Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ನೆಲದನಿ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಮಾಹಿತಿ ಮಾರ್ಗದರ್ಶನ
    • ಆರೋಗ್ಯ
    • ಓ ಮೆಣಸೇ
    • ಕೃತಿ ಪರಿಚಯ
    • ಝಲಕ್
    • ಬುಡಬುಡಿಕೆ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಇಂಧನ ಪರಿಶೀಲಿಸದಿರುವುದೇ ವಿಮಾನ...

ಇಂಧನ ಪರಿಶೀಲಿಸದಿರುವುದೇ ವಿಮಾನ ಅಪಘಾತಕ್ಕೆ ಕಾರಣ

ವಿಜಯಪುರದಲ್ಲಿ ಅಪಘಾತವಾಗಿದ್ದ ತರಬೇತಿ ವಿಮಾನ: ತನಿಖಾ ಬ್ಯೂರೋದ ಪ್ರಾಥಮಿಕ ವರದಿಯಲ್ಲಿ ಬಹಿರಂಗ

ಇರ್ಷಾದ್ ಎಂ. ವೇಣೂರುಇರ್ಷಾದ್ ಎಂ. ವೇಣೂರು8 Oct 2026 3:21 PM IST
share
ಇಂಧನ ಪರಿಶೀಲಿಸದಿರುವುದೇ ವಿಮಾನ ಅಪಘಾತಕ್ಕೆ ಕಾರಣ

ಬೆಂಗಳೂರು, ಅ.7: ಕಲಬುರಗಿಯಲ್ಲಿ ಮಂಗಳವಾರ ರೆಡ್ ಬರ್ಡ್ ಫ್ಲೈಟ್ ಟ್ರೈನಿಂಗ್ ಅಕಾಡಮಿಗೆ ಸೇರಿದ ಲಘು ತರಬೇತಿ ವಿಮಾನ ತಾಂತ್ರಿಕ ದೋಷದಿಂದ ಸುರಕ್ಷಿತವಾಗಿ ತುರ್ತು ಭೂಸ್ಪರ್ಶ ಮಾಡಿತ್ತು. ಇದೇ ಸಂಸ್ಥೆಗೆ ಸೇರಿದ ಲಘು ತರಬೇತಿ ವಿಮಾನವೊಂದು 2026ರ ಫೆಬ್ರುವರಿ 8ರಂದು ವಿಜಯಪುರ ಜಿಲ್ಲೆಯ ಮಂಗಳೂರ ಗ್ರಾಮದ ಬಳಿ ಅಪಘಾತಕ್ಕೀಡಾಗಿತ್ತು.

ಆ ಅಪಘಾತದ ಕುರಿತು ವಿಮಾನ ಅಪಘಾತ ತನಿಖಾ ಬ್ಯೂರೋ (AAIB) ನೀಡಿರುವ ಪ್ರಾಥಮಿಕ ವರದಿಯಲ್ಲಿ ಹಾರಾಟಕ್ಕೂ ಮುನ್ನ ವಿಮಾನದಲ್ಲಿದ್ದ ಇಂಧನದ ಪ್ರಮಾಣ ಹಾಗೂ ವಾಸ್ತವವಾಗಿ ತುಂಬಿಸಲಾದ ಇಂಧನದ ಪ್ರಮಾಣವನ್ನು ಪರಿಶೀಲಿಸಿ ದಾಖಲಿಸಿರಲಿಲ್ಲ ಎಂಬುದು ಬಹಿರಂಗವಾಗಿದೆ.

ಫೆಬ್ರವರಿ 8ರಂದು ರೆಡ್ ಬರ್ಡ್ ಫ್ಲೈಟ್ ಟ್ರೈನಿಂಗ್ ಅಕಾಡಮಿ ಪ್ರೈವೇಟ್ ಲಿಮಿಟೆಡ್‌ನ ಸೆಸ್ನಾ 172 (VT-EUC) ವಿಮಾನವು ಕಲಬುರಗಿ ವಿಮಾನ ನಿಲ್ದಾಣದಿಂದ ಬೆಳಗಾವಿ ವಿಮಾನ ನಿಲ್ದಾಣಕ್ಕೆ ಕ್ರಾಸ್-ಕಂಟ್ರಿ ತರಬೇತಿ ಹಾರಾಟ ನಡೆಸುತ್ತಿದ್ದಾಗ ವಿಜಯಪುರ ಜಿಲ್ಲೆಯ ಮಂಗಳೂರ ಗ್ರಾಮದ ಬಳಿ ಅಪಘಾತಕ್ಕೀಡಾಗಿತ್ತು. ವಿಮಾನದಲ್ಲಿದ್ದ ಬೋಧಕರಿಗೆ ಗಂಭೀರ ಗಾಯಗಳಾಗಿದ್ದರೆ, ವಿದ್ಯಾರ್ಥಿ ಪೈಲಟ್‌ಗೆ ಸಣ್ಣಪುಟ್ಟ ಗಾಯಗಳಾಗಿದ್ದವು.

ವಿಮಾನದ ಹಾರಾಟಕ್ಕಾಗಿ ಫ್ಲೈಟ್ ಆಥರೈಸೇಶನ್ ಬುಕ್‌ನಲ್ಲಿ ಕಲಬುರಗಿ-ಬೆಳಗಾವಿ ಮಾರ್ಗದ ವಿವರಗಳನ್ನು ದಾಖಲಿಸಲಾಗಿತ್ತು. ಆದರೆ ಟೆಕ್ನಿಕಲ್ ಲಾಗ್‌ನಲ್ಲಿ ‘ಹಾರಾಟಕ್ಕೂ ಮೊದಲಿದ್ದ ಇಂಧನ’ (Fuel Before Flight) ಮತ್ತು ‘ವಾಸ್ತವವಾಗಿ ತುಂಬಿದ ಇಂಧನ’ (Actual Fuel Uplift) ಕುರಿತ ನಮೂದುಗಳನ್ನು ಮಾಡಿರಲಿಲ್ಲ. ಹೊರಡುವ ಮುನ್ನ ಸಿಬ್ಬಂದಿಯೂ ಈ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿರಲಿಲ್ಲ. ಟೆಕ್ನಿಕಲ್ ಲಾಗ್‌ನಲ್ಲಿ ಕೇವಲ ‘ಒಟ್ಟು ಇಂಧನ’ 200 ಲೀಟರ್ ಎಂದು ನಮೂದಿಸಲಾಗಿತ್ತು ಎಂದು AAIB ವರದಿ ತಿಳಿಸಿದೆ.

ಫೆಬ್ರವರಿ 8ರಂದು ಬೆಳಗ್ಗೆ 7:30ಕ್ಕೆ ರೆಡ್ ಬರ್ಡ್ ಫ್ಲೈಟ್ ಟ್ರೈನಿಂಗ್ ಅಕಾಡಮಿಗೆ ಸೇರಿದ ಲಘು ವಿಮಾನ ಕಲಬುರಗಿ ವಿಮಾನ ನಿಲ್ದಾಣದಿಂದ ಬೆಳಗಾವಿಯತ್ತ ಹಾರುತ್ತಿದ್ದಾಗ ಸುಮಾರು 66 ನಾಟಿಕಲ್ ಮೈಲು ದೂರದಲ್ಲಿದ್ದಾಗ ಇಂಜಿನ್ ಶಕ್ತಿ ಕಡಿಮೆಯಾಯಿತು. ಆ ಬಳಿಕ ಸಿಬ್ಬಂದಿ ಹತ್ತಿರದ ATC ಘಟಕಗಳು ಹಾಗೂ ಕಂಪೆನಿಯ ಇತರ ವಿಮಾನಗಳೊಂದಿಗೆ ಸಂಪರ್ಕ ಸಾಧಿಸಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ.

ಬಳಿಕ ಸಿಬ್ಬಂದಿ ಮುನ್ನೆಚ್ಚರಿಕೆಯಾಗಿ ವಿಮಾನ ಇಳಿಸಲು ನಿರ್ಧರಿಸಿದರು. ಅದಕ್ಕಾಗಿ ಮಂಗಳೂರ ಗ್ರಾಮದ ಬಳಿಯ ಕೃಷಿ ಜಮೀನೊಂದನ್ನು ಆಯ್ಕೆ ಮಾಡಿದರು. ಕಬ್ಬು ಕಟಾವು ಮುಗಿದಿದ್ದ ಆ ಜಮೀನಿನಲ್ಲಿ ಒಣಗಿದ ಕಬ್ಬಿನ ಎಲೆಗಳು ಹರಡಿದ್ದವು. ವಿಮಾನ ಮೊದಲು ಮುಖ್ಯ ಲ್ಯಾಂಡಿಂಗ್ ಗೇರ್ ಮೂಲಕ ನೆಲವನ್ನು ಸ್ಪರ್ಶಿಸಿತು. ಬಳಿಕ ವಿಮಾನ ಮುಂದಕ್ಕೆ ಚಲಿಸಿ ಉರುಳಿಬಿದ್ದು, ರೆಕ್ಕೆಗಳು ಹಾಗೂ ಹಿಂಭಾಗದ ಲಂಬ ರೆಕ್ಕೆಯ ಮೇಲೆ ತಲೆಕೆಳಗಾಗಿ ನಿಂತಿತು ಎಂದು AAIB ವರದಿ ಹೇಳಿದೆ.

ವಿಮಾನದ ಅವಶೇಷಗಳನ್ನು ಹೆಚ್ಚಿನ ಪರಿಶೀಲನೆಗಾಗಿ ಅಪಘಾತದ ಸ್ಥಳದಿಂದ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಯಿತು. ಹೆಚ್ಚಿನ ವಿಶ್ಲೇಷಣೆಗಾಗಿ ವಿಮಾನದ ತೈಲದ ಮಾದರಿಯನ್ನು ಸಂಗ್ರಹಿಸಿ ಪರೀಕ್ಷಿಸಿದ ಸಂದರ್ಭದಲ್ಲಿ ವಿಮಾನದಲ್ಲಿ ಯಾವುದೇ ಇಂಧನ ಲಭ್ಯವಿರಲಿಲ್ಲ ಎಂದು AAIB ವರದಿ ದಾಖಲಿಸಿದೆ.

ಅಪಘಾತದ ತನಿಖೆಗಾಗಿ VT-EUCಗೆ ಸಂಬಂಧಿಸಿದ ಲಾಗ್ ಬುಕ್‌ಗಳು, ನಿರ್ವಹಣಾ ದಾಖಲೆಗಳು, ಇಂಧನ ರಿಜಿಸ್ಟರ್ ಹಾಗೂ ವಿಮಾನದಲ್ಲಿನ ಇತರ ದಾಖಲೆಗಳನ್ನು ನಿರ್ವಾಹಕರಿಂದ ಸಂಗ್ರಹಿಸಲಾಗಿದೆ. ಅಪಘಾತದ ದಿನ ಕಲಬುರಗಿ ವಿಮಾನ ನಿಲ್ದಾಣದ ವಿಮಾನ ನಿಲುಗಡೆ ಪ್ರದೇಶದ CCTV ದೃಶ್ಯಾವಳಿಗಳನ್ನೂ ಪಡೆಯಲಾಗಿದೆ.

### ಹಾರಾಟಕ್ಕೆ ಎರಡು ದಿನ ಮೊದಲು ಇಂಧನ ತುಂಬಲಾಗಿತ್ತು

ರೆಡ್ ಬರ್ಡ್ ಫ್ಲೈಟ್ ಟ್ರೈನಿಂಗ್ ಅಕಾಡಮಿಗೆ ಸೇರಿದ ವಿಮಾನವು ಮೂಲತಃ ಮಧ್ಯಪ್ರದೇಶದ ಸಿಯೋನಿ ನೆಲೆಯಲ್ಲಿ ಇತ್ತು. 2025ರ ಡಿಸೆಂಬರ್ 18ರವರೆಗೆ ಅಲ್ಲಿಯೇ ತರಬೇತಿ ಹಾರಾಟಗಳನ್ನು ನಡೆಸಲಾಗಿತ್ತು. 2026ರ ಫೆಬ್ರವರಿ 6ರಂದು 180 ಲೀಟರ್ ಇಂಧನದೊಂದಿಗೆ ಸಿಯೋನಿಯಿಂದ ಕಲಬುರಗಿಗೆ ವಿಮಾನವನ್ನು ತರಲಾಗಿತ್ತು. ಈ ಹಾರಾಟದ ಬ್ಲಾಕ್ ಸಮಯ 4 ಗಂಟೆ 40 ನಿಮಿಷವಾಗಿತ್ತು.

ಫೆಬ್ರವರಿ 7ರಂದು ಕಲಬುರಗಿ ವಿಮಾನ ನಿಲ್ದಾಣದಲ್ಲಿ ವಿಮಾನದ ಇಂಡಕ್ಷನ್ ಏರ್ ಫಿಲ್ಟರ್ ಬದಲಾಯಿಸಲಾಯಿತು. ಇದೇ ವೇಳೆ 600 ಗಂಟೆ/12 ತಿಂಗಳ ಅವಧಿಯ ಆಪರೇಷನ್ ತಪಾಸಣೆ ನಡೆಸಲಾಯಿತು. ನಿರ್ವಹಣಾ ಕೆಲಸ ಪೂರ್ಣಗೊಂಡ ಬಳಿಕ ಅದರ ಪ್ರಮಾಣಪತ್ರ ನೀಡಲಾಗಿತ್ತು.

ಅಪಘಾತವಾದ ದಿನದ ಹಾರಾಟವು ಫೆಬ್ರವರಿ 7ರಂದು ನಿರ್ವಹಣಾ ಕಾರ್ಯ ಪೂರ್ಣಗೊಂಡ ಬಳಿಕ ವಿಮಾನದ ಮೊದಲ ತರಬೇತಿ ಹಾರಾಟವಾಗಿತ್ತು.

ಕಲಬುರಗಿ ವಿಮಾನ ನಿಲ್ದಾಣದಲ್ಲಿ ಅಪಘಾತದ ದಿನ NOTAM I0004/26 ಪ್ರಕಾರ ATC ಕಾರ್ಯನಿರ್ವಹಿಸುತ್ತಿರಲಿಲ್ಲ. ಬೆಳಗ್ಗೆ 7ರಿಂದ 9 ಗಂಟೆಯ ನಡುವೆ ದೃಶ್ಯ ಗೋಚರತೆ 7,000 ಮೀಟರ್ ಇತ್ತು. ಗಾಳಿಯ ವೇಗ 5ರಿಂದ 7 ನಾಟ್‌ಗಳಷ್ಟಿತ್ತು ಎಂದು ವಿಮಾನ ಅಪಘಾತ ತನಿಖಾ ಬ್ಯೂರೋ ವರದಿಯಲ್ಲಿ ತಿಳಿಸಿದೆ.

share
ಇರ್ಷಾದ್ ಎಂ. ವೇಣೂರು
ಇರ್ಷಾದ್ ಎಂ. ವೇಣೂರು
Next Story
X