Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಮರೆಯಾದ 'ಸ್ವರ್ಣ ಜಯಂತಿ ‌ಎಕ್ಸ್ ಪ್ರೆಸ್

ಮರೆಯಾದ 'ಸ್ವರ್ಣ ಜಯಂತಿ ‌ಎಕ್ಸ್ ಪ್ರೆಸ್

ಸಂಪೂರ್ಣ ಹಾಳಾಗುವ ಸ್ಥಿತಿಗೆ ತಲುಪಿದ ಪುಟಾಣಿ ರೈಲು

ಶ್ರೀನಿವಾಸ್ ಬಾಡ್ಕರ್ಶ್ರೀನಿವಾಸ್ ಬಾಡ್ಕರ್15 July 2024 2:45 PM IST
share
ಮರೆಯಾದ ಸ್ವರ್ಣ ಜಯಂತಿ ‌ಎಕ್ಸ್ ಪ್ರೆಸ್

ಕಾರವಾರ: ಎರಡು ದಶಕಗಳ ಹಿಂದೆ ಕೋಟ್ಯಂತರ ರೂ. ವೆಚ್ಚದಲ್ಲಿ ಕಾರವಾರದ ರವೀಂದ್ರನಾಥ ಟ್ಯಾಗೋರ್ ಕಡಲತೀರದ ಯುದ್ಧ ನೌಕೆ ಉದ್ಯಾನವನದ ಬಳಿ ಇರುವ ಶೆಡ್‌ನಲ್ಲಿ ನಿರ್ಮಿಸಲಾಗಿದ್ದ ‘ಸ್ವರ್ಣ ಜಯಂತಿ ಎಕ್ಸ್ಸ್‌ಪ್ರೆಸ್’ ಎನ್ನುವ ಪುಟಾಣಿ ರೈಲು ಸಂಪೂರ್ಣವಾಗಿ ಹಾಳಾಗುವ ಸ್ಥಿತಿಗೆ ತಲುಪಿದೆ.

ಪುಟಾಣಿ ರೈಲು ಮಾರ್ಗ ನಿರ್ಮಿಸಲು ಬಳಸಲಾಗಿದ್ದ ಕೋಟ್ಯಂತರ ರೂ. ವೆಚ್ಚದ ಕಬ್ಬಿಣದ ಹಳಿಗಳು ಇದ್ದಲ್ಲೇ ನಾಪತ್ತೆಯಾಗಿವೆ. ಕಾರವಾರ ನಗರಕ್ಕೆ ಬರುವ ಪ್ರವಾಸಿಗರನ್ನು ಸೆಳೆಯುವ ದೃಷ್ಟಿಯಿಂದ ನಗರದ ಕಡಲ ತೀರದಲ್ಲಿ ಪುಟಾಣಿ ರೈಲ್ವೆ ಆರಂಭಿಸಲಾಗಿತ್ತು. ಪ್ರಾರಂಭದ ಅವಧಿಯಲ್ಲಿ ಸ್ಥಳೀಯರು ಹಾಗೂ ಹೆಚ್ಚಿನ ಪ್ರವಾಸಿಗರು ಆಕರ್ಷಿತರಾಗಿದ್ದರು. ಪುಟ್ಟ ಮಕ್ಕಳಿಂದ ಹಿಡಿದು ಹಿರಿಯರೂ ಇವುಗಳನ್ನು ಬಳಸಿ ಹರ್ಷ ವ್ಯಕ್ತಪಡಿಸುತ್ತಿದ್ದರು.

ನಗರದ ಟಾಗೋರ್ ಕಡಲತೀರದಲ್ಲಿ ಓಡಾಡುತ್ತಿದ್ದ ಪುಟಾಣಿ ರೈಲು ಪ್ರವಾಸೋದ್ಯಮ ಕ್ಷೇತ್ರ ಅಭಿವೃದ್ಧಿಗಾಗಿ ಕೈಗೊಳ್ಳಲಾಗಿದ್ದ ಕ್ರಮವಾಗಿತ್ತು. ಕಾರವಾರದ ಕಡಲ ತೀರಕ್ಕೆ ಆಕರ್ಷಣೆಯನ್ನೂ ಹೆಚ್ಚಿಸಿತ್ತು. ಕೊಂಕಣ ರೈಲ್ವೆ ಪ್ರಾರಂಭಗೊಂಡ ಅವಧಿಯಲ್ಲೇ ನಗರದ ಕಡಲ ತೀರದಲ್ಲಿ ಪ್ರಾರಂಭಗೊಂಡಿದ್ದ ಪುಟಾಣಿ ರೈಲ್ವೆ ಪ್ರವಾಸಿ ತಾಣಕ್ಕೆ ಹೊಸ ನೋಟವನ್ನು ನೀಡಿತ್ತು. ಆದರೀಗ ಪುಟಾಣಿ ರೈಲು ಬರೀ ನೆನಪಾಗಿಯೇ ಉಳಿದಿದೆ. ಸಂಗೀತದ ಕಾರಂಜಿಗೆ ಹೋಲಿಸಿದರೆ ಈ ಪುಟಾಣಿ ರೈಲು ದೀರ್ಘಕಾಲದವರೆಗೆ ಕಾರ್ಯ ನಿರ್ವಹಿಸಿತ್ತು.

ಇಲ್ಲಿನ ಮಯೂರವರ್ಮ ವೇದಿಕೆಯ ಬಳಿ ಇರುವ ನಿಲ್ದಾಣದಿಂದ ಹೊರಟು ಅರಬ್ಬೀ ಸಮುದ್ರದ ದರ್ಶನ ಮಾಡಿಸುತ್ತ ಮುಂದೆ ಸಾಗುತ್ತಿದ್ದ ರೈಲು, ತಿರುಗಿ ರಾಷ್ಟ್ರೀಯ ಹೆದ್ದಾರಿ ಬದಿಯಿಂದ ವಾಪಸ್ ನಿಲ್ದಾಣಕ್ಕೆ ಒಟ್ಟು 3 ಕಿಮೀ ಪ್ರಯಾಣದಲ್ಲಿ ಪ್ರವಾಸಿಗರು ಆನಂದಿಸುತ್ತಿದ್ದರು. ಪುಟಾಣಿ ರೈಲು ಎಂದು ಕರೆಯಲಾಗುತ್ತಿದ್ದರೂ ಇದರಲ್ಲಿ ಪ್ರಯಾಣಿಸಲು ಮಕ್ಕಳಷ್ಟೇ ಅಲ್ಲದೆ ಪಾಲಕರು, ಯುವಕರು ಸೇರಿದಂತೆ ಯಾರು ಬೇಕಾದರೂ ಪ್ರಯಾಣಿಸಲು ಅವಕಾಶವಿತ್ತು.

ಸುಮಾರು 10 ವರ್ಷಗಳ ಹಿಂದೆ ಕೊಂಕಣ ರೈಲ್ವೆ ಕಾರ್ಪೊರೇಶನಿನ ಇಂಜಿನಿಯರ್‌ಗಳು ಈ ಪುಟಾಣಿ ರೈಲುಗಳ ಲೈನ್ ಮತ್ತು ಸ್ಲೀಪ್ಪರ್‌ಗಳನ್ನು ನಿರ್ಮಿಸಿದ್ದರು. ಆದರೆ ಆಗಾಗ ಉಂಟಾಗುವ ಸಮುದ್ರದ ಸವೆತದಿಂದಾಗಿ ಹಾಗೂ ಮಳೆಗಾಲದ ಅವಧಿಯಲ್ಲಿ ಸಮುದ್ರದ ಅಲೆಯ ಹೊಡೆತಕ್ಕೆ ಕಡಲ ತೀರದ ಬದಿಯಿದ್ದ ಪುಟಾಣಿ ರೈಲ್ವೆ ಟ್ರ್ಯಾಕ್‌ಗೆ ಹಾನಿಯಾಗಿದ್ದರಿಂದ ಸಂಚಾರ ಸ್ಥಗಿತ ಮಾಡಲಾಗಿತ್ತು.

ಅಲೆಗಳ ರಭಸಕ್ಕೆ ಹಳಿಗಳಿಗೆ ಹಾನಿಯಾಗಿದ್ದರಿಂದ ತಾಂತ್ರಿಕ ಸಮಸ್ಯೆಯಿಂದ ಪುಟಾಣಿ ರೈಲು ಹಳಿಗಳನ್ನು ಕಡಲತೀರದಿಂದ ತೆರವು ಮಾಡಲಾಗಿತ್ತು. ಇವುಗಳ ಯೋಜನೆಯ ನಿರ್ವಹಣಾ ವೆಚ್ಚವನ್ನು ಬಾಲಭವನದಿಂದ ನೋಡಿಕೊಳ್ಳಲಾಗುತ್ತಿತ್ತು. ಈ ರೈಲನ್ನು ಪುನಃ ಪ್ರಾರಂಭಿಸಲು ಯೋಜನೆ ರೂಪಿಸಲಾಗಿತ್ತಾದರೂ ಇದರ ವೆಚ್ಚ ಲಾಭಕ್ಕಿಂತಲೂ ಅಧಿಕವಾಗಿರುವುದರಿಂದ ಯೋಜನೆ ಈ ಹಿಂದೆಯೇ ಕೈ ಬಿಡಲಾಗಿದೆ. ಹಳಿಗಳ ಮೇಲೆ ಸಂಚಾರ ಮಾಡುತ್ತಿದ್ದ ‘ಸ್ವರ್ಣ ಜಯಂತಿ ಎಕ್ಸ್‌ಪ್ರೆಸ್’ ಪುಟಾಣಿ ರೈಲು ಮಾತ್ರ ಶೆಡ್‌ಗೆ ಸೇರಿ ಹಳೇ ನೆನಪುಗಳನ್ನು ಮೆಲುಕು ಹಾಕುವಂತಿದೆ.

share
ಶ್ರೀನಿವಾಸ್ ಬಾಡ್ಕರ್
ಶ್ರೀನಿವಾಸ್ ಬಾಡ್ಕರ್
Next Story
X