Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಚಪ್ಪರ, ಡೇರೆ ಹಾಕುವ ಚಪ್ಪರ್ ಬಂದ್

ಚಪ್ಪರ, ಡೇರೆ ಹಾಕುವ ಚಪ್ಪರ್ ಬಂದ್

ಸಿ.ಎಸ್. ದ್ವಾರಕಾನಾಥ್ಸಿ.ಎಸ್. ದ್ವಾರಕಾನಾಥ್28 Jan 2026 11:32 AM IST
share
ಚಪ್ಪರ, ಡೇರೆ ಹಾಕುವ ಚಪ್ಪರ್ ಬಂದ್

ಮೂಲತಃ ಮೊಗಲರ ಆಳ್ವಿಕೆಯಲ್ಲಿ ಸೈನಿಕರಿಗೆ ಯುದ್ಧ ಭೂಮಿ ಸಮೀಪ ಚಪ್ಪರ ಅಥವಾ ಟೆಂಟ್ ಕಟ್ಟಿಕೊಡುತ್ತಿದ್ದ ಕಸುಬನ್ನೇ ಮಾಡುತ್ತಾ ಹೊರಟ ಬಹುತೇಕ ಮುಸ್ಲಿಮ್ ಅಲೆಮಾರಿಗಳಿವರು. ಬಿಹಾರದಿಂದ ಕರ್ನಾಟಕದ ಬಿಜಾಪುರಕ್ಕೆ ಆದಿಲ್‌ಶಾಹಿ ರಾಜರೊಡನೆ ಡೇರೆ ಹಾಕುತ್ತಾ ಬಂದು ನೆಲೆಸಿದವರು ಎಂದು ಇವರ ಇತಿಹಾಸ ಹೇಳುತ್ತದೆ.

‘ಚಪ್ಪರ್’ ಎನ್ನುವುದೂ ಬೈಗುಳದ ಪದವೇ, ‘‘ಇವನ್ಯಾರೋ ಚಪ್ಪರ್...’’ ಎಂದೋ, ‘‘ಏ ಚಪ್ಪರ್ ಬಾ ಇಲ್ಲಿ..’’ ಎಂದು ಕರೆಯುವುದನ್ನು ನೋಡಿರುತ್ತೀರಿ. ಚಪ್ಪರ್ ಬಂದ್ ಸಮುದಾಯದವರು ನಮ್ಮ ಆಯೋಗಕ್ಕೆ ಬಂದಾಗ ಅವರ ಹೆಸರನ್ನು ನಮ್ಮ ಹಿಂದುಳಿದ ಪಟ್ಟಿಯಲ್ಲಿ ಹುಡುಕಾಡಿದ್ದೆ. ಪ್ರವರ್ಗ 1ರಲ್ಲಿ ಇವರ ಹೆಸರು 66(ಎ)ನಲ್ಲಿ ನಮೂದಾಗಿತ್ತು. ಚಪ್ಪರ್ ಬಂದ್ ಸಮುದಾಯ ಕರ್ನಾಟಕದಲ್ಲಿ ಮುಸ್ಲಿಮರು ಬಹುತೇಕ ಇದ್ದರೆ, ಮಹಾರಾಷ್ಟ್ರದಲ್ಲಿ ಹಿಂದೂಗಳೂ ಇದ್ದಾರೆ. ಕರ್ನಾಟಕದಲ್ಲಿ ಇವರು ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಅತಿ ಹಿಂದುಳಿದ ಸಮುದಾಯವಾದ್ದರಿಂದ ಪ್ರವರ್ಗ ಒಂದರ ಪಟ್ಟಿಯಲ್ಲಿ ಇಟ್ಟಿದ್ದರೂ ಇದು ಅತಿಸೂಕ್ಷ್ಮ ಅಲೆಮಾರಿ ಸಮುದಾಯವಾಗಿದ್ದರಿಂದ ಯಾರಿಗೂ ಕಾಣುತ್ತಿರಲಿಲ್ಲ.

ಚಪ್ಪರ್ ಬಂದ್ ಸಮುದಾಯವನ್ನು ಹುಡುಕುತ್ತಾ ಹುಬ್ಬಳ್ಳಿಗೆ ಹೋದೆವು, ಅಲ್ಲೊಂದು ಸೆಟಲ್ಮೆಂಟ್‌ನಲ್ಲಿ ಈ ಸಮುದಾಯವನ್ನು ಭೇಟಿ ಮಾಡಿದೆವು. ಅತ್ಯಂತ ದಾರಿದ್ರ್ಯದ ಸ್ಥಿತಿಯಲ್ಲಿ ಜೀವಿಸುತ್ತಿರುವ ಚಪ್ಪರ್ ಬಂದ್ ಸಮುದಾಯದವರು ಇನ್ನೂ ಅಪರಾಧಿ ಬುಡಕಟ್ಟುಗಳ ಕಳಂಕವನ್ನು ತಲೆಯ ಮೇಲೆ ಹೊತ್ತೇ ಬದುಕುತ್ತಿದ್ದಾರೆ.

ಮೂಲತಃ ಮೊಗಲರ ಆಳ್ವಿಕೆಯಲ್ಲಿ ಸೈನಿಕರಿಗೆ ಯುದ್ಧ ಭೂಮಿ ಸಮೀಪ ಚಪ್ಪರ ಅಥವಾ ಟೆಂಟ್ ಕಟ್ಟಿಕೊಡುತ್ತಿದ್ದ ಕಸುಬನ್ನೇ ಮಾಡುತ್ತಾ ಹೊರಟ ಬಹುತೇಕ ಮುಸ್ಲಿಮ್ ಅಲೆಮಾರಿಗಳಿವರು. ಬಿಹಾರದಿಂದ ಕರ್ನಾಟಕದ ಬಿಜಾಪುರಕ್ಕೆ ಆದಿಲ್‌ಶಾಹಿ ರಾಜರೊಡನೆ ಡೇರೆ ಹಾಕುತ್ತಾ ಬಂದು ನೆಲೆಸಿದವರು ಎಂದು ಇವರ ಇತಿಹಾಸ ಹೇಳುತ್ತದೆ.

ಮುಖ್ಯವಾಗಿ ಬಿಜಾಪುರ, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ಗದಗ, ದಾಂಡೇಲಿ ಕಡೆ ವಾಸಿಸುತ್ತಾರೆ. ಚಪ್ಪರಬಂದ್ ಸಮುದಾಯ ಬಹುತೇಕ ರೈಲ್ವೆ ಹಳಿಗಳ ಅಕ್ಕಪಕ್ಕ ಮತ್ತು ಕೊಳಚೆ ಪ್ರದೇಶದಲ್ಲಿ ಟೆಂಟ್ ಗುಡಾರಗಳನ್ನು ಹಾಕಿಕೊಂಡು ಬದುಕು ಕಟ್ಟಿಕೊಳ್ಳುತ್ತಾರೆ. ಮೊಗಲರ ಆಳ್ವಿಕೆಯ ನಂತರ ಬ್ರಿಟಿಷರ ಕಾಲದಲ್ಲಿ ತಮ್ಮ ಕುಲವೃತ್ತಿಯಿಂದ ವಂಚಿತರಾಗಿ ಕ್ರಮೇಣ ಚರ್ಮದ ನಾಣ್ಯಗಳ ಚಲಾವಣೆಯ ಸಂದರ್ಭದಲ್ಲಿ ‘ಖೋಟಾ ನಾಣ್ಯ’ಗಳನ್ನು ಮುದ್ರಿಸಲು ಆರಂಭಿಸುತ್ತಾರೆ! ಈ ವಿಷಯವನ್ನು ಮಾನವಶಾಸ್ತ್ರಜ್ಜ ಎಡ್ಗರ್ ಥರ್ಸ್ಟನ್ ದಾಖಲಿಸಿದ್ದಾರೆ. ಚಪ್ಪರ್‌ಬಂದ್ ಬ್ರಿಟಿಷ್ ಸರಕಾರದ ವಿರುದ್ಧ ಖೋಟಾ ನಾಣ್ಯ ಮುದ್ರಿಸುವುದನ್ನು ಬೇರೆ ಯಾರಿಗೂ ತಿಳಿಯಬಾರದೆಂದು ಮರಗು ಭಾಷೆಯನ್ನು ಮಾತಾಡತೊಡಗಿದರು. ಇದನ್ನು ಚಪ್ಪರ್ ಭಾಷೆ ಎಂತಲೇ ಕರೆಯುತ್ತಾರೆ. ಖೋಟಾ ನಾಣ್ಯದ ಮುದ್ರಣದಂತಹ ಕಾನೂನು ಬಾಹಿರ ಚಟುವಟಿಕೆ ಮಾಡುತ್ತಿದ್ದರಿಂದ ಬ್ರಿಟಿಷರು ಚಪ್ಪರ್‌ಬಂದ್ ಸಮುದಾಯವನ್ನು ‘ಅಪರಾಧಿ ಬುಡಕಟ್ಟು’(criminal tribes)ಗಳ ಪಟ್ಟಿಗೆ ಸೇರಿಸಿಬಿಟ್ಟರು. ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರ ಜವಾಹರಲಾಲ್ ನೆಹರೂ ಅವರು ಈ ಅಪರಾಧಿ ಬುಡಕಟ್ಟುಗಳನ್ನು ಸೆಟಲ್ಮೆಂಟ್‌ಗಳಿಂದ ಹೊರತಂದು ‘ವಿಮುಕ್ತ ಅಪರಾಧಿ ಬುಡಕಟ್ಟುಗಳು’ (denotified criminal tribes) ಎಂದು ವಿಮುಕ್ತಗೊಳಿಸಿದರೂ ಇವರ ಮೇಲಿನ ಅಪರಾಧಿ ಎಂಬ ಕಳಂಕ ಮುಂದುವರಿಯುತ್ತಲೇ ಹೋಯಿತು. ಇದರ ಪರಿಣಾಮ ಇಂದಿಗೂ ಎಲ್ಲೇ ಅಪರಾಧ ನಡೆದರೂ ಪೊಲೀಸರು ಚಪ್ಪರ್‌ಬಂದ್‌ಗಳ ಸೆಟಲ್ಮೆಂಟ್‌ಗಳಿಗೆ ಬಂದು ಈ ಮುಗ್ಧರನ್ನು ಕರೆದೊಯ್ದು ಚಚ್ಚುತ್ತಾರೆ! ಮತ್ತು ನಿಜವಾದ ಅಪರಾಧಿ ಸಿಕ್ಕದಿದ್ದಲ್ಲಿ ಈ ಅಮಾಯಕರನ್ನೇ ಕರೆದೊಯ್ದು ಸುಳ್ಳು ಕೇಸುಗಳನ್ನು ಹಾಕಿ ‘‘ಅಪರಾಧಿಯನ್ನು ಬಂಧಿಸಿದ್ದೇವೆ ಸರ್’’ ಎಂದು ಹಿರಿಯ ಅಧಿಕಾರಿಗಳಿಗೆ ವರದಿ ನೀಡಿ ನಿರಾಳರಾಗುತ್ತಾರೆ!

ಬಿಜಾಪುರದಲ್ಲಿ ಚಪ್ಪರ್‌ಬಂದ್ ಸಮುದಾಯ ನೆಲೆಸಲು ಅಂದು ಬ್ರಿಟಿಷರೇ ಖಾಯಂ ವಾಸಸ್ಥಾನ ಮಾಡಿಕೊಟ್ಟಿದ್ದಾರೆ. ಆದ್ದರಿಂದ ಇವರು ಕಾಲಾಂತರದಿಂದಲೂ ಅಲ್ಲೇ ನೆಲೆಸಿದ್ದಾರೆ. ಇವರು ಮಾತನಾಡುವ ಭಾಷೆ 16 ಬಾಷೆಗಳ ಸಮ್ಮಿಶ್ರಣವಾಗಿ ಐಚ್ಛಿಕ ಭಾಷೆಯಾಗಿದೆ ಎಂದು ಈ ಸಮುದಾಯದ ಮುಖಂಡರು ಹೇಳುತ್ತಾರೆ. ಪ್ರಮುಖವಾಗಿ ಇವರ ಭಾಷೆ ಉರ್ದು, ಕನ್ನಡ, ಮರಾಠಿ, ಅರೇಬಿಕ್, ಹಿಂದಿ, ಭೋಜಪುರಿಗಳ ಮಿಶ್ರಣದಂತೆ ಮೇಲ್ನೋಟಕ್ಕೆ ಕಾಣುತ್ತದೆ. ಈ ಸಮುದಾಯದಲ್ಲಿ ಮುಖ್ಯವಾಗಿ ಎರಡು ವರ್ಗಗಳು ವಿಂಗಡನೆಯಾಗಿವೆ. ಇವರನ್ನು ‘ಬಡೇಭಾಯ್’ ಮತ್ತು ‘ಚೋಟೆಭಾಯ್’ ಎಂದು ಕರೆದುಕೊಳ್ಳುತ್ತಾರೆ. ಬಿಜಾಪುರದಲ್ಲಿ ಸೈಕಲ್ ರಿಕ್ಷಾ ತುಳಿಯುತ್ತಿದ್ದವರು, ಸೈಕಲ್ ರಿಪೇರಿ ಮಾಡುವವರು ಬಹುತೇಕ ಚಪ್ಪರಬಂದ್ ಸಮುದಾಯದವರೇ.

ಮಹಾರಾಷ್ಟ್ರದಲ್ಲಿ ಇವರನ್ನು ‘ಚಪ್ರಿ’ ಎಂತಲೂ ಕರೆಯುತ್ತಾರೆ. ಜಖಂಗೊಂಡ ಮತ್ತು ಸೋರುವ ತಾರಸಿಗಳನ್ನು ಈಚೆಗೆ ರಿಪೇರಿ ಮಾಡುವ ಚಪ್ಪರಬಂದ್ ಸಮುದಾಯದವರು ಮಿಕ್ಕ ಸಂದರ್ಭದಲ್ಲಿ ಕೃಷಿ ಕೂಲಿಕಾರರಾಗಿ, ಕಟ್ಟಡ ಕಾರ್ಮಿಕರಾಗಿ ಕೆಲಸ ಮಾಡುತ್ತಾರೆ. ಹೆಣ್ಣು ಮಕ್ಕಳು ಚಿಂದಿ ಆಯುತ್ತಾರೆ. ಶೈಕ್ಷಣಿಕವಾಗಿ ಅತ್ಯಂತ ಹಿಂದುಳಿದವರು ಚಪ್ಪರಬಂದ್‌ಗಳು. ಶಿಕ್ಷಣವನ್ನು ಬಹುತೇಕ ಪ್ರಾಥಮಿಕ ಶಾಲೆಗೇ ಮುಕ್ತಾಯ ಮಾಡಿ ತಂದೆತಾಯಿ ಮಾಡುವ ಕೂಲಿನಾಲಿ ಕೆಲಸಗಳಲ್ಲಿ ತೊಡಗಿಸಿಕೊಂಡುಬಿಡುತ್ತಾರೆ. ಇವರು ಅತಿಹಿಂದುಳಿದ(most backward) ಸಮುದಾಯವಾದ್ದರಿಂದ ಇವರನ್ನು ಹಿಂದುಳಿದ ವರ್ಗಗಳ ಪಟ್ಟಿಯ ಪ್ರವರ್ಗ ಒಂದರಲ್ಲಿ ಸೇರಿಸಲಾಗಿದೆ. ಇವರ ಜೀವನಮಟ್ಟ ಬಡತನದ ರೇಖೆಗಿಂತ ಕೆಳಗಿದೆ.

ನಾನು ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷನಾಗಿದ್ದ ಸಂದರ್ಭದಲ್ಲಿ ಕರ್ನಾಟಕದಲ್ಲಿ ಚಪ್ಪರಬಂದ್ ಸಮುದಾಯ ವಾಸಿಸುವ ಸ್ಥಳಗಳಿಗೆಲ್ಲ ಭೇಟಿ ನೀಡಿ, ಚಪ್ಪರಬಂದ್ ಸಮುದಾಯದ ಕುರಿತು ನಮ್ಮ ಆಯೋಗ ಅಧ್ಯಯನ ಮಾಡಿ ಈ ಸಮುದಾಯಕ್ಕೆ ವಿಶೇಷ ಪ್ಯಾಕೇಜ್ ನೀಡಬಹುದೆಂದು ಶಿಫಾರಸು ಮಾಡಿ ಈಗಾಗಲೇ 16 ವರ್ಷ ಆಯಿತು, ದುರಂತವೆಂದರೆ ನಮ್ಮ ಯಾವುದೇ ಸರಕಾರಗಳು ಇದನ್ನು ತೆರೆದು ಕೂಡ ನೋಡಲಿಲ್ಲ! ಚಪ್ಪರಬಂದ್ ಸಮುದಾಯದ ಪ್ರಗತಿಗಾಗಿ ಶಿಕ್ಷಣ, ಆರೋಗ್ಯ, ಉದ್ಯೋಗಕ್ಕಾಗಿ ಸರಕಾರದ ನೆರವು, ಅನುದಾನ, ಸಾಲ, ಸೋಲ, ಸಬ್ಸಿಡಿ ಮುಂತಾಗಿ ಸುಮಾರು 9 ಅಂಶಗಳುಳ್ಳ ವಿಶೇಷ ಪ್ಯಾಕೇಜ್ ನೀಡಿದ್ದೆವು. ಇವನ್ನು ನೋಡುವ ಕಣ್ಣು ಹೃದಯಗಳು ಸರಕಾರಕ್ಕೆ ಇಲ್ಲವಾಗಿದೆ. ಇವನ್ನೆಲ್ಲ ಕಣ್ಣಿಟ್ಟು ನೋಡಬೇಕಾದರೆ ಮತ್ತೊಬ್ಬ ದೇವರಾಜ ಅರಸು ಹುಟ್ಟಿಬರಬೇಕೇನೋ ಎನಿಸುತ್ತದೆ.

Tags

Chapparachappara bandh
share
ಸಿ.ಎಸ್. ದ್ವಾರಕಾನಾಥ್
ಸಿ.ಎಸ್. ದ್ವಾರಕಾನಾಥ್
Next Story
X