Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. 296.8 ಕೋಟಿ ರೂ. ವೆಚ್ಚದಲ್ಲಿ ‘ಸ್ವಚ್ಛ...

296.8 ಕೋಟಿ ರೂ. ವೆಚ್ಚದಲ್ಲಿ ‘ಸ್ವಚ್ಛ -ಶಾಶ್ವತ ಕಲಬುರಗಿ’

ದಸ್ತಗೀರ ನದಾಫ್ ಯಳಸಂಗಿದಸ್ತಗೀರ ನದಾಫ್ ಯಳಸಂಗಿ27 Jan 2026 12:56 PM IST
share
296.8 ಕೋಟಿ ರೂ. ವೆಚ್ಚದಲ್ಲಿ ‘ಸ್ವಚ್ಛ -ಶಾಶ್ವತ ಕಲಬುರಗಿ’
ಪಂಚ ವಲಯಗಳಲ್ಲಿ ಸಮಗ್ರ ಅಭಿವೃದ್ಧಿಗೆ ಸಜ್ಜು

ಕಲಬುರಗಿ: ನಗರದಲ್ಲಿ ನಿತ್ಯವೂ ಸಂಚರಿಸುವ ವಾಹನ ಚಾಲಕರು, ಸ್ಥಳೀಯರು, ಪಾದಚಾರಿಗಳು ದಿನಾಲೂ ಒಂದಿಲ್ಲೊಂದು ಅಡಚಣೆ ಉಂಟಾಗಿ ಬೇಸತ್ತು ಹೋಗುತ್ತಿದ್ದರು. ರಸ್ತೆ, ಧೂಳು, ಟ್ರಾಫಿಕ್, ಘನ ತ್ಯಾಜ್ಯ ವಿಲೇವಾರಿ ಸೇರಿ ಅನೇಕ ಸಮಸ್ಯೆ ಗಳಿಗೆ ಮುಕ್ತಿ ಕಾಣಿಸಲು ಹಾಗೂ ಕಲಬುರಗಿ ನಗರವನ್ನು ಸ್ವಚ್ಛ, ಶಾಶ್ವತ ಕಲಬುರಗಿಯನ್ನಾಗಿ ರೂಪಿಸಲು ಜಿಲ್ಲಾಡಳಿತ, ಮಹಾನಗರ ಪಾಲಿಕೆ ಹಾಗೂ ಕಲಬುರಗಿ ನಗರ ಅಭಿವೃದ್ಧಿ ಪ್ರಾಧಿಕಾರ(ಕುಡಾ) ಮುಂದಾಗಿವೆ.

ರಸ್ತೆ ನಿರ್ಮಾಣ, ಹಸಿರು ಉದ್ಯಾನವನ, ವೃತ್ತಗಳ ಸುಧಾರಣೆ, ಘನ ತ್ಯಾಜ್ಯ ನಿರ್ವಹಣೆ ಹಾಗೂ ನೀರು ಮತ್ತು ಕೆರೆಯ ಅಭಿವೃದ್ಧಿ ಮಾಡುವುದಕ್ಕಾಗಿ 296.8ಕೋಟಿ ರೂ.ಮೀಸಲಿಡಲಾಗಿದೆ. ಈ ಮೂಲಕ ಪಂಚ ವಲಯಗಳನ್ನು ಅಭಿವೃದ್ಧಿಪಡಿಸಿ, ನವ ಕಲಬುರಗಿ ನಿರ್ಮಾಣಕ್ಕೆ ಬಹುದೊಡ್ಡ ಯೋಜನೆ ರೂಪಿಸಲಾಗಿದೆ.

33 ಹಸಿರು ಉದ್ಯಾನವನಗಳ ಅಭಿವೃದ್ಧಿ:

ಕಲಬುರಗಿ ಮಹಾನಗರ ಪಾಲಿಕೆ ಯಿಂದ 2024-25ನೇ ಸಾಲಿನ ಕೆಕೆಆರ್‌ಡಿಬಿ ಮ್ಯಾಕ್ರೋ ಯೋಜನೆಯಡಿ ಒಟ್ಟು 4 ನಾಲ್ಕು ಉದ್ಯಾನವನ 7.50 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದ್ದು, 3 ಕಾಮಗಾರಿಗಳು ಟೆಂಡರ್ ಪ್ರಕ್ರಿಯೆಯಲ್ಲಿವೆ. ಅಕ್ಕಮಹಾದೇವಿ ಕಾಲೋನಿ ಉದ್ಯಾನವನ ಅಭಿವೃದ್ಧಿ ಕಾಮಗಾರಿ ಪ್ರಗತಿಯಲ್ಲಿದೆ. ಅಮೃತ 2.0 ಯೋಜನೆಯಡಿ 4 ಕೋಟಿ ರೂ. ವೆಚ್ಚದಲ್ಲಿ 5 ಗಾರ್ಡನ್ ಅಭಿವೃದ್ಧಿಪಡಿಸಲಾಗುತ್ತಿದೆ. ಪಾಲಿಕೆಯಿಂದ ಗುಲ್ಶನ್ ಗಾರ್ಡನ್ 3 ಕೋಟಿ ರೂ., ಧರಿಯಾಪೂರ-ಕೊಟನೂರ ಜಿಡಿಎ ಲೇಔಟ್‌ನಲ್ಲಿರುವ ರಾಜೀವ ಗಾಂಧಿ ಥೀಮ್ ಪಾರ್ಕ್‌ನ್ನು 3 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಮಾಡಲಾಗುತ್ತಿದೆ. ಕೆಆರ್‌ಐಡಿಎಲ್ ಸಂಸ್ಥೆಯಿಂದ ವಿವಿಧ ವಾರ್ಡ್ ಗಳಲ್ಲಿ 2.10 ಕೋಟಿ ರೂ. ವೆಚ್ಚದಲ್ಲಿ 7 ಉದ್ಯಾನವನ ಅಭಿವೃದ್ಧಿಪಡಿಸಲಾಗುತ್ತಿದೆ. ಅದರಲ್ಲಿ ಅಕ್ಕಮಹಾದೇವಿ ಕಾಲೋನಿ, ಹರಿಕೃಷ್ಣ ನಗರ, ತಿಲಕ್ ನಗರ, ಘಾಟಗೇ ಲೇಔಟ್ ಹಾಗೂ ಬಸವ ನಗರ ಉದ್ಯಾನವನಗಳು ಸೇರಿವೆ. ಇದರ ಜೊತೆಗೆ ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದಿಂದ 4.50 ಕೋಟಿ ರೂ. ವೆಚ್ಚದಲ್ಲಿ 18 ಪಾರ್ಕ್ ಅಭಿವೃದ್ಧಿಪಡಿಸಲಾಗುತ್ತಿದೆ. ಒಟ್ಟಾರೆಯಾಗಿ ಪಾಲಿಕೆ ಮತ್ತು ನಗರಾಭಿವೃದ್ಧಿ ಪ್ರಾಧಿಕಾರದಿಂದ 22.40 ಕೋಟಿ ರೂ. ವೆಚ್ಚದಲ್ಲಿ ನಗರದಾದ್ಯಂತ 33 ಗಾರ್ಡನ್ ಮತ್ತು ಪಾರ್ಕ್‌ಗಳ ಸೌಂದರ್ಯೀಕರಣ ಕಾರ್ಯ ನಡೆಯಲಿದೆ.

25 ರಸ್ತೆ ವೃತ್ತಗಳ ಸೌಂದರ್ಯೀಕರಣ:

ಕಲಬುರಗಿ ಮಹಾನಗರ ಪಾಲಿಕೆ ಮತ್ತು ನಗರಾಭಿವೃದ್ಧಿ ಪ್ರಾಧಿಕಾರದಿಂದ ನಗರದಲ್ಲಿ 25 ಜಂಕ್ಷನ್/ಸರ್ಕಲ್ ಸೌಂದರ್ಯೀಕರಣ ಮಾಡಲಾಗುತ್ತಿದ್ದು, ಸುಮಾರು 13.40 ಕೋಟಿ ರೂ. ವ್ಯಯಿಸಲಾಗುತ್ತಿದೆ. ಇದರಲ್ಲಿ ಎಸ್‌ವಿಪಿ ಸರ್ಕಲ್, ಸರಕಾರಿ ಆಸ್ಪತ್ರೆ ಸರ್ಕಲ್, ಹಳೇ ಆರ್‌ಟಿಒ ಸರ್ಕಲ್, ಜಗತ್ ಸರ್ಕಲ್, ಉದನೂರ್ ಕ್ರಾಸ್ ಸರ್ಕಲ್, ಶಹಾಬಜಾರ್ ಸರ್ಕಲ್, ಬಸವೇಶ್ವರ ಸರ್ಕಲ್ ಹಾಗೂ ಮಹರ್ಷಿ ವಾಲ್ಮೀಕಿ ವೃತ್ತ ಅಭಿವೃದ್ಧಿ ಕಾಣಲಿವೆ.

ಕುಡಾದಿಂದ 5.80 ಕೋಟಿ ರೂ. ವೆಚ್ಚದಲ್ಲಿ ನಗರದಲ್ಲಿನ ಪ್ರಮುಖ 10 ಜಂಕ್ಷನಗಳನ್ನು ಅಭಿವೃದ್ಧಿಪಡಿಸಲಾಗುತ್ತಿದ್ದು, ರಾಮ ಮಂದಿರ ಜಂಕ್ಷನ್, ಆಳಂದ ಚೆಕ್‌ಪೋಸ್ಟ್ ಜಂಕ್ಷನ್, ಹುಮನಾಬಾದ ಜಂಕ್ಷನ್, ಅಫಜಲಪೂರ ಜಂಕ್ಷನ್, ಶಹಾಬಾದ ರಸ್ತೆ, ತಾಜ ಸುಲ್ತಾನಪುರ, ಸೂಪರ್ ಮಾರ್ಕೆಟ್, ನಾಗನಹಳ್ಳಿ, ಹಾಗರಗಾ ಕ್ರಾಸ್ ಹಾಗೂ ಮಿಸ್ಬಾ ನಗರದ ಸಮೀಪದ ಜಂಕ್ಷನ್ ಅಭಿವೃದ್ಧಿ ಮಾಡಲಾಗುತ್ತಿದೆ.

4 ಕೆರೆಗಳ ಅಭಿವೃದ್ಧಿ:

1 ಕೋಟಿ ರೂ. ವೆಚ್ಚದಲ್ಲಿ ನಗರದ ಹೃದಯ ಭಾಗದಲ್ಲಿರುವ ಅಪ್ಪ ಕೆರೆ, 14.50 ಕೋಟಿ ರೂ. ವೆಚ್ಚದಲ್ಲಿ ಬಹಮನಿ ಕೋಟೆ ಕಂದಕ, ಮಹಾನಗರ ಪಾಲಿಕೆಯಿಂದ ಹಾಗೂ ನಗರಾಭಿವಧ್ಧಿ ಪ್ರಾಧಿಕಾರದಿಂದ 20 ಕೋಟಿ ರೂ. ವೆಚ್ಚದಲ್ಲಿ ಕುಸನೂರ ಕೆರೆ ಮತ್ತು 65 ಕೋಟಿ ರೂ. ವೆಚ್ಚದಲ್ಲಿ ಖಾಜಾ ಕೋಟನೂರ ಕೆರೆ ಅಭಿವೃದ್ಧಿಪಡಿಸಿ, ಜಲ ರಕ್ಷಣೆಗೆ ಆದ್ಯತೆ ಕೊಡಲಾಗಿದೆ.

164 ಕೋಟಿ ರೂ. ವೆಚ್ಚದಲ್ಲಿ 63 ರಸ್ತೆಗಳ ನಿರ್ಮಾಣ

ರಸ್ತೆಗಳ ನಿರ್ಮಾಣಕ್ಕೆ ಕಲಬುರಗಿ ನಗರದಲ್ಲಿ ಮೊದಲ ಬಾರಿಗೆ ಅಡಿಟ್ ಮಾಡಿಸಲಾಗಿದೆ. 783.82 ಕಿ.ಮೀ ನೆಲಗಟ್ಟಿದ ರಸ್ತೆ, 219.96 ಕಿ.ಮೀ. ನೆಲಹಾಸು ಇಲ್ಲದ ರಸ್ತೆ ಇದ್ದು, ಒಟ್ಟಾರೆ 1003.78 ಕಿ.ಮೀ. ರಸ್ತೆ ಜಾಲ ನಗರದಲ್ಲಿರುವುದನ್ನು ಗುರುತಿಸಲಾಗಿದೆ. ಇದಕ್ಕೆ ಸುಮಾರು 300 ಕೋಟಿ ರೂ. ಅವಶ್ಯಕವಾಗಿದ್ದು, ಇದರಲ್ಲಿ ಈಗಾಗಲೆ ಮಹಾತ್ಮ ಗಾಂಧಿ ನಗರ ವಿಕಾಸ ಯೋಜನೆ 2.0ರಡಿ 53 ರಸ್ತೆಗಳನ್ನು 127.50 ಕೋಟಿ ರೂ. ವೆಚ್ಚದಲ್ಲಿ, ಎಸ್.ಎಫ್.ಸಿ. ಅನುದಾನದಲ್ಲಿ ಕಲಬುರಗಿ ಉತ್ತರ ಕ್ಷೇತ್ರದಲ್ಲಿ 10 ರಸ್ತೆಗಳನ್ನು 25 ಕೋಟಿ ರೂ. ವೆಚ್ಚದಲ್ಲಿ ಹಾಗೂ 12.44 ಕೋಟಿ ರೂ. ವೆಚ್ಚದಲ್ಲಿ ಎನ್.ಸಿ.ಎ.ಪಿ ಅನುದಾನದಡಿ ಎಸ್.ವಿ.ಪಿ. ವೃತ್ತ-ಜಗತ್ ವೃತ್ತ, ಜಗತ್ ವೃತ್ತ-ಹುಮನಬಾದ ಬೇಸ್ ಹಾಗೂ ಅನ್ನಪೂರ್ಣ ಕ್ರಾಸ್-ಸೇಡಂ ರಸ್ತೆ ಅಭಿವೃದ್ಧಿಪಡಿಸಲಾಗುತ್ತಿದೆ. ಹೀಗೆ ಒಟ್ಟಾರೆ 164 ಕೋಟಿ ರೂ. ವೆಚ್ಚದಲ್ಲಿ 63 ರಸ್ತೆಗಳು ಸುಧಾರಣೆ ಆಗಲಿವೆ.

ತ್ಯಾಜ್ಯಗಳ ನಿರ್ವಹಣೆ

ಮಹಾನಗರದಲ್ಲಿ ಉತ್ಪತ್ತಿಯಾಗುತ್ತಿರುವ ತ್ಯಾಜ್ಯದ ನಿರ್ವಹಣೆಗೆ 55.70 ಕೋಟಿ ಮೀಸಲಿಡಲಾಗಿದೆ, ಹಸಿ ಹಾಗೂ ಒಣ ತ್ಯಾಜ್ಯಗಳ ನಿರ್ವಹಣೆ ಮತ್ತು ಸಾಗಣೆಗೆ 34 ಟಿಪ್ಪರ್, 6 ಟ್ರ್ಯಾಕ್ಟರ್ ಗಳನ್ನು ಖರೀದಿಸಲಾಗುತ್ತಿದೆ. ಸ್ವಚ್ಛ ಭಾರತ ಮಿಷನ್ ಹಾಗೂ 15 ನೆಯ ಹಣಕಾಸು ಆಯೋಗದಿಂದ ಬರುತ್ತಿರುವ ಹಣವನ್ನು ತ್ಯಾಜ್ಯದ ವೈಜ್ಞಾನಿಕ ನಿರ್ವಹಣೆಗೆ ಒತ್ತು ಕೊಡಲಾಗಿದೆ, ಪರಿಸರ ಮಾಲಿನ್ಯ ಆಗದಂತೆ ಕ್ರಮ ಕೈಗೊಳ್ಳಲಾಗುತ್ತಿದೆ.

ಸ್ವಚ್ಛ -ಶಾಶ್ವತ ಕಲಬುರಗಿಅಭಿಯಾನಕ್ಕೆ ಕೈಜೋಡಿಸಿ

ಕಲಬುರಗಿ ನಗರದಲ್ಲಿ ಒಟ್ಟಾರೆ 300 ಕೋಟಿ ರೂ. ಮೌಲ್ಯದಷ್ಟು ಕಾಮಗಾರಿಗಳನ್ನು ಕೈಗೊಂಡು ಅಭಿವೃದ್ಧಿಪಡಿಸಲಾಗುತ್ತಿದೆ. ಅಲ್ಲದೆ, ಸ್ವಚ್ಛ, ಸುಂದರ ಪರಿಸರ ನಿರ್ಮಾಣಕ್ಕೆ ಸ್ವಚ್ಛ ಕಲಬುರಗಿ-ಶಾಶ್ವತ ಸಮೃದ್ಧಿ ಅಭಿಯಾನ ಕೈಗೊಳ್ಳಲಾಗಿದೆ. ಎಲ್ಲರೂ ಅಭಿಯಾನದಲ್ಲಿ ಪಾಲ್ಗೊಂಡು ಸ್ವಾಸ್ಥ್ಯ ಕಲಬುರಗಿ ನಿರ್ಮಾಣಕ್ಕೆ ಕೈ ಜೋಡಿಸಬೇಕು.

-ಪ್ರಿಯಾಂಕ್ ಖರ್ಗೆ, ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ

ಕಲಬುರಗಿ ನಗರದ ರಸ್ತೆ, ವೃತ್ತ, ಕೆರೆ, ಉದ್ಯಾನವನಗಳ ಅಭಿವೃದ್ಧಿ ಸೇರಿದಂತೆ ತ್ಯಾಜ್ಯ ನಿರ್ವಹಣೆಗೂ ಹೆಚ್ಚಿನ ಕ್ರಮ ಕೈಗೊಳ್ಳಲಾಗಿದೆ. ಸುಂದರ ಹಾಗೂ ನವ ಕಲಬುರಗಿ ನಿರ್ಮಾಣಕ್ಕೆ ಸಾರ್ವಜನಿಕರು ಸಹ ಮುಂದಾಗಬೇಕಿದೆ.

-ಅವಿನಾಶ್ ಶಿಂಧೆ

ಮಹಾನಗರ ಪಾಲಿಕೆ ಆಯುಕ್ತ, ಕಲಬುರಗಿ

share
ದಸ್ತಗೀರ ನದಾಫ್ ಯಳಸಂಗಿ
ದಸ್ತಗೀರ ನದಾಫ್ ಯಳಸಂಗಿ
Next Story
X