Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ವಿಶ್ವದ ಗಮನ ಸೆಳೆಯುತ್ತಿರುವ ದುಬೈಯ...

ವಿಶ್ವದ ಗಮನ ಸೆಳೆಯುತ್ತಿರುವ ದುಬೈಯ ‘ಮುಹಮ್ಮದ್ ಬಿನ್ ರಾಶಿದ್’ ಗ್ರಂಥಾಲಯ

ಇಕ್ಬಾಲ್ ಉಚ್ಚಿಲಇಕ್ಬಾಲ್ ಉಚ್ಚಿಲ20 Oct 2025 2:47 PM IST
share
ವಿಶ್ವದ ಗಮನ ಸೆಳೆಯುತ್ತಿರುವ ದುಬೈಯ ‘ಮುಹಮ್ಮದ್ ಬಿನ್ ರಾಶಿದ್’ ಗ್ರಂಥಾಲಯ
►ಜಗತ್ತಿನ 70 ಭಾಷೆಗಳ ಲಕ್ಷಾಂತರ ಪುಸ್ತಕ, ಅಪರೂಪದ ವಸ್ತುಗಳ ಭಂಡಾರ ►ಪುಸ್ತಕ ಪ್ರೇಮಿಗಳನ್ನು ಕೈಬೀಸಿ ಕರೆಯುತ್ತಿದೆ ಐಷಾರಾಮಿ ಕಟ್ಟಡ

ದುಬೈ: ಇದು ಅಂತಿಂಥ ಗ್ರಂಥಾಲಯ ಅಲ್ಲ, ನೋಡಲು ಐಷಾರಾಮಿ ಹೊಟೇಲ್-ಮಾಲ್‌ನಂತೆ ಕಾಣುವ ಈ ಭವ್ಯ ಗ್ರಂಥಾಲಯದ ಹೆಸರು ‘ಮುಹಮ್ಮದ್ ಬಿನ್ ರಾಶಿದ್ ಗ್ರಂಥಾಲಯ’. ಇದು ಇರುವುದು ದುಬೈಯಲ್ಲಿ. ಈ ಗ್ರಂಥಾಲಯ ಕಟ್ಟಡದ ವಾಸ್ತುಶಿಲ್ಪ, ಒಳಗಿನ ವಿನ್ಯಾಸ, ಆಧುನಿಕ ತಂತ್ರಜ್ಞಾನದ ಬಳಕೆಯ ಜೊತೆ ಇನ್ನಿತರ ಕಾರಣಗಳಿಗೂ ಈ ಗ್ರಂಥಾಲಯವನ್ನು ವಿಶ್ವ ಮಟ್ಟದಲ್ಲಿ ಗುರುತಿಸಲಾಗುತ್ತಿದೆ. ಇದರ ಸೊಬಗನ್ನೊಮ್ಮೆ ಪುಸ್ತಕ ಪ್ರೇಮಿಗಳು, ಓದುಗರು, ಪ್ರವಾಸಿಗರು ಕಣ್ತುಂಬಿಸಿಕೊಳ್ಳಲೇಬೇಕು.

ದುಬೈ ನಗರದ ಹೃದಯ ಭಾಗವಾಗಿರುವ ಅಲ್ ಜದ್ದಾಫ್ ಕ್ರೀಕ್(ನದಿ) ಪಕ್ಕದಲ್ಲಿನ ಸುಂದರವಾದ ತಾಣದಲ್ಲಿ ಈ ಭವ್ಯ, ಐಷಾರಾಮಿ ಮುಹಮ್ಮದ್ ಬಿನ್ ರಾಶಿದ್ ಗ್ರಂಥಾಲಯ ತಲೆ ಎತ್ತಿ ನಿಂತಿದೆ. ದುಬೈ ನಗರದಲ್ಲಿರುವ ಗಗನಚುಂಬಿ ಕಟ್ಟಡ, ಮಾಲ್‌ಗಳಿಗೆ ಠಕ್ಕರ್ ನೀಡುವಂತೆ ಈ ಭವ್ಯ ಗ್ರಂಥಾಲಯವನ್ನು ಯುಎಇ ಉಪಾಧ್ಯಕ್ಷ, ದುಬೈಯ ಪ್ರಧಾನ ಮಂತ್ರಿ ಹಾಗೂ ಆಡಳಿತಗಾರ ಶೇಖ್ ಮುಹಮ್ಮದ್ ಬಿನ್ ರಾಶಿದ್ ಅಲ್ ಮಕ್ತೂಮ್ ನಿರ್ಮಿಸಿದ್ದಾರೆ. ಈ ಕಾರಣದಿಂದಲೇ ಈ ಗ್ರಂಥಾಲಯಕ್ಕೆ ಅವರ ಹೆಸರನ್ನು ನಾಮಕರಣ ಮಾಡಲಾಗಿದೆ.

2022ರ ಜೂನ್ 16ರಂದು ಈ ಗ್ರಂಥಾಲಯ ಉದ್ಘಾಟನೆಗೊಂಡಿದ್ದು, 1 ಬಿಲಿಯನ್ ಅರಬ್ ದಿರ್ಹಮ್ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಕುರ್‌ಆನ್ ಓದಲು ಬಳಸುವ ಸಾಂಪ್ರದಾಯಿಕ ಮರದ ‘‘ರಹ್ಲ್’’(Rehl) ಆಕಾರದ ವಾಸ್ತುಶಿಲ್ಪದ ಆಕರ್ಷಕ ವಿನ್ಯಾಸದಲ್ಲಿ ಈ ಗ್ರಂಥಾಲಯವನ್ನು ನಿರ್ಮಿಸಲಾಗಿದ್ದು, ಜಗತ್ತಿನ ವಿವಿಧೆಡೆಗಳಿಂದ ಜನರನ್ನು ಆಕರ್ಷಿಸುತ್ತಿದೆ.

ದುಬೈಯ ಅಲ್ ಜದ್ದಾಫ್ ಕ್ರೀಕ್ ನದಿಯ ಬದಿಯಲ್ಲಿರುವ ಈ ಮುಹಮ್ಮದ್ ಬಿನ್ ರಾಶಿದ್ ಗ್ರಂಥಾಲಯವು ಕ್ರೀಕ್ ಗ್ರೀನ್ ಲೈನ್ ಮೆಟ್ರೊ ಸ್ಟೇಷನ್‌ನಿಂದ ಕೇವಲ 200 ಮೀಟರ್ ದೂರದಲ್ಲಿದೆ.

ಈ ಗ್ರಂಥಾಲಯದ ಒಳಗೆ ಕಾಲಿಡುತ್ತಿದ್ದಂತೆಯೇ ಎರಡು ಬದಿಗಳಲ್ಲಿ ಬೃಹತ್ ಗಾತ್ರದ ಸಾವಿರಾರು ಪುಸ್ತಕಗಳನ್ನು ಇಟ್ಟಿರುವ 4 ಕಪಾಟುಗಳು ನಿಮಗೆ ಭವ್ಯ ಸ್ವಾಗತವನ್ನು ನೀಡುತ್ತವೆ. ಇಲ್ಲಿ ಬಳಕೆಯಾಗಿರುವ ತಂತ್ರಜ್ಞಾನ, ದೊಡ್ಡ ದೊಡ್ಡ ಎಲ್‌ಇಡಿ ಪರದೆಗಳು, ನೀರಿನ ಕಾರಂಜಿ, ಲೈಟಿಂಗ್ಸ್ ವ್ಯವಸ್ಥೆ ಗ್ರಂಥಾಲಯವನ್ನು ಮದುವಣಗಿತ್ತಿಯಂತೆ ಸಿಂಗರಿಸಿವೆ.

ಈ ಗ್ರಂಥಾಲಯದಲ್ಲಿ ಅರೆಬಿಕ್, ಹಿಂದಿ, ಕನ್ನಡ, ಮಲಯಾಳಂ ಸಹಿತ ಜಗತ್ತಿನ 70ಕ್ಕೂ ಹೆಚ್ಚು ಭಾಷೆಗಳ 15 ಲಕ್ಷಕ್ಕಿಂತ ಹೆಚ್ಚು ಮುದ್ರಿತ ಮತ್ತು ಡಿಜಿಟಲ್ ಕೃತಿಗಳು (ಇ-ಪುಸ್ತಕ) ಇವೆ. ಸಾಹಿತ್ಯ, ಮನೋರಂಜನೆ, ವಿಜ್ಞಾನ, ಕಲೆ, ಸಂಸ್ಕೃತಿ, ಧಾರ್ಮಿಕ ಆಚಾರ-ವಿಚಾರಗಳಿಗೆ ಸಂಬಂಧಿಸಿ ಪುಸ್ತಕಗಳು ಇಲ್ಲಿವೆ. 60 ಲಕ್ಷ ಸಂಶೋಧನಾ ಪ್ರಬಂಧಗಳು, 73 ಸಾವಿರಕ್ಕಿಂತ ಹೆಚ್ಚು ಸಂಗೀತ ಸಂಗ್ರಹಗಳು, 75 ಸಾವಿರ ವೀಡಿಯೊಗಳು, 325 ವರ್ಷಗಳ ಇತಿಹಾಸವಿರುವ 5 ಸಾವಿರಕ್ಕೂ ಹೆಚ್ಚು ಐತಿಹಾಸಿಕ ನಿಯತಕಾಲಿಕಗಳು, 13 ಸಾವಿರ ಲೇಖನಗಳು ಮತ್ತು ಜಗತ್ತಿನ ನಾನಾ ಕಡೆಗಳ 35 ಸಾವಿರಕ್ಕೂ ಹೆಚ್ಚು ಪತ್ರಿಕೆಗಳು ಹಾಗೂ ಸಾವಿರಾರು ಅಪರೂಪದ ಐತಿಹಾಸಿಕ ವಸ್ತುಗಳ ಸಂಗ್ರಹಗಳಿವೆ. ಜೊತೆಗೆ ಅಂಧರು ಮತ್ತು ದೃಷ್ಟಿಹೀನರಿಗೆ ಸಾಹಿತ್ಯ, ಇತಿಹಾಸ ಮತ್ತು ಕಾದಂಬರಿಗಳಂತಹ ವಿಷಯಗಳ ಅರೆಬಿಕ್, ಇಂಗ್ಲಿಷ್ ಮತ್ತು ಫ್ರೆಂಚ್ ಭಾಷೆಗಳಲ್ಲಿನ 2,550 ಬ್ರೈಲ್ ಪುಸ್ತಕಗಳಿವೆ.

ಪರಿಸರ ಸ್ನೇಹಿ ವಿನ್ಯಾಸದಲ್ಲಿ ಕಟ್ಟಡವನ್ನು ನಿರ್ಮಿಸಲಾಗಿದೆ. ಇಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಮತ್ತು ಕೃತಕ ಬುದ್ಧಿಮತ್ತೆ (ಎಐ) ಬಳಸಲಾಗಿದೆ. ಇದರೊಳಗೆ ಪುಸ್ತಕಗಳನ್ನು ಸ್ವಯಂ ಸಂಗ್ರಹಣಾ ಮಾಡುವ ವ್ಯವಸ್ಥೆ (Automated Storage), ಕಂಪ್ಯೂಟರ್‌ನ ಸಹಾಯದಿಂದ ಪುಸ್ತಕವನ್ನು ಸ್ವಯಂಚಾಲಿತವಾಗಿ ಹುಡುಕಿ ತರುವ ವ್ಯವಸ್ಥೆ (Book Retrieval System), ಸ್ವಯಂ ಸೇವಾ ಕಿಯೋಸ್ಕ್‌ಗಳು,

ಪುಸ್ತಕ ಡಿಜಿಟಲೀಕರಣ ಪ್ರಯೋಗಾಲಯ (Book Digitisation Lab), ನಿಮ್ಮ ಪ್ರಶ್ನೆಗಳಿಗೆ ಉತ್ತರಿಸಲು ರೋಬೋಟ್‌ಗಳೂ ಇಲ್ಲಿವೆ.

ಸಂದರ್ಶಕರ ಸಮಯ: ಈ ಗ್ರಂಥಾಲಯವು ಸೋಮವಾರದಿಂದ ಶನಿವಾರದವರೆಗೆ ಬೆಳಗ್ಗೆ 9ರಿಂದ ರಾತ್ರಿ 9ರವರೆಗೆ, ಶುಕ್ರವಾರ ಮಧ್ಯಾಹ್ನ 2 ರಿಂದ ರಾತ್ರಿ 9 ರವರೆಗೆ ತೆರೆದಿರುತ್ತದೆ. ರವಿವಾರ ಬಂದ್ ಆಗಿರುತ್ತದೆ.

7 ಮಹಡಿಗಳಿರುವ ಈ ಭವ್ಯ ಕಟ್ಟಡವು ಸುಮಾರು 54 ಸಾವಿರ ಚದರ ಮೀಟರ್ ವಿಸ್ತೀರ್ಣವಿದೆ. 5 ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟವರಿಗೆ ಮಾತ್ರ ಗ್ರಂಥಾಲಯ ಪ್ರವೇಶಕ್ಕೆ ಅವಕಾಶವಿದ್ದು, ಇಲ್ಲಿಗೆ ಪ್ರವೇಶ ಉಚಿತವಾಗಿದೆ.

9 ವಿಶೇಷ ಗ್ರಂಥಾಲಯ ವಿಭಾಗ: ಸಾಮಾನ್ಯ ಗ್ರಂಥಾಲಯ, ಎಮಿರೇಟ್ಸ್ ಗ್ರಂಥಾಲಯ, ಯುವ ವಿಭಾಗ, ಮಕ್ಕಳ ಗ್ರಂಥಾಲಯ, ವಿಶೇಷ ಸಂಗ್ರಹಣಾ ಗ್ರಂಥಾಲಯ, ನಕ್ಷೆಗಳು ಮತ್ತು ಅಟ್ಲಾಸ್‌ಗಳ ಗ್ರಂಥಾಲಯ, ಮಾಧ್ಯಮ ಮತ್ತು ಕಲಾ ಗ್ರಂಥಾಲಯ, ವ್ಯವಹಾರ ಗ್ರಂಥಾಲಯ, ನಿಯತಕಾಲಿಕೆಗಳ ಗ್ರಂಥಾಲಯ ಇಲ್ಲಿವೆ.

7 ಮಹಡಿಗಳಿರುವ ಭವ್ಯ ಕಟ್ಟಡ: ಕಟ್ಟಡದ ಬೇಸ್ಮೆಂಟ್‌ನಲ್ಲಿ ರೊಬೊಟಿಕ್ ಲ್ಯಾಬ್, ನೆಲ ಮಹಡಿಯಲ್ಲಿ ಸಾಮಾನ್ಯ ಗ್ರಂಥಾಲಯ, ಮಕ್ಕಳ ಗ್ರಂಥಾಲಯ, ರಿಸೆಪ್ಶನ್, ಮಾಹಿತಿ ಕೇಂದ್ರ, ಪತ್ರಿಕೆಗಳ ಗ್ರಂಥಾಲಯ, ಆಡಿಟೋರಿಯಂ, ಉಪಾಹಾರ ಗೃಹ, ಪುಸ್ತಕ ವಾಪಸಿ ಕೇಂದ್ರ, ಪುಸ್ತಕಗಳನ್ನು ಸ್ವಯಂ-ಪರಿಶೀಲನೆ ಮಾಡುವ ಕಿಯೋಸ್ಕ್‌ಗಳು ಮತ್ತು ಸಾವಿರಾರು ಪುಸ್ತಕಗಳನ್ನು ಜೋಡಿಸಿಟ್ಟಿರುವ ಗೋಡೆಗೆ ಅಂಟಿಕೊಂಡಿರುವ 4 ಬೃಹತ್ ಗಾತ್ರದ ಸ್ಮಾರ್ಟ್ ಶೆಲ್ಫ್‌ಗಳಿವೆ.

ದಿ ಜನರಲ್ ಲೈಬ್ರರಿ ವಿವಿಧ ಭಾಷೆಗಳಿಗೆ ಸಂಬಂಧಿಸಿದ ಸರಿಸುಮಾರು 4,23,225 ಪುಸ್ತಕಗಳನ್ನು ಹೊಂದಿದೆ. ನಿಯತಕಾಲಿಕ ಪತ್ರಿಕಾ ಗ್ರಂಥಾಲಯದಲ್ಲಿ 26,854 ಮುದ್ರಿತ ಮಾಸಪತ್ರಿಕೆಗಳು ಇವೆ.

ಮಕ್ಕಳಮಕ್ಕಳ ಗ್ರಂಥಾಲಯ

ಇನ್ನೊಂದೆಡೆ ಮಕ್ಕಳ ಗ್ರಂಥಾಲಯವು ಮಕ್ಕಳನ್ನು ತನ್ನೆಡೆಗೆ ಸೆಳೆಯಲು ನವನವೀನ ವಿನ್ಯಾಸದಲ್ಲಿ ನಿರ್ಮಿತವಾಗಿದೆ. 5ರಿಂದ 12 ವರ್ಷ ವಯಸ್ಸಿನ ಮಕ್ಕಳಿಗಾಗಿ ಮೋಜಿನ ವಾತಾವರಣದೊಂದಿಗೆ ವಿನ್ಯಾಸಗೊಳಿಸಲಾದ ಸುಸಜ್ಜಿತವಾದ ಮಕ್ಕಳ ಗ್ರಂಥಾಲಯ ಇದಾಗಿದೆ. ಇಲ್ಲಿ ಸಣ್ಣಪುಟ್ಟ ಜನಪ್ರಿಯ ಕಥೆಗಳ, ವಿಜ್ಞಾನ, ಕಾದಂಬರಿ, ಸಾಹಿತ್ಯ, ಮನರಂಜನೆ ಮತ್ತು ಕಲೆಯಂತಹ ವಿಷಯಗಳನ್ನು ಒಳಗೊಂಡ ವಿವಿಧ ಭಾಷೆಗಳಲ್ಲಿನ 84,097ಕ್ಕೂ ಹೆಚ್ಚು ಪುಸ್ತಕಗಳನ್ನು ಇಡಲಾಗಿದೆ.

ಯಾವೆಲ್ಲ ಮಹಡಿಯಲ್ಲಿ ಏನೇನಿವೆ?

ಮೊದಲ ಮಹಡಿಯಲ್ಲಿ ನಕ್ಷೆಗಳು ಮತ್ತು ಅಟ್ಲಾಸ್‌ಗಳು, ಮಾಧ್ಯಮ ಮತ್ತು ಕಲಾ ಗ್ರಂಥಾಲಯ, ಯುವ ವಯಸ್ಕರ ಗ್ರಂಥಾಲಯವಿದೆ. 12ರಿಂದ 17 ವರ್ಷದ ಯುವಕರಿಗಾಗಿ ವಿನ್ಯಾಸಗೊಳಿಸಲಾದ ಈ ಯುವ ಗ್ರಂಥಾಲಯದಲ್ಲಿ ಒಟ್ಟು 18,106 ಪುಸ್ತಕಗಳು ಇವೆ. 2ನೇ ಮಹಡಿಯಲ್ಲಿ ವಿದ್ಯಾರ್ಥಿಗಳಿಗೆ ಸ್ಟಡಿ ರೂಮ್‌ನ ವ್ಯವಸ್ಥೆ ಇದೆ. 3ನೇ ಮಹಡಿಯಲ್ಲಿ ಆಡಳಿತ ಕಚೇರಿ ಇದೆ. 4ನೇ ಮಹಡಿಯಲ್ಲಿ ಕಾನ್ಫರೆನ್ಸ್ ಹಾಗೂ ಮೀಟಿಂಗ್ ರೂಮ್‌ಗಳಿವೆ. 5ನೇ ಮಹಡಿಯಲ್ಲಿ ವಿಶೇಷ, ಅಪರೂಪದ ಪುಸ್ತಕಗಳ, ಹಸ್ತಪ್ರತಿಗಳ ಗ್ರಂಥಾಲಯವಿದೆ. ಇಲ್ಲಿರುವ ಖಾಸಗಿ ಸಂಗ್ರಹಣಾ ಗ್ರಂಥಾಲಯದಲ್ಲಿ ಒಟ್ಟು 2,828 ಅಪರೂಪದ ವಸ್ತುಗಳು ಇವೆ. 6ನೇ ಮಹಡಿಯಲ್ಲಿ ಯುಎಇಗೆ ಸಂಬಂಧಿಸಿದ ಎಮಿರೇಟ್ಸ್ ಗ್ರಂಥಾಲಯವಿದ್ದು, ಇಲ್ಲಿ ಸುಮಾರು 68,052 ಪುಸ್ತಕಗಳು ಇವೆ.

7ನೇ ಮಹಡಿ ಅಪರೂಪದ ಅಮೂಲ್ಯ ಸಂಗ್ರಹಗಳ ಆಗರ

7ನೇ ಮಹಡಿಯಲ್ಲಿ ಗ್ರಂಥಾಲಯದ ಅಮೂಲ್ಯ ಸಂಗ್ರಹಗಳಿದ್ದು, ನೂರಾರು ವಸ್ತುಗಳನ್ನು ಇಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ. ಇಲ್ಲಿ ಸಂಗ್ರಹಿಸಲಾದ ಹಳೆಯ ಪುಸ್ತಕಗಳು, ಅಪರೂಪದ ಹಸ್ತಪ್ರತಿಗಳು, ನಕ್ಷೆಗಳು, ಐತಿಹಾಸಿಕ ಕಲಾಕೃತಿಗಳು, ಹಳೆಯ ಅಟ್ಲಾಸ್‌ಗಳು, ಕ್ಯಾಲಿಗ್ರಫಿ ಪರಿಕರಗಳು, ಪವಿತ್ರ ಕುರ್‌ಆನ್‌ನ ವಿಶಿಷ್ಟ ಪ್ರತಿಗಳು, ಜೊತೆಗೆ ವಾಲ್ಮೀಕಿ ರಾಮಾಯಣವನ್ನೂ ಇಲ್ಲಿ ನೋಡಬಹುದಾಗಿದೆ. ಈ ಗ್ರಂಥಾಲಯದ ಪಕ್ಕದಲ್ಲಿ ‘ಭಾಷೆಗಳ ಉದ್ಯಾನವನ’ವಿದ್ದು ಅಲ್ಲಿ ನೂರಾರು ಸ್ತಂಭಗಳು ಇವೆ. ಪ್ರತಿಯೊಂದು ಸ್ತಂಭದ ಮೇಲೂ ಶೇಖ್ ಮುಹಮ್ಮದ್ ಅವರ ಕುರಿತು ಕೆತ್ತಲಾಗಿದೆ. ಈ ಉಲ್ಲೇಖಗಳು ಅರೆಬಿಕ್, ಹಿಂದಿ, ಕನ್ನಡ ಸೇರಿದಂತೆ ಜಗತ್ತಿನ 170ಕ್ಕೂ ಹೆಚ್ಚು ಭಾಷೆಗಳಲ್ಲಿ ಭಾಷಾಂತರಗೊಂಡಿವೆ. ಇದು ರಾತ್ರಿ ನೋಡಲು ಬೆಳಕಿನೊಂದಿಗೆ ಅದ್ಭುತವಾಗಿ ಕಂಗೊಳಿಸುತ್ತಿರುತ್ತದೆ.

share
ಇಕ್ಬಾಲ್ ಉಚ್ಚಿಲ
ಇಕ್ಬಾಲ್ ಉಚ್ಚಿಲ
Next Story
X