Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಒಳ ಮೀಸಲಾತಿ ಜಾತಿ ಪ್ರಮಾಣ ಪತ್ರ ವಿತರಣೆ...

ಒಳ ಮೀಸಲಾತಿ ಜಾತಿ ಪ್ರಮಾಣ ಪತ್ರ ವಿತರಣೆ ಗೊಂದಲ: ಅಲೆಮಾರಿಗಳ ಪಾಡು ನಾಯಿಪಾಡು!

ರಮೇಶ್ ಎಚ್.ಕೆ., ಬೆಂಗಳೂರುರಮೇಶ್ ಎಚ್.ಕೆ., ಬೆಂಗಳೂರು23 Aug 2026 10:33 AM IST
share
ಒಳ ಮೀಸಲಾತಿ ಜಾತಿ ಪ್ರಮಾಣ ಪತ್ರ ವಿತರಣೆ ಗೊಂದಲ: ಅಲೆಮಾರಿಗಳ ಪಾಡು ನಾಯಿಪಾಡು!

ಸುದೀರ್ಘವಾದ ಒಳ ಮೀಸಲಾತಿ ಹೋರಾಟದ ಬಳಿಕ ಸದ್ಯ ಇರುವ ಕಾಂಗ್ರೆಸ್ ಸರಕಾರವು ಪರಿಶಿಷ್ಟ ಜಾತಿ ಸಮುದಾಯಗಳನ್ನು ಎ, ಬಿ, ಸಿ ಎಂದು ಮೂರು ವಿಭಾಗಗಳಾಗಿ ವಿಭಾಗಿಸಿದ್ದು ಮೀಸಲಾತಿ ಪ್ರಮಾಣವನ್ನೂ ಸಹ 6/6/5ರ ಅನುಪಾತದಲ್ಲಿ ನಿಗದಿಪಡಿಸಿದೆ.

ಈ ಪೈಕಿ ಔದ್ಯೋಗಿಕವಾಗಿ ಅಳವಡಿಸಲ್ಪಡುವ ಒಳ ಮೀಸಲಾತಿ ಸೌಲಭ್ಯವು ಇದೀಗ ಪರಿಶಿಷ್ಟ ಜಾತಿಯ ಅಲೆಮಾರಿಗಳ ಪಾಲಿಗೆ ಹಲವು ಸಮಸ್ಯೆಗಳನ್ನು ತಂದೊಡ್ಡಿದೆ. ಪರಿಶಿಷ್ಟ ಜಾತಿ ಅಲೆಮಾರಿ ಪಟ್ಟಿಯಲ್ಲಿ ಸುಮಾರು 49 ರಿಂದ 51 ಜಾತಿಗಳು ಇದ್ದು ಅವುಗಳ ಸಾಮಾಜಿಕ ಮತ್ತು ಆರ್ಥಿಕ ಪರಿಸ್ಥಿತಿಯು ಅತ್ಯಂತ ಶೋಚನೀಯವಾಗಿದೆ. ಸರಕಾರದ ಹಲವು ಆಶಯಗಳ ನಡುವೆಯೂ ಕೂಡಾ ಇನ್ನೂ ಇರುವುದಕ್ಕೊಂದು ಪುಟ್ಟ ಮನೆ, ಬದುಕಿಗೊಂದಿಷ್ಟು ಭೂಮಿಯಿಲ್ಲದೇ ಇರುವಂತಹ ಸ್ಥಿತಿಯಲ್ಲಿ ಅಲೆಮಾರಿಗಳು ಇದ್ದು ಅವರ ಪರಿಸ್ಥಿತಿಯು ದಯನೀಯವಾಗಿ ಮುಂದುವರಿದಿದೆ.

ಇದೀಗ ಉದ್ಯೋಗಕ್ಕಾಗಿ ಕಾತರದಿಂದ ಇದ್ದ ಸಾವಿರಾರು ಅಭ್ಯರ್ಥಿಗಳ ಹೋರಾಟಕ್ಕೆ ಮಣಿದು ನೂತನ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನೇತೃತ್ವದ ಸರಕಾರವು ಹಲವು ಇಲಾಖೆಗಳ ನೇಮಕಾತಿಗೆ ಅಧಿಸೂಚನೆಯನ್ನು ಹೊರಡಿಸಿದ್ದು ಇದು ಉದ್ಯೋಗ ಬಯಸಿ ಅದಕ್ಕಾಗಿ ಶ್ರಮ ಹಾಕುತ್ತಿರುವ ಅಭ್ಯರ್ಥಿಗಳ ಪಾಲಿಗೆ ಅತ್ಯಂತ ಆಶಾದಾಯಕವಾದಂತಹ ಬೆಳವಣಿಗೆ ಆಗಿದೆ.

ಆದರೆ ಇನ್ನೂ ಕೂಡಾ ಒಳ ಮೀಸಲಾತಿಯ ‘ಸಿ’ ಗುಂಪಿನ ಒಳಗೆ ಸೇರ್ಪಡೆಗೊಂಡಿದ್ದರೂ ಕೂಡಾ ಪರಿಶಿಷ್ಟ ಜಾತಿ ಸಮುದಾಯದ ಒಳಗೆ ಬರುವ ಅಲೆಮಾರಿ ಮತ್ತು ಅರೆ ಅಲೆಮಾರಿ ವರ್ಗದ ಸುಮಾರು 49ರಿಂದ 51 ಜಾತಿಯ ಸಮುದಾಯಗಳು ನವೀಕೃತ ಜಾತಿ ಪ್ರಮಾಣ ಪತ್ರವನ್ನು ಪಡೆಯಲು ಒದ್ದಾಟ ನಡೆಸಿವೆ.

ಮುಖ್ಯವಾಗಿ ರಾಜ್ಯದ ಒಳಗಿರುವ ರಾಜಸ್ವ ನಿರೀಕ್ಷರಿಂದ ಹಿಡಿದು ತಹಶೀಲ್ದಾರರವರೆಗೆ ಅತ್ಯಂತ ಕಡಿಮೆ ಸಂಖ್ಯೆಯಲ್ಲಿ ಇರುವ ಪರಿಶಿಷ್ಟ ಜಾತಿಯ ಈ ಅಲೆಮಾರಿ ಜಾತಿಗಳಿಗೆ ಜಾತಿ ಪ್ರಮಾಣವನ್ನು ವಿತರಿಸುವುದು ಸವಾಲಿನ ಕೆಲಸವಾಗಿದೆ.

ಉದಾಹರಣೆಗೆ, ಬೆಂಗಳೂರಿನಲ್ಲಿ ಹತ್ತಾರು ವರ್ಷಗಳಿಂದ ವಾಸವಾಗಿರುವ ಶಿಳ್ಳೇಕ್ಯಾತ ಸಮುದಾಯದ ವ್ಯಕ್ತಿಯೊಬ್ಬರು ಈಗಾಗಲೇ ಇರುವ ತಮ್ಮ ಜಾತಿ ಪ್ರಮಾಣ ಪತ್ರವನ್ನು ‘ಸಿ’ ಗುಂಪಿಗೆ ನವೀಕರಿಸಿಕೊಳ್ಳುವ ಸಲುವಾಗಿ ಅರ್ಜಿ ಸಲ್ಲಿಸಿದ್ದರು. ಆದರೆ ಬೆಂಗಳೂರು ಉತ್ತರ ವಲಯದ ಗ್ರೇಡ್-2 ತಹಶೀಲ್ದಾರ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಅಧಿಕಾರಿಯೊಬ್ಬರು, ಅರ್ಜಿ ಸಲ್ಲಿಕೆ ಮಾಡಿ 20 ದಿನಗಳ ನಂತರ ಹೋಗಿ ವಿಚಾರಿಸಿದರೂ, ‘‘ನಿಮ್ಮ ಜಾತಿಯ ಹೆಸರು, ಸಕಾಲ ವೆಬ್‌ಸೈಟ್‌ನ ಪಟ್ಟಿಯಲ್ಲಿ ತೋರಿಸುತ್ತಿಲ್ಲ, ನಿಮ್ಮಂತೆಯೇ ಸುಮಾರು 17 ಜಾತಿಗಳ ಹೆಸರು ಈ ಪಟ್ಟಿಯಲ್ಲಿ ಇಲ್ಲ, ನಿಮಗೆ ಜಾತಿ ಪ್ರಮಾಣ ಪತ್ರವನ್ನು ನೀಡಲು ಆಗುವುದಿಲ್ಲ’’ ಎಂದು ಹೇಳಿರುತ್ತಾರೆ.

ಆಗ ಈಗಾಗಲೇ ಆರ್‌ಡಿ ಸಂಖ್ಯೆ ಸಮೇತ ಇದ್ದಂತಹ ಮತ್ತು ಸರಕಾರವೇ ವಿತರಿಸಿದಂತಹ ಜಾತಿ ಪ್ರಮಾಣದ ಪ್ರತಿಯನ್ನು ತೋರಿಸಿ ದನಿ ಎತ್ತರಿಸಿ ಕೇಳಿದರೆ ‘‘ನೋಡಿ ಇವರೇ, ಸರಕಾರಿ ವೆಬ್‌ಸೈಟ್‌ನಲ್ಲಿ ಜಾತಿಯ ಹೆಸರೇ ಇಲ್ಲದೇ ಇದ್ದರೆ ನಾವೇನು ಮಾಡಲಾಗುತ್ತದೆ, 2017ರ ನಂತರದ ಯಾವುದೇ ದತ್ತಾಂಶವು ನಮ್ಮಲ್ಲಿ ಇಲ್ಲ, ಒಂದು ಕೆಲಸ ಮಾಡಿ ನಿಮ್ಮ ಮೂಲ ಊರಿಗೆ ಹೋಗಿ, ಅಲ್ಲಿ ತಹಸೀಲ್ದಾರರ ಬಳಿ ನೀವು ಅಲ್ಲಿ ಇದ್ದದ್ದಕ್ಕೆ ಮತ್ತು ನಿಮ್ಮ ಜಾತಿ ಅಲ್ಲಿತ್ತು, ಎನ್ನುವುದಕ್ಕೆ ಅಫಿಡವಿಟ್ ಮಾಡಿಸಿ, ಅದನ್ನು ದೃಢೀಕರಿಸಿ ತೆಗೆದುಕೊಂಡು ಬನ್ನಿ’’ ಎಂದು ಹೇಳಿದ್ದಾರೆ. ನಾವು ಊರು ಬಿಟ್ಟು ಬಹಳ ವರ್ಷವಾಗಿದೆ ಎಂದರೂ ಕೇಳದ ಅಧಿಕಾರಿ ‘‘ಸರ್ ಸುಮ್ಮನೇ ಹೋಗಿ, ನಮಗೆ ನಿಮ್ಮೊಬ್ಬರದ್ದೇ ಅಲ್ಲ ಕೆಲಸ’’ ಎಂದು ಕಟುವಾಗಿ ಹೇಳಿದ್ದಾರೆ. ಹೀಗಾಗಿ ನಿರ್ವಾಹವಿಲ್ಲದೇ ಶಿಳ್ಳೇಕ್ಯಾತ ಸಮುದಾಯದ ಆ ವ್ಯಕ್ತಿಯು ತನ್ನಿಬ್ಬರ ಮಕ್ಕಳು ಸರಕಾರಿ ಉದ್ಯೋಗಕ್ಕೆ ಅರ್ಜಿ ಸಲ್ಲಿಸಲು ಅರ್ಹರಾಗಿದ್ದು, ಅವರ ಅರ್ಜಿ ಸಲ್ಲಿಕೆ ದಿನಾಂಕ ಮುಗಿಯುತ್ತಿದೆ. ದಯಮಾಡಿ ಜಾತಿ ಪ್ರಮಾಣ ಪತ್ರ ನೀಡಿ, ಎಂದು ಕೇಳಿದರೆ ಅವರು ‘‘ನೋಡಪ್ಪಾ ನಮಗೆ ದಿನಕ್ಕೆ 10 ಸಾವಿರ ಅರ್ಜಿಗಳು ಬರುತ್ತವೆ, ಅದರಲ್ಲಿ 2 ಸಾವಿರ ಅರ್ಜಿಗಳನ್ನು ರೀಚ್ ಮಾಡಲು ಪ್ರಯತ್ನ ಮಾಡುತ್ತಿದ್ದೇವೆ, ಆದರೆ ನಮಗೆ 300 ಅರ್ಜಿಗಳನ್ನು ಮಾಡಲು ಮಾತ್ರವೇ ಸಾಧ್ಯ ಆಗ್ತಾ ಇದೆ’’ ನಾವೇನು ಮಾಡೋಣ ಎಂದು ಹೇಳುತ್ತಾರೆ.

ಒಂದೆಡೆ ತಡವಾಗಿ ಕರೆಯುತ್ತಿರುವ ಸರಕಾರದ ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಕೆಯ ಅವಧಿ ಮುಕ್ತಾಯ ಆಗುತ್ತಿದೆ, ಇನ್ನೊಂದೆಡೆ ಸಕಾಲ ವೆಬ್‌ಸೈಟ್‌ನಲ್ಲಿ ಶಿಳ್ಳೇಕ್ಯಾತ ಸಮುದಾಯದ ಹೆಸರು ಕಾಣೆಯಾಗಿದೆ. ಹೋಗಲಿ ಹುಟ್ಟೂರಿಗೆ ಹೋಗಿ ದೃಢೀಕರಣ ಪತ್ರ ಪಡೆಯೋಣ ಎಂದರೆ ಅಲ್ಲಿ, ಜಾತಿಯ ಜನರು ಇದ್ದ ಕುರುಹೂ ಇಲ್ಲ, ಅಲ್ಲಿ ತಹಶೀಲ್ದಾರರಿಗೆ ಹೇಳಲು ಅಕ್ಕ ಪಕ್ಕ ಇದ್ದ ಜನರೂ ಬದಲಾಗಿದ್ದಾರೆ, ಇಂತಹ ಸಂದರ್ಭದಲ್ಲಿ ರಾಜ್ಯದಲ್ಲಿ ಆರೇಳು ಲಕ್ಷಗಳಷ್ಟಿರುವ ಪರಿಶಿಷ್ಟ ಜಾತಿ ಸಮುದಾಯದ ಅಲೆಮಾರಿಗಳು ಏನು ಮಾಡಬೇಕು? ಎಂಬುದಕ್ಕೆ ಸರಕಾರವೇ ಉತ್ತರಿಸಬೇಕು.

ತಹಶೀಲ್ದಾರರು ಹೇಳುತ್ತಿರುವಂತೆ ಅವರಿಗೆ ಕೆಲಸದ ಒತ್ತಡ ಅತ್ಯಂತ ಹೆಚ್ಚಾಗಿದ್ದರೆ, ಜಾತಿ ಪ್ರಮಾಣ ಪತ್ರ ವಿತರಿಸಲೆಂದೇ ಹೊಸ ಕೋಶವೊಂದನ್ನು ತೆರೆದು, ಅದರಲ್ಲಿ ಎ ಬಿ ಸಿ ವರ್ಗದ ಪರಿಶಿಷ್ಟ ಜಾತಿಗಳ ಕೌಂಟರ್ ಅನ್ನು ಮಾಡಿ, ನಿಗದಿತ ವೇಳೆಗೆ ಜಾತಿ ಪತ್ರವನ್ನು ಒದಗಿಸುವ ಕೆಲಸ ಮಾಡಬೇಕು. ಇಲ್ಲವೇ ನೂತನ ಮುಖ್ಯಮಂತ್ರಿಗಳು ಈಗಾಗಲೇ ಘೋಷಿಸಿರುವ ಆದಿವಾಸಿ ಮತ್ತು ಅಲೆಮಾರಿ ಆಯೋಗಕ್ಕೆ ಪರಿಶಿಷ್ಟ ಜಾತಿ ಅಲೆಮಾರಿಗಳ ಜಾತಿ ಪ್ರಮಾಣ ಪತ್ರ ವಿತರಣೆಯ ಜವಾಬ್ದಾರಿಯನ್ನು ನೀಡಲಿ.

ನಾಗಮೋಹನ ದಾಸ್ ಅವರ ನೇತೃತ್ವದಲ್ಲಿ ವರ್ಗೀಕೃತಗೊಂಡಿರುವ ಒಳ ಮೀಸಲಾತಿ ಸೌಲಭ್ಯವು ಜಾರಿ ಆಗುವಾಗ ಯಾವ ಸಮುದಾಯಗಳನ್ನು ಅದು ಹೊರಗಿಡಬಾರದು ಎಂದುಕೊಂಡಿತ್ತೋ ಅದೇ ಸಮುದಾಯಗಳನ್ನು ತಾಂತ್ರಿಕ ಕಾರಣಗಳನ್ನು ಮುಂದಿಟ್ಟು ಹೊರಗಿಡುವ ಕೆಲಸ ಮಾಡುತ್ತಿದ್ದು ಅತ್ಯಂತ ಬೇಸರದ ಸಂಗತಿ ಆಗಿದ್ದು, ಇದಕ್ಕೆ ಸಂಬಂಧಿಸಿದಂತೆ ಮಾನ್ಯ ಮುಖ್ಯಮಂತ್ರಿಗಳು ಸಂಬಂಧಿಸಿದ ಸಚಿವರು ಮತ್ತು ಅಧಿಕಾರಿಗಳಿಗೆ ಕಟ್ಟು ನಿಟ್ಟಿನ ಸೂಚನೆ ನೀಡಬೇಕು ಮತ್ತು ಪರಿಶಿಷ್ಟ ಹಿಂದುಳಿದ ವರ್ಗಗಳಿಗೆ ಸೇರಿದ ಅಲೆಮಾರಿ ಸಮುದಾಯಗಳ ಬದುಕು ಹಸನಾಗುವ ನಿಟ್ಟಿನಲ್ಲಿ, ಈಗ ತಾತ್ಕಾಲಿಕ ಮತ್ತು ಕ್ರಮೇಣ ಶಾಶ್ವತ ಪರಿಹಾರ ಕಲ್ಪಿಸಬೇಕು ಮತ್ತು ಪ್ರಮಾಣ ಪತ್ರ ಪಡೆಯದ ಕಾರಣಕ್ಕಾಗಿ ಸರಕಾರಿ ಉದ್ಯೋಗಕ್ಕೆ ಅರ್ಜಿ ಸಲ್ಲಿಕೆ ಅವಕಾಶದಿಂದ ವಂಚಿತರಾದ ಅಭ್ಯರ್ಥಿಗಳಿಗೆ ಅನುಕೂಲ ಆಗುವಂತೆ ಅರ್ಜಿ ಸಲ್ಲಿಕೆ ದಿನಾಂಕವನ್ನು ವಿಸ್ತರಿಸಬೇಕಾಗಿದೆ.

Tags

reservationcastenomadsprotest
share
ರಮೇಶ್ ಎಚ್.ಕೆ., ಬೆಂಗಳೂರು
ರಮೇಶ್ ಎಚ್.ಕೆ., ಬೆಂಗಳೂರು
Next Story
X