Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಮಾನವೀಯತೆಯಿಂದ ವಿಶ್ವಶಾಂತಿಯೆಡೆಗೆ...

ಮಾನವೀಯತೆಯಿಂದ ವಿಶ್ವಶಾಂತಿಯೆಡೆಗೆ...

ಇಂದು ವಿಶ್ವ ರೆಡ್ ಕ್ರಾಸ್ ದಿನ

ಡಾ. ಮುರಲೀ ಮೋಹನ ಚೂಂತಾರುಡಾ. ಮುರಲೀ ಮೋಹನ ಚೂಂತಾರು8 May 2025 11:25 AM IST
share
ಮಾನವೀಯತೆಯಿಂದ ವಿಶ್ವಶಾಂತಿಯೆಡೆಗೆ...

1859ರ ಜೂನ್ 24ರಂದು ಫ್ರಾನ್ಸ್ ಮತ್ತು ಇಟಲಿಯ ಸಂಯುಕ್ತ ಸೈನ್ಯ ಹಾಗೂ ಆಸ್ಟ್ರಿಯಾ ದೇಶಗಳ ಸೈನ್ಯಗಳ ನಡುವೆ ರಣಭೀಕರ ಸಲ್ಫರಿನೋ ಕದನ ನಡೆದಿತ್ತು. ಸುಮಾರು 15 ಘಂಟೆಗಳ ಕಾಲ ಜರುಗಿದ ಈ ರುದ್ರಭೀಕರ ಕದನದಲ್ಲಿ ಮೂರು ಲಕ್ಷಕ್ಕೂ ಹೆಚ್ಚು ಸೈನಿಕರು ಕಾದಾಡಿದ್ದರು. ಸಹಸ್ರಾರು ಸೈನಿಕರು ಈ ಯುದ್ಧದಲ್ಲಿ ಜೀವ ಕಳಕೊಂಡರು ಮತ್ತು ಗಾಯಗೊಂಡರು. ಈ ರಕ್ತಸಿಕ್ತ ಯುದ್ಧದ ರಣರಂಗದಲ್ಲಿ ಸೈನಿಕರು ನೋವಿನಿಂದ ಚೀರಾಡುತ್ತಿದ್ದಾಗ, ಸಹಾಯಹಸ್ತ ನೀಡಲು ಕೈಗಳೇ ಇರಲಿಲ್ಲ. ವೈದ್ಯಕೀಯ ನೆರವೂ ಇರಲಿಲ್ಲ. ಸತ್ತ ದೇಹಗಳನ್ನು ಸಾಗಿಸಲು ಮತ್ತು ಬದುಕುಳಿದ ಸೈನಿಕರನ್ನು ಉಪಚರಿಸಲು ಜನರೇ ಇರಲಿಲ್ಲ. ವೈದ್ಯಕೀಯ ಸೌಲಭ್ಯದ ಕೊರತೆಯೂ ಕಂಡುಬಂದಿತ್ತು. ಈ ಮನಕಲಕುವ ರುದ್ರಭೀಕರ ದೃಶ್ಯವನ್ನು ಅದೇ ದಾರಿಯಿಂದ ಸಾಗುತ್ತಿದ್ದ ಸ್ವಿಟ್ಸರ್‌ಲ್ಯಾಂಡ್ ದೇಶದ ವ್ಯಾಪಾರಿ ಹೆನ್ರಿ ಡ್ಯೂನಾಂಟ್ ನೋಡಿ ಬಹಳ ಮರುಕಪಟ್ಟರು. ರಣರಂಗದ ರಕ್ತದೋಕುಳಿ, ನೋವು ಕಿರುಚಾಟ, ನರಳಾಟ ಕಂಡು ಆತನ ಮನಸ್ಸು ಕರಗಿತು. ಸೂರ್ಯಾಸ್ತದ ಸಮಯದಲ್ಲಿ ಅಲ್ಲಿ ಬಂದ ಆತ, ಮರುದಿನ ಸೂರ್ಯೋದಯದ ಮೊದಲು ಸ್ಥಳೀಯ ಜನರು ಹಾಗೂ ಗ್ರಾಮಸ್ಥರ ನೆರವು ಪಡೆದು ಗಾಯಾಳುಗಳನ್ನು ಎತ್ತಿನ ಗಾಡಿಗಳಲ್ಲಿ ಕ್ರಾಸ್ಟೆಗ್ಲಿಯನ್ ಪ್ರದೇಶಕ್ಕೆ ಸಾಗಿಸಿ, ಯುದ್ಧದ ಗಾಯಾಳುಗಳನ್ನು ಮಸೀದಿ, ಚರ್ಚು, ಮಂದಿರ, ಆಶ್ರಮ ಮತ್ತು ಸೇನಾ ಸ್ಥಳಗಳಲ್ಲಿ ಇರಿಸಿ ಉಪಚರಿಸಿದರು. ಪಕ್ಕಾ ವ್ಯಾಪಾರಿಯಾಗಿದ್ದ ಹೆನ್ರಿ ಡ್ಯೂನಾಂಟ್ ಅವರ ವ್ಯಾಪಾರಿಬುದ್ಧಿಯು ಜನರ ನೋವು ಚೀರಾಟದಿಂದ ಕರಗಿ, ಮಾನವೀಯತೆಯ ಸಾಕಾರಮೂರ್ತಿಯಾಗಿ ಬದಲಾಗಿಬಿಟ್ಟರು. ಯುದ್ಧದಲ್ಲಿ ಗಾಯಾಳುಗಳಾದ ಸೈನಿಕರನ್ನು ಯಾವುದೇ ದೇಶ, ಜಾತಿ, ಮತ, ಕುಲ-ಗೋತ್ರ, ಬಣ್ಣ, ಧರ್ಮ ಪಂಗಡಗಳ ಭೇದ ಭಾವ ಮಾಡದೆ ಎಲ್ಲಾ ದೇಶದ, ಧರ್ಮದ ಜನರನ್ನು ಉಪಚರಿಸಿ ಮಾನವೀಯತೆಗೆ ಹೊಸ ಭಾಷ್ಯ ಬರೆದರು. ಒಬ್ಬ ಪಕ್ಕಾವ್ಯಾಪಾರಿಯಾಗಿ ಅಲ್ಜೇರಿಯಾದಲ್ಲಿ ಕಾರ್ನ್‌ಮಿಲ್ ಸ್ಥಾಪಿಸಲು ನೆಪೋಲಿಯನ್ ದೊರೆಯನ್ನು ಕಾಣಲು ಬಂದ ಪಕ್ಕಾ ವ್ಯಾಪಾರಿ, ಮಾನವೀಯತೆಯ ಹರಿಕಾರನಾಗಿ ಬದಲಾಗಿ ರೆಡ್‌ಕ್ರಾಸ್ ಸಂಸ್ಥೆ ಉಗಮಕ್ಕೆ ಕಾರಣಕರ್ತನಾದರು.

ಯುದ್ಧ ಮುಗಿದ ಬಳಿಕವೂ ಯುದ್ಧದ ಭೀಕರತೆ ಹೆನ್ರಿ ಡ್ಯೂನಾಂಟ್ ಮೇಲೆ ಅಗಾಧ ಪರಿಣಾಮ ಬೀರಿತ್ತು. ಜನ ಮರೆತರೂ ಹೆನ್ರಿ ಮಾತ್ರ ಮರೆಯಲಿಲ್ಲ. ಯುದ್ಧ ಕಾಲದಲ್ಲಿ ಮಾನವ ಜನಾಂಗ ಅನುಭವಿಸಿದ ಯಾತನೆ ತಪ್ಪಿಸಲು ತನ್ನದೇ ಎರಡು ಅಂಶಗಳನ್ನು ಮುಂದಿಟ್ಟುಕೊಂಡು ‘ದಿ ಮೆಮೊರಿ ಆಫ್ ಸಾಲ್ಫರಿನೊ’ ಎಂಬ ಪುಸ್ತಕ ಪ್ರಕಟಿಸಿ ವಿಶ್ವದಾದ್ಯಂತ ಹಂಚಿದರು. ಯುದ್ಧಕಾಲದಲ್ಲಿ ಮಾನವೀಯತೆ ಮೆರೆಯಲು ಎರಡು ಕಾರ್ಯಸೂಚಿ ತಯಾರಿಸಿ ಜಾರಿಗೆ ತರಲು ಜಗತ್ತಿನ ಎಲ್ಲಾ ರಾಷ್ಟ್ರಗಳಿಗೆ ಕರೆನೀಡಿದರು. ಇದರಂತೆ ಅಂತರ್‌ರಾಷ್ಟ್ರೀಯ ಸ್ವಯಂಸೇವಕರ ಸಂಘಟನೆಯನ್ನು ಶಾಂತಿಕಾಲದಲ್ಲಿ ಸ್ಥಾಪಿಸಬೇಕು. ಯುದ್ಧ ಮುಗಿದ ಬಳಿಕ ಗಾಯಾಳುಗಳ ಜಾತಿ, ಮತ, ಧರ್ಮ, ರಾಷ್ಟ್ರೀಯತೆಯನ್ನು ಗಮನಿಸದೆ ಉಪಚರಿಸಬೇಕು. ಗಾಯಾಳುಗಳನ್ನು ಉಪಚರಿಸಲು ಸಾಧ್ಯವಾಗಿಸಲು ರಾಷ್ಟ್ರಗಳು, ಗಾಯಾಳು ಸೈನಿಕರನ್ನು, ವೈದ್ಯರನ್ನು ಮತ್ತು ಸ್ವಯಂ ಸೇವಕರನ್ನು ತಟಸ್ಥರು ಎಂದು ಘೋಷಿಸಿ ಯಾವ ಪಕ್ಷಕ್ಕೂ ಸೇರದವರೆಂದು ಘೋಷಿಸಿ, ಅಂತರ್‌ರಾಷ್ಟ್ರೀಯ ಒಪ್ಪಂದಕ್ಕೆ ಸಹಿ ಹಾಕಬೇಕು. ಇವರ ಸಲಹೆ ಮನ್ನಿಸಿ, ಜಿನೀವಾದ ಸಮಾಜ ಕಲ್ಯಾಣ ಸಂಸ್ಥೆ 5 ಜನರ ಸಮಿತಿ ರಚಿಸಿ ಹೆನ್ರಿಯವರನ್ನು ಕಾರ್ಯದರ್ಶಿಯಾಗಿ ನೇಮಕ ಮಾಡಿತು. ಈ ಸಮಿತಿ ಒಬ್ಬ ವೈದ್ಯ, ಒಬ್ಬ ಸೇನಾ ಕಮಾಂಡರ್, ಒಬ್ಬ ವ್ಯಾಪಾರಿ, ಒಬ್ಬ ಸಮಾಜಸೇವಕ ಮತ್ತು ಒಬ್ಬ ಶಿಕ್ಷಕರನ್ನು ಒಳಗೊಂಡಿತ್ತು.

1963, ಅಕ್ಟೋಬರ್ 26ರಂದು ನಡೆದ ಜಿನೀವಾ ಸಮ್ಮೇಳನದಲ್ಲಿ ಗಾಯಗೊಂಡ ಸೈನಿಕರ ಸಹಕಾರ ಸಂಘ ಆರಂಭವಾಗಿ ಮುಂದೆ ವಿಶ್ವ ರೆಡ್ ಕ್ರಾಸ್ ಸಂಸ್ಥೆ ಎಂದು ಕರೆಯಲ್ಪಟ್ಟಿತು. ಹೆನ್ರಿ ಡ್ಯೂನಾಂಟ್ ಸೇವೆಗೆ ಮುಂದೆ 1901ರಲ್ಲಿ ನೊಬೆಲ್ ಶಾಂತಿ ಪುರಸ್ಕಾರ ದೊರಕಿತು. ಮುಂದೆ 1910 ಅಕ್ಟೋಬರ್ 30ರಂದು ಹೆನ್ರಿ ಡ್ಯೂನಾಂಟ್ ಹ್ರೇಡನ್ ನಗರದಲ್ಲಿ ಮರಣ ಹೊಂದಿದರು. ಅವರ ಸವಿನೆನಪಿಗಾಗಿ ಅವರ ಜನ್ಮದಿನವಾದ ಮೇ 8ರಂದು ‘ವಿಶ್ವ ರೆಡ್‌ಕ್ರಾಸ್ ದಿನ’ ಆಚರಣೆ ಆರಂಭವಾಯಿತು.

‘ಜನತೆಯಿಂದ ಜನತೆಗೆ ನೆರವು’ ಎಂಬ ವಿಶಾಲ ಪರಿಕಲ್ಪನೆಯೊಂದಿಗೆ, ಮಾನವೀಯತೆಯಿಂದ ವಿಶ್ವಶಾಂತಿ ಎಂಬ ಧ್ಯೇಯವಾಕ್ಯದೊಂದಿಗೆ, 16 ರಾಷ್ಟ್ರಗಳ ಸಹಕಾರದಿಂದ ಆರಂಭವಾದ ಸಂಸ್ಥೆ ಇಂದು 200ಕ್ಕೂ ಹೆಚ್ಚು ರಾಷ್ಟ್ರಗಳಿಗೆ ತನ್ನ ಸಾಮ್ರಾಜ್ಯವನ್ನು ವಿಸ್ತರಿಸಿಕೊಂಡಿದೆ. ರೆಡ್‌ಕ್ರಾಸ್ ಸಂಸ್ಥೆಯ ಧ್ಯೇಯವಾಕ್ಯಗಳನ್ನು (1) ಮಾನವೀಯತೆ (2) ನಿಷ್ಪಕ್ಷಪಾತ (3) ತಟಸ್ಥತೆ (4) ಸ್ವಾತಂತ್ರ್ಯ (5) ಸ್ವಯಂಪ್ರೇರಿತ ಸೇವೆ (6) ಏಕತೆ (7) ವಿಶ್ವವ್ಯಾಪಕತೆ ಎಂಬುದಾಗಿ ವಿವರಿಸಲಾಗಿದೆ. ಮಾನವೀಯತೆಯನ್ನೇ ಬಂಡವಾಳವಾಗಿ ಇರಿಸಿ, ಲಾಭನಷ್ಟದ ಲೆಕ್ಕಾಚಾರಗಳನ್ನು ಬದಿಗಿರಿಸಿ, ವಿಶ್ವ ಭ್ರಾತೃತ್ವದ ಐಕ್ಯಮಂತ್ರದೊಂದಿಗೆ ವಿಶ್ವದೆಲ್ಲೆಡೆ ವಿಶ್ವವ್ಯಾಪ್ತಿಯಾಗಿ, ಸ್ವತಂತ್ರವಾಗಿ ರಾಜಕೀಯ, ಜನಾಂಗೀಯ, ಧಾರ್ಮಿಕ ವಿಚಾರಗಳನ್ನು ಬದಿಗಿರಿಸಿ, ಎಲ್ಲರನ್ನೂ ಸಮಾನವಾಗಿ ಕಾಣುವ ಮತ್ತು ಉಪಚರಿಸುವ ಏಕಮೇವ ಸಂಸ್ಥೆ ರೆಡ್‌ಕ್ರಾಸ್ ಆಗಿರುತ್ತದೆ.

ನಮ್ಮ ಭಾರತದೇಶದಲ್ಲಿ 1920ರಲ್ಲಿ ರೆಡ್‌ಕ್ರಾಸ್ ಸಂಸ್ಥೆ ಉದಯವಾಯಿತು ಮತ್ತು ಕರ್ನಾಟಕ ರಾಜ್ಯದಲ್ಲಿ 1921ರಲ್ಲಿ ರೆಡ್‌ಕ್ರಾಸ್ ಸಂಸ್ಥೆ ಜನ್ಮ ತಾಳಿತು.

ರೆಡ್‌ಕ್ರಾಸ್ ಲಾಂಛನ

ಬಿಳಿ ಹಿನ್ನೆಲೆಯಲ್ಲಿ ಕೆಂಪು ಕ್ರಾಸ್ ಹೊಂದಿರುವ ಲಾಂಛನ ರೆಡ್‌ಕ್ರಾಸ್ ಸಂಸ್ಥೆಯ ಸಂಕೇತ ಚಿಹ್ನೆ. ಕ್ರಾಸ್‌ನ ಎಲ್ಲಾ ಬಾಹುಗಳು ಪರಸ್ಪರ ಸಮನಾಗಿವೆ. ಈ ಚಿಹ್ನೆಯನ್ನು ಯುದ್ಧ ತಟಸ್ಥ ಸಂಕೇತವೆಂದು ಸಾರ್ವತ್ರಿಕವಾಗಿ ಗುರುತಿಸಲಾಗುತ್ತದೆ. ವೈದ್ಯಕೀಯ ಸೇವೆಗಾಗಿ ಬಳಸುವ ಉಪಕರಣಗಳ ಮೇಲೆ ಮತ್ತು ಧ್ವಜದ ಮೇಲೆ ಈ ಲಾಂಛನ ಬಳಸಬಹುದಾಗಿದೆ. ಯುದ್ಧಕಾಲದಲ್ಲಿ, ಸೇನಾ ದಂಗೆಯ ಸಮಯದಲ್ಲಿ ಅಗತ್ಯವಿರುವ ಸೇವೆ, ಸಹಕಾರ, ಉಪಕಾರ, ಉಪಚಾರ ಮತ್ತು ತುರ್ತು ವೈದ್ಯಕೀಯ ಸೇವೆ ಒದಗಿಸುವಾಗ, ಈ ಸೇವಾ ಸಂಘಟನೆಯ ಸ್ವಯಂಸೇವಕರು ಈ ಲಾಂಛನ ಬಳಸಿದ್ದಲ್ಲಿ ಅವರು ಯುದ್ಧದಿಂದ ಹೊರತಾದವರು ಎಂಬ ಸಂದೇಶ ರವಾನೆಯಾಗುತ್ತದೆ. ಒಟ್ಟಿನಲ್ಲಿ ಮಾನವೀಯ ಮತ್ತು ಪರಿಹಾರಕಾರಕ ಸೇವೆ ನೀಡುವ ರೆಡ್‌ಕ್ರಾಸ್ ಸ್ವಯಂ ಸೇವಕರು ಈ ಲಾಂಛನ ಬಳಸುವುದರಿಂದ ಅವರಿಗೆ ‘ತಟಸ್ಥ’ ಎಂಬ ಭಾವನೆ ಬಂದು ಯಾವುದೇ ಅಪಾಯ ಆಗುವುದಿಲ್ಲ.

ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಅತ್ಯಂತ ವಿಶೇಷ ಮತ್ತು ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯುವ ದೇಶದೆಲ್ಲೆಡೆ ಶಾಂತಿ ಕಾಪಾಡುವ ಏಕಮೇವ ಸಂಸ್ಥೆಯಾಗಿ ಬೆಳೆದುನಿಂತಿದೆ. ಪ್ರಾಕೃತಿಕ ವಿಕೋಪಗಳು, ನೈಸರ್ಗಿಕ ವಿಷಮ ಪರಿಸ್ಥಿತಿಗಳು, ನಿರಂತರ ಆರೋಗ್ಯಸೇವೆಗಳು, ರಕ್ತಸಂಗ್ರಹಣಾ ಮತ್ತು ರಕ್ತಪೂರೈಕೆ ಸೇವೆಗಳು, ಹಿರಿಯ ಮತ್ತು ಕಿರಿಯ ರೆಡ್‌ಕ್ರಾಸ್ ಸೇವಾ ಚಟುವಟಿಕೆಗಳು ಹೀಗೆ ಹತ್ತು ಹಲವು ಕ್ಷೇತ್ರಗಳಲ್ಲಿ ರೆಡ್‌ಕ್ರಾಸ್ ಸಂಘಟನೆಯ ಕಾರ್ಯಕರ್ತರು ಯಾವುದೇ ಜಾತಿ, ಮತ, ಧರ್ಮ ಮತ್ತು ಪಂಗಡಗಳ ಭೇದಭಾವವಿಲ್ಲದೆ ಸಮಾಜದ ನೊಂದವರ, ಶೋಷಿತರ, ದುರ್ಬಲರ ಮತ್ತು ನಿರ್ಗತಿಕರ ಸೇವೆಗೆ ಸಮರ್ಪಿಸಿಕೊಂಡಿರುತ್ತಾರೆ.

share
ಡಾ. ಮುರಲೀ ಮೋಹನ ಚೂಂತಾರು
ಡಾ. ಮುರಲೀ ಮೋಹನ ಚೂಂತಾರು
Next Story
X