Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಸಂವಿಧಾನ ಉಳಿದರೆ ಪ್ರಜಾಪ್ರಭುತ್ವದ ಉಳಿವು

ಸಂವಿಧಾನ ಉಳಿದರೆ ಪ್ರಜಾಪ್ರಭುತ್ವದ ಉಳಿವು

ಪುನೀತ್ ಎನ್. ಮೈಸೂರುಪುನೀತ್ ಎನ್. ಮೈಸೂರು26 Jan 2026 12:13 PM IST
share
ಸಂವಿಧಾನ ಉಳಿದರೆ ಪ್ರಜಾಪ್ರಭುತ್ವದ ಉಳಿವು

ಎರಡು ವರ್ಷ ಹನ್ನೊಂದು ತಿಂಗಳು 17 ದಿನಗಳ ಹಗಲಿರುಳು ಪರಿಶ್ರಮದ ಸಂವಿಧಾನವನ್ನು 26ನೇ ನವೆಂಬರ್ 1949ರಲ್ಲಿ ಸರಕಾರಕ್ಕೆ ಸಲ್ಲಿಸಿ 26 ಜನವರಿ, 1930ರ ಪೂರ್ಣ ಸ್ವರಾಜ್ಯ ನೆನಪಿಗಾಗಿ ಜನವರಿ 26, 1950ರಂದು ಅಂಗೀಕರಿಸಲಾಯಿತು. ಈ ಅಂಗೀಕಾರದ ಮುನ್ನಾ 25ನೇ ನವೆಂಬರ್, 1949ರಲ್ಲಿ ಸಂವಿಧಾನದ ರಚನಾಸಭಾ ಚರ್ಚೆಯಲ್ಲಿ ಕರಡು ಸಮಿತಿಯ ಅಧ್ಯಕ್ಷರು ಹಾಗೂ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ರವರು ಸಂವಿಧಾನದ ಮೇಲೆ ಹೊಂದಿರುವ ದೂರದೃಷ್ಟಿ ಅದಕ್ಕೆ ಎದುರಾಗುವ ಅಪಾಯಗಳು, ಇವುಗಳನ್ನು ಕುರಿತು ಸುದೀರ್ಘವಾಗಿ ತಿಳಿಸಿದ್ದಾರೆ. ಡಾ. ಬಿ.ಆರ್. ಅಂಬೇಡ್ಕರ್‌ರವರು ಜನವರಿ 26, 1950ರಂದು ‘‘ನಮ್ಮ ಭಾರತವು ಸಂಪೂರ್ಣ ಸ್ವತಂತ್ರ ದೇಶವಾಗಲಿದೆ. ಅವಳ ಸ್ವಾತಂತ್ರ್ಯಕ್ಕೆ ಏನಾಗಬಹುದು? ಅವಳು ಈ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳುತ್ತಾಳೆಯೇ ಅಥವಾ ಅವಳು ಇದನ್ನು ಮತ್ತೆ ಕಳೆದುಕೊಳ್ಳುತ್ತಾಳೆಯೇ? ಇದು ನನ್ನ ಮನಸ್ಸಿಗೆ ಬಂದ ಮೊದಲ ಯೋಚನೆ. ಇದರ ಅರ್ಥ ಭಾರತ ಹಿಂದೆಂದೂ ಸ್ವತಂತ್ರ ದೇಶವಾಗಿರಲಿಲ್ಲ ಎಂದಲ್ಲ. ವಿಷಯವೇನಂದರೆ, ತಾನು ಹೊಂದಿದ್ದ ಸ್ವಾತಂತ್ರ್ಯವನ್ನು ಆಕೆ ಒಮ್ಮೆ ಕಳೆದುಕೊಂಡಿದ್ದಾಳೆ. ಆಕೆ ಎರಡನೆಯ ಬಾರಿ ಇದನ್ನು ಕಳೆದುಕೊಳ್ಳಬಹುದೇ? ಈ ಯೋಚನೆಯೇ ಭವಿಷ್ಯದ ಬಗ್ಗೆ ನನ್ನನ್ನು ಬಹಳ ಚಿಂತೆಗೀಡು ಮಾಡುತ್ತದೆ. ಈ ಆತಂಕ ಆಳವಾಗುತ್ತಾ ಹೋದದ್ದು ಒಂದು ವಾಸ್ತವವು ಅರ್ಥವಾಗುತ್ತ ಬಂದಾಗ. ನಮ್ಮ ಹಳೆಯ ಶತ್ರುಗಳಾದ ಜಾತಿ ಮತ್ತು ಮತಗಳ ಬದಲು, ಹೊಸ ಹೊಸ ರಾಜಕೀಯ ಪಕ್ಷಗಳು ಮತಗಳನ್ನು ಬಳಸಿಕೊಳ್ಳುವ ರೀತಿ ಹೊಸ ಶತ್ರು ಎನಿಸುತ್ತಿದೆ. ಭಾರತವು ಮತಗಳನ್ನು ದೇಶಕ್ಕಿಂತ ಎತ್ತರದ ಸ್ಥಾನದಲ್ಲಿ ಇಡುತ್ತದೆಯೇ ಅಥವಾ ದೇಶವನ್ನು ಮತಕ್ಕಿಂತ ಎತ್ತರದ ಸ್ಥಾನದಲ್ಲಿ ಇಡುತ್ತದೆಯೇ? ನನಗೆ ತಿಳಿದಿಲ್ಲ. ಆದರೆ ಇದು ಮಾತ್ರ ಸತ್ಯ, ಒಂದು ವೇಳೆ ರಾಜಕೀಯ ಪಕ್ಷಗಳು ಮತಗಳನ್ನು ದೇಶಕ್ಕಿಂತ ಎತ್ತರದ ಸ್ಥಾನದಲ್ಲಿ ನಿಲ್ಲಿಸಿದರೆ, ನಮ್ಮ ಸ್ವಾತಂತ್ರ್ಯವು ಎರಡನೇ ಬಾರಿ ಗಂಡಾಂತರದಲ್ಲಿ ಸಿಲುಕಲಿದೆ ಮತ್ತು ಎಂದೆಂದಿಗೂ ಕಳೆದುಕೊಳ್ಳಲಿದೆ. ಈ ಸಂಭವನೀಯ ಘಟನೆಯಿಂದ ನಮ್ಮನ್ನು ರಕ್ಷಿಸಿಕೊಳ್ಳಬೇಕಿದೆ. ನಾವು ನಮ್ಮ ಕೊನೆಯ ರಕ್ತದ ಹನಿ ಇರುವ ತನಕ ನಮ್ಮ ಸ್ವಾತಂತ್ರ್ಯವನ್ನು ರಕ್ಷಿಸಿಕೊಳ್ಳುತ್ತೇವೆಂದು ಇಂದೇ ನಿರ್ಧರಿಸಬೇಕಿದೆ.’’

‘‘1950ರ ಜನವರಿ 26ರಂದು ಭಾರತವು ಪ್ರಜಾಪ್ರಭುತ್ವ ರಾಷ್ಟ್ರವಾಗಲಿದೆ: ಅಂದರೆ, ಭಾರತವು ಆ ದಿನದಿಂದ ಪ್ರಜೆಗಳ ಸರಕಾರ, ಪ್ರಜೆಗಳಿಂದ ಸರಕಾರ ಮತ್ತು ಪ್ರಜೆಗಳಿಗೋಸ್ಕರ ಸರಕಾರ ಎಂದಾಗಲಿದೆ. ಇದೇ ಯೋಚನೆ ನನ್ನ ತಲೆಯಲ್ಲಿ ಮೂಡುತ್ತಿದೆ. ಆಕೆಯ ಪ್ರಜಾಪ್ರಭುತ್ವಕ್ಕೆ ಸಂವಿಧಾನಕ್ಕೆ ಏನಾಗಬಹುದು? ಆಕೆ ಅದನ್ನು ಉಳಿಸಿಕೊಳ್ಳಬಲ್ಲಳೇ ಅಥವಾ ಮತ್ತೆ ಆಕೆ ಅದನ್ನು ಕಳೆದುಕೊಳ್ಳುತ್ತಾಳೆಯೇ? ಇದು ಎರಡನೇ ಯೋಚನೆ ನನ್ನ ಮನಸ್ಸಿನಲ್ಲಿ ಮೂಡಿದ್ದು ಮತ್ತು ನನ್ನನ್ನು ಆತಂಕದಲ್ಲಿ ದೂಡಿದ್ದು. ಇದರ ಅರ್ಥ, ಭಾರತಕ್ಕೆ ಪ್ರಜಾಪ್ರಭುತ್ವ ಎಂದರೆ ಏನೆಂದು ತಿಳಿದಿಲ್ಲ ಎಂದರ್ಥವಲ್ಲ. ಅದೊಂದು ಕಾಲವಿತ್ತು, ಭಾರತವು ಗಣತಂತ್ರಗಳಿಂದ ಕಂಗೊಳಿಸುತ್ತಿತ್ತು; ಹಲವೆಡೆ ರಾಜಚಕ್ರಾಧಿಪತ್ಯಗಳೂ ಇದ್ದವು. ಆದರೆ, ಅವು ಚುನಾಯಿತವಾಗಿರುತ್ತಿದ್ದವು ಅಥವಾ ಸೀಮಿತವಾಗಿರುತ್ತಿದ್ದವು. ಇದರರ್ಥ, ಭಾರತವು ಸಂಸತ್ತು ಅಥವಾ ಸಂಸದೀಯ ಪ್ರಕ್ರಿಯೆಗಳನ್ನು ತಿಳಿದಿರಲಿಲ್ಲ ಎಂದರ್ಥವಲ್ಲ. ಬೌದ್ಧಭಿಕ್ಷು ಸಂಘಗಳನ್ನು ಕುರಿತಾದ ಅಧ್ಯಯನವೊಂದು ಏನು ಹೇಳುತ್ತದೆಂದರೆ, ಆ ಕಾಲದಲ್ಲಿಯೇ ಸಂಸತ್ತುಗಳು ಇದ್ದವಷ್ಟೇ ಅಲ್ಲ - ಸಂಘಗಳೆಂದರೇ ಸಂಸತ್ತು - ಆಧುನಿಕ ಸಮಯದ ಸಂಸದೀಯ ನಡವಳಿಗಳನ್ನು ಆ ಸಂಘಗಳು ಅಳವಡಿಸಿಕೊಂಡಿದ್ದವು. ಅವುಗಳಲ್ಲಿ ಆಸನಗಳ ವ್ಯವಸ್ಥೆಯ ನಿಯಮಗಳು, ನಿಲುವಳಿಗಳನ್ನು ಕುರಿತ ನಿಯಮಗಳು, ನಿರ್ಣಯಗಳು ಸಭೆ ನಡೆಸಲು ಅವಶ್ಯವಾದ ಸದಸ್ಯರ ಸಂಖ್ಯೆ, ಶಿಸ್ತು, ಸೂಚನೆ, ಮತಗಳ ಎಣಿಕೆ, ಮತಪತ್ರಗಳ ಮೂಲಕ ಮತ ಚಲಾವಣೆ, ವಾಗ್ದಂಡನೆ ಸೂಚನೆ, ಸಕ್ರಮಗೊಳಿಸುವಿಕೆ ಮುಂತಾದವು ಇದ್ದವು. ಈ ಎಲ್ಲ ಸಂಸದೀಯ ನಡವಳಿಗಳ ನಿಯಮಗಳು ಬುದ್ಧನಿಂದ ಸಂಘಗಳ ಸಭೆಗಳಿಗೆ ಜಾರಿಯಾಗುತ್ತಿದ್ದವು; ಆ ಕಾಲದಲ್ಲಿ ದೇಶದಲ್ಲಿದ್ದ ರಾಜಕೀಯ ಸಭೆಗಳ ಕಾರ್ಯವಿಧಾನದಿಂದ ಅವರು ಈ ಎಲ್ಲಾ ನಿಯಮಗಳನ್ನು ತೆಗೆದುಕೊಂಡಿರಬಹುದು. ಈ ಪ್ರಜಾಪ್ರಭುತ್ವ ಪದ್ಧತಿಯನ್ನು ಭಾರತ ಕಳೆದುಕೊಂಡಿತು. ಇದು ಮತ್ತೆ ಎರಡನೇ ಸಲ ಕಳೆದುಕೊಳ್ಳಲಿದೆಯೇ? ನನಗೆ ತಿಳಿದಿಲ್ಲ. ಆದರೆ ಇದು ಸಾಧ್ಯ, ಭಾರತದಂತಹ ದೇಶದಲ್ಲಿ - ಇಲ್ಲಿ ಪ್ರಜಾಪ್ರಭುತ್ವ ಬಹಳ ಕಾಲ ಇಲ್ಲದಿದ್ದುದರಿಂದ ಸಹಜವಾಗಿಯೇ ಇದನ್ನು ಹೊಸದೆಂದು ನೋಡುವುದು ಸಹಜ-ಪ್ರಜಾಪ್ರಭುತ್ವವು ನಿರಂಕುಶಾಧಿಕಾರಕ್ಕೆ ದಾರಿ ಮಾಡಿಕೊಡುವ ಅಪಾಯವೂ ಇದೆ. ಹೊಸದಾಗಿ ಹುಟ್ಟಿಕೊಂಡ ಪ್ರಜಾಪ್ರಭುತ್ವ ತನ್ನ ರೂಪವನ್ನು ಹಾಗೇ ಇಟ್ಟುಕೊಳ್ಳಬಹುದು. ಆದರೆ, ವಾಸ್ತವಾಗಿ ನಿರಂಕುಶಾಧಿಕಾರಕ್ಕೆ ದಾರಿಮಾಡಿಕೊಡುವ ಸಾಧ್ಯತೆಯೂ ಇದೆ. ಪ್ರಚಂಡ ಬಹುಮತವೇನಾದರೂ ದೊರೆತರೆ ಎರಡನೆಯ ಸಾಧ್ಯತೆಯ ಅಪಾಯವು ದಟ್ಟವಾಗಿದೆ’’ ಎಂದು ಅಂಬೇಡ್ಕರ್ ಅವರು ಎಚ್ಚರಿಸಿದ್ದರು.

ಮೋದಿ ನೇತೃತ್ವದ ಸರಕಾರವು ಬಹುಮತದ ನೆರಳಿನಲ್ಲಿ ಇಂದು ದೇಶದಲ್ಲಿ ಘೋಷಿತ ತುರ್ತು ಪರಿಸ್ಥಿತಿಯಲ್ಲದಿದ್ದರೂ ಸಂವಿಧಾನವನ್ನೇ ಅಪಾಯಕ್ಕೆ ದೂಡುವ ಅಘೋಷಿತ ತುರ್ತು ಪರಿಸ್ಥಿತಿಯನ್ನು ಒಂದು ಮೂಲೆಯಿಂದ ಜಾರಿಗೊಳಿಸುತ್ತಿದೆ. ತುರ್ತು ಪರಿಸ್ಥಿತಿಯೆಂದರೆ 1975ರಲ್ಲಿ ಜಾರಿಯಾದಂತಹ ಸನ್ನಿವೇಶಗಳ ಹೊರತಾಗಿಯೂ ಬೇರೆ ಬೇರೆ ಆಯಾಮದಲ್ಲಿ ತನ್ನ ಚಲನೆಯನ್ನು ಆಳುವ ಸರಕಾರಗಳು ಚಲಿಸುವಂತೆ ಮಾಡಿದೆ. ಸರ್ವಧರ್ಮವನ್ನು ಗೌರವಿಸುವುದನ್ನು ಮರೀಚಿಕೆಗೊಳಿಸಿ ಏಕಧರ್ಮವನ್ನು ಸಾರುವ ಹಾಗೂ ಏಕಧರ್ಮವನ್ನು ಎತ್ತಿಹಿಡಿಯುವ ನಿಟ್ಟಿನಲ್ಲಿ ಅಲ್ಪಸಂಖ್ಯಾತರು ಮತ್ತು ದಲಿತರ ಮೇಲೆ ದೈನಂದಿನವಾಗಿ ದೌರ್ಜನ್ಯ ನಡೆದರೂ ಸಹ ಸರಕಾರ ನಿರಂಕುಶಾಧಿಪತ್ಯವಾಗಿ ತಳೆದಿದೆ. ಬಿಜೆಪಿ ಪಕ್ಷದ ಅಂತರಂಗ ಆರೆಸ್ಸೆಸ್ ಸಿದ್ಧಾಂತವು ಭಾರತದ ಪ್ರಜಾಪ್ರಭುತ್ವವನ್ನು ಹಿಮ್ಮುಖವಾಗಿ ಚಲಿಸುವಂತೆ ಮಾಡಿ ಪ್ರಭುತ್ವವನ್ನು ತನ್ನ ಕಪಿಮುಷ್ಟಿಯಲ್ಲಿ ಇರಿಸಿಕೊಂಡಿದೆ.

ಆರೆಸ್ಸೆಸ್‌ನ ಗರ್ಭದಿಂದ ಹೊರಹೊಮ್ಮಿದ ಜನವಿರೋಧಿ ತಿದ್ದುಪಡಿ ಕಾಯ್ದೆಗಳು, ವೈಜ್ಞಾನಿಕ ದೃಷ್ಟಿಕೋನವಿಲ್ಲದ್ದನ್ನು ಪ್ರಚಲಿತಗೊಳಿಸುವಲ್ಲಿ ಯಶಸ್ವಿಯಾಗಿದೆ. ಸಂವಿಧಾನದ 356ನೇ ವಿಧಿಯನ್ನು ಯಥೇಚ್ಛವಾಗಿ ವಿರೋಧ ಪಕ್ಷಗಳನ್ನು ಉರುಳಿಸುವ ದಾಳವಾಗಿ ಬಳಸಿಕೊಳ್ಳಲಾಗುತ್ತಿದೆ. ಈಗಾಗಲೇ ಜಾರಿಯಲ್ಲಿದ್ದ ಸಮಾಜ ಕಲ್ಯಾಣದ ಕಾರ್ಯಕ್ರಮಗಳು ನಶಿಸುವತ್ತ ಸಾಗುವಂತೆ ಮಾಡಿದೆ. ಸರಕಾರದ ಯೋಜನೆಗಳು ಹಳೆಯ ಹೆಸರನ್ನು ಬದಲಿಸುವುದಕ್ಕೆ ಮಾತ್ರ ಸೀಮಿಗೊಳಿಸಲಾಗಿದೆ. ಈ ಸನ್ನಿವೇಶಗಳು ಡಾ. ಅಂಬೇಡ್ಕರ್‌ರವರು ಎಚ್ಚರಿಸಿದ ಅಪಾಯಗಳು ನಮ್ಮ ಮುಂದೆ ಇದೆ. ಇಂತಹ ಒಂದು ಪರಿಸ್ಥಿತಿ ಎದುರಾಗಬಹುದು ಹಾಗೂ ಇಂತಹ ಸನ್ನಿವೇಶದಲ್ಲಿ ಪ್ರಜಾಪ್ರಭುತ್ವವನ್ನು ಉಳಿಸಿಕೊಳ್ಳಲು ದೂರದೃಷ್ಟಿ ಇಟ್ಟಿದ್ದ ಡಾ. ಅಂಬೇಡ್ಕರ್‌ರವರು ‘‘ವಾಸ್ತವವಾಗಿಯೂ ಪ್ರಜಾಪ್ರಭುತ್ವವನ್ನು ಉಳಿಸಿಕೊಳ್ಳಬಯಸಿದರೆ, ನಾವು ಏನು ಮಾಡಬೇಕು? ನನ್ನ ನಿರ್ಧಾರದ ಪ್ರಕಾರ, ಇದನ್ನು ಸಾಧಿಸಬೇಕು ಎಂದಿದ್ದರೆ ನಮ್ಮ ಸಾಮಾಜಿಕ ಮತ್ತು ಆರ್ಥಿಕ ವಿಷಯಗಳಲ್ಲಿ ಸಾಧನೆ ಮಾಡಲು ಸಾಂವಿಧಾನಿಕ ಪದ್ಧತಿಗಳನ್ನು ತ್ವರಿತವಾಗಿ ಜಾರಿಗೊಳಿಸಬೇಕು. ಆರ್ಥಿಕ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ಪ್ರಗತಿ ಸಾಧಿಸಲು ಸಾಂವಿಧಾನಿಕ ಪದ್ಧತಿಗೆ ಅವಕಾಶವೇ ಇಲ್ಲ ಎನ್ನುವ ಪರಿಸ್ಥಿತಿ ಇದ್ದರೆ, ಅಸಾಂವಿಧಾನಿಕ ಕ್ರಮಗಳಿಗೆ ಸಮರ್ಥನೆ ಇರುತ್ತದೆ. ಆದರೆ, ಎಲ್ಲಿ ಸಾಂವಿಧಾನಿಕ ಪದ್ಧತಿಗೆ ಅವಕಾಶವು ಮುಕ್ತವಾಗಿರುತ್ತದೆಯೋ ಅಲ್ಲಿ ಅಂತಹ ಅಸಾಂವಿಧಾನಿಕ ಪದ್ಧತಿಗಳಿಗೆ ಸಮರ್ಥನೆ ಇರುವುದಿಲ್ಲ. ಈ ಅಸಾಂವಿಧಾನಿಕ ಪದ್ಧತಿಗಳು ಬೇರೆ ಏನೂ ಅಲ್ಲ, ಅರಾಜಕತೆಯ ತತ್ವಗಳಾಗಿವೆ ಮತ್ತು ಇವನ್ನು ಎಷ್ಟು ಬೇಗ ಬಿಟ್ಟರೆ ಅಷ್ಟು ನಮಗೆ ಒಳ್ಳೆಯದು.’’ ನಾವು ಮಾಡಲೇಬೇಕಾದ ಎರಡನೆಯ ವಿಷಯ ಏನೆಂದರೆ, ಪ್ರಜಾಪ್ರಭುತ್ವವನ್ನು ಉಳಿಸಿಕೊಳ್ಳಲು ಯಾರ್ಯಾರು ಬಯಸುತ್ತಾರೋ ಅವರೆಲ್ಲರಿಗಾಗಿ ಜಾನ್ ಸ್ಟುವರ್ಟ್ ಮಿಲ್ ಅವರು ನೀಡಿರುವ ಎಚ್ಚರಿಕೆಯನ್ನು ಗ್ರಹಿಸುವುದು. ಅವರು ಏನು ಹೇಳಿದ್ದಾರೆಂದರೆ ‘‘ಯಾರೂ ಕೂಡ ತಮ್ಮ ಸ್ವಾತಂತ್ರ್ಯವನ್ನು ಅವರು ಮಹಾನ್ ವ್ಯಕ್ತಿಯಾಗಿದ್ದರೂ ಸಹ ಅವರ ಪಾದದ ಮೇಲೆ ಹಾಕಬೇಡಿ ಅಥವಾ ಅಧಿಕಾರದ ವಿಷಯದಲ್ಲಿ ಯಾರನ್ನೂ ನಂಬಬೇಡಿ; ಅವರು ನಿಮ್ಮ ಸಂಸ್ಥೆಯನ್ನೇ ಬುಡಮೇಲು ಮಾಡಬಹುದು’’. ಡಾ. ಅಂಬೇಡ್ಕರ್ ಹೇಳುವಂತೆ ಧರ್ಮದಲ್ಲಿ ಭಕ್ತಿಯು ಆತ್ಮದ ಮೋಕ್ಷಕ್ಕೆ ಮಾರ್ಗವಾಗಬಹುದು. ಆದರ ರಾಜಕೀಯದಲ್ಲಿ ಭಕ್ತಿ ಅಥವಾ ವ್ಯಕ್ತಿಪೂಜೆಯು ಖಂಡಿತವಾಗಿ ಅವನತಿ, ಮಾನಹಾನಿ ಮತ್ತು ಅಂತಿಮವಾಗಿ ಸರ್ವಾಧಿಕಾರಕ್ಕೆ ಕಾರಣವಾಗುತ್ತದೆ. ನಾವು ಮಾಡಲೇಬೇಕಾದ ಮೂರನೇ ವಿಷಯವೆನೆಂದರೆ, ಯಾವುದೇ ಕಾರಣಕ್ಕೂ ರಾಜಕೀಯ ಪ್ರಜಾಪ್ರಭುತ್ವದಿಂದ ಸಂತುಷ್ಟಗೊಳ್ಳಬಾರದು. ನಾವು ನಮ್ಮ ರಾಜಕೀಯ ಪ್ರಜಾಪ್ರಭುತ್ವವನ್ನು ಸಾಮಾಜಿಕ ಪ್ರಜಾಪ್ರಭುತ್ವವಾಗಿಸಬೇಕು. ಸಾಮಾಜಿಕ ಪ್ರಜಾಪ್ರಭುತ್ವದ ತಳಹದಿಯ ಮೇಲೆ ನಿಂತ ರಾಜಕೀಯ ಪ್ರಜಾಪ್ರಭುತ್ವವು ಕೊನೆಯಾಗುವುದಿಲ್ಲ. ಹಾಗಾದರೆ ಸಾಮಾಜಿಕ ಪ್ರಜಾಪ್ರಭುತ್ವ ಎಂದರೇನು? ಇದು ಸ್ವಾತಂತ್ರ್ಯ ಸಮಾನತೆ ಮತ್ತು ಭ್ರಾತೃತ್ವವನ್ನು ಬದುಕಿನ ಸಿದ್ಧಾಂತವಾಗಿ ಗುರುತಿಸಿಕೊಂಡ ಒಂದು ಜೀವನಕ್ರಮವಾಗಿದೆ. ಸ್ವಾತಂತ್ರ್ಯ ಸಮಾನತೆ ಮತ್ತು ಭ್ರಾತೃತ್ವದ ನಿಯಮಗಳನ್ನು ತ್ರಯದ ಪ್ರತ್ಯೇಕ ಅಂಶಗಳಾಗಿ ಪರಿಗಣಿಸಬಾರದು. ಇವು ತ್ರಯದ ಒಂದು ಒಕ್ಕೂಟವನ್ನು ರಚಿಸುತ್ತವೆ; ಇದರರ್ಥ ಇವುಗಳಲ್ಲಿ ಒಂದರಿಂದ ಇನ್ನೊಂದನ್ನು ಪ್ರತ್ಯೇಕಿಸಿದರೆ ಅದು ಪ್ರಜಾಪ್ರಭುತ್ವದ ಉದ್ದೇಶದ ಸೋಲಿಗೆ ಕಾರಣವಾಗುತ್ತದೆ. ಸ್ವಾತಂತ್ರ್ಯವು ಸಮಾನತೆಯಿಂದ ಪ್ರತ್ಯೇಕವಾಗುವುದಿಲ್ಲ, ಸಮಾತೆಯು ಸ್ವಾತಂತ್ರ್ಯದಿಂದ ಪ್ರತ್ಯೇಕವಾಗುವುದಿಲ್ಲ ಅಥವಾ ಸ್ವಾತಂತ್ರ್ಯ ಮತ್ತು ಸಮಾನತೆಯು ಭ್ರಾತೃತ್ವದಿಂದ ಪ್ರತ್ಯೇಕವಾಗುವುದಿಲ್ಲ. ಸಮಾನತೆಯಿಲ್ಲದ ಸ್ವಾತಂತ್ರ್ಯವು ಹಲವರ ಮೇಲೆ ಕೆಲವರ ಸರ್ವಾಧಿಕಾರ ಮೆರೆಯುತ್ತದೆ. ಸ್ವಾತಂತ್ರ್ಯವಿಲ್ಲದ ಸಮಾನತೆಯು ವ್ಯಕ್ತಿಗತ ಕ್ರಿಯಾಶೀಲತೆಯನ್ನು ಸಾಯಿಸುತ್ತದೆ. ಭ್ರಾತೃತ್ವವಿಲ್ಲದಿದ್ದರೆ, ಸ್ವಾತಂತ್ರ್ಯ ಹಾಗೂ ಸಮಾನತೆಗಳು ಯಾವುದೇ ವಿಷಯದ ಸಹಜ ನಡೆಯಾಗುವುದಿಲ್ಲ. ಡಾ. ಅಂಬೇಡ್ಕರ್ ರವರು ಎಚ್ಚರಿಸಿದ ಅಪಾಯವು ನಮ್ಮ ಮುಂದೆ ಇದೆ ಹಾಗೂ ಪ್ರಜಾಪ್ರಭುತ್ವವನ್ನು ಉಳಿಸುವ ನಿಟ್ಟಿನಲ್ಲಿ ಅವರು ತೋರಿದ ಮಾರ್ಗಗಳನ್ನು ಸಹ ನಾವುಗಳು ಅನುಸರಿಸಬೇಕಾಗಿದೆ, ಇಲ್ಲದಿದ್ದರೆ ಪ್ರಜಾಪ್ರಭುತ್ವ ಮತ್ತು ಸ್ವಾತಂತ್ರ್ಯವನ್ನು ನಾವುಗಳು ನಮ್ಮ ಕೈಗಳಿಂದಲೇ ಕಳೆದುಕೊಳ್ಳುವ ಸನ್ನಿವೇಶ ಎದುರಾಗುತ್ತದೆ.

Tags

DemocracyConstitution
share
ಪುನೀತ್ ಎನ್. ಮೈಸೂರು
ಪುನೀತ್ ಎನ್. ಮೈಸೂರು
Next Story
X