಶಸ್ವಿಯಾಯಿತು. ಬಡತನ ರೇಖೆಗಿಂತ ಕೆಳಗಿರುವ ಜನಸಂಖ್ಯೆಯೇ ಅಧಿಕವಾಗಿರುವ, ಕಾರುಗಳು ಹಳ್ಳಿ ಪ್ರವೇಶಿಸಿದ ತಕ್ಷಣ ಹಣ-ಊಟಕ್ಕಾಗಿ ಮುತ್ತಿಗೆ ಹಾಕುವ ಜನರಿರುವ ಊರುಗಳಲ್ಲಿ ‘ಹತ್ತು ಸಾವಿರ ರೂ.ಯ ಯೋಜನೆ ಚುನಾವಣಾ ಗಿಮಿಕ್’ ಎಂದು ಟೀಕಿಸುವುದೇ ಅಪರಾಧವಾಗುತ್ತದೆ. ಚುನಾವಣಾ ಪೂರ್ವದಲ್ಲೇ ಕಾಂಗ್ರೆಸ್ ಆರ್‌ಜೆಡಿ ಇದನ್ನು ಟೀಕಿಸಿದ್ದರೆ, ಆಯೋಗಕ್ಕೆ ದೂರು ನೀಡಿ ನಿಲ್ಲಿಸಿದ್ದರೆ ಬಂದಿರುವ ಮತಗಳಲ್ಲೂ ಖೋತಾ ಆಗುತ್ತಿತ್ತು.

ಜನರ ಭೂಮಿ, ವೇತನ, ದೌರ್ಜನ್ಯದ ವಿರುದ್ಧದ ಹೋರಾಟಗಳ ಮೂಲಕವೇ ಶಾಸಕರಾಗಿ ಗೆದ್ದು ಬರುತ್ತಿದ್ದ ಎಡಪಂಥೀಯರು ‘ಚುನಾವಣೆಗಾಗಿ ಹಣ’ ಎಂಬುದನ್ನು ಊಹೆ ಮಾಡಲೂ ಸಾಧ್ಯವಿಲ್ಲ. ನಾವು ಪುಲ್ವಾರಿಯ ಸಿಪಿಐಎಂಎಲ್ ಶಾಸಕ ಗೋಪಾಲ್ ರವಿದಾಸ್ ಅವರ ಗುಡಿಸಲು ಮನೆಗೆ ಭೇಟಿ ಕೊಟ್ಟಾಗ ಅವರು ಮನೆಯಲ್ಲಿ ಇರಲಿಲ್ಲ. ಶಾಸಕರ ಸಹೋದರಿ ಮನೆಯ ಹೊರಗಿನಿಂದಲೇ ಮನೆ ಮತ್ತು ಶಾಸಕರ ಬಗ್ಗೆ ಮಾಹಿತಿ ನೀಡಿದರು. ನಾವು ಇನ್ನೇನು ಹೊರಡಬೇಕು ಅನ್ನುವಾಗ ಶಾಸಕರ ಸಹೋದರಿಯೂ ‘ಏನಾದರು ಖರ್ಚಿಗೆ ಕೊಡಿ’ ಎಂದು ನಮ್ಮನ್ನು ಕೇಳಿದರು. ಇದು ಎಡಪಂಥೀಯ ಬಿಹಾರ ಶಾಸಕರ ಕುಟುಂಬದ ಪರಿಸ್ಥಿತಿ. ‘ನಾವಿನ್ನೂ ಜನರ ಆರ್ಥಿಕ ಸಬಲೀಕರಣ ಹೋರಾಟ ಶುರುವೇ ಮಾಡಿಲ್ಲ. ಇಲ್ಲಿನ ಭೂರಹಿತ ದಲಿತರು ಭೂಮಾಲಕರ ದೌರ್ಜನ್ಯ, ಅತ್ಯಾಚಾರಗಳಿಂದ ಬದುಕಿದರೆ ಸಾಕಾಗಿದೆ. ದಲಿತರಿಗೊಂದು ಸೂರು ಮತ್ತು ಭೂಮಿ ನಮ್ಮ ಆದ್ಯತೆಯ ಹೋರಾಟ

ವಾಗಿದೆ. ಪುಲ್ವಾರಿಯ ಶಾಸಕರಿಗೇ ಸ್ವಂತ ಮನೆಯಿಲ್ಲ, ಮನೆ ಕಟ್ಟಲು ತುಂಡು ಭೂಮಿ ಇಲ್ಲ’ ಎನ್ನುತ್ತಾರೆ ಸಿಪಿಐಎಂಎಲ್ ನಾಯಕರು.

share
ನವೀನ್ ಸೂರಿಂಜೆ
ನವೀನ್ ಸೂರಿಂಜೆ
Next Story
X