Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಸಂಶೋಧನೆಗಾಗಿ ಸರ್ವಸ್ವವನ್ನೇ...

ಸಂಶೋಧನೆಗಾಗಿ ಸರ್ವಸ್ವವನ್ನೇ ಮುಡಿಪಾಗಿಟ್ಟ ಅಪರೂಪದ ಸಾಧಕ ಡಾ.ಚನ್ನಬಸಪ್ಪ ಮಲ್ಕಂದಿನ್ನಿ

‌ ಸುರೇಶ ಬಳಗಾನೂರು‌ ಸುರೇಶ ಬಳಗಾನೂರು24 Dec 2025 11:21 AM IST
share
ಸಂಶೋಧನೆಗಾಗಿ ಸರ್ವಸ್ವವನ್ನೇ ಮುಡಿಪಾಗಿಟ್ಟ ಅಪರೂಪದ ಸಾಧಕ ಡಾ.ಚನ್ನಬಸಪ್ಪ ಮಲ್ಕಂದಿನ್ನಿ

ಅನಿವಾರ್ಯತೆ ಸಂಶೋಧನೆಯ ತಾಯಿ ಅಂತಾರೆ. ಆದರೆ ಈಗ ಸಂಶೋಧನೆಯೇ ಅನಿವಾರ್ಯವಾಗಿದೆ. ಏಕೆಂದರೆ ನಮ್ಮ ಪೂರ್ವಜರ ನಾಡು ನುಡಿ, ನೆಲ, ಜಲ,ಕೋಟೆ, ಕೊತ್ತಲ, ಆಡಳಿತ ನಾಣ್ಯ, ಬದುಕು, ಬರಹ, ಪರಂಪರೆ, ಕಲೆ, ವಾಸ್ತು ಶಿಲ್ಪ, ಜೀವನಶೈಲಿ, ಸಂಸ್ಕೃತಿಯ ಬೆಳವಣಿಗೆ, ನಾಡಿನ ಉದ್ದಗಲ, ವೈಭವ ಮುಂತಾದವುಗಳ ಬಗ್ಗೆ ನಿಖರವಾದ ಮಾಹಿತಿ ಪಡೆಯಬೇಕಾದರೆ ನುರಿತ ಮತ್ತು ಸಂಶೋಧನೆಗಾಗಿ ಸಮರ್ಪಿಸಿಕೊಂಡ ಸಂಶೋಧಕರ ಮೊರೆಹೋಗಬೇಕಾಗುತ್ತದೆ.

ಅಂಥವರ ಸಾಲಿನಲ್ಲಿ ಪ್ರಥಮ ಪಂಕ್ತಿಯಲ್ಲಿ ನಿಲ್ಲಬಲ್ಲ ಸಾಮರ್ಥ್ಯ ಉಳ್ಳ ಸಂಶೋಧಕರೆಂದರೆ ದೇವದುರ್ಗ ತಾಲೂಕಿನ ಮಲ್ಕಂದಿನ್ನಿ ಗ್ರಾಮದ ಡಾ.ಚನ್ನಬಸಪ್ಪ ಎಂದು ನಿಸ್ಸಂದೇಹವಾಗಿ ಹೇಳಬಹುದಾಗಿದೆ. ಹೌದು ಇವರ ಸಂಶೋಧನೆಗಳ ನಿಖರತೆ ಅವರ ಸಮರ್ಪಣಾ ಮನೋಭಾವದ ಬಗ್ಗೆ ಸಾರಿಹೇಳುತ್ತವೆ.

ಮಲ್ಕಂದಿನ್ನಿ ಗ್ರಾಮದಲ್ಲಿ ಜನಿಸಿದ ಡಾ.ಚನ್ನಬಸಪ್ಪ ಉನ್ನತ ವ್ಯಾಸಂಗದ ಸಲುವಾಗಿ ಹಲವು ಗ್ರಾಮ ಪಟ್ಟಣಗಳನ್ನು ಸುತ್ತಬೇಕಾಯಿತು. ಹೀಗೆ ಸುತ್ತಾಡುತ್ತಾ ಸಂಶೋಧನಾ ಕ್ಷೇತ್ರಕ್ಕೆ ಮೊದಲ ಹೆಜ್ಜೆ ಎಂಬಂತೆ ‘ದೇವದುರ್ಗ ತಾಲೂಕು ಒಂದು ಸಾಂಸ್ಕೃತಿಕ ಅಧ್ಯಯನ’ ಎಂಬ ವಿಷಯದಲ್ಲಿ 2001ರಲ್ಲಿ ಧಾರವಾಡದ ಇತಿಹಾಸ ಮತ್ತು ಪ್ರಾಚ್ಯ ಶಾಸ್ತ್ರ ವಿಭಾಗ ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಫಿಲ್ ಪದವಿ ಪಡೆದರು.

ಮುಂದುವರಿದು ಬೆಂಗಳೂರು ವಿ.ವಿ.ಯಲ್ಲಿ ಇತಿಹಾಸ ವಿಭಾಗದಲ್ಲಿ ಪಿಎಚ್‌ಡಿ ಪ್ರವೇಶ ಪಡೆದು, 2007ರಲ್ಲಿ ‘ರಾಯಚೂರು ಜಿಲ್ಲೆಯ ಶಾಸನಗಳ ಸಮಗ್ರ ಅಧ್ಯಯನ’ ಎಂಬ ವಿಷಯದ ಮೇಲೆ ಬೃಹತ್ ಪ್ರಬಂಧ ಮಂಡಿಸಿ ಡಾಕ್ಟರೇಟ್ ಪದವಿ ಪಡೆದಿದ್ದಾರೆ. ಜತೆಗೆ ಕನ್ನಡ ಸಾಹಿತ್ಯ ಪರಿಷತ್, ಚಾಮರಾಜ ಪೇಟೆ ಬೆಂಗಳೂರಿನಲ್ಲಿ ಶಾಸನಶಾಸ್ತ್ರದಲ್ಲಿ ಎರಡು ವರ್ಷಗಳ ಡಿಪ್ಲೊಮಾ ಪದವಿ ಮಾಡಿದ್ದಾರೆ.

ಡಾ.ಚನ್ನಬಸಪ್ಪನವರು 1998ರಿಂದ ಈಗಿನವರೆಗೆ ರಾಯಚೂರು ಜಿಲ್ಲೆಯ ಪ್ರಾಗೈತಿಹಾಸಿಕ ನೆಲೆಗಳಾದ ಆಲ್ಕೋಡ, ತೆಗ್ಗಿಹಾಳ, ನಿಲವಂಜಿ, ಮಲದಕಲ್, ಕಲ್ಲೂರು, ವಟಗಲ್, ಯತಗಲ್, ಅಮೀನಗಢ, ಕೋಟೆಕಲ್, ಮಸ್ಕಿ, ಬಿಲ್ಲಮರಾಯನಗುಡ್ಡ ಮೊದಲಾದ ಗ್ರಾಮಗಳಲ್ಲಿರುವಸ ಬೂದಿದಿಬ್ಬ, ಬಯಲುಬಂಡೆಯ ಚಿತ್ರಗಳು, ಬೃಹತ್ ಶಿಲಾಯುಗದ ಸಮಾಧಿಗಳನ್ನು ಶೋಧಿಸಿದ್ದಾರೆ.

ಜೊತೆಗೆ ರಾಯಚೂರು ಜಿಲ್ಲೆಯ ಯತಗಲ್, ರೌಡಕುಂದಾ ಗ್ರಾಮಗಳಲ್ಲಿ ಬದಾಮಿ ಚಾಲುಕ್ಯ ಅರಸರ ಶಾಸನಗಳನ್ನು ಶೋಧಿಸಿದ್ದಾರೆ. ಮಲಿಯಾಬಾದ್, ಬೆಲ್ಲದಮರಡಿ ಗ್ರಾಮಗಳಲ್ಲಿ ನೊಳಂಬವಾಡಿ ಪಲ್ಲವರ ಶಾಸನಗಳು,ಬೈಲಮರ್ಚೆಡ, ಮಲಿಯಾಬಾದ್, ಮೊದಲಾದ ಗ್ರಾಮಗಳಲ್ಲಿ ರಾಷ್ಟ್ರಕೂಟರ ಶಾಸನಗಳು, ತಲೇಖಾನ್ ಗ್ರಾಮದಲ್ಲಿ ತಲಕಾಡಿನ ಗಂಗರಶಾಸನ, ಮಸ್ಕಿಪಟ್ಟಣದ ಸುಳಿದಿಬ್ಬದಲ್ಲಿ ಬೌದ್ಧಸ್ತೂಪದೊಂದಿಗೆ ಚೋಳ ಅರಸ ರಾಜೇಂದ್ರ ವರ್ಮನ ಶಾಸನವನ್ನು ಪತ್ತೆ ಮಾಡಿದ್ದಾರೆ.

ಇದು ಉತ್ತರ ಕರ್ನಾಟಕದಲ್ಲಿಯೇ ಮೊಟ್ಟ ಮೊದಲ ಚೋಳರ ಶಾಸನವಾಗಿದೆ. ಇದರಲ್ಲಿ ಕಲ್ಯಾಣ ಚಾಲುಕ್ಯ ಅರಸ ಇಮ್ಮಡಿ ಜಯಸಿಂಹನನ್ನು 1020ರ ಮೊಸಗೆ (ಪ್ರಸ್ತುತ ಮಸ್ಕಿ) ಯುದ್ಧದಲ್ಲಿ ಸೋಲಿಸಿ ‘ಪರ ಕೇಸರಿ ವರ್ಮ’ ಎಂಬ ಬಿರುದು ಪಡೆದ ಪ್ರಶಸ್ತಿ ಶಾಸನವಾಗಿದೆ.

ಸಿರವಾರ ತಾಲೂಕಿನ ಮಲ್ಲಟ ಗ್ರಾಮದ ಮಲ್ಲಿಕಾರ್ಜುನ ದೇವಾಲಯದಲ್ಲಿರುವ 1162ರ ಶಾಸನವು ರಾಯಚೂರು ಜಿಲ್ಲೆಯಲ್ಲಿಯೇ ಏಕೈಕ ಘಟಿಕಾಸ್ಥಾನ (ಉನ್ನತ ಶಿಕ್ಷಣ ಕೇಂದ್ರ, ವಿಶ್ವವಿದ್ಯಾಲಯ) ಆಗಿತ್ತೆಂದು ತಿಳಿಸುತ್ತದೆ. ಇದನ್ನು ಡಾ.ಚನ್ನಬಸಪ್ಪ ಶೋಧಿಸಿದ್ದಾರೆ. ಇನ್ನೂ ಅನೇಕ ಮಹತ್ವದ ಶಾಸನಗಳನ್ನು ಮಸರಕಲ್, ಸೋಮಲಾಪುರ, ಸಿಂಧನೂರು, ಕುಪ್ಪಿಗುಡ್ಡ ಮೊದಲಾದ ಗ್ರಾಮಗಳಲ್ಲಿ ಶೋಧಿಸಿದ್ದಾರೆ.

ಇವುಗಳನ್ನಷ್ಟೇ ಅಲ್ಲದೆ ದೇವಾಲಯಗಳು, ವೀರಗಲ್ಲು, ಮಾಸ್ತಿಗಲ್ಲು, ಕೋಟೆ, ಮೂರ್ತಿ ಶಿಲ್ಪ, ಸಾಹಿತ್ಯ ಮೊದಲಾದ ವಿಷಯಗಳಲ್ಲಿ ರಾಜ್ಯ, ರಾಷ್ಟ್ರೀಯ, ಅಂತರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣಗಳಲ್ಲಿ ಇವರ ವಿದ್ವತ್ ಪೂರ್ಣ ಲೇಖನಗಳು ಪ್ರಕಟಗೊಂಡಿವೆ.

ಇತಿಹಾಸ ದರ್ಶನ, ಕರ್ನಾಟಕ ಲೋಚನ, ಇತಿಹಾಸ ದರ್ಪಣ, ಸಿರಿದುರ್ಗ, ದೇವದುರ್ಗ ತಾಲೂಕು ದರ್ಶನ ಗ್ರಂಥಗಳಲ್ಲದೆ ಅನೇಕ ದಿನಪತ್ರಿಕೆಗಳಲ್ಲಿ ಇವರ ಲೇಖನಗಳು ಪ್ರಕಟಗೊಂಡು ವಿದ್ವಾಂಸರ ಮೆಚ್ಚುಗೆಗೆ ಪಾತ್ರವಾಗಿವೆ.

ಆಕಾಶವಾಣಿ, ದೂರದರ್ಶನಗಳಲ್ಲಿ ಇತಿಹಾಸಕ್ಕೆ ಸಂಬಂಧಿಸಿದಂತೆ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದಾರೆ. ಚನ್ನಬಸಪ್ಪನವರು ಪ್ರಸ್ತುತ ದಿನಗಳವರೆಗೆ ರಾಯಚೂರು ಜಿಲ್ಲೆಯ ಹಲವಾರು ಹಳ್ಳಿ ಪಟ್ಟಣಗಳನ್ನು ಸುತ್ತಾಡಿದ್ದರೂ ಯಾವುದೇ ಸರಕಾರಿ, ಸಂಘ ಸಂಸ್ಥೆ ಮುಂತಾದವುಗಳ ನೆರವು ಪಡೆಯದೆ ಸ್ವಂತ ಖರ್ಚಿನಲ್ಲೇ ಸಂಶೋಧನೆ ನಡೆಸುತ್ತಿದ್ದಾರೆ. ರಾಯಚೂರು ಜಿಲ್ಲೆಯ ಚರಿತ್ರೆ ಶಾಸನಗಳ ಹಿನ್ನೆಲೆಯಲ್ಲಿ, ದೇವದುರ್ಗ ತಾಲೂಕಿನ ಪ್ರಾಚೀನ ಅವಶೇಷಗಳು, ರಾಯಚೂರು ಸಂಪದ-1 ಸೇರಿದಂತೆ ಅನೇಕ ಕೃತಿಗಳು ಅಚ್ಚಿನಲ್ಲಿವೆ.

ಮಲ್ಕಂದಿನ್ನಿಯವರು ದೇವದುರ್ಗ ಮಹಿಳಾ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇವೆ ಆರಂಭಿಸಿದ್ದರು. ಅನಂತರ ಮಸ್ಕಿಯ ದೇವನಾಂಪ್ರಿಯ ಅಶೋಕ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹತ್ತು ವರ್ಷಗಳ ಕಾಲ ಇತಿಹಾಸದ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ, ಪ್ರಸ್ತುತ ಸಿಂಧನೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಎರಡು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಒಟ್ಟಿನಲ್ಲಿ ರಾಯಚೂರು ಜಿಲ್ಲೆಯ ಸಾಂಸ್ಕೃತಿಕ ಚರಿತ್ರೆಯ ಕುರಿತು ಇವರು ಮಾಡಿದ ವಿಶೇಷ ಅಧ್ಯಯನವನ್ನು ಗಮನಿಸಿ ಕರ್ನಾಟಕ ಇತಿಹಾಸ ಅಕಾಡೆಮಿ 2023ನೆ ಸಾಲಿನ 38ನೆ ವಾರ್ಷಿಕ ಸಮ್ಮೇಳನದಲ್ಲಿ ‘ನೊಳಂಬ ಶ್ರೀ’ ಪ್ರಶಸ್ತಿ ಪ್ರದಾನ ಮಾಡಿದೆ.

ರಾಯಚೂರು ಜಿಲ್ಲೆಯಲ್ಲಿ ಡಾ.ಚನ್ನಬಸಪ್ಪರಂತಹ ಸರಳ ಸಜ್ಜನ, ಕ್ರಿಯಾಶೀಲ ವ್ಯಕ್ತಿತ್ವದ ಸಾಧಕರಿರುವುದು ನಮ್ಮೆಲ್ಲರ ಹೆಮ್ಮೆಯಾಗಿದೆ.

share
‌ ಸುರೇಶ ಬಳಗಾನೂರು
‌ ಸುರೇಶ ಬಳಗಾನೂರು
Next Story
X