Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಸಂಭ್ರಮಿಸಿ ವಿಶ್ವಮಾನವರಾಗಿ, ವಿರೋಧಿಸಿ...

ಸಂಭ್ರಮಿಸಿ ವಿಶ್ವಮಾನವರಾಗಿ, ವಿರೋಧಿಸಿ ಅಲ್ಪರಾಗಬೇಡಿ

ದರ್ಶನ್ ಕುರುಬಾಸ್ದರ್ಶನ್ ಕುರುಬಾಸ್1 Sept 2025 11:15 AM IST
share
ಸಂಭ್ರಮಿಸಿ ವಿಶ್ವಮಾನವರಾಗಿ, ವಿರೋಧಿಸಿ ಅಲ್ಪರಾಗಬೇಡಿ

ಕನ್ನಡ ನಾಡು ಅನನ್ಯತೆಗಳಿಂದ ನಿರ್ಮಾಣಗೊಂಡಿದೆ, ಸಂಭ್ರಮ - ಸಡಗರ, ಆಚರಣೆ, ಕಲೆ, ಸಾಹಿತ್ಯಗಳೆಲ್ಲವೂ ಹಚ್ಚಹಸಿರಿನಿಂದ ಕಂಗೊಳಿಸಿವೆ, ಈಗಲೂ ಕಂಗೊಳಿಸುತ್ತಿವೆ. ಈ ನಾಡಿನಲ್ಲಿ ಅನಾದಿ ಕಾಲದಿಂದಲೂ ಹಬ್ಬ ಆಚರಣೆ ಸಂಪ್ರದಾಯ ಜಾತ್ರೆಗಳಿಗೆ ವಿಶೇಷ ಸ್ಥಾನಮಾನವಿದೆ. ಪ್ರತಿಯೊಬ್ಬರನ್ನು ಒಳಗೊಳ್ಳುವ ಇವುಗಳ ಬಗ್ಗೆ ಜನರು ಅತಿಯಾಗಿ ಮೋಹಿತರಾಗುತ್ತಾರೆ. ನಮ್ಮ ನಾಡಿನಲ್ಲಿ ಸುಗ್ಗಿ, ಯುಗಾದಿ, ದಸರಾ, ಬಕ್ರೀದ್, ರಮಝಾನ್ , ಕ್ರಿಸ್ಮಸ್ ಹಬ್ಬಗಳು ಮತ್ತು ಪ್ರದೇಶವಾರು ನಡೆಯುವ ಜಾತ್ರೆಗಳು ಸರ್ವರಲ್ಲಿಯು ಶಾಂತಿ - ಸೌಹಾರ್ದವನ್ನು ಬೆಳೆಸುತ್ತವೆ.

ಮೈಸೂರು ದಸರಾ ಎಷ್ಟೊಂದು ಸುಂದರ ಎನ್ನುವ ಹಾಗೆ 15ನೇ ಶತಮಾನದಲ್ಲಿ ವಿಜಯನಗರ ಅರಸರಿಂದ ಶುರುವಾದ ದಸರಾವು ಇಂದಿನ ತನಕ ಪ್ರತೀ ವರ್ಷವೂ ನಾಡ ಹಬ್ಬವಾಗಿ ಕನ್ನಡ ನಾಡಿನವರಿಂದ ಆಚರಿಸಲ್ಪಟ್ಟಿದೆ. ನಮ್ಮ ಪರಂಪರೆಯ ಹೆಮ್ಮೆಯಾಗಿ ಉಳಿದಿದೆ. ಈಗ ಮೈಸೂರಿನಲ್ಲಿ ನಡೆಯುವ ದಸರಾ ಹಬ್ಬಕ್ಕೆ ಕೆಲವೇ ದಿನಗಳು ಬಾಕಿ ಇದ್ದು, ಜನರು ದಸರಾವನ್ನು ಕಣ್ದುಂಬಿಕೊಳ್ಳಲು ಕಾತರದಿಂದ ಕಾಯುತ್ತಿದ್ದಾರೆ ಮತ್ತು ದಸರಾಕ್ಕೆ ಬೇಕಾದ ತಯಾರಿಗಳೆಲ್ಲವೂ ಕೂಡ ಅತಿ ವೇಗದಲ್ಲಿ ನಡೆಯುತ್ತಿವೆ. ದಸರಾ ಉದ್ಘಾಟನೆಗೆ ರಾಜ್ಯ ಸರಕಾರ ಬೂಕರ್ ಪ್ರಶಸ್ತಿ ವಿಜೇತರಾದ ಬಾನು ಮುಷ್ತಾಕ್ ಅವರನ್ನು ಆಯ್ಕೆ ಮಾಡಿದೆ. ಇದು ಕನ್ನಡ ನಾಡಿನಲ್ಲಿ ಅತೀವ ಸಂತೋಷದ ಸುದ್ದಿ. ಕನ್ನಡ ನಾಡು ಸರ್ವಜನಾಂಗದ ಶಾಂತಿಯ ತೋಟ ಆಗಬೇಕೆನ್ನುವ ಆಶಯವನ್ನು ಹೊಂದಿದೆ, ಆದರೆ ಆಗಿಲ್ಲ, ಇಂತಹ ಹೆಜ್ಜೆಗಳಿಂದ ಆಶಯ ಈಡೇರುತ್ತದೆ ಎಂಬುದರಲ್ಲಿ ಸಂಶಯವಿಲ್ಲ.

ರಾಜ್ಯ ಸರಕಾರವು ಈ ವರ್ಷದ ದಸರಾ ಉದ್ಘಾಟನೆಗೆ ಆಯ್ಕೆಮಾಡಿರುವ ಬಾನು ಮುಷ್ತಾಕ್ ಅವರನ್ನು ಕೆಲವು ಅಲ್ಪಮತಿಗಳು ವಿರೋಧಿಸುತ್ತಿದ್ದಾರೆ. ಕಾರಣ ಬಾನು ಮುಷ್ತ್ತಾಕ್ ಮಹಿಳೆ ಎಂದು ಅದರಲ್ಲೂ ಮುಸ್ಲಿಮ್ ಮಹಿಳೆ ಎಂದು, ಈ ಸಂತೋಷದ ಕ್ಷಣವನ್ನು ಸಂಭ್ರಮಿಸದೆ ವಿರೋಧಿಸುವುದೇಕೆ ?

ಕನ್ನಡ ನುಡಿ 2000 ವರ್ಷಗಳಿಗಿಂತಲೂ ಹಳೆಯದು. ಅವತ್ತಿನಿಂದ ಇವತ್ತಿನ ತನಕ ಜನ ಮಾನಸದಲ್ಲಿ ಜೀವಿಸಿದೆ. ಮುಂದೆಯೂ ಜೀವಿಸಲಿದೆ. ಕನ್ನಡ ನುಡಿ ರಾಜಾಶ್ರಯನ್ನು ಅವಲಂಬಿಸಿ ಬದುಕಿದ ನುಡಿಯಲ್ಲ, ಜನರ ನಡುವೆ ಹುಟ್ಟಿ ಜೀವಿಸಿದ ನುಡಿ. ಕನ್ನಡ ಕೇವಲ ಒಬ್ಬ ರಾಜನಿಂದ, ಒಂದು ಕುಟುಂಬದಿಂದ, ಒಂದು ಜಾತಿಯಿಂದ ಬದುಕಿದ ಅಲ್ಪ ನುಡಿಯಲ್ಲ ಕೋಟ್ಯಾನು ಕೋಟಿ ಜನರಿಂದ ಹಲವಾರು ಜಾತಿ ಧರ್ಮದವರ ಕೊಡುಗೆಯಿಂದ ಕನ್ನಡ ಬದುಕಿ ಬಾಳಿದೆ. ಕನ್ನಡ ಸಾಹಿತ್ಯವು ಸಹ ಎಲ್ಲರಿಂದಲೂ ಜೀವಿಸಿ, ರಚನೆಗೊಳ್ಳುತ್ತಾ ಬಂದಿದೆ. ನುಡಿಗೆ, ಸಾಹಿತ್ಯಕ್ಕೆ ಯಾವುದೇ ಇತಿಮಿತಿಗಳಿಲ್ಲ, ಇಂಥವರಿಗೆ ಸಿಗಬಾರದೆಂಬ ನಿಷೇಧವಿಲ್ಲ ಎಲ್ಲರಿಗೂ ಸವಿಯುವ ಅವಕಾಶವಿದೆ.

ಕನ್ನಡ ನುಡಿಗಾಗಲಿ, ಕನ್ನಡ ಸಾಹಿತ್ಯಕ್ಕಾಗಲಿ, ಕನ್ನಡ ನಾಡಿಗಾಗಲಿ ಜಾತಿ ಧರ್ಮ ಕಪ್ಪು ಬಿಳುಪು ಗಂಡು ಹೆಣ್ಣು ಮೇಲು ಕೀಳು ಎಂಬ ಅನಿಷ್ಠ ಅಳತೆಗೋಲು ಬೇಕಿಲ್ಲ. ಎಲ್ಲರೂ ಸಮಾನರೇ, ಎಲ್ಲರೂ ಸರ್ವ ಸ್ವತಂತ್ರರೇ, ಎಲ್ಲರೂ ಯೋಗ್ಯರೇ. ಇಂತಹ ನಾಡಿನಲ್ಲಿ ಬಾನು ಮುಷ್ತಾಕ್ ಅವರು ಉದ್ಘಾಟಿಸುವ ದಸರಾವನ್ನು ಸಂಭ್ರಮಿಸದೆ ವಿರೋಧಿಸುವುದು ಮಾನವ ಲಕ್ಷಣವಲ್ಲ. ಸಾಧಕಿಯನ್ನು ಗೌರವಿಸಿದೆ ಅವರ ಜಾತಿ ಧರ್ಮದ ಹಿನ್ನೆಲೆಯನ್ನು ಆಧರಿಸಿ ವಿರೋಧ ಮಾಡುವುದು ಕ್ಷಮಿಸಲಾರದಂತಹ ನೀಚಕೃತ್ಯ. ಬಾನು ಮುಷ್ತಾಕ್ ರವರು ಕನ್ನಡಕ್ಕೆ ಬೂಕರ್ ಪ್ರಶಸ್ತಿಯನ್ನು ತಂದು ಕೊಟ್ಟಂತಹ ಸಾಧಕಿ. ವಿಶ್ವಮಟ್ಟದಲ್ಲಿ ಕನ್ನಡದ ಕಂಪು ಪಸರುವಂತೆ ಮಾಡಿದಾಕೆಯನ್ನು ಗೌರವಿಸುವುದು ಉತ್ತಮ. ಅವರು ಹೆಣ್ಣು, ಮುಸ್ಲಿಂ ಎಂದು ಅಧಮರಂತೆ ವಿರೋಧಿಸುವುದಲ್ಲ.

ಈ ಸುದ್ದಿಯ ಬಗ್ಗೆ ನೋಡಿದರೆ ನನಗೆ ಪಿ.ಲಂಕೇಶ್ ರವರು ಬರೆದಿರುವ ‘ಮುಟ್ಟಿಸಿಕೊಂಡವನು’ ಎಂಬ ಕಥೆ ನೆನಪಿಗೆ ಬರುತ್ತದೆ. ಈ ಕಥೆಯನ್ನೊಳಗೊಂಡ ‘ಕಲ್ಲು ಕರಗುವ ಸಮಯ’ ಎಂಬ ಕಥಾ ಸಂಕಲನ 1980ರಲ್ಲಿ ಪ್ರಕಟವಾಗಿದೆ. ನಾನು ಮೊದಲಿಗೆ ಈ ಕಥೆಯನ್ನು ಓದಿದಾಗ ಇದು ಅಪ್ರಸ್ತುತ ಅಂತನಿಸಿ ಆ ಕತೆ ಮರೆತುಹೋಗಿತ್ತು.

‘ದಸರಾ - ಬಾನು ಮುಷ್ತಾಕ್’ ಸುದ್ದಿ ಬರುತ್ತಿದ್ದ ಹಾಗೆ ಮುಟ್ಟಿಸಿಕೊಂಡವನು ಕಥೆ ನೆನಪಿಗೆ ಬಂತು - ಈ ಕಥೆಯಲ್ಲಿ ಲಿಂಗಾಯತ ಸಮುದಾಯಕ್ಕೆ ಸೇರಿದ ಬಸಲಿಂಗ ಎಂಬವನಿದ್ದ. ಆತ ಬೇಸಾಯಗಾರ, ಬೇಸಾಯಕ್ಕೆ ಆತನ ಎತ್ತುಗಳು ಸಹಕರಿಸದೆ ಸೋಂಬೇರಿಯಾಗಿರುತ್ತವೆ, ಆತನ ಮಗುವಿಗೆ ಹುಷಾರಿರುವುದಿಲ್ಲ ,

ಈ ಸಮಸ್ಯೆಗಳು ಸಾಲದೆಂಬಂತೆ ಆತನಿಗೆ ಎಡಗಣ್ಣಿನಲ್ಲಿ ವಿಪರೀತ ನೋವು ಕಾಣಿಸಿಕೊಂಡು ನಂತರ ಮಂದವಾಗುತ್ತಾ ಬರುತ್ತದೆ. ಕಣ್ಣಿನ ಬೇನೆಗೆ ಪರಿಹಾರ ಸಿಗಬಹುದೆಂದು ಹಲವಾರು ಡಾಕ್ಟರ್ ಗಳನ್ನು ಕಂಡ ಬಸಲಿಂಗನಿಗೆ ಕಾಸು, ಸಮಯ ಹೋಯಿತು. ಆದರೆ ಕಣ್ಣಿಗೆ ಇದ್ದ ನೋವು ಮಾತ್ರ ಹಾಗೆ ಉಳಿಯಿತು. ಹೀಗಿರಬೇಕಾದರೆ ಒಬ್ಬರು ಸರಕಾರಿ ಆಸ್ಪತ್ರೆಯ ಡಾಕ್ಟರ್ ಆದ ತಿಮ್ಮಪ್ಪರವರನ್ನು ಕಾಣಲು ಸೂಚಿಸಿದರು. ಬಸಲಿಂಗನಿಗೆ ಇದೊಂದು ಕೊನೆಯ ಪ್ರಯತ್ನವೆಂಬಂತೆ ಕಂಡಿತು. ಬಸಲಿಂಗ ತನಗಿದ್ದ ನಿತ್ಯ ಕೆಲಸಗಳನ್ನು ಬೇಗನೆ ಮುಗಿಸಿ ಡಾಕ್ಟರ್‌ರನ್ನು ನೋಡಲು ಆಸ್ಪತ್ರೆಗೆ ಹೋಗಿ ಸರದಿಯಲ್ಲಿ ನಿಂತ. ಆತನ ಸರದಿ ಬಂದಾಗ ಡಾಕ್ಟರ್ ತಿಮ್ಮಪ್ಪರನ್ನು ಕಂಡು ತನ್ನ ಬಾಧೆ ಬವಣೆಗಳನ್ನೆಲ್ಲ ಹೇಳಿಕೊಂಡ. ನಂತರ ತಿಮ್ಮಪ್ಪ ಬಸಲಿಂಗನನ್ನು ಪರೀಕ್ಷಿಸಿ ನಿಮಗೆ ಒಂದು ಆಪರೇಷನ್ ಆದರೆ ಎಲ್ಲಾ ಸರಿ ಹೋಗುತ್ತೆ, ನಾಳೆ ಆಪರೇಷನ್‌ಗೆ ಬನ್ನಿ ಅಂತ ಹೇಳಿ ಕಳುಹಿಸಿದರು.

ನಾಳೆ ಆಯಿತು, ಆಪರೇಷನ್ ಕೂಡ ಮುಗಿಯಿತು, ಮುಗಿದ ನಂತರ ಇದು ಸೂಕ್ಷ್ಮವಾದ ಶಸ್ತ್ರಚಿಕಿತ್ಸೆ ನೀನು ಎರಡುವಾರ ತಲೆಗೆ ನೀರನ್ನು ಸೋಂಕಿಸಬಾರದು, ನೀರು ಬಿದ್ದರೆ ಕಣ್ಣು ಕೆಟ್ಟು ಹೋಗುವ ಅಪಾಯ ಇದೆ ಎಂದು ಡಾಕ್ಟರ್ ಸಲಹೆಯನ್ನಿತ್ತರು.

ಶಸ್ತ್ರಚಿಕಿತ್ಸೆಯಾದ ನಂತರ ಬಸಲಿಂಗ ಮನೆಗೆ ಬಂದ. ಬಂದ ಕೂಡಲೇ ಆತನ ಹೆಂಡತಿ ಸಿದ್ಲಿಂಗಿ ದೊಡ್ಡ ರಾದ್ಧಾಂತವನ್ನೆ ಎಬ್ಬಿಸಿದಳು. ನಾವು ಲಿಂಗಾಯತರು ಆ ತಿಮ್ಮಪ್ಪ ಡಾಕ್ಟರ್ ಹೊಲೆಯ ಅವನ ಕೈಲಿ ನೀನು ಹೇಗೆ ಮುಟ್ಟಿಸಿಕೊಂಡೆ ಅಂತ. ಈ ಸಾಮಾನ್ಯ ಘಟನೆ ಅಲ್ಪರ ದೃಷ್ಟಿಯಲ್ಲಿ ರಾದ್ಧಾಂತವಾಗಿ ಪರಿಣಮಿಸಿತು. ಸಿದ್ಲಿಂಗಿ ಕೊನೆಗೆ ಜಾತಿ ಕೆಟ್ಟಿದೆ ಎಂದು ಗಂಡನಿಗೆ ಕಣ್ಣಿಗೆ ನೀರು ಬೀಳದಂತೆ ಎಚ್ಚರವಹಿಸಿ ತಲೆ ಸ್ನಾನ ಮಾಡಿಸಿ ಮನೆ ಒಳಗೆ ಕರೆದುಕೊಂಡಳು. ಎರಡು ಮೂರು ದಿನ ಬಸಲಿಂಗನಿಗೆ ಯಾವ ತೊಂದರೆಯೂ ಇಲ್ಲದೆ ವಾಸಿ ಎನಿಸಿತು. ಅಷ್ಟರಲ್ಲೇ ಪುನಹ ನೋವು ಕಾಣಿಸಿಕೊಂಡಿತು. ಬಸಲಿಂಗ ತಿಮ್ಮಪ್ಪನನ್ನು ಬಿಟ್ಟು ಬೇರೆ ಡಾಕ್ಟರ್‌ರಲ್ಲಿಗೆ ಹೋದ. ಅವರು ಸಾಕಷ್ಟು ಹಣ ಪೀಕಿ ಚಿಕಿತ್ಸೆ ನೀಡಿದರು, ಫಲಿಸಲಿಲ್ಲ. ಕೊನೆಗೆ ತಿಮ್ಮಪ್ಪರ ಬಳಿಗೆ ಬಂದಾಗ ಪುನಃ ಆಪರೇಷನ್ ಮಾಡೋದಿಲ್ಲ ಲೇಹ್ಯ ಕೊಡುವೆ ಅಂದರು. ಲೇಹ ಬಳಸಿದಾಗ ಎಡಗಣ್ಣಿನ ನೋವು ನಿವಾರಣೆಯಾಯಿತು ಅಂತ ನಿಟ್ಟುಸಿರು ಬಿಡುವಷ್ಟರಲ್ಲಿ ಬಲಗಣ್ಣಿನಲ್ಲಿ ಅತೀವ ನೋವು ಕಾಣಿಸಿಕೊಂಡಿತು. ತಮ್ಮ ಜಾತಿಯ ರಾಜಕಾರಣಿ ರುದ್ರಪ್ಪನ ಜೊತೆ ಸಾಕಷ್ಟು ಡಾಕ್ಟರ್‌ಗಳಲ್ಲಿ ಚಿಕಿತ್ಸೆ ಪಡೆದರೂ ಉಪಯೋಗವಾಗಲಿಲ್ಲ. ದಿನೇ ದಿನೇ ಕಣ್ಣಿನ ವೇದನೆ ಮಿತಿ ಮೀರಿ ಸಹಿಸಿಕೊಳ್ಳಲಾಗದೆ ಇರುವ ಹಂತಕ್ಕೆ ತಲುಪಿತು. ಬಸಲಿಂಗನಿಗೆ ತನ್ನ ಹೆಂಡತಿಯ ಮಡಿವಂತಿಕೆ, ತನ್ನ ಜಾತಿಯ ಅಂತಸ್ತಿಕೆ ಯಾವುದು ಪರಿಗಣನಿಗೆ ಬಾರದೆ ಮರಳಿ ತಿಮ್ಮಪ್ಪ ಡಾಕ್ಟರ್ ಬಳಿಗೆ ಕಣ್ಣಿನ ಚಿಕಿತ್ಸೆಗೆ ಹೋದ. ತಿಮ್ಮಪ್ಪ ತನ್ನ ಕರ್ತವ್ಯವನ್ನು ನಿರ್ವಹಿಸಿದರು.

ಈ ಕಥೆ ಬರೆದು 45 ವರ್ಷ ಕಳೆದಿದೆ. ಈ ಕಥೆ ಬರೆದ ದಿನಕ್ಕಿಂತ ಈ ದಿನ ಕೆಟ್ಟದಾಗಿದೆ. ಮನುಷ್ಯನನ್ನು ಗೌರವಿಸುವುದು, ಸಮಾನವಾಗಿ ಕಾಣುವುದು ಮನುಷ್ಯತ್ವ. ಮಾನವನನ್ನು ಆತನ ಹಿನ್ನೆಲೆಯಾದ ಜಾತಿ ಧರ್ಮ ಲಿಂಗ ಬಣ್ಣ ಅಧಿಕಾರ ಆಕಾರಗಳಿಂದ ಗುರುತಿಸಿ ಅವಮಾನಿಸುವುದು, ಅವರ ಘನತೆಗೆ ಚ್ಯುತಿ ತರುವುದು ಮಾನವಕುಲಕ್ಕೆ ಕಳಂಕ.

ಸಿದ್ಲಿಂಗಿ ತನ್ನ ಗಂಡನಿಗೆ ಇದ್ದ ಕಣ್ಣು ನೋವು ನಿವಾರಣೆಯಾಗುತ್ತದೆ ಎಂಬ ಖುಷಿಗಿಂತ ಆಕೆಗೆ ತನ್ನ ಗಂಡ ಹೊಲೆಯರಿಂದ ಮುಟ್ಟಿಸಿಕೊಂಡನೆಂಬ ಕೀಳು ಭಾವನೆಯೇ ದೊಡ್ಡದಾದ ಕಾರಣ ಬಸಲಿಂಗ ಅನಂತ ನೋವು - ಸಂಕಟಗಳಿಗೆ ತುತ್ತಾಗಬೇಕಾಯಿತು. ಹಾಗೆಯೇ ಬಾನು ಮುಷ್ತ್ತಾಕ್ ರವರು ಮುಸ್ಲಿಮ್ ಹೆಣ್ಣು ಅಂತ ದಸರಾ ಉದ್ಘಾಟನೆಯನ್ನು ವಿರೋಧಿಸುವವರಿಂದ ಈ ಸಮಾಜ ಮುಂದಿನ ದಿನಗಳಲ್ಲಿ ಅನಂತ ನೋವುಗಳಿಗೆ, ಸಂಕಟಗಳಿಗೆ ತುತ್ತಾಗಬೇಕಾಗುತ್ತದೆ.

ಉದಾಹರಣೆಗೆ - ಮುಂದಿನ ದಿನ ನಾವು ಕುರುಬರು ನಮ್ಮ ಮಕ್ಕಳಿಗೆ ಕಲಿಸಲು ಕುರುಬ ಶಿಕ್ಷಕರೇ ಬೇಕು, ನಮಗೆ ಚಿಕಿತ್ಸೆ ನೀಡಲು ಕುರುಬ ಡಾಕ್ಟರುಗಳೇಬೇಕು, ನಾವು ತಿನ್ನುವ ಅನ್ನ ಕುರುಬ ಬೆಳೆದ ಭತ್ತದಿಂದಲೇ ಆಗಬೇಕು, ನಾವು ಉಡಲು ಕುರುಬ ತಯಾರಿಸಿದ ಬಟ್ಟೆಯೇ ಬೇಕು, ನಾವು ಮಲಗಲು ಕುರುಬ ತಯಾರಿಸಿದ ಚಾಪೆಯೇ ಬೇಕು, ನಾವು ವಾಸಿಸಲು ಕುರುಬ ಕಟ್ಟಿದ ಮನೆಯೇ ಬೇಕು, ನಾವು ಗಾಳಿ ಸೇವಿಸಲು ಕುರುಬ ನೆಟ್ಟಿದ ಮರವೇ ಬೇಕು, ನಾವು ಸತ್ತಾಗ ಊಳಲು ಕುರುಬ ತೋಡಿದ ಗುಂಡಿಯೇ ಬೇಕು, ನಾವು ಸತ್ತಾಗ ಸುಡಲು ಕುರುಬರ ಮನೆಯಿಂದ ತಂದ ಸೌದೆಯೇ ಬೇಕು,,,

ಇನ್ನು ಮುಂತಾದ ಜಾತಿಗಳು... ಬೇಕು, ಬೇಕು...

ನಮ್ಮ ಕೆಟ್ಟು ನಿಂತ ಜಡತ್ವದ ಸಮಾಜದಲ್ಲಿ ಕೋಮುವಾದದಂತಹ ಬಿಲಿಯನ್ ಗಟ್ಟಲೆ ಪ್ರಸಂಗಗಳು ನಡೆಯುತ್ತಲೇ ಇರುತ್ತವೆ, ಇಂತಹ ಘಟನೆಗಳಿಗೆ ಕೊನೆಯೆಂಬುದಿಲ್ಲವಂತೆ ಆಗಿದೆ.

ಕ್ರೂರವಾದ ಸನ್ನಿವೇಶಗಳು ಬರುವ ಕಾಲ ದೂರವೇನಿಲ್ಲ. ಕೋಮುವಾದವನ್ನು ತಡೆಯಲು, ತೊಲಗಿಸಲು ಎಚ್ಚರ ವಹಿಸಿ, ಆ ನಿಟ್ಟಿನಲ್ಲಿ ಕೆಲಸ ಮಾಡೋಣ. ಕನ್ನಡ ನಾಡು ನಿರ್ಮಾಣವಾಗಿರುವುದು ಕನ್ನಡ ನುಡಿಯ ಆಧಾರದ ಮೇಲೆಯೇ ಹೂರತು ಜಾತಿ ಧರ್ಮಗಳ, ಅಸಮಾನತೆಯ ಆಧಾರದ ಮೇಲಲ್ಲ.

ನಾವು ಎಲ್ಲಾ ಸಮಯದಲ್ಲೂ ಕುವೆಂಪುರವರು ಹೇಳಿದ ಮಾತನ್ನು ಪಾಲಿಸಬೇಕಿದೆ - ಪ್ರತಿಯೊಂದು ಮಗುವೂ ಹುಟ್ಟುತ್ತಲೇ ವಿಶ್ವಮಾನವ, ಬೆಳೆಯುತ್ತ ನಾವು ಅದನ್ನು ಅಲ್ಪ ಮಾನವನ್ನಾಗಿ ಮಾಡುತ್ತೇವೆ. ಮತ್ತೆ ಅದನ್ನು ವಿಶ್ವಮಾನವನ್ನಾಗಿ ಮಾಡುವುದೇ ವಿದ್ಯೆಯ ಕರ್ತವ್ಯವಾಗಬೇಕು.

ಆ ವಿಶ್ವಮಾನವರನ್ನಾಗಿಸಬೇಕಾದ ಶಿಕ್ಷಣ ಇಂದು ಮಾರುಕಟ್ಟೆಯ ದುಬಾರಿ ಸರಕಾಗಿದೆ. ಉಳ್ಳವರ ಪಾಲಾಗಿ, ಇಲ್ಲದವರಿಗೆ ಗಗನ ಕುಸುಮವಾಗಿದೆ.

ನಿಜವಾದ ರೀತಿಯಲ್ಲಿ ಮೈಸೂರು ದಸರಾ ನಾಡ ಹಬ್ಬ ಆಗಬೇಕು ಎಂದರೆ ಅಂಬಾರಿ ಒಳಗೆ ಚಾಮುಂಡಿ ವಿಗ್ರಹದ ಬದಲು ಕನ್ನಡ ನಾಡಿನ ಭೂಪಟ ಇಡಬೇಕು ಮತ್ತು ಯಾವುದೇ ಜಾತಿ ಧರ್ಮದ ಪುರೋಹಿತರ ಕೈಯಲ್ಲಿ ಸಮಯ ನಿಗದಿ ಪಡಿಸೋದು, ಪೂಜೆ ಮಾಡಿಸೋದು ಬಹಳ ಮುಖ್ಯವಾಗಿ ಇಂಥದ್ದೇ ದಿನ ಮಾಡಬೇಕು ಅನ್ನುವುದನ್ನು ಕೈ ಬಿಡಬೇಕು.

ನಾವು ಶಿಕ್ಷಣವೆಂದರೆ ಅಂಕ ಪಡೆದ ಮಕ್ಕಳಿಗೆ ಸರ್ಟಿಫಿಕೇಟ್ ವಿತರಿಸುವುದು ಎಂದಷ್ಟೇ ಭಾವಿಸಿದ್ದೇವೆ. ಇದು ಪರಿಪೂರ್ಣ ವಾದದ್ದಲ್ಲ. ಶಿಕ್ಷಣ ಎಂಬುದು ಅಂಕಪಟ್ಟಿಯಲ್ಲಷ್ಟೇ ಇರುವುದಿಲ್ಲ. ಜೀವನ ಶೈಲಿಯಲ್ಲೂ ಅಳವಡಿಕೆಯಾಗಿರಬೇಕು. ನಮ್ಮ ಮುಂದಿನ ಪೀಳಿಗೆಗಳಿಗೆ ಅಕ್ಷರದ ಜೊತೆ ವೈಜ್ಞಾನಿಕ ಪರಿಕಲ್ಪನೆಯನ್ನು ಕಲಿಸಬೇಕು. ಪ್ರತಿಯೊಂದು ಶುಭಕಾರ್ಯಕ್ಕೂ ಜಾತಕ ನೋಡಿಸುವುದು, ವೈದಿಕರ ಮಾರ್ಗದರ್ಶನದ ಮೇಲೆ ನಡೆಯುವುದು ಇವೆಲ್ಲವನ್ನು ಬಿಟ್ಟು, ಸ್ವತಂತ್ರವಾಗಿ ಜೀವಿಸುವುದನ್ನು ಕಲಿಸಬೇಕು. ಸಮಾನತೆಗೆ ವಿರುದ್ಧವಾಗಿರುವ ಪುರೋಹಿತಶಾಹಿ, ಮೌಢ್ಯ, ಕಂದಚಾರ ಇವುಗಳನ್ನೆಲ್ಲ ಕಿತ್ತೊಗೆಯಬೇಕು.

ಮಾನವನ ಸ್ವಾರ್ಥದಿಂದ ಇಂದು ಜಗತ್ತು ಲೆಕ್ಕ ಹಾಕದಿರುವಷ್ಟು ಒಡೆದು ಹಂಚಿಹೋಗಿದೆ. ಮನುಷ್ಯರ ಸಹಬಾಳ್ವೆಗೆ ಅವಕಾಶ ಕಲ್ಪಿಸುವುದೇ ಮರೀಚಿಕೆಯಾದಂತಿದೆ. ಕೋಮುವಾದ, ಜಾತಿವಾದ ಬೆಳೆಸುವ ಕೆಲಸ ಬಿಟ್ಟು ಮನುಷ್ಯತ್ವ ಬೆಳೆಸೋಣ. ಪೂರ್ವಾಗ್ರಹವನ್ನು ನಾಶಪಡಿಸಿ ವಿಶ್ವಮಾನವ ಸಂದೇಶ ಸಾರೋಣ. ಹಾಗೆಯೇ ಬದುಕೋಣ. ಮುಂದಿನ ಪೀಳಿಗೆಗೆ ಮಾದರಿಯಾಗೋಣ ಅಂತ ಬಯಸುತ್ತೇನೆ. ಎಲ್ಲರೂ ನಮ್ಮವರೇ. ಜನರ ಸಾಮಾಜಿಕ ಆರ್ಥಿಕ ನೆಲೆ ಬೇರೆಯಾಗಿರಬಹುದು ಆದರೆ ಅವರು ನಮ್ಮವರೇ, ನಮ್ಮಲ್ಲೇ ಅವರು ಒಬ್ಬರು, ಅವರಲ್ಲೇ ನಾನು ಒಬ್ಬ.

ಈ ಸಮಯದಲ್ಲಿ ವಚನಕಾರ ಬಸವಣ್ಣನವರ ಸಾಲುಗಳನ್ನು ಮರೆಯಲು ಸಾಧ್ಯವೇ ಇಲ್ಲ -

‘‘ಇವನಾರವ ಇವನಾರವ ಇವನಾರವ ಎಂದೆನಿಸದಿರಯ್ಯಾ,

ಇವನಮ್ಮವ ಇವನಮ್ಮವ ಇವನಮ್ಮವ ಎಂದೆನಿಸಯ್ಯ’’.

ಇವರು ನಮ್ಮವರಯ್ಯ.

ಜಾತಿ ಕಟ್ಟಳೆಗಳ ಮೀರಲು ಪ್ರತಿಯೊಬ್ಬರಲ್ಲಿಯೂ ಜಾತಿ ವ್ಯವಸ್ಥೆ ಬಗ್ಗೆ ತಿಳುವಳಿಕೆ ಇರಬೇಕೇ ವಿನಃ ಯಾವುದೇ ಜಾತಿ ಮೇಲೆ ಪ್ರೀತಿಯೂ ಬೇಡ, ದ್ವೇಷವೂ ಬೇಡ.

share
ದರ್ಶನ್ ಕುರುಬಾಸ್
ದರ್ಶನ್ ಕುರುಬಾಸ್
Next Story
X