Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ನೆಲದನಿ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಮಾಹಿತಿ ಮಾರ್ಗದರ್ಶನ
    • ಆರೋಗ್ಯ
    • ಓ ಮೆಣಸೇ
    • ಕೃತಿ ಪರಿಚಯ
    • ಝಲಕ್
    • ಬುಡಬುಡಿಕೆ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಸಮಗ್ರ ಕೃಷಿ ಪದ್ಧತಿಯಿಂದ ಯಶಸ್ಸು ಕಂಡ...

ಸಮಗ್ರ ಕೃಷಿ ಪದ್ಧತಿಯಿಂದ ಯಶಸ್ಸು ಕಂಡ ದರ್ಶನ್

ಆನೆ ದಾಳಿ ನಡುವೆಯೂ ತಿಂಗಳಿಗೆ ಲಕ್ಷಾಂತರ ರೂ. ಆದಾಯ

ಕೆ.ಎಂ. ಇಸ್ಮಾಯಿಲ್ ಕಂಡಕರೆಕೆ.ಎಂ. ಇಸ್ಮಾಯಿಲ್ ಕಂಡಕರೆ5 Oct 2026 11:10 AM IST
share
ಸಮಗ್ರ ಕೃಷಿ ಪದ್ಧತಿಯಿಂದ ಯಶಸ್ಸು ಕಂಡ ದರ್ಶನ್

ಮಡಿಕೇರಿ: ಕೊಡಗಿನಲ್ಲಿ ಕಾಡಾನೆ ಹಾವಳಿಗೆ ಹೆದರಿ ರೈತರು ಭತ್ತ ಕೃಷಿಯಿಂದ ದೂರ ಸರಿಯುತ್ತಿರುವಾಗ, ಕುಶಾಲನಗರ ತಾಲೂಕಿನ ನೆಲ್ಯಹುದಿಕೇರಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಯುವ ಕೃಷಿಕ ಸಿದೇಟ್ಟಿರ ದರ್ಶನ್ 6.50 ಎಕರೆಯಲ್ಲಿ ಮಿಶ್ರಬೆಳೆ ಬೆಳೆದು ಯಶಸ್ವಿಯಾಗಿದ್ದಾರೆ.

ಕಾಲೇಜು ವ್ಯಾಸಂಗ ಪೂರ್ಣಗೊಳಿಸಿದ ಬಳಿಕ ಪಿತ್ರಾರ್ಜಿತವಾಗಿ ಬಂದ ಜಮೀನಿನಲ್ಲಿ ಕೃಷಿ ಕಾಯಕಕ್ಕೆ ಕಾಲಿಟ್ಟ ದರ್ಶನ್, ಒಂದೇ ಬೆಳೆಯ ಮೇಲೆ ಅವಲಂಬಿತರಾಗದೆ ರೋಬಸ್ಟಾ ಹಾಗೂ ಅರೇಬಿಕಾ ಕಾಫಿಯೊಂದಿಗೆ ಕಾಳುಮೆಣಸು, ಅಡಿಕೆ, ತೆಂಗು, ಬಾಳೆ, ಹಣ್ಣಿನ ಗಿಡಗಳು, ತರಕಾರಿ, ಹೈನುಗಾರಿಕೆ ಹಾಗೂ ನರ್ಸರಿಯನ್ನು ಸಮನ್ವಯಗೊಳಿಸಿ ವರ್ಷವಿಡೀ ಆದಾಯದ ಹಲವು ಮೂಲಗಳನ್ನು ಸೃಷ್ಟಿಸಿಕೊಂಡಿದ್ದಾರೆ.

ವರ್ಷಕ್ಕೆ 40 ಸಾವಿರ ಸಸಿ ಮಾರಾಟ :

ದರ್ಶನ್ ಅವರ ಕೃಷಿ ಚಟುವಟಿಕೆಗಳಲ್ಲಿ ನರ್ಸರಿ ಪ್ರಮುಖ ಆದಾಯ ಮೂಲವಾಗಿದೆ. ಪ್ರತ್ಯೇಕ ಶೆಡ್ ನಿರ್ಮಿಸಿ ಪ್ರತಿವರ್ಷ ಸುಮಾರು 40 ಸಾವಿರ ವಿವಿಧ ತಳಿಯ ಕಾಫಿ ಸಸಿಗಳನ್ನು ಬೆಳೆಸುತ್ತಿದ್ದಾರೆ. ರೋಬಸ್ಟಾ ಕಾಫಿಯ ಚಂದ್ರಗಿರಿ, ಕಾಟಿಮಾರ್, ಟಿ.ಆರ್.-9 ಹಾಗೂ ಅರೇಬಿಕಾ ಕಾಫಿ ತಳಿಗಳ ಸಸಿಗಳನ್ನು ಬೆಳೆಸಿ ಕೊಡಗಿನ ವಿವಿಧ ಎಸ್ಟೇಟ್‌ಗಳು ಹಾಗೂ ಗ್ರಾಮಗಳ ರೈತರಿಗೆ ಮಾರಾಟ ಮಾಡುತ್ತಿದ್ದಾರೆ.

ಕಾಳುಮೆಣಸು, ಅಡಿಕೆ ಹಾಗೂ ವಿವಿಧ ಹಣ್ಣಿನ ಸಸಿಗಳನ್ನೂ ನರ್ಸರಿಯಲ್ಲಿ ಬೆಳೆಸುತ್ತಿದ್ದಾರೆ. ಪನ್ನೀರು, ಕಲ್ಲುಬಳ್ಳಿ, ಬಡ್ಕನ್, ಶಿವಂ, ಕರಿಮುಂಡ ಸೇರಿದಂತೆ ವಿವಿಧ ಕಾಳುಮೆಣಸು ತಳಿಗಳ ಸಸಿಗಳು ಇವರಲ್ಲಿ ಲಭ್ಯವಿವೆ. ತೀರ್ಥಹಳ್ಳಿ, ನಾಟಿ, ಮಂಗಳ ತಳಿಯ ಅಡಿಕೆ ಸಸಿ, ಕಿತ್ತಳೆ, ಕೈಹುಳಿ, ನಿಂಬೆ, ತೆಂಗು, ಬಟರ್‌ಫ್ರೂಟ್, ಪಪ್ಪಾಯ, ಸಪೋಟ, ಸೀಬೆ ಹಾಗೂ ಲಿಚ್ಚಿ ಸಸಿಗಳನ್ನೂ ಬೆಳೆಸುತ್ತಿದ್ದಾರೆ. ಸಂಸ್ಕರಿಸಿದ ಬಿತ್ತನೆ ಬೀಜ, ಕಪ್ಪುಮಣ್ಣು, ಜೀವಾಮೃತ ಹಾಗೂ ಕೊಟ್ಟಿಗೆ ಗೊಬ್ಬರವನ್ನು ಮಿಶ್ರಣ ಮಾಡಿ ಗೊಬ್ಬರ ತಯಾರಿಸಿ ಜಮೀನು ಹಾಗೂ ನರ್ಸರಿಗೆ ಬಳಸುತ್ತಿದ್ದಾರೆ.

ದಿನಕ್ಕೆ 10 ಲೀಟರ್ ಹಾಲು ಮಾರಾಟ :

ದರ್ಶನ್ ಹಾಗೂ ಅವರ ಪತ್ನಿ ಗಣಶ್ರೀ ಹಲವು ವರ್ಷಗಳಿಂದ ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಕ್ರಾಸ್‌ಬ್ರೀಡ್, ಜರ್ಸಿ ಹಾಗೂ ನಾಟಿ ತಳಿಯ ಹಸುಗಳನ್ನು ಸಾಕುತ್ತಿರುವ ದಂಪತಿ, ಪಶುಸಂಗೋಪನೆಯನ್ನು ಆಸಕ್ತಿಯಿಂದ ನಿರ್ವಹಿಸುತ್ತಿದ್ದಾರೆ. ಪ್ರತಿದಿನ 8ರಿಂದ 10 ಲೀಟರ್ ಹಾಲು ಉತ್ಪಾದನೆಯಾಗುತ್ತಿದ್ದು, ಲೀಟರ್‌ಗೆ 50ರೂ.ಯಂತೆ ಸ್ಥಳೀಯ ಹೋಟೆಲ್‌ಗಳು ಹಾಗೂ ಮನೆಗಳಿಗೆ ನೇರವಾಗಿ ಮಾರಾಟ ಮಾಡುತ್ತಿದ್ದಾರೆ. ಇದರಿಂದ ದಿನಕ್ಕೆ ಸರಾಸರಿ 500 ರೂ. ಆದಾಯ ಗಳಿಸುತ್ತಿದ್ದಾರೆ. ಪಶುಸಂಗೋಪನೆಗೆ ತಂದೆ ಸಿದೇಟ್ಟಿರ ಕಾರ್ಯಪ್ಪ ಎಸ್.ಬಿ. ಹಾಗೂ ತಾಯಿ ಪುಷ್ಪಾವತಿ ಅವರೂ ಸಹಕಾರ ನೀಡುತ್ತಿದ್ದಾರೆ.

ಮನೆಯಂಗಳದಲ್ಲೇ ತರಕಾರಿ ಸ್ವಾವಲಂಬನೆ :

ಕುಟುಂಬಕ್ಕೆ ಅಗತ್ಯವಿರುವ ತರಕಾರಿಗಳನ್ನು ಮನೆಯ ಸುತ್ತಮುತ್ತ ಬೆಳೆಯುತ್ತಿದ್ದಾರೆ. ಬೀನ್ಸ್, ಎಲೆಕೋಸು, ಬೆಂಡೆ, ಟೊಮೆಟೊ, ಶುಂಠಿ, ಸೌತೆಕಾಯಿ, ಬದನೆಕಾಯಿ, ಮೆಣಸು, ಅರಿಶಿಣ, ಬೂದಗುಂಬಳ ಹಾಗೂ ವಿವಿಧ ಸೊಪ್ಪುಗಳನ್ನು ಬೆಳೆಸುತ್ತಿದ್ದಾರೆ. ಇದರಿಂದ ಕುಟುಂಬದ ತರಕಾರಿ ಅಗತ್ಯ ಪೂರೈಸುವುದರ ಜತೆಗೆ ಮಾರುಕಟ್ಟೆ ಅವಲಂಬನೆಯೂ ಕಡಿಮೆಯಾಗಿದೆ.

3 ಎಕರೆಯಲ್ಲಿ 5 ತಳಿ ಭತ್ತ - ಆನೆಗಳ ಜೊತೆ ಹೋರಾಟ :

ಕೊಡಗಿನಲ್ಲಿ ಕಾಡಾನೆಗಳ ಹಾವಳಿಯಿಂದ ಭತ್ತ ಕೃಷಿಯಿಂದ ರೈತರು ದೂರ ಸರಿಯುತ್ತಿರುವ ಸಂದರ್ಭದಲ್ಲಿ ದರ್ಶನ್ ದಂಪತಿ ತಮ್ಮ ಮನೆಯ ಪಕ್ಕದ ಸುಮಾರು 3 ಎಕರೆ ಗದ್ದೆಯಲ್ಲಿ ಭತ್ತ ಬೆಳೆಯುತ್ತಿದ್ದಾರೆ. ಹವಾಮಾನಕ್ಕೆ ಹೊಂದಿಕೊಳ್ಳುವ ರಾಜಮುಡಿ, ದೊಡ್ಡಿ, ಸೋನಾ ಮಸೂರಿ, ಜೀರಿಗೆ ಸಣ್ಣ ಹಾಗೂ ಬಾಸುಮತಿ ಸೇರಿದಂತೆ ಬಿಳಿ ಮತ್ತು ಕೆಂಪು ಬಣ್ಣದ ವಿವಿಧ ತಳಿಗಳನ್ನು ಬೆಳೆಯುತ್ತಿದ್ದಾರೆ. ಮನೆ ಬಳಕೆಗೆ ಅಗತ್ಯವಿರುವ ಭತ್ತವನ್ನು ಉಳಿಸಿಕೊಂಡು, ಹೆಚ್ಚುವರಿ ಉತ್ಪನ್ನವನ್ನು ಮಾರಾಟ ಮಾಡುತ್ತಿದ್ದಾರೆ. ಆದರೆ ಇತ್ತೀಚಿನ ವರ್ಷಗಳಲ್ಲಿ ರಾತ್ರಿ ವೇಳೆ ಕಾಡಾನೆಗಳ ಹಾವಳಿ ಹೆಚ್ಚಾಗಿದ್ದು, ಫಸಲು ರಕ್ಷಿಸುವುದು ಸವಾಲಾಗಿದೆ ಎಂದು ದರ್ಶನ್ ಹೇಳುತ್ತಾರೆ.

ಕೆರೆಯಲ್ಲಿ ಮೀನುಗಾರಿಕೆ :

ಇತ್ತೀಚೆಗೆ ಕೃಷಿ ಕೆರೆಯಲ್ಲಿ ಮೀನು ಸಾಕಣೆಯನ್ನೂ ಆರಂಭಿಸಿರುವ ದರ್ಶನ್, ಗ್ರಾಸ್ ಕಾರ್ಪ್, ಕಾಟ್ಲಾ, ರೋಹು, ಮೃಗಲ್ ಕಾಟ್ಲಾ ಸೇರಿದಂತೆ ವಿವಿಧ ಜಾತಿಯ ಮೀನುಗಳನ್ನು ಸಾಕುತ್ತಿದ್ದಾರೆ. ಹಂತ ಹಂತವಾಗಿ ಮೀನುಗಳನ್ನು ಮಾರಾಟ ಮಾಡುವ ಮೂಲಕ ಹೆಚ್ಚುವರಿ ಆದಾಯ ಗಳಿಸುತ್ತಿದ್ದಾರೆ.

ಕೃಷಿಯ ವಿವಿಧ ಚಟುವಟಿಕೆಗಳನ್ನು ಪರಸ್ಪರ ಪೂರಕವಾಗಿ ಬಳಸಿಕೊಂಡು ಮುನ್ನಡೆಯುತ್ತಿರುವ ದರ್ಶನ್ ಹಾಗೂ ಗಣಶ್ರೀ ದಂಪತಿ, ಸಮಗ್ರ ಕೃಷಿ ಪದ್ಧತಿಯ ಮೂಲಕ ಕೃಷಿಯಲ್ಲೇ ಉತ್ತಮ ಬದುಕು ಕಟ್ಟಿಕೊಳ್ಳಬಹುದು ಎಂಬುದಕ್ಕೆ ಮಾದರಿಯಾಗಿದ್ದಾರೆ.

ಯುವಕರು ಕೃಷಿಯನ್ನು ಕೇವಲ ಸಾಂಪ್ರದಾಯಿಕ ವೃತ್ತಿಯಾಗಿ ನೋಡದೆ, ಆಧುನಿಕ ಹಾಗೂ ಸಮಗ್ರ ಕೃಷಿ ಪದ್ಧತಿಯತ್ತ ಆಸಕ್ತಿ ಬೆಳೆಸಿಕೊಳ್ಳಬೇಕು. ಒಂದೇ ಬೆಳೆಯನ್ನು ಅವಲಂಬಿಸುವ ಬದಲು ಹೈನುಗಾರಿಕೆ, ನರ್ಸರಿ, ತರಕಾರಿ, ಭತ್ತ ಹಾಗೂ ಮೀನು ಸಾಕಣೆಯಂತಹ ಉಪಕಸುಬುಗಳನ್ನು ಅಳವಡಿಸಿಕೊಂಡರೆ ಆದಾಯದ ಹಲವು ಮೂಲಗಳನ್ನು ಸೃಷ್ಟಿಸಬಹುದು. ಕೃಷಿಯಲ್ಲಿ ಶ್ರಮ, ತಾಳ್ಮೆ ಮತ್ತು ನಿರಂತರ ಆಸಕ್ತಿ ಬಹಳ ಮುಖ್ಯ. ಕಾಡಾನೆಗಳ ಹಾವಳಿ ಸೇರಿದಂತೆ ಹಲವು ಸವಾಲುಗಳಿದ್ದರೂ ಕೃಷಿಯ ಮೇಲಿನ ನಂಬಿಕೆಯಿಂದ ಮುನ್ನಡೆಯುತ್ತಿದ್ದೇನೆ.

-ಸಿದೇಟ್ಟಿರ ದರ್ಶನ್, ಯುವ ಕೃಷಿಕ, ನೆಲ್ಯಹುದಿಕೇರಿ

Tags

Farming
share
ಕೆ.ಎಂ. ಇಸ್ಮಾಯಿಲ್ ಕಂಡಕರೆ
ಕೆ.ಎಂ. ಇಸ್ಮಾಯಿಲ್ ಕಂಡಕರೆ
Next Story
X