Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ವಾತಾವರಣ ವೈಪರೀತ್ಯ: ಆತಂಕದಲ್ಲಿ ಮಾವು...

ವಾತಾವರಣ ವೈಪರೀತ್ಯ: ಆತಂಕದಲ್ಲಿ ಮಾವು ಬೆಳೆಗಾರರು

ನಾರಾಯಣಸ್ವಾಮಿ ಸಿ.ಎಸ್.ನಾರಾಯಣಸ್ವಾಮಿ ಸಿ.ಎಸ್.5 Feb 2024 2:22 PM IST
share
ವಾತಾವರಣ ವೈಪರೀತ್ಯ: ಆತಂಕದಲ್ಲಿ ಮಾವು ಬೆಳೆಗಾರರು

ಹೊಸಕೋಟೆ: ವಾತಾವರಣದ ವೈಪರೀತ್ಯದಿಂದಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಮಾವು ಫಸಲಿನ ಮೇಲೆ ಪರಿಣಾಮ ಬೀರುತ್ತಿದೆ. ಜಿಲ್ಲಾದ್ಯಂತ ತಡವಾಗಿ ಹೂವು ಬಿಡುತ್ತಿದ್ದು, ಹಲವೆಡೆ ಇನ್ನೂ ಮಾವಿನ ಮರದಲ್ಲಿ ಹೂ ಬಿಟ್ಟಿಲ್ಲ. ಇದು ಮುಂದುವರಿದರೆ ಮಾವಿನ ಇಳುವರಿಯಲ್ಲಿ ಹಿನ್ನಡೆಯಾಗುವ ಸಾಧ್ಯತೆ ಇದೆ.

ಜಿಲ್ಲೆಯ 4 ತಾಲೂಕಿನಲ್ಲೂ ಮಾವು ಬೆಳೆಯಲಾಗುತ್ತದೆ. ಒಟ್ಟಾರೆ ಜಿಲ್ಲಾದ್ಯಂತ 6 ಸಾವಿರಕ್ಕೂ ಹೆಚ್ಚು ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯಲಾಗುತ್ತದೆ. ಸಾಮಾನ್ಯವಾಗಿ ಜಿಲ್ಲೆಯಲ್ಲಿ ಡಿಸೆಂಬರ್ ತಿಂಗಳಲ್ಲಿ ಹೂವು ಕಟ್ಟಿಕೊಂಡು ಮಿಂಚುತ್ತಿದ್ದ ಮಾವಿನ ಮರಗಳು ಈವರೆಗೂ ಹೆಚ್ಚಿನ ಕಡೆಗಳಲ್ಲಿ ಹೂವು ಕಟ್ಟಿಲ್ಲ. ಬರದ ಪ್ರಭಾವದ ಜತೆಗೆ ಮಾವು ಕೂಡ ಕೈಕೊಟ್ಟರೆ ರೈತರಿಗೆ ನುಂಗಲಾರದ ತುತ್ತಾಗಲಿದೆ ಎಂದು ರೈತರು ಅಭಿಪ್ರಾಯಪಡುತ್ತಿದ್ದಾರೆ.

► ವಾತಾವರಣ ವೈಪರೀತ್ಯ: ಜಿಲ್ಲೆಯ 4 ತಾಲೂಕುಗಳಲ್ಲಿ ಈ ಬಾರಿ ಮಳೆ ಕೊರತೆ ಉಂಟಾಗಿ ರಾಗಿ, ಜೋಳ ಸಹಿತ ಬಹುತೇಕ ಬೆಳೆಗಳು ನಷ್ಟ ಉಂಟಾಗಿದ್ದವು. ಇದೀಗ ಮಾವಿನ ಸರದಿ; ಜಿಲ್ಲೆಯಲ್ಲಿ ಕಳೆದ ತಿಂಗಳಲ್ಲಿ ತುಂತುರು ಮಳೆ, ಮೋಡ ಕವಿದ ವಾತಾವರಣ ಇದ್ದ ಹಿನ್ನೆಲೆ ಮಾವು ಹೂವು ಕಟ್ಟುವ ಸೀಸನ್ ತಡವಾಗಿದೆ. ಹೆಚ್ಚು ಮಾವು ಬೆಳೆಯುವ ರಾಮನಗರ, ಕೋಲಾರ ಜಿಲ್ಲೆಗಳಲ್ಲೂ ಇದೇ ಪರಿಸ್ಥಿತಿ ಇದೆ. ಒಟ್ಟಾರೆ ಈ ಬಾರಿ ಮಾವಿಗೂ ಕೂಡ ವಾತಾವರಣ ವೈಪರೀತ್ಯದ ಬಿಸಿ ತಟ್ಟಿದ್ದು, ಇನ್ನೆಷ್ಟು ಪ್ರಭಾವ ಬೀರಲಿದೆ ಎಂಬುದನ್ನು ಕಾದುನೋಡಬೇಕಿದೆ.

ರೈತರ ಆದಾಯ ಮೂಲ: ಜಿಲ್ಲೆಯ ಅನೇಕ ರೈತರ ಆದಾಯ ಮೂಲ ಮಾವು. ರೈತರ ಇತರ ಬೆಳೆಗಳು ಕೈಕೊಟ್ಟಾಗ ಮಾವು ಕೈಹಿಡಿಯುತ್ತದೆ. ರೈತರು ಮಾವುಗಳ ಮಾರುಕಟ್ಟೆಗಳನ್ನು, ದರಗಳನ್ನು ವರ್ಷದಿಂದ ವರ್ಷಕ್ಕೆ ಹೆಚ್ಚಿಸಿಕೊಳ್ಳುತ್ತಾರೆ. ಮಾವುಗಳ ಮಾರಾಟಕ್ಕೆ ತೋಟದಲ್ಲಿ ಮಾವು ಕಾಯಿ ಕಟ್ಟಿದ ನಂತರ ಪೂರ್ತಿ ತೋಟವನ್ನು ತೋಟದ ಮಾವಿನ ಮರ ಹಾಗೂ ಕಾಯಿಗಳಿಗೆ ಅನುಸಾರವಾಗಿ ಮಾರಲಾಗುತ್ತದೆ. ಇದರಿಂದ ಬೆಳೆಗಾರರಿಗೆ ಮಾವಿನ ಹಣ್ಣಿನಿಂದ ವಾರ್ಷಿಕ ಉತ್ತಮ ದರ ಕೂಡ ಸಿಗುತ್ತದೆ.

ಆದಾಯ ಇಳಿಮುಖ ಸಾಧ್ಯತೆ

ಸದ್ಯ ಜಿಲ್ಲೆಯಲ್ಲಿ ವಾತಾವರಣದ ಬದಲಾವಣೆ ಹಿನ್ನೆಲೆ ಹೂವು ಕಟ್ಟುವುದು ತಡವಾಗಿದೆ. ಇದರಿಂದ ಫಸಲು ಕೈಸೇರುವುದು ಕೂಡ ತಡವಾಗುವ ಸಾಧ್ಯತೆ ಇದ್ದು, ಆ ಸಮಯದಲ್ಲಿ ಉತ್ತಮ ದರ ಸಿಗುವುದು ಕೂಡ ಅನುಮಾನ ಎಂಬಂತಾಗಿದೆ. ಇದಲ್ಲದೆ ಒಂದು ವೇಳೆ ಉತ್ತಮ ದರ ಇದ್ದರೂ ಕಾಯಿ ಕಟ್ಟಿ ಬೆಳೆ ಕೈಸೇರುವ ವೇಳೆಗೆ ಅಥವಾ ಹೂಗಳು ಕಟ್ಟಿ ಬೆಳವಣಿಗೆ ಆಗುವ ಸಮಯದಲ್ಲಿ ವಾತಾವರಣ ಮತ್ತೆ ಬದಲಾವಣೆಯನ್ನು ಕಂಡರೆ ಹೂವು ಉದುರುವ ಮೂಲಕ ಇಳುವರಿಗೆ ಹೊಡೆತ ಬೀಳಲಿದೆ. ಹಣ್ಣಾಗುವ ಸಮಯದಲ್ಲಿ ಮಳೆ ಅಥವಾ ಹೆಚ್ಚಿನ ಶೀತ ವಾತಾವರಣ ಕಂಡುಬಂದಲ್ಲಿ ಗುಣಮಟ್ಟದ ಕಾಯಿ ಸಿಗುವುದೂ ಕಷ್ಟ. ಇದರಿಂದ ವರ್ಷಕ್ಕೊಮ್ಮೆ ರೈತರಿಗೆ ಸಿಗುವ ಮಾವಿನ ಆದಾಯದಲ್ಲೂ ಇಳಿಮುಖವಾಗುವ ಸಾಧ್ಯತೆ ಹೆಚ್ಚಿದೆ.

ಜನವರಿ ತಿಂಗಳು ಪೂರ್ಣಗೊಳ್ಳುತ್ತಿದ್ದರೂ ಮಾವಿನ ಮರದಲ್ಲಿ ಹೂವು ಸರಿಯಾಗಿ ಬಿಟ್ಟಿಲ್ಲ, ಇದರಿಂದ ಈ ಬಾರಿ ಎಷ್ಟು ಫಸಲು ಕೈಸೇರಲಿದೆ ಎಂಬುದನ್ನು ಕಾದು ನೋಡಬೇಕಿದೆ. ಕಳೆದ ಬಾರಿಯೂ ಉತ್ತಮ ಫಸಲು ಬಂದಿಲ್ಲ. ಹೀಗೆ ಮುಂದುವರಿದರೆ ಸಮಸ್ಯೆಯಾಗುತ್ತದೆ.

► ಅಶ್ವತ್ಥಪ್ಪ, ಮಾವು ಬೆಳೆಗಾರರು, ಹೊಸಕೋಟೆ

ಜನವರಿಯಲ್ಲಿ ಮಳೆ ಬರುವ ವಾತಾವರಣವಿದ್ದು, ಬಿಸಿಲ ಪ್ರಭಾವ ಕಡಿಮೆ ಇದ್ದ ಹಿನ್ನೆಲೆ ಮಾವು ಹೂವು ಕಟ್ಟುವುದು ತಡವಾಗಿದೆ. ಹಾಗಾಗಿ ಇಳುವರಿ ಕೂಡ ತಡವಾಗಲಿದೆ. ಮುಂದಿನ ದಿನಗಳಲ್ಲಿ ಮಾವಿಗೆ ಪೂರಕ ವಾತಾವರಣ ಸಿಕ್ಕರೆ ಉತ್ತಮ ಫಸಲು ಕೈಸೇರಲಿದೆ.

► ಗುಣವಂತ್, ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ, ಬೆಂಗಳೂರು ಗ್ರಾಮಾಂತರ

share
ನಾರಾಯಣಸ್ವಾಮಿ ಸಿ.ಎಸ್.
ನಾರಾಯಣಸ್ವಾಮಿ ಸಿ.ಎಸ್.
Next Story
X