Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ದಲಿತ ಸಾಹಿತಿ, ಕಲಾವಿದರಿಗೆ ಸಿಗಲಿ...

ದಲಿತ ಸಾಹಿತಿ, ಕಲಾವಿದರಿಗೆ ಸಿಗಲಿ ಮನ್ನಣೆ

ಗೌಡಗೆರೆ ಮಾಯುಶ್ರೀಗೌಡಗೆರೆ ಮಾಯುಶ್ರೀ1 Sept 2026 12:02 PM IST
share
ದಲಿತ ಸಾಹಿತಿ, ಕಲಾವಿದರಿಗೆ ಸಿಗಲಿ ಮನ್ನಣೆ

ಬಾಬಾ ಸಾಹೇಬ್ ಅಂಬೇಡ್ಕರ್‌ರವರ ಬದುಕು, ಬರಹಗಳನ್ನು ಹಾಗೂ ಸಾಮಾಜಿಕ ಹೋರಾಟಗಳನ್ನು ಅರ್ಥೈಸಿಕೊಂಡಂತೆಲ್ಲ ಹಾಗೂ ಜಗತ್ತಿನ ವಿದ್ಯಮಾನಗಳನ್ನೆಲ್ಲ ವೀಕ್ಷಿಸುತ್ತಾ ಬಂದಂತೆಲ್ಲಾ ಸುಶಿಕ್ಷಿತ ಪ್ರಜ್ಞಾವಂತ ಬರಹಗಾರರು, ಸಾಹಿತಿಗಳು, ಸಮುದಾಯದ ಬದುಕನ್ನು ಉತ್ತಮಗೊಳಿಸುವ ಪ್ರಯತ್ನವೆಂಬಂತೆ ತಮ್ಮ ತಮ್ಮ ಚಿಂತನೆಗಳನ್ನು, ಸಂದೇಹಗಳನ್ನು, ಪರಿಹಾರೋಪಾಯದ ಮಾರ್ಗಗಳನ್ನು ತಮ್ಮ ಸಾಹಿತ್ಯ ಕೃತಿಗಳಲ್ಲಿ ದಾಖಲಿಸುತ್ತಾ ಬಂದಿರುವುದು ನಮ್ಮೆದುರುಗಿವೆ. ಸಮುದಾಯದ ಸಾಮಾಜಿಕ ಮತ್ತು ಆರ್ಥಿಕ ಪ್ರಗತಿಗೆ ಪೂರಕವಾದ ಚಿಂತನ ಬರಹಗಳು, ಬೀದಿ ನಾಟಕಗಳು ಮತ್ತು ಹೋರಾಟದ ಹಾಡುಗಳ ಮೂಲಕ ಸಮುದಾಯದ ಅರಿವಿನ ವಿಸ್ತಾರಕ್ಕೆ ತಮ್ಮನ್ನು ತೊಡಗಿಸಿಕೊಂಡಿರುವುದು ಮಾತ್ರವಲ್ಲ, ಶೋಷಣೆಯ ಮೂಲಕ ಸಾಮಾಜಿಕ ಅಸಮಾನತೆ ಮತ್ತು ಜಾತೀಯತೆಗೆ ಕಾರಣವಾಗಿರುವ ಸಮಾಜಕ್ಕೆ ಎಚ್ಚರಿಕೆಯ ಸಂದೇಶವನ್ನೂ ನೀಡುತ್ತಾ ಬಂದ ಪರಿಣಾಮ ಸಮಾಜದಲ್ಲಿ ಒಂದಷ್ಟು ಜಾಗೃತಿ ಮತ್ತು ಅರಿವು ಬಂದಿರುವುದನ್ನು ನಾವೆಲ್ಲ ಕಾಣಬಹುದು.

ದಲಿತ ಸಂಘಟನೆಗಳು ತಾವು ಹಮ್ಮಿಕೊಳ್ಳುವ ಹೋರಾಟದ ಸಂದರ್ಭಗಳಲ್ಲಿ ಹೊರತರುವ ಕರಪತ್ರಗಳಲ್ಲಿ ಇಡೀ ವ್ಯವಸ್ಥೆಯನ್ನೇ ಎಚ್ಚರಿಸುವ, ಆಡಳಿತಶಾಹಿಗಳ ಕಣ್ಣು ತೆರೆಸುವ ಮತ್ತು ಶೋಷಿತ ಸಮುದಾಯಗಳಲ್ಲಿ ಹೊಸ ಅರಿವನ್ನು ಮೂಡಿಸುವ ಬರಹಗಳಿದ್ದು, ಅವುಗಳು ತಮ್ಮ ಜವಾಬ್ದಾರಿಯನ್ನು ಅತ್ಯಂತ ನಿಷ್ಠೆಯಿಂದ ಪೂರೈಸಿವೆ. ಅಂತಹ ಕರಪತ್ರಗಳನ್ನು ಬರೆದು ಚಳವಳಿಗೆ ಜೀವತುಂಬುವ ದಲಿತ ಲೇಖಕರು ತೆರೆಮರೆಯಲ್ಲಿ ಉಳಿದರೂ ಅವರ ಚಿಂತನೆ, ಬರಹಗಳು ಮಾತ್ರ ಜನತೆಯ ನಡುವೆ ಮುಖಾಮುಖಿಯಾಗುತ್ತಲೇ ಬಂದಿವೆ. ದಲಿತ ಬರಹಗಾರರು ತಮ್ಮ ಸಾಂಸಾರಿಕ ಒತ್ತಡ, ಉದ್ಯೋಗ, ಅಧ್ಯಯನದ ಜೊತೆಜೊತೆಗೆ ಸಮುದಾಯಕ್ಕೂ ತಮ್ಮ ಬರಹಗಳ ಮೂಲಕ ಕೊಡುಗೆ ನೀಡುತ್ತಿರುವುದನ್ನು ಮರೆಯಲಾಗದು. ಸಮುದಾಯದ ಅನೇಕ ಕವಿಗಳು/ಲೇಖಕರು ಯಾವುದೇ ಪ್ರತಿಫಲವನ್ನಾಗಲಿ, ಸರಕಾರಗಳ ಪ್ರಶಸ್ತಿ-ಪುರಸ್ಕಾರಗಳಿಗಾಗಲಿ ನಿರೀಕ್ಷಿಸದೆ ತಮ್ಮ ಪಾಡಿಗೆ ತಾವು ಈ ಸಮುದಾಯದ ಒಳಬೇಗುದಿ, ನೋವು ಸಂಕಟಗಳನ್ನು, ಆಕ್ರೋಶದ ಜ್ವಾಲೆಗಳನ್ನು ತಮ್ಮ ಕವನ ಸಂಕಲನ, ಕಥಾಸಂಕಲನ, ಆತ್ಮಚರಿತ್ರೆ, ಧ್ವನಿಸುರಳಿ, ವೃತ್ತ ಪತ್ರಿಕೆ, ಮ್ಯಾಗಝಿನ್‌ಗಳಲ್ಲಿ ದಾಖಲಿಸುತ್ತಾ ಬಂದಿರುವುದಲ್ಲದೆ ಸಿಕ್ಕ ಅವಕಾಶಗಳ ಸಂದರ್ಭದಲ್ಲೂ ತಮ್ಮ ಭಾಷಣಗಳ ಮೂಲಕ, ಕವನ ಕಾವ್ಯಗಳನ್ನು ವಾಚಿಸುವ ಮೂಲಕ ವೇದಿಕೆಗಳಲ್ಲಿ, ಸಮಾರಂಭಗಳಲ್ಲಿ ಸಮಾಜದ ಗಮನ ಸೆಳೆಯುವಲ್ಲಿ ಹಿಂದುಳಿದಿಲ್ಲವೆಂಬುದು ಸತ್ಯ.

ಸಾಹಿತ್ಯ ಹಾಗೂ ಸಾಂಸ್ಕೃತಿಕ ಕ್ಷೇತ್ರದಲ್ಲಿ ಗುರುತಿಸಿಕೊಂಡ ದಲಿತ ಸಾಹಿತಿ/ಕಲಾವಿದರುಗಳಿಗೆ ಸೂಕ್ತ ಸ್ಥಾನಮಾನ ದೊರಕಿಸಿಕೊಡುವಲ್ಲಿ ನಿರೀಕ್ಷೆಯಷ್ಟು ಸಾಧ್ಯವಾಗಿಲ್ಲವಾದರೂ, ಅವಕಾಶ ವಂಚಿತ ದಲಿತರ ಬದುಕು-ಬವಣೆಗಳನ್ನು ಅರಿತ ಹಾಗೂ ಸಾಹಿತ್ಯ ಸಂಸ್ಕೃತಿ ಬಗ್ಗೆ ಒಲವುಳ್ಳ ಮಂತ್ರಿ ಮಹೋದಯರು ಈ ಸಮುದಾಯದ ಸಾಹಿತಿ/ಕಲಾವಿದರುಗಳನ್ನು ಗುರುತಿಸಿ ವಿಧಾನಪರಿಷತ್‌ಗೆ ನಾಮಕರಣ ಹಾಗೂ ವಿವಿಧ ಅಕಾಡಮಿ, ವಿಶ್ವವಿದ್ಯಾನಿಲಯಗಳಲ್ಲಿ ಸೂಕ್ತ ಸ್ಥಾನಮಾನವನ್ನು ದೊರಕಿಸಿಕೊಟ್ಟಿರುವುದು ಸತ್ಯವಾದರೂ, ಅದರ ವ್ಯಾಪ್ತಿ ಹಿರಿದಾಗಬೇಕಾಗಿದೆ. ಕಾರಣ, ಸುಮಾರು ಒಂದೂವರೆ ಕೋಟಿಯಷ್ಟು ಜನಸಂಖ್ಯೆ ಎಂದು ಹೇಳಲ್ಟಟ್ಟಿರುವ ಈ ಸಮುದಾಯಕ್ಕೆ ಬೆರಳೆಣಿಕೆಯಷ್ಟು ಅವಕಾಶಗಳು ದೊರೆತರೆ ಸ್ವಾಭಾವಿಕವಾಗಿ ಪ್ರತಿಭೆ, ಅರ್ಹತೆಯುಳ್ಳವರಲ್ಲಿ ಅಸಮಾಧಾನ, ಅಸಹನೆ ಮೂಡುವುದು ಸಹಜ ಮತ್ತು ವಾಸ್ತವ. ಇನ್ನು ಸರಕಾರ ಕೊಡಮಾಡುವ ಪ್ರಶಸ್ತಿ-ಪುರಸ್ಕಾರಗಳಲ್ಲೂ ಇಂತಹ ಬೆರಳೆಣಿಕೆಯಷ್ಟು ಮಂದಿಗೆ ಮಾತ್ರ ಅವಕಾಶ ದೊರೆಯುತ್ತಿರುವುದು ಬದಲಾಗಬೇಕಿದೆ. ಉದಾಹರಣೆಗೆ ಹೇಳುವುದಾದರೆ ಸರಕಾರ ನೀಡುವ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಇರಲಿ, ಡಾ. ಅಂಬೇಡ್ಕರ್ ಹಾಗೂ ಜಗಜೀವನ್ ರಾಮ್ ಪ್ರಶಸ್ತಿಯಾಗಲಿ ಇಲ್ಲೆಲ್ಲ ಸೀಮಿತ ಅವಕಾಶಗಳಿದ್ದು, ದಲಿತ ಸಮುದಾಯಕ್ಕೆ ಇನ್ನಷ್ಟು ಮತ್ತಷ್ಟು ಉತ್ತೇಜನದ ಅವಶ್ಯವಿದೆ.

ಇನ್ನು ಸಮುದಾಯದ ಪ್ರತಿಭಾವಂತರ ಪೈಕಿ ಯಾರನ್ನಾದರೂ ಗುರುತಿಸಿ ಸರಕಾರ ಒಂದಷ್ಟು ಸ್ಥಾನಮಾನ ಕೊಟ್ಟಾಗ ಅದನ್ನು ಗೌರವಿಸುವುದಕ್ಕಿಂತ ಸರಕಾರಕ್ಕೆ ತಮ್ಮನ್ನು ಮಾರಿಕೊಂಡವರೆಂದೋ, ಪ್ರಶಸ್ತಿ ಪುರಸ್ಕಾರಕ್ಕೆ ಜೋತು ಬಿದ್ದವರೆಂದೋ, ಆಳುವ ಸರಕಾರದ ಜೊತೆ ಶಾಮೀಲಾದವರೆಂದೋ ಟೀಕಿಸಿ ತಮ್ಮ ಮಾತಿನ ಚಟವನ್ನು ತೀರಿಸಿಕೊಳ್ಳುವವರಿಗೇನೂ ಕಮ್ಮಿ ಇಲ್ಲ.

ದಲಿತರ ಬರಹಗಳಲ್ಲಿ ಸಾಮಾಜಿಕ ತಾರತಮ್ಯ, ಅಸ್ಪಶ್ಯತೆ, ಜಾತೀಯತೆಯ ವಿರುದ್ಧದ ತಮ್ಮ ಆಕ್ರೋಶ ಮತ್ತು ಬಾಧೆಗಳಷ್ಟೇ ಪ್ರತಿನಿಧಿಸುತ್ತವೆಂದು ನಿರ್ಲಕ್ಷಿಸುವ, ಜಾತೀಯತೆಯ ಪೂರ್ವಾಗ್ರಹವುಳ್ಳ ವ್ಯವಸ್ಥೆಯ ವಿವಿಧ ಅಂಗಗಳು ಉದಾಶೀನ ಮಾಡುವ ಸಂಗತಿಗಳನ್ನು ಮರೆಮಾಚಲಾಗದು. ಆದರೂ, ಆರ್ಥಿಕ ಸಂಕಷ್ಟದಲ್ಲಿರುವ ದಲಿತ ಸಮುದಾಯದ ಬರಹಗಾರರು ತಮ್ಮ ಕೃತಿಗಳನ್ನು ಹೊರತರಲು ಹರಸಾಹಸ ಪಡುವುದನ್ನು, ಅಂತೂ ಇಂತೂ ಸಾಲ ಸೋಲ ಮಾಡಿ ಪ್ರಕಟಿಸಿದರೂ ಅದು ಓದುಗರನ್ನು ತಲುಪುವಲ್ಲಿ ವಿಫಲವಾಗುವುದನ್ನು ಸರಕಾರಗಳು ಅರ್ಥೈಸಿಕೊಂಡು ಅವರ ನೆರವಿಗೆ ಧಾವಿಸಬೇಕು. ಹೀಗಾದಾಗ, ಈ ಸಮುದಾಯದ ಬರಹಗಾರರು ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ತಮ್ಮ ಹೆಜ್ಜೆಗುರುತುಗಳನ್ನು ಉಳಿಸಲು ಸಾಧ್ಯವಾದೀತು. ಇದು ಸಿನೆಮಾ ಮತ್ತು ಸಾಕ್ಷ್ಯಚಿತ್ರ ನಿರ್ಮಿಸುವ, ಧ್ವನಿಸುರುಳಿ, ಪತ್ರಿಕೆಗಳನ್ನು ಹೊರತರುವ, ಒಟ್ಟಾರೆ ಕನ್ನಡ ಸಾಂಸ್ಕೃತಿಕ ಕ್ಷೇತ್ರವನ್ನು ಶ್ರೀಮಂತಗೊಳಿಸುವಲ್ಲಿ ನೆರವಾಗುವುದರಲ್ಲಿ ಸಂಶಯವಿಲ್ಲ.

Tags

Dalitwritersartists
share
ಗೌಡಗೆರೆ ಮಾಯುಶ್ರೀ
ಗೌಡಗೆರೆ ಮಾಯುಶ್ರೀ
Next Story
X