Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಪರೀಕ್ಷಾ ಅಕ್ರಮ ವಿರುದ್ಧದ ಹೋರಾಟ:...

ಪರೀಕ್ಷಾ ಅಕ್ರಮ ವಿರುದ್ಧದ ಹೋರಾಟ: ಜಾರ್ಖಂಡ್ ಹೇಗೆ ನಿಭಾಯಿಸುತ್ತದೆ?

ವಿನಯ್ ಕೆ.ವಿನಯ್ ಕೆ.6 Aug 2026 11:12 AM IST
share
ಪರೀಕ್ಷಾ ಅಕ್ರಮ ವಿರುದ್ಧದ ಹೋರಾಟ: ಜಾರ್ಖಂಡ್ ಹೇಗೆ ನಿಭಾಯಿಸುತ್ತದೆ?

ಜಾರ್ಖಂಡ್‌ನ ರಾಂಚಿಯಲ್ಲಿಯೂ ಜಂತರ್ ಮಂತರ್‌ನಂತೆಯೇ ಪರೀಕ್ಷಾ ರಿಗ್ಗಿಂಗ್ ವಿರುದ್ಧ ಚಳವಳಿ ಜೋರಾಗುತ್ತಿದೆ. ಜಾರ್ಖಂಡ್ ಸಾರ್ವಜನಿಕ ಸೇವಾ ಆಯೋಗದ ಭ್ರಷ್ಟ ಮುಖ ಮತ್ತೊಮ್ಮೆ ಬಯಲಾಗುತ್ತಿದೆ. ಆಯೋಗ ಸರಿಯಾಗಿ ಪರೀಕ್ಷೆಗಳನ್ನು ನಡೆಸಲು ಸಾಧ್ಯವಾಗದಿದ್ದರೆ, ಅದರ ವಿರುದ್ಧದ ಸಣ್ಣದೊಂದು ಅನುಮಾನವೂ ಸಮರ್ಥನೀಯ ಎಂದೇ ಕಾಣುತ್ತದೆ.

ವಿದ್ಯಾರ್ಥಿಗಳು ತಮ್ಮ ಉದ್ಯೋಗ ಪರೀಕ್ಷೆಗಳಲ್ಲಿ ಪ್ರಾಮಾಣಿಕತೆಗಾಗಿ ಒತ್ತಾಯಿಸುತ್ತಿದ್ದಾರೆ. ಜೊತೆಗೆ, ಜಾರ್ಖಂಡ್ ಸಾರ್ವಜನಿಕ ಸೇವಾ ಆಯೋಗದ ಅಧ್ಯಕ್ಷರು ಮತ್ತು ಸದಸ್ಯರ ನೇಮಕ ಪ್ರಕ್ರಿಯೆಯಲ್ಲಿ ಪಾರದರ್ಶಕತೆಗಾಗಿ ಕೂಡ ಒತ್ತಾಯಿಸುತ್ತಿದ್ದಾರೆ.

ಈ ಆಯೋಗದ ನೌಕರರು ಮತ್ತು ಅಧಿಕಾರಿಗಳು ವಿದ್ಯಾರ್ಥಿಗಳ ಭವಿಷ್ಯ ಹಾಳುಮಾಡಿದ್ದಾರೆ. ವಿದ್ಯಾರ್ಥಿಗಳ ಭವಿಷ್ಯದ ಜೊತೆ ಆಟವಾಡುತ್ತಿರುವ ಅಧಿಕಾರಿಗಳು ಮತ್ತು ನೌಕರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಲಾಗುತ್ತಿದೆ.

ಜಾರ್ಖಂಡ್‌ನಲ್ಲಿ ಈ ಆಯೋಗ ಮತ್ತು ಸಿಬ್ಬಂದಿ ಆಯ್ಕೆ ವಿರುದ್ಧ ಪ್ರತಿಭಟನೆಗಳು ನಡೆಯುತ್ತಿರುವುದು ಇದೇ ಮೊದಲಲ್ಲ. ಬಿಜೆಪಿ ಸರಕಾರದ ಅವಧಿಯಲ್ಲಿಯೂ ಜಾರ್ಖಂಡ್‌ನಲ್ಲಿ ಹಲವಾರು ಪ್ರತಿಭಟನೆಗಳು ನಡೆದಿವೆ.ಇದನ್ನು ನೋಡಿದ್ದ ಹೇಮಂತ್ ಸೊರೇನ್ ಸರಕಾರ ಆಯೋಗವನ್ನು ಸುಧಾರಿಸಬೇಕಿತ್ತು.

ಅಧ್ಯಕ್ಷರ ನೇಮಕಾತಿ ಮತ್ತು ಅದರ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಕುರಿತ ಬೇಡಿಕೆ ಸಂಪೂರ್ಣ ಸಮರ್ಥನೀಯವಾಗಿದೆ. ಈಗ ಸರಕಾರ ಅಧ್ಯಕ್ಷರಾಗಿ ಯಾರನ್ನು ನೇಮಿಸುತ್ತಿದೆ ಮತ್ತು ಅವರು ಏನು ಮಾಡುತ್ತಾರೆ ಎಂಬುದನ್ನು ಬಹಿರಂಗಪಡಿಸಬೇಕಿದೆ.

ಮೋದಿ ಸರಕಾರ ಪರೀಕ್ಷೆಗಳನ್ನು ನಡೆಸಲು ಎನ್‌ಟಿಎ ಅನ್ನು ರಚಿಸಿತು.

ಅದರ ಮುಖ್ಯಸ್ಥರಾಗಿ ನೇಮಕಗೊಂಡ ಪಿ.ಕೆ. ಜೋಶಿಯ ೨೦ ವರ್ಷಗಳ ವೃತ್ತಿಜೀವನದಲ್ಲಿ ಸುಮಾರು ೧೩ ಪ್ರಮುಖ ವಿವಾದಗಳು ನಡೆದಿವೆ. ಪ್ರಶ್ನೆಪತ್ರಿಕೆ ಸೋರಿಕೆಯಲ್ಲೂ ಅವರ ಹೆಸರು ಬರುತ್ತದೆ. ಅದರ ಹೊರತಾಗಿಯೂ, ಅವರ ವಿರುದ್ಧ ಯಾವ ಕ್ರಮವೂ ಜರುಗಲಿಲ್ಲ. ಬದಲಿಗೆ ಅವರು ಭಡ್ತಿಯ ಮೇಲೆ ಭಡ್ತಿ ಪಡೆಯುತ್ತಲೇ ಇದ್ದರು. ಧರ್ಮೇಂದ್ರ ಪ್ರಧಾನ್ ಶಿಕ್ಷಣ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರೂ, ಪಿ.ಕೆ. ಜೋಶಿ ಈಗಲೂ ಎನ್‌ಟಿಎ ಅಧ್ಯಕ್ಷರಾಗಿ ಉಳಿದಿದ್ದಾರೆ.

ಇದನ್ನು ಗಮನಿಸಿರುವ ಜಾರ್ಖಂಡ್‌ನ ವಿದ್ಯಾರ್ಥಿಗಳು, ಆಯೋಗದ ಅಧ್ಯಕ್ಷರ ನೇಮಕ ಪ್ರಕ್ರಿಯೆ ಪಾರದರ್ಶಕವಾಗಿರಬೇಕು ಎಂದು ಒತ್ತಾಯಿಸುತ್ತಿದ್ದಾರೆ.

ಆಯೋಗದ ಬಗ್ಗೆ ವಿದ್ಯಾರ್ಥಿಗಳಲ್ಲಿ ಹತಾಶೆ ಇದೆ ಮತ್ತು ಈ ಹತಾಶೆ ಕೇವಲ ಈ ವರ್ಷದ ಪರೀಕ್ಷೆಯ ಕಾರಣದಿಂದ ಬಂದದ್ದಲ್ಲ. ಅದು ಹಲವು ವರ್ಷಗಳಿಂದ ಜಾರ್ಖಂಡ್‌ನ ಯುವಕರಲ್ಲಿ ಉಳಿದಿದೆ. ಅದಕ್ಕೆ ಬಿಜೆಪಿ ಕೂಡ ಬೆಲೆ ತೆತ್ತಿದೆ ಮತ್ತು ಈಗ ಹೇಮಂತ್ ಸೊರೇನ್ ಸರಕಾರದ ಬಗ್ಗೆ ಪ್ರಶ್ನೆಗಳು ಎದ್ದಿವೆ.

ಜುಲೈ ೪ರಂದು ವಿದ್ಯಾರ್ಥಿಗಳು ಜೆಪಿಎಸ್‌ಸಿ ಕಚೇರಿಯ ಹೊರಗೆ ಪ್ರದರ್ಶನ ಮಾಡಿದಾಗ ಚಳವಳಿ ಪ್ರಾರಂಭವಾಯಿತು. ಅದು ಹಂತ ಹಂತವಾಗಿ ಬೆಳೆಯಿತು ಮತ್ತು ಈಗ ವಿದ್ಯಾರ್ಥಿಗಳು ಜೈಪಾಲ್ ಸಿಂಗ್ ಮುಂಡಾ ಕ್ರೀಡಾಂಗಣವನ್ನು ತಲುಪಿದ್ದಾರೆ.

ದಿಲ್ಲಿಯ ಮಡಿಲ ಮೀಡಿಯಾಗಳು ಜಾರ್ಖಂಡ್ ಪ್ರತಿಭಟನೆಗಳ ಬಗ್ಗೆ ಆಕ್ರೋಶ ಹೊರಹಾಕುತ್ತಿವೆ. ಜಂತರ್ ಮಂತರ್ ಪ್ರತಿಭಟನೆಗಳಿಂದ ದೂರವಿದ್ದ ಮಡಿಲ ಚಾನೆಲ್‌ಗಳು, ವಿರೋಧಪಕ್ಷದ ಸರಕಾರವಿರುವ ರಾಜ್ಯದಲ್ಲಿ ಅದೇ ಪ್ರತಿಭಟನೆಯ ಸುದ್ದಿ ಮಾಡುತ್ತಿವೆ.

ಜಾರ್ಖಂಡ್ ಸಾರ್ವಜನಿಕ ಸೇವಾ ಆಯೋಗ ಮತ್ತು ಸಿಬ್ಬಂದಿ ಆಯ್ಕೆ ಆಯೋಗ ಇಷ್ಟು ವರ್ಷಗಳಿಂದ ಯಾವುದೇ ಸುಧಾರಣೆ ಕಾಣದಿದ್ದರೆ, ವಿದ್ಯಾರ್ಥಿಗಳ ಚಳವಳಿಯನ್ನು ತಳ್ಳಿಹಾಕಲು ಸಾಧ್ಯವಿಲ್ಲ.

ಜಾರ್ಖಂಡ್ ವಿದ್ಯಾರ್ಥಿಗಳ ಕೋಪ ವರ್ಷಗಳಷ್ಟು ಹಳೆಯದು.

ಅವರು ೧೧ ದಿನಗಳಿಂದ ಪ್ರತಿಭಟನೆಯಲ್ಲಿ ತೊಡಗಿದ್ದಾರೆ.

ಪ್ರತಿಭಟನಾ ಸ್ಥಳದಲ್ಲಿ ವಿದ್ಯಾರ್ಥಿ ನಾಯಕ ದೇವೇಂದ್ರನಾಥ್ ಮಹಾತೋ ಮೂರು ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ. ಜಾರ್ಖಂಡ್ ಡೆಮಾಕ್ರಟಿಕ್ ರೆವಲ್ಯೂಷನರಿ ಫ್ರಂಟ್‌ನ ಸದಸ್ಯರಾದ ಅವರು ಲೋಕಸಭೆ ಮತ್ತು ವಿಧಾನಸಭಾ ಚುನಾವಣೆಗಳಲ್ಲಿ ಸ್ಪರ್ಧಿಸಿದ್ದಾರೆ.

ಹೇಮಂತ್ ಸೊರೇನ್ ನಮ್ಮೊಂದಿಗೆ ಮಾತನಾಡಬೇಕು ಅಥವಾ ರಾಜೀನಾಮೆ ನೀಡಬೇಕು ಎಂದು ಅವರು ಒತ್ತಾಯಿಸುತ್ತಿದ್ದಾರೆ.

ಸಿಬಿಐ ತನಿಖೆಯ ವರದಿ ಸಲ್ಲಿಸಲಾಗಿದ್ದರೂ, ಸರಕಾರ ಇನ್ನೂ ವಿಚಾರಣೆಗೆ ಏಕೆ ಅನುಮೋದನೆ ನೀಡಿಲ್ಲ ಎಂದು ಕೇಳಲಾಗುತ್ತಿದೆ.

ಜಾರ್ಖಂಡ್ ಅರ್ಹತಾ ಪರೀಕ್ಷೆಯನ್ನು ಎಪ್ರಿಲ್ ೨೬ರಂದು ನಡೆಸಲಾಯಿತು. ಈ ಪರೀಕ್ಷೆಯಲ್ಲೂ ಅವ್ಯವಸ್ಥೆ ಉಂಟಾಯಿತು. ಎರಡು ವಿಷಯಗಳ ಪ್ರಶ್ನೆ ಪತ್ರಿಕೆಗಳನ್ನು ರಾಂಚಿ ಮತ್ತು ಬೊಕಾರೊದಲ್ಲಿನ ಕೇಂದ್ರಗಳಿಗೆ ಸಾಕಷ್ಟು ಸಂಖ್ಯೆಯಲ್ಲಿ ತಲುಪಿಸಲಿಲ್ಲ. ತಲುಪಿದ್ದವುಗಳ ಮುದ್ರಣ ಕೂಡ ತುಂಬಾ ಕಳಪೆಯಾಗಿತ್ತು. ಅವುಗಳನ್ನು ಓದಲು ಸಾಧ್ಯವಾಗಲಿಲ್ಲ. ಎರಡೂ ವಿಷಯಗಳ ಪರೀಕ್ಷೆಗಳನ್ನು ರದ್ದುಗೊಳಿಸಲು ಒತ್ತಾಯಿಸಲಾಯಿತು.

ನೇಹಾ ಬೋರಾ ಮತ್ತು ಅವರ ವಿದ್ಯಾರ್ಥಿ ಸಂಘಟನೆ ಅಯಿಸಾ ಕಡೆಯಿಂದ ಈ ಚಳವಳಿಗೆ ಬೆಂಬಲ ವ್ಯಕ್ತವಾಗಿದೆ. ಸಿಜೆಪಿ ಕೂಡ ಬೆಂಬಲಿಸಿದೆ.

ಜಾರ್ಖಂಡ್ ವಿದ್ಯಾರ್ಥಿಗಳು ಬಿಜೆಪಿ ಸರಕಾರ ಇರುವಾಗಲೂ ಪ್ರತಿಭಟನೆ ನಡೆಸಿದ್ದಾರೆ ಮತ್ತು ಹೇಮಂತ್ ಸೊರೇನ್ ಸರಕಾರದ ಅವಧಿಯಲ್ಲೂ ಪ್ರತಿ ಭಟನೆ ಮುಂದುವರಿಸಿದ್ದಾರೆ. ಸರಕಾರಗಳು ಬದಲಾಗುತ್ತಿವೆ. ಆದರೆ ಇನ್ನೂ, ಈ ಆಯೋಗಗಳ ಕಾರ್ಯನಿರ್ವಹಣೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ.

ರಾಜ್ಯ ಸರಕಾರ ದಿಲ್ಲಿ ಪೊಲೀಸರಂತೆ ವಿದ್ಯಾರ್ಥಿಗಳ ವಿರುದ್ಧ ಇನ್ನೂ ಕ್ರೂರ ಕೃತ್ಯ ಎಸಗಿಲ್ಲ. ಜಾರ್ಖಂಡ್ ಸಿಐಡಿ ತಂಡ ರಾಂಚಿ, ಪಲಾಮು, ಹಝಾರಿಬಾಗ್, ಬೊಕಾರೊ ಮತ್ತು ಧನ್ಬಾದ್ ಜಿಲ್ಲೆಗಳಲ್ಲಿ ಹಲವಾರು ಸ್ಥಳಗಳ ಮೇಲೆ ದಾಳಿ ನಡೆಸಿದೆ. ೧೦ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ.

ಅವರಲ್ಲಿ ಅಭಯ್ ತಿವಾರಿ ಎಂಬ ವ್ಯಕ್ತಿಯೂ ಸೇರಿದ್ದು, ಆತನೊಬ್ಬನೇ ಹತ್ತಕ್ಕೂ ಹೆಚ್ಚು ಕೇಂದ್ರ ಮತ್ತು ರಾಜ್ಯ ಪರೀಕ್ಷೆಗಳಲ್ಲಿ ಪಾಸಾಗಿರುವ ಬಗ್ಗೆ ಹೇಳಲಾಗುತ್ತಿದೆ. ಆತನನ್ನು ಆಪಾದಿತ ಮಾಸ್ಟರ್ ಮೈಂಡ್ ಎಂದು ಕರೆಯಲಾಗುತ್ತಿದೆ. ಅಭಯ್ ತಿವಾರಿ ಬಂಧನದ ಕುರಿತ ವರದಿಯ ಕ್ಲಿಪ್ಪಿಂಗ್ ಅನ್ನು ಜಾರ್ಖಂಡ್ ಮುಕ್ತಿ ಮೋರ್ಚಾ ಕೂಡ ಟ್ವೀಟ್ ಮಾಡಿದೆ.

ತಿವಾರಿ JPSC ಪರೀಕ್ಷೆಗಳನ್ನು ನಡೆಸುವ ಸಂಸ್ಥೆಯಾದ TDPLನಲ್ಲಿ ಮಾರ್ಕೆಟಿಂಗ್ ಮ್ಯಾನೇಜರ್ ಆಗಿದ್ದರು ಎಂದು ವರದಿಯಾಗಿದೆ. ಅವರು ಹಲವಾರು ಪರೀಕ್ಷೆಗಳಲ್ಲಿ ಉತ್ತೀರ್ಣರಾಗಲು ಈ ಅವಕಾಶ ಬಳಸಿಕೊಂಡರು ಎನ್ನಲಾಗಿದೆ. ಮತ್ತೊಂದು ವರದಿಯಲ್ಲಿ, ಅಭಯ್ ತಿವಾರಿ ಜಾರ್ಖಂಡ್ ಸರಕಾರದ ಉದ್ಯೋಗಿ ಎಂದು ಹೇಳಲಾಗಿದೆ.

ಬಂಧಿತ ಮತ್ತೊಬ್ಬ ಪ್ರಮುಖ ವ್ಯಕ್ತಿ ಸುಮನ್ ಸೌರಭ್ ಕೂಡ ಪರೀಕ್ಷೆಯಲ್ಲಿ ಪಾಸಾಗಿರುವುದಾಗಿ ಹೇಳಲಾಗಿದೆ.

ಸಿಐಡಿ ತಂಡ ರಾಂಚಿಯ ಲಾಲ್‌ಪುರದಲ್ಲಿರುವ ಪತಂಜಲಿ ಅಕಾಡಮಿಯ ಕೋಚಿಂಗ್ ಸಂಸ್ಥೆಯ ಆವರಣ ಮತ್ತು ಅದರ ನಿರ್ವಾಹಕ ಸಂಜೀತ್ ನಿವಾಸದ ಮೇಲೂ ದಾಳಿ ನಡೆಸಿದೆ.

ವಿದ್ಯಾರ್ಥಿಗಳು ಸಿಬಿಐ ಮತ್ತು ಈ.ಡಿ. ತನಿಖೆ ನಡೆಸಬೇಕು ಮತ್ತು ವಿಚಾರಣೆಯನ್ನು ತ್ವರಿತ ನ್ಯಾಯಾಲಯದಲ್ಲಿ ನಡೆಸಬೇಕು ಎಂದು ಒತ್ತಾಯಿಸುತ್ತಿದ್ದಾರೆ.

ಮುಖ್ಯಮಂತ್ರಿ ಹೇಮಂತ್ ಸೊರೇನ್ ವಿದ್ಯಾರ್ಥಿಗಳಿಗೆ ನ್ಯಾಯ ಸಿಗುತ್ತದೆ ಂದು ಹೇಳಿದ್ದಾರೆ. ಕಾನೂನು ಮತ್ತು ಸಾಂವಿಧಾನಿಕ ಪ್ರಕ್ರಿಯೆ ಪ್ರಕಾರ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ. ಹಾಗಾದರೆ, ಸೊರೇನ್ ಸಿಬಿಐ ತನಿಖೆಗೆ ಆದೇಶಿಸಲಿದ್ದಾರೆಯೇ?

ಅವರು ಈಗಾಗಲೇ ಎಲ್ಲಾ ಪರೀಕ್ಷೆಗಳನ್ನು ರದ್ದುಗೊಳಿಸಲು ನಿರ್ಧರಿಸಿದ್ದಾರೆ.ಜಾರ್ಖಂಡ್ ಸರಕಾರ ಈಗ ಕೋಚಿಂಗ್ ಮಾಫಿಯಾ ಜಾಲವನ್ನು ಕಿತ್ತುಹಾಕಲಾಗುತ್ತಿದೆ ಎಂದು ತೋರಿಸಲು ಬಯಸುತ್ತಿದೆ. ಈ ಹಗರಣದಲ್ಲಿ ಭಾಗಿಯಾಗಿರುವ ಎಲ್ಲರನ್ನು ಬಂಧಿಸಲಾಗುತ್ತಿದೆ.

ಇದನ್ನು ಮೊದಲೇ ಏಕೆ ಮಾಡಲಿಲ್ಲ? ಪರೀಕ್ಷಾ ರಿಗ್ಗಿಂಗ್ ವ್ಯಾಪಕವಾಗಿದೆ ಎಂದು ಸರಕಾರಕ್ಕೆ ತಿಳಿದಿಲ್ಲವೇ ಎಂಬುದು ಈಗ ಪ್ರಶ್ನೆ.

Tags

ExamJharkhand
share
ವಿನಯ್ ಕೆ.
ವಿನಯ್ ಕೆ.
Next Story
X