Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಇಂದಿನ ಯುದ್ಧಗಳನ್ನು ಗೆಲ್ಲುತ್ತಿವೆ...

ಇಂದಿನ ಯುದ್ಧಗಳನ್ನು ಗೆಲ್ಲುತ್ತಿವೆ ಕೋಡ್‌ಗಳು!

ಗಿರೀಶ್ ಲಿಂಗಣ್ಣಗಿರೀಶ್ ಲಿಂಗಣ್ಣ12 July 2026 12:16 PM IST
share
ಇಂದಿನ ಯುದ್ಧಗಳನ್ನು ಗೆಲ್ಲುತ್ತಿವೆ ಕೋಡ್‌ಗಳು!

ಭವಿಷ್ಯದಲ್ಲಿ, ಬಹುಶಃ ಯುದ್ಧ ನೌಕೆಗಳಿಗೂ ಮಾನವ ಕ್ಯಾಪ್ಟನ್‌ಗಳ ಬದಲು ಸಾಫ್ಟ್‌ವೇರ್‌ಗಳೇ ನಿರ್ದೇಶನ ನೀಡಬಹುದು. ಹೊಸ ಎಐ ಟೂಲ್‌ಗಳು ಶತ್ರುಗಳ ಕಂಪ್ಯೂಟರ್ ವ್ಯವಸ್ಥೆಗಳಲ್ಲಿ ಅವಿತುಕೊಂಡಿರುವ ದೌರ್ಬಲ್ಯಗಳನ್ನು ಗುರುತಿಸಿ, ಅವುಗಳನ್ನು ಪ್ರವೇಶಿಸಿ, ಸೈಬರ್ ದಾಳಿಗಳನ್ನು ಪ್ರಬಲ ಆಯುಧಗಳನ್ನಾಗಿ ಪರಿವರ್ತಿಸುತ್ತವೆ. ರಕ್ಷಣಾ ವಲಯದಲ್ಲಿನ ಹೊಸ ಆಲೋಚನೆಗಳು ಈಗ ಹಳೆಯ, ಬೃಹತ್ ಆಯುಧ ಕಂಪೆನಿಗಳ ಬದಲು ಹೊಸದಾದ, ಸಣ್ಣದಾದ, ಆದರೆ ವೇಗವಾಗಿ ಮುಂದೆ ಸಾಗುತ್ತಿರುವ ತಂತ್ರಜ್ಞಾನ ಸ್ಟಾರ್ಟಪ್ ಕಂಪೆನಿಗಳಿಂದ ಬರುತ್ತಿವೆ.

ಯುದ್ಧ ನಡೆಯುವ ರೀತಿಯಲ್ಲೇ ಒಂದು ಮೌನವಾದ, ಆದರೆ ಅಷ್ಟೇ ದೊಡ್ಡದಾದ ಬದಲಾವಣೆ ಉಂಟಾಗಿದೆ. ಯುದ್ಧಗಳ ಫಲಿತಾಂಶ ಈಗ ಕೇವಲ ಒಂದು ದೇಶ ಹೊಂದಿರುವ ಸೈನಿಕರು, ಯುದ್ಧ ಟ್ಯಾಂಕ್‌ಗಳು ಅಥವಾ ಕ್ಷಿಪಣಿಗಳ ಸಂಖ್ಯೆಯಿಂದ ನಿರ್ಧರಿಸಲ್ಪಡುವುದಿಲ್ಲ. ಇಂದು ಮೂರು ಹೊಸ ಪಡೆಗಳು ಯುದ್ಧದ ಗೆಲುವನ್ನು ನಿರ್ಧರಿಸುತ್ತಿವೆ. ಅವೆಂದರೆ - ಕೃತಕ ಬುದ್ಧಿಮತ್ತೆ (ಎಐ), ಸ್ವಾಯತ್ತ ಆಯುಧಗಳು, ಮತ್ತು ಸ್ಮಾರ್ಟ್ ಕಂಪ್ಯೂಟರ್ ಪ್ರೋಗ್ರಾಮ್‌ಗಳು.

ಇವುಗಳನ್ನು ನಾವು ಸರಳವಾಗಿ ಅರ್ಥ ಮಾಡಿಕೊಳ್ಳಲು ಪ್ರಯತ್ನಿಸೋಣ.

ಕೃತಕ ಬುದ್ಧಿಮತ್ತೆ (ಎಐ) ಎಂದರೆ ಯಂತ್ರಕ್ಕೆ ಒಂದು ಮೆದುಳು ನೀಡಿದಂತೆ. ಅವು ಅಪಾರ ಪ್ರಮಾಣದ ಮಾಹಿತಿಗಳನ್ನು ಅಧ್ಯಯನ ಮಾಡಿ, ವಿವಿಧ ಮಾದರಿಗಳನ್ನು ಕಲಿತು, ಬಹುತೇಕ ಮಾನವರ ರೀತಿಯಲ್ಲೇ ನಿರ್ಧಾರಗಳನ್ನು ಕೈಗೊಳ್ಳುತ್ತವೆ.

ಸ್ವಾಯತ್ತ ಮಿಲಿಟರಿ ವ್ಯವಸ್ಥೆಗಳು ಎಂದರೆ ಆಯುಧಗಳು, ಡ್ರೋನ್‌ಗಳು ಅಥವಾ ವಾಹನಗಳಾಗಿದ್ದು, ಅವು ಅತ್ಯಂತ ಕನಿಷ್ಠ ಮಟ್ಟದ ಮಾನವರ ನೆರವು ಅಥವಾ ಯಾವುದೇ ನೆರವಿಲ್ಲದೆಯೂ ಕಾರ್ಯಾಚರಿಸಬಲ್ಲವು.

ಅಲ್ಗಾರಿದಂ ಆಧಾರಿತ ಯುದ್ಧ ಎಂದರೆ, ಕಂಪ್ಯೂಟರ್ ಸಾಫ್ಟ್‌ವೇರ್‌ಗಳನ್ನು ಬಳಸಿಕೊಂಡು ಮಾಹಿತಿಗಳನ್ನು ಕ್ಷಿಪ್ರವಾಗಿ ಅಧ್ಯಯನ ಮಾಡಿ, ಗುರಿಗಳನ್ನು ಗುರುತಿಸಿ, ಕಮಾಂಡರ್‌ಗಳಿಗೆ ವೇಗವಾಗಿ ನಿರ್ಧಾರ ಕೈಗೊಳ್ಳಲು ನೆರವಾಗುವುದಾಗಿದೆ.

ಜೊತೆಯಾಗಿ, ಈ ಮೂರು ವ್ಯವಸ್ಥೆಗಳು ಯುದ್ಧವನ್ನು ವೇಗಗೊಳಿಸಿ, ಸ್ಮಾರ್ಟ್ ಮತ್ತು ಹೆಚ್ಚು ಅಪಾಯಕಾರಿಯಾಗಿ ಪರಿವರ್ತಿಸುತ್ತಿವೆ. ಭಾರತದ ಪಾಲಿಗಂತೂ ಇದು ನಮ್ಮ ನಾಯಕರು ಕಡೆಗಣಿಸಲು ಸಾಧ್ಯವಿಲ್ಲದ ತಿರುವಾಗಿದೆ. ಜಗತ್ತಿನಾದ್ಯಂತ, ಸಾಫ್ಟ್‌ವೇರ್ ಚಾಲಿತವಾದ ನೂತನ ರೀತಿಯ ಯುದ್ಧ ಹಿಂದೆಂದಿಗಿಂತಲೂ ಹೆಚ್ಚು ವೇಗವಾಗಿ ಮತ್ತು ಹೆಚ್ಚಿನ ಪ್ರಮಾಣದಲ್ಲಿ ಹರಡುತ್ತಿದೆ.

ಡ್ರೋನ್‌ಗಳು ಎಲ್ಲವನ್ನೂ ಬದಲಾಯಿಸಿವೆ. ಗನ್ ಪೌಡರ್ ಮತ್ತು ನ್ಯೂಕ್ಲಿಯರ್ ಆಯುಧಗಳ ಬಳಿಕ, ಡ್ರೋನ್‌ಗಳು ಯುದ್ಧರಂಗದಲ್ಲಿ ಅತಿದೊಡ್ಡ ಬದಲಾವಣೆಗಳನ್ನು ತರುತ್ತಿವೆ. ಉಕ್ರೇನ್-ರಶ್ಯ ಯುದ್ಧದಲ್ಲಿ, ಉಕ್ರೇನ್ ಡೆಲ್ಟಾ ಎನ್ನುವ ಸ್ಮಾರ್ಟ್ ವ್ಯವಸ್ಥೆಯನ್ನು ಬಳಸುತ್ತಿದೆ. ಇದು ಉಪಗ್ರಹಗಳು, ರೇಡಾರ್‌ಗಳು, ಅಷ್ಟೇ ಏಕೆ, ಸಾಮಾಜಿಕ ಜಾಲತಾಣಗಳಿಂದಲೂ ಮಾಹಿತಿಗಳನ್ನು ಕಲೆಹಾಕಿ, ಇದನ್ನು ನೂರಾರು ಡ್ರೋನ್‌ಗಳಿಗೆ ಒದಗಿಸುತ್ತದೆ. ಇದು ಒಂದು ಡಿಜಿಟಲ್ ‘ಕಿಲ್ ವೆಬ್’, ಅಂದರೆ ಗುರಿಗಳನ್ನು ಗುರುತಿಸಿ, ಹಿಂಬಾಲಿಸಿ, ಕೆಲವೇ ನಿಮಿಷಗಳೊಳಗೆ ನಾಶಪಡಿಸುವ ಜಾಲವನ್ನು ತಯಾರಿಸುತ್ತದೆ. ಇದಕ್ಕೆ ಪ್ರತಿಕ್ರಿಯಿಸಲೂ ಎದುರಾಳಿಗೆ ಸಮಯ ಇರುವುದಿಲ್ಲ.

ಇದರ ಪರಿಣಾಮವಾಗಿ, ಈಗ ಮುಂಚೂಣಿಯಲ್ಲಿ 35 ಕಿಲೋಮೀಟರ್‌ಗಳ ‘ಡೆತ್ ರೆನ್’ ಸಿದ್ಧವಾಗಿದೆ. ಇಲ್ಲಿ ಈಗ ಟ್ಯಾಂಕ್‌ಗಳ ಚಲನೆ ಬಹುತೇಕ ಸ್ಥಗಿತಗೊಂಡಿದ್ದು, ಯೋಧರು ಬಹಳ ಅಪರೂಪ ಎನಿಸಿದ್ದಾರೆ. ಬಹುಮಟ್ಟಿಗೆ ಅಗ್ಗದ ಎಫ್‌ಪಿವಿ ಡ್ರೋನ್‌ಗಳು (ಸಣ್ಣದಾದ, ರಿಮೋಟ್ ನಿಯಂತ್ರಿತ, ಆತ್ಮಹತ್ಯಾ ಡ್ರೋನ್‌ಗಳಾಗಿದ್ದು, ನೇರವಾಗಿ ತನ್ನ ಗುರಿಯತ್ತಲೇ ಧುಮುಕುತ್ತವೆ) ಹೋರಾಟ ನಡೆಸುತ್ತವೆ. ಒಂದು ಕಾಲದಲ್ಲಿ ಯೋಧರೇ ನಡೆಸುತ್ತಿದ್ದ ಕಾರ್ಯಗಳಾದ ಆಹಾರ ಮತ್ತು ಆಯುಧಗಳ ಸಾಗಾಟ, ಮಾಹಿತಿ ಸಂಗ್ರಹಣೆ ಮತ್ತು ಗಾಯಗೊಂಡವರ ರಕ್ಷಣೆಗಳನ್ನೂ ಇಂದು ಯಂತ್ರಗಳು ನಡೆಸುತ್ತಿವೆ. ಈ ಅಗಾಧ ಪ್ರಮಾಣವನ್ನು ಸರಿಗಟ್ಟುವ ಸಲುವಾಗಿ, ಉಕ್ರೇನ್ ಈ ವರ್ಷ 8 ಮಿಲಿಯನ್ ಡ್ರೋನ್‌ಗಳನ್ನು ಖರೀದಿಸಲು ಯೋಚಿಸುತ್ತಿದೆ. ಇದು ಕಳೆದ ವರ್ಷ ಉಕ್ರೇನ್ ಸಿಡಿಸಿದ ಆರ್ಟಿಲರಿ ಶೆಲ್‌ಗಳಿಂದ ಹೆಚ್ಚಾಗಿದೆ. ಈ ಡ್ರೋನ್‌ಗಳು ಕೇವಲ 25 ಕಿಲೋಮೀಟರ್‌ಗಳಿಂದ 2,500 ಕಿಲೋಮೀಟರ್ ದೂರದ ತನಕ ದಾಳಿ ನಡೆಸಬಲ್ಲವು.

ಇದೇ ರೀತಿಯ ಬದಲಾವಣೆಗಳು ಬೇರೆ ಕದನಗಳಲ್ಲೂ ನಡೆಯುತ್ತಿವೆ. ಇತ್ತೀಚಿನ ಕಾರ್ಯಾಚರಣೆಗಳಲ್ಲಿ, ಅಮೆರಿಕ ಶತ್ರು ನಾಯಕರ ಚಲನವಲನಗಳನ್ನು ಗಮನಿಸಿ, ಡ್ರೋನ್‌ಗಳು, ಸೈಬರ್ ಟೂಲ್‌ಗಳು ಮತ್ತು ವಿಶೇಷ ಪಡೆಗಳನ್ನು ಬಳಸಿ ದಾಳಿ ನಡೆಸಲು ಆ್ಯಂಥ್ರೊಪಿಕ್ ಸಂಸ್ಥೆಯ ಕ್ಲಾಡ್ ರೀತಿಯ ಅತ್ಯಾಧುನಿಕ ಎಐ ಬಳಸಿಕೊಂಡಿದೆ ಎನ್ನಲಾಗಿದೆ. 2026ರಲ್ಲಿ, ಇರಾನ್ ವಿರುದ್ಧದ ಯುದ್ಧದಲ್ಲಿ, ಎಐ ವ್ಯವಸ್ಥೆಗಳು ಗುರಿಗಳನ್ನು ಗುರುತಿಸಲು ಮಿಂಚಿನ ವೇಗದಲ್ಲಿ ನೆರವಾಗಿದ್ದು, ಇದರಿಂದ ಅತ್ಯಂತ ಕ್ಷಿಪ್ರ ಮತ್ತು ನಿಖರ ದಾಳಿಗಳನ್ನು ನಡೆಸಲು ಸಾಧ್ಯವಾಗಿದೆ. ಇವೆಲ್ಲ ದೂರದ ಭವಿಷ್ಯದ ಕಥೆಗಳಲ್ಲ. ಇವೆಲ್ಲವೂ ಇಂದಿನ ಯುದ್ಧ ರಂಗದಲ್ಲಿ ನಡೆಯುತ್ತಿರುವ ವಿದ್ಯಮಾನಗಳಾಗಿವೆ.

ನಾಳಿನ ಭವಿಷ್ಯ ಸ್ಮಾರ್ಟ್ ಯಂತ್ರಗಳಿಗೆ ಸೇರಿವೆ. ಆಗಸದಲ್ಲಿ, ಅಮೆರಿಕದ ವೈಎಫ್‌ಕ್ಯು-44ಎ ಫ್ಯೂರಿಯಂತಹ ಎಐ ಯುದ್ಧ ವಿಮಾನಗಳು ಮಾನವ ಪೈಲಟ್‌ಗಳೊಡನೆ ಹಾರಾಟ ನಡೆಸಿ, ಅವರಿಗೆ ಆಲೋಚಿಸಲು ಮತ್ತು ವೇಗವಾಗಿ ಪ್ರತಿಕ್ರಿಯಿಸಲು ನೆರವಾಗುತ್ತವೆ. ಭವಿಷ್ಯದಲ್ಲಿ, ಬಹುಶಃ ಯುದ್ಧ ನೌಕೆಗಳಿಗೂ ಮಾನವ ಕ್ಯಾಪ್ಟನ್‌ಗಳ ಬದಲು ಸಾಫ್ಟ್‌ವೇರ್‌ಗಳೇ ನಿರ್ದೇಶನ ನೀಡಬಹುದು. ಹೊಸ ಎಐ ಟೂಲ್‌ಗಳು ಶತ್ರುಗಳ ಕಂಪ್ಯೂಟರ್ ವ್ಯವಸ್ಥೆಗಳಲ್ಲಿ ಅವಿತುಕೊಂಡಿರುವ ದೌರ್ಬಲ್ಯಗಳನ್ನು ಗುರುತಿಸಿ, ಅವುಗಳನ್ನು ಪ್ರವೇಶಿಸಿ, ಸೈಬರ್ ದಾಳಿಗಳನ್ನು ಪ್ರಬಲ ಆಯುಧಗಳನ್ನಾಗಿ ಪರಿವರ್ತಿಸುತ್ತವೆ. ರಕ್ಷಣಾ ವಲಯದಲ್ಲಿನ ಹೊಸ ಆಲೋಚನೆಗಳು ಈಗ ಹಳೆಯ, ಬೃಹತ್ ಆಯುಧ ಕಂಪೆನಿಗಳ ಬದಲು ಹೊಸದಾದ, ಸಣ್ಣದಾದ, ಆದರೆ ವೇಗವಾಗಿ ಮುಂದೆ ಸಾಗುತ್ತಿರುವ ತಂತ್ರಜ್ಞಾನ ಸ್ಟಾರ್ಟಪ್ ಕಂಪೆನಿಗಳಿಂದ ಬರುತ್ತಿವೆ.

ಈ ಬದಲಾವಣೆಯ ವೇಗವೂ ಅಚ್ಚರಿಯದಾಗಿದೆ. ಯುದ್ಧರಂಗದಲ್ಲಿ ಹೊಸ ಸಾಫ್ಟ್‌ವೇರ್‌ಗಳು ಪ್ರತೀ ಮೂರು ವಾರಗಳಿಗೊಮ್ಮೆ ಬಂದರೆ, ಹೊಸ ಆಯುಧ ಹಾರ್ಡ್‌ವೇರ್‌ಗಳು ಅಂದಾಜು ಮೂರು ತಿಂಗಳಿಗೊಮ್ಮೆ ಆಗಮಿಸುತ್ತವೆ. ಚೀನಾ ಸಹ ತನ್ನ ಸ್ವಂತ ಶಕ್ತಿಶಾಲಿ ಎಐ ಮಾದರಿಗಳು ಮತ್ತು ಆಧುನಿಕ ಕಂಪ್ಯೂಟರ್ ಚಿಪ್‌ಗಳ ಮೂಲಕ ಮುಂದೆ ಸಾಗುತ್ತಿದೆ. ಅಂದರೆ, ಬಹುತೇಕ ನೂತನ ಆಯುಧಗಳ ನಿರ್ಮಾಣಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿರುವ ನಮ್ಮ ರಕ್ಷಣಾ ಸಚಿವಾಲಯ ಈಗ ಸಾಫ್ಟ್‌ವೇರ್ ಮತ್ತು ಡಿಜಿಟಲ್ ತಂತ್ರಜ್ಞಾನಕ್ಕೂ ಇನ್ನಷ್ಟು ಹೆಚ್ಚಿನ ಗಮನ ಹರಿಸಬೇಕಿದೆ.

ಈ ಬೆಳವಣಿಗೆಗಳು ನಮ್ಮ ಸೇನಾ ಪಡೆಗಳು ಮತ್ತು ಸರಕಾರಕ್ಕೆ ಎಚ್ಚರಿಕೆಯ ಕರೆಯಾಗಿವೆ. ಭಾರತವೂ ಸಹ ಉಕ್ರೇನ್‌ನ ಡೆಲ್ಟಾ ಮಾದರಿಯಲ್ಲಿ ತನ್ನದೇ ಆದ ಬಲವಾದ ಡಿಜಿಟಲ್ ರಕ್ಷಣಾ ವ್ಯವಸ್ಥೆ ನಿರ್ಮಿಸಬೇಕಿದೆ. ಇದಕ್ಕಾಗಿ ಭಾರತ ಸುರಕ್ಷಿತ ಮತ್ತು ಸ್ವತಂತ್ರ ಮಾರ್ಗವನ್ನು ಆರಿಸಬೇಕು.

ಇದಕ್ಕಾಗಿ ಭಾರತಕ್ಕೆ ಈಗ ಬೇಕಿರುವುದು ಏನು?

ಒಂದು ಕೇಂದ್ರೀಯ ಎಐ ಪ್ಲಾಟ್‌ಫಾರ್ಮ್ ಬೇಕಿದ್ದು, ಅದು ಡ್ರೋನ್‌ಗಳು, ಉಪಗ್ರಹಗಳು ಮತ್ತು ಸೆನ್ಸರ್‌ಗಳಿಂದ ಮಾಹಿತಿಗಳನ್ನು ಕಲೆಹಾಕಿ, ಕಮಾಂಡರ್‌ಗಳು ವೇಗವಾಗಿ ನಿರ್ಧಾರ ಕೈಗೊಳ್ಳಲು ನೆರವಾಗುತ್ತವೆ.

ಭಾರೀ ಡ್ರೋನ್ ಸಮೂಹಗಳನ್ನು ನಿಯಂತ್ರಿಸಲು ಮತ್ತು ಶತ್ರುಗಳ ಆಯುಧಗಳು, ಹಕ್ಕಿಗಳು ಮತ್ತು ನಾಗರಿಕ ವಿಮಾನಗಳ ನಡುವೆ ವ್ಯತ್ಯಾಸ ಗುರುತಿಸಲು ಒಂದು ಸ್ಮಾರ್ಟ್ ಸಾಫ್ಟ್ ವೇರ್ ಬೇಕಾಗುತ್ತದೆ.

ಭಾರತ ಡ್ರೋನ್ ಉತ್ಪಾದನೆಗೆ ಹೆಚ್ಚಿನ ಒತ್ತು ನೀಡಬೇಕಿದ್ದು, 2028ರ ವೇಳೆಗೆ ಕನಿಷ್ಠ ಐದು ಮಿಲಿಯನ್ ಡ್ರೋನ್‌ಗಳ ಗುರಿ ಸಾಧಿಸಬೇಕು.

ಪಾಕಿಸ್ತಾನ ಮತ್ತು ಚೀನಾಗಳ ಗಡಿಯಾದ್ಯಂತ ಪ್ರಬಲ ಡ್ರೋನ್ ನಿರೋಧಕ ವ್ಯವಸ್ಥೆಗಳಾದ ಲೇಸರ್‌ಗಳು, ಮೈಕ್ರೋವೇವ್ ಆಯುಧಗಳು, ಜಾಮರ್‌ಗಳು ಮತ್ತು ವಿಶೇಷ ಡ್ರೋನ್ ಬೇಟೆಯಾಡುವ ತಂಡಗಳನ್ನು ನಿಯೋಜಿಸಬೇಕು.

ಭೂಮಿಯ ಕೆಳ ಕಕ್ಷೆಯಲ್ಲಿ ಹೆಚ್ಚು ಉಪಗ್ರಹಗಳು ಬೇಕಿದ್ದು, ಅವು ಭೂಮಿಗೆ ಸನಿಹದಲ್ಲಿ ಪರಿಭ್ರಮಣೆ ನಡೆಸುತ್ತಾ, ಉತ್ತಮ ವೀಕ್ಷಣೆ, ಕಣ್ಗಾವಲು ಮತ್ತು ಗುರಿ ಸಾಧನೆ ನಡೆಸಲಿವೆ.

ಬಜೆಟ್ ಭರವಸೆ ಅತ್ಯಂತ ಅವಶ್ಯಕವಾಗಿದ್ದು, ಮುಂದಿನ ರಕ್ಷಣಾ ಬಜೆಟ್‌ನಲ್ಲಿ ಆಧುನೀಕರಣದ ವೆಚ್ಚದ ಬಹುತೇಕ ಶೇ. 40 ಹಣವನ್ನು ಎಐ, ಡ್ರೋನ್‌ಗಳು, ಸಾಫ್ಟ್‌ವೇರ್ ಮತ್ತು ಸ್ವಾಯತ್ತ ವ್ಯವಸ್ಥೆಗಳಿಗೆ ಮೀಸಲಿಡಬೇಕು.

ಹಾಗೆಂದು ಈ ಬದಲಾವಣೆ ಸುಲಭದ್ದಲ್ಲ. ಇದಕ್ಕಾಗಿ ನಮ್ಮ ಮಿಲಿಟರಿ ಮತ್ತು ಸರಕಾರ ಕಾರ್ಯಾಚರಿಸುವ ರೀತಿಯಲ್ಲಿ ಹೊಸ ಆಲೋಚನೆಗಳು ಬೇಕಿದ್ದು, ಇದಕ್ಕೆ ಹೆಚ್ಚಿನ ಸಮಯ, ಹಣ ಮತ್ತು ಧೈರ್ಯ ಬೇಕಿದೆ. ಒಂದು ವೇಳೆ ನಾವು ವೇಗವಾಗಿ ಕಾರ್ಯಾಚರಿಸಿ, ಆತ್ಮನಿರ್ಭರ ಭಾರತದತ್ತ (ಸ್ವಾವಲಂಬನೆ) ಹೆಚ್ಚಿನ ಗಮನ ಹರಿಸಿದರೆ, ಭಾರತ ಮುಂದಿನ ವರ್ಷಗಳಲ್ಲಿ ಬಹಳಷ್ಟು ಪ್ರಬಲವಾಗಬಹುದು. ಇದರಿಂದ ನಾವು ನಮ್ಮ ಗಡಿಗಳನ್ನು ಉತ್ತಮವಾಗಿ ಕಾದು, ಬಿಕ್ಕಟ್ಟುಗಳನ್ನು ನಿಭಾಯಿಸಲು ಹೆಚ್ಚಿನ ಆಯ್ಕೆಗಳನ್ನು ಒದಗಿಸಿ, ಪಾಕಿಸ್ತಾನದಿಂದ ಮುಂದಕ್ಕೆ ಸಾಗಿ, ಚೀನಾದ ಪ್ರಾಬಲ್ಯಕ್ಕೆ ಬಲವಾಗಿ ಉತ್ತರ ನೀಡಬಹುದು. ಈ ಮೂಲಕ ಭಾರತ ದೊಡ್ಡದಾದ ಆಯುಧಗಳ ಬದಲು, ಸ್ಮಾರ್ಟ್ ತಂತ್ರಜ್ಞಾನದ ಮೂಲಕ ಗೆಲುವು ಸಾಧಿಸಬಹುದು. ಇಲ್ಲಿನ ಪಾಠ ಸರಳ: ನಾಳಿನ ಯುದ್ಧಗಳಲ್ಲಿ ತೀವ್ರ ಕದನಗಳು ಆರಂಭಗೊಳ್ಳುವ ಮುನ್ನ, ಸ್ಮಾರ್ಟ್ ಸಾಫ್ಟ್‌ವೇರ್‌ಗಳನ್ನು ಹೊಂದಿರುವ ಪಕ್ಷವೇ ಗೆಲುವು ಸಾಧಿಸಲಿದೆ.

Tags

CodeswinningWar
share
ಗಿರೀಶ್ ಲಿಂಗಣ್ಣ
ಗಿರೀಶ್ ಲಿಂಗಣ್ಣ

ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ

Next Story
X