Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ನೆಲದನಿ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಲಂಡನ್ ಡೈರಿ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಮಾಹಿತಿ ಮಾರ್ಗದರ್ಶನ
    • ಆರೋಗ್ಯ
    • ಓ ಮೆಣಸೇ
    • ಕೃತಿ ಪರಿಚಯ
    • ಝಲಕ್
    • ಬುಡಬುಡಿಕೆ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಸಂವಿಧಾನದ ಮೌಲ್ಯಗಳೇ ಭಾರತದ ಭವಿಷ್ಯದ...

ಸಂವಿಧಾನದ ಮೌಲ್ಯಗಳೇ ಭಾರತದ ಭವಿಷ್ಯದ ಭದ್ರತೆ

ಇಂದು ಸಂವಿಧಾನ ದಿನ

ಸಲೀಂ ಅಹ್ಮದ್ಸಲೀಂ ಅಹ್ಮದ್26 Nov 2026 12:02 PM IST
share
ಸಂವಿಧಾನದ ಮೌಲ್ಯಗಳೇ ಭಾರತದ ಭವಿಷ್ಯದ ಭದ್ರತೆ

ಡಾ. ಬಿ.ಆರ್. ಅಂಬೇಡ್ಕರ್, ಪಂಡಿತ್ ಜವಾಹರಲಾಲ ನೆಹರೂ, ಸರ್ದಾರ್ ವಲ್ಲಭಭಾಯಿ ಪಟೇಲ್, ಡಾ. ರಾಜೇಂದ್ರ ಪ್ರಸಾದ್ ಸೇರಿದಂತೆ ಸಂವಿಧಾನ ರಚನೆಯಲ್ಲಿ ಕೊಡುಗೆ ನೀಡಿದ ಮಹನೀಯರು ಕೇವಲ ಕಾನೂನು ರೂಪಿಸಲಿಲ್ಲ. ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ಭಾರತವನ್ನು ಕಟ್ಟುವ ಕನಸಿಗೆ ಭದ್ರ ಬುನಾದಿ ಹಾಕಿದರು.

ಆದರೆ, ಇಂದು ಸಂವಿಧಾನ ನಮಗೆ ನೀಡಿರುವ ಸ್ವಾತಂತ್ರ್ಯ, ಸಮಾನತೆ, ನ್ಯಾಯ ಮತ್ತು ಭ್ರಾತೃತ್ವದ ಮೌಲ್ಯಗಳು ನಮ್ಮ ಸಾರ್ವಜನಿಕ ಬದುಕಿನಲ್ಲಿ ನಿಜವಾಗಿಯೂ ರೂಢಿಯಲ್ಲಿವೆಯೇ?

ವಿವಿಧತೆಯಲ್ಲಿ ಏಕತೆಯನ್ನು ತನ್ನ ಜೀವಾಳವಾಗಿಸಿಕೊಂಡಿರುವ ದೇಶ ಭಾರತ. ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಕೂಡ. ಇಂತಹ ಭಾರತಕ್ಕೆ ಸಂವಿಧಾನ ಎಂಬುದು ಕೇವಲ ನೀತಿ ನಿರೂಪಣೆಯ ಗುಚ್ಛವಲ್ಲ. ಅದು ಕೋಟ್ಯಂತರ ಭಾರತೀಯರ ಹಕ್ಕುಗಳ ರಕ್ಷಾ ಕವಚ. ಭಾರತ ಎಂಬ ನಾಡಿನ ನಿಜ ಚೇತನ. ಸಮಾನತೆ ಮತ್ತು ಸಾಮಾಜಿಕ ನ್ಯಾಯದ ಭರವಸೆ. ಸ್ವಾತಂತ್ರ್ಯ, ಭ್ರಾತೃತ್ವ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಜೀವಂತವಾಗಿಡುವ ಆಶಯಗಳ ಸಾಕಾರ ಸಾಧನ.

ಡಾ. ಬಿ.ಆರ್. ಅಂಬೇಡ್ಕರ್ ಅವರ ನೇತೃತ್ವದ ಕರಡು ಸಮಿತಿ ಹಾಗೂ ಸಂವಿಧಾನ ರಚನೆಯಲ್ಲಿ ಪಾಲ್ಗೊಂಡ ಮಹನೀಯರ ದೂರದೃಷ್ಟಿ, ತ್ಯಾಗ ಮತ್ತು ಅಪಾರ ಚಿಂತನೆಯ ಫಲವಾಗಿ ನಮಗೆ ಈ ಶ್ರೇಷ್ಠ ಸಂವಿಧಾನ ದೊರಕಿದೆ. 1949ರ ನ. 26ರಂದು ಸಂವಿಧಾನ ಸಭೆಯು ಸಂವಿಧಾನವನ್ನು ಅಂಗೀಕರಿಸಿತು. 1950ರ ಜನವರಿ 26ರಂದು ಸಂವಿಧಾನ ಜಾರಿಗೆ ಬಂದರೂ ಅದರ ಮೌಲ್ಯಗಳನ್ನು ಸ್ಮರಿಸಿ ಗೌರವಿಸುವ ಉದ್ದೇಶದಿಂದ ನವೆಂಬರ್ 26ರಂದು ಸಂವಿಧಾನ ದಿನವನ್ನು ಆಚರಿಸಲಾಗುತ್ತದೆ.

ಸಂವಿಧಾನದ ಪೀಠಿಕೆಯ ಮೊದಲ ಪದಗಳೇ ನಮ್ಮ ಗಣರಾಜ್ಯದ ಆತ್ಮವನ್ನು ಎತ್ತಿ ತೋರುತ್ತವೆ. ‘ನಾವು, ಭಾರತದ ಜನತೆ’ (ವಿ ದಿ ಪೀಪಲ್ ಆಫ್ ಇಂಡಿಯಾ) ಎಂಬುದು ಅತ್ಯಂತ ಪ್ರಬಲ ಪ್ರಜಾಸತ್ತಾತ್ಮಕ ಸಂದೇಶ. ನಮ್ಮ ಸಂವಿಧಾನ ನ್ಯಾಯದ ಭರವಸೆ, ದುರ್ಬಲರಿಗೆ ಧೈರ್ಯ, ಶೋಷಿತರಿಗೆ ಸಮಾನತೆಯ ಹಕ್ಕು ಹಾಗೂ ಪ್ರತಿಯೊಬ್ಬ ಭಾರತೀಯನಿಗೂ ಘನತೆಯಿಂದ ಬದುಕುವ ಅವಕಾಶ ನೀಡುತ್ತಿರುವ ಕಾನೂನಾತ್ಮಕ ದಾರಿದೀಪ. ಇದನ್ನು ನಾವೆಲ್ಲರೂ ಅರಿಯಬೇಕು.

ನಮ್ಮ ಸಂವಿಧಾನವೇ ವಿಶೇಷಗಳ ಹೂರಣ

ನಮ್ಮ ಸಂವಿಧಾನ ಹಲವು ವಿಶೇಷಗಳ ಹೂರಣ. ಮೂಲ ಸಂವಿಧಾನವು 395 ವಿಧಿಗಳು, 22 ಭಾಗಗಳು ಮತ್ತು 8 ಅನುಸೂಚಿ ಹೊಂದಿದ್ದ ವಿಶ್ವದ ಅತಿ ದೊಡ್ಡ ಲಿಖಿತ ಸಂವಿಧಾನ.

ಇಂಗ್ಲಿಷ್ ಮತ್ತು ಹಿಂದಿ ಎರಡರಲ್ಲೂ ಕೈಬರಹದ ಕ್ಯಾಲಿಗ್ರಫಿಯಲ್ಲಿ ಬರೆಯಲಾಗಿದ್ದು, ಸಂವಿಧಾನ ಮೂಲ ಪ್ರತಿಗಳನ್ನು ಈಗಲೂ ಸಂಸತ್ ಭವನದ ವಿಶೇಷ ಸಂರಕ್ಷಣಾ ವ್ಯವಸ್ಥೆಯಲ್ಲಿ ಹೀಲಿಯಂ ತುಂಬಿದ ಪೆಟ್ಟಿಗೆಗಳಲ್ಲಿ ಸಂರಕ್ಷಿಸಲಾಗಿದೆ.

ಧರ್ಮನಿರಪೇಕ್ಷತೆ ಸಂವಿಧಾನದ ಆಶಯ

ಸಂವಿಧಾನ ರಚನೆಕಾರರು ಜಗತ್ತಿನ ಪ್ರಮುಖ ದೇಶಗಳ ಸಂವಿಧಾನಗಳನ್ನು ಅಧ್ಯಯನ ಮಾಡಿ, ಉತ್ತಮ ಅಂಶಗಳನ್ನು ಭಾರತದ ಪರಿಸ್ಥಿತಿಗೆ ತಕ್ಕಂತೆ ಅಳವಡಿಸಿಕೊಂಡಿದ್ದಾರೆ. ಬ್ರಿಟನ್‌ನಿಂದ ಸಂಸದೀಯ ಪದ್ಧತಿ, ಅಮೆರಿಕದಿಂದ ಮೂಲಭೂತ ಹಕ್ಕುಗಳು, ಐರ್‌ಲ್ಯಾಂಡ್‌ನಿಂದ ರಾಜ್ಯ ನಿರ್ದೇಶಕ ತತ್ವಗಳು ಹೀಗೆ ಹಲವು ಉತ್ತಮಗಳ ಮೌಲ್ಯಗಳ ಸಂಗಮ ನಮ್ಮ ಸಂವಿಧಾನ.

1977ರ 42ನೇ ತಿದ್ದುಪಡಿಯಲ್ಲಿ ‘ಸಮಾಜವಾದಿ, ಧರ್ಮನಿರಪೇಕ್ಷ, ಪ್ರಜಾಸತ್ತಾತ್ಮಕ ಗಣರಾಜ್ಯ’ ಎಂಬ ಪದಗಳನ್ನು ಸೇರಿಸಲಾಗಿದೆ. ಆ ಮೂಲಕ ಸಂವಿಧಾನವು ಭಾರತವನ್ನು ಧರ್ಮನಿರಪೇಕ್ಷ ರಾಷ್ಟ್ರವನ್ನಾಗಿ ಮಾಡಿದೆ. ಭಾರತಕ್ಕೆ ನಿರ್ದಿಷ್ಟ ಅಥವಾ ಅಧಿಕೃತ ಧರ್ಮವಿಲ್ಲ. ಎಲ್ಲಾ ಧರ್ಮಗಳನ್ನೂ ಸಮಾನವಾಗಿ ಕಾಣುವುದೇ ನಮ್ಮ ದೇಶದ ಬಲ. ಜಾತ್ಯತೀತತೆ ನಮ್ಮ ಸಂವಿಧಾನದ ಮೂಲ ಆಶಯ.

ಭಾರತ ನಿರ್ಮಾಣದ ಭದ್ರ ಬುನಾದಿ

ಡಾ. ಬಿ.ಆರ್. ಅಂಬೇಡ್ಕರ್, ಪಂಡಿತ್ ಜವಾಹರಲಾಲ ನೆಹರೂ, ಸರ್ದಾರ್ ವಲ್ಲಭಭಾಯಿ ಪಟೇಲ್, ಡಾ. ರಾಜೇಂದ್ರ ಪ್ರಸಾದ್ ಸೇರಿದಂತೆ ಸಂವಿಧಾನ ರಚನೆಯಲ್ಲಿ ಕೊಡುಗೆ ನೀಡಿದ ಮಹನೀಯರು ಕೇವಲ ಕಾನೂನು ರೂಪಿಸಲಿಲ್ಲ. ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ಭಾರತವನ್ನು ಕಟ್ಟುವ ಕನಸಿಗೆ ಭದ್ರ ಬುನಾದಿ ಹಾಕಿದರು.

ಆದರೆ, ಇಂದು ಸಂವಿಧಾನ ನಮಗೆ ನೀಡಿರುವ ಸ್ವಾತಂತ್ರ್ಯ, ಸಮಾನತೆ, ನ್ಯಾಯ ಮತ್ತು ಭ್ರಾತೃತ್ವದ ಮೌಲ್ಯಗಳು ನಮ್ಮ ಸಾರ್ವಜನಿಕ ಬದುಕಿನಲ್ಲಿ ನಿಜವಾಗಿಯೂ ರೂಢಿಯಲ್ಲಿವೆಯೇ?

ಧರ್ಮದ ಹೆಸರಿನಲ್ಲಿ ಸಮಾಜ ವಿಭಜಿಸುವ ಪ್ರಯತ್ನಗಳು, ಜಾತಿಯ ಆಧಾರದ ಮೇಲೆ ಮನುಷ್ಯನ ಘನತೆ ಅಳೆಯುವ ಮನೋಭಾವ, ಪ್ರಶ್ನಿಸುವವರ ಧ್ವನಿಯನ್ನು ಅಡಗಿಸುವ ಪ್ರಯತ್ನ ನಡೆದಾಗ, ಬಡವರು ಮತ್ತು ದುರ್ಬಲ ವರ್ಗಗಳು ತಮ್ಮ ಹಕ್ಕುಗಳಿಗಾಗಿ ಹೋರಾಡಬೇಕಾದ ಪರಿಸ್ಥಿತಿ ಎದುರಾದಾಗ ಸಂವಿಧಾನವನ್ನು ನೆನಪಿಸಿಕೊಳ್ಳುವುದು ಅನಿವಾರ್ಯ.

ಸಂವಿಧಾನವನ್ನು ರಕ್ಷಿಸುವುದು ಎಂದರೆ ಯಾವುದೋ ಒಂದು ನೀತಿ ನಿರೂಪಣೆ ಪುಸ್ತಕವನ್ನು ರಕ್ಷಿಸುವುದಲ್ಲ. ಭಾರತದ ಪ್ರಜಾಪ್ರಭುತ್ವವನ್ನು, ಭಾರತದ ವೈವಿಧ್ಯವನ್ನು ಮತ್ತು ಪ್ರತಿಯೊಬ್ಬ ಭಾರತೀಯನ ಹಕ್ಕುಗಳನ್ನು ರಕ್ಷಿಸುವುದು. ಸಂವಿಧಾನ ದುರ್ಬಲವಾಗುವ ಪ್ರತಿಯೊಂದು ಸಂದರ್ಭದಲ್ಲಿ ಅದರ ಪರವಾಗಿ ಧ್ವನಿ ಎತ್ತುವುದು ಪ್ರತಿಯೊಂದು ಪಕ್ಷದ ರಾಜಕೀಯ ಮತ್ತು ನೈತಿಕ ಜವಾಬ್ದಾರಿ.

ಕರ್ನಾಟಕದ ಸಾಮಾಜಿಕ ಸುಧಾರಣೆ ಮತ್ತು ಸಂವಿಧಾನದ ಮೌಲ್ಯಗಳು

ಕರ್ನಾಟಕದ ಸಾಮಾಜಿಕ ಸುಧಾರಣೆಯ ಇತಿಹಾಸಕ್ಕೂ ಸಂವಿಧಾನದ ಮೌಲ್ಯಗಳಿಗೂ ಅವಿನಾಭಾವ ಸಂಬಂಧವಿದೆ. ಬಸವಣ್ಣನವರ ಕಾಯಕ, ದಾಸೋಹ ಮತ್ತು ಸಮಾನತೆಯ ತತ್ವ, ಅನುಭವ ಮಂಟಪದ ಪ್ರಜಾಸತ್ತಾತ್ಮಕ ಚಿಂತನೆಗಳು ಸಂವಿಧಾನದ ಆಶಯಗಳಿಗೆ ಪೂರಕವಾಗಿವೆ.

ಜಾತಿ, ಧರ್ಮ, ಭಾಷೆ ಮತ್ತು ವರ್ಗಗಳ ಭೇದವಿಲ್ಲದೆ ಪ್ರತಿಯೊಬ್ಬರಿಗೂ ಸಮಾನ ಅವಕಾಶ ಹಾಗೂ ಗೌರವ ದೊರೆಯಬೇಕು ಎಂಬುದು ಕರ್ನಾಟಕದ ಸಾಮಾಜಿಕ ಪರಂಪರೆಯ ಆಶಯವೂ ಹೌದು.

ರಾಜ್ಯದಲ್ಲಿ ಸಾಮಾಜಿಕ ನ್ಯಾಯ, ಸಮಾನ ಅವಕಾಶ, ಮೀಸಲಾತಿ, ಮಹಿಳಾ ಸಬಲೀಕರಣ, ಹಿಂದುಳಿದ ವರ್ಗಗಳು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳು ಹಾಗೂ ಅಲ್ಪಸಂಖ್ಯಾತರ ಹಕ್ಕುಗಳ ರಕ್ಷಣೆಗೆ ಸಂವಿಧಾನ ಮಹತ್ವದ ಪಾತ್ರ ವಹಿಸಿದೆ.

ಸಂವಿಧಾನ ರಚನೆಗೂ ಮೊದಲೇ ಡಾ. ಬಿ.ಆರ್. ಅಂಬೇಡ್ಕರ್ ಅವರ ಚಿಂತನೆಗಳು ಕರ್ನಾಟಕದ ಸಾಮಾಜಿಕ ನ್ಯಾಯ, ಸಮಾನತೆ ಮತ್ತು ಶೋಷಿತ ಸಮುದಾಯಗಳ ಹಕ್ಕುಗಳ ಹೋರಾಟದ ಇತಿಹಾಸದಲ್ಲಿ ಮಹತ್ವದ ಸ್ಥಾನ ಪಡೆದಿವೆ.

ಉತ್ತರ ಕರ್ನಾಟಕದ ಬೆಳಗಾವಿ, ನಿಪ್ಪಾಣಿ, ಧಾರವಾಡ, ಹುಬ್ಬಳ್ಳಿ, ವಿಜಯಪುರ, ಕಲಬುರಗಿ ಸೇರಿದಂತೆ ಹಲವು ಪ್ರದೇಶಗಳಿಗೆ ಭೇಟಿ ನೀಡಿದ್ದ ಅಂಬೇಡ್ಕರ್ ಅವರು ಶಿಕ್ಷಣ, ಸಂಘಟನೆ ಮತ್ತು ಹೋರಾಟದ ಮೂಲಕ ಸಾಮಾಜಿಕ ಬದಲಾವಣೆಗೆ ಕರೆ ನೀಡಿದ್ದರು. ಅವರ ವಿಚಾರಧಾರೆಗಳು ಕರ್ನಾಟಕದ ದಲಿತ ಚಳವಳಿ ಹಾಗೂ ಸಾಮಾಜಿಕ ಸುಧಾರಣಾ ಹೋರಾಟಗಳಿಗೆ ಹೊಸ ದಿಕ್ಕು ನೀಡಿದವು.

ರಾಜ್ಯ ಸಂವಿಧಾನಕ್ಕೆ ಅತೀವ ಗೌರವ ಕೊಡುತ್ತದೆಯಾದರೂ ಕೆಲವರು ಸಂವಿಧಾನ ಬದಲಿಸುವ ಉದ್ಧಟತನದ ಹೇಳಿಕೆಗಳನ್ನೂ ನೀಡಿದ್ದಿದೆ. ಸಂವಿಧಾನ ಯಾವುದೇ ಪಕ್ಷ ಅಥವಾ ಸಂಘಟನೆಯ ಸ್ವತ್ತಲ್ಲ. ಸಂವಿಧಾನವನ್ನು ಬದಲಾಯಿಸುವ ಹೆಸರಿನಲ್ಲಿ ಅದರ ಮೂಲ ಆಶಯಗಳನ್ನೇ ಅಳಿಸಿಹಾಕುವ ದುಷ್ಟ ಪ್ರಯತ್ನಗಳನ್ನು ಪ್ರಜ್ಞಾವಂತ ಸಮಾಜ ಒಕ್ಕೊರಲಿನಿಂದ ವಿರೋಧಿಸಬೇಕು.

ನಾಗರಿಕರಲ್ಲಿ ಜಾಗೃತಿ ಮುಖ್ಯ

ಸಂವಿಧಾನ ನಮಗೆ ಹಕ್ಕುಗಳನ್ನು ನೀಡಿದೆ. ಆದರೆ ಆ ಹಕ್ಕುಗಳನ್ನು ಉಳಿಸಿಕೊಳ್ಳಲು ನಮ್ಮಲ್ಲಿ ಜಾಗೃತಿ ಮೂಡಬೇಕಿದೆ.

ಮತದಾನದ ಹಕ್ಕನ್ನು ಪ್ರಜ್ಞಾಪೂರ್ವಕವಾಗಿ ಬಳಸುವುದು. ತಪ್ಪನ್ನು ಪ್ರಶ್ನಿಸುವುದು, ಭಿನ್ನಾಭಿಪ್ರಾಯವನ್ನು ಗೌರವಿಸುವುದು, ದ್ವೇಷದ ರಾಜಕಾರಣವನ್ನು ತಿರಸ್ಕರಿಸುವುದು, ಕಾನೂನಿನ ಮುಂದೆ ಎಲ್ಲರೂ ಸಮಾನರು ಎಂಬ ನಂಬಿಕೆಯನ್ನು ಗಟ್ಟಿಗೊಳಿಸುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ.

ವಿಶೇಷವಾಗಿ ಯುವಜನತೆ ಸಂವಿಧಾನವನ್ನು ಕೇವಲ ಪಠ್ಯಪುಸ್ತಕದ ಅಧ್ಯಾಯವಾಗಿ ನೋಡಬಾರದು. ಅದು ಅವರ ಭವಿಷ್ಯದ ಭದ್ರತೆಯ ದಾಖಲೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು.

ಮಹಿಳಾ ಪ್ರಾತಿನಿಧ್ಯತೆ ಆದ್ಯತೆಯಾಗಬೇಕು

ಸಂವಿಧಾನ ರಚನಾ ಸಭೆಯಲ್ಲಿ ಸರೋಜಿನಿ ನಾಯ್ಡು, ರಾಜಕುಮಾರಿ ಅಮೃತ್ ಕೌರ್, ಹನ್ಸಬೆನ್ ಮೆಹ್ತಾ, ಸುಚೇತಾ ಕೃಪಲಾನಿ ಮತ್ತು ಜಿ. ದುರ್ಗಾಬಾಯಿಯವರನ್ನೊಳಗೊಂಡಂತೆ 15 ಮಹಿಳಾ ಸದಸ್ಯರು ಸಮಾನ ಹಕ್ಕುಗಳಿಗಾಗಿ ಪ್ರತಿಪಾದಿಸಿದ್ದರು.

ಮಹಿಳಾ ಸಮಾನತೆ, ಮಹಿಳಾ ಹಕ್ಕುಗಳ ರಕ್ಷಣೆ ನಮ್ಮ ಆದ್ಯತೆಯಾಗಬೇಕು. ಕಳೆದ ವಾರವಷ್ಟೇ (ನ.17,18) ದೇಶದಲ್ಲಿ ಮೊದಲ ಬಾರಿಗೆ ವಿಧಾನಸೌಧದಲ್ಲಿ ಕಾಮಲ್ ವೆಲ್ತ್ ಮಹಿಳಾ ಸಂಸದೀಯ ಸಂಘಟನೆಯ ಪ್ರಾದೇಶಿಕ ಸಮ್ಮೇಳನ ಆಯೋಜಿಸಲಾಗಿತ್ತು.

ಈ ಅರ್ಥಪೂರ್ಣ ಸಮ್ಮೇಳನದಲ್ಲಿ ಲೋಕಸಭೆ ಸಭಾಧ್ಯಕ್ಷ ಓಂ ಬಿರ್ಲಾ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ ಪ್ರತಿಯೊಬ್ಬರೂ ಸ್ಥಳೀಯ ಸಂಸ್ಥೆಗಳ ಮಾದರಿಯಲ್ಲಿ ಲೋಕಸಭೆ, ಶಾಸನಸಭೆಯಲ್ಲೂ ಮಹಿಳಾ ಮೀಸಲಾತಿ ಜಾರಿ ಆಗಬೇಕು ಎಂಬುದನ್ನು ಒತ್ತಿ ಹೇಳಿದರು. ಹೀಗಾಗಿ ಸಂವಿಧಾನದ ಆಶಯದಂತೆ ಮಹಿಳಾ ಪ್ರಾತಿನಿಧ್ಯತೆ ನಮ್ಮ ಒತ್ತಾಸೆ ಆಗಬೇಕು.

ಭವಿಷ್ಯಕ್ಕೆ ಜತನವಾಗಿ ಕಾಪಿಡಬೇಕು

ನಮ್ಮ ಭವಿಷ್ಯದ ಮಕ್ಕಳಿಗೆ ನಾವು ಸಂವಿಧಾನಾತ್ಮಕ ಭಾರತವನ್ನು ಜತನವಾಗಿ ಕಾಪಿಡಬೇಕು. ಧರ್ಮದ ಹೆಸರಿನಲ್ಲಿ ಒಬ್ಬರನ್ನೊಬ್ಬರು ಅನುಮಾನಿಸಿ ಅವಮಾನಿಸುವ, ಜಾತಿಯ ಹೆಸರಿನಲ್ಲಿ ಮನುಷ್ಯರನ್ನು ವಿಭಜಿಸುವ ಭಾರತವನ್ನು ಮುಂದಿನ ಪೀಳಿಗೆಗೆ ನೀಡಬಾರದು. ಬದಲಿಗೆ ಸ್ವಾತಂತ್ರ್ಯ, ಸಮಾನತೆ, ನ್ಯಾಯ ಮತ್ತು ಭ್ರಾತೃತ್ವದ ಮೌಲ್ಯಗಳ ಮೇಲೆ ನಿಂತ ಸಾಮರಸ್ಯ ಭಾರತವನ್ನು ಹಸ್ತಾಂತರಿಸಬೇಕು.

ಈ ವಿಚಾರದಲ್ಲಿ ನನ್ನ ಆಯ್ಕೆ ಸ್ಪಷ್ಟ. ಸಂವಿಧಾನ ಬಲಿಷ್ಠವಾಗಿದ್ದರೆ ಪ್ರಜಾಪ್ರಭುತ್ವ ಬಲಿಷ್ಠವಾಗಿರುತ್ತದೆ. ಪ್ರಜಾಪ್ರಭುತ್ವ ಬಲಿಷ್ಠವಾಗಿದ್ದರೆ ಸಾಮಾನ್ಯ ನಾಗರಿಕ ಬಲಿಷ್ಠನಾಗುತ್ತಾನೆ. ಸಾಮಾನ್ಯ ನಾಗರಿಕ ಬಲಿಷ್ಠನಾಗಿದ್ದರೆ ಮಾತ್ರ ಭಾರತ ನಿಜವಾದ ಅರ್ಥದಲ್ಲಿ ಬಲಿಷ್ಠವಾಗುತ್ತದೆ.

ತಿದ್ದುವ ಅಧಿಕಾರ ಜವಾಬ್ದಾರಿಯುತ ಕೈಗಳಲ್ಲಿರಬೇಕು

ಅಧಿಕಾರ, ವ್ಯಕ್ತಿ, ರಾಜಕೀಯ ಲಾಭಕ್ಕಿಂತ ದೇಶದ ಏಕತೆ ಹಾಗೂ ಪ್ರಜಾಪ್ರಭುತ್ವ ನಮ್ಮ ಆದ್ಯತೆ ಆಗಬೇಕು. ಈ ಸಂವಿಧಾನಾತ್ಮಕ ಸಂದೇಶ ಕುರಿತು ಜಾಗೃತಿ ಮೂಡಿಸುವುದೇ ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ಸಂವಿಧಾನ ಶಿಲ್ಪಿಗಳಿಗೆ ಸಲ್ಲಿಸುವ ನಿಜವಾದ ಗೌರವ.

ಡಾ. ಬಿ.ಆರ್. ಅಂಬೇಡ್ಕರ್ ಅವರು ಎಚ್ಚರಿಸಿದ ಆಶಯವೆಂದರೆ, ಸಂವಿಧಾನ ಎಷ್ಟೇ ಉತ್ತಮವಾಗಿದ್ದರೂ ಅದನ್ನು ಅನುಷ್ಠಾನಗೊಳಿಸುವವರು ಸರಿ ಇಲ್ಲದಿದ್ದರೆ ಪ್ರಯೋಜನವಿಲ್ಲ. ಹೀಗಾಗಿ ಸಂವಿಧಾನ ರಕ್ಷಣೆ ಹಾಗೂ ಸಂವಿಧಾನ ತಿದ್ದುಪಡಿ ಅಧಿಕಾರ ಉತ್ತಮರ ಕೈಯಲ್ಲಿ ಇಡುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ.

ನಾಗರಿಕನ ಹಕ್ಕು ಮತ್ತು ಘನತೆ ಸುರಕ್ಷಿತವಾಗಿದ್ದರೆ ಮಾತ್ರ ಭಾರತ ನಿಜವಾದ ಅರ್ಥದಲ್ಲಿ ಬಲಿಷ್ಠ ರಾಷ್ಟ್ರವಾಗುತ್ತದೆ. ಆದ್ದರಿಂದ ನಾವೆಲ್ಲರೂ ಸಂವಿಧಾನವನ್ನು ಕೇವಲ ಪುಸ್ತಕದಲ್ಲಿ ಸಂರಕ್ಷಿಸುವುದಷ್ಟೇ ಅಲ್ಲದೆ ಅದರ ಮೌಲ್ಯಗಳನ್ನು ನಮ್ಮ ನಡೆ-ನುಡಿಗಳಲ್ಲಿ ಅಳವಡಿಸಿಕೊಳ್ಳಬೇಕು.

ಪೀಠಿಕೆ ಓದುವ ಸಂಕಲ್ಪದ ಜೊತೆಗೆ, ಪೀಠಿಕೆಯ ಮೌಲ್ಯಗಳನ್ನು ಬದುಕುವ ಸಂಕಲ್ಪ ಮಾಡೋಣ:

ಸ್ವಾತಂತ್ರ್ಯವನ್ನು ಗೌರವಿಸಬೇಕು, ಸಮಾನತೆಯನ್ನು ಪಾಲಿಸಬೇಕು, ನ್ಯಾಯಕ್ಕಾಗಿ ಧ್ವನಿ ಎತ್ತಬೇಕು. ಭ್ರಾತೃತ್ವ ಭಾವನೆಯ ಸಮಾಜ ಕಟ್ಟಬೇಕು.

ವಿಶೇಷವಾಗಿ ಜಾಲತಾಣಗಳ ಯುಗದಲ್ಲಿ ಸುಳ್ಳು ಸುದ್ದಿಗಳು, ದ್ವೇಷದ ಸಂದೇಶಗಳು ಮತ್ತು ಸಮಾಜ ವಿಭಜಿಸುವ ವಿಷಯಗಳಿಗೆ ಬಲಿಯಾಗದೆ, ಸತ್ಯ, ಸೌಹಾರ್ದ ಮತ್ತು ಸಂವಿಧಾನಾತ್ಮಕ ಮೌಲ್ಯಗಳನ್ನು ಹರಡುವ ಜವಾಬ್ದಾರಿ ಮೆರೆಯಬೇಕು.

Tags

constitutionalConstitutional ValuesIndiafuture
share
ಸಲೀಂ ಅಹ್ಮದ್
ಸಲೀಂ ಅಹ್ಮದ್

ವಿಧಾನಪರಿಷತ್ ಸಭಾಪತಿ

Next Story
X