Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಮೀನುಗಾರಿಕೆ ಋತು ಆಶಾದಾಯಕ ಆರಂಭ

ಮೀನುಗಾರಿಕೆ ಋತು ಆಶಾದಾಯಕ ಆರಂಭ

ಸತ್ಯಾ ಕೆ.ಸತ್ಯಾ ಕೆ.23 Aug 2025 2:58 PM IST
share
ಮಾರುಕಟ್ಟೆಗೆ ಬೊಂಡಾಸ್, ಅಂಜಲ್, ರಾಣಿಮೀನು ಲಗ್ಗೆ

ಮಂಗಳೂರು: ರಾಜ್ಯದಲ್ಲಿ ಪ್ರಸಕ್ತ ಸಾಲಿನ ಮೀನುಗಾರಿಕೆ ಋತುವಿನ ಆರಂಭ ಆಶಾದಾಯಕವಾಗಿದ್ದು, ಕಡಲಿಗಿಳಿದಿರುವ ಪರ್ಸೀನ್ ಮತ್ತು ಟ್ರಾಲ್‌ಬೋಟ್‌ಗಳಲ್ಲಿ ಮೀನಿನ ಸಂಗ್ರಹವೂ ಉತ್ತಮವಾಗಿದೆ. ಕಳೆದ ಋತುವಿನಲ್ಲಿ ಮೀನು ಸಂಗ್ರಹ ಭಾರೀ ಪ್ರಮಾಣದಲ್ಲಿ ಕುಸಿತ ಕಂಡಿದ್ದು, ಈ ಬಾರಿಯ ಆರಂಭಿಕ ಚೇತರಿಕೆ ಮೀನುಗಾರರ ಮೊಗದಲ್ಲಿ ಮಂದಹಾಸಕ್ಕೆ ಕಾರಣವಾಗಿದೆ.

ಈ ನಡುವೆ ಮೀನು ಪ್ರಿಯರು ಖುಷ್ ಆಗಿದ್ದು, ಕಳೆದ ಮೇ, ಜೂನ್, ಜುಲೈ ತಿಂಗಳಲ್ಲಿ ಕೆಜಿಗೆ 1,200 ರೂ. ತಲುಪಿದ್ದ ಅಂಜಲ್ ಮೀನು ಸದ್ಯ ಮಾರುಕಟ್ಟೆಯಲ್ಲಿ 400 ರೂ.ಗಳಲ್ಲಿ ದೊರೆಯುತ್ತಿದೆ. ಇದಲ್ಲದೆ ಬೊಂಡಾಸ್, ರಾಣಿ ಮೀನು ಮಾರುಕಟ್ಟೆಗೆ ಲಗ್ಗೆ ಇರಿಸಿದ್ದು, ಮೀನಿನ ದರವೂ ಅಗ್ಗವಾಗಿದೆ.

ಕಡಲಿಗಿಳಿದಿವೆ ಶೇ. 60ರಷ್ಟು ಪರ್ಸಿನ್, ಟ್ರಾಲ್‌ಬೋಟ್‌ಗಳು: ಮಂಗಳೂರು ದಕ್ಕೆಯಿಂದ ಶೇ.60ರಷ್ಟು ಪರ್ಸಿನ್ ಹಾಗೂ ಟ್ರಾಲ್‌ಬೋಟ್‌ಗಳು ಕಡಲಿಗಿಳಿದಿವೆ. ಆ.10ರಿಂದ ಶೇ.30ರಷ್ಟು ಪರ್ಸೀನ್‌ಗಳು ಕಡಲಿಗಿಳಿದಿದ್ದರೂ ನಡುವೆ ತೂಫಾನ್‌ನಿಂದಾಗಿ ಕೆಲ ದಿನಗಳ ಕಾಲ ತೊಂದರೆಯಾಗಿತ್ತು. ಕಳೆದೆರಡು ದಿನಗಳಿಂದ ಹವಾಮಾನ ಮೀನುಗಾರರಿಗೆ ಅನುಕೂಲವಾಗಿದ್ದು, ಉತ್ತಮ ಮೀನು ಸಂಗ್ರಹದ ನಿರೀಕ್ಷೆ ಇದೆ ಎನ್ನುತ್ತಾರೆ ಪರ್ಸೀನ್ ಬೋಟುಗಳ ಮಾಲಕ ಹಾಗೂ ಮೀನುಗಾರ ಮುಖಂಡ ಮೋಹನ್ ಬೆಂಗ್ರೆ.

ಬಹುತೇಕ ಟ್ರಾಲ್‌ಬೋಟ್‌ಗಳಿಗೂ ಈ ಋತುವಿನ ಆರಂಭ ಉತ್ತಮವಾಗಿದೆ. ಆದರೆ ನಡುವೆ ಕೆಲ ದಿನಗಳ ತೂಫಾನ್‌ನಿಂದಾಗಿ ತೊಂದರೆ ಆಗಿತ್ತು. ಹವಾಮಾನ ವೈಪರೀತ್ಯದ ವೇಳೆ ಕಡಲಿಗಿಳಿದ ಬೋಟ್‌ಗಳಿಗೆ ಮೀನುಗಾರಿಕೆ ಕಷ್ಟಸಾಧ್ಯವಾಗುತ್ತದೆ. ಮೀನಿಗೆ ಹಾಕುವ ಬಲೆಯೂ ತೊಂದರೆಗೀಡಾಗಿ ನಷ್ಟ ಅನುಭವಿಸಿದ ಪ್ರಸಂಗವೂ ಇದೆ. ಹಾಗಿದ್ದರೂ ಈ ಬಾರಿಯ ಆರಂಭ ಉತ್ತಮವಾಗಿದೆ ಎನ್ನುತ್ತಾರೆ ದ.ಕ. ಜಿಲ್ಲಾ ಟ್ರಾಲ್‌ಬೋಟ್ ಯೂನಿಯನ್ ಅಧ್ಯಕ್ಷ ಚೇತನ್ ಬೆಂಗ್ರೆ.

ಟ್ರಾಲ್ ಬೋಟ್‌ಗಳಿಗೆ ನಾನಾ ವಿಧದ ಬೊಂಡಾಸ್ (ಕಪ್ಪೆ ಬೊಂಡಾಸ್, ಕೋಲ್ ಬೊಂಡಾಸ್) ಜೊತೆಗೆ, ರಾಣಿ ಮೀನು ಹೇರಳವಾಗಿ ಸಿಗುತ್ತಿವೆ. ಇದರ ಜೊತೆಗೆ ಅಂಜಲ್, ಅರಣೆ ಮೀನು ಹಾಗೂ ಇತರ ಮೀನುಗಳೂ ಸಣ್ಣ ಪ್ರಮಾಣದಲ್ಲಿ ಸಂಗ್ರಹವಾಗುತ್ತಿದೆ ಎನ್ನುತ್ತಾರವರು.

ಮೀನುಗಾರ ಮುಖಂಡರ ಪ್ರಕಾರ ರಾಜ್ಯದಲ್ಲಿ ಒಟ್ಟು 1,000ದಷ್ಟು ಪರ್ಸೀನ್ ಬೋಟ್‌ಗಳು ಮೀನುಗಾರಿಕೆಯಲ್ಲಿ ತೊಡಗಿದ್ದರೆ, ಟ್ರಾಲ್‌ಬೋಟ್‌ಗಳ ಸಂಖ್ಯೆ ಸುಮಾರು 5,000. ಮಲ್ಪೆ ಮತ್ತು ಮಂಗಳೂರು ದಕ್ಕೆಯಲ್ಲಿ ಟ್ರಾಲ್ ಬೋಟ್‌ಗಳು ಅತ್ಯಧಿಕ ಸಂಖ್ಯೆಯಲ್ಲಿದೆ.

ಆಳ ಸಮುದ್ರದ ಯಾಂತ್ರೀಕೃತ ಮೀನುಗಾರಿಕೆಗೆ ತೆರಳುವ ಟ್ರಾಲ್‌ಬೋಟ್‌ಗಳಲ್ಲಿ ಮೀನು ಹಿಡಿಯುವ ಬಲೆಗಳನ್ನು ಮೀನಿರುವಲ್ಲಿ ನೀರಿನಾಳಕ್ಕೆ ಇಳಿಸಿ ಟ್ರಾಲ್ ಮಾಡಿಕೊಂಡು ಅಥವಾ ಎಳೆದುಕೊಂಡು ಸಾಗುತ್ತಾ ಮೀನು ಸಂಗ್ರಹಿಸಲಾಗುತ್ತದೆ. ಅದೇ ಪರ್ಸೀನ್‌ಗಳಲ್ಲಿ ಬಲೆಯನ್ನು ಮೀನುಗಳ ಹಿಂಡು ಇರುವಲ್ಲಿ ಬೇಲಿ ರೀತಿಯಲ್ಲಿ ನೀರಿನ ತಳಭಾಗದಿಂದ ಹರಡಿ ಪರ್ಸ್ ರೀತಿಯಲ್ಲಿ ಮೇಲಕ್ಕೆ ಎಳೆಯಲಾಗುತ್ತದೆ. ಗಾತ್ರದಲ್ಲೂ ಪರ್ಸೀನ್ ಬೋಟ್‌ಗಳು ದೊಡ್ಡದಾಗಿದ್ದು, ಒಮ್ಮೆ ಮೀನುಗಾರಿಕೆಗೆ ತೆರಳುವಾಗ ಈ ಬೋಟ್‌ಗಳಲ್ಲಿ ಕನಿಷ್ಠ 20ರಿಂದ ಗರಿಷ್ಠ 40ರಷ್ಟು ಮಂದಿ ಇರುತ್ತಾರೆ. ಟ್ರಾಲ್ ಬೋಟ್‌ಗಳಲ್ಲಿ ಕನಿಷ್ಠ 5ರಿಂದ ಗರಿಷ್ಠ 10 ಮಂದಿ ಇರುತ್ತಾರೆ. ಟ್ರಾಲ್ ಬೋಟ್‌ಗಳು ಸಮುದ್ರದಲ್ಲಿ ಹೆಚ್ಚು ದಿನ ಮೀನುಗಾರಿಕೆ ನಡೆಸಿದರೆ, ಪರ್ಸಿನ್ ಬೋಟುಗಳಲ್ಲಿ ಮೀನುಗಾರರು ಒಂದರಿಂದ ನಾಲ್ಕೈದು ದಿನಗಳ ಕಾಲ ಸಮುದ್ರ ದಲ್ಲಿ ಮೀನಿನ ಬೇಟೆಯಾಡುತ್ತಾರೆ. ಹೀಗಾಗಿ ಪರ್ಸಿನ್ ಬೋಟು ಗಳ ಮೀನು ಹೆಚ್ಚು ತಾಜಾ ಎಂದು ಪರಿಗಣಿಸಲಾಗುತ್ತದೆ ಮತ್ತು ಹೆಚ್ಚಾಗಿ ರಫ್ತಾಗುತ್ತವೆ ಎನ್ನುತ್ತಾರೆ ಮೀನುಗಾರ ಮುಖಂಡ ನವೀನ್.

ಪ್ರಸಕ್ತ ಸಾಲಿನ ಮೀನುಗಾರಿಕಾ ಋತು ಉತ್ತಮ ಮೀನು ಸಂಗ್ರಹದೊಂದಿಗೆ ಆರಂಭಗೊಂಡಿದೆ. ಸಾಮಾನ್ಯ ಗ್ರಾಹಕನಿಗೂ ಕೈಗೆಟಕುವ ದರದಲ್ಲಿ ಅಂಜಲ್, ಮಾಂಜಿಯಂತಹ ಮೀನುಗಳು ಮಾರುಕಟ್ಟೆಯಲ್ಲಿ ಸಿಗುತ್ತಿವೆ. ಕಳೆದ ವರ್ಷ ತೀರಾ ಇಳಿಕೆ ಕಂಡಿದ್ದ ಮೀನುಗಾರಿಕಾ ಕ್ಷೇತ್ರದಲ್ಲಿ ಇದು ಆಶಾದಾಯಕ ಬೆಳವಣಿಗೆ. ಈಗಾಗಲೇ ಮಂಗಳೂರು ಧಕ್ಕೆಯಿಂದ ಸುಮಾರು 700ಕ್ಕೂ ಅಧಿಕ ಟ್ರಾಲ್ ಬೋಟ್‌ಗಳು ಹಾಗೂ 80ರಷ್ಟು ಪರ್ಸೀನ್ ಬೋಟುಗಳು ಮೀನುಗಾರಿಕೆಗೆ ಕಡಲಿಗಿಳಿದಿವೆ.

-ದಿಲೀಪ್ ಕುಮಾರ್,

ಉಪ ನಿರ್ದೇಶಕರು, ಮೀನುಗಾರಿಕೆ ಇಲಾಖೆ, ದ.ಕ.

ಮೀನುಗಾರರ ಸಂಕಷ್ಟಗಳಿಗೆ ಸರಕಾರ ಸ್ಪಂದಿಸಲಿ

ಆಹಾರ ಭದ್ರತೆ ಒದಗಿಸುವ ರೈತರಂತೆ ಮೀನುಗಾರರು ಜನರಿಗೆ ಪೌಷ್ಟಿಕ ಆಹಾರವನ್ನು ಒದಗಿಸುವ ಕಾರ್ಯ ಮಾಡುತ್ತಿದ್ದಾರೆ. ಹಾಗಾಗಿ ರೈತರು, ಕೃಷಿಕರಿಗೆ ಸಿಗುವ ಸವಲತ್ತುಗಳು ಮೀನುಗಾರರಿಗೂ ಸಿಗಬೇಕು. ಬಡ್ಡಿ ರಹಿತ ಸಾಲ, ನಷ್ಟ ಆದಾಗ ಪರಿಹಾರ ನೀಡುವ ಮೂಲಕ ಸರಕಾರ ಮೀನುಗಾರರನ್ನು ಪ್ರೋತ್ಸಾಹಿಸಬೇಕು. ಮೀನುಗಾರಿಕೆಯನ್ನೇ ತಮ್ಮ ಬದುಕಾಗಿಸಿಕೊಂಡ ಮೀನುಗಾರ ಕುಟುಂಬಗಳ ಸಂಕಷ್ಟಗಳಿಗೆ ಸ್ಪಂದಿಸುವ ಕಾರ್ಯ ಸರಕಾರದಿಂದ ಆಗಬೇಕು. ಮೀನುಗಾರಿಕೆಗೆ ಸಂಬಂಧಿಸಿ ಏಕರೂಪದ ಕಾನೂನು ರಚನೆಯ ಮೂಲಕ ಹೊಸ ಚಿಂತನೆಗಳೊಂದಿಗೆ ಮೀನುಗಾರರ ಹಿತಾಸಕ್ತಿಯನ್ನು ಕಾಯ್ದುಕೊಳ್ಳಬೇಕು ಎನ್ನುವುದು ಮೀನುಗಾರ ಮುಖಂಡರ ಆಗ್ರಹ.

ದ.ಕ. ನೋಂದಾಯಿತ ಬೋಟ್‌ಗಳ ಸಂಖ್ಯೆ

ಟ್ರಾಲ್ ಬೋಟ್- 1,496

ಪರ್ಸೀನ್ ಬೋಟ್- 147

ಗಿಲ್‌ನೆಟ್ ಬೋಟ್- 24

share
ಸತ್ಯಾ ಕೆ.
ಸತ್ಯಾ ಕೆ.
Next Story
X