Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಡೊನಾಲ್ಡ್ ಟ್ರಂಪ್ ಮತ್ತು ಅಕ್ರಮ ವಲಸೆ

ಡೊನಾಲ್ಡ್ ಟ್ರಂಪ್ ಮತ್ತು ಅಕ್ರಮ ವಲಸೆ

ಮ.ಶ್ರೀ. ಮುರಳಿ ಕೃಷ್ಣ, ಬೆಂಗಳೂರುಮ.ಶ್ರೀ. ಮುರಳಿ ಕೃಷ್ಣ, ಬೆಂಗಳೂರು8 Feb 2025 3:10 PM IST
share
ಡೊನಾಲ್ಡ್ ಟ್ರಂಪ್ ಮತ್ತು ಅಕ್ರಮ ವಲಸೆ

ಅಮೆರಿಕ ಅಧ್ಯಕ್ಷೀಯ ಚುನಾವಣಾ ಪ್ರಚಾರದ ಸಮಯದಲ್ಲಿ ಟ್ರಂಪ್ ಉಗ್ರ ಎನ್ನಬಹುದಾದ ರೀತಿಯಲ್ಲಿ ಅಕ್ರಮ ವಲಸಿಗರ ವಿಷಯವನ್ನು ಪ್ರಸ್ತಾಪಿಸಿದರು. ತಾವು ಅಧಿಕಾರಕ್ಕೆ ಬಂದರೆ ತಕ್ಷಣ ಅಂತಹವರನ್ನು ಗಡಿಪಾರು ಮಾಡುವುದಾಗಿ ಭರವಸೆಯನ್ನು ನೀಡಿದ್ದರು. ಅವರು ಚುನಾವಣೆಯಲ್ಲಿ ವಿಜಯಶಾಲಿಯಾಗಿ ಅಧಿಕಾರವನ್ನು ವಹಿಸಿಕೊಂಡ ಅಲ್ಪ ಸಮಯದಲ್ಲೇ ಹಲವು ಪ್ರಮುಖ ಎಕ್ಸಿಕ್ಯುಟಿವ್ ಆರ್ಡರ್ಗಳನ್ನು ಪಾಸ್ ಮಾಡಿದರು. ಅವುಗಳಲ್ಲಿ ಅಕ್ರಮ ವಲಸಿಗರನ್ನು ಗಡಿಪಾರು ಮಾಡುವ ಆಜ್ಞೆ ಕೂಡ ಒಂದಾಗಿತ್ತು.

2022ರ ಯುಎಸ್ ಡಿಪಾರ್ಟ್ಮೆಂಟ್ ಆಫ್ ಹೋಂಲ್ಯಾಂಡ್ ಸೆಕ್ಯುರಿಟಿ ಅನ್ವಯ 2022ರಲ್ಲಿ ಸುಮಾರು 11 ಮಿಲಿಯ ಮಂದಿ ಅಕ್ರಮ ವಲಸಿಗರಿದ್ದರು. ಈಗ ಅವರ ಸಂಖ್ಯೆ ಇನ್ನೂ ಹೆಚ್ಚಾಗಿರಬಹುದು. ವರ್ಷವೊಂದಕ್ಕೆ ಸುಮಾರು ಒಂದು ಮಿಲಿಯ ಅಂತಹ ವ್ಯಕ್ತಿಗಳನ್ನು ಗಡಿಪಾರು ಮಾಡುವ ಉದ್ದೇಶವನ್ನು ಸರಕಾರ ಹೊಂದಿದೆ ಎಂದು ಅಮೆರಿಕದ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಹೇಳಿದ್ದಾರೆ. ಒಂದು ಅಂದಾಜಿನ ಪ್ರಕಾರ ಸುಮಾರು 18,000 ಭಾರತ ಮೂಲದ ಅಕ್ರಮ ವಲಸಿಗರು ಅಲ್ಲಿದ್ದಾರೆ. ಅಂತಹವರನ್ನು ಸ್ವೀಕರಿಸಲಾಗುವುದು ಎಂಬುದು ಭಾರತ ಸರಕಾರದ ಅಧಿಕೃತ ನಿಲುವಾಗಿದೆ.

ಆದರೆ ಅಕ್ರಮ ವಲಸಿಗರ ಇಂತಹ ಗಡಿಪಾರಿನಿಂದ ಅಮೆರಿಕದ ಆರ್ಥಿಕತೆ 2028ರ ಸಮಯಕ್ಕೆ ಸುಮಾರು ಶೇ. 1.2ರಷ್ಟು ಕುಗ್ಗಬಹುದೆಂದು ದಿ ಪೀಟರ್ಸನ್ ಇನ್ಸ್ಟಿಟ್ಯೂಟ್ ಆಫ್ ಇಂಟರ್ನ್ಯಾಷನಲ್ ಇಕನಾಮಿಕ್ಸ್ ಅಂದಾಜಿಸಿದೆ(ಸುಮಾರು 1.3 ಮಿಲಿಯ ಅಕ್ರಮ ವಲಸಿಗರು ಗಡಿಪಾರು ಆದರೆ). ಆದರೆ ಅಷ್ಟರೊಳಗೆ ಎಲ್ಲ 8.3 ಮಿಲಿಯ (ಅದರ ಅಂದಾಜಿನಂತೆ) ಅಕ್ರಮ ವಲಸಿಗರನ್ನು ಗಡಿಪಾರು ಮಾಡಿದರೆ, ಅಮೆರಿಕದ ಜಿಡಿಪಿ ಸುಮಾರು ಶೇ. 7.4ರಷ್ಟು ಕುಸಿಯಬಹುದು ಎಂದು ತಿಳಿಸಿದೆ. ಈ ತೆರನಾದ ಕ್ರಮದಿಂದ ಉತ್ಪಾದನೆ, ತೆರಿಗೆಗಳ ಆದಾಯ ಕುಂಠಿತಗೊಂಡು ಪ್ರಮುಖ ಉದ್ಯಮಗಳಿಗೆ, ರಾಜ್ಯಗಳ ಆರ್ಥಿಕ ಬೆಳವಣಿಗೆಗೆ ಧಕ್ಕೆಯಾಗುತ್ತದೆ ಎಂಬ ಅಭಿಪ್ರಾಯ ಅಮೆರಿಕದ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.

ಅಮೆರಿಕದಲ್ಲಿರುವ ಭಾರತ ಮೂಲದ ಅಕ್ರಮ ವಲಸಿಗರ ಪೈಕಿ 104 ದಸ್ತಾವೇಜುರಹಿತ ಭಾರತೀಯರು ಪಂಜಾಬಿನ ಅಮೃತಸರದ ಇಂಡಿಯನ್ ಏರ್ಫೋರ್ಸ್ ಸ್ಟೇಶನ್ನ ವಿಮಾನ ನಿಲ್ದಾಣದಲ್ಲಿ ಫೆಬ್ರವರಿ 5ರಂದು ಬಂದಿಳಿದರು. ಇದಕ್ಕೆ ಮೊದಲು ಕೇಂದ್ರ ಮತ್ತು ದಕ್ಷಿಣ ಅಮೆರಿಕದ ಬ್ರೆಝಿಲ್ ಮತ್ತು ಕೊಲಂಬಿಯಾ ದೇಶಗಳಿಗೆ ಅಮೆರಿಕದಲ್ಲಿದ್ದ ಆ ದೇಶಗಳ ಕೆಲವು ಅಕ್ರಮ ವಲಸಿಗರನ್ನು ವಾಪಸ್ ಕಳುಹಿಸಲಾಗಿತ್ತು. ಅಮೆರಿಕ ಖಂಡದಿಂದ ಆಚೆ ಇರುವ ದೇಶಗಳ ಪೈಕಿ ಭಾರತವೇ ತನ್ನ ಮೂಲದ ಅಕ್ರಮ ವಲಸಿಗರನ್ನು (ಅಮೆರಿಕದಲ್ಲಿದ್ದ) ವಾಪಸ್ ಪಡೆದ ಮೊದಲ ದೇಶವಾಗಿದೆ! ಸುದ್ದಿ ಚಾನೆಲ್ಗಳ ಅನ್ವಯ ಮಿಲಿಟರಿ ವಿಮಾನದಲ್ಲಿ ಬಂದಿಳಿದ ಈ ಗಡಿಪಾರು ಆದವರಿಗೆ ಕೈಕೋಳಗಳನ್ನು ಹಾಕಲಾಗಿತ್ತು ಮತ್ತು ಕಾಲುಗಳಿಗೆ ಚೈನ್ ಬಿಗಿಯಲಾಗಿತ್ತು! ಅಮೆರಿಕವೇ ಬಿಡುಗಡೆ ಮಾಡಿರುವ ವೀಡಿಯೊದಲ್ಲಿ ಅವರಿದ್ದ ಪರಿಸ್ಥಿತಿ ಗೋಚರಿಸುತ್ತದೆ. ಗಡಿಪಾರು ಆಗಿರುವ ಪಂಜಾಬಿನ ಗುರುದಾಸ್ಪುರ ಜಿಲ್ಲೆಯ, 36 ವಯೋಮಾನದ ಜಸ್ಪಾಲ್ ಸಿಂಗ್ ವಿಮಾನ ಹಾರಾಟದ ಸಮಯದಲ್ಲಿ ತಮ್ಮ ಕೈಗಳಿಗೆ ಕೋಳ ಹಾಗೂ ಕಾಲುಗಳಿಗೆ ಚೈನ್ನನ್ನು ಹಾಕಲಾಗಿತ್ತು ಎಂದು ಪತ್ರಕರ್ತರಿಗೆ ತಿಳಿಸಿದ್ದಾರೆ. ನಮ್ಮ ದೇಶಕ್ಕೆ ವಾಪಸಾಗಿರುವ ಮಂದಿಯ ಪೈಕಿ 19 ಮಹಿಳೆಯರು ಮತ್ತು 13 ಅಪ್ರಾಪ್ತ ವಯಸ್ಸಿನ ಮಕ್ಕಳು ಇದ್ದಾರೆ. ಮಕ್ಕಳ ಪೈಕಿ ಗುಜರಾತಿನ 4 ವರ್ಷದ ಬಾಲಕನಿದ್ದಾನೆ. ಒಟ್ಟು 104 ಗಡಿಪಾರು ಆದವರ ಪೈಕಿ ಗುಜರಾತ್ ಮತ್ತು ಹರ್ಯಾಣ ರಾಜ್ಯಗಳ ತಲಾ 33 ಮಂದಿ ಇದ್ದಾರೆ. ಪಂಜಾಬಿನವರು 30 ಮತ್ತು ಉಳಿದ ಎಂಟು ಮಂದಿ ಉತ್ತರ ಪ್ರದೇಶ, ಮಹಾರಾಷ್ಟ್ರ ಮತ್ತು ಚಂಡಿಗಡ ಮೂಲದವರಾಗಿದ್ದಾರೆ.

ಫೆಬ್ರವರಿ 6ರಂದು ರಾಜ್ಯಸಭೆಯಲ್ಲಿ ವಿರೋಧ ಪಕ್ಷಗಳ ಕೆಲವು ಸಂಸದರು ಎತ್ತಿದ ಪ್ರಶ್ನೆಗಳಿಗೆ ಉತ್ತರಿಸುತ್ತ ವಿದೇಶಾಂಗ ಮಂತ್ರಿ ಎಸ್. ಜಯಶಂಕರ್ ‘‘ಅಮೆರಿಕ ಸರಕಾರದ ಪ್ರೊಟೋಕಾಲ್ ಪ್ರಕಾರ ಆ ದೇಶ ಅಕ್ರಮ ವಲಸಿಗರನ್ನು ಕ್ರಿಮಿನಲ್ಗಳೆಂದು ಪರಿಗಣಿಸುತ್ತದೆ. ಅದರಂತೆ ಅವರನ್ನು ವಿಮಾನದ ಹಾರಾಟದ ವೇಳೆ ನಡೆಸಿಕೊಳ್ಳಲಾಗುತ್ತದೆ’’ ಎಂದು ತಿಳಿಸಿದರು. ಈ ಸರಕಾರದ ಚಾಳಿಯಂತೆ, ಅನೇಕ ವರ್ಷಗಳಿಂದ ಈ ರೀತಿಯ ಅಕ್ರಮ ವಲಸಿಗರ ಗಡಿಪಾರು ಮಾಡಲಾಗಿತ್ತೆಂಬ ಸಮರ್ಥನೆಯನ್ನು ನೀಡಿದರು. ಅಲ್ಲದೆ, ಮಹಿಳೆಯರು ಮತ್ತು ಮಕ್ಕಳಿಗೆ ಬಂಧನದ ವಿಧಾನಗಳಿಗೆ ಒಳಪಡಿಸಲಾಗಲಿಲ್ಲ ಎಂಬ ಹೇಳಿಕೆಯನ್ನು ನೀಡಿದರು. ಅವರ ಮಾತುಗಳನ್ನು ಆಲಿಸಿದಾಗ, ವಿಮಾನ ಯಾನದಲ್ಲಿ ಅಮೆರಿಕ ಸರಕಾರದಿಂದ ನಡೆದ ಮಾನವ ಘನತೆಗೆ ಚ್ಯುತಿಯಾಗುವಂತಹ ಕಾರ್ಯಗಳಿಗೆ ಸಮಜಾಯಿಷಿಯನ್ನು ನೀಡುತ್ತಿದ್ದಾರೇನೋ ಎಂದೆನಿಸಿದರೆ, ಅದು ಸಹಜ ಕೂಡ. ವಿಮಾನ ಯಾನದಲ್ಲಿ ಗಡಿಪಾರು ಮಾಡಿದವರನ್ನು ಅಮಾನವೀಯವಾಗಿ ಅಮೆರಿಕ ನಡೆಸಿಕೊಂಡಿದ್ದರ ಕುರಿತು ಅವರು ‘‘ಅದನ್ನು ಸೂಕ್ತ ರೀತಿಯಲ್ಲಿ ವಿಚಾರಿಸಲಾಗುವುದು’’ ಎಂಬ ಬ್ಯುರೋಕ್ರಟಿಕ್ ಉತ್ತರವನ್ನು ರವಾನಿಸಿದರು!

ಟ್ರಂಪ್ ಎರಡನೇ ಬಾರಿ ಅಧ್ಯಕ್ಷೀಯ ಅಧಿಕಾರವನ್ನು ವಹಿಸಿಕೊಂಡ ತರುವಾಯ ಮೆಕ್ಸಿಕೊ, ಬ್ರೆಝಿಲ್ ಮತ್ತು ಕೊಲಂಬಿಯಾ ಮೂಲದ ಕೆಲವು ಅಕ್ರಮ ವಲಸಿಗರನ್ನು ಆ ದೇಶಗಳಿಗೆ ವಾಪಸ್ ಕಳುಹಿಸಲಾಯಿತು. ಮೆಕ್ಸಿಕೊ ಗಡಿಪಾರು ಮಾಡಿದವರಿದ್ದ ಅಮೆರಿಕದ ಮಿಲಿಟರಿ ವಿಮಾನವನ್ನು ಭೂಸ್ಪರ್ಶಿಸಲು ಅನುಮತಿಯನ್ನು ನೀಡಲಿಲ್ಲ! ಸಣ್ಣ ದೇಶ ಕೊಲಂಬಿಯಾ ಅಮೆರಿಕದೊಡನೆ ವ್ಯಾಪಾರ-ವಾಣಿಜ್ಯ ಸಂಬಂಧವನ್ನು ಹೊಂದಿದ್ದರೂ, ಅಮೆರಿಕ ಕಳುಹಿಸಿದ ಗಡಿಪಾರು ಮಾಡಿದವರು ಪಯಣಿಸಿದ ಎರಡು ಮಿಲಿಟರಿ ವಿಮಾನಗಳನ್ನು ವಾಪಸ್ ಕಳುಹಿಸಿತು! ಆದರೆ ತರುವಾಯ ಟ್ರಂಪ್ ಸರಕಾರ ವ್ಯಾಪಾರದ ವಿಷಯಕ್ಕೆ ಸಂಬಂಧಿಸಿದಂತೆ ಧಮ್ಕಿ ಹಾಕಿದಾಗ, ಅದು ತನ್ನ ನಿಲುವನ್ನು ಸಡಿಲಗೊಳಿಸಿತು. ಬ್ರೆಝಿಲ್ ದೇಶದ ಒಂದು ವಿಮಾನ ನಿಲ್ದಾಣದಲ್ಲಿ ಅಮೆರಿಕದಿಂದ ಹೊರಟ ಅಕ್ರಮ ವಲಸಿಗರಿದ್ದ ವಾಣಿಜ್ಯ ವಿಮಾನ ಇಳಿಯಬೇಕಿತ್ತು. ಹಾಗೆ ಇಳಿಯಿತು ಕೂಡ. ನಂತರ ಬ್ರೆಝಿಲ್ನ ಅಧಿಕಾರಿಗಳು ಕೈಕೋಳಗಳನ್ನು ತೆಗೆಯಬೇಕೆಂದು ತಾಕೀತು ಮಾಡಿದರು. ಆ ದೇಶದ ಅಧ್ಯಕ್ಷ ಲೂಲಾರ ನಿರ್ದೇಶನದ ಮೇರೆಗೆ ಏರ್ಫೋರ್ಸ್ ನ ಪ್ರತ್ಯೇಕ ವಿಮಾನದಲ್ಲಿ ಅಕ್ರಮ ವಲಸಿಗರ ಪಯಣ ಮುಂದುವರಿಯಿತು!

ವಿಷಯ ಹೀಗಿರುವಾಗ, ಎಲ್ಲ ಬಗೆಯಲ್ಲೂ ನಮ್ಮದು ಪ್ರಬಲ ರಾಷ್ಟ್ರವಾಗುತ್ತಿದೆ ಎಂದು ಎಲ್ಲ ವೇದಿಕೆಗಳಲ್ಲೂ ಬೀಗುವ ನಮ್ಮ ಸರಕಾರ, ಅಮೆರಿಕದ ಮೇಲೆ ಪ್ರಸ್ತಾಪಿಸಿರುವ ಅಮಾನವೀಯ ನಡೆಯನ್ನು ದಿಟ್ಟವಾಗಿ ಪ್ರಶ್ನಿಸುವುದರ ಬಗೆಗೆ ಸಾರ್ವಜನಿಕ ವಲಯದಲ್ಲಿ ಸಂದೇಹವಿದೆ. ಮುಂದಿನ ವಾರ ನಮ್ಮ ಮಾನ್ಯ ಪ್ರಧಾನಿಯವರು ಟ್ರಂಪನ್ನು ಭೇಟಿ ಮಾಡಲು ಅಮೆರಿಕಕ್ಕೆ ತೆರಳುತ್ತಿದ್ದಾರೆ. ಎಂದಿನ ಕೈಕುಲುಕುವಿಕೆ, ಆಲಿಂಗನದಾಚೆಗೆ ಅವರು ಧೈರ್ಯವಾಗಿ ಅಮೆರಿಕದ ಘನತೆರಹಿತ ನಡವಳಿಕೆಯನ್ನು ಪ್ರಶ್ನಿಸುವರೇ? ಖಂಡಿಸುವರೇ?

ಆದರೆ ಈ ಬಗೆಯ ಅಕ್ರಮ ವಲಸೆಗಳು ಏಕೆ ನಡೆಯುತ್ತವೆ, ಏಜೆಂಟರು ಯಾವ ರೀತಿಯಲ್ಲಿ ವಲಸೆಯ ವಿಷಯದಲ್ಲಿ ಏಮಾರಿಸುತ್ತಾರೆ, ಹಾಲಿ ನಮ್ಮಲ್ಲಿರುವ ಉದ್ಯೋಗಾವಕಾಶಗಳ ತೀವ್ರ ಕುಸಿತಕ್ಕೂ ಅಕ್ರಮ ವಲಸೆಗೂ ಸಂಬಂಧವಿದೆಯೇ ಎಂಬಿ ತ್ಯಾದಿ ಪ್ರಶ್ನೆಗಳು ಮನನಯೋಗ್ಯವೇ ಸರಿ. ಇದು ಪ್ರಜ್ಞಾವಂತರು ಯೋಚಿಸಬೇಕಾದ ವಿಚಾರವೂ ಹೌದು.

share
ಮ.ಶ್ರೀ. ಮುರಳಿ ಕೃಷ್ಣ, ಬೆಂಗಳೂರು
ಮ.ಶ್ರೀ. ಮುರಳಿ ಕೃಷ್ಣ, ಬೆಂಗಳೂರು
Next Story
X