Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ನೆಲ ಕಚ್ಚುತ್ತಿರುವ ಆರ್ಥಿಕತೆಯೂ.....

ನೆಲ ಕಚ್ಚುತ್ತಿರುವ ಆರ್ಥಿಕತೆಯೂ.. ಚುನಾವಣೆ ಗೆಲುವಿನ ಸಂಭ್ರಮವೂ...

ಎನ್. ಕೇಶವ್ಎನ್. ಕೇಶವ್21 Nov 2025 10:58 AM IST
share
ನೆಲ ಕಚ್ಚುತ್ತಿರುವ ಆರ್ಥಿಕತೆಯೂ.. ಚುನಾವಣೆ ಗೆಲುವಿನ ಸಂಭ್ರಮವೂ...

ಭಾರತ ಇದೇ ಅಕ್ಟೋಬರ್‌ನಲ್ಲಿ ಸುಮಾರು 76 ಬಿಲಿಯನ್ ಡಾಲರ್ ಮೌಲ್ಯದ ಸರಕುಗಳನ್ನು ಆಮದು ಮಾಡಿಕೊಂಡಿದೆ.

ಸರಕಾರವೇ ಈ ಡೇಟಾವನ್ನು ಬಿಡುಗಡೆ ಮಾಡಿದೆ.ರೂಪಾಯಿಗಳಲ್ಲಿ ಇದು ಸುಮಾರು 6 ಲಕ್ಷ ಕೋಟಿ ರೂಪಾಯಿಗಳಷ್ಟು ಮೌಲ್ಯದ ಆಮದು.ಸ್ವತಂತ್ರ ಭಾರತದ ಇಡೀ ಇತಿಹಾಸದಲ್ಲೇ ಒಂದೇ ತಿಂಗಳಲ್ಲಿ ಇಷ್ಟು ದೊಡ್ಡ ಪ್ರಮಾಣದ ಆಮದು ಆಗಿರಲಿಲ್ಲ ಎಂದು ಹೇಳಲಾಗುತ್ತಿದೆ.ಆಮದು ವಿಷಯದಲ್ಲಿ ಇದು ಸಾರ್ವಕಾಲಿಕ ಗರಿಷ್ಠ ಪ್ರಮಾಣವಾಗಿದೆ.

ಅಂದರೆ ಇದರ ಅರ್ಥ ಇತರ ದೇಶಗಳ ಮೇಲೆ ನಮ್ಮ ಅವಲಂಬನೆ ತೀರಾ ಹೆಚ್ಚುತ್ತಿದೆ.

ಬಿಹಾರದಲ್ಲಿ ಎನ್‌ಡಿಎ ಭರ್ಜರಿ ಜಯ ಸಾಧಿಸಿರುವ ಹೊತ್ತಲ್ಲಿಯೇ ದಾಖಲೆ ಆಮದಿನ ಈ ಡೇಟಾ ಕೂಡ ಬಂದಿದೆ.

ಎನ್‌ಡಿಎಗೆ ಮತ ಹಾಕಿ ಗೆಲ್ಲಿಸಿದ ಜನ, ಭಾರತ ಜಗತ್ತಿನಾದ್ಯಂತ ಪ್ರಸಿದ್ಧಿಗೊಳ್ಳಲು ಮೋದಿಯೇ ಕಾರಣ ಎಂದು ಹೇಳಿಕೊಳ್ಳುತ್ತಾರೆ. ಆದರೆ, ವಾಸ್ತವವೆಂದರೆ ಭಾರತದ ಇಷ್ಟು ದೊಡ್ಡ ಪ್ರಮಾಣದ ಆಮದು ನಮ್ಮ ಆರ್ಥಿಕತೆಯ ದುಃಸ್ಥಿತಿ ಎಂಥದೆಂಬುದನ್ನು ಹೇಳುತ್ತಿದೆ. ಜಾಗತಿಕವಾಗಿ ಪ್ರಸಿದ್ಧಿ ಪಡೆಯುವ ಯಾವುದೂ ಭಾರತದ ಆರ್ಥಿಕತೆಯಲ್ಲಿ ಇಲ್ಲ ಎಂಬುದು ಇದರಿಂದ ಸ್ಪಷ್ಟವಾಗುತ್ತಿದೆ.

ಇಷ್ಟಾದರೂ, ಸುಳ್ಳುಗಳ ಮೇಲೆಯೇ ಕಟ್ಟಲಾಗಿರುವ ಮೋದಿಯವರ ಇಮೇಜ್ ಈ ಜನರನ್ನು ಇನ್ನೂ ಮರುಳುಗೊಳಿಸುತ್ತಲೇ ಇದೆ. ಅದು, ಮೋದಿಯವರ ಕಾರಣದಿಂದಾಗಿಯೇ ಭಾರತ ವಿಶ್ವಗುರುವಾಗಿದೆ ಎಂದು ಜನರು ನಂಬುವಂತೆ ಮಾಡುತ್ತದೆ.

ಈ ಇಮೇಜ್ ಅನ್ನು ಯಾರೂ ಮುರಿಯಲು ಸಾಧ್ಯವಿಲ್ಲದ ಸ್ಥಿತಿಯಿದೆ. ಸುಳ್ಳು ನಿರೂಪಣೆಗಳು ಅಷ್ಟರ ಮಟ್ಟಿಗೆ ಬಲಿಷ್ಠವಾಗಿವೆ.

ಭಾರತದ ಪ್ರಜಾಪ್ರಭುತ್ವವೆನ್ನುವುದು ಇಂಥ ನಿರೂಪಣೆ ಮೂಲಕವೇ ನಿರ್ವಹಿಸಲಾಗುತ್ತಿರುವ ಪ್ರಜಾಪ್ರಭುತ್ವವಾಗಿದೆ ಎಂದು ಅನೇಕ ವಿದ್ವಾಂಸರು ಹೇಳುತ್ತಿರುವುದು ಇದೇ ಕಾರಣಕ್ಕೆ ಮತ್ತು ಅದಕ್ಕಾಗಿಯೇ ವಿರೋಧವನ್ನು, ಟೀಕೆಗಳನ್ನು, ಪ್ರಶ್ನೆಗಳನ್ನು ಸತತವಾಗಿ, ವ್ಯವಸ್ಥಿತವಾಗಿ ದುರ್ಬಲಗೊಳಿಸುವುದು ನಡೆಯುತ್ತಿದೆ.

ಇಂಥ ಸ್ಥಿತಿಯಲ್ಲಿ, ದೇಶದ ಆಮದು ಇಷ್ಟು ದಾಖಲೆ ಮಟ್ಟದಲ್ಲಿ ಹೆಚ್ಚಿದೆ ಎನ್ನುವಾಗಲೂ ಜನರಿಗೆ ದೇಶದ ಆರ್ಥಿಕತೆಯ ದುರವಸ್ಥೆ ಅರ್ಥವಾಗದ ಹಾಗಾಗಿದೆ.

ಆಮದು ಪ್ರಮಾಣ ಅಕ್ಟೋಬರ್ ತಿಂಗಳಲ್ಲಿ ಇಷ್ಟು ದೊಡ್ಡ ಮಟ್ಟದಲ್ಲಿರುವಾಗ, ಭಾರತದ ರಫ್ತು ಏನೆಂಬುದನ್ನು ನೋಡಬೇಕು.

ರಫ್ತು ಕಳೆದ ವರ್ಷದ ಅಕ್ಟೋಬರ್‌ನಲ್ಲಿ ಇದ್ದುದಕ್ಕಿಂತ ಕಡಿಮೆಯಾಗಿದೆ.

ಕೇವಲ 34 ಬಿಲಿಯನ್ ಡಾಲರ್ ಮಾತ್ರವಿದೆ.

ಅಂದರೆ, ಇದು ಕಳೆದ ವರ್ಷದ ಅಕ್ಟೋಬರ್‌ಗಿಂತ ಸುಮಾರು 4 ಬಿಲಿಯನ್ ಡಾಲರ್ ಕಡಿಮೆಯಾಗಿದೆ.

ಸರಕಾರದ ಡೇಟಾ ಪ್ರಕಾರ, ಅಕ್ಟೋಬರ್ 2025ರಲ್ಲಿ ಭಾರತದ ವ್ಯಾಪಾರ ಕೊರತೆ ಸುಮಾರು 41 ಬಿಲಿಯನ್ ಡಾಲರ್ ಇದೆ. ಇದು ಇಲ್ಲಿಯವರೆಗಿನ ಯಾವುದೇ ತಿಂಗಳ ಅತಿದೊಡ್ಡ ವ್ಯಾಪಾರ ಕೊರತೆಯಾಗಿದೆ.

ಹಾಗಾದರೆ, ಇಷ್ಟು ದೊಡ್ಡ ಪ್ರಮಾಣದ ವ್ಯಾಪಾರ ಕೊರತೆ ಹೇಗೆ ಉದ್ಭವಿಸಿತು ಎಂಬುದು ಪ್ರಶ್ನೆ.

ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಹೆಚ್ಚಿನ ಪ್ರಮಾಣದ ಚಿನ್ನ ಮತ್ತು ಬೆಳ್ಳಿಯನ್ನು ಖರೀದಿಸಲಾಗಿದೆ ಎಂದು ಆರ್ಥಿಕ ತಜ್ಞರು ಹೇಳುತ್ತಿದ್ದಾರೆ.

ಕಳೆದ ವರ್ಷಕ್ಕಿಂತ ಸುಮಾರು ಮೂರು ಪಟ್ಟು ಹೆಚ್ಚು ಚಿನ್ನ ಮತ್ತು ಐದು ಪಟ್ಟು ಹೆಚ್ಚು ಬೆಳ್ಳಿ ಖರೀದಿಸಲಾಗಿದೆ. ಚಿನ್ನ ಮತ್ತು ಬೆಳ್ಳಿ ಹೆಚ್ಚು ಖರೀದಿಯಾಗಿರುವುದಕ್ಕೆ ಇದು ಹಬ್ಬದ ಸೀಸನ್ ಆಗಿತ್ತೆಂಬುದು ಮಾತ್ರ ಕಾರಣವಲ್ಲ.

ಹೂಡಿಕೆದಾರರಿಗೆ ಭಾರತದ ಆರ್ಥಿಕತೆಯ ಭವಿಷ್ಯದ ಬಗ್ಗೆ ನಂಬಿಕೆಯೇ ಇಲ್ಲವಾಗಿದೆ. ಹಾಗಾಗಿಯೇ, ಈ ವರ್ಷ ಇತರ ದೇಶಗಳಿಂದ ಹೆಚ್ಚಿನ ಪ್ರಮಾಣದ ಚಿನ್ನವನ್ನು ಖರೀದಿಸಲಾಗಿದೆ. ಇದರ ಹಿಂದಿನ ಕಾರಣ, ಭಾರತದ ಆರ್ಥಿಕತೆಯ ಭವಿಷ್ಯ ಅನಿಶ್ಚಿತವಾಗಿದೆ ಎನ್ನುವುದು ಮತ್ತು ಆ ಅನಿಶ್ಚಿತತೆ ತಪ್ಪಿಸಲು, ಕನಿಷ್ಠ ಸುರಕ್ಷಿತವಾದುದರ ಮೇಲೆ ಹಣವನ್ನು ಹೂಡಿಕೆ ಮಾಡಲಾಗಿದೆ.

ಎರಡನೇ ದೊಡ್ಡ ಕಾರಣವೆಂದರೆ, ಡಾಲರ್ ವಿರುದ್ಧ ರೂಪಾಯಿ ಮೌಲ್ಯ ಕುಸಿಯುತ್ತಲೇ ಇರುವುದು.

ಎಪ್ರಿಲ್‌ನಲ್ಲಿ, ಡಾಲರ್ ವಿರುದ್ಧ ರೂಪಾಯಿ ಮೌಲ್ಯ 85 ರೂ. ಆಸುಪಾಸಿನಲ್ಲಿತ್ತು. ಈಗ ಅದು 88 ರೂ. ಆಸುಪಾಸಿನಲ್ಲಿದೆ.

ರೂಪಾಯಿ ಮೌಲ್ಯ ಕುಸಿತದಿಂದಾಗಿ ಆಮದುಗಳ ಬೆಲೆ ಹೆಚ್ಚಾಗುತ್ತದೆ. ಇದನ್ನೇ ಹೆಚ್ಚುತ್ತಿರುವ ವ್ಯಾಪಾರ ಕೊರತೆ ಮತ್ತು ಹೆಚ್ಚುತ್ತಿರುವ ಆಮದು ಎಂದು ನೋಡಲಾಗುತ್ತದೆ.

ಮೂರನೇ ಪ್ರಮುಖ ಕಾರಣವೆಂದರೆ, ಅಮೆರಿಕ ಭಾರತದ ಮೇಲೆ ಶೇ. 50 ಸುಂಕ ವಿಧಿಸಿದೆ.

ಭಾರತದ ರಾಜತಾಂತ್ರಿಕತೆ ಮತ್ತು ವಿದೇಶಾಂಗ ನೀತಿ ಎರಡೂ ವಿಫಲವಾಗಿವೆ. ಇದರಿಂದಾಗಿ, ಅಮೆರಿಕದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಾರಾಟವಾಗುತ್ತಿದ್ದ ಭಾರತದ ಕಾರ್ಮಿಕ ತೀವ್ರ ವಲಯದ ಸರಕುಗಳ ಮಾರಾಟ ಕಡಿಮೆಯಾಗಿದೆ.

ಅದರಿಂದಾಗಿಯೇ ಕೈಮಗ್ಗ, ಹತ್ತಿ, ಜವಳಿ ಮತ್ತು ಉಡುಪು ಕೈಗಾರಿಕೆಗಳು, ಇಂಜಿನಿಯರಿಂಗ್ ಸರಕುಗಳಂತಹ ಕಾರ್ಮಿಕ ತೀವ್ರ ವಲಯಗಳು ಕುಸಿತ ಕಂಡಿವೆ.

ಇಲ್ಲಿ ಹೆಚ್ಚಿನ ಸಂಖ್ಯೆಯ ಜನರು ತಮ್ಮ ಕೆಲಸ ಕಳೆದುಕೊಳ್ಳಬಹುದು ಎನ್ನುವ ಸೂಚನೆಗಳಿವೆ.

ನಾಲ್ಕನೇ ಪ್ರಮುಖ ಕಾರಣವೆಂದರೆ, ಸಿದ್ಧಪಡಿಸಿದ ಉತ್ಪನ್ನಗಳಿಗೆ ಮಧ್ಯಂತರ ಉತ್ಪನ್ನಗಳು ಇತರ ದೇಶಗಳಲ್ಲಿ ಅಗ್ಗದ ದರದಲ್ಲಿ ಲಭ್ಯವಿವೆ. ಹಾಗಾಗಿ, ಅವುಗಳನ್ನು ಅಲ್ಲಿಂದ ಆಮದು ಮಾಡಿಕೊಳ್ಳಲಾಗುತ್ತಿದೆ.

ಇದರಿಂದ ಸಿದ್ಧಪಡಿಸಿದ ಉತ್ಪನ್ನಗಳನ್ನು ಉತ್ಪಾದಿಸುವವರು ರಫ್ತು ಮಾರುಕಟ್ಟೆಯಲ್ಲಿ ಸ್ಪರ್ಧೆ ಎದುರಿಸಲು ಸಾಧ್ಯ ಅಥವಾ ಇಲ್ಲಿಯೂ ಅಗ್ಗದ ದರದಲ್ಲಿ ತಮ್ಮ ಸರಕುಗಳನ್ನು ಮಾರಾಟ ಮಾಡಬಹುದು ಎಂಬುದು ಲೆಕ್ಕಾಚಾರ.

ಉದಾಹರಣೆಗೆ, ಮೊಬೈಲ್ ಫೋನ್.

ಅದರ ಯೂನಿಟ್‌ಗಳಲ್ಲಿ ಶೇ. 70ರಿಂದ 80 ಈಗಲೂ ವಿದೇಶಗಳಿಂದಲೇ ಬರುತ್ತವೆ.

ವೈದ್ಯಕೀಯ ಕ್ಷೇತ್ರದಲ್ಲಿಯೂ, ಯೂನಿಟ್‌ಗಳನ್ನು ಆಮದು ಮಾಡಿಕೊಳ್ಳಲಾಗುತ್ತದೆ. ಸೌರ ಫಲಕಗಳು ಸಹ ವಿದೇಶಗಳಿಂದ ಬರುತ್ತವೆ. ಈ ಎಲ್ಲಾ ಸನ್ನಿವೇಶಗಳ ಕಾರಣದಿಂದ ಆಮದು ಹೆಚ್ಚುತ್ತಿದೆ ಮತ್ತು ವ್ಯಾಪಾರ ಕೊರತೆ ಬೆಳೆಯುತ್ತಿದೆ.

ಭಾರತದ ಆರ್ಥಿಕತೆ ಕೆಟ್ಟ ಸ್ಥಿತಿಯಲ್ಲಿ ಇರುವುದರಿಂದಲೇ ಈ ಪರಿಸ್ಥಿತಿ ಉದ್ಭವಿಸಿದೆ. ನಮ್ಮ ಆರ್ಥಿಕತೆ ಬಲಿಷ್ಠವಾಗಿದ್ದರೆ ಮತ್ತು ಹೂಡಿಕೆದಾರರು ಬೇರೆಡೆ ಹಣವನ್ನು ಹೂಡಿಕೆ ಮಾಡುವುದರಿಂದ ದೊಡ್ಡ ಲಾಭ ಸಿಗುತ್ತದೆ ಎಂದು ನಂಬಿದ್ದರೆ, ಅವರು ಚಿನ್ನ ಮತ್ತು ಬೆಳ್ಳಿಯಲ್ಲಿ ಹೂಡಿಕೆ ಮಾಡುತ್ತಿರಲಿಲ್ಲ.

ಹೆಚ್ಚಿನ ಬೇಡಿಕೆಗೆ ಪೂರೈಕೆ ಹೊಂದಿಕೆಯಾಗುವಂತಿದ್ದರೆ ರೂಪಾಯಿ ಮೌಲ್ಯ ಕುಸಿಯುತ್ತಿರಲಿಲ್ಲ.

ಇಲ್ಲಿ ನಿರುದ್ಯೋಗದ ದೊಡ್ಡ ಸಮಸ್ಯೆ ಇದೆ. ಜನರು ಗಳಿಸಲು ಸಾಧ್ಯವಾಗುತ್ತಿಲ್ಲ. ಹಾಗಾಗಿ, ಸರಕು ಮತ್ತು ಸೇವೆಗಳನ್ನು ಭಾರತದಲ್ಲಿ ಅಥವಾ ವಿದೇಶಗಳಲ್ಲಿ ಮಾರಾಟ ಮಾಡುವುದಿಲ್ಲ.

ಆರ್ಥಿಕ ಬಿಕ್ಕಟ್ಟಿನಿಂದಾಗಿ ರೂಪಾಯಿ ದುರ್ಬಲಗೊಳ್ಳುತ್ತಿದೆ.

ವಿಪರ್ಯಾಸ ಏನೆಂದರೆ, ಇಲ್ಲಿ ಇಂತಹ ಬಿಕ್ಕಟ್ಟಿದ್ದರೂ, ದೇಶದ ಆರ್ಥಿಕತೆ ದುರ್ಬಲವಾಗಿದ್ದರೂ ಮತ್ತು ಈ ತಿಂಗಳು ದಾಖಲೆಯ ಆಮದುಗಳ ಹೊರತಾಗಿಯೂ, ಎನ್‌ಡಿಎ ಮತ್ತೆ ಗೆದ್ದಿದೆ.

ಈ ಸರಕಾರವನ್ನು ನಡೆಸುತ್ತಿರುವ ನಾಯಕರ ಪಕ್ಷ ಮತ್ತೆ ಮತ್ತೆ ಚುನಾವಣೆಗಳನ್ನು ಗೆಲ್ಲುತ್ತಿದೆ. ಏಕೆಂದರೆ, ಎಲ್ಲವನ್ನೂ ವ್ಯವಸ್ಥಿತವಾಗಿ ನಿರ್ವಹಿಸಲಾಗುತ್ತಿದೆ.

ಭಾರತದ ಪ್ರಜಾಪ್ರಭುತ್ವವನ್ನು ‘ನಿರ್ವಹಿಸಲಾಗುತ್ತಿರುವ ಪ್ರಜಾಪ್ರಭುತ್ವ’ ಎಂದು ಚುನಾವಣಾ ತಜ್ಞರು ಹೇಳತೊಡಗಿದ್ದಾರೆ.

ಚುನಾವಣಾ ಆಯೋಗವನ್ನು ನಿರ್ವಹಿಸಲಾಗಿದೆ, ಈ.ಡಿ. ಮತ್ತು ಸಿಬಿಐ ಅನ್ನು ಸರಕಾರ ತನ್ನ ಮುಷ್ಠಿಯಲ್ಲೇ ಇಟ್ಟುಕೊಂಡಿದೆ. ಆಡಳಿತ ಪಕ್ಷ ಚುನಾವಣೆಗೆ ಮೊದಲು ಏನು ಬೇಕಾದರೂ ಮಾಡಬಹುದು.

ಹೀಗಿರುವಾಗ ಏನಾಗುತ್ತದೆ? ಸರಕಾರ ಏನೂ ಕೆಲಸ ಮಾಡದಿದ್ದರೂ, ಅದು ಚುನಾವಣೆಗಳನ್ನು ಗೆಲ್ಲುತ್ತಲೇ ಇರುತ್ತದೆ.

ಅವರು ಸಂಭ್ರಮಿಸುತ್ತಲೇ ಇರುತ್ತಾರೆ.

ದೇಶದ ಆರ್ಥಿಕತೆ ನೆಲ ಕಚ್ಚುತ್ತಿರುವ ಕಟು ಸತ್ಯ ಈ ರಾಜಕೀಯದ ಗದ್ದಲದಲ್ಲಿ ಮುಳುಗಿರುವ ಜನರಿಗೆ ಗೊತ್ತಾಗುವುದೇ ಇಲ್ಲ.

ಕಡೆಗೂ ಅದರೆಲ್ಲ ಭಾರವನ್ನು ಹೊರಬೆಕಾಗಿರುವವರೂ ಜನರೇ ಆಗಿದ್ದಾರೆ ಎಂಬುದು ದುಃಖದ ಸಂಗತಿ.

share
ಎನ್. ಕೇಶವ್
ಎನ್. ಕೇಶವ್
Next Story
X