Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಆದಿವಾಸಿ ಮತ್ತು ಅರಣ್ಯ ಇಲಾಖೆಯ ನಡುವಿನ...

ಆದಿವಾಸಿ ಮತ್ತು ಅರಣ್ಯ ಇಲಾಖೆಯ ನಡುವಿನ ಸಂಘರ್ಷಗಳು

ಸಿ.ಎಸ್. ದ್ವಾರಕಾನಾಥ್ಸಿ.ಎಸ್. ದ್ವಾರಕಾನಾಥ್24 Aug 2026 11:42 AM IST
share
ಆದಿವಾಸಿ ಮತ್ತು ಅರಣ್ಯ ಇಲಾಖೆಯ ನಡುವಿನ ಸಂಘರ್ಷಗಳು

ಆದಿವಾಸಿಗಳು ಅಸಂಘಟಿತರು, ಅಸಹಾಯಕರು, ಅಮಾಯಕರು, ಇವರಿಗೆ ಯಾವುದೇ ರಾಜಕೀಯ ಪ್ರಭಾವವಿಲ್ಲ. ಕಾಲಾಂತರಗಳಿಂದಲೂ ಕಾಡನ್ನೇ ನಂಬಿ ಕಾಡಲ್ಲೇ ತಲೆಮಾರುಗಳನ್ನು ಕಳೆಯುತ್ತಾ ಕಾಡನ್ನೇ ದೇವರೆಂದು ಭಾವಿಸಿ ಕಾಡನ್ನು ಉಳಿಸಿದವರು, ಇಂದು ಅರಣ್ಯ ಇಲಾಖೆಯ ಕಾಟದಿಂದಾಗಿ ಕಾಡಿನಿಂದ ಹೊರಬಂದು ಬದುಕಲು ದಿಕ್ಕುತೋಚದೆ ಅಲೆಮಾರಿಗಳಿದ್ದಾರೆ. ಅರಣ್ಯ ಇಲಾಖೆ ಮತ್ತು ಅರಣ್ಯವಾಸಿಗಳ ನಡುವೆ ಒಂದು ಮನುಷ್ಯಸಂಬಂಧ ಏರ್ಪಡದಿದ್ದರೆ ಅರಣ್ಯವೂ ಉಳಿಯಲ್ಲ, ಅರಣ್ಯವಾಸಿಗಳೂ ಉಳಿಯಲ್ಲ.

ಇಡೀ ದೇಶ ಸ್ವಾತಂತ್ರ ದಿನಾಚರಣೆಯ ಸಂಭ್ರಮದಲ್ಲಿ ತೇಲಾಡುತಿದ್ದರೆ ಚಾಮರಾಜನಗರ ಜಿಲ್ಲೆಯ ಹನೂರಿನ ಪರಿದಿಯಲ್ಲಿರುವ ಆದಿವಾಸಿಗಳ ಮನೆಗಳಲ್ಲಿ ಸೂತಕದ ಛಾಯೆ ಆವರಿಸಿತ್ತು! ಇದೇ ಆಗಸ್ಟ್ 15ರಂದು ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಕಾವೇರಿ ವನ್ಯಜೀವಿಧಾಮದ ಶಾಗ್ಯ ಬೀಟ್ ಮರಿಯಮಂಗಲ ಪ್ರದೇಶದಲ್ಲಿ ಅರಣ್ಯ ಸಿಬ್ಬಂದಿ ನಡೆಸಿದ ಎನ್‌ಕೌಂಟರ್‌ನಲ್ಲಿ ಆಂಥೋನಿ ಸ್ವಾಮಿ, ಜಾನ್ ರೋಸ್ ಪೀಟರ್ ಹಾಗೂ ಕುಮಾರ್ ಎಂಬ ಮೂವರು ಆದಿವಾಸಿಗಳು ದಾರುಣವಾಗಿ ಗುಂಡೇಟಿಗೆ ಒಳಗಾಗಿ ಮೃತಪಟ್ಟಿದ್ದಾರೆ. ಇವರಿಗೆ ಕ್ರೈಸ್ತ ಹೆಸರುಗಳು ಇರುವುದರಿಂದ ಇವರನ್ನು ಕೆಲವರು ಆದಿವಾಸಿಗಳಲ್ಲ ಎನ್ನುತಿದ್ದಾರೆ. ಹಾಗೆ ನೋಡಿದರೆ ಆದಿವಾಸಿಗಳಿಗೆ ಯಾವುದೇ ಧರ್ಮವಿಲ್ಲ. ಅವರ ಮೂಲ ಧರ್ಮವೇ ಬುಡಕಟ್ಟು ಧರ್ಮ. ಆದರೆ ಅವರು ಜೀವಿಸುವ ಪರಕೀಯ ಪರಿಸರದಲ್ಲಿ ಉಳಿವಿನ ಕಾರಣಕ್ಕೆ ಆಯಾ ಪ್ರದೇಶಗಳಿಗೆ ಅನುಗುಣವಾಗಿ ಅಲ್ಲಿನ ಧರ್ಮಗಳನ್ನು ಆಚರಿಸುತ್ತಾ ಆಯಾ ಧರ್ಮದ ಹೆಸರುಗಳನ್ನು ಇಟ್ಟುಕೊಂಡಿರುತ್ತಾರೆ. ಈ ಕಾರಣಕ್ಕೆ ಅವರ ಹೆಸರುಗಳು ಯಾವುದೇ ಧರ್ಮಗಳನ್ನು ಸೂಚಿಸಲಿ ಆದರೆ ಅವರ ಮೂಲ ಕುಲಧರ್ಮಗಳ ಪ್ರಕಾರ ಮೂಲತಹ ಇವರು ಆದಿವಾಸಿಗಳೇ ಎನ್ನುವುದು ವಾಸ್ತವ.

ಸದರಿ ಹನೂರು ಅರಣ್ಯದ ಎನ್ಕೌಂಟರ್ ಕುರಿತು ಸಾಕಷ್ಟು ಚರ್ಚೆಗಳು, ವಾದವಿವಾದಗಳು ಆಗುತ್ತಿವೆ. ಆದರೆ ಸತ್ತವರಂತೂ ಆದಿವಾಸಿಗಳೇ ಆಗಿದ್ದು, ಕೊಂದವರು ಅರಣ್ಯ ಇಲಾಖೆಯವರೇ ಆಗಿದ್ದಾರೆ ಎನ್ನುವುದೇ ಕಟುಸತ್ಯ.

ಅರಣ್ಯ ಇಲಾಖೆ ಮತ್ತು ಆದಿವಾಸಿಗಳ ನಡುವಿನ ಘರ್ಷಣೆಗಳು ಕರ್ನಾಟಕದಲ್ಲಿ ಆಗಿಂದಾಗ ನಡೆಯುತ್ತಲೇ ಇರುತ್ತವೆ.

ಕರ್ನಾಟಕದಲ್ಲಿ ಎನ್‌ಕೌಂಟರ್ ಅಂದರೆ ಗುಂಡಿನ ಘಟನೆಗಳ ಅಧಿಕೃತ ದಾಖಲೆ ಕಡಿಮೆಯಿರಬಹುದು. ಆದರೆ ಅರಣ್ಯ ಇಲಾಖೆ ಮತ್ತು ಆದಿವಾಸಿಗಳ ನಡುವಿನ ಸಂಘರ್ಷಗಳು ದಿನನಿತ್ಯ ನಡೆಯುತ್ತಲೇ ಇರುತ್ತವೆ. ಬಲವಂತದ ಒಕ್ಕಲೆಬ್ಬಿಸುವಿಕೆ, ಹಾಡಿಗಳಲ್ಲಿರುವ ಮನೆ ಕೆಡವುವುದು, ಕಾಡುಪ್ರಾಣಿಯ ಬೇಟೆಯ ನೆಪದಲ್ಲಿ ಆದಿವಾಸಿಗಳನ್ನು ಅಕ್ರಮ ಬಂಧನ, ಥಳಿತ, ಬೆದರಿಕೆ, ಕೊಲೆ, ಆದಿವಾಸಿ ಹೆಣ್ಣುಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ದಂತಹ ಘಟನೆಗಳು ದಾಖಲಾಗುತ್ತಲೇ ಇರುತ್ತವೆ.

1972ರ ವನ್ಯಜೀವಿ ಸಂರಕ್ಷಣಾ ಕಾಯ್ದೆ ನಂತರ ಆದಿವಾಸಿಗಳಿಗೆ ಇನ್ನಿಲ್ಲದಂತಹ ಸಮಸ್ಯೆಗಳು ಆರಂಭವಾದವು. ಈ ಕಾಯ್ದೆಯ ನಂತರ ದೇಶಾದ್ಯಂತ ಟೈಗರ್ ರಿಸರ್ವ್, ನ್ಯಾಷನಲ್ ಪಾರ್ಕ್ ಘೋಷಣೆಯಾದವು. ಉದಾಹರಣೆಗೆ ನಾಗರಹೊಳೆಯನ್ನು ‘ವನ್ಯಜೀವಿ ಧಾಮ’ ಎಂದು ಘೋಷಿಸಲಾಯಿತು. ಇದಾದ ನಂತರ 1986ರಲ್ಲಿ ಟೈಗರ್ ರಿಸರ್ವ್ ಆಯಿತು. ಇದರ ಪರಿಣಾಮ ಜೇನು ಕುರುಬ, ಬೆಟ್ಟ ಕುರುಬರಂತಹ ಆದಿವಾಸಿ ಬುಡಕಟ್ಟು ಸಮುದಾಯಗಳನ್ನು ಅತಿಕ್ರಮಣಕಾರರು ಎಂದು ಪರಿಗಣಿಸಲ್ಪಡಲಾಯಿತು! ಶತಶತಮಾನಗಳಿಂದಲೂ ಕಾಡನ್ನೇ ನಂಬಿದ್ದ ಆದಿವಾಸಿಗಳನ್ನು ಬಲವಂತವಾಗಿ ಒಕ್ಕಲೆಬ್ಬಿಸುವ ಅಮಾನವೀಯ ಪ್ರಕ್ರಿಯೆ ಶುರುವಾಯಿತು.

1972ರ ವನ್ಯಜೀವಿ ಸಂರಕ್ಷಣಾ ಕಾಯ್ದೆ ಮತ್ತು 1980ರ ಅರಣ್ಯ ಕಾಯ್ದೆಯಿಂದ ಆದ ಅನ್ಯಾಯ ಸರಿಪಡಿಸಲು ಅರಣ್ಯ ಹಕ್ಕು ಕಾಯ್ದೆ 2006 ತರಲಾಯಿತು. ಇದರ ಉದ್ದೇಶ ಕಾಡಿನಲ್ಲಿ ವಾಸಿಸುವ ಆದಿವಾಸಿಗಳಿಗೆ ಭೂಮಿ ಮತ್ತು ಸಂಪನ್ಮೂಲಗಳ ಹಕ್ಕು ನೀಡುವುದು. ಇದನ್ನು ಪರಿಶಿಷ್ಟ ಪಂಗಡಗಳು ಮತ್ತು ಇತರ ಸಾಂಪ್ರದಾಯಿಕ ಅರಣ್ಯವಾಸಿಗಳು (ಅರಣ್ಯ ಹಕ್ಕುಗಳ ಮಾನ್ಯತೆ) ಕಾಯ್ದೆ 2006 ಎಂದು ಕರೆಯುತ್ತಾರೆ. ಈ ಕಾಯ್ದೆಯ ಪ್ರಕಾರ ಆದಿವಾಸಿಗಳಿಗೆ 4 ಹೆಕ್ಟೇರ್ ವರೆಗೆ ಕೃಷಿ ಭೂಮಿಗೆ ಪಟ್ಟಾ ನೀಡಬಹುದು. ಗ್ರಾಮ ಸಭೆಗೆ ಕಾಡು ನಿರ್ವಹಣೆಯ ಅಧಿಕಾರ ನೀಡಬಹುದು, ಅದರಲ್ಲೂ ‘ವಿಶೇಷವಾಗಿ ದುರ್ಬಲ ಬುಡಕಟ್ಟು ಗುಂಪುಗಳು (particularly vulnerable tribal groups-PVTG)ಸಮುದಾಯಗಳಿಗೆ ವಿಶೇಷ ಹಕ್ಕು ನೀಡುವುದಾಗಿತ್ತು. ಇಡೀ ದೇಶದಲ್ಲಿ 77 ಆದಿವಾಸಿ ಸಮುದಾಯಗಳನ್ನು ಈ ಗುಂಪಿಗೆ ಸೇರಿಸಲಾಗಿದ್ದು, ಕರ್ನಾಟಕದಲ್ಲಿ ಜೇನುಕುರುಬ ಮತ್ತು ಕೊರಗರನ್ನು ಮಾತ್ರ ಈ ಗುಂಪಿಗೆ ಸೇರಿಸಲಾಗಿದೆ. ನಿಜಕ್ಕೂ ಅಪ್ಪಟ ಅರಣ್ಯವಾಸಿಗಳಾದ ಹಸಲರು, ಇರುಳಿಗರು, ಸೋಲಿಗರು, ಅಡವಿ ಚೆಂಚರು, ಮಲೆಕುಡಿಯರು, ಪಣಿಯರೇ ಮುಂತಾದವರನ್ನು PVTG ಪರಿದಿಗೆ ಸೇರಿಸಬೇಕಿರುತ್ತದೆ.

ಆದರೆ 1972 ಅರಣ್ಯ ಹಕ್ಕು ಕಾಯ್ದೆಯಿಂದಾಗಿ ಆದಿವಾಸಿಗಳನ್ನು ಅರಣ್ಯದಿಂದ ಖಾಲಿ ಮಾಡಿಸಿ ಅರಣ್ಯವನ್ನು ಸಂರಕ್ಷಿಸುವ ನೆಪದಲ್ಲಿ ನಾಗರಹೋಳೆ ಹುಲಿ ಸಂರಕ್ಷಿತಾರಣ್ಯದಲ್ಲಿ ಜೇನು ಕುರುಬ PVTG ಸಮುದಾಯದ ಜೊತೆ ಹಲವು ಘರ್ಷಣೆಗಳು ನಡೆದವು ಇದಕ್ಕೆ ಕಾರಣ ಬಲವಂತದ ಒಕ್ಕಲೆಬ್ಬಿಸುವಿಕೆ. ಸುಮಾರು 3,400 ಕುಟುಂಬಗಳನ್ನು 1970-1980ರ ಅವಧಿಯಲ್ಲಿ ಬಲವಂತವಾಗಿ ಕಾಡಿನಿಂದ ಒಕ್ಕಲೆಬ್ಬಿಸಲಾಯಿತು.

ಕಾರಡಿಕಲ್ಲು ಅಟ್ಟೂರ್ ಕೊಳ್ಳಿಯಲ್ಲಿ 52 ಆದಿವಾಸಿ ಕುಟುಂಬಗಳನ್ನು 40 ವರ್ಷಗಳ ಹಿಂದೆಯೇ ಬಲವಂತವಾಗಿ ಒಕ್ಕಲೆಬ್ಬಿಸಲಾಗಿತ್ತು. ಆದರೆ ಈ ಆದಿವಾಸಿ ಕುಟುಂಬಗಳಿಗೆ ಯಾವುದೇ ರೀತಿಯ ಪರಿಹಾರವೂ ಸಿಗಲಿಲ್ಲ, ಪರ್ಯಾಯವೂ ಸಿಗಲಿಲ್ಲ. ಅರಣ್ಯ ಇಲಾಖೆ ಅಧಿಕಾರಿಗಳಿಂದ ಕಿರುಕುಳ, ಹಿಂಸೆ, ಬಂಧನದ 4,482 ಆರೋಪಗಳಿವೆ!

ಆದಿವಾಸಿಗಳನ್ನು ಬಲವಂತವಾಗಿ ಒಕ್ಕಲೆಬ್ಬಿಸಿದ ನಂತರ ಅನೇಕ ವರ್ಷಗಳಾದರೂ ಪರ್ಯಾಯ ಅಥವಾ ಪರಿಹಾರ ಸಿಗದ ಕಾರಣಕ್ಕೆ, ಈಚೆಗೆ 2025ರ ಮೇ ತಿಂಗಳ 5ನೇ ತಾರೀಕಿನಂದು 52 ಜೇನು ಕುರುಬ ಕುಟುಂಬಗಳು ತಮ್ಮ ಪೂರ್ವಜರ ಜಾಗಕ್ಕೆ ಅನಿವಾರ್ಯವಾಗಿ ವಾಪಸ್ ಬಂದರು. ಅವರು ಬಂದ ಮರುದಿನವೇ ಅರಣ್ಯ ಅಧಿಕಾರಿಗಳು ಮತ್ತು ಪೊಲೀಸರು ಜತೆಗೂಡಿ ಎರಡು ಶೆಡ್‌ಗಳನ್ನು ಕೆಡವಿದರು. ಆ ಸಂದರ್ಭದಲ್ಲಿ ವಕೀಲರು, ಪತ್ರಕರ್ತರನ್ನು ಕೂಡ ಒಳಗೆ ಬಿಡಲಿಲ್ಲ! ಇದೇ ವರ್ಷ ಜೂನ್ ತಿಂಗಳಿನಲ್ಲಿ ಸುಮಾರು 250 ಮಂದಿ ಅರಣ್ಯ ಸಿಬ್ಬಂದಿ ಯುದ್ಧೋಪಾದಿಯಲ್ಲಿ ಬಂದು ಇನ್ನೂ ಆರು ಆದಿವಾಸಿ ಗುಡಿಸಲುಗಳನ್ನು ಕೆಡವಿದರು. ಈ ಸಂದರ್ಭದಲ್ಲಿ ಆದಿವಾಸಿ ಮತ್ತು ಅರಣ್ಯ ಇಲಾಖೆಯವರ ನಡುವೆ ಸಂಘರ್ಷ ಏರ್ಪಟಿತು.

ಮೇ 2025ರಲ್ಲಿ ನಾಗರಹೊಳೆಯ 35 ಆದಿವಾಸಿ ಗ್ರಾಮಗಳನ್ನು ಒಟ್ಟಿಗೆ ಯಾವುದೇ ಸ್ಥಳಾಂತರ ಮಾಡಬಾರದು ಎಂಬ ನಿರ್ಣಯವನ್ನು 2025ರ ಮೇ 20ರಂದು ನಡೆದ ಗ್ರಾಮಸಭೆಯಲ್ಲಿ ಕಾರಡಿಕಲ್ಲು ಫಾರೆಸ್ಟ್ ರೆಗುಲೇಷನ್ ಆಕ್ಟ್ ಅಡಿ ಹಕ್ಕು ಪ್ರತಿಪಾದಿಸಲಾಯಿತು.

29 ಗ್ರಾಮ ಸಭೆಗಳಲ್ಲಿ ಟೈಗರ್ ರಿಸರ್ವ್ ಮತ್ತು ಸಫಾರಿ ವಿರುದ್ಧ ನಿರ್ಣಯ ಮಾಡಿ ಕಳುಹಿಸಿವೆ.

ಇತ್ತೀಚೆಗಷ್ಟೆ ಕರಿಯಪ್ಪ ಎಂಬ ಎಚ್.ಡಿ.ಕೋಟೆಯ ಜೇನು ಕುರುಬ ವ್ಯಕ್ತಿಯನ್ನು ಮನೆಯಲ್ಲಿ ಜಿಂಕೆ ಮಾಂಸ ಬೇಯಿಸುತ್ತಿದ್ದ ಎಂಬ ಆರೋಪದ ಮೇಲೆ ಅರಣ್ಯ ಇಲಾಖೆಯ ಅಧಿಕಾರಿಗಳು ಅಕ್ರಮವಾಗಿ ಹಿಡಿದು ತಂದು ಹೊಡೆದು ಚಿತ್ರಹಿಂಸೆ ಮಾಡಿ ಕೊಂದು ಕಾಡಲ್ಲಿ ಎಸೆದಿದ್ದರು. ಮೃತ ಕರಿಯಪ್ಪನ ಮಗ ಪೊಲೀಸ್ ಠಾಣೆಯಲ್ಲಿ ದೂರು ನೀಡಲು ಹೋದರೆ ಇಡೀ ದಿನ ದೂರು ದಾಖಲಿಸಿಕೊಳ್ಳಲಿಲ್ಲ! ಈ ವಿಷಯ ನಮ್ಮ ಅಲೆಮಾರಿ ಬುಡಕಟ್ಟು ಮಹಾಸಭಾ ಸಂಘಟನೆಯ ಗಮನಕ್ಕೆ ಬಂದ ನಂತರ ನಾವು ಹಿರಿಯ ಪೊಲೀಸ್ ಅಧಿಕಾರಿಗಳ ಮೇಲೆ ಒತ್ತಡ ತಂದ ನಂತರವಷ್ಟೇ ಅರಣ್ಯ ಇಲಾಖೆಯ ಅಪಾದಿತ ಸಿಬ್ಬಂದಿಯ ಮೇಲೆ ಎಫ್‌ಐಆರ್ ದಾಖಲಾಯಿತು.

ಬಸವ ಎಂಬ ಆದಿವಾಸಿಯೊಬ್ಬ ಅಣಬೆ ಕಲೆಹಾಕುತ್ತಿದ್ದಾಗ ಆತನನ್ನು ಗುಂಡಿಕ್ಕಿ ದಾರುಣವಾಗಿ ಕೊಲ್ಲಲಾಯಿತು. ಅಲ್ಲಿನ ಆದಿವಾಸಿಗಳೇ ಹೇಳುವ ಪ್ರಕಾರ ಇದೇ ರೀತಿ ಈವರೆಗೂ ಸುಮಾರು 23 ಮಂದಿ ಆದಿವಾಸಿಗಳು ಅರಣ್ಯ ಇಲಾಖೆಯ ಗುಂಡಿಗೆ ಬಲಿಯಾಗಿದ್ದಾರೆ! ದುರಂತವೆಂದರೆ ಆದಿವಾಸಿಗಳ ಮೇಲಿನ ದೌರ್ಜನ್ಯದ ವಿರುದ್ಧ ಯಾವುದೇ ಗಂಭೀರ ಪ್ರಕರಣಗಳು ದಾಖಲಾಗಿಲ್ಲ.

ಒಂದು ಕಡೆ ಆದಿವಾಸಿಗಳ ಅನುಮಾನಾಸ್ಪದ ಸಾವಿನ ಪ್ರಕರಣಗಳು ಅನಧಿಕೃತವಾಗಿ ದಾಖಲಾಗುತ್ತಿದ್ದರೆ ಮತ್ತೊಂದು ಕಡೆ ಆದಿವಾಸಿಗಳ ವಿರುದ್ಧ ನಡೆದ ದೌರ್ಜನ್ಯದ ಘಟನಾವಳಿಗಳು ಮರೆಗೆ ಸರಿಯುತ್ತಿವೆ.

ಇದೇ 2026ರ ಮೇ ತಿಂಗಳಲ್ಲಿ ಆದಿವಾಸಿಗಳ ಹಕ್ಕುಗಳಿಗಾಗಿ ಹೋರಾಡುವ ಸಂಘಟನೆಯೊಂದು ಕರೆದ ಸಭೆಗೆ ಹೋಗುವಾಗ ವೀರನಹೊಸಹಳ್ಳಿ ಗೇಟ್‌ನಲ್ಲಿ ಅರಣ್ಯ ಇಲಾಖೆ ಆದಿವಾಸಿಗಳನ್ನು ಗಂಟೆಗಟ್ಟಲೆ ತಡೆದು ಪ್ರತಿಭಟನೆಗೆ ಹೋಗದಂತೆ ಮಾಡಿದರು. ಅದೇ ರೀತಿ ಅರಣ್ಯ ಇಲಾಖೆ ‘Section 27 Wildlife Act’ ಪ್ರಕಾರ ನಿಮ್ಮ ಇರುವಿಕೆ ಅಪರಾಧ ಎಂದು ಆದಿವಾಸಿಗಳ ವಿರುದ್ಧ ಬೋರ್ಡ್ ಹಾಕಿತ್ತು. ಇದರಿಂದಾಗಿ ಸಹಜವಾಗಿಯೇ ಸಿಡಿದ ಆದಿವಾಸಿಗಳು ‘‘ನಂಗ ಕಾಡು, ನಂಗ ಜಮ್ಮ, ನಂಗ ಆಳ್ಕು’’ ಎಂದು ಅವರದೇ ಆದ ಆದಿವಾಸಿ ಭಾಷೆಯಲ್ಲಿ ಇನ್ನೊಂದು ಪ್ರತಿರೋಧದ ಬೋರ್ಡ್ ಹಾಕಿದರು. ಇದೇ ರೀತಿ ಆದಿವಾಸಿ ಮತ್ತು ಅರಣ್ಯ ಇಲಾಖೆಯ ನಡುವೆ ಅನೇಕಾನೇಕ ಸಂಘರ್ಷಗಳು ದಿನನಿತ್ಯ ಮುಂದುವರಿಯುತ್ತಲೇ ಇವೆ.

ಅರಣ್ಯ ಇಲಾಖೆಯ ಮೇಲೆ ಆದಿವಾಸಿಗಳ ಪ್ರಮುಖ ಆರೋಪಗಳು ಏನೆಂದರೆ ಅರಣ್ಯ ರಕ್ಷಣ ಕಾಯ್ದೆ 2006 ಉಲ್ಲಂಘನೆ, ಅರಣ್ಯ ಹಕ್ಕು ಕಾಯ್ದೆಯನ್ನು ಸಮರ್ಪಕವಾಗಿ ಜಾರಿ ಮಾಡುತ್ತಿಲ್ಲ. ಅರಣ್ಯ ಇಲಾಖೆ ಮಾಡುವ ಬಲವಂತದ ಸ್ಥಳಾಂತರವನ್ನು ‘ಸ್ವಯಂಪ್ರೇರಿತ’ ಎಂದು ಸುಳ್ಳು ಹೇಳುತ್ತಾರೆ ಎಂಬುದು, ಆದರೆ ಆದಿವಾಸಿ ಸಮುದಾಯ ಹೇಳುವಂತೆ ‘ಯಾವುದೂ ಸ್ವಯಂಪ್ರೇರಿತವಲ್ಲ’. ಪ್ರವಾಸೋದ್ಯಮಕ್ಕಾಗಿ ಒಕ್ಕಲೆಬ್ಬಿಸುವಿಕೆ, ಟೈಗರ್ ಸಫಾರಿ, ರೆಸಾರ್ಟ್‌ಗಾಗಿ ಕಾಡನ್ನು ವಾಣಿಜ್ಯ ಪ್ರದರ್ಶನ ಮಾಡಲಾಗುತ್ತಿದೆ. ಆದಿವಾಸಿಗಳಿಗೆ ನೀಡಬೇಕಾದ ಸೌಲಭ್ಯಗಳ ಕಡಿತ. ಆದಿವಾಸಿಗಳ ಆಶ್ರಮ ಶಾಲೆ, ಆಸ್ಪತ್ರೆಗಳನ್ನು ಮುಚ್ಚಿ ‘ಅಭಿವೃದ್ಧಿಯಾಗದಂತೆ’ ಮಾಡಲಾಗಿದೆ ಎಂಬುದು. ಇದಕ್ಕೆ ವ್ಯತಿರಿಕ್ತವಾಗಿ ಅರಣ್ಯ ಇಲಾಖೆಯ ವಾದವೇನೆಂದರೆ ಇದು ‘‘ಹುಲಿ ರಕ್ಷಿತಾರಣ್ಯ, ವನ್ಯಜೀವಿ ಸಂರಕ್ಷಣೆಗೆ ಆದ್ಯತೆ ಕೊಡಬೇಕು. ಹೊರಗೆ ಹೋಗಲು ಬಯಸುವವರಿಗೆ ಪರಿಹಾರ ಸೌಲಭ್ಯ ಕೊಡುತ್ತಿದ್ದೇವೆ’’ ಎಂಬುದು.

ಅರಣ್ಯ ಹಕ್ಕು ಕಾಯ್ದೆ 2006ರ ಉದ್ದೇಶ ಅರಣ್ಯದಲ್ಲಿ ಶತಮಾನಗಳಿಂದ ವಾಸಿಸುತ್ತಿರುವ ಪರಿಶಿಷ್ಟ ಪಂಗಡಗಳು ಮತ್ತು ಇತರ ಸಾಂಪ್ರದಾಯಿಕ ಅರಣ್ಯವಾಸಿಗಳ ಭೂಮಿ ಹಾಗೂ ಸಂಪನ್ಮೂಲಗಳ ಮೇಲಿನ ಹಕ್ಕನ್ನು ಕಾನೂನಾತ್ಮಕವಾಗಿ ಗುರುತಿಸಿ, ಮಾನ್ಯತೆ ನೀಡುವುದು. ಆದರೆ ಇದು ಸಮರ್ಪಕವಾಗಿ ಜಾರಿಯಾಗುತ್ತಿಲ್ಲ. ಕಾನೂನಾತ್ಮಕವಾಗಿ ಅರಣ್ಯದ ಉತ್ಪನ್ನಗಳನ್ನು ಸಂಗ್ರಹಿಸಿ ಬದುಕು ಕಟ್ಟಿಕೊಳ್ಳುತ್ತಿದ್ದ ಆದಿವಾಸಿಗಳನ್ನು ಅರಣ್ಯದೊಳಕ್ಕೇ ಬಿಟ್ಟುಕೊಳ್ಳುವುದಿಲ್ಲ. ಅರಣ್ಯದ ಅಂಚಿನಲ್ಲಿ ಗುಡಿಸಲುಗಳನ್ನು ಹಾಕಿಕೊಂಡಿರುವ ಆದಿವಾಸಿಗಳನ್ನು ಅರಣ್ಯದೊಳಕ್ಕೆ ಹೋಗದಂತೆ ಅವರ ಗುಡಿಸಲುಗಳ ಸುತ್ತಲೂ ಅರಣ್ಯ ಇಲಾಖೆಯವರು ಟ್ರೆಂಚ್‌ಗಳನ್ನು ಅಗೆದುಬಿಟ್ಟಿರುತ್ತಾರೆ. ಈ ಬಗ್ಗೆ ಕೇಳಿದರೆ ಕಾಡುಪ್ರಾಣಿಗಳಿಂದ ಆದಿವಾಸಿಗಳನ್ನು ರಕ್ಷಿಸಲು ಈ ರೀತಿ ಮಾಡಲಾಗಿದೆ ಎಂದು ಸುಳ್ಳು ಹೇಳುತ್ತಾರೆ ಎಂದೋ ಕಾಡಿನಲ್ಲಿ ಹೂತ ತಮ್ಮ ಪೂರ್ವಿಕರ ಸಮಾದಿಗಳಿಗೆ ಪೂಜೆ ಮಾಡಿ.ಕೆ.ೂಂಡು ಬರಲೂ ನಮ್ಮನ್ನು ಬಿಡಲ್ಲ ಎಂದು ಆದಿವಾಸಿಗಳು ನೋವಿನಿಂದ ಹೇಳುತ್ತಾರೆ.

ಒಟ್ಟಾರೆಯಾಗಿ ಆದಿವಾಸಿಗಳು ಅಸಂಘಟಿತರು, ಅಸಹಾಯಕರು, ಅಮಾಯಕರು. ಇವರಿಗೆ ಯಾವುದೇ ರಾಜಕೀಯ ಪ್ರಭಾವವಿಲ್ಲ. ಕಾಲಾಂತರಗಳಿಂದಲೂ ಕಾಡನ್ನೇ ನಂಬಿ ಕಾಡಲ್ಲೇ ತಲೆಮಾರುಗಳನ್ನು ಕಳೆಯುತ್ತಾ ಕಾಡನ್ನೇ ದೇವರೆಂದು ಭಾವಿಸಿ ಕಾಡನ್ನು ಉಳಿಸಿದವರು, ಇಂದು ಅರಣ್ಯ ಇಲಾಖೆಯ ಕಾಟದಿಂದಾಗಿ ಕಾಡಿನಿಂದ ಹೊರಬಂದು ಬದುಕಲು ದಿಕ್ಕುತೋಚದೆ ಅಲೆಮಾರಿಗಳಿದ್ದಾರೆ. ಅರಣ್ಯ ಇಲಾಖೆ ಮತ್ತು ಅರಣ್ಯವಾಸಿಗಳ ನಡುವೆ ಒಂದು ಮನುಷ್ಯ ಸಂಬಂಧ ಏರ್ಪಡದಿದ್ದರೆ ಅರಣ್ಯವೂ ಉಳಿಯಲ್ಲ, ಅರಣ್ಯವಾಸಿಗಳೂ ಉಳಿಯಲ್ಲ.

Tags

forest department
share
ಸಿ.ಎಸ್. ದ್ವಾರಕಾನಾಥ್
ಸಿ.ಎಸ್. ದ್ವಾರಕಾನಾಥ್
Next Story
X