Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಡಾ.ಭಾರ್ಗವರಿಂದ ‘ಮಧುರ ಕ್ರಾಂತಿ’ :...

ಡಾ.ಭಾರ್ಗವರಿಂದ ‘ಮಧುರ ಕ್ರಾಂತಿ’ : ದೇಶ-ವಿದೇಶಗಳಲ್ಲೂ ಜೇನು ತುಪ್ಪಕ್ಕೆ ಹೆಚ್ಚಿದ ಬೇಡಿಕೆ

ಸಿ.ವಿ.ನಾಗರಾಜ್, ಕೋಲಾರಸಿ.ವಿ.ನಾಗರಾಜ್, ಕೋಲಾರ8 Jun 2026 11:00 AM IST
share
ಡಾ.ಭಾರ್ಗವರಿಂದ ‘ಮಧುರ ಕ್ರಾಂತಿ’ : ದೇಶ-ವಿದೇಶಗಳಲ್ಲೂ ಜೇನು ತುಪ್ಪಕ್ಕೆ ಹೆಚ್ಚಿದ ಬೇಡಿಕೆ

ಬಂಗಾರಪೇಟೆ: ತಾಲೂಕಿನ ಗ್ರಾಮವೊಂದರಲ್ಲಿ ಹುಟ್ಟಿಬೆಳೆದ ವ್ಯಕ್ತಿಯೊಬ್ಬರು ಜೇನು ಕೃಷಿಯಲ್ಲಿ ಯಶಸ್ವಿಯಾಗಿ ದೇಶ-ವಿದೇಶಗಳಿಗೆ ಜೇನು ತುಪ್ಪವನ್ನು ರಪ್ತು ಮಾಡುವ ಮೂಲಕ ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದಿದ್ದಾರೆ.

ತಾಲೂಕಿನ ಡಿ.ಕೆ.ಹಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ದಾಸರಹೊಸಹಳ್ಳಿ ಗ್ರಾಮದ ಡಾ.ಎಚ್.ಆರ್.ಭಾರ್ಗವ ಅವರು ಜೇನು ಕೃಷಿಯಲ್ಲಿ ತೊಡಗಿಸಿಕೊಂಡ ಯಶಸ್ವೀ ಕೃಷಿಕ. ಅವರು ದೇಶ-ವಿದೇಶಗಳಲ್ಲಿ ಜೇನು ಕೃಷಿ ಅಭಿವೃದ್ಧ್ದಿಗೆ ಶ್ರಮಿಸುತ್ತಿದ್ದಾರೆ.

ಗಾರ್ಡನ್ ಸಿಟಿ ವಿಶ್ವವಿದ್ಯಾನಿಲಯದಲ್ಲಿ ಜೀವ ವಿಜ್ಞಾನ ವಿಭಾಗದ ಸಹ ಪ್ರಾಧ್ಯಾಪಕರೂ ಆಗಿರುವ ಡಾ.ಎಚ್.ಆರ್.ಭಾರ್ಗವ ಅವರು ಭಾರತದ ಪ್ರಮುಖ ಜೇನುತಜ್ಞ ಹಾಗೂ ಜೇನು ಕೃಷಿಕರಾಗಿದ್ದಾರೆ. ಇವರು ಸ್ವರ್ಣ ಮಧು ಹನಿ ಸಂಸ್ಥೆಯನ್ನು ಸ್ಥಾಪಿಸಿದ್ದು, ಇದರ ಮೂಲಕ ಆಸಕ್ತ ಜೇನು ಕೃಷಿಕರಿಗೆ ವೈಜ್ಞಾನಿಕವಾಗಿ ಜೇನು ಸಾಕಣೆಯನ್ನು ಉತ್ತೇಜಿಸುತ್ತಿದ್ದಾರೆ. ಖಾದಿ ಮತ್ತು ಗ್ರಾಮೋದ್ಯೋಗ ಆಯೋಗದ ಮುಖ್ಯ ತರಬೇತುದಾರರಾಗಿ ಭಾರತದಾದ್ಯಂತ ಸಾವಿರಾರು ರೈತರಿಗೆ ತರಬೇತಿ ನೀಡಿದ್ದಾರೆ. ಜೇನು ತುಪ್ಪದ ಗುಣಮಟ್ಟಪರೀಕ್ಷೆ, ಜೇನು ವಿಷ ಮತ್ತು ಅಪಿಥೆರಪಿ ಚಿಕಿತ್ಸಾ ಪದ್ಧತಿಯ ಸಂಶೋಧನೆಯಲ್ಲಿ ಇವರು ಮಹತ್ತರ ಕೊಡುಗೆ ನೀಡಿದ್ದಾರೆ.

ಪ್ರಾಚೀನ ಕಾಲದಲ್ಲಿ ಜೇನು ಸಂಗ್ರಹಣೆಯು ಕೇವಲ ಕಾಡಿನಿಂದ ಜೇನುಗೂಡುಗಳನ್ನು ಹಿಂಡಿ ತುಪ್ಪತೆಗೆಯುವುದಕ್ಕೆ ಸೀಮಿತವಾಗಿತ್ತು. ಈ ಪದ್ಧತಿಯಲ್ಲಿ ಜೇನುಗೂಡು ನಾಶವಾಗುತ್ತಿತ್ತು ಮತ್ತು ನೊಣಗಳು ಸಾಯುತ್ತಿದ್ದವು. ಆದರೆ, ಈಗಿನ ಆಧುನಿಕ ಪದ್ಧತಿಯಲ್ಲಿ, ವೈಜ್ಞಾನಿಕವಾಗಿ ವಿನ್ಯಾಸಗೊಳಿಸಿದ ಮರದ ಪೆಟ್ಟಿಗೆಗಳಲ್ಲಿ ಜೇನು ನೊಣಗಳನ್ನು ಸಾಕಲಾಗುತ್ತದೆ. ಇದರಿಂದ ನೊಣಗಳಿಗೆ ಹಾನಿಯಾಗದಂತೆ ಜೇನು ತುಪ್ಪ ಮತ್ತು ಮೇಣವನ್ನು ಪಡೆಯಬಹುದು. ರೈತರಿಗೆ ಆದಾಯ ತರುವ ನಿಟ್ಟಿನಲ್ಲಿ ತುಪ್ಪದ ಜೇನು ಮತ್ತು ಯುರೋಪಿಯನ್ ಜೇನು ತಳಿಗಳು ಹೆಚ್ಚು ಲಾಭದಾಯಕವಾಗಿವೆ.

ಜೇನು ನೊಣಗಳು ಮತ್ತು ಜೇನು ಕೃಷಿಯ ಮಹತ್ವ ಜೇನು ನೊಣಗಳು ಹಾರುವ ಕೀಟಗಳಾಗಿದ್ದು, ಹೂವಿನ ಮಕರಂದವನ್ನು ಹೀರಿ ಜೇನು ತುಪ್ಪವನ್ನಾಗಿ ಪರಿವರ್ತಿಸುತ್ತವೆ ಮತ್ತು ಪರಾಗ ಸ್ಪರ್ಶದ ಮೂಲಕ ಕೃಷಿ ಇಳುವರಿ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಇವುಗಳ ಕುಟುಂಬದಲ್ಲಿ ರಾಣಿ, ಗಂಡು ಮತ್ತು ಕೆಲಸಗಾರ ನೊಣಗಳೆಂಬ ಮೂರು ಗುಂಪುಗಳಿರುತ್ತವೆ. ಪ್ರಪಂಚದಾದ್ಯಂತ ಕಂಡು ಬರುವ ಪ್ರಮುಖ ಜೇನು ಪ್ರಭೇದಗಳೆಂದರೆ ಮೊದಲನೇಯದಾಗಿ ಹೆಜ್ಜೇನು ಇವು ಗಾತ್ರದಲ್ಲಿ ದೊಡ್ಡದಿದ್ದು, ಹೆಚ್ಚು ಜೇನು ಸಂಗ್ರಹಿಸುತ್ತವೆಯಾದರೂ, ಇವುಗಳನ್ನು ಪೆಟ್ಟಿಗೆಗಳಲ್ಲಿ ಸಾಕುವುದು ಕಷ್ಟವಾಗಿದೆ. ಎರಡನೇಯದಾಗಿ ಕೋಲು ಜೇನು ಇವು ಪೊದೆಗಳಲ್ಲಿ ಸಣ್ಣಗೂಡು ಕಟ್ಟುತ್ತವೆ ಮತ್ತು ಕಡಿಮೆ ಜೇನು ನೀಡುತ್ತವೆ. ಹಾಗೂ ಮೂರನೇಯದಾಗಿ ತುಪ್ಪದಜೇನು ಇದು ಭಾರತದ ದೇಶೀಯ ತಳಿಯಾಗಿದ್ದು, ಶಾಂತ ಸ್ವಭಾವದ ಕಾರಣ ರೈತರಿಗೆ ಸಾಕಣೆ ಮಾಡಲು ಅತ್ಯಂತ ಸೂಕ್ತವಾಗಿದೆ.

ಅಪಿಥೆರಪಿ ಚಿಕಿತ್ಸೆಯಲ್ಲಿ ಬಳಸಲಾಗುತ್ತದೆ. ವಾಣಿಜ್ಯಿಕವಾಗಿ, ಜೇನು ಮೇಣವನ್ನು ಸೌಂದರ್ಯ ವರ್ಧಕಗಳು, ಮೇಣದ ಬತ್ತಿ ಮತ್ತು ಔಷಧೀಯ ಮುಲಾಮುಗಳ ತಯಾರಿಕೆಯಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ.

ಜೇನು ಉತ್ಪನ್ನಗಳು ಜಾಗತಿಕ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆಯನ್ನು ಹೊಂದಿದ್ದು, ರೈತರಿಗೆ ಮತ್ತು ಗ್ರಾಮೀಣ ಜನರಿಗೆ ಉಪ ಕಸುಬಾಗಿ ಹೆಚ್ಚಿನ ಆದಾಯ ತಂದುಕೊಡುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಜೇನು ಕೃಷಿಯು ರೈತರಿಗೆ ಕಡಿಮೆ ಬಂಡವಾಳದಲ್ಲಿ ಹೆಚ್ಚು ಲಾಭ ತರುವ ಉಪ ಕಸುಬಾಗಿದೆ. ಜೇನು ನೊಣಗಳ ಪರಾಗಸ್ಪರ್ಶದಿಂದಾಗಿ ಕೃಷಿ ಮತ್ತು ತೋಟಗಾರಿಕಾ ಬೆಳೆಗಳ ಇಳುವರಿ ಶೇಕಡಾ 20ರಿಂದ 30ರಷ್ಟು ಹೆಚ್ಚುತ್ತದೆ. ಜೇನು ತುಪ್ಪ, ಮೇಣ ಮತ್ತು ಜೇನು ವಿಷ ಮಾರಾಟದಿಂದ ರೈತರಿಗೆ ಹೆಚ್ಚುವರಿ ಆದಾಯ ಸಿಗುತ್ತದೆ. ಇದು ಗ್ರಾಮೀಣ ಭಾಗದಲ್ಲಿ ಸ್ವಯಂ ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ಸಹಕಾರಿಯಾಗಲಿದೆ.

-ಡಾ.ಎಚ್.ಆರ್.ಭಾರ್ಗವ್, ಜೇನು ಕೃಷಿಕ, ದಾಸರಹೊಸಹಳ್ಳಿ ಬಂಗಾರಪೇಟೆ

ರೈತರಿಗೆ ತರಬೇತಿ

ಖಾದಿ ಮತ್ತು ಗ್ರಾಮೋದ್ಯೋಗ ಆಯೋಗವು ಹನಿ ಮಿಷನ್ ಮೂಲಕ ಗ್ರಾಮೀಣ ಭಾಗದ ರೈತರಿಗೆ ಜೇನು ಪೆಟ್ಟಿಗೆಗಳನ್ನು ವಿತರಿಸಿ ತರಬೇತಿ ನೀಡುತ್ತ್ತಿದೆ. ಜೇನು ತುಪ್ಪ, ಮೇಣ, ಜೇನುವಿಷ, ರಾಯಲ್ ಜೆಲ್ಲಿ ಜಾಗತಿಕವಾಗಿ ಹೆಚ್ಚಿನ ವೈದ್ಯಕೀಯ ಮತ್ತು ವಾಣಿಜ್ಯ ಮೌಲ್ಯವನ್ನು ಹೊಂದಿವೆ. ಜೇನು ತುಪ್ಪವು ಅತ್ಯುತ್ತಮ ಶಕ್ತಿವರ್ಧಕವಾಗಿದ್ದು, ಆ್ಯಂಟಿ ಬ್ಯಾಕ್ಟೀರಿಯಾ ಗುಣಗಳಿಂದಾಗಿ ಆಯುರ್ವೇದದಲ್ಲಿ ಕೆಮ್ಮು, ಗಾಯ ಮತ್ತು ಚರ್ಮದ ಕಾಯಿಲೆಗಳ ಚಿಕಿತ್ಸೆಗೆ ಬಳಕೆಯಾಗುತ್ತದೆ. ಜೇನು ವಿಷವನ್ನು ಸಂಧಿವಾತ ಮತ್ತು ನರಗಳ ನೋವು ನಿವಾರಿಸುವ ಅಪಿಥೆರಪಿ ಚಿಕಿತ್ಸೆಯಲ್ಲಿ ಬಳಸಲಾಗುತ್ತದೆ. ವಾಣಿಜ್ಯಿಕವಾಗಿ, ಜೇನು ಮೇಣವನ್ನು ಸೌಂದರ್ಯ ವರ್ಧಕ, ಮೇಣದ ಬತ್ತಿ ಮತ್ತು ಮುಲಾಮುಗಳ ತಯಾರಿಕೆಯಲ್ಲಿ ಬಳಸಲಾಗುತ್ತದೆ.

share
ಸಿ.ವಿ.ನಾಗರಾಜ್, ಕೋಲಾರ
ಸಿ.ವಿ.ನಾಗರಾಜ್, ಕೋಲಾರ
Next Story
X