Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಬೀಳು, ಬೀಳು, ಬೀಳು

ಬೀಳು, ಬೀಳು, ಬೀಳು

ಆನುವಾದ: ರೂಹಿ ಪುತ್ತಿಗೆಆನುವಾದ: ರೂಹಿ ಪುತ್ತಿಗೆ12 July 2026 11:46 AM IST
share
ಬೀಳು, ಬೀಳು, ಬೀಳು
ಡಾಕ್ಟರ್ ಹುಬ್ನಾಥ್ ಪಾಂಡೆ ಹಿಂದಿ ಭಾಷೆಯ ಖ್ಯಾತ ಕವಿ. ಪ್ರಸಿದ್ಧ ಪರಿಸರ ಪ್ರೇಮಿ. ಮುಂಬೈ ವಿಶ್ವವಿದ್ಯಾನಿಲಯದಲ್ಲಿ ಹಿಂದಿ ಭಾಷೆಯ ಪ್ರೊಫೆಸರ್ ಆಗಿ ಸೇವೆ ಸಲ್ಲಿಸಿದವರು. ಸುಮಾರು ಒಂದು ದಶಕದ ಹಿಂದೆ ಅವರು ನಡೆಸಿದ, ವಿವಿ ಕ್ಯಾಂಪಸ್‌ನಲ್ಲಿ 2,500 ಗಿಡಗಳನ್ನು ನೆಡುವ ಅಭಿಯಾನವು ದೇಶದ ಗಮನ ಸೆಳೆದಿತ್ತು. ಇತ್ತೀಚೆಗೆ ಅವರು ಬರೆದ ‘ಗಿರೋ’ (ಬೀಳು) ಎಂಬ ಹಿಂದಿ ಕವನ ವ್ಯಾಪಕ ಚರ್ಚೆಯಲ್ಲಿದೆ. ದಿಲ್ಲಿಯ ಜಂತರ್ ಮಂತರ್‌ನಲ್ಲಿ ಕಾಕ್ರೋಚ್ ಜನತಾ ಪಾರ್ಟಿಯವರು ಮುಷ್ಕರ ನಡೆಸುತ್ತಿರುವಲ್ಲಿ ಪ್ರವೇಶದ್ವಾರದಲ್ಲೇ ಈ ಹಾಡನ್ನು ಪ್ರದರ್ಶನಕ್ಕಿಡಲಾಗಿದೆ. ಹಲವರು ಈ ಹಾಡನ್ನು ವಿವಿಧ ಭಾಷೆಗಳಿಗೆ ಅನುವಾದಿಸಿದ್ದಾರೆ. ರಾಜೇಂದ್ರ ಗುಪ್ತಾರಂತಹ ಹಿರಿಯ ನಟರು ಮತ್ತು ಇತರ ಅನೇಕ ಕಲಾವಿದರು ಪ್ರಸ್ತುತ ಹಾಡನ್ನು ತಾವೇ ಓದುವ ವೀಡಿಯೊ ಗಳನ್ನೂ ಬಿಡುಗಡೆಗೊಳಿಸಿದ್ದಾರೆ. ಯಾರನ್ನೂ ಹೆಸರಿಸದೆ ಬಹಳಷ್ಟನ್ನು ಹೇಳುವ ಪ್ರಸ್ತುತ ಕವನದ ಭಾವಾನುವಾದ ಇಲ್ಲಿದೆ

ಬೀಳುವುದಕ್ಕೆ ಧಾರಾಳ ಅವಕಾಶ ಇನ್ನೂ ಉಳಿದಿದೆ, ಬೀಳು,

ವಿಜ್ಞಾನದ ಸೂತ್ರಗಳೆಲ್ಲಾ ನಾಚಿ ತಲೆ ತಗ್ಗಿಸಿ ಬಿದ್ದು ಬಿಡಬೇಕು, ಬೀಳು.

ಇದು ಬೀಳುವ ಆರಂಭ ಮಾತ್ರ, ವಿರಮಿಸದೇ ಬೀಳು,

ಬೀಳುವುದಕ್ಕೆ ನಿನಗಿರುವ ಸಾಮರ್ಥ್ಯದ ಮೇಲೆ ಭರವಸೆ ಇಟ್ಟಿರು,

ಅದನ್ನು ಬೀಳಿಸದಿರು, ನೀನು ಬೀಳು, ಬೀಳು, ಬೀಳುತ್ತಿರು,

ನೀನು ಬೀಳುತ್ತಿರುವುದನ್ನು ಜಗತ್ತೆಲ್ಲಾ ಕಾಣುತ್ತಿದೆ,

ನಿನ್ನಂತೆ ಬೀಳಲಾಗುತ್ತಿಲ್ಲವಲ್ಲಾ! ಎಂದು ಕೊರಗುತ್ತಿದೆ, ಬೀಳು,

ಒಬ್ಬನೇ ಬೀಳದಿರು ನೀನು, ರೂಪಾಯಿಯ ಜೊತೆ ಬೀಳು,

ಅಭಿಮಾನದೊಂದಿಗೆ ಬೀಳು, ಗರ್ವದೊಂದಿಗೆ ಬೀಳು,

ಬೀಳುವ ಮಟ್ಟಿಗೆ ನಿನ್ನ ಸಾಹಸ ಇನ್ನಾರಲ್ಲಿದೆ? ಬೀಳು,

ಪೌರುಷ ಮೆರೆಯುತ್ತಾ ಬೀಳು, ನಿರ್ಲಜ್ಜನಾಗಿ ಬೀಳು,

ನಿರಾತಂಕವಾಗಿ ಬೀಳು, ಆಳಕ್ಕೆ ಬೀಳು, ಬೀಳು, ಬೀಳುತ್ತಿರು,

ಜಗತ್ತು ನಿನ್ನಿಂದ ಕಲಿಯಬಯಸುತ್ತಿದೆ, ಬೀಳುವ ಕಲೆಯನ್ನು

ಬೀಳುವ ಕಲೆಯಲ್ಲಿ ನೀನೊಬ್ಬನೇ ವಿಶ್ವಗುರು, ಬೀಳು,

ಈ ರಂಗದಲ್ಲಿ ನಿನ್ನ ಮಹಿಮೆ ಪ್ರಶ್ನಾತೀತ, ಬೀಳು,

ನಿನ್ನ ಬೀಳಿನಲಿ ಹುಡುಕಲಿವೆ, ಮುಂದಿನ ಪೀಳಿಗೆಗಳು

ತಾವು ಬೀಳುವ ಸಾಧ್ಯತೆಗಳನ್ನು- ಬೀಳು, ಆದರ್ಶವಾಗಿ ಬೀಳು,

ನಿನಗಿಂತ ಆಳಕ್ಕೆ ಬೀಳ ಬಯಸುವ ಸಾಹಸಿಗಳಿಗೆ ಪ್ರೇರಣೆಯಾಗು,

ಬೀಳುವವರಿಗೆಲ್ಲಾ ನೀನೇ ಸಾರ್ವಕಾಲಿಕ ಸ್ಫೂರ್ತಿಯಾಗು, ಬೀಳು,

ಎಲ್ಲರಿಗೆ ಪ್ರೇರಣೆ ನೀಡಲು ಬೀಳು, ಬಿರುಸಾಗಿ ಬೀಳು,

ಬೀಳು, ಸದ್ದು ಗದ್ದಲದೊಂದಿಗೆ ಬೀಳು, ಎಲ್ಲ ದಿಕ್ಕಿಂದ ಬೀಳು,

ರಭಸದೊಂದಿಗೆ ಬೀಳು, ಬೀಳು, ನೀನು ಬೀಳುತ್ತಲೇ ಇರು,

ಹಿಂದೆಂದೂ ಯಾರೊಬ್ಬರೂ ಬಿದ್ದಿಲ್ಲ, ನೀನು ಬಿದ್ದಂತೆ,

ನೀ ಬಿದ್ದ ಆಳಕ್ಕೆ ಬಿದ್ದ ಇನ್ನೊಬ್ಬನಿಲ್ಲ, ಬೀಳು, ಬೀಳುತ್ತಿರು,

ಸಹಸ್ರಮಾನಗಳಿಂದ ನೇರ ನಿಂತಿದ್ದ ಸ್ವಾಭಿಮಾನಿ ಸಮಾಜಕ್ಕೆ

ಬೀಳಲು ಕಲಿಸಿದ ಗುರು ನೀನು, ಬೀಳು, ಗುರುವಾಗಿ ಬೀಳು,

ನಿಂತಲ್ಲೇ ನಿಂತು ಜಡವಾಗಿದ್ದವರಿಗೆ, ಸ್ಥಿರವಾಗಿದ್ದವರಿಗೆ,

ಬುಡಸಹಿತ ಉರುಳಿ ಬೀಳಲು ಕಲಿಸಿದ ಮಹಾನುಭಾವ ನೀನು,

ಬೀಳುವುದೇ ನಿನ್ನ ಪರಮ ಸಾಧನೆ, ಅಸಾಮಾನ್ಯ ಸಾಧನೆ, ಬೀಳು,

ಜಗತ್ತಿಗೆಲ್ಲಾ ನೀನು ಕಲಿಸಿದ ಬೀಳುವ ಕಲೆ ಸುಲಭದ ಕಲೆಯಲ್ಲ,

ಬೀಳುವ ಪ್ರತಿಭೆ ಇಲ್ಲದವರ ಟೀಕೆಗಳಿಗೆ ಹೆದರದಿರು, ಬೀಳು,

ಅಂಜದೆ, ಅಳುಕದೆ, ನಿರಾತಂಕವಾಗಿ ಬೀಳು, ಬೀಳುತ್ತಲೇ ಇರು

ಬೀಳುವುದಿಲ್ಲ ಎಂದು ಪಣತೊಟ್ಟವರನ್ನೆಲ್ಲಾ ಬೀಳಿಸುತ್ತಾ ಬೀಳು,

ನೀನು ಬೀಳು, ಧರ್ಮ-ಕರ್ಮಗಳನ್ನೆಲ್ಲಾ ಬೀಳಿಸುತ್ತಾ ಬೀಳು,

ದೇಶವನ್ನು, ದೇಶವಾಸಿಗಳನ್ನು ಬೀಳಿಸುತ್ತಾ ಬೀಳು,

ವಾಯು, ನೀರು, ಕಾಡು, ಪರ್ವತ, ಪರಿಸರ, ಪ್ರಕೃತಿ

ಎಲ್ಲವನ್ನೂ ಬೀಳಿಸುತ್ತಾ ಬೀಳು, ಬೀಳು, ನೀನು ಬೀಳುತ್ತಿರು,

ಆಚಾರ, ಸಂಸ್ಕಾರಗಳನ್ನೆಲ್ಲಾ ಬೀಳಿಸುತ್ತಾ ಬೀಳು,

ಶೀಲ, ಮಾನಗಳನ್ನೆಲ್ಲಾ ಬೀಳಿಸುತ್ತಾ ಬೀಳು,

ಈ ಯುಗದ ಓ ಮಹಾಪುರುಷ! ಓ ನಮ್ಮ ವಿಶ್ವ ಗುರು!

ವಿಶ್ವವೆಲ್ಲಾ ನೋಡಲಿ, ನಿನ್ನ ಬೀಳುವ ಪ್ರತಿಭೆಯನ್ನು,

ನೀನು ಬೀಳಬಲ್ಲ ಆಳವನ್ನು ಕಣ್ಣಾರೆ ಕಾಣಲಿ ಜಗತ್ತು.

ನಿನ್ನ ಕಂಡಾದರೂ ನಮ್ಮ ಹೊಸ ಪೀಳಿಗೆ ಪಾಠ ಕಲಿಯಲಿ,

ನಿನ್ನ ಬೀಳನ್ನು ಕಂಡು, ಯಾಕೆ ಬೀಳಬಾರದೆಂಬುದನ್ನು ಅರಿಯಲಿ,

ಬೀಳುವ ದುರಂತ ಕಂಡು ಮೇಲಕ್ಕೇರುವ ಮಹಿಮೆಯನ್ನು ತಿಳಿಯಲಿ,

ಮೇಲಕ್ಕೇರುವ ಸಾಹಸಕ್ಕೆ ಹೊರಡಲಿ, ಎತ್ತರಕ್ಕೇರಲಿ, ಸಾಫಲ್ಯ ಪಡೆಯಲಿ,

ನೀಮಾತ್ರ ಬೀಳು, ಬೀಳುತ್ತಿರು, ನಿಶ್ಚಿಂತನಾಗಿ ಪಾತಾಳಕ್ಕೆ ಬೀಳು,

ಬೀಳುವುದಕ್ಕಿನ್ನು ಯಾವ ಆಳವೂ ಉಳಿದಿರಬಾರದು,

ಆ ಮಟ್ಟಕ್ಕೆ ಬೀಳು, ಬೀಳು, ಬೀಳುತ್ತಿರು.

Tags

Fall
share
ಆನುವಾದ: ರೂಹಿ ಪುತ್ತಿಗೆ
ಆನುವಾದ: ರೂಹಿ ಪುತ್ತಿಗೆ
Next Story
X