Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಮಕ್ಕಳ ಸಂರಕ್ಷಣೆ: ಪ್ರಜ್ಞಾವಂತ ನಾಗರಿಕರ...

ಮಕ್ಕಳ ಸಂರಕ್ಷಣೆ: ಪ್ರಜ್ಞಾವಂತ ನಾಗರಿಕರ ಜವಾಬ್ದಾರಿಗಳು

ಬಿ.ಜಿ. ಪೂರ್ಣಿಮಬಿ.ಜಿ. ಪೂರ್ಣಿಮ30 July 2026 3:09 PM IST
share
ಮಕ್ಕಳ ಸಂರಕ್ಷಣೆ: ಪ್ರಜ್ಞಾವಂತ ನಾಗರಿಕರ ಜವಾಬ್ದಾರಿಗಳು

ಸಮೀಕ್ಷೆಯೊಂದರ ಪ್ರಕಾರ ವಿಶ್ವದಲ್ಲಿ ಹುಟ್ಟುವ ಐದು ಮಕ್ಕಳಲ್ಲಿ ಒಂದು ಮಗು ನಮ್ಮ ಭಾರತ ದೇಶದಲ್ಲಿ ಜನಿಸುತ್ತದೆ. ತಾಯಿ ಗರ್ಭದಲ್ಲಿ ಮಗು ಬೆಳೆಯಲಾರಂಭಿಸಿದಂದಿನಿಂದಲೇ ಮಗುವಿಗೆ ದೇಶದ ಪೌರತ್ವ ಬರುತ್ತದೆ. ಹಾಗಾಗಿ ಮಗು ತಾಯಿ ಗರ್ಭದಲ್ಲಿ ಇರುವಾಗಲೇ ಸರಕಾರ ತನ್ನ ಮುಂದಿನ ನಾಗರಿಕನ ರಕ್ಷಣೆಗೆ ಮುಂದಾಗುತ್ತದೆ. ಹಾಗಾಗಿ ತಾಯಿ ಮತ್ತು ಮಗುವಿನ ಆರೈಕೆಯ ಮೇಲೆ ನಿಗಾ ವಹಿಸಲು ಗರ್ಭಿಣಿಯರಿಗೆ ತಾಯಿ ಕಾರ್ಡ್ ಅನ್ನು ನೀಡಲಾಗುತ್ತದೆ. ನಮ್ಮ ಭಾರತ ದೇಶವು ಇಂತಹ ವ್ಯವಸ್ಥೆ ನೀಡಿರುವ ಪ್ರಪ್ರಥಮ ದೇಶವಾಗಿದೆ.

ಈ ತಾಯಿ ಕಾರ್ಡ್ ಮೂಲಕ ಗರ್ಭಾವಸ್ಥೆಯಲ್ಲಿ ತಾಯಿ ಮಾಡಿಸಿಕೊಳ್ಳ ಬೇಕಾದ ತಪಾಸಣೆಗಳು ಮತ್ತು ಮಗುವಿಗೆ ಕಾಲಕಾಲಕ್ಕೆ ಹಾಕಿಸಬೇಕಾದ ಲಸಿಕೆಗಳ ಮಾಹಿತಿಯನ್ನು ನೀಡುವ ಜೊತೆಗೆ, ಈ ಸಮಯಲ್ಲಿ ಮಗುವಿನ ಆರೋಗ್ಯವಂತ ಬೆಳವಣಿಗೆಗಾಗಿ ಗರ್ಭಿಣಿ ಸೇವಿಸಬೇಕಾದ ಆಹಾರ ಕ್ರಮಗಳ ಬಗ್ಗೆ ಮಾರ್ಗದರ್ಶನವನ್ನು ನೀಡಲಾಗುತ್ತದೆ. ಆದ್ದರಿಂದ ಈ ಕಾರ್ಡ್ ಒಂದು ರೀತಿಯಲ್ಲಿ ಗರ್ಭಿಣಿಯರು ಮತ್ತು 5 ವರ್ಷದೊಳಗಿನ ಮಕ್ಕಳ ಆರೋಗ್ಯ ರಕ್ಷಣೆಯ ಕುರಿತ ಪ್ರಮುಖ ದಾಖಲೆಯಾಗಿರುತ್ತದೆ.

ಈ ಕಾರ್ಡ್‌ನಿಂದ ಗರ್ಭಿಣಿಯರಿಗೆ ಆರ್ಥಿಕ ಸಹಾಯದ ಜೊತೆಗೆ ಸರಕಾರಿ ಆಸ್ಪತ್ರೆಗಳಲ್ಲಿ ಉಚಿತ ಹೆರಿಗೆ ಮಾಡಿಸಿಕೊಡಲಾಗುತ್ತದೆ. ಹಾಗೂ ನವಜಾತ ಶಿಶುವಿನ ಸುರಕ್ಷತೆಗಾಗಿ ಸೊಳ್ಳೆಪರದೆ ಜೊತೆಗೆ ಮಗುವಿನ ಆರೈಕೆಗೆ ಬೇಕಾಗುವಂತಹ ಉಪಯುಕ್ತ ವಸ್ತುಗಳನ್ನೊಳಗೊಂಡಂತಹ ಆರೋಗ್ಯ ಕಿಟ್ ಅನ್ನು ನೀಡಲಾಗುತ್ತದೆ.

ಗರ್ಭಿಣಿಯರು ಆಶಾ ಕಾರ್ಯಕರ್ತರನ್ನು ಸಂಪರ್ಕಿಸಿದರೆ ಸಾಕು, ಅವರು ಗರ್ಭಿಣಿಯರನ್ನು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗಿ ವೈದ್ಯರಿಂದ ತಪಾಸಣೆ ಮಾಡಿಸಿ ತಾಯಿ ಕಾರ್ಡ್ ಅನ್ನು ಮಾಡಿಸಿಕೊಡುತ್ತಾರೆ.

ಇದರಿಂದ ಮಕ್ಕಳು ಅಪೌಷ್ಟಿಕತೆಗೆ ಒಳಗಾಗದೆ, ಆರೋಗ್ಯವಂತವಾಗಿ ಬೆಳವಣಿಗೆ ಹೊಂದಲು ಸಾಧ್ಯವಾಗುತ್ತದೆ.

ಮೂರ್ನಾಲ್ಕು ವರ್ಷ ಕುಟುಂಬದವರ ಕಣ್ಗಾವಲಿನಲ್ಲಿ ಇದ್ದ ಮಕ್ಕಳು ಶಿಕ್ಷಣವನ್ನು ಪಡೆಯುವ ಸಲುವಾಗಿ ಮನೆಯಿಂದ ಹೊರಹೋಗಬೇಕಾಗುವ ಅನಿರ್ವಾಯತೆ ಬರುತ್ತದೆ. ಈ ಸಂದರ್ಭದಲ್ಲಿ ಶಾಲಾ ಆವರಣದಲ್ಲಿ ಮಕ್ಕಳ ಸುರಕ್ಷತೆಯನ್ನು ಕಾಪಾಡುವ ಜವಾಬ್ದಾರಿ ಶಾಲಾ ಶಿಕ್ಷಕರು ಮತ್ತು ಶಾಲಾ ಸಿಬ್ಬಂದಿಯದ್ದಾಗುತ್ತದೆ.

ನಮ್ಮ ಭಾರತೀಯ ಸಂವಿಧಾನವು ಆರು ವರ್ಷದಿಂದ ಹದಿನಾರು ವರ್ಷದ ಎಲ್ಲಾ ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣದ ಹಕ್ಕನ್ನು ನೀಡಿರುವುದರಿಂದ ಈ ವಯಸ್ಸಿನ ಮಕ್ಕಳನ್ನು ಯಾವುದೇ ಕಾರಣಕ್ಕೂ ಕೆಲಸಕ್ಕೆ ಸೇರಿಸಿಕೊಳ್ಳುವಂತಿಲ್ಲ. ಆದರೂ ಯಾರಾದರೂ ತಮ್ಮ ಮನೆಯಲ್ಲಿ, ಹೋಟೆಲ್, ಕಾರ್ಖಾನೆಗಳಲ್ಲಿ ಮಕ್ಕಳಿಂದ ದುಡಿಸಿಕೊಳ್ಳುತ್ತಿರುವುದು ಕಂಡುಬಂದರೆ ಕೂಡಲೇ ಆಯಾ ಹಂತಗಳಲ್ಲಿ ಸ್ಥಾಪಿಸಲಾಗಿರುವ ಕಾವಲು ಸಮಿತಿ ಅಥವಾ ರಕ್ಷಣಾ ಸಮಿತಿಗೆ ದೂರು ನೀಡಬೇಕು.

ಬಹುತೇಕ ಮಕ್ಕಳ ಮೇಲಿನ ದೌರ್ಜನ್ಯಗಳು ಅವರು ಶಾಲೆಯಿಂದ ಮನೆಗೆ ಬುರುವ ದಾರಿಯಲ್ಲಿ ನಡೆಯುತ್ತದೆ. ಹಾಗಾಗಿ ಮಕ್ಕಳ ಚಲನವನದ ಮೇಲೆ ಪೋಷಕರು ಮತ್ತು ಶಿಕ್ಷಕರು ನಿಗಾವಹಿಸಬೇಕು.

ಪರಿಚಯಿಸ್ಥರಿಂದಲೂ ಮಕ್ಕಳ ಮೇಲೆ ದೌರ್ಜನ್ಯಗಳು ನಡೆಯುವುದರಿಂದ ತಮಗೆ ತಿಳಿಸದೆ ಯಾರೊಂದಿಗೂ ಹೋಗಬಾರದೆಂದು ಅವರಿಗೆ ತಿಳಿವಳಿಕೆ ನೀಡಬೇಕು. ಅವರಿಗೆ ಅಸುರಕ್ಷಿತ ಭಾವನೆ ಕಂಡು ಬಂದರೆ ಯಾರಿಂದಲಾದರೂ ಸಹಾಯ ಪಡೆದು, 1096 ಸಹಾಯವಾಣಿಗೆ ಕರೆ ಮಾಡಿ ದೂರು ಸಲ್ಲಿಸುವಂತೆ ಅವರಿಗೆ ಅರಿವು ಮೂಡಿಸಬೇಕು.

ಬಾಲ ಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆ ಪ್ರಕಾರ 14 ವರ್ಷದೊಳಗಿನ ಮಕ್ಕಳಿಂದ ದುಡಿಸಿಕೊಳ್ಳುವಂತಿಲ್ಲ. ಆದರೆ 14ರಿಂದ 18 ವರ್ಷದೊಳಗಿನ ಮಕ್ಕಳನ್ನು ಕೆಲಸಕ್ಕೆ ನೇಮಿಸಿಕೊಂಡಲ್ಲಿ, ಅವರಿಂದ ಯಾವುದೇ ಅಪಾಯಕಾರಿ ಕಾನೂನುಬಾಹಿರ ಕೆಲಸಗಳನ್ನು ಮಾಡಿಸುವಂತಿಲ್ಲ. ಅವರಿಗೆ ಆರು ತಾಸು ಕೆಲಸದ ಜೊತೆಗೆ ಒಂದು ತಾಸು ವಿರಾಮವನ್ನು ನೀಡಬೇಕು. ಆದರೂ ಕಾನೂನು ಕಾಯ್ದೆಗಳ ವಿರುದ್ಧವಾಗಿ ಮಕ್ಕಳನ್ನು ಅಕ್ರಮವಾಗಿ ಕೆಲಸಕ್ಕೆ ನೇಮಿಸಿಕೊಂಡಲ್ಲಿ, ಅಂತಹ ಮಾಲಕರ ಮೇಲೆ ಕಾನೂನು ಕ್ರಮವನ್ನು ತೆಗೆದುಕೊಂಡು 2 ವರ್ಷಗಳ ವರೆಗೆ ಜೈಲು ಶಿಕ್ಷೆ ಹಾಗೂ 20 ಸಾವಿರದಿಂದ 50 ಸಾವಿರ ರೂ.ಗಳವರೆಗೆ ದಂಡವನ್ನು ವಿಧಿಸಲಾಗುತ್ತದೆ.

ಹಾಗೆಯೇ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಹೆಣ್ಣು ಮಕ್ಕಳಿಗೆ ಮತ್ತು 21 ವರ್ಷಕ್ಕಿಂತ ಕಡಿಮೆ ವಯಸ್ಸಿನ ಗಂಡು ಮಕ್ಕಳಿಗೆ ಮದುವೆ ಮಾಡಿಸಿದ್ದಲ್ಲಿ ಅದು ಬಾಲ್ಯ ವಿವಾಹವಾಗುತ್ತದೆ. ಆದ್ದರಿಂದ ಬಾಲ್ಯ ವಿವಾಹ ಮಾಡಿಸಿದವರು ಅಥವಾ ಪ್ರೋತ್ಸಾಹಿಸಿದವರ ಮೇಲೆ ಕೂಡ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ.

ಇನ್ನು ಮಕ್ಕಳನ್ನು ಪ್ರಮುಖವಾಗಿ ಜೀತದಾಳಿನಂತೆ ಇಟ್ಟುಕೊಳ್ಳಲು, ಭಿಕ್ಷಾಟನೆ ಮಾಡಿಸಿ ಹಣ ಸಂಪಾದಿಸಲು, ಅಂಗಾಂಗಗಳನ್ನು ತೆಗೆದುಕೊಳ್ಳಲು, ಮಕ್ಕಳಿಲ್ಲದವರಿಗೆ ಮಾರಾಟ ಮಾಡಿ ಹಣ ಸಂಪಾದಿಸುವ ಸಲುವಾಗಿ ಕಳ್ಳಸಾಗಣೆ ಮಾಡಲಾಗುತ್ತದೆ.

ಮಕ್ಕಳ ಕೈಯಲ್ಲಿ ಭಿಕ್ಷಾಟನೆ ಮಾಡಿಸುವ ವರಿಗೆ 5 ವರ್ಷ ಕಾರಾಗೃಹ ವಾಸ ಮತ್ತು 1 ಲಕ್ಷ ರೂ. ತನಕ ದಂಡವನ್ನು ವಿಧಿಸಲಾಗುತ್ತದೆ. ಕೆಲವೊಂದು ಸಂದರ್ಭಗಳಲ್ಲಿ ಭಿಕ್ಷೆಯ ಉದ್ದೇಶಕ್ಕೆ ಮಗುವಿನ ಅಂಗವನ್ನು ಊನ ಗೊಳಿಸಿದ ಪ್ರಕರಣಗಳು ನಮ್ಮ ದೇಶದಲ್ಲಿ ಕಂಡುಬಂದಿವೆ. ಇಂತಹ ಪ್ರಕರಣದಲ್ಲಿ ಅಪರಾಧಿಗೆ ಗರಿಷ್ಠ 10 ವರ್ಷಗಳ ಕಾರಾಗೃಹ ಶಿಕ್ಷೆ ಮತ್ತು 5 ಲಕ್ಷ ರೂ. ದಂಡವನ್ನು ವಿಧಿಸಲಾಗುತ್ತದೆ.

ಒಟ್ಟಿನಲ್ಲಿ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಕುಟುಂಬ ಅಥವಾ ಸ್ನೇಹ ಬಾಂಧವ್ಯ ಇಲ್ಲದ ಕುಟುಂಬದಲ್ಲಿ ಮಾನಸಿಕವಾಗಿ ನೊಂದಿರುವ ಬಹುಪಾಲು ಮಕ್ಕಳು ಇಂತಹ ಜಾಲಕ್ಕೆ ಸಿಲುಕುತ್ತಾರೆ.

ಮುಗ್ಧ ಮಕ್ಕಳು ಯಾವುದೋ ಆಮಿಷಕ್ಕೆ ಒಳಗಾಗಿ ಪೋಷಕರಿಂದ ದೂರವಾಗಿ ಕೆಲವೊಂದು ಸಂಕಷ್ಟಗಳಿಗೆ ಸಿಲುಕಿಕೊಳ್ಳುತ್ತಾರೆ. ದುಷ್ಟರ ನಿಗಾದಲ್ಲೇ ಇರುವ ಕಾರಣ ಅವರು ತಮಗಾಗಿರುವ ಸಮಸ್ಯೆಯನ್ನು ಯಾರೊಂದಿಗೂ ಹಂಚಿಕೊಳ್ಳಲು ಹೆದರುತ್ತಾರೆ. ಆದರೆ ಅಂತಹ ಮಕ್ಕಳ ಮುಖದಲ್ಲಿ ಅಸುರಕ್ಷಿತ ಭಾವ ಎದ್ದು ಕಾಣುತ್ತಿರುತ್ತದೆ. ನಮ್ಮ ಸುತ್ತಮುತ್ತಲು ನಡೆಯುತ್ತಿರುವ ಚಲನವಲನವನ್ನು ಗಮನಿಸುತ್ತಿರುವ ಪ್ರಜ್ಞಾವಂತ ಜನರಿಗೆ ಖಂಡಿತಾ ಇಂತಹ ಮಕ್ಕಳನ್ನು ಗುರುತಿಸಲು ಸಾಧ್ಯವಾಗುತ್ತದೆ. ದುಷ್ಟರ ಹಿಡಿತದಿಂದ ಮಕ್ಕಳನ್ನು ಬಿಡಿಸಲು ತಮ್ಮಿಂದ ಸಾಧ್ಯವಾಗದಿದ್ದರೆ, ಸಹಾಯವಾಣಿ ಸಂಖ್ಯೆ 1096ಕ್ಕೆ ಕರೆ ಮಾಡಿ ದೂರನ್ನಾದರೂ ನೀಡುವ ಮೂಲಕ ಮಕ್ಕಳನ್ನು ಇಂತಹ ಕೂಪದಿಂದ ಹೊರ ತರಬಹುದು. ನಿಮ್ಮ ಸಮಯ ಪ್ರಜ್ಞೆಯು ಒಂದು ಮಗುವಿನ ಬದುಕನ್ನು ಬದಲಿಸುತ್ತದೆ.

Tags

Child ProtectionResponsibilitiesconsciouscitizens
share
ಬಿ.ಜಿ. ಪೂರ್ಣಿಮ
ಬಿ.ಜಿ. ಪೂರ್ಣಿಮ

ಸಹಾಯಕ ನಿರ್ದೇಶಕರು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ

Next Story
X