Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಡಾ. ಬಿ.ಆರ್. ಅಂಬೇಡ್ಕರ್, ಸಂವಿಧಾನ...

ಡಾ. ಬಿ.ಆರ್. ಅಂಬೇಡ್ಕರ್, ಸಂವಿಧಾನ ಮತ್ತು ಮುಸ್ಲಿಮರ ಪ್ರಾತಿನಿಧ್ಯ

ಡಾ. ಷಾಕಿರಾ ಖಾನಂಡಾ. ಷಾಕಿರಾ ಖಾನಂ28 April 2026 10:03 AM IST
share
ಡಾ. ಬಿ.ಆರ್. ಅಂಬೇಡ್ಕರ್, ಸಂವಿಧಾನ ಮತ್ತು ಮುಸ್ಲಿಮರ ಪ್ರಾತಿನಿಧ್ಯ

ಅಂಬೇಡ್ಕರ್‌ರ ದೂರದೃಷ್ಟಿ ಬಹಳ ಮಹತ್ವದ್ದಾಗಿತ್ತು. ಲಕ್ಷಾಂತರ ಜನರ ಸಾವಿಗೆ ಕಾರಣವಾದ ವಿಭಜನೆಯ ನೋವು ಅವರ ಕಣ್ಣ ಮುಂದಿತ್ತು. ಹೀಗಾಗಿ ಧರ್ಮ ಆಧಾರಿತ ರಾಜಕೀಯ ಪ್ರತ್ಯೇಕತೆಯನ್ನು ವಿರೋಧಿಸಿದರು. ಆದರೆ ಧಾರ್ಮಿಕ, ಸಾಂಸ್ಕೃತಿಕ ಹಕ್ಕುಗಳನ್ನು ಮೂಲಭೂತ ಹಕ್ಕುಗಳನ್ನಾಗಿ ಮಾಡಿದರು. ಅಂಬೇಡ್ಕರ್ ಕಂಡ ಭಾರತ ಹಿಂದೂ ರಾಷ್ಟ್ರವೂ ಅಲ್ಲ, ಮುಸ್ಲಿಮ್ ರಾಷ್ಟ್ರವೂ ಅಲ್ಲ. ಅದು ಸಾಂವಿಧಾನಿಕ ರಾಷ್ಟ್ರ. ಸಂವಿಧಾನವು ಅವಕಾಶದ ಸಮಾನತೆ ನೀಡಿದೆ, ಫಲಿತಾಂಶದ ಸಮಾನತೆ ಅಲ್ಲ. ಚುನಾವಣೆಯಲ್ಲಿ ಸ್ಪರ್ಧಿಸಲು ಎಲ್ಲರಿಗೂ ಹಕ್ಕಿದೆ, ಗೆಲ್ಲಿಸುವುದು ಮತದಾರರ ವಿವೇಚನೆ.

ಡಾ. ಬಿ.ಆರ್. ಅಂಬೇಡ್ಕರ್ ಸಂವಿಧಾನ ರಚನೆಮಾಡುವಾಗ ಮುಸ್ಲಿಮರಿಗೂ ಪ್ರಾತಿನಿಧ್ಯ ನೀಡಿದ್ದರೇ? ಎಂಬ ವಾದ ಈಗ ಚರ್ಚೆಯಲ್ಲಿದೆ. ಆದರೆ ಸಂವಿಧಾನ ಸಭೆಯ ನಡಾವಳಿಗಳು, ಅಂಬೇಡ್ಕರ್‌ರ ಭಾಷಣಗಳು ಮತ್ತು ಸಾಂವಿಧಾನಿಕ ನಿಬಂಧನೆಗಳು ಇದರ ಬಗ್ಗೆ ಸಾಕ್ಷ್ಯ ನೀಡುತ್ತವೆ. ಸಂವಿಧಾನ ಸಭೆಯಲ್ಲಿ ಮುಸ್ಲಿಮರನ್ನು ಹೊರಗಿಡುವುದಾಗಿರಲಿಲ್ಲ, ಒಳಗೊಳ್ಳುವುದಾಗಿತ್ತು. 1946ರಲ್ಲಿ ರಚನೆಯಾದ ಸಂವಿಧಾನ ಸಭೆಯಲ್ಲಿ ಒಟ್ಟು 389 ಸದಸ್ಯರಿದ್ದರು. ಬ್ರಿಟಿಷ್ ಕ್ಯಾಬಿನೆಟ್ ಮಿಷನ್ ಯೋಜನೆಯಡಿ 93 ಸ್ಥಾನಗಳು ಮುಸ್ಲಿಮ್ ಲೀಗ್‌ಗೆ ಮೀಸಲಾಗಿದ್ದವು. ವಿಭಜನೆಯ ನಂತರ ಪಾಕಿಸ್ತಾನಕ್ಕೆ ಹೋದವರನ್ನು ಹೊರತುಪಡಿಸಿ, 28ರಿಂದ 30 ಮುಸ್ಲಿಮ್ ಸದಸ್ಯರು ಕೊನೆಯವರೆಗೂ ಸಭೆಯಲ್ಲಿದ್ದರು. ಅವರೆಲ್ಲರೂ 1950 ಜನವರಿ 24ರಂದು ಸಂವಿಧಾನಕ್ಕೆ ಸಹಿ ಹಾಕಿದರು.

ಮೌಲಾನಾ ಅಬುಲ್ ಕಲಾಂ ಆಝಾದ್ ಮೂಲಭೂತ ಹಕ್ಕುಗಳ ಉಪ-ಸಮಿತಿ ಸದಸ್ಯರಾಗಿದ್ದರು. ಸೈಯದ್ ಮುಹಮ್ಮದ್ ಸಾದುಲ್ಲಾ ಕರಡು ಸಮಿತಿಯಲ್ಲೇ ಇದ್ದರು. ಬೇಗಂ ಎಜಾಝ್ ರಸೂಲ್ ಸಂವಿಧಾನ ಸಭೆಯ ಏಕೈಕ ಮುಸ್ಲಿಮ್ ಮಹಿಳಾ ಸದಸ್ಯೆ. ಕರಡು ಸಮಿತಿ ಅಧ್ಯಕ್ಷರಾಗಿದ್ದ ಅಂಬೇಡ್ಕರ್ ಇವರೆಲ್ಲರ ಸಲಹೆ ತಿದ್ದುಪಡಿಗಳನ್ನು ಚರ್ಚಿಸಿ ಅಳವಡಿಸಿಕೊಂಡರು. 1948 ನವೆಂಬರ್ 4ರಂದು ಕರಡು ಮಂಡಿಸುವಾಗ ಅವರು ಹೇಳಿದ್ದು: ‘‘ಇದು ಯಾವುದೇ ಒಂದು ಪಕ್ಷದ ಸಂವಿಧಾನ ಅಲ್ಲ. ಎಲ್ಲ ಧರ್ಮ, ಪ್ರಾಂತಗಳ ಜನರ ಅಭಿಪ್ರಾಯಕ್ಕೆ ಇಲ್ಲಿ ಅವಕಾಶವಿದೆ’’. ಎಲ್ಲ ಅಲ್ಪಸಂಖ್ಯಾತರೂ ಸಂವಿಧಾನದ ರಕ್ಷಣೆಗೆ ಅರ್ಹರು ಎಂಬುದು ಅಂಬೇಡ್ಕರ್ ಅವರ ನಿಲುವಾಗಿತ್ತು. ಅದಕ್ಕಾಗಿ ಮೂಲಭೂತ ಹಕ್ಕುಗಳಲ್ಲಿ ಮೂರು ಹಂತದ ರಕ್ಷಣೆ ಕೊಟ್ಟರು.

ವಿಧಿ 14 ಕಾನೂನಿನ ಮುಂದೆ ಸಮಾನತೆ ನೀಡುತ್ತದೆ. ರಾಜ್ಯವು ಧರ್ಮದ ಹೆಸರಲ್ಲಿ ತಾರತಮ್ಯ ಮಾಡುವಂತಿಲ್ಲ. ವಿಧಿ 15(1) ಸರಕಾರಿ ನೌಕರಿ, ಶಿಕ್ಷಣ, ಸಾರ್ವಜನಿಕ ಸ್ಥಳಗಳಲ್ಲಿ ಧರ್ಮದ ಆಧಾರದ ಭೇದಭಾವವನ್ನು ನಿಷೇಧಿಸುತ್ತದೆ. ವಿಧಿ 25 ಇಸ್ಲಾಮ್ ಆಚರಿಸುವ, ಪ್ರಚಾರ ಮಾಡುವ ಮೂಲಭೂತ ಹಕ್ಕು ನೀಡುತ್ತದೆ. ವಿಧಿ 26 ವಕ್ಫ್ ಬೋರ್ಡ್, ಮಸೀದಿ ಆಡಳಿತಕ್ಕೆ ಸಾಂವಿಧಾನಿಕ ಮಾನ್ಯತೆ ಕೊಡುತ್ತದೆ. ವಿಧಿ 29 ಉರ್ದು ಭಾಷೆ, ಸಂಸ್ಕೃತಿ ಉಳಿಸಿಕೊಳ್ಳುವ ಹಕ್ಕು ನೀಡುತ್ತದೆ. ವಿಧಿ 30(1) ಅಲಿಗಡ ಮುಸ್ಲಿಮ್ ವಿಶ್ವವಿದ್ಯಾನಿಲಯ, ಜಾಮಿಯಾ ರೀತಿಯ ಶಿಕ್ಷಣ ಸಂಸ್ಥೆಗಳನ್ನು ನಡೆಸುವ ಹಕ್ಕು ಕೊಡುತ್ತದೆ. ಸರ್ದಾರ್ ಪಟೇಲ್ ಅಧ್ಯಕ್ಷತೆಯ ಅಲ್ಪಸಂಖ್ಯಾತರ ಸಲಹಾ ಸಮಿತಿ 1947ರಲ್ಲಿ ನೀಡಿದ ವರದಿಯನ್ನು ಅಂಬೇಡ್ಕರ್ ಸಂಪೂರ್ಣ ಬೆಂಬಲಿಸಿ ಕರಡು ಸಂವಿಧಾನದಲ್ಲಿ ಸೇರಿಸಿದರು. ಪ್ರತ್ಯೇಕ ಮತದಾನವನ್ನು ಅಂಬೇಡ್ಕರ್ ವಿರೋಧಿಸಿದರು. 1949 ಮೇ 25-26ರಂದು ಸಂವಿಧಾನ ಸಭೆ ಮುಸ್ಲಿಮರಿಗೆ ಪ್ರತ್ಯೇಕ ಮತದಾನ ಬೇಡ ಎಂದು ನಿರ್ಧರಿಸಿತು. ಮೂರು ಕಾರಣಗಳನ್ನು ನೀಡಿ ಅಂಬೇಡ್ಕರ್ ಇದನ್ನು ಒಪ್ಪಿಕೊಂಡರು.

ಮೊದಲನೆಯದು ರಾಷ್ಟ್ರೀಯ ಏಕತೆ. 1909ರಿಂದ ಜಾರಿಯಲ್ಲಿದ್ದ ಪ್ರತ್ಯೇಕ ಮತದಾನವೇ ದೇಶ ವಿಭಜನೆಗೆ ದಾರಿ ಮಾಡಿಕೊಟ್ಟಿತು ಎಂದು ಅಂಬೇಡ್ಕರ್ 1941ರ ‘Thoughts on Pakistan’ ಪುಸ್ತಕದಲ್ಲಿ ವಿಶ್ಲೇಷಿಸಿದ್ದರು. ಧರ್ಮ ಆಧಾರಿತ ರಾಜಕೀಯವು ಸಮಾಜವನ್ನು ವಾಟರ್‌ಟೈಟ್ ಕಂಪಾರ್ಟ್‌ಮೆಂಟ್‌ಗಳಾಗಿ ಒಡೆಯುತ್ತದೆ ಎಂಬುದು ಅವರ ವಾದವಾಗಿತ್ತು. ಎರಡನೆಯದು ದಲಿತ ಅನುಭವ. 1932ರ ಕೋಮು ತೀರ್ಪಿನಲ್ಲಿ ದಲಿತರಿಗೆ ಪ್ರತ್ಯೇಕ ಮತದಾನ ನೀಡಿದಾಗ ಅದರ ಅಪಾಯ ಅಂಬೇಡ್ಕರ್‌ಗೆ ಮನವರಿಕೆಯಾಯಿತು. ಅದು ಸಮುದಾಯವನ್ನು ಶಾಶ್ವತ ಅಲ್ಪಸಂಖ್ಯಾತರನ್ನಾಗಿ ಮಾಡುತ್ತದೆ ಎಂದು ಅವರು ಅರಿತಿದ್ದರು. ಆ ಸ್ಥಿತಿ ಮುಸ್ಲಿಮರಿಗೆ ಬರಬಾರದು ಎಂದು ಬಯಸಿದರು. ಮೂರನೆಯದು ಮುಸ್ಲಿಮ್ ನಾಯಕರೇ ತಿರಸ್ಕರಿಸಿದ್ದು. ಮೌಲಾನಾ ಆಝಾದ್, ಬೇಗಂ ಎಜಾಝ್ ರಸೂಲ್ ಸೇರಿದಂತೆ ಮುಸ್ಲಿಮ್ ಸದಸ್ಯರೇ ವಿಭಜನೆಯ ನಂತರ ನಮಗೆ ಪ್ರತ್ಯೇಕ ಮತದಾನ ಬೇಡ, ಜಂಟಿ ಮತದಾನವೇ ಇರಲಿ ಎಂದು ಸಭೆಯಲ್ಲಿ ಹೇಳಿದರು. ಸರ್ದಾರ್ ಪಟೇಲ್ ಅಲ್ಪಸಂಖ್ಯಾತರು ಸ್ವತಃ ಬೇಡ ಎಂದಿರುವುದನ್ನು ಬಹುಸಂಖ್ಯಾತರು ಹೇರುವುದು ಸರಿಯಲ್ಲ ಎಂದಿರುವುದು ಗಮನಾರ್ಹ. ಹೀಗಾಗಿ ಪ್ರತ್ಯೇಕ ಮತದಾನ ರದ್ದತಿಯು ಮುಸ್ಲಿಮ್ ವಿರೋಧಿ ನಡೆ ಅಲ್ಲ. ವಿಭಜನೆಯ ಕಹಿ ಅನುಭವ ಮತ್ತು ಮುಸ್ಲಿಮ್ ನಾಯಕರ ಒಪ್ಪಿಗೆಯಿಂದ ತೆಗೆದುಕೊಂಡ ನಿರ್ಧಾರ.

‘Thoughts on Pakistan’ ಪುಸ್ತಕದಲ್ಲಿ ಅಂಬೇಡ್ಕರ್ ಮುಸ್ಲಿಮ್ ಸಮಾಜದ ಕೆಲವು ಆಚರಣೆಗಳನ್ನು ಟೀಕಿಸಿದ್ದಾರೆ. ಇದೇ ಪುಸ್ತಕದಲ್ಲಿ ಹಿಂದೂ ಜಾತಿ ವ್ಯವಸ್ಥೆ, ಅಸ್ಪಶ್ಯತೆಯನ್ನು ಅದಕ್ಕಿಂತ ಕಠಿಣವಾಗಿ ಖಂಡಿಸಿದ್ದಾರೆ. ಅವರು ಎಲ್ಲ ಧರ್ಮಗಳ ಮೌಢ್ಯವನ್ನೂ ವೈಜ್ಞಾನಿಕವಾಗಿ ವಿಶ್ಲೇಷಿಸಿದ್ದಾರೆ. ಸಮಾನ ನಾಗರಿಕ ಸಂಹಿತೆಯನ್ನು ವಿಧಿ 44ರಲ್ಲಿ ಸೇರಿಸಿದಾಗ ಶರೀಅತ್ ಬಗ್ಗೆ ತಮ್ಮ ವಿಚಾರ ವ್ಯಕ್ತ ಪಡಿಸಿ ‘‘ಒಂದೇ ದೇಶದಲ್ಲಿ ನಾಗರಿಕರ ನಡುವೆ ಕಾನೂನಿನ ಭೇದ ಇರಬಾರದು. ಇದರ ಗುರಿ ಏಕರೂಪತೆ, ಒಂದು ಸಮುದಾಯದ ವಿರೋಧ ಅಲ್ಲ’’ ಎಂದರು. ಹಿಂದೂ ಕೋಡ್ ಬಿಲ್ ವಿವಾದದಲ್ಲಿ ಮುಸ್ಲಿಮರಿಗೆ ಯಾಕೆ ಸುಧಾರಣೆ ಇಲ್ಲ? ಎಂದು ಕೇಳಿದಾಗ ಅಂಬೇಡ್ಕರ್ ಹೇಳಿದ್ದು: ‘‘ಸುಧಾರಣೆ ಏಕಕಾಲಕ್ಕೆ ಎಲ್ಲರಿಗೂ ಸಾಧ್ಯವಿಲ್ಲ. ಮೊದಲು ಬಹುಸಂಖ್ಯಾತರಿಂದ ಶುರು ಮಾಡಿ, ನಂತರ ಎಲ್ಲರಿಗೂ ವಿಸ್ತರಿಸೋಣ. 1951ರಲ್ಲಿ ಬಿಲ್‌ಗೆ ವಿರೋಧ ಬಂದಾಗ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಬದ್ಧತೆ ತೋರಿಸಿದರು. ಮೂರನೆಯದು ಚುನಾವಣೆಯಲ್ಲಿ ಕಡೆಗಣನೆ ಮತ್ತು ಸಂವಿಧಾನದ ನಿಲುವು. ಯಾವುದೇ ಪಕ್ಷ ಮುಸ್ಲಿಮರಿಗೆ ಟಿಕೆಟ್ ಕೊಡಲೇಬೇಕು ಎಂದು ಸಂವಿಧಾನ ಎಲ್ಲಿಯೂ ಹೇಳುವುದಿಲ್ಲ. ವಿಧಿ 14, 15 ರಾಜ್ಯ ಕ್ಕೆ ಅನ್ವಯ. ರಾಜಕೀಯ ಪಕ್ಷಗಳು ರಾಜ್ಯ ಅಲ್ಲ. ಅವು ಖಾಸಗಿ ಸಂಘಟನೆಗಳು. ಹೀಗಾಗಿ ಟಿಕೆಟ್ ಹಂಚಿಕೆ ಪಕ್ಷದ ಆಂತರಿಕ ವಿಷಯ. ಜನಪ್ರತಿನಿಧಿ ಕಾಯ್ದೆ, 1951ರ ಸೆಕ್ಷನ್ 123(3) ಧರ್ಮದ ಹೆಸರಲ್ಲಿ ಮತ ಕೇಳುವುದನ್ನು ಭ್ರಷ್ಟ ಆಚರಣೆ ಎನ್ನುತ್ತದೆ. ಮುಸ್ಲಿಮರಿಗೆ ಮತ ಹಾಕಬೇಡಿ ಎನ್ನವಂತಿಲ್ಲ. ಆದರೆ ಮುಸ್ಲಿಮರಿಗೆ ಟಿಕೆಟ್ ಕೊಡುವುದಿಲ್ಲ ಎಂದರೂ ಅದು ಶಿಕ್ಷಾರ್ಹವಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಸಂವಿಧಾನದಲ್ಲಿ ಚುನಾವಣಾ ಮೀಸಲಾತಿ ಇರುವುದು ಎಸ್‌ಸಿ, ಎಸ್‌ಟಿ ಮತ್ತು ಮಹಿಳೆಯರಿಗೆ ಮಾತ್ರ. ಲೋಕಸಭೆ, ವಿಧಾನಸಭೆಯಲ್ಲಿ ಮುಸ್ಲಿಮರಿಗೆ ಯಾವುದೇ ಸಾಂವಿಧಾನಿಕ ಮೀಸಲಾತಿ ಇಲ್ಲ. 1949ರಲ್ಲಿ ಸಂವಿಧಾನ ಸಭೆಯೇ ಧಾರ್ಮಿಕ ಮೀಸಲಾತಿಯನ್ನು ಕೈಬಿಟ್ಟಿತು. ಮುಸ್ಲಿಮ್ ಸದಸ್ಯರೇ ಇದನ್ನು ಒಪ್ಪಿದರು. ಇದರ ಪರಿಹಾರವಾಗಿ ಸಂವಿಧಾನ ನೀಡಿರುವ ದಾರಿಗಳು ಮೂರು. ಒಂದು, ವಿಧಿ 326 ನೀಡಿದ ಮತದ ಹಕ್ಕು. ಪ್ರಾತಿನಿಧ್ಯ ಕೊಡದ ಪಕ್ಷಕ್ಕೆ ಮತ ಹಾಕದಿರುವುದು ಮೊದಲ ದಾರಿ. ಅಂಬೇಡ್ಕರ್ ಹೇಳಿದ್ದು: ಜಂಟಿ ಮತದಾನದಲ್ಲಿ ನಿಮ್ಮ ಸಂಖ್ಯಾಬಲವೇ ನಿಮ್ಮ ರಕ್ಷಣೆ. ಎರಡು, ನ್ಯಾಯಾಂಗದ ಮೊರೆ. ಸರಕಾರಿ ನೌಕರಿ, ಶಿಕ್ಷಣದಲ್ಲಿ ಧರ್ಮದ ಆಧಾರದ ಮೇಲೆ ತಾರತಮ್ಯವಾದರೆ ಕೋರ್ಟ್ ಗೆ ಹೋಗಬಹುದು. ಆದರೆ ಟಿಕೆಟ್ ಹಂಚಿಕೆಗೆ ಕೋರ್ಟ್ ಮಧ್ಯಪ್ರವೇಶಿಸುವುದಿಲ್ಲ. ಮೂರು, ರಾಜಕೀಯ ಸಂಘಟನೆ. ವಿಧಿ 19(1)(ಸಿ) ಸಂಘ ಕಟ್ಟುವ ಹಕ್ಕು ನೀಡಿದೆ. ಸಮುದಾಯ ಜಾಗೃತವಾಗಿ ಪಕ್ಷಗಳ ಮೇಲೆ ಒತ್ತಡ ತಂದರೆ ಪ್ರಾತಿನಿಧ್ಯ ಸಿಗುತ್ತದೆ. ಈ ನಿಟ್ಟಿನಲ್ಲಿ ಅಂಬೇಡ್ಕರ್ ದೂರದೃಷ್ಟಿಯುಳ್ಳವರಾಗಿದ್ದರು. 1949 ಅಕ್ಟೋಬರ್ 17ರ ಭಾಷಣದಲ್ಲಿ ಅಂಬೇಡ್ಕರ್ ಹೇಳಿದ್ದು: ‘‘ರಾಜಕೀಯ ಪ್ರಜಾಪ್ರಭುತ್ವ ಯಶಸ್ವಿಯಾಗಲು ಸಾಮಾಜಿಕ ಪ್ರಜಾಪ್ರಭುತ್ವ ಬೇಕು’’. ಅವರ ಪರಿಹಾರ ಎರಡು ಹಂತದ್ದು. ವಿಧಿ 25-30ರ ಮೂಲಕ ಧಾರ್ಮಿಕ, ಸಾಂಸ್ಕೃತಿಕ ಹಕ್ಕುಗಳನ್ನು ಭದ್ರಪಡಿಸಿದರು. ಜೊತೆಗೆ ಶಾಶ್ವತ ಅಲ್ಪಸಂಖ್ಯಾತ ಮನಸ್ಥಿತಿ ಬಿಡಿ, ಜಂಟಿ ಮತದಾನದಲ್ಲಿ ಸ್ಪರ್ಧಿಸಿ ಎಂದು ಕರೆ ನೀಡಿದರು. 1947ರ ಗಲಭೆ ಸಮಯದಲ್ಲಿ ದಿಲ್ಲಿಯ ಮುಸ್ಲಿಮರ ರಕ್ಷಣೆಗೆ ನೆಹರೂಗೆ ಪತ್ರ ಬರೆದರು. ಸರಕಾರಿ ನೌಕರಿಯಲ್ಲಿರುವ ಮುಸ್ಲಿಮರನ್ನು ಕೆಲಸದಿಂದ ತೆಗೆಯಬಾರದು ಎಂದು ಒತ್ತಾಯಿಸಿದರು. ಅವರ ಖಾಸಗಿ ಕಾರ್ಯದರ್ಶಿ ನಝೀರ್ ಅಹ್ಮದ್ ಮುಸ್ಲಿಮ್ ಆಗಿದ್ದರು.

ಅಂಬೇಡ್ಕರ್‌ರ ದೂರದೃಷ್ಟಿ ಬಹಳ ಮಹತ್ವದ್ದಾಗಿತ್ತು. ಲಕ್ಷಾಂತರ ಜನರ ಸಾವಿಗೆ ಕಾರಣವಾದ ವಿಭಜನೆಯ ನೋವು ಅವರ ಕಣ್ಣ ಮುಂದಿತ್ತು. ಹೀಗಾಗಿ ಧರ್ಮ ಆಧಾರಿತ ರಾಜಕೀಯ ಪ್ರತ್ಯೇಕತೆಯನ್ನು ವಿರೋಧಿಸಿದರು. ಆದರೆ ಧಾರ್ಮಿಕ, ಸಾಂಸ್ಕೃತಿಕ ಹಕ್ಕುಗಳನ್ನು ಮೂಲಭೂತ ಹಕ್ಕುಗಳನ್ನಾಗಿ ಮಾಡಿದರು. ಅಂಬೇಡ್ಕರ್ ಕಂಡ ಭಾರತ ಹಿಂದೂ ರಾಷ್ಟ್ರವೂ ಅಲ್ಲ, ಮುಸ್ಲಿಮ್ ರಾಷ್ಟ್ರವೂ ಅಲ್ಲ. ಅದು ಸಾಂವಿಧಾನಿಕ ರಾಷ್ಟ್ರ. ಸಂವಿಧಾನವು ಅವಕಾಶದ ಸಮಾನತೆ ನೀಡಿದೆ, ಫಲಿತಾಂಶದ ಸಮಾನತೆ ಅಲ್ಲ. ಚುನಾವಣೆಯಲ್ಲಿ ಸ್ಪರ್ಧಿಸಲು ಎಲ್ಲರಿಗೂ ಹಕ್ಕಿದೆ, ಗೆಲ್ಲಿಸುವುದು ಮತದಾರರ ವಿವೇಚನೆ. ಕೊನೆಯದಾಗಿ ಅಂಬೇಡ್ಕರ್ ಮಾತು: ‘‘ಸಂವಿಧಾನ ಎಷ್ಟೇ ಉತ್ತಮವಾಗಿದ್ದರೂ, ಜಾರಿಗೆ ತರುವವರು ಕೆಟ್ಟವರಾದರೆ ಅದು ಕೆಟ್ಟದಾಗುತ್ತದೆ’’. ಪ್ರಾತಿನಿಧ್ಯದ ಪ್ರಶ್ನೆ ಕೊನೆಗೂ ರಾಜಕೀಯ ಇಚ್ಛಾಶಕ್ತಿ ಮತ್ತು ಸಾಮಾಜಿಕ ಪ್ರಜ್ಞೆಗೆ ಸಂಬಂಧಿಸಿದ್ದು, ಕೇವಲ ಕಾನೂನಿನ ಅಕ್ಷರಕ್ಕೆ ಅಲ್ಲ.

Tags

Dr. B.R. AmbedkarConstitutionMuslim
share
ಡಾ. ಷಾಕಿರಾ ಖಾನಂ
ಡಾ. ಷಾಕಿರಾ ಖಾನಂ
Next Story
X