Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ನೆಲದನಿ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಲಂಡನ್ ಡೈರಿ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಮಾಹಿತಿ ಮಾರ್ಗದರ್ಶನ
    • ಆರೋಗ್ಯ
    • ಓ ಮೆಣಸೇ
    • ಕೃತಿ ಪರಿಚಯ
    • ಝಲಕ್
    • ಬುಡಬುಡಿಕೆ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಬರದ ಹೊಡೆತಕ್ಕೆ 12 ತಾಂಡಾಗಳ 2 ಸಾವಿರ...

ಬರದ ಹೊಡೆತಕ್ಕೆ 12 ತಾಂಡಾಗಳ 2 ಸಾವಿರ ಕುಟುಂಬಗಳ ಗುಳೆ; ಮಕ್ಕಳ ಶಿಕ್ಷಣಕ್ಕೂ ಕುತ್ತು

► ಸ್ಲೇಟು-ಪೆನ್ಸಿಲು ಹಿಡಿಯಬೇಕಾದ ಕೈಗಳಲ್ಲಿ ಕುಡುಗೋಲು ► ಜೇವರ್ಗಿ, ಯಡ್ರಾಮಿ ಭಾಗದಲ್ಲಿ ಬರದ ಭೀಕರ ಪರಿಣಾಮ; ಶಿಕ್ಷಣದಿಂದ ವಂಚಿತವಾಗುವ ಅಪಾಯದಲ್ಲಿ ಸಾವಿರಕ್ಕೂ ಹೆಚ್ಚು ಮಕ್ಕಳು

ಪ್ರಶಾಂತ್ ಚವ್ಹಾಣಪ್ರಶಾಂತ್ ಚವ್ಹಾಣ14 Nov 2026 7:25 AM IST
share
ಬರದ ಹೊಡೆತಕ್ಕೆ 12 ತಾಂಡಾಗಳ 2 ಸಾವಿರ ಕುಟುಂಬಗಳ ಗುಳೆ; ಮಕ್ಕಳ ಶಿಕ್ಷಣಕ್ಕೂ ಕುತ್ತು

ಯಡ್ರಾಮಿ : ಮುಂಗಾರು ಮಳೆಯ ಕೊರತೆಯಿಂದ ಕೃಷಿ ಚಟುವಟಿಕೆ ಸಂಪೂರ್ಣ ನೆಲಕಚ್ಚಿದ್ದು, ಗ್ರಾಮೀಣ ಭಾಗದಲ್ಲಿ ಕೂಲಿ ಕೆಲಸವೂ ಇಲ್ಲದೆ ಬದುಕು ದುಸ್ತರವಾಗಿದೆ. ಇದರ ಪರಿಣಾಮ ಜೇವರ್ಗಿ ಮತ್ತು ಯಡ್ರಾಮಿ ತಾಲೂಕಿನ ಸುಮಾರು 12 ಲಂಬಾಣಿ ತಾಂಡಾಗಳ 2 ಸಾವಿರಕ್ಕೂ ಅಧಿಕ ಕುಟುಂಬಗಳು ಉದ್ಯೋಗ ಅರಸಿ ಅನ್ಯ ಜಿಲ್ಲೆ ಹಾಗೂ ಹೊರರಾಜ್ಯಗಳಿಗೆ ವಲಸೆ ಹೋಗಿವೆ. ಕುಟುಂಬಗಳ ವಲಸೆಯಿಂದ ಸಾವಿರಕ್ಕೂ ಹೆಚ್ಚು ಮಕ್ಕಳ ಶಿಕ್ಷಣಕ್ಕೆ ಅಡ್ಡಿಯಾಗಿದ್ದು, ಶಾಲೆಯಲ್ಲಿ ಅಕ್ಷರ ಕಲಿಯಬೇಕಾದ ಎಳೆಯ ಮಕ್ಕಳು ಕೂಲಿ ಕೆಲಸಕ್ಕೆ ಇಳಿಯುವ ಅನಿವಾರ್ಯತೆ ಎದುರಾಗಿದೆ.

ಮಳೆಯನ್ನೇ ನಂಬಿ ಬದುಕುವ ಲಂಬಾಣಿ ಕುಟುಂಬಗಳಿಗೆ ಈ ಬಾರಿ ಬೆಳೆ ಕೈಕೊಟ್ಟಿದೆ. ಹೊಲಗಳಲ್ಲಿ ಕೆಲಸವಿಲ್ಲ, ಗ್ರಾಮಗಳಲ್ಲಿ ಕೂಲಿ ಸಿಗುತ್ತಿಲ್ಲ. ಹೀಗಾಗಿ ಹೊಟ್ಟೆಪಾಡಿಗಾಗಿ ಕುಟುಂಬ ಸಮೇತ ಗುಳೆ ಹೋಗುತ್ತಿದ್ದಾರೆ. ಕೆಲವರು ಕಬ್ಬು ಕಟಾವಿಗೆ ಬೇರೆ ಜಿಲ್ಲೆಗಳಿಗೆ ತೆರಳಿದರೆ, ಇನ್ನು ಕೆಲವರು ಹೊರರಾಜ್ಯಗಳಲ್ಲಿ ಕಟ್ಟಡ ನಿರ್ಮಾಣ, ಬಾವಿ ತೋಡುವುದು ಸೇರಿದಂತೆ ವಿವಿಧ ಕೂಲಿ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಜಾನುವಾರುಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡಿ, ವೃದ್ಧರನ್ನು ಊರಿನಲ್ಲಿಯೇ ಬಿಟ್ಟು ಪುರುಷರು, ಮಹಿಳೆಯರು ಮತ್ತು ಮಕ್ಕಳೊಂದಿಗೆ ವಲಸೆ ಹೋಗುತ್ತಿರುವ ದೃಶ್ಯ ಸಾಮಾನ್ಯವಾಗಿದೆ.

ಸ್ಲೇಟು-ಪೆನ್ಸಿಲು ಹಿಡಿಯಬೇಕಾದ ಕೈಗಳಲ್ಲಿ ಕುಡುಗೋಲು! :

ಶಾಲೆಗೆ ತೆರಳಿ ಅಕ್ಷರ ಕಲಿಯಬೇಕಾದ ಪುಟಾಣಿ ಮಕ್ಕಳು ಬದುಕಿನ ಬಂಡಿ ಸಾಗಿಸಲು ಪೋಷಕರೊಂದಿಗೆ ದುಡಿಮೆಗೆ ಇಳಿದಿದ್ದಾರೆ. ಪುಸ್ತಕ, ಪೆನ್ನು, ಸ್ಲೇಟು ಹಿಡಿಯಬೇಕಾದ ಕೈಗಳಲ್ಲಿ ಕಬ್ಬು ಕಟಾವಿನ ಕುಡುಗೋಲುಗಳು ಕಾಣಿಸಿಕೊಂಡರೆ, ಮತ್ತೊಂದೆಡೆ ಮಣ್ಣು ಸಾಗಿಸುವ ಬುಟ್ಟಿಗಳು ಮಕ್ಕಳ ಬಾಲ್ಯವನ್ನು ಕಸಿದುಕೊಳ್ಳುತ್ತಿವೆ. ತರಗತಿಯಲ್ಲಿ ಶಿಕ್ಷಕರ ಪಾಠ ಕೇಳಬೇಕಾದ ಮಕ್ಕಳು ಕಬ್ಬಿನ ಗದ್ದೆಗಳಲ್ಲಿ ಹಾಗೂ ಕಟ್ಟಡ ನಿರ್ಮಾಣ ಸ್ಥಳಗಳಲ್ಲಿ ಬೆವರು ಸುರಿಸುತ್ತಿದ್ದಾರೆ.

ಶಾಲೆಯಿಂದ ದೂರವಾದರೆ ಭವಿಷ್ಯವೇ ಕತ್ತಲೆ :

ಕುಟುಂಬದೊಂದಿಗೆ ವಲಸೆ ಹೋಗುವ ಮಕ್ಕಳು ಶಾಲೆಯಿಂದ ದೂರವಾದ ಬಳಿಕ ಮತ್ತೆ ಶಿಕ್ಷಣದ ಮುಖ್ಯವಾಹಿನಿಗೆ ಮರಳುವುದು ಸವಾಲಾಗಿದೆ. ವಲಸೆ ಪ್ರದೇಶಗಳಲ್ಲಿ ಶಾಲೆಗಳ ಲಭ್ಯತೆ, ಭಾಷೆಯ ಸಮಸ್ಯೆ, ಆರ್ಥಿಕ ಸಂಕಷ್ಟ ಹಾಗೂ ದುಡಿಮೆಯ ಒತ್ತಡದಿಂದ ಮಕ್ಕಳ ಕಲಿಕೆ ಕುಂಠಿತವಾಗುತ್ತಿದೆ. ತಿಂಗಳುಗಟ್ಟಲೆ ಶಾಲೆಯಿಂದ ದೂರ ಉಳಿಯುವ ಮಕ್ಕಳು ಶಿಕ್ಷಣವನ್ನೇ ಅರ್ಧಕ್ಕೆ ಮೊಟಕುಗೊಳಿಸುವ ಅಪಾಯ ಎದುರಾಗಿದೆ.

ಇದು ಕೇವಲ ಶಾಲಾ ಗೈರುಹಾಜರಿಯ ಸಮಸ್ಯೆಯಲ್ಲ. ಬಡತನ ಮತ್ತು ಬರದ ಕಾರಣದಿಂದ ಒಂದು ತಲೆಮಾರೇ ಶಿಕ್ಷಣದಿಂದ ವಂಚಿತವಾಗುವ ಗಂಭೀರ ಸಾಮಾಜಿಕ ಬಿಕ್ಕಟ್ಟಾಗಿದೆ. ಮಕ್ಕಳನ್ನು ದುಡಿಮೆಯಿಂದ ಮುಕ್ತಗೊಳಿಸಿ ಶಿಕ್ಷಣದ ಹಾದಿಯಲ್ಲಿ ಉಳಿಸಬೇಕಾದ ಹೊಣೆಗಾರಿಕೆ ಸಂಬಂಧಪಟ್ಟ ಇಲಾಖೆಗಳ ಮೇಲಿದೆ.

ಅಧಿಕಾರಿಗಳ ಗಮನಕ್ಕೆ ಬಾರದ ತಾಂಡಾಗಳ ಸಂಕಷ್ಟ :

ವಲಸೆ ಹೋದ ಕುಟುಂಬಗಳ ಸಮಗ್ರ ಮಾಹಿತಿ ಸಂಗ್ರಹಿಸಿ, ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಗುರುತಿಸುವುದು ಹಾಗೂ ವಲಸೆ ಪ್ರದೇಶಗಳಲ್ಲಿ ತಾತ್ಕಾಲಿಕ ಶಿಕ್ಷಣ ವ್ಯವಸ್ಥೆ ಕಲ್ಪಿಸುವುದು ಅಗತ್ಯವಾಗಿದೆ. ಕುಟುಂಬಗಳು ಮರಳಿದ ಬಳಿಕ ಮಕ್ಕಳನ್ನು ಪುನಃ ಶಾಲೆಗೆ ಸೇರಿಸುವ ನಿಟ್ಟಿನಲ್ಲಿಯೂ ಶಿಕ್ಷಣ ಇಲಾಖೆ ಕ್ರಮ ಕೈಗೊಳ್ಳಬೇಕಿದೆ.

ಇನ್ನೊಂದೆಡೆ, ತಾಂಡಾಗಳಲ್ಲಿಯೇ ಉದ್ಯೋಗಾವಕಾಶ ಸೃಷ್ಟಿಸಿ, ಉದ್ಯೋಗ ಖಾತರಿ ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕಿದೆ. ಸ್ಥಳೀಯವಾಗಿ ಕೆಲಸ ದೊರೆತರೆ ಕುಟುಂಬಗಳು ವಲಸೆ ಹೋಗುವುದನ್ನು ತಪ್ಪಿಸಬಹುದು. ಇಲ್ಲವಾದಲ್ಲಿ ಬರದ ಹೊಡೆತಕ್ಕೆ ತತ್ತರಿಸಿರುವ ಕುಟುಂಬಗಳ ಜತೆಗೆ ಮಕ್ಕಳ ಭವಿಷ್ಯವೂ ಬಂಜರು ಭೂಮಿಯಂತಾಗುವ ಆತಂಕವಿದೆ.

ಬರ ಕೇವಲ ಹೊಲಗಳನ್ನು ಒಣಗಿಸಿಲ್ಲ, ಮಕ್ಕಳ ಕನಸುಗಳನ್ನೂ ಬಾಡಿಸಿದೆ. ಬದುಕಿಗಾಗಿ ಊರು ತೊರೆಯುವ ಕುಟುಂಬಗಳ ಮಕ್ಕಳಿಗೆ ಶಿಕ್ಷಣದ ಬೆಳಕು ಮತ್ತೆ ಮರಳುವುದಾದರೂ ಯಾವಾಗ ಎಂಬ ಪ್ರಶ್ನೆ ಇದೀಗ ಎದುರಾಗಿದೆ.

ಕೆಲಸ ಕೇಳಿದರೆ ಒದಗಿಸುತ್ತೇವೆ

ಇಜೇರಿ ಗ್ರಾಪಂ ವ್ಯಾಪ್ತಿಯಲ್ಲಿ ಪ್ರಸ್ತುತ 280 ಕಾರ್ಮಿಕರು ಹಾಗೂ ಮಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ 50 ಕಾರ್ಮಿಕರು ಕೆಲಸ ನಿರ್ವಹಿಸುತ್ತಿದ್ದಾರೆ. ನಾನು ಕಾರ್ಯನಿರ್ವಹಿಸುತ್ತಿರುವ ಎರಡೂ ಪಂಚಾಯತ್‌ಗಳಲ್ಲಿ ಕೆಲಸ ಕೇಳಿ ಬಂದವರಿಗೆ ಖಂಡಿತ ಕೆಲಸ ನೀಡಲಾಗುವುದು. ಒಂದು ಕುಟುಂಬಕ್ಕೆ ವಾರ್ಷಿಕ 125 ದಿನಗಳ ಕಾಲ ಕೆಲಸ ಒದಗಿಸಲಾಗುವುದು.

-ರಾಜೇಶ ಕಂಬಾರ, ಇಜೇರಿ ಮತ್ತು ಮಳ್ಳಿ ಗ್ರಾಪಂ ಪಿಡಿಒ

ಇದು ಸಂಪ್ರದಾಯವಲ್ಲ, ಬದುಕಿನ ಅನಿವಾರ್ಯತೆ

ನಮ್ಮ ರಾಜ್ಯದ ಉಪಮುಖ್ಯಮಂತ್ರಿ ಲಂಬಾಣಿ ಸಮುದಾಯದ ವಲಸೆಯನ್ನು ಸಂಪ್ರದಾಯ ಎಂದು ಹೇಳಿದ್ದಾರೆ. ಅವರು ಒಮ್ಮೆ ತಮ್ಮ ಕುಟುಂಬದ ಸದಸ್ಯರನ್ನು ಬಿಟ್ಟು ನಮ್ಮೊಂದಿಗೆ ಬಂದು ಕೆಲಸ ಮಾಡಿ ನೋಡಲಿ. ಆಗ ಇದು ಸಂಪ್ರದಾಯದಿಂದ ನಡೆಯುವ ವಲಸೆಯೋ ಅಥವಾ ಬದುಕಿನ ಅನಿವಾರ್ಯತೆಯಿಂದ ನಡೆಯುವ ವಲಸೆಯೋ ಎಂಬುದು ಅವರಿಗೆ ಅರ್ಥವಾಗುತ್ತದೆ.

- ಶಕುಂತಲಾಬಾಯಿ, ನಾಗರಹಳ್ಳಿ ತಾಂಡಾ ನಿವಾಸಿ

27 ಸಾವಿರ ಮಾನವ ದಿನಗಳ ಕೆಲಸ

ಯಡ್ರಾಮಿ ತಾಲೂಕಿನ 16 ಗ್ರಾಪಂ ವ್ಯಾಪ್ತಿಯಲ್ಲಿ ವಿಬಿ-ಜಿ ರಾಮ್‌ಜಿ ಯೋಜನೆಯಡಿ ಪ್ರಸ್ತುತ 1,200 ಜನರು ಕೆಲಸ ಮಾಡುತ್ತಿದ್ದಾರೆ. ಇಲ್ಲಿಯವರೆಗೆ 27 ಸಾವಿರ ಮಾನವ ದಿನಗಳ ಕೆಲಸ ನೀಡಲಾಗಿದೆ. ಶೇ.50ರಷ್ಟು ವೇತನ ಅವರ ಖಾತೆಗೆ ಜಮೆಯಾಗಿದೆ. ಆಯಾ ಗ್ರಾಪಂಗಳ ಲೇಬರ್ ಕಾರ್ಡ್ ಹೊಂದಿರುವ ಕೂಲಿ ಕಾರ್ಮಿಕರು ಪಂಚಾಯತನ್ನು ಸಂಪರ್ಕಿಸಿದರೆ ಖಂಡಿತ ಕೆಲಸ ನೀಡಲಾಗುವುದು.

- ಅನಿಲಕುಮಾರ ಮಾನಪಾಡೆ, ತಾಪಂ ಸಹಾಯಕ ನಿರ್ದೇಶಕ

Tags

EducationchildrenmigrateThandasdrought
share
ಪ್ರಶಾಂತ್ ಚವ್ಹಾಣ
ಪ್ರಶಾಂತ್ ಚವ್ಹಾಣ
Next Story
X