Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಸಂಸ್ಕೃತಿ ಚಿಂತನೆ: ಮಾತು ಮತ್ತು ಬರಹಕ್ಕೆ...

ಸಂಸ್ಕೃತಿ ಚಿಂತನೆ: ಮಾತು ಮತ್ತು ಬರಹಕ್ಕೆ ಓದಿನ ಬೆಂಬಲ ಇರಲಿ

ಡಾ. ಕೆ. ಚಿನ್ನಪ್ಪ ಗೌಡಡಾ. ಕೆ. ಚಿನ್ನಪ್ಪ ಗೌಡ22 May 2026 11:16 AM IST
share
ಸಂಸ್ಕೃತಿ ಚಿಂತನೆ: ಮಾತು ಮತ್ತು ಬರಹಕ್ಕೆ ಓದಿನ ಬೆಂಬಲ ಇರಲಿ

ಆರಾಧನೆ, ಪಾಡ್ದನಗಳು, ಅವುಗಳ ನಿರ್ಮಾಣ ಮತ್ತು ಬಳಕೆ, ಕಲಾವಿದರ ಲೋಕದೃಷ್ಟಿ, ಬಣ್ಣ, ವೇಷಭೂಷಣ ಇತ್ಯಾದಿ ಪರಿಕರಗಳು, ಆರಾಧನೆಯ ಪರಂಪರೆ ಮತ್ತು ಚಲನಶೀಲತೆ, ಪ್ರಸ್ತುತತೆ ಮೊದಲಾದ ವಿಚಾರಗಳ ಬಗ್ಗೆ ನಮ್ಮಲ್ಲಿ ಕೆಲವರು ಮಾಧ್ಯಮಗಳಲ್ಲಿ, ವೇದಿಕೆಗಳಲ್ಲಿ ಹಂಚಿಕೊಳ್ಳುವ ಅಭಿಪ್ರಾಯ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಹರಡುವ ಮಾಹಿತಿಗಳನ್ನು ನೋಡಿದರೆ ದಿಗಿಲಾಗುತ್ತದೆ. ಇದು ಅರಿವಿನ ಕೊರತೆಯಿಂದ ಆಗುವ ಸಮಸ್ಯೆಗಳಾಗಿವೆ.

ತುಳುನಾಡಿನ ಭೂತಾರಾಧನೆ ಮತ್ತು ಅದಕ್ಕೆ ಸಂಬಂಧಿಸಿದ ಸಾಹಿತ್ಯಕ ಪಠ್ಯಗಳಾದ ಪಾಡ್ದನಗಳ ಬಗ್ಗೆ ಬಹಳ ಅಧ್ಯಯನಗಳು ನಡೆದಿವೆ. ಭೂತಗಳ ಉಗಮ, ಕಾರಣಿಕ ಮತ್ತು ಪ್ರಸರಣವನ್ನು ಅದ್ಭುತವಾಗಿ ನಿರೂಪಿಸುವ ಪಾಡ್ದನಗಳ ಸಂಗ್ರಹವಿರುವ ಸಂಪುಟಗಳು ಪ್ರಕಟವಾಗಿವೆ. ಅಪೂರ್ವ ಪಾಡ್ದನಗಳ ಪಠ್ಯವನ್ನು ಮತ್ತು ನಿರ್ದಿಷ್ಟ ಭೂತದ ಆರಾಧನೆಯ ಸ್ವರೂಪವನ್ನು ಕೇಂದ್ರೀಕರಿಸಿ ಗಂಭೀರ ಅಧ್ಯಯನಗಳು ನಡೆದಿವೆ. ತುಳುವ ಧಾರ್ಮಿಕ ರಂಗಭೂಮಿಯನ್ನು ಹೊಸ ಬಗೆಯ ಮನೋಧರ್ಮದಿಂದ ಪರಿಶೀಲಿಸುವ ಪ್ರಯತ್ನವನ್ನು ವಿದ್ವಾಂಸರು ಮಾಡಿದ್ದಾರೆ. ಈ ಕೆಲಸಗಳನ್ನು ದೇಶೀಯ ವಿದ್ವಾಂಸರು ಮತ್ತು ಅಮೆರಿಕ, ಜರ್ಮನಿ, ಇಟಲಿ, ಫಿನ್‌ಲ್ಯಾಂಡ್ ಮತ್ತು ಜಪಾನ್ ದೇಶಗಳ ವಿದೇಶೀ ಜಾನಪದ ವಿದ್ವಾಂಸರು ಮಾಡಿದ್ದಾರೆ. ತುಳು ಜಾನಪದಕ್ಕೆ ಸಂಬಂಧಿಸಿದಂತೆ ನಮ್ಮ ನಾಡಿನ ಸಂಸ್ಕೃತಿತಜ್ಞರು ಮಾಡಿರುವ ಬಹುಮುಖೀ ಕೆಲಸಗಳ ಬಗ್ಗೆ, ನಿರ್ದಿಷ್ಟವಾಗಿ ಭೂತಾರಾಧನೆ ಮತ್ತು ಪಾಡ್ದನಗಳ ಕುರಿತಂತೆ ಸಮಗ್ರ ಅಲ್ಲದೆ ಹೋದರೂ ತಕ್ಕ ಮಟ್ಟಿನ ಅರಿವು ನಮ್ಮ ಜನರಿಗಿದೆ. ತುಳು ಜಾನಪದದ ಮೇಲೆ ಕೆಲಸ ಮಾಡಿದ ಯುವ ವಿದ್ವಾಂಸರಿಗೂ ಇದೆ. ಆದರೆ ವಿದೇಶೀ ವಿದ್ವಾಂಸರು ಮಾಡಿರುವ ಅಧ್ಯಯನಗಳ ಬಗ್ಗೆ ಸರಿಯಾದ ತಿಳುವಳಿಕೆ ಇಲ್ಲ. ಅವರ ಕೃತಿಗಳು ಮತ್ತು ಲೇಖನಗಳು ಓದಲು ಸಿಗದೆ ಇರುವ ಕಾರಣ ಒಂದಾದರೆ, ಸಿಗುವ ಇಂಗ್ಲಿಷ್ ಲೇಖನಗಳನ್ನು ಅಥವಾ ಅವುಗಳ ಅನುವಾದಗಳನ್ನಾದರೂ ಓದುವ ಆಸಕ್ತಿ, ವ್ಯವಧಾನ ಇಲ್ಲದೆ ಇರುವುದು ಇನ್ನೊಂದು ಕಾರಣವಾಗಿದೆ. ಸಂಸ್ಕೃತಿಯ ಅಧ್ಯಯನಕ್ಕೆ ಅಗತ್ಯವಿರುವ ಒಂದು ಅಂತರವನ್ನು ಕಾಯ್ದುಕೊಂಡು ಮತ್ತು ಸೈದ್ಧಾಂತಿಕ ಜ್ಞಾನದಿಂದ ವಿದೇಶೀ ವಿದ್ವಾಂಸರು ಬಹಳ ಗಂಭೀರವಾಗಿ ಅಧ್ಯಯನ ಮಾಡಿರುವುದರಿಂದ ಅವರ ಬರವಣಿಗೆಗಳ ಓದು ಮತ್ತು ಅರಿವು ಇಲ್ಲದೆ ನಮ್ಮಲ್ಲಿರುವ ಜ್ಞಾನವನ್ನು ವಿಸ್ತರಿಸಲು ಸಾಧ್ಯವಿಲ್ಲ. ಆರಾಧನೆ, ಪಾಡ್ದನಗಳು, ಅವುಗಳ ನಿರ್ಮಾಣ ಮತ್ತು ಬಳಕೆ, ಕಲಾವಿದರ ಲೋಕದೃಷ್ಟಿ, ಬಣ್ಣ, ವೇಷಭೂಷಣ ಇತ್ಯಾದಿ ಪರಿಕರಗಳು, ಆರಾಧನೆಯ ಪರಂಪರೆ ಮತ್ತು ಚಲನಶೀಲತೆ, ಪ್ರಸ್ತುತತೆ ಮೊದಲಾದ ವಿಚಾರಗಳ ಬಗ್ಗೆ ನಮ್ಮಲ್ಲಿ ಕೆಲವರು ಮಾಧ್ಯಮಗಳಲ್ಲಿ, ವೇದಿಕೆಗಳಲ್ಲಿ ಹಂಚಿಕೊಳ್ಳುವ ಅಭಿಪ್ರಾಯ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಹರಡುವ ಮಾಹಿತಿಗಳನ್ನು ನೋಡಿದರೆ ದಿಗಿಲಾಗುತ್ತದೆ. ಇದು ಅರಿವಿನ ಕೊರತೆಯಿಂದ ಆಗುವ ಸಮಸ್ಯೆಗಳಾಗಿವೆ. ತುಳುವ ಧಾರ್ಮಿಕ ರಂಗಭೂಮಿಯ ಆಸಕ್ತರು ಮತ್ತು ಅಧ್ಯಯನಶೀಲರು ಗಮನಿಸಬಹುದಾದ ಕೆಲವು ಇಂಗ್ಲಿಷ್ ಲೇಖನಗಳ ವಿವರಗಳನ್ನು ಇಲ್ಲಿ ಹಂಚಿಕೊಳ್ಳುತ್ತಿದ್ದೇನೆ. ಪ್ರಸ್ತುತ ಕೊಟ್ಟಿರುವ ಲೇಖನಗಳ ಪಟ್ಟಿ ಸಮಗ್ರವಲ್ಲ ಮತ್ತು ಅದು ಈ ಲೇಖನದ ವ್ಯಾಪ್ತಿಗೆ ಮೀರಿದ್ದು.

ಪಾಡ್ದನಗಳು ಮತ್ತು ಆರಾಧನೆಗೆ ಸಂಬಂಧಿಸಿದಂತೆ ಜರ್ಮನಿಯ ಡಾ. ಹೈಡ್ರೂನ್ ಬ್ರೂಕ್ನರ್ ಹಲವು ಲೇಖನಗಳನ್ನು ಬರೆದಿದ್ದಾರೆ. ಹಲವು ವರ್ಷಗಳ ಕಾಲ ಕ್ಷೇತ್ರಕಾರ್ಯ ನಡೆಸಿ ಪಾಡ್ದನ ಪಠ್ಯಗಳನ್ನು ಸಂಗ್ರಹಿಸಿ, ತುಳುವಿನಲ್ಲಿರುವ ಅವುಗಳನ್ನು ಇಂಗ್ಲಿಷ್‌ಗೆ ಲಿಪ್ಯಂತರ ಮತ್ತು ಅನುವಾದ ಮಾಡಿ, ದೈವಕ್ಕೆ ಕಟ್ಟುವ ಕಲಾವಿದರ ವಿಸ್ತಾರವಾದ ಸಂದರ್ಶನ ನಡೆಸಿ, ಸ್ಥಳೀಯ ವಿದ್ವಾಂಸರಲ್ಲಿ ಚರ್ಚಿಸಿ ಅಧಿಕೃತ ಮಾಹಿತಿಗಳನ್ನು ಕ್ರೋಡೀಕರಿಸಿ, ಸೂಕ್ತ ತಾತ್ವಿಕ ಚೌಕಟ್ಟನ್ನು ಹಾಕಿಕೊಂಡು ಅವರು ಲೇಖನಗಳನ್ನು ಬರೆದಿದ್ದಾರೆ. ಅಧ್ಯಯನ ಮತ್ತು ಬರವಣಿಗೆಯ ವಿಷಯದಲ್ಲಿ ಎಲ್ಲ ವಿದೇಶೀ ವಿದ್ವಾಂಸರು ಈ ವಿಧಾನವನ್ನು ಅನುಸರಿಸಿದ್ದಾರೆ. ವಿದೇಶೀ ವಿದ್ವಾಂಸರು ಬರೆದಿರುವ ಲೇಖನಗಳ ಶೀರ್ಷಿಕೆಗಳು ಸೂಚ್ಯ, ಧ್ವನಿಪೂರ್ಣ ಮತ್ತು ಶಕ್ತಿಯುತವಾಗಿರುವುದರಿಂದ ಅವುಗಳನ್ನು ಇಂಗ್ಲಿಷ್‌ನಲ್ಲಿಯೇ ಕೊಟ್ಟಿದ್ದೇನೆ. ಬ್ರೂಕ್ನರ್ ಅವರ ಕೆಲವು ಲೇಖನಗಳ ಶೀರ್ಷಿಕೆಗಳು ಇಂತಿವೆ :1.Bhuta Worship in Coastal Karnataka: An oral Tulu Myth and festival ritual of Jumadi 2. Dhumavathi Bhuta: An oral Tulu text collected in the 19th century: Edition, translation and analysis 3.Kannalaye: The place of a Tulu Pad-dana among interrelated oral traditions 4. Gender and Genre: Subgenre distinction in the Tulu pad-danas 5.Narrated and Dramatised Death in Tulu Culture. ಬ್ರೂಕ್ನರ್ ಅವರ On an Auspicious Day, at , Dawn... : Studies in Tulu Culture and Oral Literature ಕೃತಿಯನ್ನು ಓದಿದರೆ ಅವರ ವಿದ್ವತ್ತಿನ ಅರಿವಾಗುತ್ತದೆ. ಕನ್ನಲಾಯೆ ಭೂತದ ಸಮಗ್ರವಾದ ಒಂದು ಪಾಡ್ದನ ಪಠ್ಯ ಮತ್ತು ಒಳನೋಟಗಳುಳ್ಳ ವಿಶ್ಲೇಷಣೆಗೆ ಅವರ ಲೇಖನವನ್ನು ಓದಬಹುದು. ಆರಾಧನೆ ಮತ್ತು ಪಾಡ್ದನದ ಅಂತರ್ ಸಂಬಂಧವನ್ನು ಹಲವು ನೆಲೆಗಳಲ್ಲಿ ನೋಡುವ ಕ್ರಮಕ್ಕೆ ಅವರ ಹಲವು ಲೇಖನಗಳು ಮಾದರಿಯಾಗಿವೆ.

ಪೀಟರ್ ಜೆ. ಕ್ಲಾಸ್ ಅವರ ಹೆಸರು ನಮಗೆ ಹೆಚ್ಚು ಪರಿಚಿತ. ಬಂಟ ಸಮಾಜ ಮತ್ತು ಸಿರಿ ಸಂಧಿಯ ಬಗ್ಗೆ ಆಳವಾದ ಅಧ್ಯಯನ ನಡೆಸಿದ್ದಾರೆ. ಭೂತಾರಾಧನೆ ಮತ್ತು ಪಾಡ್ದನಗಳ ಬಗೆಗೂ ಅವರು ಹಲವು ಲೇಖನಗಳನ್ನು ಇಂಗ್ಲಿಷ್‌ನಲ್ಲಿ ಬರೆದಿದ್ದಾರೆ. ಅವರ ಲೇಖನಗಳು ಕನ್ನಡದಲ್ಲಿ ಸಿಗುತ್ತವೆ. ಅವುಗಳನ್ನು ಓದಬಹುದು. ಕ್ಲಾಸ್ ಅವರ ಹದಿನಾಲ್ಕು ಲೇಖನಗಳನ್ನು ಕನ್ನಡಕ್ಕೆ ಅನುವಾದಿಸಿ (ಪ್ರೊ. ಸುಭಾಶ್ಚಂದ್ರ ಸಹ ಅನುವಾದಕ) ಎರಡು ಭಾಗಗಳಲ್ಲಿ ವಿಂಗಡಿಸಿ ‘ತುಳುವ ದರ್ಶನ’ ಹೆಸರಿನಲ್ಲಿ ಪ್ರೊ. ಎ.ವಿ. ನಾವಡ ಪ್ರಕಟಿಸಿದ್ದಾರೆ (ಪ್ರಸಾರಾಂಗ, ಮಂಗಳೂರು ವಿಶ್ವವಿದ್ಯಾನಿಲಯ). ದೈವಾವೇಶ, ದೈವ ಪಾತ್ರಿತ್ವ, ಮೈಂದಲ ಆರಾಧನೆ, ಅರಸು ಆರಾಧನೆ, ವೀರತ್ವದ ಪರಿಕಲ್ಪನೆ, ದೈವಗಳ ಗುಣಧರ್ಮಗಳು, ಪಠ್ಯ ಪ್ರಭೇದಗಳು, ಪಠ್ಯ ಮತ್ತು ಪ್ರದರ್ಶನ ಮೊದಲಾದ ಸಂಗತಿಗಳ ಬಗ್ಗೆ ಮಾತನಾಡುವವರು ಕ್ಲಾಸ್ ಲೇಖನಗಳನ್ನು ಓದಬೇಕು. 1.Spirit Possession and Spirit Mediumship from the Perspective of Tulu oral traditions, 2.Oral Traditions, Royal cults and Materials for a Reconsideration of the caste system in South India, 3.Heroes and Heroines in Conceptual Framework of Tulu Culture ಹೀಗೆ ಅನೇಕ ಲೇಖನಗಳನ್ನು ಕ್ಲಾಸ್ ಬರೆದಿದ್ದಾರೆ. ಕ್ಲಾಸ್ ಅವರ ಲೇಖನಗಳಿಗೆ ಚಾರಿತ್ರಿಕ ಮಹತ್ವವಿದೆ. ತುಳು ಸಂಸ್ಕೃತಿಯನ್ನು ಬದುಕುವವರ ವಿಶ್ವಾಸ ಗಳಿಸಿ ಹೇಗೆ ಅಧ್ಯಯನ ನಡೆಸಬೇಕು ಎಂಬ ಪಾಠವನ್ನು ಮತ್ತು ಸರಿಯಾದ ತಿಳುವಳಿಕೆಯಿಲ್ಲದೆ ಬೀಸು ಹೇಳಿಕೆಗಳನ್ನು ನೀಡಬಾರದೆಂಬ ಎಚ್ಚರಿಕೆಯನ್ನು ವಿದೇಶೀ ವಿದ್ವಾಂಸರ ಲೇಖನಗಳು ನಮಗೆ ನೀಡುತ್ತವೆ. ಜನಪದ ಮಹಾಕಾವ್ಯಗಳ ನಿರ್ಮಾಣ, ಕಲಿಕೆ, ಮರುಪ್ರಸಾರ ಮತ್ತು ಬಳಕೆಯ ಕುರಿತಂತೆ ನಮ್ಮ ಅರಿವನ್ನು ವಿಸ್ತರಿಸುವ ಲೇಖನಗಳನ್ನು ಲೌರಿ ಹೋಂಕೊ ಬರೆದಿದ್ದಾರೆ. ಎರಡು ಸಂಪುಟಗಳಲ್ಲಿರುವ ‘‘The Siri Epic as performed by Gopala Naika’ ಕೃತಿಯ ಪ್ರಸ್ತಾವನೆಯ ಒಂದು ಅಧ್ಯಾಯದ ಹೆಸರು ‘On the Learning and Oral Composition of Oral Epics’. ಪಾಡ್ದನಗಳು ಜನರ ಪಠ್ಯಗಳು. ಪಠ್ಯ ರಚನೆಯಲ್ಲಿ ಗಾಯಕರ ತಿಳುವಳಿಕೆ ನಿರ್ಣಾಯಕ ಪಾತ್ರ ವಹಿಸುತ್ತದೆ. ಪಾಡ್ದನಗಳ ಅಧಿಕೃತ ಒಡೆಯರು ಅದನ್ನು ಪ್ರಸ್ತುತಪಡಿಸುವ ನಲಿಕೆ, ಪರವ, ಪಂಬದ ಸಮುದಾಯಗಳ ಕಲಾವಿದರೇ ಆಗಿದ್ದಾರೆ. ಇದರ ಅರಿವಿಲ್ಲದೆ ಪಾಡ್ದನಗಳ ಬಗ್ಗೆ ಮಾತನಾಡುವುದು ಸರಿಯಲ್ಲ. ಪಾಡ್ದನಗಳ ಪಠ್ಯ ಸ್ವರೂಪವನ್ನು ನಿರ್ಣಯಿಸುವ ಶಕ್ತಿ ಮತ್ತು ಸಾಮರ್ಥ್ಯವನ್ನು ಗಾಯಕರು ಹೊಂದಿರುತ್ತಾರೆ. ಆರಾಧನೆಯಲ್ಲಿ ಕಲಾವಿದ ಕೇಂದ್ರಿತ ಅಧ್ಯಯನ ಬಹಳ ಮುಖ್ಯವಾಗುತ್ತದೆ. ಕಲಾವಿದರು ವಿದ್ವಾಂಸರೇ ಆಗಿರುತ್ತಾರೆ ಎಂದು ನಮಗೆ ತಿಳಿದಿರಬೇಕು. ಈ ಹಿನ್ನೆಲೆಯಲ್ಲಿ ಲೌರಿ ಹೋಂಕೊ ಮತ್ತು ಇತರ ವಿದೇಶೀ ವಿದ್ವಾಂಸರ ಲೇಖನಗಳು ನಮಗೆ ಮಾರ್ಗದರ್ಶಿಯಾಗಿವೆ. ಜಪಾನಿನ ಕ್ಯೋಟೊ ವಿಶ್ವವಿದ್ಯಾನಿಲಯದ ಮಿಹೋ ಇಶೀ ಅವರ ಲೇಖನ ‘Wild Sacredness and Poiesis of Transactional Networks : Relational Divinity and Spirit Possession in the Bhuta Ritual of South India’ ಬಹಳ ವಿಶಿಷ್ಟವಾಗಿದೆ. ಒಂದು ನಿರ್ದಿಷ್ಟ ಆರಾಧನಾ ಕೇಂದ್ರವನ್ನು ಇಟ್ಟುಕೊಂಡು ಅಲ್ಲಿ ಆರಾಧನೆ ಹೊಂದುವ ಭೂತಗಳ ಅಧಿಕಾರ ಹಂಚಿಕೆ ಮತ್ತು ಮರು ಹೊಂದಾಣಿಕೆಯ ವಿನ್ಯಾಸವನ್ನು ಬಹಳ ಸೊಗಸಾಗಿ ವಿಶ್ಲೇಷಿಸಿದ್ದಾರೆ. ಈ ತರದ ಅಧ್ಯಯನಗಳು ನಮಗೆ ಹೊಸತು. ಇಂತಹ ಜಾಗದಲ್ಲಿ ಆಲಯ ಬೇಕು, ಈ ಕ್ರಮದಲ್ಲಿ ಆರಾಧನೆ ನಡೆಯಬೇಕು, ಯಾವ ದೈವಕ್ಕೆ ಯಾವ ಸ್ಥಾನಮಾನ ಸಿಗಬೇಕು ಎಂಬುದನ್ನು ದೈವವೇ ನಿರ್ಣಯ ಮಾಡುವ ಕುರಿತ ಅಧ್ಯಯನ ಇದಾಗಿದೆ. ದೈವಗಳು ಮತ್ತು ಮನುಷ್ಯರು ಒಟ್ಟಾಗಿ ಮಾಯ/ಜೋಗದಲ್ಲಿ ಸಮಾಗಮಗೊಂಡು ವ್ಯವಹರಿಸುವ ವ್ಯೆಹಾತ್ಮಕ ನಡೆ ಕುತೂಹಲದಾಯಕವಾಗಿದೆ ಎಂದು ಮಿಹೋ ಇಶೀ ಹೇಳುತ್ತಾರೆ. ಪ್ರಾಣಿಗಳು ದೈವತ್ವದ ನೆಲೆಗೆ ರೂಪಾಂತರಗೊಳ್ಳುವ ವಿನ್ಯಾಸವನ್ನು ಚರ್ಚಿಸಿದ ಬಗೆ ಗಮನ ಸೆಳೆಯುತ್ತದೆ.

ಪಾಡ್ದನಗಳು ಮತ್ತು ಆರಾಧನೆಯಲ್ಲಿ ಹಲವು ಸೂಕ್ಷ್ಮ ಸಂಗತಿಗಳಿವೆ. ಕೆಲವು ಪಾಡ್ದನಗಳು ಪ್ರಾಣಿಗಳ ಕತೆಯಂತೆ ಮೇಲ್ನೋಟಕ್ಕೆ ಕಂಡುಬರುತ್ತವೆ. ಆದರೆ ಅವುಗಳಲ್ಲಿ ಮನುಷ್ಯರ ವಲಸೆ ಮತ್ತು ಸಂಘರ್ಷದ ಎಳೆಗಳಿವೆ. ಆರಾಧನೆಯಲ್ಲಿ ಪ್ರಾಣಿ ಮತ್ತು ಮನುಷ್ಯನ ಸಂಯೋಜಿತ ರೂಪ ಇರುವುದನ್ನು ಕಾಣಬಹುದು, ಅದರ ಅರ್ಥ ಮತ್ತು ಉದ್ದೇಶಗಳನ್ನು ಪರಿಭಾವಿಸಬೇಕು. ಕಲಾವಿದರು ಪಾಡ್ದನವನ್ನು ಆರಾಧನೆಯ ರಂಗಪಠ್ಯವನ್ನಾಗಿ ಮಾಡುತ್ತಾರೆ, ಹಾಗಾಗಿ ಪಾಡ್ದನದ ವಿವರಗಳು ಆರಾಧನೆಯ ಉದ್ದಕ್ಕೂ ಪ್ರಕಟವಾಗುತ್ತವೆ. ಆರಾಧನೆಯ ಸ್ವರೂಪವನ್ನು ರೂಪಿಸುವ ಮತ್ತು ನಿಯಂತ್ರಿಸುವ ಪಾಡ್ದನಗಳನ್ನು ಹಗುರವಾಗಿ ಪರಿಗಣಿಸುವಂತಿಲ್ಲ. ಇಂತಹ ಅಂಶಗಳ ಪರಿಜ್ಞಾನ ನಮಗೆ ಬರಬೇಕಾದರೆ ಪಾಡ್ದನ ಮತ್ತು ಆರಾಧನೆಯ ಕುರಿತಂತೆ ಪ್ರಕಟವಾಗಿರುವ ಇಂಗ್ಲಿಷ್ ಮತ್ತು ಕನ್ನಡದ ಕೃತಿಗಳನ್ನು ಓದಬೇಕು. ಆರಾಧನೆ ಮಾಡಿಸುವವರು, ಭೂತ ಕಟ್ಟುವವರು, ಇವುಗಳ ಕುರಿತು ಚರ್ಚೆ ಮಾಡುವವರು ಪ್ರಬುದ್ಧರಾಗಿ ವರ್ತಿಸಬೇಕು, ತಿಳುವಳಿಕೆಯನ್ನು ಪೂರಕವಾಗಿ ಹಂಚಿಕೊಳ್ಳಬೇಕು. ಇದು ಸದ್ಯದ ಕಾಲಘಟ್ಟದ ಬಹು ಮುಖ್ಯ ಅಗತ್ಯವಾಗಿದೆ. ಸಾಂಸ್ಕೃತಿಕ ಮೌಲ್ಯಗಳಿರುವ ಪಾಡ್ದನಗಳು ಮತ್ತು ಜಾಗತಿಕ ಮನ್ನಣೆ ಹೊಂದಿರುವ ಭೂತಾರಾಧನೆಯ ಸರಿಯಾದ ಸಂರಕ್ಷಣೆ ಆಗಬೇಕಾದರೆ ಅವುಗಳ ಕುರಿತ ಮಾತು ಮತ್ತು ಬರಹಕ್ಕೆ ಓದಿನ ಬೆಂಬಲ ಇರಬೇಕು.

Tags

Cultural ReflectionSpeechWritingreading
share
ಡಾ. ಕೆ. ಚಿನ್ನಪ್ಪ ಗೌಡ
ಡಾ. ಕೆ. ಚಿನ್ನಪ್ಪ ಗೌಡ
Next Story
X