Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಪ್ರಜಾಪ್ರಭುತ್ವದ ಆಶಯಕ್ಕೆ ಬಲ ಬರಲಿ

ಪ್ರಜಾಪ್ರಭುತ್ವದ ಆಶಯಕ್ಕೆ ಬಲ ಬರಲಿ

ಇಂದು ವಿಶ್ವ ಪ್ರಜಾಪ್ರಭುತ್ವ ದಿನ

ಡಾ. ಎಚ್.ಸಿ. ಮಹದೇವಪ್ಪಡಾ. ಎಚ್.ಸಿ. ಮಹದೇವಪ್ಪ15 Sept 2024 11:29 AM IST
share
ಪ್ರಜಾಪ್ರಭುತ್ವದ ಆಶಯಕ್ಕೆ ಬಲ ಬರಲಿ
ಈ ದಿನ ನಾವು ಅನುಭವಿಸುತ್ತಿರುವ ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವದ ಅಂಶಗಳು, ಪ್ರಜಾಪ್ರಭುತ್ವದ ಮೂಲ ಆಶಯಗಳಾಗಿದ್ದು ಇದನ್ನು ಪಡೆದುಕೊಳ್ಳಲು ಈ ದೇಶ ಸಾಕಷ್ಟು ತ್ಯಾಗ ಬಲಿದಾನಗಳನ್ನು ಕಂಡಿದೆ. ಹೀಗಾಗಿ ಒಮ್ಮೆ ಇಷ್ಟೆಲ್ಲಾ ಕಷ್ಟಪಟ್ಟು ಪಡೆದುಕೊಂಡ ಪ್ರಜಾಪ್ರಭುತ್ವವನ್ನು ನಾವು ನಮ್ಮದೇ ತಪ್ಪಿನಿಂದ ಕಳೆದುಕೊಂಡರೆ ಮುಂದೆ ನಾಯಿ ನರಿಗಳಂತೆ ಬದುಕಬೇಕಾಗುತ್ತದೆ ಎಂಬ ಬಾಬಾ ಸಾಹೇಬರ ಮಾತುಗಳನ್ನು ಈ ವೇಳೆ ನಾನು ನೆನಪಿಸಿಕೊಳ್ಳಲು ಬಯಸುತ್ತೇನೆ.

ಪ್ರಜಾಪ್ರಭುತ್ವ ಎಂದಾಕ್ಷಣ, ‘‘ಜನರಿಂದ ಜನರಿಗಾಗಿ ಮತ್ತು ಜನರಿಗೋಸ್ಕರ ಇರುವ ಆಡಳಿತ’’ ಎಂಬ ಅಬ್ರಹಾಂ ಲಿಂಕನ್ ಅವರ ಮಾತು ಥಟ್ಟನೆ ನೆನಪಾಗುತ್ತದೆ. ಪ್ರಜಾಪ್ರಭುತ್ವದ ಮೂಲ ಆಶಯಗಳನ್ನು ನಾವು ಸೂಕ್ಷ್ಮವಾಗಿ ಗಮನಿಸಿದರೆ ಲಿಂಕನ್ ಅವರ ಮಾತುಗಳು ವಾಸ್ತವಕ್ಕೆ ಹತ್ತಿರವಾಗಿದೆ ಎಂದೆನಿಸುತ್ತದೆ.

ಸಾರ್ವಜನಿಕ ಬದುಕಿಗೆ ಬಂದ ಸಮಯದಿಂದಲೂ ಪ್ರಜಾಪ್ರಭುತ್ವ ಹೋಗುತ್ತಿರುವ ರೀತಿ ನೀತಿಯ ಕುರಿತಂತೆ ನಾನೂ ಕೂಡಾ ಕೂಲಂಕಷವಾಗಿ ಗಮನಿಸುತ್ತಲೇ ಇದ್ದು ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯು ಸಾಕಷ್ಟ ಮಾರ್ಪಾಟುಗಳನ್ನು ಕಂಡಿದ್ದು ಕ್ರಮೇಣ ಅದರ ಸ್ವರೂಪವು ಪ್ರಜಾಪ್ರಭುತ್ವದ ಮೂಲ ಆಶಯಗಳ ವಿರುದ್ಧವೂ ಸಾಗಿದ್ದು ಅದಕ್ಕೆ ತಡೆ ಒಡ್ಡಿ ಜನರನ್ನು ಭದ್ರಪಡಿಸಿಕೊಳ್ಳುವ ಜವಾಬ್ದಾರಿ ನಮ್ಮೆಲ್ಲರದ್ದು.

2023ರಲ್ಲಿ ಪ್ರಜಾಪ್ರಭುತ್ವದ ವ್ಯವಸ್ಥೆಯಡಿ ಸ್ಪಷ್ಟ ಬಹುಮತದೊಂದಿಗೆ ಅಸ್ತಿತ್ವಕ್ಕೆ ಬಂದ ರಾಜ್ಯ ಸರಕಾರವು ಪ್ರಜಾಪ್ರಭುತ್ವ ವ್ಯವಸ್ಥೆಯ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಸಂವಿಧಾನದ ಪೀಠಿಕೆಯನ್ನು ಶಾಲಾ ಕಾಲೇಜು ಮತ್ತು ಸರಕಾರಿ ಕಚೇರಿಗಳಲ್ಲಿ ಕಡ್ಡಾಯವಾಗಿ ಓದುವ ನಿಯಮವನ್ನು ಜಾರಿಗೊಳಿಸಿತು. ಅದಾದ ಬಳಿಕ ಸಂವಿಧಾನದ ಜಾಗೃತಿ ಜಾಥಾದ ಮೂಲಕ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಸಂವಿಧಾನದ ಆಶಯಗಳ ಪ್ರಚಾರದ ಕುರಿತಂತೆ ಪ್ರಯತ್ನ ನಡೆಸಿದ ಸರಕಾರವು ಈ ಬಾರಿ ಬೀದರ್ ನಿಂದ ಚಾಮರಾಜನಗರದ ವರೆಗೆ ಸುಮಾರು 2,500 ಕಿ.ಮೀ.ಗಳ ವರೆಗೆ ಮಾನವ ಸರಪಳಿ ರಚಿಸುವ ಮೂಲಕ ಸಮಾನತೆ ಮತ್ತು ಐಕ್ಯತೆಯ ಸಂದೇಶ ಸಾರುವ ಕೆಲಸ ಮಾಡಲಾಗುತ್ತಿದ್ದು, ಅಂತರ್‌ರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ ಅಂಗವಾಗಿ 10 ಲಕ್ಷ ಸಸಿಗಳನ್ನು ನೆಡಲಾಗುತ್ತಿದೆ.

ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಬಗ್ಗೆ ಸರಕಾರ ಏಕೆ ಮಾತನಾಡಬೇಕು?

ಇತ್ತೀಚಿನ ಸಂದರ್ಭವನ್ನು ನಾನು ಗಮನಿಸಿದಂತೆ, ಹಲವಾರು ಕಾರಣಗಳಿಗಾಗಿ ನಮ್ಮ ಸುತ್ತ ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ಅವೈಜ್ಞಾನಿಕತೆ, ಧಾರ್ಮಿಕ ಮೌಢ್ಯತೆಯ ವಾತಾವರಣವು ಅಪಾಯಕಾರಿ ಮಟ್ಟದಲ್ಲಿ ಹೆಚ್ಚಾಗುತ್ತಿದ್ದು, ವಿದ್ಯಾವಂತ ಯುವ ಸಮುದಾಯವೇ ಇದಕ್ಕೆ ಬಲಿಪಶು ಆಗಿರುವಂತೆ ಕಾಣಿಸಿದ ಪರಿಣಾಮ, ಬಾಬಾ ಸಾಹೇಬರು ಆಲೋಚನೆಗಳು ಮತ್ತು ನಿಜವಾದ ಪ್ರಜಾಪ್ರಭುತ್ವದ ಆಶಯಗಳಿಗೆ ಮತ್ತೆ ಅವರೆಲ್ಲರೂ ಮರಳಬೇಕು ಎಂಬ ಸದುದ್ದೇಶದಿಂದ ನಾವು ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಆಶಯಗಳನ್ನು ಹೆಚ್ಚು ಹೆಚ್ಚು ಪ್ರಚಾರ ಮಾಡುವ ಕೆಲಸವನ್ನು ಮಾಡುತ್ತಿದ್ದೇವೆ.

ಈ ದಿನ ನಾವು ಅನುಭವಿಸುತ್ತಿರುವ ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವದ ಅಂಶಗಳು, ಪ್ರಜಾಪ್ರಭುತ್ವದ ಮೂಲ ಆಶಯಗಳಾಗಿದ್ದು ಇದನ್ನು ಪಡೆದುಕೊಳ್ಳಲು ಈ ದೇಶ ಸಾಕಷ್ಟು ತ್ಯಾಗ ಬಲಿದಾನಗಳನ್ನು ಕಂಡಿದೆ. ಹೀಗಾಗಿ ಒಮ್ಮೆ ಇಷ್ಟೆಲ್ಲಾ ಕಷ್ಟಪಟ್ಟು ಪಡೆದುಕೊಂಡ ಪ್ರಜಾಪ್ರಭುತ್ವವನ್ನು ನಾವು ನಮ್ಮದೇ ತಪ್ಪಿನಿಂದ ಕಳೆದುಕೊಂಡರೆ ಮುಂದೆ ನಾಯಿ ನರಿಗಳಂತೆ ಬದುಕಬೇಕಾಗುತ್ತದೆ ಎಂಬ ಬಾಬಾ ಸಾಹೇಬರ ಮಾತುಗಳನ್ನು ಈ ವೇಳೆ ನಾನು ನೆನಪಿಸಿಕೊಳ್ಳಲು ಬಯಸುತ್ತೇನೆ. ಸಂವಿಧಾನಾತ್ಮಕ ವ್ಯವಸ್ಥೆಯಲ್ಲಿ ಪ್ರಜಾಪ್ರಭುತ್ವದ ಆಶಯಗಳ ಬಗ್ಗೆ ಮಾತನಾಡುವುದು ಸರಕಾರದ ಆಯ್ಕೆ ಆಗಿರದೇ ಕರ್ತವ್ಯ ಆಗಿರುವ ಕಾರಣ, ಈ ಬಗ್ಗೆ ನಿರಂತರವಾಗಿ ಮಾತನಾಡಬೇಕು.

ನಮ್ಮ ಪ್ರಜಾಪ್ರಭುತ್ವದ ಹೆಚ್ಚುಗಾರಿಕೆ ಏನು?

ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ, ರಾಜಕೀಯ ಪಕ್ಷಗಳು ಮತ್ತು ಸಂಘಟನೆಗಳು, ಸಮರ್ಥ ನಾಯಕತ್ವ, ವ್ಯಕ್ತಿ ಗೌರವ, ಶಿಕ್ಷಣ ಮತ್ತು ಸಂವಿಧಾನಾತ್ಮಕ ನಡವಳಿಕೆಗಳು ಪ್ರಜಾಪ್ರಭುತ್ವದ ಮೂಲ ಸೂತ್ರಗಳಾಗಿದ್ದು ಇದು ಎಲ್ಲರನ್ನೂ ಒಳಗೊಂಡು ಕಾಪಾಡುವ ಗುರಿಯನ್ನು ಹೊಂದಿದೆ.

ಸಾರ್ವಜನಿಕರ ಭಾಗವಹಿಸುವಿಕೆಯು ಪ್ರಜಾಪ್ರಭುತ್ವದ ಬಹುಮುಖ್ಯವಾದ ತತ್ವಗಳಲ್ಲಿ ಒಂದು ಎಂಬುದಾಗಿ ಗುರುತಿಸಲಾಗುತ್ತದೆ. ಪ್ರಜಾಪ್ರಭುತ್ವವು ರಾಜರ ಆಳ್ವಿಕೆಯ ಕಾಲದ ಹಾಗೆ ನಿರಂಕುಶ ಪ್ರಭುತ್ವವಲ್ಲ ಅಥವಾ ಶ್ರೀಮಂತ ವರ್ಗದ ರಾಜ್ಯವಲ್ಲ. ಇದು ಮೂಲತಃ ಪ್ರಜೆಗಳ ರಾಜ್ಯ ಆಗಿದ್ದು ಇಲ್ಲಿ ಪ್ರಜೆಗಳೇ ತಮ್ಮ ನಾಯಕರನ್ನು ಆರಿಸಿಕೊಂಡು, ತಮ್ಮದೇ ಆದ ನಿಯಮಾವಳಿಗಳಿಗೆ ತಾವೇ ಬದ್ಧರಾಗಿ ಬದುಕುವಂತಹ ವ್ಯವಸ್ಥೆ ಆಗಿದೆ. ಸ್ವಾತಂತ್ರ್ಯ ಪೂರ್ವದಲ್ಲಿದ್ದ ಕೆಟ್ಟ ಕಾಲದ ಬಗ್ಗೆ ಅರಿವಿದ್ದ ಎಲ್ಲರಿಗೂ ಕೂಡಾ ಪ್ರಜಾಪ್ರಭುತ್ವದ ಮಹತ್ವ ಚೆನ್ನಾಗಿ ತಿಳಿದಿದೆ.

ಸಾರ್ವಜನಿಕ ಭಾಗವಹಿಸುವಿಕೆಯ ವಿಷಯಕ್ಕೆ ಬಂದರೆ ಭಾರತದ ವಿಭಿನ್ನ ಸಾಮಾಜಿಕ ಸಂದರ್ಭವನ್ನು ಗಮನಿಸಿದಾಗ, ಇಲ್ಲಿ ಜಾತಿಯ ಮೇಲರಿಮೆ ಮತ್ತು ವಿವಿಧ ಕಾರಣಗಳಿಗೆ ಶಿಕ್ಷಣ, ಉದ್ಯೋಗ, ಸಮಾಜ ಹಾಗೂ ಇನ್ನಿತರ ಕ್ಷೇತ್ರಗಳಲ್ಲಿ ಬಹಳಷ್ಟು ಜನರ ಭಾಗವಹಿಸುವಿಕೆಯು ಅಸಾಧ್ಯವಾಗಿದ್ದು ಪ್ರಜಾಪ್ರಭುತ್ವಕ್ಕೆ ವಿರುದ್ಧವಾದ ಸನ್ನಿವೇಶವೇ ಇಲ್ಲಿ ದೊಡ್ಡದಾಗಿತ್ತು. ಆದರೆ ಬಾಬಾ ಸಾಹೇಬರು ತಮ್ಮ ಸಂವಿಧಾನದ ಮೂಲಕ ಜಾರಿಗೊಳಿಸಿದ ಶಾಶ್ವತ ನಿಯಮಗಳಿಂದಾಗಿ ಅಂತಹ ಅಪಾಯವು ತಪ್ಪಿ, ಮತ್ತೊಮ್ಮೆ ಪ್ರಜಾಪ್ರಭುತ್ವದ ವಾತಾವರಣವು ಮರಳುವಂತಾಯಿತು.

ಭಾರತದ ಸಾಮಾಜಿಕ ವ್ಯವಸ್ಥೆಯಲ್ಲಿ ಮೇಲ್ವರ್ಗಗಳು ಎನಿಸಿದ ಬಹಳಷ್ಟು ಜನ ಸಮುದಾಯಗಳು ತಾವೂ ಸಹಜ ಮನುಷ್ಯರೇ ಎಂಬುದನ್ನು ಮರೆತು, ಅವೈಜ್ಞಾನಿಕ ಮತ್ತು ಧಾರ್ಮಿಕ ಮೌಢ್ಯತೆಯ ಅಸ್ತ್ರಗಳ ಮೂಲಕ ತಮ್ಮ ಸಹಜೀವಿಗಳ ಮೇಲೆ ಸಾಮಾಜಿಕ ಹಾಗೂ ರಾಜಕೀಯ ದೌರ್ಜನ್ಯ ನಡೆಸಿದರು. ಈಗಲೂ ಆ ಪರಿಸ್ಥಿತಿ ಹಾಗೆಯೇ ಇದ್ದರೂ ಅದು ತಪ್ಪು ಎನ್ನುವ ಪ್ರಜಾಪ್ರಭುತ್ವ ವ್ಯವಸ್ಥೆ ಅಧಿಕೃತವಾಗಿಯೇ ಇರುವುದು ಅತ್ಯಂತ ನೆಮ್ಮದಿಯ ವಿಷಯವಾಗಿದೆ.

ಸರಕಾರದ ಮಾತು ಮತ್ತು ಕೃತಿ:

ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಕುರಿತು ಇಷ್ಟೆಲ್ಲಾ ಮಾತನಾಡುವ ಮತ್ತು ಅದರ ಬಗ್ಗೆ ಪ್ರಚಾರ ಮಾಡುವ ಉದ್ದೇಶ ಹೊಂದಿರುವ ನಮ್ಮ ಸರಕಾರದ ಮಾತು ಮತ್ತು ಕೃತಿಗೆ ಏನಾದರೂ ಸಾಮ್ಯತೆ ಇದೆಯೇ ಎಂದು ನಾವು ಗಮನಿಸುವಾಗ, ನಾನು ಸಾಮ್ಯತೆ ಇದೆ ಎಂದು ವಿಶ್ವಾಸದಿಂದ ಹೇಳುತ್ತೇನೆ.

ಕರ್ನಾಟಕ ರಾಜ್ಯದ ಸಾಂಸ್ಕೃತಿಕ ನಾಯಕರಾದ ಬಸವಣ್ಣನವರ ‘ದಾಸೋಹ’ ಮತ್ತು ‘ ನುಡಿದಂತೆ ನಡೆ’ ಎನ್ನುವ ಮಾತಿಗೆ ಬದ್ಧವಾಗಿ ನಡೆದುಕೊಂಡಿರುವ ನಮ್ಮ ಸರಕಾರವು ‘ಹಸಿವು ಮುಕ್ತ ರಾಜ್ಯದ’ ಆಶಯವನ್ನು ಗಮನದಲ್ಲಿ ಇಟ್ಟುಕೊಂಡು ಬಡವರಿಗೆ ಅನ್ನಭಾಗ್ಯ ಯೋಜನೆಯನ್ನು ರೂಪಿಸಿತ್ತು. ಇನ್ನು ಎಷ್ಟೇ ದುಡಿದರೂ ತಮ್ಮ ಶ್ರಮದ ಮೌಲ್ಯವನ್ನು ಪಡೆಯಲಾಗದೆ ನಿಜಕ್ಕೂ ಕಷ್ಟ ಪಡುವ ರೈತರಿಗೆ ನೆರವಾಗಿದ್ದ ಸರಕಾರ ಅವರ ಸಾಲವನ್ನೂ ಮನ್ನಾ ಮಾಡಿತ್ತು. ಜೊತೆಗೆ ಮಹಿಳೆಯರು ಮಕ್ಕಳಿಗೆ ಹಲವು ಯೋಜನೆ ನೀಡಿದ್ದ ನಮ್ಮ ಸರಕಾರ ತನ್ನ ಮೊದಲ ಅವಧಿಯಲ್ಲಿ ನುಡಿದಂತೆ ನಡೆಯುವ ಕೆಲಸವನ್ನು ಮಾಡಿತು.

ಇನ್ನು ಕೊರೋನ ನಂತರದಲ್ಲಿ ಜನರ ಬದುಕು ಅತ್ಯಂತ ಕಷ್ಟಕ್ಕೆ ಹೋದ ಸಂದರ್ಭವನ್ನು ಗಮನಿಸಿದ ಸರಕಾರ ಅವರಿಗೆ ಎಲ್ಲ ರೀತಿಯಲ್ಲೂ ನೆರವಾಗಿ, ಸಂವಿಧಾನ ಆಶಯಗಳಿಗೆ ಅನುಸಾರ ವಾಗಿ 5 ಗ್ಯಾರಂಟಿಗಳನ್ನು ನೀಡುವ ಮೂಲಕ ಅವರ ಘನತೆಯ ಬದುಕನ್ನು ಭದ್ರಪಡಿಸುವ ಕೆಲಸ ಮಾಡಿತು. ಬಹುಶಃ ಜನರಿಂದ, ಜನರಿಗಾಗಿ ಎನ್ನುವ ಮಾತು ಈ ಹಂತದಲ್ಲಿ ಸಾಕಾರಗೊಂಡಿತು ಎಂಬುದಾಗಿ ನಾನು ತಿಳಿಯುತ್ತೇನೆ.

ಸರಕಾರದ ಯೋಜನೆಗಳ ಉದ್ದೇಶಗಳಿಗೂ ಪ್ರಜಾಪ್ರಭುತ್ವದ ಆಶಯಗಳಿಗೂ ಸಾಮ್ಯತೆ ಇರುವುದರಿಂದ ಮಾತಿಗೂ ಕೃತಿಗೂ ಸಾಮ್ಯತೆ ಇದೆಯೆಂದೇ ನಾನು ಭಾವಿಸುತ್ತೇನೆ.

ಪ್ರಜೆಗಳಿಂದ ಪ್ರಜೆಗಳಿಗಾಗಿ ಪ್ರಜೆಗಳಿಗೋಸ್ಕರ ಎಂಬ ಮಾತು ಒಂದು ಹಂತಕ್ಕೆ ಸಾಕಾರಗೊಂಡರೆ, ಮುಂದುವರಿದು ಪ್ರಜಾಪ್ರಭುತ್ವವು ಆಂತರಿಕವಾಗಿ ಸುಭದ್ರವಾಗಿರಬೇಕಾದರೆ, ಅಲ್ಲಿ ಮೌಢ್ಯ ರಹಿತತೆ ಮತ್ತು ವೈಜ್ಞಾನಿಕತೆ ಮನೋಭಾವದ ವಾತಾವರಣವು ಅತ್ಯಂತ ಮುಖ್ಯವಾಗಿದ್ದು ಶಿಕ್ಷಣದ ಮೂಲಕ ಈ ಭಾವನೆಯನ್ನು ಮೂಡಿಸಲು ಪ್ರಯತ್ನಿಸುತ್ತೇವೆ.

ಇಂತಹ ಪ್ರಯತ್ನಗಳು ನಡೆದಾಗಲೆಲ್ಲಾ ನಮ್ಮೊಳಗೆ ತಣ್ಣಗೆ ಅಸ್ತಿತ್ವದಲ್ಲಿರುವ ಫ್ಯೂಡಲ್ ಮತ್ತು ಜಾತಿ ವ್ಯವಸ್ಥೆಯು ಇದಕ್ಕೆ ವಿರುದ್ಧ ವಾಗಿಯೇ ಇರುತ್ತದೆ ಮತ್ತು ಅಂತಹವರ ವಿರುದ್ಧ ನಿಲುವು ತಾಳಲು ನಮಗೆ ಪ್ರಜಾಪ್ರಭುತ್ವದ ಆಶಯಗಳು ಮತ್ತು ಅದನ್ನು ಜಾರಿಗೊಳಿಸುವ ನಿಯಮಗಳ ಗುಚ್ಛವಾದ ಸಂವಿಧಾನವು ಸಾಕಷ್ಟು ಸಹಾಯ ಮಾಡುತ್ತದೆ. ಈ ಕಾರಣಕ್ಕಾಗಿಯೇ ನಾವು ಮತ್ತೆ ಮತ್ತೆ ಪ್ರಜಾಪ್ರಭುತ್ವದ ಆಶಯ ಗಳನ್ನು ಪುನರುಚ್ಚರಿಸುವ ಕೆಲಸ ಮಾಡಬೇಕು.

ಈಗಾಗಲೇ ಹೇಳಲಾದಂತೆ, ಧಾರ್ಮಿಕ ಮೌಢ್ಯತೆ ಮತ್ತು ಅವೈಜ್ಞಾನಿಕತೆಯ ಮೂಲಕ ಹಲವು ಸುಳ್ಳುಗಳನ್ನು ಪದೇ ಪದೇ ಹೇಳಿ, ಸುಳ್ಳನ್ನೇ ಸತ್ಯ ಮಾಡಲು ಹೊರಟಿರುವ ಕೆಟ್ಟ ಶಕ್ತಿಗಳ ನಡುವೆ, ಇರುವಂತಹ ಪ್ರಜಾಪ್ರಭುತ್ವದ ಸತ್ಯಗಳನ್ನು ನಾವು ಮತ್ತೆ ಮತ್ತೆ ಗಟ್ಟಿಯಾಗಿ ಹೇಳದೆ ಹೋದರೆ ಅದು ನಮ್ಮ ಜವಾಬ್ದಾರಿಯಿಂದ ನುಣುಚಿಕೊಂಡಂತೆ.

ಹೀಗಾಗಿ ಪ್ರಜಾಪ್ರಭುತ್ವ ವ್ಯವಸ್ಥೆಯ ಒಳಗೆ ಅಧಿಕಾರ ನಡೆಸುವ ಯಾವುದೇ ಪಕ್ಷಗಳು ನಮ್ಮ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಆಶಯಗಳ ಕುರಿತು ಮುಂದಿನ ಪೀಳಿಗೆಗೆ ಅರಿವು ಮೂಡಿಸ ಬೇಕಾದ ಬಹುದೊಡ್ಡ ಜವಾಬ್ದಾರಿಯನ್ನು ಹೊಂದಿದ್ದು ಅದನ್ನು ಎಲ್ಲರೂ ಆಸ್ಥೆವಹಿಸಿ ನಿರ್ವಹಿಸಿದಾಗ, ಪ್ರಜಾಪ್ರಭುತ್ವದ ಆಶಯಗಳಾದ ಸಮಾನತೆ, ಸ್ವಾತಂತ್ರ್ಯ ಮತ್ತು ಭ್ರಾತೃತ್ವದ ತತ್ವಗಳ ಜಾರಿಗೆ ಹೆಚ್ಚಿನ ಬಲ ಬರುತ್ತದೆ.

share
ಡಾ. ಎಚ್.ಸಿ. ಮಹದೇವಪ್ಪ
ಡಾ. ಎಚ್.ಸಿ. ಮಹದೇವಪ್ಪ
Next Story
X