Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಕಮ್ಯುನಿಸ್ಟ್ ನಾಯಕ ಎ.ಬಿ. ಬರ್ಧನ್‌ರ...

ಕಮ್ಯುನಿಸ್ಟ್ ನಾಯಕ ಎ.ಬಿ. ಬರ್ಧನ್‌ರ ನೂರರ ನೆನಪು

ವಿ. ಕುಕ್ಯಾನ್, ಮಂಗಳೂರುವಿ. ಕುಕ್ಯಾನ್, ಮಂಗಳೂರು25 Sept 2025 10:25 AM IST
share
ಕಮ್ಯುನಿಸ್ಟ್ ನಾಯಕ ಎ.ಬಿ. ಬರ್ಧನ್‌ರ ನೂರರ ನೆನಪು

ಕಮ್ಯುನಿಸ್ಟ್ ಪಕ್ಷಗಳು ಎಡವಿದ ಎರಡು ಘಟನೆಗಳಿಗೆ ಬರ್ಧನ್‌ರವರು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದರು. ಇಂಡೋ-ಅಮೆರಿಕನ್ ನ್ಯೂಕ್ಲಿಯರ್ ಡೀಲ್ ಸಂದರ್ಭದಲ್ಲಿ ಎಡಪಕ್ಷಗಳು ಯುಪಿಎ ಸರಕಾರಕ್ಕೆ ನೀಡಿದ ಬೆಂಬಲವನ್ನು ಹಿಂದೆ ಪಡೆದುಕೊಂಡಿರುವುದು ತಪ್ಪು ಎಂದು ಹೇಳಿದವರಲ್ಲಿ ಬರ್ಧನ್‌ರವರು ಪ್ರಮುಖರಾಗಿದ್ದರು. ನಂತರದ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬಂದರೂ ಎಡ ಪಕ್ಷಗಳ ಛಾಯೆಯು ಬಲಹೀನವಾಯಿತು. 1996ರಲ್ಲಿ ಸಿಪಿಐಎಂನ ಜ್ಯೋತಿಬಸು ಪ್ರಧಾನ ಮಂತ್ರಿಯಾಗುವುದನ್ನು ತಪ್ಪಿಸಿದ ಸಿಪಿಐಎಂ ಪಕ್ಷದ ನಿಲುವನ್ನು ತಪ್ಪು ಎಂದಿದ್ದರು ಬರ್ಧನ್. ಕಮ್ಯುನಿಸ್ಟ್ ಪಕ್ಷಗಳ ರಾಜಕೀಯ ಉಳಿದ ಪಕ್ಷಗಳ ರಾಜಕೀಯಕ್ಕಿಂತ ಭಿನ್ನ ಎಂದು ತೋರಿಸಲು ಇರುವ ಅವಕಾಶ ತಪ್ಪಿತು. ಒಂದು ವೇಳೆ ಜ್ಯೋತಿಬಸು ಪ್ರಧಾನಿಯಾಗಿದ್ದರೆ ಸಾಮಾನ್ಯ ಕನಿಷ್ಠ ಕಾರ್ಯಕ್ರಮಗಳ ಮೂಲಕ ದೇಶದ ಸಮಗ್ರ ಜನತೆಗೆ ಉಪಯೋಗವಾಗುವ ಆಡಳಿತದ ಅವಕಾಶ ಸಿಗುತ್ತಿತ್ತು.

ಅರ್ಧೇಂದು ಭೂಷಣ್ ಬರ್ಧನ್ (ಎ.ಬಿ ಬರ್ಧನ್) 1925ರ ಸೆಪ್ಟಂಬರ್ 25ರಂದು ಈಗಿನ ಬಾಂಗ್ಲಾದೇಶದ ಬರಿಸಾಲ್ ಜಿಲ್ಲೆಯಲ್ಲಿ ಜನಿಸಿದರು. ತಂದೆಯ ಹೆಸರು ಹೇಮೇಂದ್ರಕುಮಾರ್ ಬರ್ಧನ್ ಮತ್ತು ತಾಯಿ ಸರಳಾದೇವಿ ಬರ್ಧನ್. ಅವರದು ಶ್ರೀಮಂತ ಜಮೀನುದಾರರ ಕುಟುಂಬವಾಗಿತ್ತು. ಕಾಲೇಜು ಶಿಕ್ಷಣ ಮುಗಿಸಿದ ಹೇಮೇಂದ್ರರವರು ಸರಕಾರಿ ಸೇವೆಗೆ ಸೇರಿ ನಾಗಪುರದಲ್ಲಿ ಅಕೌಂಟೆಂಟ್ ಜನರಲ್ ಆಗಿ ಉನ್ನತ ಸ್ಥಾನದಲ್ಲಿ ಕೆಲಸ ಮಾಡಿದರು. ಎಂಟು ಮಂದಿ ಸಹೋದರ ಸಹೋದರಿಯರಲ್ಲಿ ಎ.ಬಿ. ಬರ್ಧನ್‌ರವರು ಏಳನೆಯವರು. ಹೇಮೇಂದ್ರರ ಉದ್ಯೋಗದಿಂದಾಗಿ ಇಡೀ ಕುಟುಂಬ ನಾಗಪುರದಲ್ಲೇ ನೆಲೆಸಿತು.

ನಾಗಪುರ ಸೈಂಟ್‌ಜಾನ್ ಹೈಸ್ಕೂಲಿಗೆ ಸೇರಿದ ಎ.ಬಿ. ಬರ್ಧನರು ಇಂಗ್ಲಿಷ್ ಭಾಷೆ ಮತ್ತು ಸಾಹಿತ್ಯಕ್ಕೆ ಆಕರ್ಷಿತರಾಗಿ ಅದರಲ್ಲಿ ಹಿಡಿತ ಸಾಧಿಸಿದರು. ಆ ಶಾಲೆಯ ಪ್ರಾಂಶುಪಾಲರಾಗಿದ್ದ ಇಬ್ಬರು ಪ್ರಾಂಶುಪಾಲರಲ್ಲಿ ಓರ್ವರು ಭಾರತದ ಪರ; ಇನ್ನೊಬ್ಬರು ಬ್ರಿಟಿಷ್ ಪರ. ಒಮ್ಮೆ ವಿನಾಕಾರಣ ಶಿಕ್ಷರೊಬ್ಬರು ಅವರಿಗೆ ಥಳಿಸಿದ ಕಾರಣದಿಂದಾಗಿ ಅವರ ತಂದೆ ಅವರನ್ನು ನಾಗಪುರದ ಫಟವರ್ಧನ್ ಶಾಲೆಗೆ ಸೇರಿಸಿದರು. 1939/40ರ ವಾರ್ಷಿಕ ಪರೀಕ್ಷೆಯಲ್ಲಿ ಇಡೀ ವಿದರ್ಭದಲ್ಲಿ ಎರಡನೇ ರ್ಯಾಂಕನ್ನು ಬರ್ಧನರು ಪಡೆದರು. ಆ ಬಳಿಕ ನಾಗಪುರ ವಿಜ್ಞಾನ ಕಾಲೇಜಿಗೆ ಸೇರಿದರು.

ಅದಾಗಲೇ ದೇಶದಲ್ಲಿ ಸ್ವಾತಂತ್ರ್ಯ ಹೋರಾಟದ ಆಂದೋಲನಗಳು ಸಕ್ರಿಯ ವಾಗಿದ್ದವು. ಬರ್ಧನರು ಭಗತ್‌ಸಿಂಗ್ ಮತ್ತು ಚಂದ್ರಶೇಖರ್ ಆಝಾದ್‌ರವರ ಹೋರಾಟಗಳಿಂದ ಸ್ಫೂರ್ತಿ ಪಡೆದರು. ಸಿಪಿಐ ಪಕ್ಷದ ವಾರ ಪತ್ರಿಕೆ ‘ನ್ಯೂಏಜ್’ ಅನ್ನು ಅವರು ಓದುತ್ತಿದ್ದರು. ಕಾರ್ಮಿಕರ ಬಗ್ಗೆ ಲೆನಿನ್ ಅವರ ಪುಸ್ತಕಗಳನ್ನು ಓದಿ ಅಧ್ಯಯನ ಮಾಡಿದರು. ನಾಗಪುರದ ವಿಜ್ಞಾನ ಕಾಲೇಜು ರಾಜಕೀಯ ಚಟುವಟಿಕೆಗಳ ಸಕ್ರಿಯ ಕೇಂದ್ರವಾಗಿತ್ತು. ಕಮ್ಯುನಿಸ್ಟ್ ನಾಯಕರಾದ ಬಿ.ಎಲ್. ಶರ್ಮಾ ಮತ್ತು ಎಚ್.ಕೆ. ವ್ಯಾಸರನ್ನು ಬರ್ಧನರು ಭೇಟಿ ಮಾಡಿ ಅವರಿಂದ ಅನೇಕ ಕ್ರಾಂತಿಕಾರಿ ಪುಸ್ತಕಗಳನ್ನು ಪಡೆದರು. ಇವುಗಳನ್ನು ಓದಿದ ಬರ್ಧನರು ಕಮ್ಯುನಿಸ್ಟ್ ತತ್ವಗಳಿಂದ ಪ್ರಭಾವಿತರಾದರು.

1940ರಲ್ಲಿ ನಾಗಪುರದಲ್ಲಿ ಅಖಿಲ ಭಾರತ ವಿದ್ಯಾರ್ಥಿ ಫೆಡರೇಷನ್‌ನ 4ನೇ ಸಮ್ಮೇಳನ ನಡೆಯಿತು. ಅದರಲ್ಲಿ ಸಕ್ರಿಯವಾಗಿ ಭಾಗವಹಿಸಿದ ಬರ್ಧನರು ಜಂಟಿ ಕಾರ್ಯದರ್ಶಿಯಾಗಿ ಆಯ್ಕೆಯಾದರು. ಅದಲ್ಲದೆ ಬರ್ಧನರು ಅಂದಿನಿಂದ ಸಕ್ರಿಯ ರಾಜಕಾರಣದಲ್ಲಿ ಭಾಗವಹಿಸಿದರು. ಇದಕ್ಕೆಲ್ಲ ಅವರ ಕುಟುಂಬದಿಂದ ಸಾಕಷ್ಟು ವಿರೋಧ ಎದುರಿಸಿದರು. ಆದರೆ ಬರ್ಧನರು ಅದಕ್ಕೆಲ್ಲಾ ಜಗ್ಗದೆ ತಮ್ಮದೇ ಆದ ಸ್ವತಂತ್ರಜೀವನ ಪ್ರಯಾಣವನ್ನು ಪ್ರಾರಂಭಿಸಿದರು. ಪಕ್ಷದ ಕಚೇರಿಯಲ್ಲಿ ವಾಸಿಸಿದರು. ಅದೇ ವರ್ಷ ಪಕ್ಷದ ಸದಸ್ಯರಾದರು. ಪಕ್ಷದ ಚಟುವಟಿಕೆಗಳಿಂದ ಕಾಲೇಜಿನಲ್ಲಿ ಹಾಜರಾತಿ ಕಡಿಮೆಯಾಗಿ ಪರೀಕ್ಷೆಗೆ ಕೂರಲು ಅಸಾಧ್ಯ ಸನ್ನಿವೇಶ ಎದುರಾಯಿತು. ಹೇಗೋ ಪರೀಕ್ಷೆ ಬರೆದರು. ಉತ್ತಮ ಶ್ರೇಣಿಯಲ್ಲಿ ಉತ್ತೀರ್ಣರಾಗಿ ಅರ್ಥಶಾಸ್ತ್ರ ಎಂ.ಎ. ಮಾಡಲು ಆರ್ಟ್ ಕಾಲೇಜಿಗೆ ಸೇರಿದರು.

1941ರಲ್ಲಿ ಎಐಎಸ್‌ಎಫ್ ರಾಷ್ಟ್ರೀಯ ಸಮಾವೇಶ ಪಾಟ್ನಾದಲ್ಲಿ ಜರುಗಿತು. ಅದರಲ್ಲಿ ಭಾಗವಹಿಸಿದ ಬರ್ಧನರು ಅಲ್ಲಿ ಸತ್ಪಾಲ್ ಡಾಂಗೆಯವರನ್ನು ಭೇಟಿಯಾದರು. ಎರಡನೇ ಮಹಾಯುದ್ಧ ನಡೆಯುತ್ತಿದ್ದ ಸಮಯವದು. ಈ ಮಹಾಯುದ್ಧ ವಿದ್ಯಾರ್ಥಿ ಹಾಗೂ ರಾಜಕೀಯ ವಲಯಗಳಲ್ಲಿ ಚರ್ಚಿತ ವಿಷಯವಾಗಿತ್ತು.

1942ರ ಕ್ವಿಟ್‌ಇಂಡಿಯಾ ಚಳವಳಿಯಲ್ಲಿ ಭಾಗವಹಿಸಿದ ಬರ್ಧನ್‌ರನ್ನು ಭಾರತ ರಕ್ಷಣಾ ಕಾಯ್ದೆಯಡಿ ಬಂಧಿಸಿದ್ದರಿಂದ ಪರೀಕ್ಷೆಗೆ ಹಾಜರಾಗಲು ಸಾಧ್ಯವಾಗಲಿಲ್ಲ. ಹಾಗೆ ಪರೀಕ್ಷೆ ಬರೆಯಲಾಗದ ವಿದ್ಯಾರ್ಥಿಗಳಿಗೆ ವಿಶೇಷ ಪರೀಕ್ಷೆ ನಡೆಸಬೇಕೆಂದು ಒತ್ತಾಯಿಸಿ ಎಐಎಸ್‌ಎಫ್ ಚಳವಳಿ ನಡೆಸಿದಾಗ ಸರಕಾರ ಅದಕ್ಕೊಪ್ಪಿ ವಿಶೇಷ ಪರೀಕ್ಷೆಗೆ ಅನುವು ಮಾಡಿಕೊಟ್ಟಿತು. ಹೀಗೆ ಬರ್ಧನರು ವಿಶೇಷ ಪರೀಕ್ಷೆಗೆ ಹಾಜರಾಗಿ ಉತ್ತಮ ಶ್ರೇಣಿಯಲ್ಲಿ ಉತ್ತೀರ್ಣರಾದರು.

1947ರಲ್ಲಿ ನಾಗಪುರದ ವಿದ್ಯಾರ್ಥಿ ಒಕ್ಕೂಟಕ್ಕೆ ಚುನಾವಣೆ ನಡೆದಾಗ ಎಐಎಸ್‌ಎಫ್ ಜಯ ಸಾಧಿಸಿತು. ಬರ್ಧನರು ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷರಾದರು. 1947ರಲ್ಲಿ ಮುಂಬೈಯಲ್ಲಿ ನಡೆದ ವಿದ್ಯಾರ್ಥಿ ಸಮ್ಮೇಳನದಲ್ಲಿ ಬರ್ಧನರು ಗೀತಾ ಮುಖರ್ಜಿಯವರನ್ನು ಭೇಟಿಯಾದರು. ಈ ಭೇಟಿ ಬರ್ಧನರಿಗೆ ಮತ್ತಷ್ಟು ಸ್ಫೂರ್ತಿ ನೀಡಿತು.

ವಿದ್ಯಾರ್ಥಿ ಚಳವಳಿ ಜೊತೆಗೆ ಬರ್ಧನರು ಗಿರಣಿ, ಬೀಡಿ, ಪುರಸಭಾ ನೌಕರ ಮುಂತಾದ ಸಂಘಟನೆಗಳಲ್ಲಿ ಸಕ್ರಿಯರಾಗಿ ಭಾಗವಹಿಸಿದರು. ಅವರು ಉತ್ತಮ ಭಾಷಣಕಾರರಾಗಿದ್ದರು.

ಬಿಟಿಆರ್ ಕಾರ್ಯದರ್ಶಿಯವರಾಗಿದ್ದ ಅವಧಿಯಲ್ಲಿ ಪಕ್ಷ ತುಂಬಾ ತೊಂದರೆಗಳನ್ನು ಎದುರಿಸಬೇಕಾಯಿತು. ಬಂಧನ ತಪ್ಪಿಸಲು ಬರ್ಧನರು ಭೂಗತರಾಗಬೇಕಾಯಿತು. ಎಚ್.ಕೆ. ವ್ಯಾಸ್ ಅವರ ಜೊತೆಗಿದ್ದರು. ಕೊನೆಗೆ ಬಂಧಿತರಾದ ಬರ್ಧನ್‌ರವರನ್ನು ರಾಯ್‌ಪುರ ಜೈಲಿಗೆ ಕಳುಹಿಸಲಾಯಿತು. ಅಲ್ಲಿ ಕೈದಿಗಳ ಜೀವನ ಸುಧಾರಿಸುವ ನಿಟ್ಟಿನಲ್ಲಿ 45 ದಿನಗಳ ಉಪವಾಸ ಸತ್ಯಾಗ್ರಹ ನಡೆಸಲಾಯಿತು. ಬರ್ಧನರು ಇದರಲ್ಲಿ ಸಕ್ರಿಯವಾಗಿ ಭಾಗವಹಿಸಿದರು. ಬಿಡುಗಡೆಯಾದ ನಂತರ ತಮ್ಮ ನಾಗಪುರ ಮನೆಗೆ ಹೋದ ಬರ್ಧನರು ಕೆಲದಿನಗಳ ನಂತರ ಕೋಲ್ಕತಾಕ್ಕೆ ಹೋಗಿ ಅಲ್ಲಿ ಟ್ರೇಡ್ ಯೂನಿಯನ್ ಚಳವಳಿಗಳಲ್ಲಿ ಸಕ್ರಿಯರಾದರು. ನಂತರ ಮಹಾರಾಷ್ಟ್ರಕ್ಕೆ ಮರಳಿದ ಬರ್ಧನರು ನೇಕಾರರ ಮತ್ತು ವಿದ್ಯುತ್ ನೌಕರರ ಬಲವಾದ ಸಂಘಟನೆಗಳನ್ನು ಕಟ್ಟಿದರು. ಸಂಯುಕ್ತ ಮಹಾರಾಷ್ಟ್ರದ ಆಂದೋಲನಗಳಲ್ಲೂ ಅವರು ಭಾಗವಹಿಸಿದರು.

ವಿಜ್ಞಾನ ಕಾಲೇಜಿನ ವಿದ್ಯಾರ್ಥಿನಿ ಪದ್ಮಾದೇವ್ ಅವರೊಂದಿಗೆ ಪರಿಚಯ ಬೆಳೆದು 1952ರಲ್ಲಿ ಅವರ ವಿವಾಹವಾಯಿತು. 1957ರಲ್ಲಿ ನಡೆದ ವಿಧಾನ ಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಚುನಾಯಿತರಾದರು. ನಂತರ ನಡೆದ ಚುನಾವಣೆಗಳಲ್ಲಿ ಸ್ಪರ್ಧಿಸಿದರೂ ಗೆಲುವು ಸಾಧ್ಯವಾಗಲಿಲ್ಲ.

1968ರಲ್ಲಿ ಸಿಪಿಐ ಪಕ್ಷದ ರಾಷ್ಟ್ರೀಯ ಮಂಡಳಿಗೆ, 1978ರಲ್ಲಿ ರಾಷ್ಟ್ರೀಯ ಕಾರ್ಯಕಾರಿ ಸಮಿತಿಗೆ, 1982ರ ಅಧಿವೇಶನದಲ್ಲಿ ರಾಷ್ಟ್ರೀಯ ಕೇಂದ್ರ ಕಾರ್ಯದರ್ಶಿಯಾಗಿ ಬರ್ಧನರು ಚುನಾಯಿತರಾದರು. 1994ರಲ್ಲಿ ಎಐಟಿಯುಸಿಯ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದರು. ಮುಂದೆ 1996ರಲ್ಲಿ ಸಿಪಿಐ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದರು.

1964ರಲ್ಲಿ ಪಕ್ಷದ ವಿಭಜನೆಯು ಕಮ್ಯುನಿಸ್ಟ್ ಚಳವಳಿಯನ್ನು ದುರ್ಬಲಗೊಳಿಸಿತು. ಅನೇಕ ಸೈದ್ಧಾಂತಿಕ, ತಾರ್ಕಿಕ ಹಾಗೂ ರಾಜಕೀಯ ನಿಲುವುಗಳಲ್ಲಿ ವ್ಯತ್ಯಾಸವಿದ್ದರೂ ಪಕ್ಷದ ವಿಭಜನೆ ತಪ್ಪು ಮತ್ತು ಹಾನಿಕಾರಕ ಎಂದು ಬರ್ಧನ್ ಪರಿಗಣಿಸಿದ್ದರು. (ಇದರ ಪರಿಣಾಮವನ್ನು ಎಡಪಕ್ಷಗಳು ಈಗಲೂ ಅನುಭವಿಸುತ್ತಿವೆ.) ಕಮ್ಯುನಿಸ್ಟ್ ಏಕತೆಗಾಗಿ ಪ್ರಾಮಾಣಿಕ ಪ್ರಯತ್ನ ಮಾಡಿದ್ದರೂ ಅದು ಸಾಧ್ಯವಾಗಲಿಲ್ಲ. ಬರ್ಧನ್‌ರವರ 100ನೇ ವರ್ಷದ ಈ ಸಂದರ್ಭದಲ್ಲಿ ದೇಶಕ್ಕೆ ಮಾರ್ಕ್ಸ್‌ವಾದ ಹಿಂದೆಂದಿಗಿಂತಲೂ ಹೆಚ್ಚು ಅಗತ್ಯ ಎಂಬುದನ್ನು ದೇಶದ ಜನತೆ ಮನಗಂಡಿದ್ದಾರೆ. ಆದರೆ ನಮ್ಮ ಪ್ರಯತ್ನ ಫಲಕೊಡುತ್ತಿಲ್ಲ.

ತಮ್ಮ ಜೀವಿತದ ಕೊನೆಯ ಹಲವಾರು ವರ್ಷಗಳನ್ನು ಒಂದು ಕೊಠಡಿಯ ಮನೆಯಲ್ಲಿ ಸರಳವಾಗಿ ಬದುಕಿದ ಬರ್ಧನ್‌ರವರು ಕಮ್ಯುನಿಸ್ಟ್ ಸಿದ್ಧಾಂತ ಹಾಗೂ ಪಕ್ಷಕ್ಕಾಗಿ ತನ್ನನ್ನು ಒಪ್ಪಿಸಿಕೊಂಡ ಬುದ್ಧಿಜೀವಿ ನಾಯಕರಾಗಿದ್ದರು.

91 ವರ್ಷ ಬದುಕಿದ ಕಾ| ಬರ್ಧನ್‌ರವರು 2015ರ ಜನವರಿ 2ರಂದು ಮೆದುಳಿನ ರಕ್ತಸ್ರಾವದಿಂದ ನಿಧನರಾದರು. ಅವರ ಪ್ರಾಮಾಣಿಕತೆ ಹಾಗೂ ಕಾರ್ಯದಕ್ಷತೆಯಿಂದ ಇತರ ರಾಜಕೀಯ ಪಕ್ಷದವರ ಮನವನ್ನೂ ಗೆದ್ದಿದ್ದರು.

share
ವಿ. ಕುಕ್ಯಾನ್, ಮಂಗಳೂರು
ವಿ. ಕುಕ್ಯಾನ್, ಮಂಗಳೂರು
Next Story
X