Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ನೆಲದನಿ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಮಾಹಿತಿ ಮಾರ್ಗದರ್ಶನ
    • ಆರೋಗ್ಯ
    • ಓ ಮೆಣಸೇ
    • ಕೃತಿ ಪರಿಚಯ
    • ಝಲಕ್
    • ಬುಡಬುಡಿಕೆ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. 29 ವರ್ಷಗಳಿಂದ ಹಿಂದೂ-ಮುಸ್ಲಿಮ್ ಯುವಕರ...

29 ವರ್ಷಗಳಿಂದ ಹಿಂದೂ-ಮುಸ್ಲಿಮ್ ಯುವಕರ ಸಹಭಾಗಿತ್ವದಲ್ಲಿ ಗಣೇಶೋತ್ಸವ

ಸೌಹಾರ್ದಕ್ಕೆ ಸಾಕ್ಷಿಯಾದ ಕುಕನೂರ ಯಮನೂರಸ್ವಾಮಿ ಗಣಪತಿ

ಭೀಮಾಶಂಕರ ಪಾಣೇಗಾಂವಭೀಮಾಶಂಕರ ಪಾಣೇಗಾಂವ27 Sept 2026 8:30 AM IST
share
29 ವರ್ಷಗಳಿಂದ ಹಿಂದೂ-ಮುಸ್ಲಿಮ್ ಯುವಕರ ಸಹಭಾಗಿತ್ವದಲ್ಲಿ ಗಣೇಶೋತ್ಸವ

ಕುಕನೂರ: ಗಣಪತಿ ಹಬ್ಬ ಬಂದರೆ ಕೆಲವೆಡೆ ಜಾತಿ-ಧರ್ಮದ ಹೆಸರಿನಲ್ಲಿ ಗಲಾಟೆ, ಸಂಘರ್ಷಗಳ ಸುದ್ದಿಗಳು ಕೇಳಿಬರುತ್ತವೆ. ಆದರೆ ಅದೇ ಹಬ್ಬವನ್ನು ಭಿನ್ನತೆಯ ಗೋಡೆ ಕಟ್ಟದೆ, ಬಂಧುತ್ವದ ಸೇತುವೆಯಾಗಿ ಆಚರಿಸುತ್ತಿರುವುದು ಕುಕನೂರಿನ ವಿಶೇಷ.

ಯಮನೂರಸ್ವಾಮಿ ದರ್ಗಾ ಸಮೀಪದ ಯಮನೂರಸ್ವಾಮಿ ಗಣಪತಿ ಉತ್ಸವದಲ್ಲಿ ಹಿಂದೂ-ಮುಸ್ಲಿಂ ಯುವಕರು ಹೆಗಲಿಗೆ ಹೆಗಲು ಕೊಟ್ಟು ಕೆಲಸ ಮಾಡುತ್ತಾರೆ. ವಿವಿಧ ಜಾತಿ, ಧರ್ಮಗಳ ಮಹಿಳೆಯರು, ಪುರುಷರು, ಮಕ್ಕಳು ಗಣಪತಿಗೆ ನಮಸ್ಕರಿಸಿ, ಬಳಿಕ ಒಂದೇ ಸಾಲಿನಲ್ಲಿ ಕುಳಿತು ಪ್ರಸಾದ ಸ್ವೀಕರಿಸುತ್ತಾರೆ.

ಒಂದು ವರ್ಷದ ಆಚರಣೆಯಲ್ಲ :

29 ವರ್ಷಗಳಿಂದ ಮುಂದುವರಿದಿರುವ ಭಾವೈಕ್ಯತೆಯ ಪರಂಪರೆ. ಪಟ್ಟಣದ ಬಸ್ ನಿಲ್ದಾಣದ ಹಿಂಭಾಗದ ಯಮನೂರಸ್ವಾಮಿ ದರ್ಗಾ ಸಮೀಪ ಪ್ರತಿವರ್ಷ ಯಮನೂರಸ್ವಾಮಿ ಗಣಪತಿ ಪ್ರತಿಷ್ಠಾಪಿಸಿ ಗಣೇಶೋತ್ಸವ ಆಚರಿಸಲಾಗುತ್ತಿದೆ.

ಯಮನೂರಸ್ವಾಮಿ ಯುವಕ ಸಂಘದಲ್ಲಿ ಸುಮಾರು 100 ಸದಸ್ಯರಿದ್ದು, ಅವರಲ್ಲಿ ಸುಮಾರು 40 ಮಂದಿ ಮುಸ್ಲಿಮ್ ಯುವಕರಿದ್ದಾರೆ. ಗಣಪತಿ ಪ್ರತಿಷ್ಠಾಪನೆಯಿಂದ ಹಿಡಿದು ವಿಸರ್ಜನೆಯವರೆಗೆ ಉತ್ಸವದ ವಿವಿಧ ಜವಾಬ್ದಾರಿಗಳನ್ನು ಎಲ್ಲರೂ ಹಂಚಿಕೊಂಡು ನಿರ್ವಹಿಸುತ್ತಾರೆ.

29 ವರ್ಷಗಳ ಹಿಂದೆ ಸರ್ವಧರ್ಮ ಸೇವಾ ಸಮಿತಿ ರಚಿಸಿ, ಅದರಡಿ ಗಜಾನನ ಉತ್ಸವ ಸಮಿತಿ ಮೂಲಕ ಗಣಪತಿ ಪ್ರತಿಷ್ಠಾಪಿಸುವ ಪರಂಪರೆ ಆರಂಭಿಸಲಾಯಿತು. ಜಾತಿ, ಧರ್ಮ, ಪಂಥದ ಬೇಧವಿಲ್ಲದೆ ಎಲ್ಲರೂ ಸೇರಿ ಹಬ್ಬ ಆಚರಿಸಬೇಕು ಎಂಬ ಆಶಯದೊಂದಿಗೆ ಆರಂಭವಾದ ಆಚರಣೆ ಇಂದಿಗೂ ಮುಂದುವರಿದಿದೆ. ಯಮನೂರಸ್ವಾಮಿ ಹೆಸರಿನಲ್ಲಿ ಗಣಪತಿ ಪ್ರತಿಷ್ಠಾಪಿಸುವುದರಿಂದ ಯಮನೂರಸ್ವಾಮಿ ಗಣಪತಿ ಎಂದೇ ಕರೆಯಲಾಗುತ್ತದೆ.

ಮಂಟಪಕ್ಕೆ ಶಾಮಿಯಾನ ಹಾಕುವುದು, ಅಲಂಕಾರ, ಸ್ವಚ್ಛತೆ, ವಿದ್ಯುತ್ ವ್ಯವಸ್ಥೆ, ಪೂಜಾ ಸಾಮಗ್ರಿ ಸಿದ್ಧಪಡಿಸುವುದು, ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ನಿರ್ವಹಣೆಯಲ್ಲಿ ಹಿಂದೂ-ಮುಸ್ಲಿಂ ಯುವಕರು ಒಟ್ಟಾಗಿ ಕೈಜೋಡಿಸುತ್ತಾರೆ.

ಪ್ರತಿದಿನ ಒಬ್ಬರಂತೆ ಪೂಜಾ ಸೇವೆಯ ಜವಾಬ್ದಾರಿ ವಹಿಸಿಕೊಳ್ಳುವ ವ್ಯವಸ್ಥೆಯಿದ್ದು, ಮುಸ್ಲಿಮ್ ಯುವಕರೂ ಗಣಪತಿ ಪೂಜೆಯಲ್ಲಿ ಪಾಲ್ಗೊಳ್ಳುತ್ತಾರೆ. ಹತ್ತನೇ ದಿನ ಅನ್ನ ಸಂತರ್ಪಣೆ ಹಾಗೂ ಪ್ರಸಾದ ವಿತರಣೆ, 11ನೇ ದಿನ ವಿಸರ್ಜನಾ ಮೆರವಣಿಗೆ ನಡೆಯುತ್ತದೆ.

ಗಣೇಶೋತ್ಸವದ ಸಂದರ್ಭದಲ್ಲಿ ವಿವಿಧ ಜಾತಿ, ಧರ್ಮಗಳ ಮಹಿಳೆಯರು, ಪುರುಷರು ಹಾಗೂ ಮಕ್ಕಳು ಗಣಪತಿಗೆ ನಮಸ್ಕರಿಸಿ ಪ್ರಾರ್ಥಿಸುವುದು ಇಲ್ಲಿನ ಮತ್ತೊಂದು ವಿಶೇಷ.

ನೂರಾರು ಜನರಿಗೆ ಪ್ರಸಾದ ಹಾಗೂ ಅನ್ನಸಂತರ್ಪಣೆ ವ್ಯವಸ್ಥೆ ಮಾಡಲಾಗುತ್ತದೆ. ಜಾತಿ, ಧರ್ಮದ ಭೇದವಿಲ್ಲದೆ ಎಲ್ಲರೂ ಒಂದೇ ಕಡೆ ಕುಳಿತು ಊಟ ಮಾಡುತ್ತಾರೆ. ಸ್ಥಳೀಯ ಮಸೀದಿ ಹಾಗೂ ಜಮಾತ್ ವತಿಯಿಂದಲೂ ಅನ್ನಸಂತರ್ಪಣೆಗೆ ಸಹಕಾರ ದೊರೆಯುತ್ತದೆ. ಇಲ್ಲಿ ಮಂಟಪ ಕಟ್ಟುವ ಕೈಗಳು ಬೇರೆ ಬೇರೆ ಆಗಿರಬಹುದು. ಆದರೆ ಜವಾಬ್ದಾರಿ ಒಂದೇ. ಪ್ರಾರ್ಥನೆಯ ವಿಧಾನಗಳು ಬೇರೆ ಇರಬಹುದು. ಆದರೆ ಊಟದ ಸಾಲಿನಲ್ಲಿ ಎಲ್ಲರೂ ಒಂದೇ. ಹಬ್ಬದ ಸಂಭ್ರಮದಲ್ಲಿ ಭಿನ್ನತೆಯನ್ನು ಪ್ರದರ್ಶಿಸುವುದಕ್ಕಿಂತ, ಒಟ್ಟಾಗಿ ಬದುಕುವ ನಂಟನ್ನು ಆಚರಿಸುವುದೇ ಯಮನೂರಸ್ವಾಮಿ ಗಣಪತಿಯ ವಿಶೇಷ.

ಜಾತಿ, ಮತ, ಪಂಥದ ಭೇದವಿಲ್ಲದೆ ಎಲ್ಲರೂ ಸೇರಿ ಹಬ್ಬ ಆಚರಿಸುತ್ತೇವೆ. ಹಬ್ಬಗಳು ಜನರನ್ನು ಒಗ್ಗೂಡಿಸಬೇಕು ಎಂಬ ಆಶಯದಿಂದಲೇ 29 ವರ್ಷಗಳಿಂದ ಗಣೇಶೋತ್ಸವ ನಡೆಸಿಕೊಂಡು ಬರುತ್ತಿದ್ದೇವೆ. ಇಲ್ಲಿ ಧರ್ಮದ ಬೇಧಭಾವಕ್ಕೆ ಅವಕಾಶವಿಲ್ಲ ಎಂದು ಯಮನೂರಸ್ವಾಮಿ ಯುವಕ ಸಂಘದ ಸದಸ್ಯರು ಹೇಳುತ್ತಾರೆ.

ಈ ಬಾರಿಯ ಉತ್ಸವದಲ್ಲಿ ರಾಮ ಗಣಪತಿ ಹಾಗೂ ರಾವಣ ಗಣಪತಿ ಪ್ರತಿಷ್ಠಾಪಿಸಿರುವುದು ವಿಶೇಷ ಆಕರ್ಷಣೆಯಾಗಿದೆ. ಇದನ್ನು ನೋಡಲು ಕುಕನೂರ ಮಾತ್ರವಲ್ಲದೆ ಸುತ್ತಮುತ್ತಲಿನ ಗ್ರಾಮಗಳಿಂದಲೂ ಜನರು ಆಗಮಿಸುತ್ತಿದ್ದಾರೆ.

ಹಿರಿಯರು ಆರಂಭಿಸಿದ ಆಚರಣೆಯನ್ನು ಯುವಕರು ಮುಂದುವರಿಸಿಕೊಂಡು ಬರುತ್ತಿದ್ದಾರೆ. ತಲೆಮಾರು ಬದಲಾದರೂ, ಒಟ್ಟಾಗಿ ಹಬ್ಬ ಆಚರಿಸುವ ಪರಂಪರೆ ಮಾತ್ರ ಮುಂದುವರಿದಿದೆ.

ಗಣಪತಿ ಮಂಟಪದಲ್ಲಿ ಕೈಮುಗಿಯುವ ಭಕ್ತಿ, ಅನ್ನದ ಸಾಲಿನಲ್ಲಿ ಹಂಚಿಕೊಳ್ಳುವ ಊಟ, ಉತ್ಸವದ ಕೆಲಸದಲ್ಲಿ ಬೆರೆತುಹೋಗುವ ಕೈಗಳು ಇವೆಲ್ಲವೂ ಇಲ್ಲಿ ಧರ್ಮಕ್ಕಿಂತ ಮನುಷ್ಯತ್ವಕ್ಕೆ ಜಾಗ ಕಲ್ಪಿಸಿವೆ. 29 ವರ್ಷಗಳಿಂದ ತಲೆಮಾರುಗಳನ್ನು ದಾಟಿ ಸಾಗುತ್ತಿರುವ ಯಮನೂರಸ್ವಾಮಿ ಗಣಪತಿ, ಹಬ್ಬವನ್ನು ಕೇವಲ ಆಚರಣೆಯಾಗಿ ಉಳಿಸದೆ, ಒಟ್ಟಾಗಿ ಬದುಕುವ ಬಂಧುತ್ವದ ಪರಂಪರೆಯಾಗಿ ಬೆಳೆಸಿದೆ.

ಗಣಪತಿಯ ಮುಂದೆ ಬೇರೆಬೇರೆ ಹೆಸರಿನ ಜನರು ನಿಲ್ಲಬಹುದು. ಆದರೆ ಪ್ರಸಾದದ ಸಾಲಿನಲ್ಲಿ ಎಲ್ಲರೂ ಒಂದೇ. ಈ ಭಾವೈಕ್ಯತೆ ಮತ್ತು ಬಂಧುತ್ವದ ಪರಂಪರೆಯನ್ನು ಮುನ್ನಡೆಸುತ್ತಿರುವ ಯಮನೂರಸ್ವಾಮಿ ಯುವಕ ಸಂಘ ಪಟ್ಟಣಕ್ಕೆ ಮಾದರಿಯಾಗಿದೆ. ಇಂತಹ ಎಲ್ಲರನ್ನೂ ಒಳಗೊಳ್ಳುವ ಆಚರಣೆಗಳು ಮತ್ತಷ್ಟು ಹೆಚ್ಚಾಗಿ, ಸಮಾಜದಲ್ಲಿ ಪರಸ್ಪರ ನಂಬಿಕೆ ಮತ್ತು ಮಾನವೀಯ ನಂಟು ಗಟ್ಟಿಯಾಗಬೇಕು ಎಂಬುದು ಸಾರ್ವಜನಿಕರ ನಿರೀಕ್ಷೆ.

ಕಳೆದ 29 ವರ್ಷಗಳಿಂದ ಯಮನೂರಸ್ವಾಮಿ ಹೆಸರಿನಲ್ಲಿ ಗಣಪತಿ ಪ್ರತಿಷ್ಠಾಪಿಸಿ ಉತ್ಸವ ಆಚರಿಸುತ್ತಿದ್ದೇವೆ. ನಮ್ಮ ಯುವಕ ಸಂಘದ ಸದಸ್ಯರು ಜಾತಿ-ಧರ್ಮದ ಭೇದವಿಲ್ಲದೆ ಒಗ್ಗಟ್ಟಿನಿಂದ ಎಲ್ಲ ಕಾರ್ಯಗಳನ್ನು ನಿರ್ವಹಿಸುತ್ತಿದ್ದಾರೆ. ಪೂಜೆ, ಮಂಟಪದ ವ್ಯವಸ್ಥೆ, ಅನ್ನಸಂತರ್ಪಣೆ ಸೇರಿದಂತೆ ಉತ್ಸವದ ಎಲ್ಲ ಚಟುವಟಿಕೆಗಳಲ್ಲಿ ಒಟ್ಟಾಗಿ ಕೆಲಸ ಮಾಡುತ್ತಾರೆ. ಜೊತೆಯಾಗಿ ಊಟ ಮಾಡುತ್ತೇವೆ. ಮುಸ್ಲಿಂ ಬಾಂಧವರೂ ಸಕ್ರಿಯವಾಗಿ ಕೈಜೋಡಿಸುತ್ತಾರೆ. ನಮಗೆ ಜಾತಿ-ಧರ್ಮದ ಭೇದಕ್ಕಿಂತ ಒಗ್ಗಟ್ಟು ಮತ್ತು ಬಾಂಧವ್ಯ ಮುಖ್ಯ.

-ಕರಬಸಪ್ಪ ಬಿನ್ನಾಳ, ಯಮನೂರಸ್ವಾಮಿ ಯುವಕ ಸಂಘ, ಕುಕನೂರ

ಹಿಂದಿನಿಂದ ನಡೆದುಕೊಂಡು ಬಂದಿರುವ ಪರಂಪರೆಯನ್ನೇ ನಾವು ಮುಂದುವರಿಸಿಕೊಂಡು ಹೋಗುತ್ತಿದ್ದೇವೆ. ಗಣಪತಿ ಹಬ್ಬದ ಎಲ್ಲ ಕೆಲಸಗಳಲ್ಲೂ ಯಾವುದೇ ಭೇದಭಾವ ಇಲ್ಲ. ಎಲ್ಲರೂ ಒಟ್ಟಾಗಿ ಭಾಗವಹಿಸುತ್ತೇವೆ. ಈ ಬಾಂಧವ್ಯ ನಮಗೆ ಸಂಭ್ರಮ, ಸಂತೋಷ ಕೊಡುತ್ತೆದೆ. ನಮ್ಮ ಒಗ್ಗಟ್ಟು ಹೀಗೆಯೇ ಮುಂದುವರಿಯಬೇಕು.

-ಫಕೀರಸಾಬ್ ನರೇಗಲ್ಲ, ರಮಜಾನಸಾಬ್ ಬೆದವಟ್ಟಿ, ರಾಜಾಸಾಬ್ ಮಟಚೂರಿ, ಕುಕನೂರ

Tags

MuslimHinduGaneshotsav
share
ಭೀಮಾಶಂಕರ ಪಾಣೇಗಾಂವ
ಭೀಮಾಶಂಕರ ಪಾಣೇಗಾಂವ
Next Story
X