Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ದೇವನಹಳ್ಳಿ ರೈತರನ್ನು ವಂಚಿಸುವ, ಸೇಡು...

ದೇವನಹಳ್ಳಿ ರೈತರನ್ನು ವಂಚಿಸುವ, ಸೇಡು ತೀರಿಸಿಕೊಳ್ಳುವ ಮತ್ತೊಂದು ಕುತಂತ್ರವನ್ನು ಸರ್ಕಾರ ಮಾಡುತ್ತಿದೆಯೇ?

ಶಿವಸುಂದರ್ಶಿವಸುಂದರ್3 Dec 2025 1:40 PM IST
share
ದೇವನಹಳ್ಳಿ ರೈತರನ್ನು ವಂಚಿಸುವ, ಸೇಡು ತೀರಿಸಿಕೊಳ್ಳುವ ಮತ್ತೊಂದು ಕುತಂತ್ರವನ್ನು ಸರ್ಕಾರ ಮಾಡುತ್ತಿದೆಯೇ?

ದೇವನಹಳ್ಳಿ ಭೂಸ್ವಾಧೀನ ವಿರೋಧಿ ಹೋರಾಟಕ್ಕೆ ಮಣಿದು ಸಿದ್ದು ಸರ್ಕಾರ ಜೂನ್ ನಲ್ಲಿ ಭೂಸ್ವಾಧೀನ ರದ್ದು ಘೋಷಣೆ ಮಾಡಿದ್ದರೂ ಈವರೆಗೆ denotification ಆದೇಶ ಹೊರಡಿಸಿಲ್ಲ. ಬದಲಿಗೆ ಹಿಂಬಾಗಿಲ ಮೂಲಕ ರೈತರನ್ನು ಪುಸಲಾಯಿಸಿ ವಶಪಡಿಸಿಕೊಳ್ಳುವ ಕುತಂತ್ರ ಮುಂದುವರೆಸಿತ್ತು.

ಆದರೆ ದೇವನಹಳ್ಳಿಯ ಜಾಗೃತ ರೈತರು ಹೋರಾಟವನ್ನು ಮುಂದುವರೆಸಿದ್ದರಿಂದ ನ. 26 ರಂದು ಮುಖ್ಯಮಂತ್ರಿಗಳು ಡಿ. 4 ರ ಕ್ಯಾಬಿನೆಟ್ ಮೀಟಿಂಗ್ ನಲ್ಲಿ ಇದರ ಬಗ್ಗೆ ಅಧಿಕೃತ ಘೋಷಣೆ ಹೊರಡಿಸುವುದಾಗಿ ಹೋರಾಟಗಾರರಿಗೆ ಭರವಸೆ ನೀಡಿದ್ದರು.

ಆದರೆ ಇಂದು ಸಾಮಾಜಿಕ ಜಾಲತಾಣಗಳಲ್ಲಿ ದೇವನಹಳ್ಳಿ ಭೂ ಸ್ವಾಧೀನಕ್ಕೆ ಸಂಬಂಧಿಸಿದಂತೆ ಒಂದು ಕರಡು ಪ್ರಸ್ತಾಪ ಹರಿದಾಡುತ್ತಿದೆ. ಇದು ಅಧಿಕೃತವೋ, ನಿಜವೋ ಗೊತ್ತಿಲ್ಲ.

ಆದರೆ ಅದರಲ್ಲಿ ಪ್ರಸ್ತಾಪವಾಗಿರುವ ಕ್ರಮಗಳು ಈ ಹಿಂದೆ ಕೈಗಾರಿಕಾ ಮಂತ್ರಿ ಎಂ. ಬಿ. ಪಾಟೀಲರು ಹೋರಾಟವನ್ನು ಮುರಿಯಲು ಹೂಡಿದ ಕುತಂತ್ರಗಳಲ್ಲಿ ಪ್ರಯೋಗಿಸಿದ ಅಸ್ತ್ರಗಳನ್ನೇ ಹೋಲುತ್ತಿವೆ.

ಈ ಕಾರಣಕ್ಕಾಗಿ ಮತ್ತು ಮಾತು ಕೊಟ್ಟು ಐದು ತಿಂಗಳಾದರೂ ಡಿನೋಟಿಫೈ ಮಾಡದೆ, ಸರ್ಕಾರವು ಭೂ ಸ್ವಾಧೀನಾ ಕ್ರಮಗಳನ್ನು ಕೈಗೊಂಡಿದ್ದರ ಅನುಭವದ ಹಿನ್ನೆಲೆಯಲ್ಲಿ ನೋಡಿದರೆ ಅದು ಸುಳ್ಳಾಗಿರಬಹುದೆಂದು ಖಚಿತವಾಗಿ ಹೇಳಲು ಹೋರಾಟಗಾರರಿಗೆ ವಿಶ್ವಾಸ ಮೂಡುತ್ತಿಲ್ಲ.

ಒಂದು ವೇಳೆ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಈ ಕರಡು ಪ್ರಸ್ತಾಪ ಅಧಿಕೃತವೆ ಆಗಿದ್ದಲ್ಲಿ ಅದು ಬಿಜೆಪಿ ಕಾಲದ ಬಹಿರಂಗ ಕೃಷಿ ವಿರೋಧಿ ನೀತಿಗಳಷ್ಟೆ, ರೈತದ್ರೋಹಗಳಷ್ಟೆ ಅತ್ಯಂತ ನಯವಂಚಕ ನೀತಿಯಾಗುತ್ತದೆ..

ಏಕೆಂದರೆ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಆ ಕರಡು:

1. ದೇವನಹಳ್ಳಿಯ ಹೋರಾಟ ನಿರತ ರೈತರನ್ನು ಭೂಮಿ ಕೊಡಲೊಪ್ಪದ ರೈತರು ಮತ್ತು ಸ್ವಇಚ್ಛೆಯಿಂದ ಭೂಮಿ ಕೊಡಬೇಕೆಂದಿರುವ ರೈತರು ಎಂದು ಕುತಂತ್ರದಿಂದ ವಿಭಜಿಸುತ್ತದೆ.

2. ಸ್ವಲ್ಪ ಇಚ್ಛೆಯಿಂದ ಭೂಮಿ ಕೊಡಬಯಸುವ ರೈತರು ಮೂರು ತಿಂಗಳೊಳಗೆ ಕೊಡಬೇಕೆಂದು ಸಮಯ ಮಿತಿಯನ್ನು ವಿಧಿಸುತ್ತದೆ.

3.ಆ ನಂತರ ಇಡೀ 1778 ಎಕರೆ ಜಮೀನನ್ನು ಯಾವ ಕಾನೂನಿನಲ್ಲೂ ಇಲ್ಲದಿರುವ "ಶಾಶ್ವತ ಮತ್ತು ವಿಶೇಷ ಕೃಷಿ ವಲಯ"ವಾಗಿ ಘೋಷಿಸುವುದಾಗಿ ಎಚ್ಚರಿಸುತ್ತದೆ. ಅಂದರೆ ಶಾಶ್ವತ ಕೃಷಿ ವಲಯವಾಗಿ ಘೋಷಿಸಿದ ನಂತರ ಇನ್ನೆಂದೂ, ಕಷ್ಟ ಕಾಲದಲ್ಲೂ ತಮ್ಮ ಜಮೀನುಗಳನ್ನು ಮಾರಿಕೊಳ್ಳಲು ಸಾಧ್ಯವೇ ಇಲ್ಲವೆಂಬ ಆತಂಕವನ್ನು ಹುಟ್ಟಿಸುತ್ತದೆ.

4. ಈ ಪ್ರಸ್ತಾಪ ನಿಜವೇ ಆಗಿದ್ದಲ್ಲಿ ಅದು ದೇವನಹಳ್ಳಿಯನ್ನು ರಣರಂಗ ಮಾಡುವ ಸರ್ಕಾರದ ವ್ಯವಸ್ಥಿತ ಚಿತಾವಣೆಯಾಗಿದೆ. ರೈತರಲ್ಲಿ ಒಳಜಗಳ ಹಚ್ಚಿ ಹೋರಾಟಗಾರರನ್ನು ಕ್ರಿಮಿನಲ್ ಮತ್ತು ಅಭಿವೃದ್ಧಿ ವಿರೋಧಿ ಎಂದು ಘೋಷಿಸಿ ಆ ಮೂಲಕ ಜಮೀನು ಕಬಳಿಸುವ ಹುನ್ನಾರ ಎದ್ದು ಕಾಣುತ್ತಿದೆ..

5. ಹಾಗೇ ನೋಡಿದರೆ ಯಾವ ಕಾನೂನಿನಲ್ಲೂ ಇಲ್ಲದ "ವಿಶೇಷ ಮತ್ತು ಶಾಶ್ವತ ಕೃಷಿ ವಲಯ" ಎಂಬ ಪರಿಕಲ್ಪನೆ ಹುಟ್ಟಿಸಿದ್ದೇ ಎಂ. ಬಿ. ಪಾಟೀಲರ ದಲ್ಲಾಳಿಗಳು.

6. ನಗರ ಮತ್ತು ಪಟ್ಟಣಾಭಿವೃದ್ಧಿ ಪ್ರಾಧಿಕಾರಗಳು ಕೆಲವು ಪ್ರದೇಶಗಳನ್ನು "ಹಸಿರು ವಲಯ" ಎಂದು ಘೋಷಿಸುತ್ತವೆ. ಮತ್ತು ಅದು ಪ್ರತಿ ಹತ್ತು ವರ್ಷಕ್ಕೊಮ್ಮೆ ಪರಿಶೀಲನೆಗೆ ಒಳಪಡುತ್ತದೆ.. ಅದೇ ರೀತಿ ದೇವನಹಳ್ಳಿ ಸೇರುವ ಅಂತಾರಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರದೇಶ ಅಭಿವೃದ್ಧಿ ಪ್ರಾಧಿಕಾರವು ದೇವನಹಳ್ಳಿ ಪ್ರದೇಶವನ್ನು ಈಗಾಗಲೇ ಹಸಿರು ವಲಯವೆಂದು ಘೋಷಿಸಿದೆ.

7.ನಗರ ಅಥವಾ ಪಟ್ಟಣ ಅಭಿವೃದ್ಧಿ ಪ್ರಾಧಿಕಾರದ ಯೋಜನೆ ಗಳಲ್ಲಿ ಹತ್ತು ವರ್ಷಗಳಿಗೊಮ್ಮೆ ಪರಿಶೀಲಿಸಲ್ಪಡುವ "ಹಸಿರು ವಲಯ" ಬಿಟ್ಟರೆ "ಶಾಶ್ವತ ಮತ್ತು ವಿಶೇಷ " ಕೃಷಿ ವಲಯ ಎಂಬುದಿಲ್ಲ.

8..ಸಂಪೂರ್ಣ ರಫ್ತ್ತು ಕೃಷಿಗಾಗಿ SEZ ರೀತಿ Special Agricultural Zone ಗಳಿವೆ... ಅದೂ ಸರಿಯಲ್ಲ.. ಆದರೆ ಅದು ಬೇರೆ ವಿಷಯ..

9. ನಗರಾಭಿವೃದ್ಧಿ ಮತ್ತು ಕೈಗಾರಿಕಾಂಭಿವೃದ್ಧಿ ಯೋಜನೆಗಳ ಭಾಗವಾಗಿ ರೂಪಿಸಲ್ಪಡುವ ಯಾವ ಯೋಜನೆಗಳಲ್ಲೂ "ವಿಶೇಷ, ಶಾಶ್ವತ " ಕೃಷಿ ವಲಯ ಅಂತಿಲ್ಲ... ಅದರ ಉದ್ದೇಶವೇ ರೈತರ ನಡುವೆ ವಿಬೇಧ, ಅನೈಕ್ಯಮತ್ಯಾ, ವೈಶಮ್ಯ ಹುಟ್ಟಿಸಿ ಹೋರಾಟವನ್ನು ಹತ್ತಿಕ್ಕುವುದು...

10.ಮೂರು ತಿಂಗಳ ಗಡುವು ಕಾನೂನಿನ ಭಾಗವಾಗಲೂ ಯಾವುದೇ ಕಾನೂನು ತರ್ಕವಿಲ್ಲ...

11. ಎಲ್ಲಕ್ಕಿಂತ ಮುಖ್ಯವಾಗಿ ಈ ಪ್ರಸ್ತಾಪ ನಿಜವೇ ಆಗಿದ್ದಲ್ಲಿ ದೇವನಹಳ್ಳಿ ರೈತ ಹೋರಾಟದ ಮೂಲ ತಾತ್ವಿಕ ಭೂಮಿಕೆಯಾಗಿರುವ "ನನ್ನ ಜಮೀನು, ನನ್ನ ನಿರ್ಧಾರ " ಎಂಬುದನ್ನು ಸರ್ಕಾರ ಸಂಪೂರ್ಣವಾಗಿ ನಿರಾಕರಿಸಿ ನಿಮ್ಮ ಭೂಮಿ, ನಮ್ಮ (ಸರ್ಕಾರ ಕಾರ್ಪೋರೆಟ್ )ನಿರ್ಧಾರ ಎಂಬ ಕಾರ್ಪೋರೇಟ್ ಪರ, ರೈತ ವಿರೋಧಿ ನೀತಿಯನ್ನು ಮುಂದುವರೆಸಿದಂತಾಗುತ್ತದೆ.

9. ಇದು ನಿಜವೇ ಆದಲ್ಲಿ, ಸರ್ಕಾರದ ಕ್ಯಾಬಿನೆಟ್ ನಿರ್ಧಾರವೇ ಆಗಿಬಿಟ್ಟಲ್ಲಿ, ಕಾಂಗ್ರೆಸ್ ಸರ್ಕಾರದ ಈ ಬಹಿರಂಗ ವಂಚನೆ ಮತ್ತು ದ್ರೋಹದ ವಿರುದ್ಧ ಬೃಹತ್ ಹೋರಾಟ ಕಟ್ಟಲೇಬೇಕಾಗುತ್ತದೆ.

ಒಳಮೀಸಲಾತಿ, ಅಲೆಮಾರಿ ಮೀಸಲಾತಿ, ಕಾಂತರಾಜ್ ವರದಿ ಇತ್ಯಾದಿ ಸಾಮಾಜಿಕ ನ್ಯಾಯದ ವಿಷಯಗಳಲ್ಲಿ ದಮನಿತರ ಪರವಾಗಿ ಖಚಿತ ನಿಲುವು ತೆಗೆದುಕೊಳ್ಳದ, ರೈತಾಪಿ ವಿಷಯಗಳಲ್ಲಿ ಕಾರ್ಪೋರೆಟ್ ಬಲಿಷ್ಠರಿಗೆ ಮಣಿಯದೇ ರೈತ ಪರ ನಿಲುವು ತೆಗೆದುಕೊಳ್ಳದ ಕಾಂಗ್ರೆಸ್ ಸರ್ಕಾರದ ಬಂಡವಾಳ ಶಾಹಿ, ಬ್ರಾಹ್ಮಣ ಶಾಹಿ, ಫ್ಯಾಶಿಸ್ಟ್ ನೀತಿಗಳ ವಿರುದ್ಧ ಬೃಹತ್ ಜನಾಂದೋಲನ ರೂಪಿಸದೆ ಬೇರೆ ಪರ್ಯಾಯವಿಲ್ಲವೆಂಬುದನ್ನು ಸಿದ್ದು ಸರ್ಕಾರ ಪದೇ ಪದೇ ಸಾಬೀತು ಮಾಡುತ್ತಿದೆ. ಜನರು ಎಡುವ ಕಡೆಯೆ ಮತ್ತೆ ಎಡವಬಾರದಷ್ಟೇ..

-ಶಿವಸುಂದರ್

share
ಶಿವಸುಂದರ್
ಶಿವಸುಂದರ್
Next Story
X