Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಸಂಭ್ರಮವನ್ನು ಶೋಕವಾಗಿಸುವ ಸಿಡಿಮದ್ದುಗಳು

ಸಂಭ್ರಮವನ್ನು ಶೋಕವಾಗಿಸುವ ಸಿಡಿಮದ್ದುಗಳು

ಹವ್ವಾ ಶುಕೂರ್, ಬೋಳಾರ್ಹವ್ವಾ ಶುಕೂರ್, ಬೋಳಾರ್14 Oct 2025 9:37 AM IST
share
ಸಂಭ್ರಮವನ್ನು ಶೋಕವಾಗಿಸುವ ಸಿಡಿಮದ್ದುಗಳು

ನಾವೇ ದುಡ್ಡು ಕೊಟ್ಟು ತರುವ ಸಿಡಿಮದ್ದುಗಳು ಪ್ರತಿವರ್ಷ ನೂರಾರು ಜೀವಗಳ ಹರಣಕ್ಕೆ, ಸಾವಿರಾರು ಮಂದಿ ಶಾಶ್ವತ ಅಂಗವಿಕಲರಾಗುವುದಕ್ಕೆ ಮತ್ತು ನಾವೇ ಉಸಿರಾಡುವ ಗಾಳಿ ವಿಷಪೂರಿತವಾಗುವುದಕ್ಕೆ ಕಾರಣವಾಗುತ್ತಿವೆ. ಸಾಲದ್ದಕ್ಕೆ ನಮ್ಮ ಸುತ್ತಮುತ್ತ ಇರುವ, ನಮಗೆ ಕಾಣುವ ಮತ್ತು ಸುಲಭವಾಗಿ ಕಾಣಿಸದ ಎಷ್ಟೋ ಜೀವಿಗಳು ಈ ಸಿಡಿಮದ್ದುಗಳಿಂದ ಹೊರಡುವ ಭೀಕರ ಕರ್ಕಶ ಶಬ್ದ ಮತ್ತು ತೀಕ್ಷ್ಣವಾದ ಬೆಳಕಿನಿಂದ ತೀವ್ರ ಆಘಾತಕ್ಕೊಳಗಾಗುತ್ತವೆ. ಅಪಾರ ಹಿಂಸೆಯನ್ನು ಅನುಭವಿಸುತ್ತವೆ. ಅಂತಿಮವಾಗಿ ಇದಕ್ಕೆಲ್ಲಾ ನಾವೇ ಕಾರಣರು.

ನಾವು ನಮ್ಮೆಲ್ಲಾ ಹಬ್ಬಗಳನ್ನು ಮತ್ತು ಹರ್ಷ, ಸಂಭ್ರಮದ ಎಲ್ಲ ಸಂದರ್ಭಗಳನ್ನು ಮದ್ಯ ಮುಕ್ತ, ಪಟಾಕಿ ಮತ್ತು ಅಪವ್ಯಯ ಮುಕ್ತಗೊಳಿಸಿದರೆ ಖಂಡಿತವಾಗಿಯೂ ಅವುಗಳನ್ನು ದುರಂತಮುಕ್ತ, ಶೋಕಮುಕ್ತ ಹಾಗೂ ದುಬಾರಿಮುಕ್ತಗೊಳಿಸಬಹುದು. ಸರಳ ಹಾಗೂ ಸುರಕ್ಷಿತವಾಗಿಸಬಹುದು.

ನಾವು ಭಾರತೀಯರು ತುಂಬಾ ಸಾಹಸಪ್ರಿಯರು ಮತ್ತು ಉದಾರಿಗಳು. ಹಬ್ಬಗಳನ್ನು ಆಚರಿಸಲಿಕ್ಕೆ ಹಾಗೂ ಮದುವೆ, ವಿಜಯೋತ್ಸವ ಮತ್ತಿತರ ಯಾವುದೇ ಹರ್ಷದ ಸಂದರ್ಭಗಳಲ್ಲಿ ಸಂಭ್ರಮಿಸಲಿಕ್ಕೆ ನಮ್ಮ ಬಳಿ ಸಾವಿರ ಮಾರ್ಗಗಳಿವೆ. ಆದರೂ ನಾವು ಮಾತ್ರ ತುಂಬಾ ಅಪಾಯಕಾರಿ ಹಾಗೂ ದುಬಾರಿಯಾದ ಸಿಡಿಮದ್ದುಗಳನ್ನು ಖರೀದಿಸಿ ಅವುಗಳನ್ನು ಸಿಡಿಸಿಯೇ ಸಂಭ್ರಮಿಸುತ್ತೇವೆಂದು ಪಣತೊಟ್ಟಿದ್ದೇವೆ. ಪಟಾಕಿ-ಸಿಡಿಮದ್ದುಗಳಿಗಾಗಿಯೇ ನಾವು ನಮ್ಮ ಬಡ ದೇಶದಲ್ಲಿ ಪ್ರತಿವರ್ಷ 10ರಿಂದ 15 ಸಾವಿರ ಕೋಟಿ ರೂಪಾಯಿ ಖರ್ಚು ಮಾಡುತ್ತೇವೆ. ಒಂದು ಅಂದಾಜಿನಂತೆ ಈ ಮೊತ್ತವು 20 ಸಾವಿರ ಕೋಟಿ ರೂಪಾಯಿಗಿಂತಲೂ ಅಧಿಕವಿದೆ. ಕೇವಲ ದೀಪಾವಳಿ ಹಬ್ಬದ ಸೀಝನ್‌ನಲ್ಲಿ ಪಟಾಕಿಗಾಗಿ ನಾವು ಮಾಡುವ ವೆಚ್ಚವು ರೂ. 6ರಿಂದ 8 ಸಾವಿರ ಕೋಟಿಯಷ್ಟಾಗುತ್ತದೆ. ನಾವೆಲ್ಲಾ ಮನಸ್ಸು ಮಾಡಿದರೆ ಅಷ್ಟು ಹಣವನ್ನು ಬಳಸಿ, ಒಂದು ಹೊತ್ತಿನ ಊಟ ಸಿಕ್ಕರೆ ಅದುವೇ ಹಬ್ಬವೆನ್ನುವ ಸ್ಥಿತಿಯಲ್ಲಿರುವ ಲಕ್ಷಾಂತರ ಕುಟುಂಬಗಳಿಗೆ ಭರ್ಜರಿ ಭೋಜನ ನೀಡಿ ಅವರನ್ನು ಸಂತೋಷಪಡಿಸಿ ಆಮೂಲಕ ನಮ್ಮ ಹರ್ಷವನ್ನು ಹೆಚ್ಚಿಸಿಕೊಳ್ಳಬಹುದು.

ವಿಪರ್ಯಾಸವೆಂದರೆ, ಹರ್ಷಿಸುವುದಕ್ಕಾಗಿ ನಾವು ಅಷ್ಟೆಲ್ಲಾ ಖರ್ಚು ಮಾಡಿ ಖರೀದಿಸಿ ತರುವ ಪಟಾಕಿ ಮತ್ತು ಸಿಡಿಮದ್ದುಗಳಿಗೆ ಹಬ್ಬ ಹಾಗೂ ಹರ್ಷಗಳೊಂದಿಗೆ ಇರುವಷ್ಟೇ ಗಾಢ ಸಂಬಂಧ ದುರಂತ ಹಾಗೂ ಶೋಕಗಳ ಜೊತೆಗೂ ಇದೆ. ಕಳೆದ ವರ್ಷ ನವೆಂಬರ್‌ನಲ್ಲಿ, ಅಂದರೆ ದೀಪಾವಳಿ ಸೀಝನ್‌ನಲ್ಲಿ ನಮ್ಮ ಬೆಂಗಳೂರಿನಲ್ಲೇ ಸಿಡಿಮದ್ದು ಸಿಡಿಸುವ ಭರಾಟೆಯಲ್ಲಿ ಹಲವು ದುರ್ಘಟನೆಗಳು ಸಂಭವಿಸಿದವು. ನಗರದ ಆರು ನೇತ್ರ ಚಿಕಿತ್ಸಾಲಯಗಳು ಒದಗಿಸಿದ ಮಾಹಿತಿ ಪ್ರಕಾರ, ಸಿಡಿಮದ್ದುಗಳಿಂದಾಗಿ ಕಣ್ಣಿಗೆ ಹಾನಿಯಾದ 174 ಪ್ರಕರಣಗಳು ದಾಖಲಾಗಿದ್ದವು. ಅವರಲ್ಲಿ 93 ಮಂದಿ ಮಕ್ಕಳಾಗಿದ್ದರು. ಅಕ್ಟೋಬರ್ 31 ಮತ್ತು ನವೆಂಬರ್ 3ರ ನಡುವೆ ‘ನಾರಾಯಣ ನೇತ್ರಾಲಯ’ ಎಂಬ ಬೆಂಗಳೂರಿನ ಒಂದೇ ಆಸ್ಪತ್ರೆಯಲ್ಲಿ ಸಿಡಿಮದ್ದುಗಳಿಂದಾಗಿ ಕಣ್ಣುಗಳಿಗೆ ಹಾನಿಯಾದ 73 ಮಂದಿ ಚಿಕಿತ್ಸೆ ಪಡೆದರು. ಅವರಲ್ಲಿ 35 ಮಂದಿ ಎಳೆಯ ವಯಸ್ಸಿನವರಾಗಿದ್ದರು. 14 ಮಂದಿಯಂತೂ 10 ವರ್ಷಕ್ಕಿಂತಲೂ ಕೆಳಗಿನವರಾಗಿದ್ದರು. ಹೇಗಿದೆ ನಾವೇ ದುಡ್ಡು ಕೊಟ್ಟು ನಮ್ಮ ಮತ್ತು ನಮ್ಮ ಎಳೆಯರ ಮೈಮೇಲೆ ಎಳೆದುಕೊಳ್ಳುವ ಕುರುಡುತನ?





ಪಟಾಕಿ ಮತ್ತಿತರ ಸಿಡಿಮದ್ದುಗಳ ಉತ್ಪಾದನೆಯ ಪ್ರಕ್ರಿಯೆಯೇ ಹಲವು ಭೀಕರ ದುರಂತಗಳನ್ನು ಒಳಗೊಂಡಿರುತ್ತದೆ. ಈ ಉದ್ದಿಮೆಯಲ್ಲಿ ಉದ್ಯೋಗ ಮಾಡುವ ಕಾರ್ಮಿಕರ ಹಿತಾಸಕ್ತಿಗಾಗಿ ಸಕ್ರಿಯವಾಗಿರುವ ‘ಹ್ಯೂಮನ್ ರಿಸೋರ್ಸ್ ಫೌಂಡೇಶನ್’ (HRF) ಸಂಸ್ಥೆಯ ಪ್ರಕಾರ, ಕೇವಲ ತಮಿಳುನಾಡಿನ ಶಿವಕಾಶಿಯಲ್ಲಿ, ಪಟಾಕಿ ನಿರ್ಮಿಸುವ ಕಾರ್ಖಾನೆಗಳಲ್ಲಿ ಸಂಭವಿಸುವ ದುರಂತಗಳಲ್ಲಿ ಪ್ರತಿವರ್ಷ ಆ ಕಾರ್ಖಾನೆಗಳ 50ರಿಂದ 100 ಕಾರ್ಮಿಕರು ಪ್ರಾಣ ಕಳೆದುಕೊಳ್ಳುತ್ತಾರೆ. ಇವೆಲ್ಲಾ ಕೇವಲ ಸಿಡಿಮದ್ದುಗಳ ಉತ್ಪಾದನೆಯ ಹಂತದ ದುರಂತಗಳಾದರೆ, ಅವುಗಳ ಶೇಖರಣೆ, ಸಾಗಾಟ ಮತ್ತು ಬಳಕೆಯ ವೇಳೆ ಸಂಭವಿಸುವ ದುರಂತಗಳ ಸರಮಾಲೆ ಬೇರೆಯೇ ಇದೆ.

ಭಾರತದಲ್ಲಿ ಪ್ರತಿವರ್ಷ ಸುಮಾರು 3,200 ಕೋಟಿ ರೂಪಾಯಿ ಮೌಲ್ಯದ 50 ಸಾವಿರ ಟನ್‌ನಷ್ಟು ಸಿಡಿಮದ್ದು ತಯಾರಾಗುತ್ತದೆ. ಇದರ ಶೇ. 85 ಭಾಗವು ತಮಿಳುನಾಡಿನ ವಿರುಧುನಗರ ಜಿಲ್ಲೆಯಲ್ಲಿ ತಯಾರಾಗುತ್ತದೆ. ‘ಸಿಡಿಮದ್ದುಗಳ ರಾಜಧಾನಿ’ ಎಂದೇ ಕುಖ್ಯಾತವಾಗಿರುವ ಶಿವಕಾಶಿ ಇದೇ ಜಿಲ್ಲೆಯಲ್ಲಿದೆ. ಈ ಜಿಲ್ಲೆಯ ಶಿವಕಾಶಿ ಸಮೇತ ಹಲವು ಊರುಗಳಲ್ಲಿ ಸಿಡಿಮದ್ದು ತಯಾರಿಸುವ ನೂರಾರು ಕಾರ್ಖಾನೆಗಳಿವೆ. ರಾಷ್ಟ್ರೀಯ ಹಸಿರು ಟ್ರಿಬ್ಯೂನಲ್ (NGT)ಗೆ ದೊರೆತ ಮಾಹಿತಿ ಪ್ರಕಾರ, ಕೇವಲ ವಿರುಧುನಗರ ಜಿಲ್ಲೆಯೊಂದರಲ್ಲೇ ಅಧಿಕೃತ ಪರವಾನಿಗೆ ಪಡೆದಿರುವ 1,120 ಸಿಡಿಮದ್ದು ಕಾರ್ಖಾನೆಗಳಿವೆ. ಈ ಜಿಲ್ಲೆಯಲ್ಲಿನ ಸಿಡಿಮದ್ದು ಕಾರ್ಖಾನೆಗಳಲ್ಲಿ 2022ರಿಂದ 2025 ಜೂನ್ ತನಕ 89 ದುರ್ಘಟನೆಗಳು ಸಂಭವಿಸಿದ್ದು, 134 ಮಾನವ ಜೀವಗಳು ಬಲಿಯಾಗಿವೆ. ಇಲ್ಲಿನ ಜಿಲ್ಲಾಧಿಕಾರಿಯವರ ಪ್ರಕಾರ ಕಳೆದ 10 ವರ್ಷಗಳಲ್ಲಿ ಇಲ್ಲಿ ಪ್ರತಿವರ್ಷ ಸರಾಸರಿ 40 ಮಂದಿ, ಸಿಡಿಮದ್ದು ತಯಾರಿಸುವ ಕಾರ್ಖಾನೆಗಳಲ್ಲಿ ಸಂಭವಿಸುವ ದುರಂತಗಳಿಗೆ ಬಲಿಯಾಗುತ್ತಾರೆ. ಸಿಡಿಮದ್ದು ಸಂಬಂಧಿ ದುರಂತಗಳು ಕೇವಲ ತಮಿಳುನಾಡಿನ ಕಾರ್ಖಾನೆಗಳಿಗೆ ಸೀಮಿತವಲ್ಲ. ಎರಡು ತಿಂಗಳ ಹಿಂದೆ (ಆಗಸ್ಟ್ 2025) ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯ ಕೋಮಾರಿಪಾಲ್ಯಮ್ ಗ್ರಾಮದ ಲಕ್ಷ್ಮೀ ಗಣಪತಿ ಪಟಾಕಿ ಫ್ಯಾಕ್ಟರಿಯಲ್ಲಿ ಸ್ಫೋಟ ಸಂಭವಿಸಿ 6 ಮಂದಿ ಮೃತಪಟ್ಟರು ಹಾಗೂ 8 ಮಂದಿ ತೀವ್ರ ಗಾಯಗೊಂಡರು.

ಕಳೆದ ವರ್ಷ (ಅಕ್ಟೋಬರ್ 2024) ಕಾಸರಗೋಡಿನ ಸಮೀಪ ನೀಲೇಶ್ವರದ ದೇವಸ್ಥಾನವೊಂದರ ಜಾತ್ರೆಯ ವೇಳೆ ಸಂಭವಿಸಿದ ಸಿಡಿಮದ್ದು ಅಪಘಾತವೊಂದರಲ್ಲಿ 6 ಮಂದಿ ಮೃತರಾದರು ಮತ್ತು 154 ಮಂದಿ ಗಾಯಗೊಂಡರು.

ಹಿಂದೊಮ್ಮೆ (ಎಪ್ರಿಲ್ 2016) ಇದೇ ಕೇರಳದ ಕೊಲ್ಲಮ್ ಜಿಲ್ಲೆಯ ಪುತಿಂಗಳ್ ಮಂದಿರದ ಬಳಿ ಸಿಡಿಮದ್ದು ಪ್ರದರ್ಶನದ ವೇಳೆ ನಡೆದ ಸ್ಫೋಟದಲ್ಲಿ 111 ಮಂದಿ ಸಾವನ್ನಪ್ಪಿದ್ದರು, 350ಕ್ಕೂ ಹೆಚ್ಚಿನ ಜನರು ಗಾಯಗೊಂಡಿದ್ದರು ಮತ್ತು ಅಕ್ಕಪಕ್ಕದ ಸುಮಾರು 150 ಮನೆ ಮತ್ತಿತರ ಕಟ್ಟಡಗಳಿಗೆ ಹಾನಿಯಾಗಿತ್ತು. ಕಳೆದ ವರ್ಷ (ಅಕ್ಟೋಬರ್ 2024) ‘ಕೇರಳ ಕೌಮುದಿ’ ಪತ್ರಿಕೆಯು ವರದಿ ಮಾಡಿದ ಪ್ರಕಾರ ಕಳೆದ ಎರಡು ದಶಕಗಳಲ್ಲಿ ಕೇರಳದಲ್ಲಿ ಸಿಡಿಮದ್ದುಗಳಿಂದಾಗಿ 750 ದುರ್ಘಟನೆಗಳು ಸಂಭವಿಸಿವೆ ಮತ್ತು ಅವುಗಳಲ್ಲಿ ಸುಮಾರು 500 ಮಂದಿ ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ.

ಹೀಗೆ ಪಟಾಕಿ-ಸಿಡಿಮದ್ದುಗಳಿಂದಾಗಿ ಸಂಭವಿಸಿದ ದುರ್ಘಟನೆಗಳ ಪಟ್ಟಿ ಎಂದೂ ಎಣಿಸಿ ಮುಗಿಯದಷ್ಟು ದೀರ್ಘವಾಗಿದೆ. ನಾವೇ ದುಡ್ಡು ಕೊಟ್ಟು ತರುವ ಸಿಡಿಮದ್ದುಗಳು ಪ್ರತಿವರ್ಷ ನೂರಾರು ಜೀವಗಳ ಹರಣಕ್ಕೆ, ಸಾವಿರಾರು ಮಂದಿ ಶಾಶ್ವತ ಅಂಗವಿಕಲರಾಗುವುದಕ್ಕೆ ಮತ್ತು ನಾವೇ ಉಸಿರಾಡುವ ಗಾಳಿ ವಿಷಪೂರಿತವಾಗುವುದಕ್ಕೆ ಕಾರಣವಾಗುತ್ತಿವೆ. ಸಾಲದ್ದಕ್ಕೆ ನಮ್ಮ ಸುತ್ತಮುತ್ತ ಇರುವ, ನಮಗೆ ಕಾಣುವ ಮತ್ತು ಸುಲಭವಾಗಿ ಕಾಣಿಸದ ಎಷ್ಟೋ ಜೀವಿಗಳು ಈ ಸಿಡಿಮದ್ದುಗಳಿಂದ ಹೊರಡುವ ಭೀಕರ ಕರ್ಕಶ ಶಬ್ದ ಮತ್ತು ತೀಕ್ಷ್ಣವಾದ ಬೆಳಕಿನಿಂದ ತೀವ್ರ ಆಘಾತಕ್ಕೊಳಗಾಗುತ್ತವೆ. ಅಪಾರ ಹಿಂಸೆಯನ್ನು ಅನುಭವಿಸುತ್ತವೆ. ಅಂತಿಮವಾಗಿ ಇದಕ್ಕೆಲ್ಲಾ ನಾವೇ ಕಾರಣರು.

ಭಾರತದಲ್ಲಿ ಪರಿಸರ ಮಾಲಿನ್ಯದ ಸ್ಥಿತಿ ಈಗಾಗಲೇ ತುಂಬಾ ಆಘಾತಕಾರಿಯಾಗಿದೆ. 2024ರ ‘ವರ್ಲ್ಡ್ ಏರ್ ಕ್ವಾಲಿಟಿ’ ವರದಿಯ ಪ್ರಕಾರ, ಜಗತ್ತಿನಲ್ಲಿ ಅತ್ಯಧಿಕ ಪ್ರದೂಷಿತವೆಂದು ಪರಿಗಣಿಸಲಾಗಿರುವ 20 ನಗರಗಳ ಪೈಕಿ 13 ನಗರಗಳು ನಮ್ಮ ಭಾರತದಲ್ಲಿವೆ. ಜಗತ್ತಿನ ವಿವಿಧ ದೇಶಗಳ ರಾಜಧಾನಿಗಳ ಪೈಕಿ ಅತ್ಯಧಿಕ ಪ್ರದೂಷಿತ ರಾಜಧಾನಿ ಎಂಬ ಕೀರ್ತಿ ನಮ್ಮ ಹೊಸದಿಲ್ಲಿಗೆ ಸಂದಿದೆ. ಸಿಡಿಮದ್ದುಗಳ ಮೂಲಕ ನಾವು ನೇರವಾಗಿ ಪರಿಸರ ಮಾಲಿನ್ಯವನ್ನು ಹೆಚ್ಚಿಸಿ, ಮಾಲಿನ್ಯದ ವಿಷಯದಲ್ಲಿ ನಮ್ಮ ದಾಖಲೆಯನ್ನು ಮತ್ತಷ್ಟು ಕೆಡಿಸುತ್ತಿದ್ದೇವೆ.

ಸಿಡಿಮದ್ದುಗಳಿಂದಾಗಿ ಅಲ್ಲಲ್ಲಿ ಆಗಾಗ ಸಂಭವಿಸುವ ದುರಂತಗಳ ಹಿನ್ನೆಲೆಯಲ್ಲಿ, ಎಲ್ಲ ಬಗೆಯ ಸಿಡಿಮದ್ದುಗಳ, ಉತ್ಪಾದನೆ, ಸಂಗ್ರಹ, ಸಾಗಾಟ ಮತ್ತು ಬಳಕೆಯನ್ನು ಸರಕಾರವು ನಿಷೇಧಿಸಬೇಕು ಎಂಬ ಬೇಡಿಕೆ ಬಹುಕಾಲದಿಂದ ಕೇಳಿ ಬರುತ್ತಿದೆ. ಆದರೆ ಸರಕಾರವು ನಿಷೇಧಿಸಿದ ಮಾತ್ರಕ್ಕೆ ನಮ್ಮ ಸಮಾಜದ ಯಾವುದೇ ಅನಿಷ್ಟ ನಿವಾರಣೆಯಾಗುವುದಿಲ್ಲ. ಅಸ್ಪಶ್ಯತೆಯ ಸಮೇತ ಎಷ್ಟೋ ಅನಿಷ್ಟಗಳನ್ನು ಸರಕಾರ ನಿಷೇಧಿಸಿದೆ. ಆದರೂ ಅವು ಎಲ್ಲೆಂದರಲ್ಲಿ ವ್ಯಾಪಕವಾಗಿ ಆಚರಣೆಯಲ್ಲಿವೆ. ಆದ್ದರಿಂದ ಈ ವಿಷಯದಲ್ಲಿ ಸಮಾಜದ ಎಲ್ಲ ವರ್ಗಗಳ ಜನರಲ್ಲಿ ಜಾಗೃತಿ ಮೂಡಿಸಿ, ಅವರೆಲ್ಲಾ ಸ್ವಯಂ ಸ್ಫೂರ್ತಿಯಿಂದ ಈ ಅನಿಷ್ಟವನ್ನು ತೊರೆಯುವಂತೆ ಅವರ ಮನವೊಲಿಸುವುದೊಂದೇ ಇದರ ನಿವಾರಣೆಗಿರುವ ಪರಿಣಾಮಕಾರಿ ಮಾರ್ಗ. ಎಲ್ಲ ಧರ್ಮ, ಸಮುದಾಯಗಳ ನಾಯಕರು ಮತ್ತು ವಿಶೇಷವಾಗಿ ಸಾಮಾಜಿಕ ಕಾರ್ಯಕರ್ತರು ಈ ವಿಷಯದಲ್ಲಿ ಆಸಕ್ತಿ ವಹಿಸಿ, ವ್ಯಾಪಕ ಅಭಿಯಾನಗಳನ್ನು ನಡೆಸಿದರೆ ಈ ಅನಿಷ್ಟದಿಂದ ಮುಕ್ತಿ ಅಸಾಧ್ಯವೇನಲ್ಲ.

**

ಅಕ್ರಮ ನುಸುಳುಕೋರರು ಹೊರದೇಶಗಳಿಂದ ಭಾರತದೊಳಕ್ಕೆ ಬರುತ್ತಿದ್ದಾರೆ ಮತ್ತು ಇದರಿಂದಾಗಿ ಇಲ್ಲಿನ ಧರ್ಮವಾರು ಜನಸಂಖ್ಯಾ ಪ್ರಮಾಣದಲ್ಲಿ ಅಸಮತೋಲನ ಉಂಟಾಗಿದೆ ಎಂದು ಸುಳ್ಳು ಹೇಳಿದ ನಮ್ಮ ದೇಶದ ಮಾನ್ಯ ಗೃಹ ಸಚಿವರು ಬಹಳ ಕೆಟ್ಟರೀತಿಯಲ್ಲಿ ಸಿಕ್ಕಿಬಿದ್ದಿದ್ದಾರೆ. ಮೊದಲನೆಯದಾಗಿ ತಮ್ಮ ಹೇಳಿಕೆಗೆ ಆಧಾರವೇನು? ಎಂದು ಜನರು ಕೇಳುತ್ತಿರುವ ಪ್ರಶ್ನೆಗೆ ಅವರ ಬಳಿ ಯಾವ ಉತ್ತರವೂ ಇಲ್ಲ. ಕಳೆದ 14 ವರ್ಷಗಳಿಂದ ದೇಶದಲ್ಲಿ ಯಾವುದೇ ಜನಗಣತಿ ನಡೆದಿಲ್ಲ. ಹೀಗಿರುವಾಗ ಜನಸಂಖ್ಯೆಯ ಬಗ್ಗೆ ಮಾತನಾಡುವುದಕ್ಕೆ ಲಗಾಮಿಲ್ಲದ ಊಹೆ ಮತ್ತು ರೈಲು ಬಿಡುವ ಉತ್ಸಾಹ ಬಿಟ್ಟರೆ ಬೇರಾವುದೇ ಆಧಾರವೂ ಅವರ ಬಳಿ ಇಲ್ಲ. ಸಾಲದ್ದಕ್ಕೆ, ಸಾಕ್ಷಾತ್ ನೀವೇ ಗೃಹ ಸಚಿವರಾಗಿರುವಾಗ ಮತ್ತು ದೀರ್ಘ ಕಾಲದಿಂದ ದೇಶದಲ್ಲಿ ನಿಮ್ಮದೇ ಸರಕಾರವಿರುವಾಗ ವಿದೇಶಿ ನಾಗರಿಕರು ದೊಡ್ಡ ಸಂಖ್ಯೆಯಲ್ಲಿ ಅಕ್ರಮವಾಗಿ ಗಡಿ ದಾಟಿ ದೇಶದೊಳಗೆ ಬರುವುದಾದರೂ ಹೇಗೆ? ಅವರು ಆ ರೀತಿ ಒಳಬರುವುದಕ್ಕೆ ನೀವು ಅವಕಾಶ ಮಾಡಿಕೊಟ್ಟದ್ದೇಕೆ? ನಿಮ್ಮ ಹೇಳಿಕೆ ನಿಜವೆಂದಾದರೆ ಅದಕ್ಕೆ ನಿಮ್ಮ ಘೋರ ವೈಫಲ್ಯವೇ ನೇರ ಕಾರಣವಲ್ಲವೇ? ಎಂಬ ಇನ್ನೊಂದು ಗಂಭೀರ ಪ್ರಶ್ನೆಯನ್ನೂ ಜನರು ಕೇಳುತ್ತಿದ್ದಾರೆ. ಈ ಪ್ರಶ್ನೆಗಳು ಗೃಹ ಸಚಿವರನ್ನು ತೀವ್ರ ಮುಜುಗರಕ್ಕೀಡು ಮಾಡಿವೆ. ಸುಳ್ಳು ಹೇಳುವುದರಲ್ಲಿ ಪರಮ ಪ್ರವೀಣರಾಗಿರುವ ಗೃಹ ಸಚಿವರೀಗ, ಯಾವುದೇ ಸಿದ್ಧತೆ ಇಲ್ಲದೆ ತಾನು ಅಷ್ಟು ದೊಡ್ಡ ಸುಳ್ಳನ್ನು ಯಾಕಾದರೂ ಹೇಳಿದೆ ಎಂದು ಪರಿತಪಿಸುತ್ತಿದ್ದಾರೆ.

ಇದೀಗ ಜನರು ಮಾನ್ಯ ಗೃಹ ಸಚಿವರೊಡನೆ ಕೇಳುತ್ತಿರುವ ಮೂರನೆಯ ಪ್ರಶ್ನೆಯಂತೂ ಅವರನ್ನು ಮತ್ತಷ್ಟು ಸಂಕಟಕ್ಕೆ ಸಿಲುಕಿಸಿದೆ. ಅಕ್ರಮವಾಗಿ ದೇಶದ ಒಳಗೆ ಬರುತ್ತಿರುವವರ ಬಗ್ಗೆ ಬುರುಡೆ ಬಿಡುವ ನೀವು, ಸಕ್ರಮವಾಗಿ ದೇಶವನ್ನು ತೊರೆದು ಹೋಗುತ್ತಿರುವವರ ಬಗ್ಗೆ ಯಾಕೆ ಮಾತನಾಡುತ್ತಿಲ್ಲ ಎಂಬುದೇ ಆ ಪ್ರಶ್ನೆ.

2022ರಲ್ಲಿ 2.26 ಲಕ್ಷ ಮಂದಿ ಭಾರತೀಯರು ಭಾರತದ ಪೌರತ್ವ ತೊರೆದು ಬೇರೆ ದೇಶಗಳ ಪೌರತ್ವ ಸ್ವೀಕರಿಸಿದ್ದಾರೆ. ಹಾಗೆಯೇ 2023ರಲ್ಲಿ 2.16 ಲಕ್ಷ ಮಂದಿ ಮತ್ತು ಕಳೆದ ವರ್ಷ (2024) 2.06 ಲಕ್ಷ ಮಂದಿ ಭಾರತೀಯರು ಭಾರತದ ಪೌರತ್ವ ತ್ಯಜಿಸಿದ್ದಾರೆ. 2011ರಿಂದ 2023ರ ನಡುವೆ 16.63 ಲಕ್ಷ ಮಂದಿ ಭಾರತೀಯರು ಶಾಶ್ವತವಾಗಿ ಭಾರತವನ್ನು ಮಾತ್ರವಲ್ಲ, ಭಾರತದ ಪೌರತ್ವವನ್ನು ಕೂಡಾ ತೊರೆದು ವಿದೇಶಗಳಲ್ಲಿ ನೆಲೆಯೂರಿದ್ದಾರೆ.

ಅವರಲ್ಲಿ ಹೆಚ್ಚಿನವರು ಶ್ರೀಮಂತರು. ಭಾರತವು ನಿಜಕ್ಕೂ ಬೇರೆ ದೇಶದವರನ್ನು ತನ್ನತ್ತ ಆಕರ್ಷಿಸುವಷ್ಟು ಸುಖ ಸಂಪನ್ನವಾಗಿದ್ದರೆ, ಈ ರೀತಿ ಭಾರತದಲ್ಲೇ ಹುಟ್ಟಿ ಬೆಳೆದ ಮತ್ತು ಭಾರತವನ್ನು ಬಹಳ ಚೆನ್ನಾಗಿ ಬಲ್ಲ, ಸಂಪನ್ನ ಭಾರತೀಯರು ತಮ್ಮೆಲ್ಲ ಸಂಪತ್ತಿನೊಂದಿಗೆ, ಶಾಶ್ವತವಾಗಿ ಭಾರತವನ್ನು ಬಿಟ್ಟು ಪರದೇಶಗಳಿಗೆ ವಲಸೆ ಹೋಗುತ್ತಿರುವುದೇಕೆ? ಭಾರತದ ಬದಲು ಬೇರೆ ದೇಶಗಳ ಪೌರತ್ವಕ್ಕೆ ಪ್ರಾಶಸ್ತ್ಯ ನೀಡುತ್ತಿರುವುದೇಕೆ?

ಇದು ಭಾರತೀಯರನ್ನೆಲ್ಲಾ ಚಿಂತೆಗೀಡುಮಾಡಬೇಕಾದ ಮತ್ತು ವಿಶೇಷವಾಗಿ ಗೃಹ ಸಚಿವರು ತಲೆಜಜ್ಜಿಕೊಳ್ಳಬೇಕಾದ ಪ್ರಶ್ನೆಯಾಗಿದೆ.

share
ಹವ್ವಾ ಶುಕೂರ್, ಬೋಳಾರ್
ಹವ್ವಾ ಶುಕೂರ್, ಬೋಳಾರ್
Next Story
X