Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಡಾ.ಬಿ.ಆರ್.ಅಂಬೇಡ್ಕರ್ ಪರಿಕಲ್ಪನೆಯಡಿ...

ಡಾ.ಬಿ.ಆರ್.ಅಂಬೇಡ್ಕರ್ ಪರಿಕಲ್ಪನೆಯಡಿ ಫಲಪುಷ್ಪ ಪ್ರದರ್ಶನ

ಜನರ ಗಮನ ಸೆಳೆಯುತ್ತಿರುವ ಲಾಲ್‌ ಬಾಗ್

ಮಾಳಿಂಗರಾಯ ಕೆಂಭಾವಿಮಾಳಿಂಗರಾಯ ಕೆಂಭಾವಿ12 Aug 2024 11:57 AM IST
share
ಡಾ.ಬಿ.ಆರ್.ಅಂಬೇಡ್ಕರ್ ಪರಿಕಲ್ಪನೆಯಡಿ ಫಲಪುಷ್ಪ ಪ್ರದರ್ಶನ

ಬೆಂಗಳೂರು: ಸಸ್ಯಕಾಶಿ ಲಾಲ್‌ಬಾಗ್‌ನ ಗಾಜಿನ ಮನೆಯ ಒಳಾಂಗಣವು ಅನೇಕ ಆಕರ್ಷಣೆಗಳಿಂದ ಕೂಡಿದ್ದು, ಜನರ ಗಮನ ಸೆಳೆಯುತ್ತಿದೆ. ಸರಕಾರವು 2024ರ ಲಾಲ್‌ಬಾಗ್ ಸ್ವಾತಂತ್ರ್ಯೋತ್ಸವ ಫಲಪುಷ್ಪ ಪ್ರದರ್ಶನವನ್ನು ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಸಮರ್ಪಿಸಿದೆ. ಗಾಜಿನಮನೆಯ ಪ್ರವೇಶ ದ್ವಾರದ ಬಳಿಯ ಕೇಂದ್ರ ಭಾಗದಲ್ಲಿ ಇಂಡೋ-ಅಮೆರಿಕನ್ ಹೈಬ್ರಿಡ್ ಸೀಡ್ಸ್ ಕಂಪೆನಿಯು ಈ ಬಾರಿ ವಿನೂತನ ಪರಿಕಲ್ಪನೆಯಡಿ ಪ್ರದರ್ಶಿಸಲಿದೆ.

<ಸಂಸತ್ ಭವನದ ಪುಷ್ಪಮಾದರಿ: ಸಂವಿಧಾನವನ್ನು ರಾಷ್ಟ್ರಕ್ಕೆ ಸಮರ್ಪಿಸಿದ ಹಾಗೂ ರಾಷ್ಟ್ರವು ಅದನ್ನು ಅಂಗೀಕರಿಸಿದ್ದಕ್ಕೆ ಸಾಕ್ಷಿಯಾಗಿರುವ ಸಂಸತ್ ಭವನದ ಪುಷ್ಪಪ್ರತಿರೂಪವು ಗಾಜಿನ ಮನೆಯ ಕೇಂದ್ರ ಭಾಗದಲ್ಲಿ ತಲೆ ಎತ್ತಿದೆ. ಸಂಸತ್ ಭವನದ ಮಧ್ಯದಲ್ಲಿರುವ ಗೋಪುರದ ಮೇಲೆ ಭಾರತದ ರಾಷ್ಟ್ರೀಯ ಲಾಂಛನದ ಮಾದರಿಯಿದೆ.

ಸಂಸತ್ ಭವನದ ಪುಷ್ಪಪ್ರತಿರೂಪವು 36 ಅಡಿ ವ್ಯಾಸ, 32 ಅಡಿ ಎತ್ತರವನ್ನು ಹೊಂದಿದ್ದು, ಮುಂದೆ ಮತ್ತು ಹಿಂದೆ 12 ಅಡಿ ಅಗಲ ಮತ್ತು 6 ಅಡಿ ಎತ್ತರದ 2 ಪೋರ್ಟಿಕೊಗಳನ್ನು ಹೊಂದಿದೆ. ಭವನದ ಮೇಲ್ಬಾಗದಲ್ಲಿ 5 ಅಡಿ ಎತ್ತರ ಮತ್ತು 3 ಅಡಿ ಸುತ್ತಳತೆಯ ಅಶೋಕ ಲಾಂಛನವು ರಾರಾಜಿಸುತ್ತಿದೆ. ಇದಕ್ಕಾಗಿ ಒಂದು ಬಾರಿಗೆ ಕೆಂಪು ಮತ್ತು ಕಿತ್ತಳೆ ಬಣ್ಣದ 1.8 ಲಕ್ಷ ಗುಲಾಬಿ ಹೂಗಳು ಮತ್ತು ಶ್ವೇತವರ್ಣ, ಪಿಂಕ್ ಮತ್ತು ಹಳದಿ ವರ್ಣಗಳ 1.2 ಲಕ್ಷ ಸೇವಂತಿ ಹೂಗಳನ್ನು ಬಳಸಲಾಗಿದೆ.

<ಜನ್ಮಭೂಮಿ ಸ್ಮಾರಕದ ಪುಷ್ಪಮಾದರಿ: ಮಧ್ಯಪ್ರದೇಶದ ಮಹೂವಿನಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಜನ್ಮಭೂಮಿ ಸ್ಮಾರಕದ ಪುಷ್ಪಮಾದರಿಯನ್ನು ಗಾಜಿನ ಮನೆಯ ಕೇಂದ್ರ ಭಾಗದ ಎಡಬದಿಗೆ ಪ್ರದರ್ಶಿಸಲಾಗಿದೆ. ಅದರಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಕುಳಿತಿರುವ ಭಂಗಿಯ ಪ್ರತಿಮೆಯನ್ನು ಅಳವಡಿಸಲಾಗಿದೆ. ಜನ್ಮಭೂಮಿ ಸ್ಮಾರಕದ ಪ್ರತಿರೂಪದ ಮಾದರಿಯು 18 ಅಡಿ ಸುತ್ತಳತೆ ಹಾಗೂ 14 ಅಡಿ ಎತ್ತರವಿದ್ದು, ಮೂಲ ಮಾದರಿಯನ್ನು 12 ಜನ ನುರಿತ ಸಿಬ್ಬಂದಿ 8 ದಿವಸಗಳ ಕಾಲ ಕಾರ್ಯನಿರ್ವಹಿಸಿ ಸಿದ್ಧಪಡಿಸಿದ್ದಾರೆ. ಒಟ್ಟಾರೆ ಮೂಲ ಮಾದರಿಯ ತೂಕವು 2 ಟನ್‌ಗಳಿಗೂ ಹೆಚ್ಚಿರುತ್ತದೆ. 150 ಬಾಕ್ಸ್ ಫ್ಲೋರಲ್ ಫೋಮ್ಸ್, ಮೆಷ್ ಮತ್ತು ವೈಯರ್ ಅನ್ನು ಬಳಸಿ ಮೂಲ ಮಾದರಿಗೆ ಫೋಮ್ಸ್ ಅಳವಡಿಕೆ ಕಾರ್ಯವನ್ನು ಕೈಗೊಳ್ಳಲು 3 ದಿನಗಳ ಕಾಲ 100 ಮಾನವ ದಿನಗಳನ್ನು ಬಳಕೆ ಮಾಡಿ ಸಿದ್ಧಪಡಿಸಲಾಗಿದೆ.

ಇದಕ್ಕಾಗಿ ಒಂದು ಬಾರಿಗೆ 75,000 ಕೆಂಪು ಮತ್ತು ಶ್ವೇತವರ್ಣದ ಡಚ್ ಗುಲಾಬಿ ಹೂ, 60,000 ಪಿಂಕ್, ನೇರಳೆ, ಶ್ವೇತವರ್ಣ ಮತ್ತು ಕಂದು ಬಣ್ಣದ ಸೇವಂತಿಗೆ ಹೂ ಮತ್ತು 35,000 ಸ್ಟ್ಯಾಂಡರ್ಡ್ ಸೇವಂತಿ ಹೂಗಳನ್ನು ಬಳಸಲಾಗಿದೆ. ಹೀಗೆ ಒಟ್ಟು ಒಂದು ಬಾರಿಗೆ 1.7 ಲಕ್ಷ ಹೂಗಳಂತೆ 2 ಬಾರಿಗೆ 3.4 ಲಕ್ಷ ಹೂಗಳನ್ನು ಬಳಸಲಾಗುವುದು.

<ಚೈತ್ಯಭೂಮಿ ಸ್ಮಾರಕದ ಪುಷ್ಪಮಾದರಿ: 2,200 ಚದರಡಿ ಪ್ರದೇಶದಲ್ಲಿ ಮುಂಬೈನ ದಾದರ್‌ನಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಚೈತ್ಯಭೂಮಿ ಸ್ಮಾರಕದ ಪ್ರವೇಶ ಕಮಾನು, ಧರ್ಮಸ್ತಂಭ ಮತ್ತು ಸ್ತೂಪಗಳ ಪುಷ್ಪಮಾದರಿ ಪ್ರದರ್ಶಿಸಲಾಗಿದೆ. ಇಕ್ಕೆಲಗಳಲ್ಲಿ ಅಂಬೇಡ್ಕರ್ ಸ್ವಗೃಹ ‘ರಾಜಗೃಹ’ ಮತ್ತು ಅವರ ದೀಕ್ಷಾಭೂಮಿ ಸ್ಮಾರಕದ ಪ್ರತಿಕೃತಿಗಳನ್ನು ಪ್ರದರ್ಶಿಸಲಾಗಿದೆ.

ಚೈತ್ಯಭೂಮಿ ಸ್ಮಾರಕದ ಸ್ತೂಪದ ಪುಷ್ಪ ಮಾದರಿಯು 18 ಅಡಿ ಸುತ್ತಳತೆ ಹಾಗೂ 15 ಅಡಿ ಎತ್ತರವಿರುತ್ತದೆ. ಸ್ಮಾರಕದ ಪ್ರವೇಶ ಕಮಾನು 12 ಅಡಿ ಅಗಲ ಮತ್ತು 8 ಅಡಿ ಎತ್ತರವಿದೆ. ಸಿಂಹಲಾಂಛನ ಮತ್ತು ಅಶೋಕ ಚಕ್ರವುಳ್ಳ ಧರ್ಮ ಸ್ತಂಭವು 1.5 ಅಡಿ ಸುತ್ತಳತೆಯೊಡನೆ 24 ಅಡಿ ಎತ್ತರವಿದೆ. ಗಾಜಿನಮನೆಯ ಕೇಂದ್ರ ಭಾಗದ ಹಿಂಬದಿಯ ಅಂಕಣದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ವ್ಯಕ್ತಿತ್ವ ಮತ್ತು ಸಾಧನೆಗಳನ್ನು ಬಿಂಬಿಸುವ ಕಲಾಕೃತಿಗಳ ಪ್ರದರ್ಶನ ಮಾಡಲಾಗಿದೆ.

<ಮಹಾಡ್ ಸತ್ಯಾಗ್ರಹ ಬಿಂಬಿಸುವ ಕಲಾಕೃತಿ: ಡಾ.ಬಿ.ಆರ್.ಅಂಬೇಡ್ಕರ್ ಹೋರಾಟದ ಬದುಕಿನ ಪ್ರಾರಂಭದಲ್ಲಿಯೇ ನಡೆದ ಮಹಾಡ್ ಸತ್ಯಾಗ್ರಹ, ಡಾ.ಬಿ.ಆರ್.ಅಂಬೇಡ್ಕರ್ ಸಾಮಾಜಿಕ ಹೋರಾಟದ ಹಾದಿಯನ್ನು ಸಾಂಕೇತಿಸುವ ನಾಸಿಕ್ ಕಲಾರಾಮ್ ದೇವಾಲಯ ಪ್ರವೇಶ, ಡಾ.ಬಿ.ಆರ್.ಅಂಬೇಡ್ಕರ್‌ರ ನೀರಾವರಿ ಕ್ಷೇತ್ರದ ಸಾಧನೆಗಳನ್ನು ಸಾಂಕೇತಿಕವಾಗಿ ಬಿಂಬಿಸುವ ಹಿರಾಕುಡ್ ಅಣೆಕಟ್ಟೆಯ ಪ್ರತಿಕೃತಿಯನ್ನು ಪ್ರದರ್ಶಿಸಲಾಗುವುದು.

ಕೋರೆಗಾಂವ್ ಜಯಸ್ತಂಭದ ಮಾದರಿ: ಮಹಾರ್ ಸೈನಿಕರ ಯಶೋಗಾಥೆಯನ್ನು ನೆನಪಿಸುವ ಪುಣೆ ಹತ್ತಿರವಿರುವ ಕೋರೆಗಾಂವ್ ಜಯಸ್ತಂಭದ ಮಾದರಿ ಇದಾಗಿದೆ. 1927ರಲ್ಲಿ ಅಂಬೇಡ್ಕರ್ ಇಲ್ಲಿಗೆ ಭೇಟಿ ನೀಡಿ ಮಹಾರ್ ಸೈನಿಕರಿಗೆ ಗೌರವ ಸಲ್ಲಿಸಿದ್ದರು. ಅದರ ಸ್ಮರಣಾರ್ಥ, ಜಯಸ್ತಂಭದ ಮುಂದೆ ಅಂಬೇಡ್ಕರ್ ಪ್ರತಿಮೆಯನ್ನು ಸಂಯೋಜಿಸಿ ಪ್ರದರ್ಶಿಸಲಾಗಿದೆ. ಅಂಬೇಡ್ಕರ್‌ರ ಆಯ್ದ 120ಕ್ಕೂ ಹೆಚ್ಚು ಸೂಕ್ತಿಗಳನ್ನು, ಅಂಬೇಡ್ಕರ್ ಕುರಿತ ಕವಿತೆಗಳನ್ನು ಮುದ್ರಿಸಿ, ಲಾಲ್‌ಬಾಗ್‌ನ ರಸ್ತೆ ಬದಿಯ ಕಂಬಗಳಲ್ಲಿ ಪ್ರದರ್ಶಿಸಲಾಗಿದೆ. ಮರಳು ಕಲಾಕೃತಿ: ಡಾ.ಬಿ.ಆರ್.ಅಂಬೇಡ್ಕರ್ ಮರಳಿನ ಕಲಾಕೃತಿಯು ಗಾಜಿನ ಮನೆಗೆ ಹೊಂದಿಕೊಂಡ ಪ್ರದೇಶದಲ್ಲಿ ಪ್ರದರ್ಶಿಸಲಾಗಿದೆ. ಮರಳು ಕಲಾಕೃತಿ ಕಲಾವಿದೆ ಮೈಸೂರಿನ ಕು. ಸಂಧ್ಯಾರವರು ಈ ಕಾರ್ಯವನ್ನು ಮಾಡಿದ್ದಾರೆ.

ಸಂವಿಧಾನದ ಪೀಠಿಕೆಯ ಕಲಾಕೃತಿ

ಗಾಜಿನಮನೆಯ ಕೇಂದ್ರಭಾಗದ ಎಡಬದಿಗೆ ಆಕರ್ಷಕ ವರ್ಟಿಕಲ್ ರೂಪುಗೊಳ್ಳಲಿದ್ದು, ಅದಕ್ಕೆ ಹೊಂದಿಕೊಂಡಂತೆ ಬಹುವರ್ಣದ ಹೂವುಗಳಿಂದ ಭಾರತದ ಭೂಪಟವನ್ನು ನಿರ್ಮಿಸಿ ಪ್ರದರ್ಶಿಸಲಾಗಿದೆ. ಅದರ ಇಕ್ಕೆಲಗಳಲ್ಲಿ ಭಾರತ ಸಂವಿಧಾನದ ಪೀಠಿಕೆಯ ಕಲಾಕೃತಿಯನ್ನು ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳೆರಡರಲ್ಲಿಯೂ ಪ್ರದರ್ಶಿಸಲಾಗಿದೆ. ಪೀಠಿಕೆಯ ಮುಂಭಾಗದಲ್ಲಿ, ಒಂದು ಬದಿಗೆ ಸಂವಿಧಾನ ಸಭೆಯಲ್ಲಿ ಅಂಬೇಡ್ಕರ್ ಮಾತನಾಡುತ್ತಿರುವ ಕಲಾಕೃತಿ ಇರಲಿದ್ದು, ಇನ್ನೊಂದು ಬದಿಗೆ, ಭಾರತ ಸಂವಿಧಾನ ರಚನಾ ಸಭೆಯ ಚರ್ಚೆಗಳನ್ನು ಒಳಗೊಂಡಿರುವ ಇಂಗ್ಲಿಷ್‌ನ 5 ಸಂಪುಟಗಳು ಮತ್ತು ಕನ್ನಡದ 10 ಸಂಪುಟಗಳನ್ನು ಬಿಂಬಿಸುವ ಆಕೃತಿಯನ್ನು ಪ್ರದರ್ಶಿಸಲಾಗಿದೆ. ಡಾ.ಬಿ.ಆರ್.ಅಂಬೇಡ್ಕರ್ ಜೀವನ, ಸಾಧನೆಯ ಹಿಂದಿನ ಶಕ್ತಿಗಳಾದ ಅವರ ತಂದೆ ಸಕ್ಸಾಲ್‌ರಾಮ್‌ಜಿ, ತಾಯಿ ಭೀಮಾಭಾಯಿ, ಗುರು ಸಮಾನರಾದ ಪುಲೆ ದಂಪತಿ, ಭಗವಾನ್ ಬುದ್ಧ, ಸಂತ ಕಬೀರರ ಪ್ರತಿಮೆಗಳನ್ನು ಗಾಜಿನಮನೆಯ ಕೇಂದ್ರಭಾಗದಲ್ಲಿ ಬರುವ ಸಂಸತ್ ಭವನದ ಬೃಹತ್ ಪುಷ್ಪಮಾದರಿಯ ನಾಲ್ಕೂ ಮೂಲೆಗಳಲ್ಲಿ ಪ್ರದರ್ಶನಕ್ಕಿಡಲಾಗಿದೆ.

ಅಂಬೇಡ್ಕರ್ ಪ್ರತಿಮೆ


ಗಾಜಿನಮನೆಯ ಕೇಂದ್ರ ಭಾಗದಲ್ಲಿ ತಲೆ ಎತ್ತುವ ಸಂಸತ್ ಭವನದ ಪುಷ್ಪ ಮಾದರಿಯ ಮುಂಬದಿಯಲ್ಲಿ 12 ಅಡಿ ಎತ್ತರದ, ಡಾ.ಬಿ.ಆರ್. ಅಂಬೇಡ್ಕರ್ ಪ್ರತಿಮೆಯು ಸರ್ವರನ್ನೂ ಆಕರ್ಷಿಸಲಿದೆ. 6 ಅಡಿ ಎತ್ತರದ ಪೀಠದ ಮೇಲೆ ಪ್ರತಿಮೆಯು ಅನಾವರಣಗೊಂಡಿದೆ. ಬೆಂಗಳೂರಿನ ಆಕಾರ ಸಂಸ್ಥೆಯ ಖ್ಯಾತ ಶಿಲ್ಪಿ ಬಿ.ಸಿ.ಶಿವಕುಮಾರ್ ಪ್ರತಿಮೆಯನ್ನು ನಿರ್ಮಿಸಿದ್ದಾರೆ.

share
ಮಾಳಿಂಗರಾಯ ಕೆಂಭಾವಿ
ಮಾಳಿಂಗರಾಯ ಕೆಂಭಾವಿ
Next Story
X