Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಆಸ್ಪತ್ರೆಗಳಿಗೆ ಆಹಾರ ಪೂರೈಸುವ ಗುತ್ತಿಗೆ...

ಆಸ್ಪತ್ರೆಗಳಿಗೆ ಆಹಾರ ಪೂರೈಸುವ ಗುತ್ತಿಗೆ ಜಾತಿವಾದಿ-ಕಾರ್ಪೊರೇಟ್ ವ್ಯವಸ್ಥೆಗೆ

ಡಾ. ಸಿಲ್ವಿಯಾ ಕರ್ಪಗಮ್ಡಾ. ಸಿಲ್ವಿಯಾ ಕರ್ಪಗಮ್ಡಾ. ಅಖಿಲಾ ವಾಸನ್ಡಾ. ಅಖಿಲಾ ವಾಸನ್15 Sept 2025 12:10 PM IST
share
ಆಸ್ಪತ್ರೆಗಳಿಗೆ ಆಹಾರ ಪೂರೈಸುವ ಗುತ್ತಿಗೆ ಜಾತಿವಾದಿ-ಕಾರ್ಪೊರೇಟ್ ವ್ಯವಸ್ಥೆಗೆ

ಬೆಂಗಳೂರು ಮೂರು ಸರಕಾರಿ ಆಸ್ಪತ್ರೆಗಳ ಒಳರೋಗಿಗಳಿಗೆ ಆಹಾರ ಪೂರೈಸುವ ಗುತ್ತಿಗೆಯನ್ನು ಅಕ್ಷಯ ಪಾತ್ರಾ ಫೌಂಡೇಶನ್‌ಗೆ ನೀಡಲು ಕರ್ನಾಟಕ ಸರಕಾರವು ನಿರ್ಧಾರ ತೆಗೆದುಕೊಂಡಿದೆ. ಆದರೆ, ಇದು ವಿಫಲವಾಗಲೆಂದೇ ರೂಪಿಸಲಾದ ಆಡಳಿತಾರೂಢ ಪಕ್ಷದ ಇನ್ನೊಂದು ಯೋಜನೆ ಎಂಬಂತೆ ಕಂಡುಬರುತ್ತದೆ. ರುಚಿಯಿರದ, ಅನಾರೋಗ್ಯಕರ ಮತ್ತು ಅವೈಜ್ಞಾನಿಕ ಆಹಾರವನ್ನು ರೋಗಿಗಳ ಮೇಲೆ ಹೇರಲು ಈ ಸರಕಾರ ಯಾಕಿಷ್ಟು ಆಸಕ್ತಿ ವಹಿಸಿದೆ?

ಮಾಂಸ ತಿನ್ನುವ ಬಗ್ಗೆ ಕೇಳಿದ ಪ್ರಶ್ನೆಯೊಂದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದರು. ‘‘ಜನರು ಏನು ತಿನ್ನುತ್ತಾರೋ ಅದು ಅವರ ವೈಯಕ್ತಿಕ ಆಯ್ಕೆಯಾಗಿದೆ ಮತ್ತು ಅದನ್ನು ಟೀಕಿಸುವ ಹಕ್ಕು ಯಾರಿಗೂ ಇಲ್ಲ’’ ಎಂಬುದಾಗಿ ಅವರು ಸ್ಪಷ್ಟವಾಗಿ ಹೇಳಿದ್ದರು.

ಆದರೆ, ಸರಕಾರವೇ ಜನರಿಗೆ ಆಹಾರ ಒದಗಿಸುವ ವಿಷಯಕ್ಕೆ ಬಂದಾಗ ಸಿದ್ದರಾಮಯ್ಯನವರ ಈ ಪ್ರಗತಿಪರ ನಿಲುವಿಗೆ ಏನಾಗುತ್ತದೆ? ಮೊಟ್ಟೆ, ಮಾಂಸ, ಮೀನು ಮತ್ತು ಕೋಳಿ ಈ ರಾಜ್ಯದ ಬಹುಸಂಖ್ಯಾತರ ಸಾಂಪ್ರದಾಯಿಕ ಆಹಾರ ಪದ್ಧತಿಯಾಗಿದೆ. ಹಾಗಾಗಿ, ಅದು ಸಾಂಸ್ಕೃತಿಕವಾಗಿ ಸ್ವೀಕಾರಾರ್ಹ. ಕಾಯಿಲೆಯಿಂದ ಚೇತರಿಸಿಕೊಳ್ಳುತ್ತಿರುವ ರೋಗಿಗಳು, ಗರ್ಭಿಣಿ ಮತ್ತು ಹಾಲುಡಿಸುವ ಮಹಿಳೆಯರಿಗೆ ಪ್ರೊಟೀನ್, ಕೊಬ್ಬು, ಕಾರ್ಬೊಹೈಡ್ರೇಟ್, ಖನಿಜಾಂಶಗಳು ಮತ್ತು ವಿಟಮಿನ್‌ಭರಿತ ಉತ್ತಮ ಪ್ರಾಣಿಜನ್ಯ ಪೌಷ್ಟಿಕ ಆಹಾರದ ಅವಶ್ಯಕತೆಯಿದೆ.

ಬ್ರಾಹ್ಮಣೀಯ ಸಿದ್ಧಾಂತದಿಂದ ಪ್ರಭಾವಿತ

ಇಂಟರ್‌ನ್ಯಾಶನಲ್ ಸೊಸೈಟಿ ಫಾರ್ ಕೃಷ್ಣ ಕಾನ್ಶಸ್‌ನೆಸ್ (ಇಸ್ಕಾನ್)ನ ಭಾಗವಾಗಿರುವ ಅಕ್ಷಯ ಪಾತ್ರಾ ಫೌಂಡೇಶನ್ (ಎಪಿಎಫ್) ಬ್ರಾಹ್ಮಣೀಯ ಸಿದ್ಧಾಂತವನ್ನು ಪಾಲಿಸುತ್ತಿದೆ ಎನ್ನುವುದು ಸರಕಾರ ಅಥವಾ ಸಮುದಾಯಗಳಿಗೆ ಗೊತ್ತಿರದ ವಿಷಯವೇನಲ್ಲ. ಅವರ ಘೋಷಿತ ಆಹಾರ ನೀತಿ ಸ್ಪಷ್ಟವಾಗಿದೆ

- ಈರುಳ್ಳಿ, ಮೊಟ್ಟೆ, ಮೀನು, ಮಾಂಸ ಮತ್ತು ಕೋಳಿ ಮಾಂಸರಹಿತ ಆಹಾರ ಮಾತ್ರ ಸಾತ್ವಿಕ ಹಾಗೂ ಹಾಲಿನ ಉತ್ಪನ್ನಗಳನ್ನು ಹೊರತುಪಡಿಸಿ ಇತರ ಯಾವುದೇ ಪ್ರಾಣಿಜನ್ಯ ಆಹಾರವು ತಾಮಸಿಕ/ರಾಜಸಿಕ.

‘ತಾಮಸಿಕ/ರಾಜಸಿಕ’ ಆಹಾರವನ್ನು ಸೇವಿಸುವ ಜನರು ಅನಪೇಕ್ಷಿತ ಗುಣಗಳನ್ನು ಬೆಳೆಸಿಕೊಳ್ಳುತ್ತಾರೆ ಮತ್ತು ಆ ಮೂಲಕ ಅವರು ಕಡಿಮೆ ದರ್ಜೆಯ ಮಾನವರಾಗುತ್ತಾರೆ ಎನ್ನುವುದು ಅವರ ನಿಲುವು.

ಆಹಾರದ ಕುರಿತ ಇಂಥ ಅವೈಜ್ಞಾನಿಕ ಕಲ್ಪನೆಗಳು ಆಳವಾಗಿ ಬೇರೂರಿರುವ ಜಾತಿ ಆಧಾರಿತ ಪೂರ್ವಾಗ್ರಹಗಳನ್ನು ಬಲಪಡಿಸುತ್ತವೆ ಮತ್ತು ಈ ಪೋಷಕಾಂಶಭರಿತ ಆಹಾರಗಳನ್ನು ಸೇವಿಸುವ ಸಮುದಾಯಗಳನ್ನು ಅಪರಾಧಿಗಳನ್ನಾಗಿಸುತ್ತವೆ. ಬೆಳೆಯುತ್ತಿರುವ ಮಕ್ಕಳು, ಗರ್ಭಿಣಿಯರು ಮತ್ತು ಕಾಯಿಲೆಗಳಿಂದ ಚೇತರಿಸಿಕೊಳ್ಳುತ್ತಿರುವವರಿಗೆ ಮೊಟ್ಟೆಗಳನ್ನು ಶಿಫಾರಸು ಮಾಡಲಾಗುತ್ತದೆ. ಆದರೆ, ಮೊಟ್ಟೆಗಳನ್ನು ಪೂರೈಸಲೂ ಈ ಸಂಸ್ಥೆಯು ಖಡಾಖಂಡಿತವಾಗಿ ನಿರಾಕರಿಸುತ್ತಿರುವುದು ಅಚ್ಚರಿಯ ಸಂಗತಿಯೇನಲ್ಲ.

ಹಾಗಾದರೆ, ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟವನ್ನು ನೀಡುವ ಮತ್ತು ಈಗ ಸರಕಾರಿ ಆಸ್ಪತ್ರೆಗಳಿಗೆ ಆಹಾರವನ್ನು ಪೂರೈಸುವ ಗುತ್ತಿಗೆಗಳನ್ನು ಈ ಸಂಸ್ಥೆಗೆ ಪದೇ ಪದೇ ಯಾಕೆ ನೀಡಲಾಗುತ್ತದೆ? ಮಾನವರಲ್ಲಿ ಕಬ್ಬಿಣ ಮತ್ತು ಝಿಂಕ್ ಸತ್ವಗಳ ಲಭ್ಯತೆಯನ್ನು ನೀರುಳ್ಳಿ ಮತ್ತು ಬೆಳ್ಳುಳ್ಳಿ ಹೆಚ್ಚಿಸುತ್ತದೆ ಎನ್ನುವುದು ಸಾಬೀತಾಗಿರುವ ವಿಷಯವಾಗಿದೆ. ಕರ್ನಾಟಕದ ಮಕ್ಕಳು ಮತ್ತು ತರುಣರಲ್ಲಿ ಈ ಎರಡೂ ಸತ್ವಗಳ ಕೊರತೆಯಿದೆ. ಆದರೆ, ಸರಕಾರದ ಮಾರ್ಗದರ್ಶಿ ಸೂತ್ರಗಳ ಹೊರತಾಗಿಯೂ ಇವೆರಡನ್ನೂ ಅಕ್ಷಯ ಪಾತ್ರಾ ಫೌಂಡೇಶನ್ ತನ್ನ ಅಡುಗೆಯಲ್ಲಿ ಬಳಸುವುದಿಲ್ಲ.

ಈ ಆಹಾರಗಳನ್ನು ನಿರಾಕರಿಸುವುದು ಆರೋಗ್ಯ ಕಾಳಜಿಯನ್ನೇ ನಿರಾಕರಿಸಿದಂತಾಗಿದೆ.

ಪರ್ಯಾಯವಾಗಿ ಸೋಯಾ ಯಾಕೆ ಸೂಕ್ತವಲ್ಲ?

ಈಗ ಮೊಟ್ಟೆಗೆ ಪರ್ಯಾಯವಾಗಿ ಸೋಯಾವನ್ನು ತರಲಾಗುತ್ತಿದೆ. ಆದರೆ, ಅದು ಅಲರ್ಜಿಕಾರಕವಾಗಿದೆ ಮತ್ತು ಗಾಯ್ಟರ್ ರೋಗಕ್ಕೆ ಕಾರಣವಾಗುತ್ತದೆ ಎನ್ನುವುದು ದಾಖಲಾಗಿದೆ. ಅದೂ ಅಲ್ಲದೆ, ಸೋಯಾದಲ್ಲಿರುವ ಫೈಲೇಟ್‌ಗಳು, ಕಬ್ಬಿಣ ಮತ್ತು ಝಿಂಕ್ ಸೇರಿದಂತೆ ಅದರಲ್ಲಿರುವ ಪೌಷ್ಟಿಕಾಂಶಗಳನ್ನು ದೇಹ ಹೀರಿಕೊಳ್ಳುವ ಪ್ರಮಾಣವನ್ನು ಕಡಿಮೆಗೊಳಿಸುತ್ತದೆ.

ಅದೇ ವೇಳೆ, ಕುಲಾಂತರಿ ಸೋಯಾ ಮತ್ತು ಅದರ ಅಡ್ಡ ಪರಿಣಾಮಗಳ ಬಗ್ಗೆಯೂ ಕಳವಳಗಳನ್ನು ವ್ಯಕ್ತಪಡಿಸಲಾಗಿದೆ. ಮೊಟ್ಟೆಗಳನ್ನು ನಿರಾಕರಿಸಿ ಸೋಯಾಕ್ಕೆ ಉತ್ತೇಜನ ನೀಡುವುದು ಅಕ್ಷಯ ಪಾತ್ರಾ ಫೌಂಡೇಶನ್‌ನ ಸೈದ್ಧಾಂತಿಕ ನಿಲುವುಗಳು ಮತ್ತು ಅದರ ಇತರ ವಾಣಿಜ್ಯ ಹಿತಾಸಕ್ತಿಗಳಿಗೆ ಪೂರಕವಾಗಿದೆಯೇ ಹೊರತು, ರೋಗಿಗಳಿಗೆ ಇದರಿಂದ ಏನೂ ಪ್ರಯೋಜನವಿಲ್ಲ.

ಅಕ್ಷಯ ಪಾತ್ರಾ ಫೌಂಡೇಶನ್ ಪೂರೈಸುವ ಆಹಾರದಲ್ಲಿ ರುಚಿಯಿಲ್ಲ, ತಣ್ಣಗಾಗಿರುತ್ತದೆ, ಹಳಸಿರುತ್ತದೆ ಮತ್ತು ಒಟ್ಟಾರೆ ಕಳಪೆ ಗುಣಮಟ್ಟದ್ದಾಗಿದೆ ಎಂದು ಆರೋಪಿಸಿ ಆಹಾರ ಆಯೋಗ, ಶಾಲಾ ಮಕ್ಕಳು ಮತ್ತು ಅವರ ಹೆತ್ತವರು ಸೇರಿದಂತೆ ಹಲವರು ದೂರು ಸಲ್ಲಿಸಿದ್ದಾರೆ.

ಅಕ್ಷಯ ಪಾತ್ರಾ ಫೌಂಡೇಶನ್‌ಗೆ ನೀಡಲಾಗಿರುವ ಗುತ್ತಿಗೆಗಳನ್ನು ರದ್ದುಗೊಳಿಸಬೇಕು ಮತ್ತು ಎಂಡಿಎಂ ಮಾರ್ಗಸೂತ್ರಗಳಿಗೆ ಅನುಸಾರವಾಗಿ ಶಾಲೆಗಳಲ್ಲೇ ಅಡುಗೆ ಮಾಡಬೇಕು ಎಂದು ಒತ್ತಾಯಿಸಿ ‘ಆಹಾರ ನಮ್ಮ ಹಕ್ಕು’ ಸೇರಿದಂತೆ ಹಲವು ಸಂಘಟನೆಗಳು ಹಲವಾರು ದೂರುಗಳು, ಬಹಿರಂಗ ಪತ್ರಗಳು ಮತ್ತು ಮನವಿಗಳನ್ನು ಸರಕಾರಕ್ಕೆ ಸಲ್ಲಿಸಿವೆ. ಹಾಗಾಗಿ, ತನಗೆ ಈ ವಿಷಯ ಗೊತ್ತಿಲ್ಲ ಎಂಬಂತೆ ಸರಕಾರ ನಟಿಸುವಂತಿಲ್ಲ.

ಅದೂ ಅಲ್ಲದೆ, ಗಂಭೀರ ಭ್ರಷ್ಟಾಚಾರ ಆರೋಪಗಳಲ್ಲಿ ಅಕ್ಷಯ ಪಾತ್ರಾ ಫೌಂಡೇಶನ್‌ನ ಆಡಳಿತ ಮಂಡಳಿಯ ನಿರ್ದೇಶಕರು ರಾಜೀನಾಮೆಗಳನ್ನು ನೀಡಿದ್ದಾರೆ.

ಮಧ್ಯಾಹ್ನದ ಬಿಸಿಯೂಟದ ಜೊತೆಗೆ ಮೊಟ್ಟೆಗಳನ್ನು ನೀಡಬೇಕೆಂದು ವ್ಯಾಪಕ ಪ್ರತಿಭಟನೆಗಳು ನಡೆದಿವೆ. ಈ ಬೇಡಿಕೆಗಳಿಗೆ ಮಣಿದು ಸರಕಾರವು ಮೊಟ್ಟೆ ನೀಡಲು ಆರಂಭಿಸಿದಾಗ ಶಾಲೆಗಳಲ್ಲಿ ಮಕ್ಕಳ ಹಾಜರಾತಿಯಲ್ಲಿ ಸುಧಾರಣೆ ಕಂಡುಬಂತು. ಇದು ರುಚಿಕರ, ಪೌಷ್ಟಿಕ ಊಟವು ಬೆಳೆಯುತ್ತಿರುವ ಮಕ್ಕಳ ಮೇಲೆ ಅವಳಿ ಪರಿಣಾಮಗಳನ್ನು ಬೀರುತ್ತದೆ ಎನ್ನುವುದನ್ನು ಸಾಬೀತುಪಡಿಸಿದೆ.

ಸರಕಾರದ ವೈಫಲ್ಯ

ಸರಕಾರವು ತನ್ನ ಹಲವಾರು ಸಾರ್ವಜನಿಕ-ಖಾಸಗಿ-ಭಾಗೀದಾರಿಕೆ (ಪಿಪಿಪಿ) ದುಸ್ಸಾಹಸಗಳಲ್ಲಿ ದಯನೀಯ ವೈಫಲ್ಯಗಳನ್ನ್ನು ಕಂಡಿದೆ. ಇದರ ಪರಿಣಾಮವಾಗಿ ಚೆನ್ನಾಗಿ ನಡೆಯುತ್ತಿದ್ದ ಸಾರ್ವಜನಿಕ ಆರೋಗ್ಯ ಕೇಂದ್ರಗಳು ಕುಸಿದು ಬಿದ್ದಿವೆ. ಪ್ರಸಕ್ತ, ಬೆಂಗಳೂರಿನ ಕೆಲವು ಸರಕಾರಿ ಆಸ್ಪತ್ರೆಗಳಲ್ಲಿ ಒಳರೋಗಿಗಳಿಗೆ ಆಹಾರ ನೀಡುವ ವ್ಯವಸ್ಥೆ ಚಾಲ್ತಿಯಲ್ಲಿದೆ. ಇದಕ್ಕೆ ಸಾಮಾನ್ಯವಾಗಿ ಧನಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಅಡುಗೆ ಕೋಣೆಯನ್ನು ಆಧುನೀಕರಿಸುವ ಮೂಲಕ ಮತ್ತು ಬೃಹತ್ ಪ್ರಮಾಣದ ಆಹಾರವನ್ನು ಆರೋಗ್ಯಕರವಾಗಿ ಬೇಯಿಸುವುದಕ್ಕೆ ಬಳಸುವ ಆಧುನಿಕ ಯಂತ್ರಗಳನ್ನು ಸ್ಥಾಪಿಸುವ ಮೂಲಕ ಈ ವ್ಯವಸ್ಥೆಯನ್ನು ಖಂಡಿತವಾಗಿಯೂ ಸುಧಾರಿಸಬಹುದಾಗಿದೆ. ಆಹಾರ ಪೂರೈಕೆಯನ್ನು ಪರಭಾರೆಗೊಳಿಸುವ ಬದಲು, ಸ್ವಂತ ಉತ್ಪಾದನೆಯನ್ನು ಬೆಂಬಲಿಸುವ ವ್ಯವಸ್ಥೆಯನ್ನು ಯಾಕೆ ಈ ಸರಕಾರ ಜಾರಿಗೊಳಿಸುತ್ತಿಲ್ಲ ಎನ್ನುವುದಕ್ಕೆ ವೈಚಾರಿಕ ವಿವರಣೆಯಿಲ್ಲ.

ಸರಕಾರಿ ಆಸ್ಪತ್ರೆಗಳಿಗೆ ವಿಭಿನ್ನ ವರ್ಗಗಳ ರೋಗಿಗಳು ಬರುತ್ತಾರೆ. ಅವರ ಪೈಕಿ ಹೆಚ್ಚಿನವರು ಅಲ್ಪಸಂಖ್ಯಾತ ಮತ್ತು ಶೋಷಿತ ಸಮುದಾಯಗಳಿಗೆ ಸೇರಿದವರು. ಈ ಜಾತಿ ಆಧಾರಿತ ಸಸ್ಯಾಹಾರಿ ‘ಸಾತ್ವಿಕ ಆಹಾರ’ವನ್ನು ‘ಆರೋಗ್ಯಯುತ’ ಮತ್ತು ‘ಪರಿಶುದ್ಧ’ ಎಂಬುದಾಗಿ ಪ್ರಚಾರ ಮಾಡಿದರೆ, ಮುಂದೆ ಆಸ್ಪತ್ರೆಯ ಆವರಣದೊಳಗೆ ಪೌಷ್ಟಿಕಾಂಶಯುಕ್ತ ಪ್ರಾಣಿಜನ್ಯ ಆಹಾರವನ್ನು ತರುವುದರಿಂದ ಆಸ್ಪತ್ರೆಯಲ್ಲಿ ರೋಗಿಗಳ ಜೊತೆಗಿರುವವರು ಮತ್ತು ಅವರನ್ನು ನೋಡಲು ಬರುವವರು ಹಿಂದೇಟು ಹಾಕಬಹುದು.

ಇದರ ಹಿಂದಿರುವ ರಾಜಕೀಯದ ಬಗ್ಗೆ ತನಗೆ ಗೊತ್ತಿಲ್ಲ ಎಂಬಂತೆ ರಾಜ್ಯ ಸರಕಾರ ನಟಿಸಬಾರದು. ಆಸ್ಪತ್ರೆಗಳು ಜಾತ್ಯತೀತ ಮತ್ತು ವೈಜ್ಞಾನಿಕ ಸ್ಥಳಗಳಾಗಿರಬೇಕು. ಅಲ್ಲಿ ಸಿದ್ಧಾಂತಗಳು ಮತ್ತು ಕಾರ್ಪೊರೇಟ್ ಹಿತಾಸಕ್ತಿಗಲ ಹೇರಿಕೆಗೆ ಅವಕಾಶವಿರಬಾರದು.

ಕೊನೆಯದಾಗಿ, ರಾಜ್ಯದ ಮುಖ್ಯಮಂತ್ರಿ ಮತ್ತು ಆರೋಗ್ಯ ಸಚಿವರಿಗೆ ಒಂದು ಮನವಿ: ದಯವಿಟ್ಟು ನೀವು ಕೂಡ ಶಾಲೆಗಳು ಮತ್ತು ಸರಕಾರಿ ಆಸ್ಪತ್ರೆಗಳಲ್ಲಿ ಅಕ್ಷಯ ಪಾತ್ರಾ ಫೌಂಡೇಶನ್ ಒದಗಿಸುವ ಸಾತ್ವಿಕ ಆಹಾರವನ್ನೇ ಸೇವಿಸಿ. ನುಡಿದಂತೆ ನಡೆಯಿರಿ! ಆಗ ನಿಮಗೆ ಏನನಿಸುತ್ತದೆ ಎಂದು ನೋಡೋಣ. ಬಹುಷಃ, ಅದು ನಿಮ್ಮ ಮನಃಪರಿವರ್ತನೆ ಮಾಡಬಹುದು.

ರಾಜ್ಯದಲ್ಲಿ ಆಹಾರ ಹೇರಿಕೆಯನ್ನು ಪ್ರಶ್ನಿಸುವುದರಲ್ಲಿ ‘ಆಹಾರ ನಮ್ಮ ಹಕ್ಕು’ ಮುಂಚೂಣಿಯಲ್ಲಿದೆ. ಅದೂ ಅಲ್ಲದೆ, ಸರಕಾರಿ ಆಸ್ಪತ್ರೆಗಳಿಗೆ ಆಹಾರ ಪೂರೈಸುವ ಗುತ್ತಿಗೆಯನ್ನು ಅಕ್ಷಯ ಪಾತ್ರಾ ಫೌಂಡೇಶನ್‌ಗೆ ನೀಡಿರುವುದನ್ನು ಖಂಡಿಸಿ ಕರ್ನಾಟಕ ಜನಾರೋಗ್ಯ ಚಳುವಳಿ ಹೇಳಿಕೆಯೊಂದನ್ನು ಬಿಡುಗಡೆಗೊಳಿಸಿದೆ.

share
ಡಾ. ಸಿಲ್ವಿಯಾ ಕರ್ಪಗಮ್
ಡಾ. ಸಿಲ್ವಿಯಾ ಕರ್ಪಗಮ್
ಡಾ. ಅಖಿಲಾ ವಾಸನ್
ಡಾ. ಅಖಿಲಾ ವಾಸನ್
Next Story
X