Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ರ್‍ಯಾಂಕ್‌ಗಳ ಭರಾಟೆಯಲ್ಲಿ...

ರ್‍ಯಾಂಕ್‌ಗಳ ಭರಾಟೆಯಲ್ಲಿ ಫೇಲಾಗುತ್ತಿರುವ ಶಿಕ್ಷಣ ವ್ಯವಸ್ಥೆ

ತುಫೈಲ್ ಮುಹಮ್ಮದ್ತುಫೈಲ್ ಮುಹಮ್ಮದ್23 May 2025 9:45 AM IST
share
ರ್‍ಯಾಂಕ್‌ಗಳ ಭರಾಟೆಯಲ್ಲಿ ಫೇಲಾಗುತ್ತಿರುವ ಶಿಕ್ಷಣ ವ್ಯವಸ್ಥೆ
ಔಪಚಾರಿಕ ಶಿಕ್ಷಣ ವ್ಯವಸ್ಥೆ ಮಕ್ಕಳ ಮೇಲೆ ಹೇರುವ ವಿಪರೀತ ಒತ್ತಡ ಮತ್ತು ಪೋಷಕರಲ್ಲಿ ಹುಟ್ಟಿಸುವ ನಿರೀಕ್ಷೆಯ ಭಾರದ ಬಗ್ಗೆ ಎಲ್ಲರೂ ಮಾತನಾಡುತ್ತಾರೆ. ಆದರೆ ಪರೀಕ್ಷೆಗಳ ಅಂಕಗಳೇ ಪ್ರತಿಭೆಯನ್ನು ಅಳೆಯುವ ಏಕೈಕ ಮಾನದಂಡವೂ ಸಾಮಾಜಿಕ ಸ್ವೀಕಾರದ ಅಳತೆಗೋಲೂ ಆಗಿರುವ ಇಂದಿನ ಸನ್ನಿವೇಶದಲ್ಲಿ ವಿದ್ಯಾರ್ಥಿಗಳಾಗಲೀ ಪೋಷಕರಾಗಲೀ ‘ಗುಂಪಿನಲ್ಲಿ ಗೋವಿಂದ’ ಆಗುವ ಸಾಧ್ಯತೆಯೇ ಹೆಚ್ಚು. ಮಾರುಕಟ್ಟೆ ಕೇಂದ್ರಿತ ಶಿಕ್ಷಣ, ಪಠ್ಯಕ್ರಮದ ಭರಾಟೆಯಲ್ಲಿ ಶಾಲೆಗಳು ಕಲಿಕೆ, ನಲಿಕೆಯ ಕೇಂದ್ರಗಳಾಗುವ ಬದಲು ಮಾರ್ಕುಗಳನ್ನು ಉತ್ಪಾದಿಸುವ ಕಾರ್ಖಾನೆಗಳಾಗಿಯೂ ಕಾಲೇಜುಗಳು ವೃತ್ತಿಪರರನ್ನು ತಯಾರಿಸುವ ವರ್ಕ್‌ಶಾಪ್‌ಗಳಾಗಿಯೂ ಮಾರ್ಪಟ್ಟಿವೆ. ಹೀಗಿರುವಾಗ ವಿದ್ಯಾರ್ಥಿಗಳ ಸರ್ವಾಂಗೀಣ ವಿಕಾಸಕ್ಕೆ ಪೂರಕವಾದ ಮಗು ಕೇಂದ್ರಿತ ಶಿಕ್ಷಣ ಎಂಬುದು ಬರೇ ಒಂದು ಆದರ್ಶದ ಮಾತಾಗಿಯೇ ಉಳಿಯುವ ಸಾಧ್ಯತೆ ಹೆಚ್ಚು.

ಬೇಡಿಕೆ ಮತ್ತು ಪೂರೈಕೆ ಎಂಬುದು ಮಾರುಕಟ್ಟೆ ಆರ್ಥಿಕತೆಯ ಮೂಲ ಮಂತ್ರವಷ್ಟೆ ಅಲ್ಲ, ಆಧುನಿಕ ಬದುಕಿನ ಕಟುವಾಸ್ತವವೂ ಹೌದು. ನಮ್ಮ ಶಿಕ್ಷಣ ರಂಗವೂ ಇದಕ್ಕೆ ಹೊರತಾಗಿಲ್ಲ. ಯಾವ್ಯಾವ ಕೌಶಲಗಳಿಗೆ ಮಾರುಕಟ್ಟೆಯಿದೆಯೋ ಅದರ ಆಧಾರದಲ್ಲಿ ಆಯಾಕಾಲದ ಕೋರ್ಸ್‌ಗಳ ಬೇಡಿಕೆ ನಿರ್ಧಾರವಾಗುತ್ತದೆ. ತೊಂಭತ್ತರ ದಶಕದ ಉತ್ತರಾರ್ಧ ಮತ್ತು 2000ದ ಆರಂಭದಲ್ಲಿ ಕಂಪ್ಯೂಟರ್ ಸೈನ್ಸ್‌ಗೆ ಬೇಡಿಕೆ ತಾರಕಕ್ಕೇರಿದ ಕಾರಣ, ಆ ಶಾಖೆಯನ್ನು ಆಯ್ಕೆ ಮಾಡಿಕೊಂಡ ಇಂಜಿನಿಯರ್‌ಗಳು ವೈದ್ಯಕೀಯ ವಿದ್ಯಾರ್ಥಿಗಳಿಗಿಂತಲೂ ಹೆಚ್ಚು ‘ಬೆಲೆಬಾಳು’ತ್ತಿದ್ದರು. ಆಗಷ್ಟೇ ‘ಸಿಲಿಕಾನ್ ವ್ಯಾಲಿ’ ಎಂಬ ಬಿರುದು ಪಡೆದಿದ್ದ ಬೆಂಗಳೂರಿನಂತಹ ನಗರಗಳತ್ತ ಭಾರೀ ಸಂಖ್ಯೆಯಲ್ಲಿ ಕಂಪ್ಯೂಟರ್ ಇಂಜಿನಿಯರಿಂಗ್ ಆಥವಾ ಆಪ್ಟೆಕ್, ಎನ್‌ಐಐಟಿ ಮುಂತಾದ ಸಂಸ್ಥೆಗಳಲ್ಲಿ ಕೋರ್ಸ್ ಮುಗಿಸಿದ ಯುವಕರು ವಲಸೆ ಬಂದಿದ್ದರು. ಆದರೆ ಡಾಟ್‌ಕಾಮ್ ಕ್ರಾಶ್ ಬಳಿಕ ಇದ್ದಕ್ಕಿದ್ದಂತೆ ಕಂಪ್ಯೂಟರ್‌ಮತ್ತು ತಂತ್ರಾಂಶ ತಜ್ಞರಿಗೆ ಬೇಡಿಕೆ ಕಡಿಮೆಯಾಯಿತು. ಎಲ್ಲಿಯವರೆಗೆಂದರೆ, ಪದವಿ ಮುಗಿಸಿ ಬಂದ ಕಂಪ್ಯೂಟರ್ ಇಂಜಿನಿಯರ್‌ಗಳು ಬೆಂಗಳೂರಿನ ಎಂ.ಜಿ. ರಸ್ತೆಯಲ್ಲಿ ಡಿಕ್ಷ್‌ನರಿ ಮಾರುವುದೋ ಅಥವಾ ಇನ್ನಾವುದೋ ವೃತ್ತಿಯಲ್ಲಿ ತೊಡಗುವುದು ಅಂದಿನ ದಿನಗಳಲ್ಲಿ ಸಾಮಾನ್ಯ ದೃಶ್ಯವಾಗಿ ಬಿಟ್ಟಿತ್ತು.

ಶಿಕ್ಷಣ ಕ್ಷೇತ್ರವು ಸಂಪೂರ್ಣವಾಗಿ ಮಾರುಕಟ್ಟೆಯ ಬೇಡಿಕೆ-ಪೂರೈಕೆ ಸೂತ್ರದ ಬಂದಿಯಾಗದಂತೆ ನೋಡಿಕೊಂಡು, ಅದನ್ನು ಸಮಾಜದ ಸರ್ವಾಂಗೀಣ ವಿಕಾಸಕ್ಕೆ ಪೂರಕವಾದ ಪರಿಕರವನ್ನಾಗಿ ರೂಪಿಸಬೇಕಾದುದು ಯಾವುದೇ ಜವಾಬ್ದಾರಿಯುತ ಸರಕಾರದ ಮತ್ತು ಆಡಳಿತಾಂಗದ ಪ್ರಾಥಮಿಕ ಕರ್ತವ್ಯ. ಈ ಕಾರಣಕ್ಕಾಗಿಯೇ 1968ರಿಂದ ನಮ್ಮಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ಬಂದಿದ್ದು ಕಾಲಾನುಕ್ರಮದಲ್ಲಿ ಆಯಾ ಸಂದರ್ಭದ ಸ್ಥಿತಿಗತಿಗಳಿಗೆ ಅನುಸಾರವಾಗಿ ಅದು ಪರಿಷ್ಕರಣೆಗೊಳ್ಳುತ್ತಾ ಬಂದಿದೆ. ಸದ್ಯ ಜಾರಿಯಲ್ಲಿರುವ ನೀತಿಯು ಶಾಲಾ ಶಿಕ್ಷಣವನ್ನು 3-18 ವರ್ಷ ವಯಸ್ಸಿನ ಮಕ್ಕಳಿಗೆ 5+3+3+4 ಮಾದರಿಯಲ್ಲಿ ವಿಂಗಡಿಸಿದ್ದು, ವಿದ್ಯಾರ್ಥಿಗಳ ಆರಂಭಿಕ ಕಲಿಕೆಯ ಅಭಿವೃದ್ಧಿಗೆ ಒತ್ತು ನೀಡಿದೆ. ಮಾತೃಭಾಷೆಯಲ್ಲಿ ಶಿಕ್ಷಣ, ಬಹುಶಿಸ್ತೀಯ ಕಲಿಕೆ ಮತ್ತು ಶಿಕ್ಷಕರ ತರಬೇತಿಗೆ ಆದ್ಯತೆ ಈ ನೀತಿಯ ಕೆಲವು ಮುಖ್ಯಾಂಶಗಳು. ಆದರೆ ಇವೆಲ್ಲವೂ ಎಷ್ಟರ ಮಟ್ಟಿಗೆ ಅನುಷ್ಠಾನಕ್ಕೆ ಬರುತ್ತವೆ ಮತ್ತು ಮಾರುಕಟ್ಟೆ ಶಕ್ತಿಗಳ, ಸರ್ವಾಂತರ್ಯಾಮಿಯಾಗುತ್ತಿರುವ ವಾಣಿಜ್ಯ ಮತ್ತು ರಾಜಕೀಯ ಹಿತಾಸಕ್ತಿಗಳ ಹಿಡಿತದಿಂದ ಶಿಕ್ಷಣ ಕ್ಷೇತ್ರ ಎಷ್ಟರ ಮಟ್ಟಿಗೆ ಮುಕ್ತವಾಗುತ್ತದೆ ಎಂಬುದನ್ನು ಕಾದುನೋಡಬೇಕಿದೆ.

ಈಗ ಜಾರಿಯಲ್ಲಿರುವ ಹೊಸ ಶಿಕ್ಷಣ ನೀತಿಯನ್ವಯ 6ನೇ ತರಗತಿಯಿಂದ ವೃತ್ತಿಪರ ಶಿಕ್ಷಣವನ್ನು ಪರಿಚಯಿಸಲಾಗುತ್ತಿದ್ದು ಎಐ (ಕೃತಕ ಬುದ್ಧಿಮತ್ತೆ), ಮೆಷಿನ್ ಲರ್ನಿಂಗ್ ಮತ್ತು ಡೇಟಾ ಸೈನ್ಸ್‌ನಂತಹ ತಂತ್ರಜ್ಞಾನ ಕೋರ್ಸ್‌ಗಳಿಗೆ ಒತ್ತು ನೀಡಲಾಗಿದೆ. 2030ರ ವೇಳೆಗೆ ಜಗತ್ತಿನಾದ್ಯಂತ ಎಂಟುನೂರು ಮಿಲಿಯ ನೌಕರಿಗಳನ್ನು ಎಐ ಮತ್ತು ಅಟೊಮೇಷನ್ ಬಲಿತೆಗೆದುಕೊಳ್ಳಲಿದೆ ಎನ್ನುತ್ತದೆ ಪ್ರಸಿದ್ಧ ಕನ್ಸಲ್ಟಿಂಗ್ ಕಂಪೆನಿಯಾದ ಮೆಕೆನ್ಸಿಯ ಇತ್ತೀಚಿನ ವರದಿ. ಈ ಹಿನ್ನೆಲೆಯಲ್ಲಿ ಭಾರತವೂ ಸೇರಿದಂತೆ ಜಗತ್ತಿನ ನಾನಾ ದೇಶಗಳಲ್ಲಿ ಹೊಸ ತಂತ್ರಜ್ಞಾನ ಕೋರ್ಸ್‌ಗಳನ್ನು ಶಿಕ್ಷಣ ಸಂಸ್ಥೆಗಳು ಪರಿಚಯಿಸುತ್ತಿದ್ದು ಎಐ ಗುಂಗು ದಿನೇದಿನೇ ಹೆಚ್ಚುತ್ತಿದೆ. ಇದನ್ನೇ ಬಂಡವಾಳ ಮಾಡಿಕೊಂಡು ಪೋಷಕರು ಮತ್ತು ವಿದ್ಯಾರ್ಥಿಗಳ ಭಾವನೆಗಳ ಜತೆ ಚೆಲ್ಲಾಟವಾಡಲು ಮಾರುಕಟ್ಟೆ ಶಕ್ತಿಗಳಿಗೆ ವಿಪುಲ ಅವಕಾಶ ಒದಗಿದಂತಾಗಿದೆ.

ಈ ಎಲ್ಲ ಬೆಳವಣಿಗೆಗಳ ಮಧ್ಯೆ ಸೃಜನಶೀಲತೆ, ವಿಮರ್ಶಾತ್ಮಕ ಚಿಂತನೆ ಮತ್ತು ಮೂಲಭೂತ ಸಂಶೋಧನೆಗೆ ಒತ್ತು ನೀಡುವ ಕಲಾ ಪ್ರಕಾರಗಳು ಮತ್ತು ಶುದ್ಧ ವಿಜ್ಞಾನವು ನೇಪಥ್ಯಕ್ಕೆ ಸರಿಯುತ್ತಿರುವುದು ಆತಂಕದ ಸಂಗತಿ. ಮಕ್ಕಳಿಗೆ ವಿಜ್ಞಾನ ಮತ್ತು ಮಾನವಿಕಗಳನ್ನು ಬೋಧಿಸಲು ಒಳ್ಳೆಯ ಅಧ್ಯಾಪಕರು ಸಿಗುತ್ತಿಲ್ಲ ಎಂಬ ಕೊರಗು ಶಿಕ್ಷಣ ಕ್ಷೇತ್ರದ ಪರಿಣತರನ್ನು ಕಾಡುತ್ತಿದೆ. ಜತೆಗೆ ಈ ಕ್ಷೇತ್ರಗಳ ಬಗ್ಗೆ ಆಸಕ್ತಿ ತೋರುವ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗುತ್ತಿದ್ದು, ಎಸೆಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಗಳಲ್ಲಿ ಗರಿಷ್ಠ ಅಂಕಪಡೆದವರೆಲ್ಲರೂ ವೈದ್ಯಕೀಯ, ಇಂಜಿನಿಯರಿಂಗ್ ಬಗ್ಗೆ ಒಲವು ತೋರುತ್ತಿದ್ದಾರೆ. ಈ ಟ್ರೆಂಡ್‌ನ ಪರಿಣಾಮವಾಗಿ ಶುದ್ಧ ವಿಜ್ಞಾನ, ಕಲಾಪ್ರಕಾರಗಳೆಲ್ಲವೂ ‘ಎಲ್ಲೂ ಸಲ್ಲದವರ’ ಆಯ್ಕೆಗಳಾಗಿ ಮಾರ್ಪಟ್ಟಿವೆ ಎಂಬುದು ಶಿಕ್ಷಣ ತಜ್ಞರ ಆತಂಕ.

ಹಾಗೆ ನೋಡಿದರೆ, ಇದು ಸಮಾಜ ವಿಜ್ಞಾನಿಗಳು, ಶಿಕ್ಷಣ ತಜ್ಞರು ಮಾತ್ರವಲ್ಲ, ಒಟ್ಟು ಸಮಾಜವೇ ಚರ್ಚೆಗೆ ಎತ್ತಿಕೊಳ್ಳಬೇಕಾದ ಅತ್ಯಂತ ಗಂಭೀರ ಪ್ರಶ್ನೆ. ಒಳ್ಳೆಯ ವೈದ್ಯರು, ಇಂಜಿನಿಯರ್‌ಗಳು ನಮಗೆ ಮುಖ್ಯ ಎಂಬುದರಲ್ಲಿ ಎರಡು ಮಾತಿಲ್ಲ. ಇಂದು ಕೂಡಾ ಭಾರತದಲ್ಲಿ ಜನಸಂಖ್ಯೆಗೆ ಹೋಲಿಸಿದರೆ ವೈದ್ಯರ ಅನುಪಾತವು 1:811 ಇದ್ದು, ಬ್ರೆಝಿಲ್, ಚೀನಾ ಮತ್ತು ರಶ್ಯ ಈ ಪಟ್ಟಿಯಲ್ಲಿ ನಮಗಿಂತ ಉತ್ತಮ ಸ್ಥಿತಿಯಲ್ಲಿವೆ. ಅಲ್ಲದೆ ಭಾರತವು ತನ್ನ ನಂಬರನ್ನು ಉತ್ತಮಪಡಿಸಲು ಆಯುಷ್ ಅಥವಾ ಪರ್ಯಾಯ ವೈದ್ಯಕೀಯ ಚಿಕಿತ್ಸಕರನ್ನೂ ಲೆಕ್ಕಕ್ಕೆ ಸೇರಿಸಿದೆ ಎನ್ನುವುದು ವಿಮರ್ಶಕರ ವಾದ. ಏನೇ ಇದ್ದರೂ, ಒಂದು ದೇಶದ ಆರೋಗ್ಯ ವ್ಯವಸ್ಥೆಯಂತೆಯೇ ಅದರ ಸರ್ವಾಂಗೀಣ ವಿಕಾಸಕ್ಕೆ, ಸರ್ವೋದಯದ ಸಾಕಾರಕ್ಕೆ ಮತ್ತು ಸಮಸಮಾಜದ ನಿರ್ಮಾಣಕ್ಕೆ ಒಳ್ಳೆಯ ಶಿಕ್ಷಕರು, ರಾಜಕಾರಣಿಗಳು, ಒಳ್ಳೆಯ ಅಧಿಕಾರಿಗಳು, ಸಮಾಜ ಶಾಸ್ತ್ರಜ್ಞರು, ಭಾಷಾ ತಜ್ಞರು, ಕಲಾವಿದರು, ಲೇಖಕರು, ವಿಜ್ಞಾನಿಗಳು, ಸಂಶೋಧಕರು, ಸಂವಹನಕಾರರು, ವಕೀಲರು, ರಾಜನೀತಿಜ್ಞರು ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ನೈತಿಕ ಪ್ರಜ್ಞೆಯುಳ್ಳ, ಸಮಾಜಮುಖಿಯಾಗಿ ಚಿಂತಿಸಬಲ್ಲ ಪ್ರಜೆಗಳ ಅಗತ್ಯವಿದೆ. ಆದ್ದರಿಂದ ನಮ್ಮ ಟಾಪರ್‌ಗಳು ತಮ್ಮ ಆಯ್ಕೆಗಳ ಪಟ್ಟಿಯಿಂದ ಮಾನವಿಕಗಳನ್ನೂ ಶುದ್ಧವಿಜ್ಞಾನವನ್ನೂ ಹೊರಗಿಡುತ್ತಿರುವುದು ಸಮಾಜದ ಭವಿಷ್ಯದ ದೃಷ್ಟಿಯಿಂದ ಒಳ್ಳೆಯ ಬೆಳವಣಿಗೆಯಲ್ಲ.

ಈಗಾಗಲೇ ಉದ್ಯೋಗ ಮಾರುಕಟ್ಟೆ ಪಂಡಿತರು ಯಾವ್ಯಾವ ನೌಕರಿಗಳನ್ನು ಅಟೊಮೇಷನ್ ಸುಲಭದಲ್ಲೇ ನುಂಗಬಹುದೆಂಬ ಪಟ್ಟಿಯನ್ನು ಮಾಡಿದ್ದಾರೆ. ಅವರ ಪ್ರಕಾರ, ಚಾಟ್‌ಜಿಪಿಟಿ ಮತ್ತು ಗ್ರೊಕ್‌ನ ಈ ಕಾಲದಲ್ಲೂ ಲೇಖಕರು, ಕಾದಂಬರಿಕಾರರು ಮತ್ತು ಸ್ಕ್ರೀನ್‌ರೈಟರ್‌ಗಳಿಗೆ ಯಾವುದೇ ಅಪಾಯವಿಲ್ಲ! ವಿನ್ಯಾಸಕಾರರು, ಕಲಾ ನಿರ್ದೇಶಕರು, ಮಾರ್ಕೆಟಿಂಗ್ ಸ್ಟ್ರಟಜಿಸ್ಟ್, ಇನೊವೇಶನ್‌ಕನ್ಸಲ್ಟೆಂಟ್ ಇತ್ಯಾದಿ ಹುದ್ದೆಗಳಿಗೆ ಮುಂದೆಯೂ ಅವಕಾಶಗಳು ಹೇರಳವಾಗಿ ಸಿಗಲಿವೆ. ಆದರೆ, ಮುಖ್ಯವಾಗಿ ನಾವು ಗಮನಿಸಬೇಕಾದ ಅಂಶವೆಂದರೆ, ಮನುಷ್ಯನ ಸೃಜನಶೀಲತೆ, ಭಾವನಾತ್ಮಕ ಬುದ್ಧಿಮತ್ತೆ, ವಿಮರ್ಶಾತ್ಮಕ ಚಿಂತನೆ ಮತ್ತು ತುರ್ತುಸಂದರ್ಭಗಳಲ್ಲಿ ಹೊರಹೊಮ್ಮುವ ಸಂಕೀರ್ಣವಾದ ಮನುಷ್ಯಸಹಜ ಕೌಶಲಗಳನ್ನು ಎಐ ಯಾವ ಕಾರಣಕ್ಕೂ ತುಂಬಿಸಲು ಸಾಧ್ಯವಿಲ್ಲ. ಆದ್ದರಿಂದಲೇ ಆರೋಗ್ಯಸೇವೆ, ಮನುಷ್ಯ-ಕೇಂದ್ರಿತ ಉದ್ಯೋಗಗಳಾದ ವೈದ್ಯ ವೃತ್ತಿ, ಮನಶಾಸ್ತ್ರಜ್ಞರು, ಚಿಕಿತ್ಸಾತಜ್ಞರು, ದಾದಿಯರು ಮತ್ತು ಸಾಮಾಜಿಕ ಕಾರ್ಯಕರ್ತರ ಅಗತ್ಯ ಅಬಾಧಿತವಾಗಿದೆ. ಶಿಕ್ಷಣ ಮತ್ತು ತರಬೇತಿಯ ಕ್ಷೇತ್ರದಲ್ಲಿ ಎಐ ಮತ್ತು ಯಂತ್ರಗಳು ಸಾಕಷ್ಟು ಮಾರ್ಪಾಟುಗಳನ್ನು ಮಾಡುವ ಸಾಧ್ಯತೆಯಿದ್ದರೂ ಶಿಕ್ಷಕರು ಮತ್ತು ಬೋಧಕರ ಸ್ಥಾನವನ್ನು ಸಾರಾಸಗಟಾಗಿ ಅವು ತುಂಬುವುದು ಕಷ್ಟ.

ಇತ್ತೀಚೆಗೆ ಎಸೆಸೆಲ್ಸಿಯ ಸಾಧಕಿಯೊಬ್ಬಳು ‘‘ನಾನು ಮುಂದೆ ವಿಶ್ವಸಂಸ್ಥೆಗೆ ಹೋಗಿ ಕೆಲಸ ಮಾಡಬೇಕೆಂದಿರುವೆ’’ ಎಂದು ಸಂದರ್ಶಕರೊಬ್ಬರಿಗೆ ಉತ್ತರಿಸಿದ್ದಳು. ಹೀಗೆ ಕೆಲವೇ ಕೆಲವು ಮಕ್ಕಳಾದರೂ ರೂಢಿಗತ ಮಾದರಿಗಳನ್ನು ಮುರಿದು ತಮ್ಮ ಕಲಿಕೆ ಮತ್ತು ವೃತ್ತಿಪರ ಭವಿಷ್ಯದ ಬಗ್ಗೆ ಹೊಸದಾಗಿ ಯೋಚಿಸುತ್ತಿದ್ದಾರಲ್ಲಾ ಎನ್ನುವುದು ಸಮಾಧಾನದ ವಿಷಯ. ದೇಶದ ಬೇರೆ ಭಾಗಗಳಿಗೆ ಹೋಲಿಸಿದರೆ, ಕರ್ನಾಟಕ, ಅದರಲ್ಲೂ ಕರಾವಳಿ ಜಿಲ್ಲೆಗಳ ಜನರು ಸರಕಾರಿ ಉದ್ಯೋಗಗಳ ನೇಮಕಾತಿಗೆ ನಡೆಯುವ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಆಸಕ್ತಿ ತೋರುವುದು ಕಡಿಮೆ ಎಂದು ಇತ್ತೀಚೆಗೆ ಕರ್ನಾಟಕದ ಹಿರಿಯ ಐಪಿಎಸ್ ಅಧಿಕಾರಿಯೊಬ್ಬರು ಕಳವಳ ವ್ಯಕ್ತಪಡಿಸಿದ್ದರು. ಪ್ರಾಥಮಿಕ ಮಟ್ಟದಲ್ಲೇ ಸೂಕ್ತ ಶಿಕ್ಷಣ ಮತ್ತು ಉದ್ಯೋಗ ಮಾರ್ಗದರ್ಶನದ ಕೊರತೆಯೂ ಇದಕ್ಕೆ ಕಾರಣವಿರಬಹುದೇನೋ. ಅದೇ ವೇಳೆ ಶುದ್ಧ ವಿಜ್ಞಾನ ಶಾಖೆಗಳ ಅವಗಣನೆಯಿಂದ ಮೂಲಭೂತ ಸಂಶೋಧನೆಯ ಕ್ಷೇತ್ರದಲ್ಲಿ ಭಾರತ ಹಿಂದುಳಿಯುವಂತಾಗಿದೆ. ನಾವು ಕೋವಿಡ್-19 ವಿಪತ್ತಿನ ವೇಳೆ ಲಸಿಕೆ ಉತ್ಪಾದನೆಯಲ್ಲಿ ಜಗತ್ತಿನ ಫ್ಯಾಕ್ಟರಿಯಾಗಿ ಮಾರ್ಪಟ್ಟೆವೇ ಹೊರತು, ಮೂಲ ಸಂಶೋಧನೆಗೆ ಪಾಶ್ಚಿಮಾತ್ಯ ದೇಶಗಳನ್ನು ಅವಲಂಬಿಸಬೇಕಾಯಿತು. ಇದು ದೀರ್ಘಕಾಲೀನ ತಾಂತ್ರಿಕ ಪ್ರಗತಿಗೆ ದೊಡ್ಡ ಕಂಟಕ.

ವಿದ್ಯಾರ್ಥಿಗಳು ಇಂಜಿನಿಯರಿಂಗ್ ಅಥವಾ ವೈದ್ಯಕೀಯ ಕ್ಷೇತ್ರವನ್ನು ಆಯ್ಕೆ ಮಾಡುವ ಒತ್ತಡದಲ್ಲಿ ತಮ್ಮ ನಿಜವಾದ ಆಸಕ್ತಿಯನ್ನು ಕಡೆಗಣಿಸುತ್ತಾರೆ ಎಂಬುದು ವಿಶ್ಲೇಷಕರ ವಾದ. ಇದರಿಂದ ಮಾನಸಿಕ ಒತ್ತಡ, ಅತೃಪ್ತಿ ಮತ್ತು ವೃತ್ತಿಯಲ್ಲಿ ಪ್ರದರ್ಶನ ಮಟ್ಟ ಕುಸಿಯುತ್ತಿದೆ ಎಂಬ ಕಳವಳವೂ ವ್ಯಕ್ತವಾಗಿದೆ. ವೃತ್ತಿಪರ ಕೋರ್ಸ್‌ಗಳ ಮೇಲಿನ ಒತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಉದ್ಯೋಗ ಸೃಷ್ಟಿಯನ್ನು ಹೆಚ್ಚಿಸಿದರೂ, ಕಲಾ ಮತ್ತು ಶುದ್ಧ ವಿಜ್ಞಾನ ಕ್ಷೇತ್ರಗಳಲ್ಲಿ ಉದ್ಯೋಗಾವಕಾಶಗಳು ಕಡಿಮೆಯಾಗಿವೆ. ರಾಷ್ಟ್ರೀಯ ಶಿಕ್ಷಣ ನೀತಿ 2020ರಲ್ಲಿ ಕಲೆ, ವಾಣಿಜ್ಯ ಮತ್ತು ವಿಜ್ಞಾನದಂತಹ ವಿಷಯಗಳ ಆಯ್ಕೆಯಲ್ಲಿ ಸಡಿಲಗೊಳಿಸಿ ಬಹುಶಿಸ್ತೀಯ ಅಧ್ಯಯನಕ್ಕೆ ಅವಕಾಶ ಕಲ್ಪಿಸಿರುವುದು ಒಂದು ಆರೋಗ್ಯದಾಯಕ ಬದಲಾವಣೆ. ಆದರೆ, ಸಮಾಜದ ಮನೋಭಾವ ಬದಲಾಯಿಸದ ಹೊರತು ಶಿಕ್ಷಣ ಮತ್ತು ವೃತ್ತಿಪರ ಕಲಿಕೆಯ ರಂಗದಲ್ಲಿ ಆಗುತ್ತಿರುವ ಅಸಂತುಲಿತ ಬೆಳವಣಿಗೆಯನ್ನು ತಡೆಯುವುದು ಅಸಾಧ್ಯ.

ಔಪಚಾರಿಕ ಶಿಕ್ಷಣ ವ್ಯವಸ್ಥೆ ಮಕ್ಕಳ ಮೇಲೆ ಹೇರುವ ವಿಪರೀತ ಒತ್ತಡ ಮತ್ತು ಪೋಷಕರಲ್ಲಿ ಹುಟ್ಟಿಸುವ ನಿರೀಕ್ಷೆಯ ಭಾರದ ಬಗ್ಗೆ ಎಲ್ಲರೂ ಮಾತನಾಡುತ್ತಾರೆ. ಆದರೆ ಪರೀಕ್ಷೆಗಳ ಅಂಕಗಳೇ ಪ್ರತಿಭೆಯನ್ನು ಅಳೆಯುವ ಏಕೈಕ ಮಾನದಂಡವೂ ಸಾಮಾಜಿಕ ಸ್ವೀಕಾರದ ಅಳತೆಗೋಲೂ ಆಗಿರುವ ಇಂದಿನ ಸನ್ನಿವೇಶದಲ್ಲಿ ವಿದ್ಯಾರ್ಥಿಗಳಾಗಲೀ ಪೋಷಕರಾಗಲೀ ‘ಗುಂಪಿನಲ್ಲಿ ಗೋವಿಂದ’ ಆಗುವ ಸಾಧ್ಯತೆಯೇ ಹೆಚ್ಚು. ಮಾರುಕಟ್ಟೆ ಕೇಂದ್ರಿತ ಶಿಕ್ಷಣ, ಪಠ್ಯಕ್ರಮದ ಭರಾಟೆಯಲ್ಲಿ ಶಾಲೆಗಳು ಕಲಿಕೆ, ನಲಿಕೆಯ ಕೇಂದ್ರಗಳಾಗುವ ಬದಲು ಮಾರ್ಕುಗಳನ್ನು ಉತ್ಪಾದಿಸುವ ಕಾರ್ಖಾನೆಗಳಾಗಿಯೂ ಕಾಲೇಜುಗಳು ವೃತ್ತಿಪರರನ್ನು ತಯಾರಿಸುವ ವರ್ಕ್‌ಶಾಪ್‌ಗಳಾಗಿಯೂ ಮಾರ್ಪಟ್ಟಿವೆ. ಹೀಗಿರುವಾಗ ವಿದ್ಯಾರ್ಥಿಗಳ ಸರ್ವಾಂಗೀಣ ವಿಕಾಸಕ್ಕೆ ಪೂರಕವಾದ ಮಗು ಕೇಂದ್ರಿತ ಶಿಕ್ಷಣ ಎಂಬುದು ಬರೇ ಒಂದು ಆದರ್ಶದ ಮಾತಾಗಿಯೇ ಉಳಿಯುವ ಸಾಧ್ಯತೆ ಹೆಚ್ಚು.

share
ತುಫೈಲ್ ಮುಹಮ್ಮದ್
ತುಫೈಲ್ ಮುಹಮ್ಮದ್
Next Story
X