Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಕಾಂಗ್ರೆಸ್‌ನಲ್ಲಿ ಮುಗಿಯದ ಕುರ್ಚಿ...

ಕಾಂಗ್ರೆಸ್‌ನಲ್ಲಿ ಮುಗಿಯದ ಕುರ್ಚಿ ಕಿತ್ತಾಟ!

ಹೊನಕೆರೆ ನಂಜುಂಡೇಗೌಡಹೊನಕೆರೆ ನಂಜುಂಡೇಗೌಡ22 Nov 2025 10:16 AM IST
share
ಕಾಂಗ್ರೆಸ್‌ನಲ್ಲಿ ಮುಗಿಯದ ಕುರ್ಚಿ ಕಿತ್ತಾಟ!

ಕಾಂಗ್ರೆಸ್ ವರಿಷ್ಠರ ನಡೆ ಗಮನಿಸಿದರೆ ಸದ್ಯಕ್ಕೆ ಕರ್ನಾಟಕದಲ್ಲಿ ಮುಖ್ಯಮಂತ್ರಿ ಬದಲಾವಣೆಯೂ ಆಗುವುದಿಲ್ಲ. ಸಂಪುಟ ಪುನರ್‌ಚನೆಯೂ ನಡೆಯುವುದಿಲ್ಲ. ಯಥಾಸ್ಥಿತಿ ಮುಂದುವರಿಯಬಹುದು. ಈ ಕಾರಣಕ್ಕಾಗಿಯೇ ‘ಕಾಂಗ್ರೆಸ್ ಪಕ್ಷದೊಳಗೆ ತಾವಂದುಕೊಂಡಂತೆ ಎಲ್ಲವೂ ನಡೆಯುತ್ತಿದೆ’ ಎಂದು ಸಿದ್ದರಾಮಯ್ಯ ತಮ್ಮ ಆಪ್ತರ ಬಳಿ ಹೇಳಿಕೊಂಡಿದ್ದಾರೆ. ಮುಂದಿನ ವರ್ಷದ ಬಜೆಟ್ ಅನ್ನು ತಾವೇ ಮಂಡನೆ ಮಾಡುವುದಾಗಿಯೂ ಸ್ಪಷ್ಟಪಡಿಸಿದ್ದಾರೆ. ಈ ಪರಿಸ್ಥಿತಿಯಲ್ಲಿ ಡಿಕೆಶಿ ಅವರು ಏನು ಮಾಡುತ್ತಾರೆ ಎಂಬುದು ನಿಗೂಢ.

ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸರಕಾರಕ್ಕೀಗ ಎರಡೂವರೆ ವರ್ಷ ಎರಡೂವರೆ ವರ್ಷದ ಸಾಧನೆಯನ್ನು ಹಿಂದಿರುಗಿ ನೋಡಿದರೆ ಕಾಣುವುದು ಅಧಿಕಾರಕ್ಕಾಗಿ ನಡೆಯುತ್ತಿರುವ ಕಿತ್ತಾಟ, ಗುಂಪುಗಾರಿಕೆ, ಬಣ ರಾಜಕಾರಣ. ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನಡುವೆ ಆಗಿದೆ ಎನ್ನಲಾದ ‘ಅಧಿಕಾರ ಹಂಚಿಕೆ ಮೌಖಿಕ ಒಪ್ಪಂದ’ ಕುರಿತೇ ಮಾಧ್ಯಮಗಳಲ್ಲಿ ಪ್ರತಿನಿತ್ಯ ಚರ್ಚೆ. ನಿಜವಾಗಿ ಒಪ್ಪಂದ ಆಗಿದ್ದರೆ ಸಿದ್ದರಾಮಯ್ಯ ಅಧಿಕಾರ ಹಸ್ತಾಂತರಿಸಬೇಕಿತ್ತು. ಆದರೆ, ಅಧಿಕಾರ ಬಿಡುವ ಲಕ್ಷಣ ಕಾಣುತ್ತಿಲ್ಲ. ಇನ್ನೊಂದೆಡೆ, ಡಿಕೆಶಿ ಅವರೂ ಪಟ್ಟು ಸಡಿಲಿಸುತ್ತಿಲ್ಲ. ಶತಾಯಗತಾಯ ಮುಖ್ಯಮಂತ್ರಿ ಆಗಬೇಕೆಂದು ಕಸರತ್ತು ಮಾಡುತ್ತಿದ್ದಾರೆ. ಇದು ಬಿಹಾರ ಚುನಾವಣೆಯಲ್ಲಿ ನೆಲ ಕಚ್ಚಿರುವ ಕಾಂಗ್ರೆಸ್ ಪಕ್ಷದ ವರಿಷ್ಠರಿಗೆ ನುಂಗಲೂ ಆಗದ, ಉಗಿಯಲೂ ಆಗದ ಬಿಸಿ ತುಪ್ಪ!.

2023ರಲ್ಲಿ ಕಾಂಗ್ರೆಸ್ ಪಕ್ಷ ಬಹುಮತ ಪಡೆದು, ಸರಕಾರ ರಚನೆಯಾದ ಸಮಯದಲ್ಲಿ ‘ಅಧಿಕಾರ ಹಂಚಿಕೆ ಒಪ್ಪಂದ ಆಗಿತ್ತೇ’ ಎಂದು ಕಾಂಗ್ರೆಸಿಗರು ಮಾತ್ರವಲ್ಲ, ಇಡೀ ರಾಜ್ಯದ ಜನ ಕೇಳುತ್ತಿದ್ದಾರೆ. ಸಿದ್ದರಾಮಯ್ಯ, ‘ಅಧಿಕಾರ ಹಂಚಿಕೆ ಒಪ್ಪಂದ ಆಗಿಲ್ಲ’ ಎಂದಿದ್ದಾರೆ. ‘ಒಪ್ಪಂದ ಆಗಿದೆ’ ಎಂದು ಡಿಕೆಶಿ ಹೇಳುತ್ತಿದ್ದಾರೆ. ಇದರಲ್ಲಿ ಸತ್ಯ ಯಾವುದು; ಸುಳ್ಳು ಯಾವುದು ಎಂದು ಗೊತ್ತಾಗುವುದಾದರೂ ಹೇಗೆ? ಸಮಸ್ಯೆ ಬಗೆಹರಿಸಬೇಕಾದ ಹೈಕಮಾಂಡ್ ಮೌನವಾಗಿದೆ. ಡಿಕೆಶಿ ಅವರ ಕೆಲವು ಬೆಂಬಲಿಗರು ‘ದೊರೆ’ (ರಾಹುಲ್ ಗಾಂಧಿ) ಅವರನ್ನು ಭೇಟಿ ಮಾಡಲು ದಿಲ್ಲಿಯಲ್ಲಿ ಬೀಡು ಬಿಟ್ಟಿದ್ದಾರೆ. ಉಳಿದ ನಾಯಕರ ಮನೆಗಳಿಗೆ ಎಡತಾಕುತ್ತಿದ್ದಾರೆ. ಸಿದ್ದರಾಮಯ್ಯ ಮೊನ್ನೆಯಷ್ಟೇ ಲೋಕಸಭೆ ವಿರೋಧ ಪಕ್ಷದ ನಾಯಕರನ್ನು ಕಂಡು ಬೆಂಗಳೂರಿಗೆ ಮರಳಿದ್ದಾರೆ.

ಕಾಂಗ್ರೆಸ್ ಒಳಗಿರುವ ಗುಂಪುಗಾರಿಕೆ, ಕಿತ್ತಾಟದ ಪರಿಣಾಮ ಆಡಳಿತದ ಮೇಲಾಗುತ್ತಿದೆ. ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಯಂತೆ ಸರಕಾರ ಅನುಷ್ಠಾನಗೊಳಿಸಿರುವ ಐದು ಗ್ಯಾರಂಟಿ ಯೋಜನೆಗಳು ಜನರ ಕಣ್ಣಿಗೆ ಬೀಳದಂತಾಗುತ್ತಿದೆ. ಬೇರೆ ರಾಜ್ಯಗಳಲ್ಲಿ ಕರ್ನಾಟಕದ ಮಾದರಿಯನ್ನು ಅನುಸರಿಸುತ್ತಿದ್ದರೂ ರಾಜ್ಯದ ಯಾವೊಬ್ಬ ಸಚಿವರು ಅಥವಾ ಶಾಸಕರು ಇದರ ಬಗ್ಗೆ ಮಾತನಾಡದ ಸ್ಥಿತಿಗೆ ಬಂದು ನಿಂತಿದ್ದಾರೆ. ಅಧಿಕಾರಿಗಳಿಗೆ ಲಂಗು ಲಗಾಮು ಇಲ್ಲವಾಗಿದೆ. ಸರಕಾರದ ಒಳಗೆ ಎರಡೆರಡು ಅಧಿಕಾರ ಕೇಂದ್ರಗಳಿವೆ. ಯಾರ ಆದೇಶ ಪಾಲಿಸಬೇಕೆಂದು ಅಧಿಕಾರಿಗಳಿಗೆ ಗೊಂದಲ. ಇದರಿಂದ ಆಡಳಿತ ಯಂತ್ರ ನಿಷ್ಕ್ರಿಯವಾಗಿರುವುದು ಸ್ಪಷ್ಟ.

ವಿರೋಧ ಪಕ್ಷ ಬಿಜೆಪಿಯಲ್ಲೂ ಕಚ್ಚಾಟವಿರುವುದರಿಂದ ಸರಕಾರದ ವೈಫಲ್ಯಗಳ ವಿರುದ್ಧ ಹೋರಾಡಲು ಅಸಮರ್ಥವಾಗಿದೆ. 2013ರಿಂದ 2018ರವರೆಗೆ ಸರಕಾರ ನಡೆಸಿದ್ದ ಸಿದ್ದರಾಮಯ್ಯನವರಿಗೆ ಆಡಳಿತದ ಮೇಲಿದ್ದ ಬಿಗಿ ಈಗ ಸಡಿಲವಾದಂತೆ ಕಂಡುಬರುತ್ತಿದೆ. ಎರಡೂವರೆ ವರ್ಷದ ಆಡಳಿತ ಪೇಲವವಾಗಿ ಕಾಣುತ್ತಿದೆ. ವಿಧಾನಮಂಡಲದ ಒಳಗೆ ಹಾಗೂ ಹೊರಗೆ ಮುಖ್ಯಮಂತ್ರಿ ಸೊರಗಿದಂತೆ ಕಾಣುತ್ತಿದ್ದಾರೆ. ಮೊದಲಿನ ಮೊನಚು ಕಳೆದುಕೊಂಡಿದ್ದಾರೇನೊ ಎಂದು ಅನುಮಾನ ಬರುತ್ತಿದೆ. ಹಿಂದೆ ಸಿದ್ದರಾಮಯ್ಯ ಮಾತನಾಡಲು ನಿಂತರೆ ಆ ಖದರ್ ಬೇರೆ. ಧ್ವನಿಯೇ ಬೇರೆ. ವಯಸ್ಸಿನ ಕಾರಣಕ್ಕೆ ಅವರು ಮೆತ್ತಗಾಗಿರಬಹುದು ಎಂದು ಕೆಲವರು ಹೇಳುತ್ತಿದ್ದಾರೆ.

ಆದರೆ, ಈಚೆಗೆ ಮುಖ್ಯಮಂತ್ರಿ ಮಗ, ವಿಧಾನಪರಿಷತ್ ಸದಸ್ಯ ಯತೀಂದ್ರ, ‘‘ನನ್ನ ತಂದೆ ರಾಜಕೀಯದ ಕೊನೆಯ ಘಟ್ಟದಲ್ಲಿದ್ದಾರೆ. ವೈಚಾರಿಕವಾಗಿ ಪ್ರಗತಿಪರ ಸಿದ್ಧಾಂತ ಹೊಂದಿರುವ ಸತೀಶ್ ಜಾರಕಿಹೊಳಿ ನಾಯಕತ್ವ ವಹಿಸಿಕೊಂಡು ಮಾರ್ಗದರ್ಶನ ಮಾಡಲು ಅರ್ಹರಾಗಿದ್ದಾರೆ’’ ಎಂದು ಹೇಳಿಕೆ ಕೊಟ್ಟರು. ಇದು ಸಿದ್ದರಾಮಯ್ಯನವರ ಸಾಮರ್ಥ್ಯದ ಬಗ್ಗೆಯೇ ಸಂಶಯ ಹುಟ್ಟಿಸಿತು. ಅಪ್ಪನ ಬಗ್ಗೆ ಮಗ ಆಡಿದ ಮಾತಿನಿಂದ ರಾಜಕೀಯ ಪಡಸಾಲೆಯಲ್ಲಿ ಗುಸುಗುಸು ಶುರುವಾಯಿತು. ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ನಡುವೆ ಅಧಿಕಾರ ಒಪ್ಪಂದ ಆಗಿರಬಹುದು. ಆ ಬಗ್ಗೆ ಗೊಂದಲ ಹುಟ್ಟಿಸಲು ಯತೀಂದ್ರ ಜಾರಕಿಹೊಳಿ ಹೆಸರನ್ನು ಹರಿಯಬಿಟ್ಟಿರಬಹುದು ಎಂದು ಅರ್ಥೈಸಲಾಯಿತು. ಸಾರ್ವಜನಿಕವಾಗಿ ಪಕ್ಷದ ಆಂತರಿಕ ವಿಷಯಗಳನ್ನು ಪ್ರಸ್ತಾವಿಸಿದ್ದು ಯತೀಂದ್ರ ರಾಜಕೀಯವಾಗಿ ಇನ್ನೂ ಮಾಗಿಲ್ಲ ಎಂದು ತೋರಿಸಿತು. ಪಕ್ಷದ ವೇದಿಕೆಯಲ್ಲಿ ಚರ್ಚಿಸಬೇಕಾದ ಇಂಥ ವಿಚಾರಗಳನ್ನು ಬಹಿರಂಗ ಸಭೆಯಲ್ಲಿ ಹೇಳಿದ ಮಗನಿಗೆ ಮುಖ್ಯಮಂತ್ರಿ ಅವರಾದರೂ ಕಿವಿ ಹಿಂಡಬೇಕಿತ್ತು. ಹಿರಿಯ ನಾಯಕರಾದರೂ ಎಚ್ಚರಿಕೆ ಕೊಡಬೇಕಿತ್ತು. ಅದ್ಯಾವುದೂ ಆಗಲಿಲ್ಲ. ಮುಖ್ಯಮಂತ್ರಿ ಮಗ ಎಂಬ ‘ರಕ್ಷಾ ಕವಚ’ದೊಳಗೆ ಅವರು ಸೇರಿಕೊಂಡರು.

ಮುಖ್ಯಮಂತ್ರಿ ಕಾರ್ಯಕ್ಷಮತೆ ಕುಗ್ಗಲು ವಯಸ್ಸೊಂದೇ ಕಾರಣವಲ್ಲ. ಪಕ್ಷ ಮತ್ತು ಸರಕಾರದ ಒಳಗಿನ ಒತ್ತಡಗಳೂ ಅವರನ್ನು ಮೆತ್ತಗೆ ಮಾಡಿವೆ. ಈ ಹಿಂದಿನ ಅವಧಿಯಲ್ಲಿ ಸಿದ್ದರಾಮಯ್ಯನವರಿಗೆ ‘ಹಿತ ಶತ್ರು’ಗಳಿರಲಿಲ್ಲ. ಗುಂಪುಗಾರಿಕೆ ಇರಲಿಲ್ಲ. ಅವರು ಪ್ರಶ್ನಾತೀತ ನಾಯಕರಾಗಿದ್ದರು. ಡಿಕೆಶಿ ಅವರೂ ಈಗಿನಷ್ಟು ಪ್ರಬಲವಾಗಿರಲಿಲ್ಲ. ಸಂಪುಟ ದರ್ಜೆ ಸಚಿವರಾಗಿದ್ದರು. ಪಕ್ಷದ ಕಾರ್ಯಾಧ್ಯಕ್ಷರಾಗಿಯೂ ಕೆಲಸ ಮಾಡಿದ್ದರು. ಅವರು ಪ್ರದೇಶ ಕಾಂಗ್ರೆಸ್ ಅಧ್ಯಕ್ಷರಾಗಿದ್ದು ಐದು ವರ್ಷಗಳ ಹಿಂದೆ. ಈ ಹೊಣೆ ಹೊರಲು ಅನೇಕರು ಹಿಂದೇಟು ಹಾಕಿದ ಸಮಯದಲ್ಲಿ ಡಿಕೆಶಿ ಜವಾಬ್ದಾರಿ ಹೊತ್ತರು. ಅದಕ್ಕೆ ನ್ಯಾಯ ಒದಗಿಸಿದರು.

ಹಿಂದಿನ ಅವಧಿಯಲ್ಲಿ ವಿರೋಧ ಪಕ್ಷವಾಗಿದ್ದ ಕಾಂಗ್ರೆಸ್ ಅನ್ನು ಅಧಿಕಾರಕ್ಕೆ ತರುವಲ್ಲಿ ಸಿದ್ದರಾಮಯ್ಯ ಮತ್ತು ಡಿಕೆಶಿ ಇಬ್ಬರ ಪರಿಶ್ರಮವೂ ಇದೆ. ಒಬ್ಬರು ಜನ ನಾಯಕ. ಇನ್ನೊಬ್ಬರು ಚತುರ ಸಂಘಟಕ. ಸಿದ್ದರಾಮಯ್ಯ ಅವರ ಹಿಂದೆ ದೊಡ್ಡ ಜನ ಸಮೂಹವಿದೆ. ‘ಅಹಿಂದ ಟ್ಯಾಗ್’ ಇದೆ. ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಬಳಿಕ ದೇಶದ ಹಿಂದುಳಿದ ವರ್ಗಗಳ ಪ್ರಬಲ ನಾಯಕ ಸಿದ್ದರಾಮಯ್ಯ. ಡಿಕೆಶಿ ಅವರೇನೂ ಕಡಿಮೆಯಿಲ್ಲ. ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಟ್ಟಾಳು. ಪಕ್ಷಕ್ಕಾಗಿ ಏನು ಬೇಕಾದರೂ ಮಾಡಬಲ್ಲ ಸಾಹಸಿ. ಹಿಂದೆ ಅಹ್ಮದ್ ಪಟೇಲ್ ಅವರನ್ನು ರಾಜ್ಯಸಭೆಗೆ ಆಯ್ಕೆ ಮಾಡಿದ ಸಮಯದಲ್ಲಿ ಗುಜರಾತಿನ ಕಾಂಗ್ರೆಸ್ ಶಾಸಕರನ್ನು ಬಿಡದಿ ಸಮೀಪದ ‘ಈಗಲ್‌ಟನ್ ರೆಸಾರ್ಟ್’ನಲ್ಲಿ ಜೋಪಾನ ಮಾಡಿದ್ದವರು. ಅದಕ್ಕಾಗಿ ನರೇಂದ್ರ ಮೋದಿ, ಅಮಿತ್ ಶಾ ಅವರ ವಿರೋಧ ಕಟ್ಟಿಕೊಂಡು ಕಷ್ಟನಷ್ಟ ಎದುರಿಸಿದವರು. ಅನೇಕ ಸಂಕಷ್ಟದ ಸಮಯದಲ್ಲಿ ಪಕ್ಷವನ್ನು ಇಕ್ಕಟ್ಟಿನಿಂದ ಪಾರು ಮಾಡಿದವರು. ಈ ಕಾರಣಕ್ಕೆ ಸೋನಿಯಾ ಗಾಂಧಿ ಅವರಿಗೆ ಡಿಕೆಶಿ ‘ನೀಲಿಗಣ್ಣಿನ ಹುಡುಗ’ (ಬ್ಲೂ ಐಯ್ಡ್ ಬಾಯ್).

ಡಿಕೆಶಿ-ಸಿದ್ದರಾಮಯ್ಯನವರ ಕಿತ್ತಾಟದಿಂದಾಗಿ ಗಾಂಧಿ ಕುಟುಂಬದ ಮನೆಯಲ್ಲಿ ಎರಡು ಬಾಗಿಲು ಆಗಿವೆಯೆನ್ನಲಾಗುತ್ತಿದೆ. ಸೋನಿಯಾ ಮತ್ತು ಪ್ರಿಯಾಂಕ ಡಿಕೆಶಿ ಪರ ಅನುಕಂಪ ಹೊಂದಿದ್ದಾರೆ. ರಾಹುಲ್ ಸಿದ್ದರಾಮಯ್ಯ ಅವರನ್ನು ಬೆಂಬಲಿಸುತ್ತಿದ್ದಾರೆ ಎಂಬುದು ಗುಟ್ಟಲ್ಲ.

ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್‌ಸಿಂಗ್ ಸುರ್ಜೆವಾಲಾ, ರಾಹುಲ್ ಗಾಂಧಿ ಅವರಿಗೆ ಸಮೀಪವಿರುವ ಕೆ.ಸಿ. ವೇಣುಗೋಪಾಲ್ ಸಮ್ಮುಖದಲ್ಲಿ ಅಧಿಕಾರ ಹಂಚಿಕೆ ಒಪ್ಪಂದವಾಗಿದೆ ಎಂದು ಉಪಮುಖ್ಯಮಂತ್ರಿ ಕ್ಯಾಂಪ್ ಹೇಳುತ್ತಿದೆ. ಸೋಜಿಗ ಎಂದರೆ, ಸುರ್ಜೆವಾಲಾ ಅವರಾಗಲೀ ವೇಣುಗೋಪಾಲ್ ಅವರಾಗಲೀ ಈ ಬಗ್ಗೆ ಬಾಯಿ ಬಿಡುತ್ತಿಲ್ಲ. ಕರ್ನಾಟಕದವರೇ ಆದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಾದರೂ ಮಾತನಾಡಬೇಕಿತ್ತು. ಒಪ್ಪಂದದ ಬಗ್ಗೆ ಡಿಕೆಶಿ ಮತ್ತು ಸಿದ್ದರಾಮಯ್ಯ ಬಿಟ್ಟರೆ ಮೂರನೆಯವರು ಪ್ರಸ್ತಾಪಿಸುತ್ತಿಲ್ಲ. ಹೀಗಾಗಿ, ಎರಡೂ ಬಣಗಳ ನಡುವೆ ಜಟಾಪಟಿ ತಾರಕಕ್ಕೇರಿದೆ.

ಬಿಹಾರ ಚುನಾವಣೆಗೆ ಸ್ವಲ್ಪ ಮೊದಲು ದಿಲ್ಲಿಯಲ್ಲಿ ಪ್ರಮುಖ ಇಂಗ್ಲಿಷ್ ವಾಹಿನಿಯೊಂದಕ್ಕೆ ಸಂದರ್ಶನ ನೀಡಿದ್ದ ಸಿದ್ದರಾಮಯ್ಯ, ತಮಗೆ ಅಗತ್ಯ ಸಂಖ್ಯೆಯ ಶಾಸಕರ ಬೆಂಬಲವಿದೆ ಎಂದು ಹೈಕಮಾಂಡ್‌ಗೆ ಸಂದೇಶ ಕಳಿಸಿದ್ದರು. ‘‘ಮುಖ್ಯಮಂತ್ರಿ ಆಗಲು ಶಾಸಕರ ಬೆಂಬಲಕ್ಕಿಂತ ಹೈಕಮಾಂಡ್ ಆಶೀರ್ವಾದ ಮುಖ್ಯ’’ ಎಂದಿದ್ದರು ಡಿಕೆಶಿ. ಇಬ್ಬರೂ ನಾಯಕರು ಹೇಳಿದ್ದು ಸರಿ ಇದೆ. 2014ರಲ್ಲಿ ನರೇಂದ್ರ ಮೋದಿ ಸರಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಮೇಲೆ ಕಾಂಗ್ರೆಸ್ ಚೇತರಿಸಿಕೊಳ್ಳಲಾಗದಷ್ಟು ದುರ್ಬಲವಾಗಿದೆ. ಸೋಲಿನ ಮೇಲೆ ಸೋಲು ಅನುಭವಿಸುತ್ತಿದೆ. 2014, 2019ರ ಲೋಕಸಭೆ ಚುನಾವಣೆಯ ಹೀನಾಯ ಸೋಲಿನ ಬಳಿಕ 2024ರ ಚುನಾವಣೆಯಲ್ಲಿ ಕೊಂಚ ಬಲ ಹೆಚ್ಚಿಸಿಕೊಂಡಿದೆ. ರಾಹುಲ್ ಗಾಂಧಿ ಕೈಗೊಂಡಿದ್ದ ‘ಭಾರತ್ ಜೋಡೊ ಯಾತ್ರೆ’ ಪರಿಶ್ರಮ ಗೆಲುವಿನ ಹಿಂದಿದೆ. ಇದರ ಬೆನ್ನಲ್ಲೇ ನಡೆದ ಮಹಾರಾಷ್ಟ್ರ, ಹರ್ಯಾಣ ಚುನಾವಣೆಯಲ್ಲೂ ಪಕ್ಷ ಹಿನ್ನಡೆ ಕಂಡಿದೆ. ಬಿಹಾರ ಚುನಾವಣೆ ಬಗ್ಗೆ ಪ್ರತ್ಯೇಕವಾಗಿ ಹೇಳಬೇಕಿಲ್ಲ.

ಬಿಹಾರದಲ್ಲಿ ‘ಇಂಡಿಯಾ ಬ್ಲಾಕ್’ ಮತಗಳು ಕೊಂಚವೂ ಆ ಕಡೆ ಈ ಕಡೆ ಆಗಿಲ್ಲ. ಎದುರಾಳಿ ಪಕ್ಷಗಳಿಗೆ ಹೋಗಿಲ್ಲ. ಆರ್‌ಜೆಡಿಯ ಶೇ. 23ರಷ್ಟು ಮತಗಳು ಅದಕ್ಕೇ ಬಿದ್ದಿವೆ. ಕಾಂಗ್ರೆಸ್ ಮತ ಬ್ಯಾಂಕ್‌ನಲ್ಲಿ ಶೇ. 8.71 ಮತಗಳು ಹಾಗೇ ಉಳಿದುಕೊಂಡಿದೆ. ಇವು ಸೀಟುಗಳಾಗಿ ಪರಿವರ್ತನೆ ಆಗಿಲ್ಲ ಎಂಬುದು ಗಮನಿಸಬೇಕಾದ ಅಂಶ. ಇಲ್ಲಿ 1990ರಲ್ಲಿ ಅಧಿಕಾರ ಕಳೆದುಕೊಂಡ ಕಾಂಗ್ರೆಸ್ ಮೂರೂವರೆ ದಶಕಗಳ ಬಳಿಕವೂ ಚೇತರಿಸಿಕೊಂಡಿಲ್ಲ. 2015ರಲ್ಲಿ 27 ಸ್ಥಾನಗಳನ್ನು ಕಾಂಗ್ರೆಸ್ ಗೆದ್ದಿತ್ತು. ಹಿಂದಿನ ಚುನಾವಣೆಯಲ್ಲಿ ಅದಕ್ಕೆ ಸಿಕ್ಕಿದ್ದು 19 ಸ್ಥಾನ. ಈ ಸಲ ಸ್ಪರ್ಧಿಸಿದ್ದು 61 ಕ್ಷೇತ್ರಗಳಲ್ಲಿ. ಗೆದ್ದಿದ್ದು ಬರೀ ನಾಲ್ಕು ಕಡೆ. ಕನಿಷ್ಠ 25 ಕ್ಷೇತ್ರಗಳಲ್ಲಾದರೂ ಗೆದ್ದಿದ್ದರೆ ಕಾಂಗ್ರೆಸ್ ವರಿಷ್ಠರು ಮೈ ಕೊಡವಿ ಏಳುತ್ತಿದ್ದರು. ಆಗ ಪರಿಸ್ಥಿತಿ ಬೇರೆಯಾಗುತ್ತಿತ್ತು. ಬಿಹಾರ ಚುನಾವಣೆ ಹಿನ್ನಡೆ ಕಾಂಗ್ರೆಸ್‌ಗೆ ನಷ್ಟ ಆಗಿರಬಹುದು. ಸಿದ್ದರಾಮಯ್ಯನವರಿಗಂತೂ ಲಾಭವಾಗಿದೆ.

ಡಿಕೆಶಿ ಅವರಿಗೆ ಮುಖ್ಯಮಂತ್ರಿ ಕುರ್ಚಿ ಬೇಕು. ‘ಈಗ ಸಿಗದಿದ್ದರೆ ಮತ್ಯಾವಾಗಲೂ ಸಿಗುವುದಿಲ್ಲ’ ಎಂದು ಅವರು ನಂಬಿ, ನಡೆದುಕೊಳ್ಳುತ್ತಿರುವ ಅಜ್ಜಯ್ಯ ಭವಿಷ್ಯ ಹೇಳಿದ್ದಾರಂತೆ. ಅದಕ್ಕಾಗಿ ಎಲ್ಲ ರೀತಿಯ ತಂತ್ರ ಮಾಡ ಬಹುದು. ಶಾಸ್ತ್ರ- ಸಂಪ್ರದಾಯಗಳನ್ನು ಅಷ್ಟಾಗಿ ನಂಬದ ಸಿದ್ದರಾಮಯ್ಯ ಸಚಿವ ಸಂಪುಟ ಪುನರ್ ರಚನೆಗೆ ಪ್ರಯತ್ನಿಸುತ್ತಿದ್ದಾರೆ. ಸಂಪುಟ ಪುನರ್‌ರಚನೆಗೆ ಅನುಮತಿ ಸಿಕ್ಕರೆ ತಾವು ಸೇಫ್. ತಮ್ಮ ಕುರ್ಚಿಯೂ ಸೇಫ್ ಎಂದು ಭಾವಿಸಿದ್ದಾರೆ. ‘ಬಿಜೆಪಿ ವೋಟ್ ಚೋರಿ’ ಆರೋಪ ಮುಂದಿಟ್ಟುಕೊಂಡು ಬಿಹಾರದಲ್ಲಿ ರಾಹುಲ್ ಯಾತ್ರೆ ನಡೆಸುತ್ತಿದ್ದ ಸಂದರ್ಭದಲ್ಲಿ ವಿವಾದಾತ್ಮಕ ಹೇಳಿಕೆ ಕೊಟ್ಟು ಸಚಿವ ಸ್ಥಾನ ಕಳೆದುಕೊಂಡ ಕೆ.ಎನ್. ರಾಜಣ್ಣ, ‘ರಾಜ್ಯದಲ್ಲಿ ನವೆಂಬರ್‌ನಲ್ಲಿ ಕ್ರಾಂತಿ ಆಗಲಿದೆ’ ಎಂದು ಹೇಳಿದ್ದರು. ಅವರು ಯಾವ ಅರ್ಥದಲ್ಲಿ ಕ್ರಾಂತಿ ಪದ ಬಳಸಿದ್ದರೋ ಗೊತ್ತಿಲ್ಲ. ನವೆಂಬರ್ ಮುಗಿಯುತ್ತಿದ್ದರೂ ಕ್ರಾಂತಿಯ ಸುಳಿವಿಲ್ಲ. ರಾಜಣ್ಣ ಅವರ ಬಾಂಬ್ ಇನ್ನು ಸ್ಫೋಟಿಸಿಲ್ಲ.

ಕಾಂಗ್ರೆಸ್ ವರಿಷ್ಠರ ನಡೆ ಗಮನಿಸಿದರೆ ಸದ್ಯಕ್ಕೆ ಕರ್ನಾಟಕದಲ್ಲಿ ಮುಖ್ಯಮಂತ್ರಿ ಬದಲಾವಣೆಯೂ ಆಗುವುದಿಲ್ಲ. ಸಂಪುಟ ಪುನರ್‌ರಚನೆಯೂ ನಡೆಯುವುದಿಲ್ಲ. ಯಥಾಸ್ಥಿತಿ ಮುಂದುವರಿಯಬಹುದು. ಈ ಕಾರಣಕ್ಕಾಗಿಯೇ ‘ಕಾಂಗ್ರೆಸ್ ಪಕ್ಷದೊಳಗೆ ತಾವಂದುಕೊಂಡಂತೆ ಎಲ್ಲವೂ ನಡೆಯುತ್ತಿದೆ’ ಎಂದು ಸಿದ್ದರಾಮಯ್ಯ ತಮ್ಮ ಆಪ್ತರ ಬಳಿ ಹೇಳಿಕೊಂಡಿದ್ದಾರೆ. ಮುಂದಿನ ವರ್ಷದ ಬಜೆಟ್ ಅನ್ನು ತಾವೇ ಮಂಡನೆ ಮಾಡುವುದಾಗಿಯೂ ಸ್ಪಷ್ಟಪಡಿಸಿದ್ದಾರೆ. ಈ ಪರಿಸ್ಥಿತಿಯಲ್ಲಿ ಡಿಕೆಶಿ ಅವರು ಏನು ಮಾಡುತ್ತಾರೆ ಎಂಬುದು ನಿಗೂಢ.

ಸಿದ್ದರಾಮಯ್ಯ ಮತ್ತು ಡಿಕೆಶಿ ಅವರ ನಡುವಿನ ಕಿತ್ತಾಟದಲ್ಲಿ ಯಾರಾದರೂ ಮೂರನೆಯವರು ಮುಖ್ಯಮಂತ್ರಿ ಆಗಬಹುದೇ ಎಂಬ ಚರ್ಚೆಯೂ ನಡೆಯುತ್ತಿದೆ. ಸತೀಶ್ ಜಾರಕಿಹೊಳಿ ಹೆಸರನ್ನು ಯತೀಂದ್ರ ತೇಲಿ ಬಿಟ್ಟಿದ್ದರೂ ಅವಕಾಶಗಳು ಕಡಿಮೆ. ಇದುವರೆಗೆ, ರಾಜ್ಯದಲ್ಲಿ ಯಾವ ದಲಿತ ನಾಯಕರೂ ಮುಖ್ಯಮಂತ್ರಿ ಆಗಿಲ್ಲ ಎಂಬ ವಾದವೂ ಇದೆ. ಅಕಸ್ಮಾತ್ ಹೈಕಮಾಂಡ್ ಇಂಥ ತೀರ್ಮಾನಕ್ಕೆ ಬಂದರೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಹೆಸರು ಮುಂಚೂಣಿಗೆ ಬರಬಹುದು. ಖರ್ಗೆ ಅವರೂ ಅನಾರೋಗ್ಯದ ಕಾರಣ ನೀಡಿ ತಮ್ಮನ್ನು ರಾಜ್ಯಕ್ಕೆ ಕಳುಹಿಸುವಂತೆ ವರಿಷ್ಠರಿಗೆ ಮನವಿ ಮಾಡಿದ್ದಾರೆ. ಅರ್ಹತೆ ಇದ್ದರೂ ತಮಗೆ ಅವಕಾಶ ಸಿಕ್ಕಿಲ್ಲವೆಂದು ಹೇಳಿದ್ದಾರೆ. ಖರ್ಗೆ ಅವರ ಒಂದು ಒಳ್ಳೆಯ ಸ್ವಭಾವವನ್ನು ಮೆಚ್ಚಬೇಕು. ಅವರು ತಮ್ಮ ಮನಸ್ಸಿನ ಇಂಗಿತ ವ್ಯಕ್ತಪಡಿಸುತ್ತಾರೆ ವಿನಾ ತಮಗೆ ಸ್ಥಾನಮಾನ ಬೇಕೇ ಬೇಕು ಎಂದು ಹಟ ಹಿಡಿಯುವವರಲ್ಲ. ಅಲ್ಲದೆ, ದಲಿತ ಕೋಟಾದಡಿ ಮುಖ್ಯಮಂತ್ರಿ ಆಗಬೇಕು ಎಂದು ಅಪೇಕ್ಷಿಸುವವರೂ ಅಲ್ಲ. ಅವಕಾಶ ಸಿಕ್ಕರೆ ಡಾ. ಜಿ. ಪರಮೇಶ್ವರ್, ಕೆ.ಎಚ್. ಮುನಿಯಪ್ಪ, ಎಂ.ಬಿ. ಪಾಟೀಲ್ ಸೇರಿದಂತೆ ಅನೇಕರು ಮುಖ್ಯಮಂತ್ರಿ ಕುರ್ಚಿಗೆ ಟವೆಲ್ ಹಾಕುತ್ತಾರೆ.

ಮುಂದಿನ ವರ್ಷ ತಮಿಳುನಾಡು, ಅಸ್ಸಾಂ ಸೇರಿದಂತೆ ಅನೇಕ ರಾಜ್ಯಗಳ ವಿಧಾನಸಭೆಗಳಿಗೆ ಚುನಾವಣೆ ನಡೆಯಲಿದೆ. ಬಿಹಾರ ಚುನಾವಣೆ ಬಳಿಕ ‘ಇಂಡಿಯಾ’ ಬ್ಲಾಕ್ ದುರ್ಬಲವಾಗಿದೆ. ರಾಜ್ಯದ ಸಮಸ್ಯೆಯನ್ನು ಬಗೆಹರಿಸುವ ಕಡೆ ಹೈಕಮಾಂಡ್ ನಾಯಕರು ಗಮನ ಕೊಡದಿದ್ದರೆ ಮುಂಬರುವ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೂ ಹಾನಿಯಾಗಲಿದೆ. ಈ ಹಿನ್ನೆಲೆಯಲ್ಲಿ ದಿಲ್ಲಿ ನಾಯಕರು ಜನರಿಗೆ ಉತ್ತರದಾಯಿ ಆಗಬೇಕಿದೆ. ಅಧಿಕಾರ ಹಂಚಿಕೆ ಒಪ್ಪಂದ ಆಗಿದೆಯೇ ಎಂಬುದನ್ನು ಬಹಿರಂಗಪಡಿಸಬೇಕಿದೆ. ಸದ್ಯ ಚೆಂಡು ಹೈಕಮಾಂಡ್ ಅಂಗಳದಲ್ಲಿದೆ.

share
ಹೊನಕೆರೆ ನಂಜುಂಡೇಗೌಡ
ಹೊನಕೆರೆ ನಂಜುಂಡೇಗೌಡ
Next Story
X