Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಸರಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮ:...

ಸರಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮ: ಕರ್ನಾಟಕ ಮಾದರಿ

ಡಾ. ರವಿನಾರಾಯಣ ಚಕ್ರಕೋಡಿಡಾ. ರವಿನಾರಾಯಣ ಚಕ್ರಕೋಡಿ12 July 2025 3:28 PM IST
share
ಸರಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮ: ಕರ್ನಾಟಕ ಮಾದರಿ

ಸರಕಾರಿ ಶಾಲೆಯ ಮೂರನೇ ತರಗತಿಯ ಕನ್ನಡ ಮಾಧ್ಯಮ ವಿಭಾಗದಲ್ಲಿ (ಈ ಶಾಲೆಯಲ್ಲಿ ಇಂಗ್ಲಿಷ್ ಮಾಧ್ಯಮ ವಿಭಾಗವನ್ನೂ ಆರಂಭಿಸಿದ್ದರು) ಓದುತ್ತಿದ್ದ ಎಂಟು ವರ್ಷದ ವಿದ್ಯಾರ್ಥಿನಿಯೊಬ್ಬಳ ಮಾತನ್ನು ಇತ್ತೀಚೆಗೆ ಕೇಳಿದಾಗ ನನಗೆ ಆಶ್ಚರ್ಯವಾಯಿತು. ‘‘ನಾನು ಇಂಗ್ಲಿಷ್ ಮಾಧ್ಯಮ ವಿಭಾಗದಲ್ಲಿ ಓದಿದರೆ, ಕನ್ನಡ ಮತ್ತು ಇಂಗ್ಲಿಷ್ ಎರಡನ್ನೂ ಕಲಿಯಬಹುದಲ್ವಾ?’’. ಅಂದರೆ ಈ ಮಕ್ಕಳಿಗೆ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಇಂಗ್ಲಿಷ್ ಕಲಿಯುವ ಅವಕಾಶವಿಲ್ಲವೇ? ಇದ್ದರೂ ಅಲ್ಲಿ ಪರಿಣಾಮಕಾರಿಯಾಗಿ ಇಂಗ್ಲಿಷ್ ಭಾಷಾ ಬೋಧನೆ ನಡೆಯುತ್ತಿಲ್ಲವೆನ್ನುವುದು ವೇದ್ಯ. ಈ ಬಗ್ಗೆ ನಾವು ಗಂಭೀರವಾಗಿ ಯೋಚಿಸಬೇಕಾಗಿದೆ.

2019-20ನೇ ಶೈಕ್ಷಣಿಕ ವರ್ಷದಲ್ಲಿ, ಪೋಷಕರ ನಿರೀಕ್ಷೆಗಳಿಗೆ ತಕ್ಕಂತೆ, ಸರಕಾರವು 1,100 ಸರಕಾರಿ ಶಾಲೆಗಳಲ್ಲಿ ಒಂದನೇ ತರಗತಿಯಿಂದ ಇಂಗ್ಲಿಷ್ ಮಾಧ್ಯಮ ವಿಭಾಗಗಳನ್ನು ಆರಂಭಿಸಿತು. ಆದರೆ, ಈ ಶೈಕ್ಷಣಿಕ ಕ್ರಮವು ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿಗೆ ಹಲವು ಸವಾಲುಗಳನ್ನು ತಂದಿತು. ಮಕ್ಕಳಿಗೆ ಇಂಗ್ಲಿಷ್‌ನಲ್ಲಿ ಪದಗಳು, ವಾಕ್ಯಗಳು, ಗೀತೆಗಳು, ಕವಿತೆಗಳು ಹೇಳಲು ಬರುತ್ತಿತ್ತು, ಆದರೆ ಅದರ ಅರ್ಥ ಗೊತ್ತಿರಲಿಲ್ಲ. ಪರಿಸರ ವಿಜ್ಞಾನದ ಪರಿಕಲ್ಪನೆಗಳು ತಿಳಿದಿರಲಿಲ್ಲ. ಗಣಿತದ ಪಾಠದಲ್ಲಿ ಪಠ್ಯಪುಸ್ತಕದ ಹೊರತಾದ ಸರಳ ಸಮಸ್ಯೆಗಳನ್ನು ಪರಿಹರಿಸಲಾಗುತ್ತಿರಲಿಲ್ಲ. ಇದು ಕಂಠಪಾಠದ ಕಲಿಕೆ ಮತ್ತು ಅರ್ಥವಿಲ್ಲದ ಅಭ್ಯಾಸವನ್ನು ತೋರಿಸುತ್ತಿತ್ತು. ಶಿಕ್ಷಕರು ತಾವೇ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಓದಿದ್ದು, ಇಂಗ್ಲಿಷ್‌ನಲ್ಲಿ ಪಾಠ ಮಾಡುವುದು ಅವರಿಗೇ ಸವಾಲಾಗಿತ್ತು.

ಈ ಎಲ್ಲ ಹಿನ್ನೆಲೆಗಳನ್ನು ಗಮನದಲ್ಲಿಟ್ಟು ಕೊಂಡು, 2020-21ನೇ ಶೈಕ್ಷಣಿಕ ವರ್ಷದಿಂದ ಸರಕಾರವು ಇಂಗ್ಲಿಷ್ ಮಾಧ್ಯಮ ವಿಭಾಗಗಳಲ್ಲಿ ದ್ವಿಭಾಷಾ ಮಾದರಿಯನ್ನು ಅಳವಡಿಸಿತು. ಈ ದ್ವಿಭಾಷಾ ಮಾದರಿ (bilingual model) ಪಠ್ಯಕ್ರಮದ ತರಗತಿಗಳಲ್ಲಿ ಕನ್ನಡ ಮತ್ತು ಇಂಗ್ಲಿಷ್ ಎರಡೂ ಭಾಷೆಗಳನ್ನು ಬಳಸಿ ಪಾಠ ಮಾಡಲಾಗುತ್ತಿದೆ.

ಇಂಗ್ಲಿಷ್ ಭಾಷೆಯಲ್ಲಿ ವಿಜ್ಞಾನ, ಗಣಿತ ಮತ್ತು ಕ್ಲಿಷ್ಟಕರ ಅಂಶಗಳನ್ನು ಕಲಿಯುವುದು ಸುಲಭದ ಮಾತಲ್ಲ. ಯುನೆಸ್ಕೋ (2003) ದ್ವಿಭಾಷಾ ಶಿಕ್ಷಣವನ್ನು ಸಮಾನತೆ ಮತ್ತು ಮಗುವಿನ ಸಮಗ್ರ ಬೆಳವಣಿಗೆಗಾಗಿ ಶಾಲಾ ಹಂತದಲ್ಲಿ ಶಿಫಾರಸು ಮಾಡಿದೆ. ಹಾಗಾಗಿ, ವಿಭಿನ್ನ ರಾಷ್ಟ್ರಗಳಲ್ಲಿ ಉಪಯೋಗಿಸುವ ದ್ವಿಭಾಷಾ ಮಾದರಿಯನ್ನು ಇಂಗ್ಲಿಷ್ ಮಾಧ್ಯಮಗಳಿರುವ ಸರಕಾರಿ ಶಾಲೆಗಳಲ್ಲಿ 2021ರಲ್ಲಿ ಅಳವಡಿಸಲಾಗಿದೆ. ಇಂಗ್ಲಿಷ್ ಮಾತ್ರ ಬಳಸಬೇಕೆಂಬ ನಿಯಮದಿಂದ ಉಳಿದ ಭಾಷೆಗಳನ್ನು ಕಡೆಗಣಿಸುವ ಅಪಾಯವಿರುವುದರಿಂದ, ವಿದ್ಯಾರ್ಥಿಗಳು ತಮ್ಮ ಮಾತೃಭಾಷೆಯಲ್ಲಿ ಮಾತನಾಡಲು, ಸಹಪಾಠಿಗಳೊಂದಿಗೆ ಸಂವಹನ ನಡೆಸಲು ಅವಕಾಶ ನೀಡಲಾಗಿದೆ.

ಈ ಆಂಗ್ಲ ಮಾಧ್ಯಮ ವಿಭಾಗಗಳಲ್ಲಿ ಕನ್ನಡವನ್ನು ಪ್ರಥಮ ಭಾಷೆಯಾಗಿ ಹಾಗೂ ಇಂಗ್ಲಿಷನ್ನು ದ್ವಿತೀಯ ಭಾಷೆಯಾಗಿಯೂ ಕಲಿಸಲಾಗುತ್ತದೆ. ಅಲ್ಲದೆ, ಗಣಿತ ಮತ್ತು ಪರಿಸರ ವಿಜ್ಞಾನ ಪಠ್ಯಪುಸ್ತಕಗಳನ್ನು ಕನ್ನಡ ಮತ್ತು ಇಂಗ್ಲಿಷ್ ಎರಡೂ ಭಾಷೆಗಳಲ್ಲಿ ಒದಗಿಸಲಾಗಿದೆ. ಈ ದ್ವಿಭಾಷಾ ಪಠ್ಯಪುಸ್ತಕಗಳು ವಿದ್ಯಾರ್ಥಿಗಳಿಗೆ ವಿಷಯಗಳನ್ನು ಅರ್ಥಮಾಡಿಕೊಳ್ಳಲು ಬಹುಮಟ್ಟಿಗೆ ಸಹಕಾರಿಯಾಗಿವೆ. ಶಿಕ್ಷಕರೂ ಕೂಡ ದ್ವಿಭಾಷಾ ಮಾದರಿಯ ಪಠ್ಯಕ್ರಮ, ಬೋಧನಾ ವಿಧಾನಗಳನ್ನು ಅನುಸರಿಸುತ್ತಾರೆ.

ದ್ವಿಭಾಷಾ ಪಠ್ಯಕ್ರಮದ ತತ್ವಗಳು

► ವಿದ್ಯಾರ್ಥಿಗಳ ಮಾತೃಭಾಷೆ ಬಳಸಿದರೆ ಕಲಿಕಾ ಪ್ರಕ್ರಿಯೆಯು ಸುಗಮವಾಗಿರುತ್ತದೆ.

► ಅವರು ತರಗತಿಯಲ್ಲಿ ಸಂತಸದಿಂದ ಮತ್ತು ಸ್ವಂತಿಕೆಯಿಂದ ಕಲಿಯತೊಡಗುತ್ತಾರೆ

► ತರಗತಿ ಪ್ರಕ್ರಿಯೆಯಲ್ಲಿ ಮಾತೃಭಾಷೆಯನ್ನು ಬಳಸಲು ಅವಕಾಶ ಕೊಟ್ಟರೆ ಮಕ್ಕಳ ಸಹಭಾಗಿತ್ವ ಹೆಚ್ಚಾಗುತ್ತದೆ.

► ದ್ವಿಭಾಷಾ ವಿಧಾನದ ಬೋಧನೆಯಿಂದ ಪಾಠದ ಅರ್ಥಗ್ರಹಣ ಹೆಚ್ಚು ಸಮರ್ಥವಾಗುತ್ತದೆ.

► ವಿದ್ಯಾರ್ಥಿಗಳು ತಮ್ಮ ಅನುಭವಗಳನ್ನು, ಅನಿಸಿಕೆಗಳನ್ನು ಭಯಮುಕ್ತ ವಾತಾವರಣದಲ್ಲಿ ಹಂಚಿಕೊಳ್ಳಬಹುದು.

► ಪಾಠಗಳನ್ನು ತಮ್ಮ ಜೀವನಾನುಭವಕ್ಕೆ ಹೋಲಿಸಿಕೊಂಡು ಕಲಿಯಬಹುದು.

► ದ್ವಿಭಾಷಾ ಬಳಕೆ ಪರ್ಯಾಯ ಆಲೋಚನೆ ಹಾಗೂ ಸೃಜನಾತ್ಮಕತೆಯನ್ನು ಬೆಳೆಸುತ್ತದೆ.

► ವಿದ್ಯಾರ್ಥಿಗಳು ಕುಟುಂಬ ಮತ್ತು ಸಮುದಾಯದಿಂದ ಪಡೆದ ‘Funds of Knowledge’ ಬಳಸುವುದಕ್ಕೆ ದ್ವಿಭಾಷಾ ಪದ್ಧತಿ ಅನುಕೂಲಕರವಾಗಿದೆ.

► ದ್ವಿಭಾಷಾ ಶೈಕ್ಷಣಿಕ ಪರಿಸರವು ಒಳಗೊಳ್ಳುವಿಕೆಯ ಹಾಗೂ ಪರಿಣಾಮಕಾರಿ ಶಾಲಾ ವಾತಾವರಣವನ್ನು ನಿರ್ಮಿಸಬಹುದು.

ಇಲ್ಲಿಯವರೆಗೆ 4,405 ಇಂಗ್ಲಿಷ್ ಮಾಧ್ಯಮ ವಿಭಾಗಗಳು ಆರಂಭವಾಗಿದ್ದು ಮತ್ತೆ 4,134 ವಿಭಾಗಗಳು ಈ ಶೈಕ್ಷಣಿಕ ವರ್ಷದಿಂದ ಸೇರ್ಪಡೆಗೊಳ್ಳಲಿವೆ. ರೀಜನಲ್ ಇನ್‌ಸ್ಟಿಟ್ಯೂಟ್ ಆಫ್ ಇಂಗ್ಲಿಷ್ (RIESI) ಬೆಂಗಳೂರು ಮತ್ತು DSERTನ ಸಹಯೋಗದಲ್ಲಿ ಈ ಶಾಲೆಗಳ ಶಿಕ್ಷಕರಿಗೆ ಪ್ರತೀ ವರ್ಷ ವಿಶಿಷ್ಟ ತರಬೇತಿ ನೀಡಲಾಗುತ್ತಿದೆ. ಈ ತರಬೇತಿಗಳು ದ್ವಿಭಾಷಾ ಮತ್ತು ಬಹುಭಾಷಾ ಪಾಠಶೈಲಿಯ ತತ್ವಗಳು ಮತ್ತು ಬಳಕೆಯ ಬಗ್ಗೆ ಸುದೀರ್ಘವಾಗಿ ಬೆಳಕು ಚೆಲ್ಲುತ್ತಿವೆ. ಪರಿಣಾಮವಾಗಿ, ಶಿಕ್ಷಕರು ತರಗತಿಯಲ್ಲಿ ದ್ವಿಭಾಷಾ ಹಾಗೂ ಬಹುಭಾಷಾ ಪಾಠಪದ್ಧತಿಗಳನ್ನು ಅಳವಡಿಸಲು ಪ್ರಯತ್ನಿಸುತ್ತಿದ್ದಾರೆ.

ಈ ಇಂಗ್ಲಿಷ್ ಮಾಧ್ಯಮ ವಿಭಾಗಗಳಿಗೆ ಶೈಕ್ಷಣಿಕ ವರ್ಷದಿಂದ ವರ್ಷಕ್ಕೆ ಹೆಚ್ಚಿನ ಬೇಡಿಕೆ ಕಂಡುಬರುತ್ತಿದೆ. ಈ ಬೇಡಿಕೆಗೆ ಪ್ರತಿಕ್ರಿಯೆಯಾಗಿ ಸರಕಾರವು ಪ್ರತೀ ವಿಭಾಗದಲ್ಲಿ ದಾಖಲಾತಿಯನ್ನು 30ರಿಂದ 50ಕ್ಕೇರಿಸಿದೆ. ವಿದ್ಯಾರ್ಥಿಗಳು ಉತ್ತಮ ಮಟ್ಟದ ಇಂಗ್ಲಿಷ್ ಕಲಿಯಲಿದ್ದಾರೆ ಎಂಬ ನಿರೀಕ್ಷೆಯಿಂದ ಪೋಷಕರು ಈ ವಿಭಾಗಗಳಿಗೆ ಹೆಚ್ಚು ಆಸಕ್ತಿ ತೋರುತ್ತಿದ್ದಾರೆ.

ಸರಕಾರ ದ್ವಿಭಾಷಾ ಮಾದರಿಯನ್ನು ಮುಂದುವರಿಸುತ್ತಾ, ಬಹುಭಾಷಾ ಶಿಕ್ಷಣ ಪದ್ಧತಿ, ಪಠ್ಯಕ್ರಮ ಮತ್ತು ಪಠ್ಯಪುಸ್ತಕಗಳ ರೂಪುರೇಷೆ ರಚಿಸುವುದರೆಡೆಗೆ ಗಮನ ಕೊಡುತ್ತ ಸರಕಾರಿ ಶಾಲೆಗಳ ಆಂಗ್ಲ ಮಾಧ್ಯಮ ವಿಭಾಗಗಳನ್ನು ಮುನ್ನಡೆಸಬೇಕಾಗಿದೆ.

share
ಡಾ. ರವಿನಾರಾಯಣ ಚಕ್ರಕೋಡಿ
ಡಾ. ರವಿನಾರಾಯಣ ಚಕ್ರಕೋಡಿ

ಪ್ರಾಧ್ಯಾಪಕರು, ಶೈಕ್ಷಣಿಕ ಮುಖ್ಯಸ್ಥರು ಪ್ರಾದೇಶಿಕ ಇಂಗ್ಲಿಷ್ ಸಂಸ್ಥೆ, ದಕ್ಷಿಣ ಭಾರತ, ಬೆಂಗಳೂರು

Next Story
X