Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಪ್ರಸಕ್ತ ವಿದ್ಯಮಾನಕ್ಕೆ ಸ್ಪಂದಿಸಿದ...

ಪ್ರಸಕ್ತ ವಿದ್ಯಮಾನಕ್ಕೆ ಸ್ಪಂದಿಸಿದ ‘ಪ್ರೀತಿ ಮತ್ತು ಶಾಂತಿಗಾಗಿ ನೃತ್ಯ’ ಕಾರ್ಯಕ್ರಮ

ಉದ್ಯಾವರ ನಾಗೇಶ್ ಕುಮಾರ್ಉದ್ಯಾವರ ನಾಗೇಶ್ ಕುಮಾರ್24 Jun 2024 2:34 PM IST
share
ಪ್ರಸಕ್ತ ವಿದ್ಯಮಾನಕ್ಕೆ ಸ್ಪಂದಿಸಿದ ‘ಪ್ರೀತಿ ಮತ್ತು ಶಾಂತಿಗಾಗಿ ನೃತ್ಯ’ ಕಾರ್ಯಕ್ರಮ

ಉಡುಪಿ: ನೃತ್ಯತಜ್ಞೆ ಲಹರಿ ಭಾರಿಘಾಟ್ ನೇತೃತ್ವದ ಸಹಚಾರಿ - ಬೆಂಗಳೂರು ಸಂಸ್ಥೆಯು ರಾಜ್ಯಾದ್ಯಂತ ‘ಸಂವಾದ ಬದುಕು’ ಫಿಲೋಷಿಪ್‌ನ ಭಾಗವಾಗಿ ಆರು ನೃತ್ಯ ತಜ್ಞರಿಂದ ‘ಪ್ರೀತಿ ಮತ್ತು ಶಾಂತಿಗಾಗಿ ನೃತ್ಯ’ ಕಾರ್ಯಕ್ರಮವನ್ನು ಆಯೋಜಿಸುತ್ತಿದೆ. ಉಡುಪಿಯಲ್ಲೂ ರಥಬೀದಿ ಗೆಳೆಯರು(ರಿ.) ಸಂಸ್ಥೆಯ ಆಶ್ರಯದಲ್ಲಿ ನೃತ್ಯತಜ್ಞೆ ಕೆ.ಶಾರದಾ. ಆಚಾರ್ಯರಿಂದ ಈ ಕಾರ್ಯಕ್ರಮ ಜರುಗಿತು.

ಒಂದು ಸಾಂಪ್ರದಾಯಿಕ ನೃತ್ಯವಾದ ಭರತನಾಟ್ಯ ತನ್ನ ಚೌಕಟ್ಟಿನ ಒಳಗೆಯೇ ಪ್ರಸಕ್ತ ವಿದ್ಯಮಾನಕ್ಕೆ ಹೇಗೆ ಸ್ಪಂದಿಸಬಹುದು ಎಂಬುದಕ್ಕೆ ಈ ಕಾರ್ಯಕ್ರಮ ಒಂದು ಸಾಕ್ಷಿಯಾಯಿತು.

ನೃತ್ಯದಲ್ಲಿ ಸಂವಿಧಾನದ ತತ್ವಗಳನ್ನು ಅಳವಡಿಸಿಕೊಂಡು ಅದನ್ನು ಪ್ರತಿಪಾದಿಸುವ ಮತ್ತು ಸುತ್ತಲಿನ ಆಗುಹೋಗುಗಳಿಗೆ ಸ್ಪಂದಿಸುವ ಉದ್ದೇಶ ಈ ನೃತ್ಯ ಕಾರ್ಯಕ್ರಮದ್ದಾಗಿದೆ. ಸಹಚಾರಿ ತಂಡ ಇದರಲ್ಲಿ ಯಶಸ್ಸನ್ನು ಸಾಧಿಸಿದೆ.

ಮೊದಲು ಸಂವಿಧಾನದ ಪೀಠಿಕೆಯ ಮಾತುಗಳಿಗೆ ರಾಗ ಸಂಯೋಜಿಸಿ ಈ ನೃತ್ಯವು ನ್ಯಾಯ, ಸಮಾನತೆ, ಬಂಧುತ್ವದ ಕುರಿತಂತೆ ಭಾರತದ ಸಂವಿಧಾನದ ಬದ್ಧತೆಯನ್ನು ನೆನಪಿಸುತ್ತದೆ ಮತ್ತು ನಾಗರಿಕರಾದ ನಮ್ಮ ಕರ್ತವ್ಯಗಳ ಬಗ್ಗೆ ಎಚ್ಚರಿಸುತ್ತದೆ. ಈ ನೃತ್ಯದ ನಂತರ ಇಡೀ ಸಂವಿಧಾನದ ಆಶಯ ನಮ್ಮ ಕಣ್ಣ ಮುಂದೆ ಸ್ಪಷ್ಟವಾಗುತ್ತದೆ.

ಭರತನಾಟ್ಯದ ಸಾಂಪ್ರದಾಯಿಕ ಪ್ರಾರ್ಥನಾ ನೃತ್ಯ(ಅಲರಿಪು)ದ ನಂತರ ಕಬೀರನ ದೋಹೆಯ ಒಂದು ನೃತ್ಯ ‘ನನ್ನನ್ನು ಮಂದಿರ ಮಸೀದಿ ಚರ್ಚ್‌ಗಳಲ್ಲಿ ಹುಡುಕಾಡಬೇಡಿ, ನಾನು ನಿಮ್ಮ ಕೆಲಸದಲ್ಲಿದ್ದೇನೆ’ ಎಂಬ ಅರ್ಥ ಬರುವ ಹಾಡು ಇದು. ದೇವರನ್ನು ಹುಡುಕಲು ನಮನ ಪ್ರೇರೇಪಿಸುತ್ತದೆ. ನಿಜವಾದ ಜ್ಞಾನ ಮತ್ತು ದೈವತ್ವ ನಾವು ನಿರ್ಮಿಸಿದ ಧಾರ್ಮಿಕ ಗಡಿಗಳನ್ನು ಮೀರಿ ನಿಲ್ಲುತ್ತದೆ ಎಂದು ಹೇಳುತ್ತದೆ. ನಂತರ ಜರಗುವುದು ರಾಮಾಯಣದ ಶೂರ್ಪನಖಿ ಪ್ರಕರಣ. ಶೂರ್ಪನಖಿಯ ದೃಷ್ಟಿಕೋನದಿಂದ ನೃತ್ಯವನ್ನು ಇಲ್ಲಿ ಪ್ರಸ್ತುತಪಡಿಸಲಾಗಿದೆ. ಶೂರ್ಪನಖಿ ಒಬ್ಬಳು ಹೆಣ್ಣಾಗಿ ರಾಮನನ್ನು ಪ್ರೀತಿಸುವುದರಲ್ಲಿ ತಪ್ಪಿಲ್ಲ. ತಪ್ಪಾಗಿದ್ದರೂ ಅದನ್ನು ತಿಳಿ ಹೇಳಬಹುದಿತ್ತು. ಆದರೆ ಅದಕ್ಕೆ ಇಂತಹ ಶಿಕ್ಷೆಯೇ ಎಂಬ ಪ್ರಶ್ನೆಯನ್ನು ನೃತ್ಯ ಎತ್ತುತ್ತದೆ. ಶೂರ್ಪನಖಿಯ ಅನುಭವ, ಆಲೋಚನೆ ಅದರೊಂದಿಗೆ ಆಕೆಯ ಹೋರಾಟ, ಅಂತಿಮವಾಗಿ ಆಕೆ ಆರಿಸಿಕೊಳ್ಳುವ ಶಾಂತಿಯ ಮಾರ್ಗ ನೋಡುಗರ ಮನಸ್ಸನ್ನು ಅರ್ದ್ರಗೊಳಿಸುತ್ತದೆ.

ನಂತರದ ನೃತ್ಯ ಇಡಿ ಕಾರ್ಯಕ್ರಮದ ಮಾಸ್ಟರ್ ಪೀಸ್ ಎನ್ನಬಹುದು. ಸರ್ವಧರ್ಮ ಸಮನ್ವಯತೆಯ ಬಗ್ಗೆ ಮೂಡ್ನಾಕೋಡು ಚಿನ್ನಸ್ವಾಮಿಯವರ ಕವನ ‘ನಮ್ಮ ಎಲುಬಿನ ಹಂದರದೊಳಗೊಂದು...’ ಇದರ ಪ್ರಸ್ತುತಿಯು ಒಂದು ವಿಶಿಷ್ಟ ಅನುಭವ ನೀಡುತ್ತದೆ. ಕಲಾವಿದೆಯ ಒಳಗೊಳ್ಳುವಿಕೆ ಈ ನೃತ್ಯದಲ್ಲಿ ಎದ್ದು ಕಾಣುತ್ತದೆ. ಮಂದಿರ, ಚರ್ಚ್, ಮಸೀದಿಗಳು ಬೇರೆ ಎಲ್ಲೂ ಇಲ್ಲ. ನಮ್ಮ ಹೃದಯದಲ್ಲಿದೆ. ಅಲ್ಲಿ ರಾಮ, ಅಲ್ಲಿ ಅಲ್ಲಾಹ್, ಅಲ್ಲಿ ಯೇಸು ಇದ್ದಾರೆ. ನಾವು ಅದನ್ನು ಗುರುತಿಸಬೇಕಷ್ಟೆ ಎನ್ನುವ ಈ ಕವಿತೆಯನ್ನು ಅಭಿವ್ಯಕ್ತಿಸಿದ ರೀತಿ ಅಂತೂ ಅದ್ಭುತ.

ಕೊನೆಯ ನೃತ್ಯ ‘ದಿ ಗ್ರೇಟ್ ಡಿಕ್ಟೇಟರ್’ ಚಿತ್ರದಲ್ಲಿ ಚಾರ್ಲಿ ಚಾಪ್ಲಿನ್ ಮಾಡಿದ ಕೊನೆಯ ಭಾಷಣದ ಪ್ರಸ್ತುತಿ. ಶಾಂತಿ, ಸಮಾನತೆ, ಅಹಿಂಸೆ, ಮಾನವೀಯತೆಯ ಬಗ್ಗೆ ಮಾತಾಡುವ ಈ ನೃತ್ಯ ಈ ಕಾಲಮಾನದಲ್ಲಿ ಸರ್ವಾಧಿಕಾರಕ್ಕೆ ಪ್ರಜಾಪ್ರಭುತ್ವವನ್ನು ಮುಖಾಮುಖಿಯಾಗಿಸಿ ದೇಶದ ಉಜ್ವಲ ಭವಿಷ್ಯದ ಬಗ್ಗೆ ಕೆಲಸ ಮಾಡಲು ಕರೆ ನೀಡುತ್ತದೆ.

ಒಟ್ಟಿನಲ್ಲಿ ಶಾಂತಿ ಮತ್ತು ಪ್ರೀತಿಗಾಗಿ ನೃತ್ಯ ನೆರೆದ ಪ್ರೇಕ್ಷಕರಲ್ಲಿ ಹೊಸ ಆಲೋಚನೆಗಳನ್ನ ಹುಟ್ಟು ಹಾಕಿದ್ದಂತೂ ಸತ್ಯ. ನಂತರ ಜರುಗಿದ ಕಿರು ಸಂವಾದದಲ್ಲಿ ನೃತ್ಯಗಾತಿ ಕೆ.ಶಾರದಾ ಆಚಾರ್ಯರ ಮಾತುಗಳಲ್ಲಿದ್ದ ಸ್ಪಷ್ಟತೆ ಮತ್ತು ತನ್ನ ಬದ್ಧತೆಯ ಬಗ್ಗೆ ಹೆಮ್ಮೆ ಅನಿಸುತ್ತದೆ. ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ, ‘ನನಗೆ ಗೊತ್ತಿರುವ ಭಾಷೆ ನೃತ್ಯ. ನನಗೆ ಹೇಳಬೇಕಾದ್ದನ್ನು ನಾನು ನೃತ್ಯದ ಮೂಲಕ ಹೇಳುತ್ತೇನೆ. ಈ ಕಾಲಮಾನಕ್ಕೆ ಸ್ಪಂದಿಸುತ್ತೇನೆ’ ಎನ್ನುವ ಮಾತು ಅವರ ಬದ್ಧತೆಯನ್ನು ತೋರಿಸುತ್ತದೆ.

ಭರತನಾಟ್ಯದ ಪ್ರಾರ್ಥನಾ ನೃತ್ಯವಾದ ಅಲರಿಪು ನೃತ್ಯವನ್ನು ಪ್ರಾರಂಭದಲ್ಲಿ ಪ್ರಸ್ತುತಪಡಿಸದೆ ಭಾರತ ಸಂವಿಧಾನದ ಪೀಠಿಕೆಯನ್ನು ಪ್ರಾರಂಭದಲ್ಲಿ ಪ್ರಸ್ತುತಪಡಿಸಿದ ತಂಡದ ರೀತಿಯನ್ನು ನೋಡಿದಾಗ ತಂಡದ ಸಾಮಾಜಿಕ ಬದ್ಧ್ಧತೆ ಸ್ಪಷ್ಟವಾಗುತ್ತದೆ.

ಯಾವುದೇ ಸಾಂಪ್ರದಾಯಿಕ ಕಲಾ ಪ್ರಕಾರವಿರಲಿ ಅದು ತನ್ನ ಸುತ್ತ ಚೌಕಟ್ಟು ಹಾಕಿಕೊಂಡು ಪ್ರದರ್ಶನ ಮಾಡುವುದನ್ನು ಬಿಟ್ಟು ಮೂಲ ಆಶಯಕ್ಕೆ ಭಂಗ ಬರದಂತೆ ಪ್ರಸಕ್ತ ಕಾಲಮಾನಕ್ಕೆ ಸ್ಪಂದಿಸುವುದು ಈ ಕಾಲದ ತುರ್ತು. ಅದನ್ನು ಸಹಚಾರಿ ಬೆಂಗಳೂರು ತಂಡ ಮಾಡಿ ತೋರಿಸಿದೆ.

ಲಹರಿ ಭಾರಿಘಾಟ್ ಈ ನೃತ್ಯ ಕಾರ್ಯಕ್ರಮವನ್ನು ಇನ್ನಷ್ಟು ವಿಸ್ತರಿಸಿ ಪೂರ್ಣಪ್ರಮಾಣದ ಪ್ರದರ್ಶನವನ್ನು ನೀಡುವ ಮೂಲಕ ಜನರಲ್ಲಿ ಹೊಸ ಆಲೋಚನೆಯನ್ನು ಬಿತ್ತುವ ಕೆಲಸ ಕಾರ್ಯಗಳನ್ನು ಮಾಡಲಿ ಎಂದು ನಾನು ಆಶಿಸುತ್ತೇನೆ.

share
ಉದ್ಯಾವರ ನಾಗೇಶ್ ಕುಮಾರ್
ಉದ್ಯಾವರ ನಾಗೇಶ್ ಕುಮಾರ್
Next Story
X