Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಬಿರು ಬಿಸಿಲಿಗೆ ಒಣಗುತ್ತಿದೆ ಚಾರ್ಮಾಡಿ...

ಬಿರು ಬಿಸಿಲಿಗೆ ಒಣಗುತ್ತಿದೆ ಚಾರ್ಮಾಡಿ ಅರಣ್ಯ

ತನು ಕೊಟ್ಟಿಗೆಹಾರತನು ಕೊಟ್ಟಿಗೆಹಾರ16 April 2024 10:25 AM IST
share
ಬಿರು ಬಿಸಿಲಿಗೆ ಒಣಗುತ್ತಿದೆ ಚಾರ್ಮಾಡಿ ಅರಣ್ಯ

ಬಣಕಲ್: ಬಿರು ಬಿಸಿಲ ಬೇಗೆ ದಿನದಿಂದ ದಿನಕ್ಕೆ ಅಧಿಕಗೊಳ್ಳುತ್ತಿದ್ದು ಚಾರ್ಮಾಡಿ ಅರಣ್ಯ ಪ್ರದೇಶದ ಗಿಡ ಮರ ಹಾಗೂ ಪರಿಸರ ಒಣಗಿದ ಸ್ಥಿತಿಯನ್ನು ತಲುಪುತ್ತಿದೆ.

ಪ್ರಸಕ್ತ ಚಾರ್ಮಾಡಿ ಘಾಟಿ ಪರಿಸರದ ಅರಣ್ಯ ಸಂಪೂರ್ಣ ತನ್ನ ಸ್ವರೂಪ ಬದಲಾಯಿಸಿಕೊಂಡಿದೆ. ಇಲ್ಲಿನ ಬಂಡೆಗಳಲ್ಲಿ ಜನವರಿ ತನಕವೂ ಬೀಳುವ ನೀರಿನ ಜರಿಗಳು ತಮ್ಮ ಇರುವಿಕೆಯನ್ನು ಕಳೆದುಕೊಂಡಿವೆ. ಕಲ್ಲು, ಬಂಡೆ ಹಾಗೂ ಅವುಗಳ ಸುತ್ತಮುತ್ತ ಆಳೆತ್ತರದ ಒಣ ಹುಲ್ಲು ಬೆಳೆದಿದೆ. ಘಾಟಿಯ ಕಂದಕ ಭಾಗಗಳಲ್ಲೂ ಒಣ ಹುಲ್ಲು, ಒಣಗಿದ ಗಿಡಗಂಟಿಗಳು ಎಲ್ಲೆಲ್ಲೂ ಕಂಡು ಬರುತ್ತಿವೆ.

ಬಂಡೆಕಲ್ಲುಗಳಿಗೆ ಬೀಳುವ ಬಿಸಿಲು ಮತ್ತಷ್ಟು ಪ್ರಖರತೆಯನ್ನು ಹೆಚ್ಚಿಸಿದೆ. ರಸ್ತೆಯು ಬಿಸಿಯಾಗುವುದರ ಜತೆ ವಾಹನ ಸಂಚಾರ ಸಮಯ ವಾಹನಗಳು ಉಗುಳುವ ಹೊಗೆ ಬಿಸಿಯನ್ನು ಇನ್ನಷ್ಟು ಹೆಚ್ಚಿಸುತ್ತಿದೆ.

ಇಷ್ಟಿದ್ದರೂ ಇಲ್ಲಿನ ವ್ಯೆ ಪಾಯಿಂಟ್‌ಗಳಲ್ಲಿ ಈಗಲೂ ಪ್ರವಾಸಿಗರು ವಾಹನಗಳನ್ನು ನಿಲ್ಲಿಸಿ ಫೋಟೋ ಕ್ಲಿಕ್ಕಿಸುವುದು, ಧೂಮಪಾನ, ಮದ್ಯಪಾನ ಮೊದಲಾದ ಚಟುವಟಿಕೆಗಳನ್ನು ನಡೆಸುವುದು ಕಂಡುಬರುತ್ತಿದೆ. ಚಾರ್ಮಾಡಿ ಘಾಟಿಯ ಸುತ್ತಲ ಅರಣ್ಯ ಒಣಗಿದ ಸ್ಥಿತಿಯಲ್ಲಿರುವ ಕಾರಣ ಇಲ್ಲಿ ಒಂದು ಕಿಡಿ ಬೆಂಕಿ ಬಿದ್ದರೂ ಅದು ಕಾಡ್ಗಿಚ್ಚಾಗಿ ಮಾರ್ಪಡುವ ಸಾಧ್ಯತೆ ಇದೆ. ಇಲ್ಲಿನ ಪರಿಸರದಲ್ಲಿ ಪ್ರವಾಸಿಗರು ಧೂಮಪಾನ ಮಾಡುವುದು ಮತ್ತಷ್ಟು ಅಪಾಯಕಾರಿ. ಒಣಗಿರುವ ಹುಲ್ಲಿಗೆ ಬೆಂಕಿ ತಗಲಿದರೆ ಅದು ಕಾಡನ್ನು ಆವರಿಸುವ ಸಾಧ್ಯತೆ ಇದೆ. ಕಳೆದ ವರ್ಷ ಚಾರ್ಮಾಡಿ ಘಾಟಿ ಪರಿಸರದಲ್ಲಿ ಅನೇಕ ಬಾರಿ ಬೆಂಕಿ ಕಂಡುಬಂದಿತ್ತು ಹಾಗೂ ಇಲಾಖೆ ಅದನ್ನು ಹತೋಟಿಗೆ ತರಲು ಹರಸಾಹಸ ನಡೆಸಿತ್ತು.

ಈ ಬಾರಿಯೂ ಬೆಂಕಿ ರೇಖೆಯನ್ನು ಇಲಾಖೆ ವತಿಯಿಂದ ರಚಿಸಲಾಗಿದೆ ಆದರೆ ಪ್ರಸಕ್ತ ಬೆಂಕಿ ರೇಖೆ ರಚಿಸಿದ ಭಾಗಗಳಲ್ಲಿ ಸಾಕಷ್ಟು ಒಣಹುಲ್ಲು ತರಗೆಲೆಗಳು ಕಂಡು ಬರುತ್ತಿವೆ. ಘಾಟಿ ಮೂಲಕ ಪ್ರಯಾಣಿಸುವ ಪ್ರವಾಸಿಗರು ಬೆಂಕಿಯ ಉಪಯೋಗ ಮಾಡದಂತೆ ಅಲ್ಲಲ್ಲಿ ಎಚ್ಚರಿಕೆ ಫಲಕಗಳನ್ನು ಅಳವಡಿಸಿ ಜಾಗೃತಿ ಮೂಡಿಸುವುದು ಅಗತ್ಯವಾಗಿದೆ.

ವನ್ಯಜೀವಿಗಳ ತಾಣ:ಚಾರ್ಮಾಡಿ ಅರಣ್ಯ ಸೇರಿದಂತೆ ಘಾಟಿ ರಸ್ತೆಯ ಇಕ್ಕೆಲಗಳಲ್ಲಿರುವ ಅರಣ್ಯ ವನ್ಯಜೀವಿಗಳ ತಾಣವಾಗಿದೆ. ನೀರು ಹಾಗೂ ತಂಪು ಪ್ರದೇಶವನ್ನು ಅರಸುತ್ತಾ ತಿರುಗಾಟ ನಡೆಸುವ ಇವು ಕೆಲವೊಮ್ಮೆ ರಸ್ತೆಯನ್ನು ದಾಟುತ್ತವೆ. ಈ ಕಾರಣದಿಂದ ಘಾಟಿ ಪ್ರದೇಶದ ಪ್ರಯಾಣ ಸಂದರ್ಭ ಹೆಚ್ಚಿನ ಎಚ್ಚರಿಕೆ ಮತ್ತು ವನ್ಯಜೀವಿಗಳಿಗೆ, ಪರಿಸರಕ್ಕೆ ತೊಂದರೆಯಾಗದಂತೆ ಸಾಗುವುದು ಅಗತ್ಯವಾಗಿದೆ.

ಘಾಟಿ ಪ್ರದೇಶದಲ್ಲಿ ಕೆಲ ಕಿಡಿಗೇಡಿಗಳು ಬೀಡಿ, ಸಿಗರೇಟು ಸೇದಿ ಎಸೆಯುವುದರಿಂದ ಅದರ ಕಿಡಿ ಹಾರಿ ಹುಲ್ಲು, ಒಣಗಿದ ತ್ಯಾಜ್ಯ ವಸ್ತುಗಳಿಗೆ ತಗಲಿದಾಗ ಬೆಂಕಿ ಹರಡುವ ಸಾಧ್ಯತೆ ಹೆಚ್ಚು. ಸಂಬಂಧ ಪಟ್ಟ ಅರಣ್ಯ ಅಧಿಕಾರಿಗಳು ಗಸ್ತು ತಿರುಗಬೇಕು.

-ಲೋಹಿತ್ ಬಿದ್ರಹಳ್ಳಿ, ಪರಿಸರವಾದಿ

share
ತನು ಕೊಟ್ಟಿಗೆಹಾರ
ತನು ಕೊಟ್ಟಿಗೆಹಾರ
Next Story
X