Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಭಾರತದ ಮೊದಲ ಮುಸ್ಲಿಮ್ ಶಿಕ್ಷಕಿ ಫಾತಿಮಾ...

ಭಾರತದ ಮೊದಲ ಮುಸ್ಲಿಮ್ ಶಿಕ್ಷಕಿ ಫಾತಿಮಾ ಶೇಕ್

ಡಾ. ಖಾಜಾವಲಿ ಈಚನಾಳಡಾ. ಖಾಜಾವಲಿ ಈಚನಾಳ9 Jan 2026 11:57 AM IST
share
ಭಾರತದ ಮೊದಲ ಮುಸ್ಲಿಮ್ ಶಿಕ್ಷಕಿ ಫಾತಿಮಾ ಶೇಕ್
ಇಂದು ಫಾತಿಮಾ ಶೇಕ್ ಜನ್ಮದಿನ

ಸಮಾಜದಲ್ಲಿ ಅಜ್ಞಾನ, ಅಂಧಕಾರ, ಮೂಢನಂಬಿಕೆ ತುಂಬಿ ತುಳುಕುತ್ತಿದ್ದ ಕಾಲವದು. ಕುರುಡು ಸಂಪ್ರದಾಯಗಳನ್ನು ಮೆಟ್ಟಿ ನಿಂತ ದಿಟ್ಟೆ ಫಾತಿಮಾ ಶೇಕ್. ಇವರು ಭಾರತದ ಮೊದಲ ಮುಸ್ಲಿಮ್ ಶಿಕ್ಷಕಿ ಎಂಬ ಹೆಸರಿಗೆ ಭಾಜನರಾದವರು. ಭಾರತದ ಶೈಕ್ಷಣಿಕ ಕ್ಷೇತ್ರದಲ್ಲಿ ಕ್ರಾಂತಿಯನ್ನು ಉಂಟು ಮಾಡಿದ ಮಹಿಳಾ ರತ್ನ ದ್ವಯರಾದ ಸಾವಿತ್ರಿಬಾಯಿ ಫುಲೆ ಮತ್ತು ಫಾತಿಮಾ ಶೇಕ್ ಇವರನ್ನು ನಾವು ಮುಖ್ಯವಾಗಿ ಸ್ಮರಿಸಲೇಬೇಕಾಗುತ್ತದೆ. ಸಾವಿತ್ರಿಬಾಯಿ ಫುಲೆ ಮತ್ತು ಫಾತಿಮಾ ಶೇಕ್ 175 ವರ್ಷಗಳ ಹಿಂದೆ ಸಮಾಜದಲ್ಲಿ ಅಕ್ಷರ ಕ್ರಾಂತಿಗೆ ಮುನ್ನುಡಿ ಬರೆದು, ಹಲವಾರು ವಿರೋಧಗಳನ್ನು ಎದುರಿಸಿದವರು. ಚರಿತ್ರೆಯಲ್ಲಿ ಮರೆಯಾದ ಫಾತಿಮಾ ಶೇಕ್ ಅವರ ಬಗ್ಗೆ ಅರಿತುಕೊಳ್ಳುವುದು ಮತ್ತು ಶೋಧಿಸುವುದು ಇವತ್ತಿನ ಅಗತ್ಯವಾಗಿದೆ. ಭಾರತದ ಇತಿಹಾಸದಲ್ಲಿ 1ನೇ ಜನವರಿ 1848 ಅತ್ಯಂತ ಮಹತ್ವದ ದಿನವಾಗಿದೆ. ಅದೇ ದಿನ ಶೂದ್ರರಿಗೆ ದಲಿತರಿಗೆ, ಮಹಿಳೆಯರಿಗೆ ಶಾಲೆಯನ್ನು ತೆರೆದು ಅಕ್ಷರ ದೀಕ್ಷೆ ನೀಡಿದ ಪವಿತ್ರವಾದ ದಿನವೆಂದು ಭಾವಿಸಲಾಗಿದೆ.

ಅಂದು ಶೂದ್ರರಿಗೆ, ಮಹಿಳೆಯರಿಗೆ ವಿದ್ಯೆ ನಿಷಿದ್ಧವಾಗಿತ್ತು. ಅಕ್ಷರ ವಂಚಿತ ಈ ಸಮುದಾಯಗಳಿಗೆ ಅಕ್ಷರ ಕಲಿಸಿದ ಕೀರ್ತಿ ಫುಲೆ ದಂಪತಿಗೆ ಸಲ್ಲುತ್ತದೆ. ಶೂದ್ರರು ಮಹಿಳೆಯರಿಗೆ ಅಕ್ಷರ ಕಲಿಸುವ ಸುದ್ದಿ ತಿಳಿದ ವೈದಿಕ ಸಮುದಾಯ ಕೆಂಡಾಮಂಡಲವಾಗುತ್ತದೆ. ಆಗ ಫುಲೆ ದಂಪತಿ ಸನಾತನ ಸಮುದಾಯದಿಂದ ಪ್ರತಿಭಟನೆ ಎದುರಿಸಬೇಕಾಗುತ್ತದ. ಸಾಮಾಜಿಕ ಬಹಿಷ್ಕಾರಕ್ಕೆ ಈಡಾಗುವ ಎಚ್ಚರಿಕೆಯನ್ನು ಅವರಿಗೆ ನೀಡಲಾಗುತ್ತದೆ. ಇದರಿಂದ ಹೆದರಿದ ಜ್ಯೋತಿಬಾ ಅವರ ತಂದೆ ಗೋವಿಂದರಾವ್ ಫುಲೆ ತಮ್ಮ ಮಗ ಮತ್ತು ಸೊಸೆಯನ್ನು ಮನೆಯಿಂದ ಹೊರ ಹಾಕುತ್ತಾರೆ.

ಮನೆಯಿಂದ ಹೊರ ಬಂದ ಜ್ಯೋತಿಬಾ ಮತ್ತು ಸಾವಿತ್ರಿ ಬಾಯಿಗೆ ದಿಕ್ಕೇ ತೋಚುವುದಿಲ್ಲ. ಉಟ್ಟ ಬಟ್ಟೆಯಿಂದ ಮನೆಯಿಂದ ಹೊರಬಂದ ಅವರ ಕೈಯಲ್ಲಿ ಏನೂ ಇಲ್ಲ. ಯಾರೂ ಅವರಿಗೆ ಸಹಾಯ ಮಾಡಲಿಲ್ಲ. ಬಂಧು ಬಾಂಧವರು ಮಾತಾಡಿಸಲಿಲ್ಲ. ಇಂಥ ಸಂಕಟದ, ಸಂದಿಗ್ಧ ಸ್ಥಿತಿಯಲ್ಲಿ ಫುಲೆ ದಂಪತಿಗೆ ನೆರವಿಗೆ ಬಂದವರು ಮುನ್ಷಿ ಗಫ್ಫಾರ್ ಬೇಗ್ ಅವರು. ಜ್ಯೋತಿಬಾರ ಶಿಕ್ಷಣ ಅರ್ಧಕ್ಕೆ ನಿಂತಾಗ, ಅವರ ತಂದೆ ಗೋವಿಂದರಾವ್ ಅವರಿಗೆ ಬುದ್ದಿ ಹೇಳಿ, ಪುನಃ ಜ್ಯೋತಿಬಾರನ್ನು ಶಾಲೆಗೆ ಕಳುಹಿಸಿದ್ದು ಇದೇ ಗಫ್ಫಾರ್ ಬೇಗ್. ನೆಲೆ ಇಲ್ಲದೆ ಅಲೆಯುವ ಫುಲೆ ದಂಪತಿಗೆ ಆಪತ್ಕಾಲದಲ್ಲಿ ಆಪತ್ಬಾಂಧವರಾಗಿ ಬಂದು ಅವರನ್ನು ಕರೆತಂದದ್ದು ಪೂನಾದ ಗಂಜ್ ಪೇಟೆಯ ಉಸ್ಮಾನ್ ಶೇಕ್ ಅವರ ಮನೆಗೆ.

ಫುಲೆ ದಂಪತಿಯ ಶಿಕ್ಷಣ ಪ್ರೀತಿ, ದಯಾಪರತೆ, ಸಾಮಾಜಿಕ ಕಾಳಜಿಗಳನ್ನು ಗಮನಿಸಿದ ಉಸ್ಮಾನ್ ಶೇಕ್ ಅವರು, ತಮ್ಮ ಮನೆಯಲ್ಲಿ ಅವರಿಗೆ ಉಳಿದುಕೊಳ್ಳಲು ಆಶ್ರಯ ನೀಡುತ್ತಾರೆ. ಅಣ್ಣನ ನಿರ್ಧಾರಕ್ಕೆ ಅವರ ಸಹೋದರಿ ಫಾತಿಮಾ ಶೇಕ್ ಕೂಡಾ ಬೆಂಬಲಿಸಿ ಪ್ರೋತ್ಸಾಹಿಸುತ್ತಾರೆ. ಆ ಹೊತ್ತಿನಲ್ಲಿ ಫುಲೆ ದಂಪತಿ ಕೇವಲ ಸವರ್ಣೀಯರ ವಿರೋಧಕ್ಕೆ ತುತ್ತಾದರೆ, ಶೇಕ್ ಸಹೋದರ ಸಹೋದರಿ ತಮ್ಮದೇ ಸಮುದಾಯದ ಮತೀಯವಾದಿಗಳ ಆಕ್ರೋಶಕ್ಕೂ ಆಹಾರವಾಗುತ್ತಾರೆ. ಇಲ್ಲಿ ಶೇಕ್ ಸಹೋದರ ಸಹೋದರಿಯರ ಮಾನವ ಪ್ರೀತಿ ಮತ್ತು ಜನಪರ ಕಾಳಜಿ ಎದ್ದು ಕಾಣುತ್ತದೆ.

ಅವರು ಜ್ಯೋತಿಬಾ ಫುಲೆ ಮತ್ತು ಸಾವಿತ್ರಿಬಾಯಿ ಫುಲೆಯವರಿಗೆ ತಮ್ಮ ಮನೆಯಲ್ಲೇ ಶಾಲೆ ತೆರೆಯಲು ಅವಕಾಶ ಮಾಡಿಕೊಟ್ಟರು. ಫಾತಿಮಾ ಶೇಕ್ ಸಾವಿತ್ರಿಬಾಯಿ ಫುಲೆ ಜೊತೆಗೆ ಪ್ರತಿಯೊಂದು ಕೆಲಸ ಕಾರ್ಯಗಳಲ್ಲಿ ಕ್ರಿಯಾಶೀಲವಾಗಿ ತೊಡಗಿಸಿಕೊಂಡರು. ಸಾಮಾಜಿಕ ಚಟುವಟಿಕೆಗಳಲ್ಲಿ ಪಾಲ್ಗೊಂಡರು.

ಇಂತಹ ಫಾತಿಮಾ ಶೇಕ್ ಹುಟ್ಟಿದ್ದು 1831ರ ಜನವರಿ 9 ರಂದು. ಇವರು ಮೂಲತಃ ಉತ್ತರ ಪ್ರದೇಶದವರು. ಇವರ ತಂದೆ ತಾಯಿಗಳು ಉತ್ತರ ಪ್ರದೇಶದಿಂದ ವಲಸೆ ಬಂದು ಪೂನಾದಲ್ಲಿ ನೆಲೆಸುತ್ತಾರೆ. ಫಾತಿಮಾ ಹೆತ್ತವರು ವ್ಯಾಪಾರವನ್ನು ಮಾಡುತ್ತಿದ್ದರು. ಫಾತಿಮಾ ಕಸೂತಿಯ ಕೆಲಸದಲ್ಲಿ ನೈಪುಣ್ಯತೆಯನ್ನು ಪಡೆದಿದ್ದರು. ಅವರ ತಂದೆ ತಾಯಿ ಫಾತಿಮಾರ ಬಾಲ್ಯದಲ್ಲಿಯೇ ತೀರಿಹೋಗುತ್ತಾರೆ. ಉಸ್ಮಾನ್ ಶೇಕ್ ತಂದೆ ತಾಯಿಗಳ ಸ್ಥಾನದಲ್ಲಿ ನಿಂತು, ಎಲ್ಲ ಜವಾಬ್ದಾರಿಯನ್ನು ನೋಡಿಕೊಳ್ಳುತ್ತಾರೆ. ಅಣ್ಣನ ಪ್ರೋತ್ಸಾಹದಿಂದ ಫಾತಿಮಾ ಧಾರ್ಮಿಕ ವಿದ್ಯಾಭ್ಯಾಸದ ಜೊತೆಗೆ ಉರ್ದು ಭಾಷೆಯನ್ನೂ ಕಲಿಯುತ್ತಾರೆ.

‘ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ’ ಎಂಬ ಮಾತಿನಂತೆ ಫುಲೆ ದಂಪತಿ ಉಸ್ಮಾನ್ ಶೇಕ್ ಅವರ ಮನೆಯಲ್ಲಿ ‘ಇಂಡೇಜಿನಸ್ ಲೈಬ್ರರಿ’ ಎಂಬ ಹೆಸರಿನಲ್ಲಿ ಮಹಿಳಾ ಶಾಲೆಯನ್ನು ಶುರು ಮಾಡುತ್ತಾರೆ. ಚರಿತ್ರೆಯಲ್ಲಿ ಇದೊಂದು ಮೈಲುಗಲ್ಲಾಗಿದೆ. ಶಾಲೆ ತೆರೆದ ಮೇಲೆ ಶಿಕ್ಷಕರ ಕೊರತೆ ಉಂಟಾಯಿತು. ಆಗ ಜ್ಯೋತಿಬಾ ಫುಲೆಯವರು ‘ನ್ಯಾಚುರಲ್ ಸ್ಕೂಲ್’ ಎಂಬ ತರಬೇತಿ ಸಂಸ್ಥೆಯನ್ನು ಸ್ಥಾಪಿಸುತ್ತಾರೆ. ಆ ಶಾಲೆಯಲ್ಲಿ ಸಾವಿತ್ರಿಬಾಯಿ ಫುಲೆ ಮತ್ತು ಫಾತಿಮಾ ಶೇಕ್ ಮೊದಲ ವಿದ್ಯಾರ್ಥಿಗಳಾಗಿ ಕಲಿಯುತ್ತಾರೆ. ಜ್ಯೋತಿಬಾ ಫುಲೆಯವರ ಮಾರ್ಗದರ್ಶನದಲ್ಲಿ ಫಾತಿಮಾ ಶೇಕ್ ಮರಾಠಿ ಮತ್ತು ಇಂಗ್ಲಿಷ್ ಭಾಷೆಯನ್ನು ಕಲಿಯುತ್ತಾರೆ. ಮರಾಠಿಯನ್ನು ಕಲಿತ ಮೊದಲ ಮುಸ್ಲಿಮ್ ಮಹಿಳೆಯಾಗಿ ಫಾತಿಮಾ ಶೇಕ್ ಹೊರಹೊಮ್ಮುತ್ತಾರೆ. ತರುವಾಯ ಅದೇ ಶಾಲೆಯಲ್ಲಿ ಇವರೇ ಮೊದಲ ಶಿಕ್ಷಕರಾಗಿ ಬೋಧನೆ ಮಾಡುತ್ತಾರೆ. ಕೆಲ ದಿನಗಳ ನಂತರ ಅಹಮದ್ ನಗರಕ್ಕೆ ಹೋಗಿ ಸಿಂಥಿಯಾ ಫೆರಾರಿ ಅವರ ಶಾಲೆಯಲ್ಲಿ ಶಿಕ್ಷಕ ತರಬೇತಿಯನ್ನು ಪಡೆದು, ಉತ್ತಮ ಅಂಕಗಳೊಂದಿಗೆ ಉತ್ತೀರ್ಣರಾಗಿ ಅಧಿಕೃತ ಶಿಕ್ಷಕಿಯರಾಗುತ್ತಾರೆ. ಆಧುನಿಕ ಶಿಕ್ಷಣವನ್ನು ಅಧ್ಯಯನ ಮಾಡಿ ಅಗತ್ಯ ಶೈಕ್ಷಣಿಕ ಅರ್ಹತೆಯನ್ನು ಪಡೆದ ಮತ್ತು ಕಲಿಸಿದ ಮೊದಲ ಮಹಿಳೆ ಅನ್ನುವ ಖ್ಯಾತಿಗೆ ಫಾತಿಮಾ ಶೇಕ್ ಪಾತ್ರರಾಗುತ್ತಾರೆ.

ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ನಲುಗಿದ, ಶೋಷಣೆಗೆ ಈಡಾದ ಹೆಣ್ಣು ಮಕ್ಕಳಿಗೆ ಶಿಕ್ಷಣವನ್ನು ಕೊಡುವ ಉದ್ದೇಶದಿಂದ ಸಾವಿತ್ರಿಬಾಯಿ ಫುಲೆ ಮತ್ತು ಫಾತಿಮಾ ಶೇಕ್‌ರ ಕೊಡುಗೆ ಅಪಾರವಾದದ್ದು. ಇಂದು ‘ಬೇಟಿ ಬಚಾವೋ ಭೇಟಿ ಪಢಾವೋ’ ಎನ್ನುವ ಈ ಘೋಷವಾಕ್ಯವನ್ನು ಸಾಕಾರಗೊಳಿಸಲು 175 ವರ್ಷಗಳ ಹಿಂದೆಯೇ ಸಾಕಷ್ಟು ಕೆಲಸ ಮಾಡಿದ್ದಾರೆ. ಅಂದು ಫಾತಿಮಾ ಶೇಕ್ ಮನೆಮನೆ ತಿರುಗಿ ಮಹಿಳೆಯರನ್ನು ಶಾಲೆಗೆ ಕರೆತಂದು ಅಕ್ಷರ ಕಲಿಸುತ್ತಿದ್ದರು. ಸಾವಿತ್ರಿಬಾಯಿ ಫುಲೆ ಅವರು ಜೊತೆಗೆ ಶೈಕ್ಷಣಿಕ ಚಟುವಟಿಕೆಗಳನ್ನು ನಿರ್ವಹಿಸುತ್ತಿದ್ದರು. ಸಾವಿತ್ರಿಬಾಯಿ ಫುಲೆಯವರು ಅನುಭವಿಸಿದ ನೋವು, ಸಂಕಟ, ಅವಮಾನ, ದೈಹಿಕ ಮತ್ತು ಮಾನಸಿಕ ಹಿಂಸೆ ಫಾತಿಮಾ ಶೇಕ್ ಕೂಡ ಅನುಭವಿಸಿದ್ದಾರೆ.

ಕಳೆದ ಎಂಟು-ಹತ್ತು ವರ್ಗಗಳಿಂದ ಅಕ್ಷರದವ್ವ ಸಾವಿತ್ರಿ ಬಾಯಿ ಫುಲೆ ಅವರ ಜಯಂತಿ, ವಿಚಾರ ಸಂಕಿರಣ, ಚರ್ಚೆ ನಡೆಯುತ್ತಿವೆ. ಆದರೆ ಫಾತಿಮಾ ಶೇಕ್ ಅವರ ಚರಿತ್ರೆ ಮಸುಕಾಗಿ ಕಾಣಿಸುತ್ತಿದೆ. ಈ ಕುರಿತು ವಿದ್ವಾಂಸರು, ಸಂಶೋಧಕರು ಗಮನಹರಿಸಿ ಚಾರಿತ್ರಿಕ ಸತ್ಯವನ್ನು ಹೊರಹಾಕಬೇಕಾಗಿದೆ.

Tags

Fatima SheikhIndiaMuslim teacher
share
ಡಾ. ಖಾಜಾವಲಿ ಈಚನಾಳ
ಡಾ. ಖಾಜಾವಲಿ ಈಚನಾಳ
Next Story
X