Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಗಾಝಾದಲ್ಲಿ ಕ್ಷಾಮ ಹಾಗೂ ಜಾಗತಿಕ...

ಗಾಝಾದಲ್ಲಿ ಕ್ಷಾಮ ಹಾಗೂ ಜಾಗತಿಕ ಲಜ್ಜೆಗೇಡಿತನ

ವಾರ್ತಾಭಾರತಿವಾರ್ತಾಭಾರತಿ26 Sept 2025 9:01 AM IST
share
ಗಾಝಾದಲ್ಲಿ ಕ್ಷಾಮ ಹಾಗೂ ಜಾಗತಿಕ ಲಜ್ಜೆಗೇಡಿತನ

ಚರಿತ್ರೆ ಈ ಕ್ಷಣವನ್ನು ಜಾಗತಿಕ ಲಜ್ಜೆಗೇಡಿತನವನ್ನಾಗಿ ದಾಖಲಿಸುತ್ತದೆ. ಹಿಂದೆಯೂ ಜಗತ್ತಿನಲ್ಲಿ ಇಂತಹ ಘಟನೆಗಳು ನಡೆದಿವೆ. ಆಗಲೂ ಹಲವು ದೇಶಗಳು ಸುಮ್ಮನಿದ್ದವು. ಆ ಘಟನೆಗಳ ಜೊತೆಯಲ್ಲಿ ಈಗ ಗಾಝಾದಲ್ಲಿ ಮೂಳೆ ಚಕ್ಕಳವಾಗಿರುವ ಮಕ್ಕಳ ಚಿತ್ರಗಳೂ ದಾಖಲಾಗುತ್ತವೆ. ಜಗತ್ತು ಈಗಲಾದರೂ ಮಾನವೀಯವಾಗಿ ನಡೆದುಕೊಂಡು ಇನ್ನೂ ಹೆಚ್ಚೆಚ್ಚು ಮಕ್ಕಳು ಸಾಯುವುದನ್ನು ತಪ್ಪಿಸುತ್ತದೆ ಎಂದು ಆಶಿಸಬಹುದೆ?


ಹಸಿವು ನಿಧಾನವಾಗಿ, ಸದ್ದಿಲ್ಲದೆ ಕೊಲ್ಲುತ್ತಾ ಹೋಗುತ್ತದೆ. ಮೂಲಭೂತ ಅವಶ್ಯಕತೆಗಳು ಸಿಗದೇ ಹೋದಾಗ ಯಕೃತ್ತಿನ ಸಕ್ಕರೆಯನ್ನು ದೇಹ ಬಳಸಿಕೊಳ್ಳುತ್ತದೆ. ಆನಂತರ ಮಾಂಸ ಹಾಗೂ ಕೊಬ್ಬು ಕರಗುತ್ತವೆ. ಮೆದುಳು ಹಾಗೂ ದೇಹದ ಇತರ ಪ್ರಮುಖ ಅಂಗಗಳನ್ನು ಜೀವಂತ ಇಡಲು ಟಿಷ್ಯುಗಳನ್ನು ದೇಹ ಬಳಸಿಕೊಳ್ಳುತ್ತದೆ. ಒಂದೊಂದೇ ಖಾಲಿಯಾದಂತೆ ಹೃದಯ ದುರ್ಬಲವಾಗುತ್ತದೆ. ರೋಗನಿರೋಧಕ ಶಕ್ತಿ ಹೋಗಿಬಿಡುತ್ತದೆ. ಮನಸ್ಸು ಸ್ಥಿರತೆಯನ್ನು ಕಳೆದುಕೊಳ್ಳುತ್ತದೆ. ಚರ್ಮ ಎಲುಬಿಗೆ ಅಂಟಿಕೊಳ್ಳುತ್ತದೆ. ಉಸಿರು ಕಡಿಮೆಯಾಗುತ್ತಾ ಬರುತ್ತದೆ. ದೇಹದ ಒಂದೊಂದೇ ಅಂಗಗಳು ನಿಷ್ಕ್ರಿಯವಾಗುತ್ತಾ ಹೋಗುತ್ತದೆ. ದೃಷ್ಟಿ ಮಂಕಾಗುತ್ತದೆ. ಹೀಗೆ ಒಂದೊಂದೇ ಕರಗುತ್ತಾ ಖಾಲಿಯಾಗುವ ದೇಹ ಜೀವ ಕಳೆದುಕೊಳ್ಳುತ್ತದೆ. ಇದು ತಂಬಾ ನಿಧಾನವಾದ ಹಾಗೂ ಅತ್ಯಂತ ಯಾತನೆಯ ಸಾವು.

ಗಾಝಾದಲ್ಲಿ ಫೆಲೆಸ್ತೀನ್‌ನ ಮಕ್ಕಳು ಹಾಗೂ ಪುಟಾಣಿಗಳು ಅಮ್ಮನ ತೋಳಿನಲ್ಲಿ ಹಾಗೆ ಕರಗಿ ಹೋಗುತ್ತಿರುವ ಪಟಗಳನ್ನು ನಾವೆಲ್ಲಾ ನೋಡಿದ್ದೇವೆ. ಆದರೂ ಇಸ್ರೇಲ್ ಈಗ ತನ್ನ ಸಮರವನ್ನು ತೀವ್ರಗೊಳಿಸುತ್ತಿದೆ. ಗಾಝಾ ನಗರವನ್ನು ‘ಆಕ್ರಮಿಸಿಕೊಳ್ಳಲು’ ಹೊಸ ಹೋರಾಟವನ್ನು ನಡೆಸುತ್ತಿದೆ. ಸಾವಿರಾರು ಫೆಲೆಸ್ತೀನಿಯರು ಈ ಬಾಂಬಿನ ದಾಳಿಯಿಂದ ಅಥವಾ ಹಸಿವಿನಿಂದ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ.

ಸಂಯುಕ್ತ ರಾಷ್ಟ್ರಗಳ ಅಧಿಕಾರಿ ರಮೇಶ್ ರಾಜಸಿಂಗಂ ಹೇಳುವಂತೆ, ‘‘ಇದು ಮುಂದೆಂದೋ ಘಟಿಸಲಿರುವ ಹಸಿವಿನ ಬಿಕ್ಕಟ್ಟಲ್ಲ. ಈಗ ಆಗುತ್ತಿದೆ. ಇದು ಹಸಿವಿನ ಸಂಕಟ. ಗಾಝಾದ ಸಾವಿರಾರು ಮಕ್ಕಳಿಗೆ ಈಗ ಆಹಾರ ಸಿಕ್ಕರೂ ಜೀರ್ಣಿಸಿಕೊಳ್ಳುವುದಕ್ಕೆ ಆಗುವುದಿಲ್ಲ. ಅವರ ದೇಹ ಆಹಾರವನ್ನು ಜೀರ್ಣಿಸಿಕೊಳ್ಳುವುದಕ್ಕೂ ಆಗದಷ್ಟು ನಿಶ್ಯಕ್ತವಾಗಿದೆ. ಅಷ್ಟು ತೀವ್ರವಾದ ಅಪೌಷ್ಟಿಕತೆಯ ಸ್ಥಿತಿಯಲ್ಲಿದ್ದಾರೆ.’’

ಗಾಝಾದಲ್ಲಿ ಅತ್ಯಂತ ಘೋರ ಅಪರಾಧಗಳನ್ನು ಇಸ್ರೇಲ್ ಮಾಡುತ್ತಿದೆ. ಈ ಬಗ್ಗೆ ಜಗತ್ತಿನ ಬಹುತೇಕ ಜನ ಒಪ್ಪಿಕೊಳ್ಳುತ್ತಿದ್ದಾರೆ. ಇಸ್ರೇಲಿಗೆ ಹಸಿವು ಕೂಡ ಒಂದು ಯುದ್ಧ ತಂತ್ರವಾಗಿದೆ. ಯುದ್ಧ ಪ್ರಾರಂಭವಾದಾಗಲೇ ಇದು ಗೊತ್ತಿತ್ತು. ಆಗಲೇ ಫೆಲೆಸ್ತೀನ್ ಹಾಗೂ ಅಂತರ್‌ರಾಷ್ಟ್ರೀಯ ಮಾನವ ಹಕ್ಕುಗಳ ಸಂಘಟನೆಗಳು ಈ ಅಪಾಯವನ್ನು ಕುರಿತು ಎಚ್ಚರಿಕೆ ನೀಡಿದ್ದವು. ಈಗ ಇದನ್ನು ಇಸ್ರೇಲ್‌ನ ಹಲವರು ಸೇರಿದಂತೆ ಬಹುತೇಕ ರಾಷ್ಟ್ರಗಳೂ ಹೇಳುತ್ತಿವೆ. ಉದಾಹರಣೆಗೆ ಹಿಂದಿನ ಪ್ರಧಾನ ಮಂತ್ರಿ ಎಹುದ್ ಓಲ್‌ಮರ್ಟ್ ಗಾಝಾದಲ್ಲಿ ನಡೆಯುತ್ತಿರುವುದನ್ನು ಕದನ ಅಪರಾಧ ಎಂದು ಖಂಡಿಸಿದ್ದಾರೆ. ಇಸ್ರೇಲ್‌ನ ಪ್ರಮುಖ ಮಾನವ ಹಕ್ಕುಗಳ ಸಂಘಟನೆಗಳು ಇಸ್ರೇಲ್ ಕ್ರಮಗಳನ್ನು ನರಮೇಧ ಎಂದು ಕರೆದಿವೆ.

ಅಕ್ಟೋಬರ್ 9, 2023ರಲ್ಲಿ ಹಮಾಸ್ 1,200 ಜನರನ್ನು ಕೊಂದು 200ಕ್ಕೂ ಹೆಚ್ಚು ಜನರನ್ನು ಒತ್ತೆಯಾಳುಗಳಾಗಿ ಮಾಡಿಕೊಂಡಿತು. ಅದು ಕೂಡ ಗಂಭೀರವಾದ ಕದನ ಅಪರಾಧವೇ. ಅದಾದ ಎರಡು ದಿನಗಳ ನಂತರ, ಇಸ್ರೇಲ್ ರಕ್ಷಣಾ ಮಂತ್ರಿ ‘‘ಗಾಝಾ ಮೇಲೆ ಸಂಪೂರ್ಣ ಮುತ್ತಿಗೆಗೆ ಅದೇಶಿಸಿದ್ದೇನೆ. ವಿದ್ಯುತ್ ಇರುವುದಿಲ್ಲ, ಆಹಾರ ಇರುವುದಿಲ್ಲ, ಇಂಧನ ಇರುವುದಿಲ್ಲ, ಎಲ್ಲವನ್ನು ನಿಲ್ಲಿಸಲಾಗುತ್ತದೆ. ನಾವು ಮಾನವ ಪಶುಗಳ ವಿರುದ್ಧ ಹೋರಾಡುತ್ತಿದ್ದೇವೆ. ಅದಕ್ಕೆ ತಕ್ಕಂತೆ ಕ್ರಮ ತೆಗೆದುಕೊಳ್ಳುತ್ತೇವೆ’’ ಎಂದು ಘೋಷಿಸಿದ್ದ. ಗಾಝಾದ ಜನರನ್ನು ಅಮಾನವೀಯವಾಗಿ ನಡೆಸಿಕೊಳ್ಳಲಾಗಿದೆ. ನಾಗರಿಕರು ಹಾಗೂ ಹೋರಾಟಗಾರರ ನಡುವೆ ವ್ಯತ್ಯಾಸವನ್ನೇ ಮಾಡಲಾಗುತ್ತಿಲ್ಲ. ಇದು ಅಂತರ್‌ರಾಷ್ಟ್ರೀಯ ಮಾನವೀಯತೆಯ ನಿಯಮಗಳ ಉಲ್ಲಂಘನೆಯಾಗಿದೆ. 70 ದಿನಗಳು ಗಾಝಾಕ್ಕೆ ಯಾವುದೇ ಅವಶ್ಯಕ ವಸ್ತುಗಳು ಪೂರೈಕೆಯಾಗದಂತೆ ಬಂದ್ ಮಾಡಲಾಗಿದೆ. ಸಾಮೂಹಿಕವಾಗಿ ಎಲ್ಲರನ್ನೂ ಶಿಕ್ಷಿಸಲಾಗುತ್ತಿದೆ.

2024ರ ಪ್ರಾರಂಭದಲ್ಲಿ ಗಾಝಾಗೆ ಅಲ್ಪಸ್ವಲ್ಪ ವಸ್ತುಗಳು ಪ್ರವೇಶಿಸಲು ಪ್ರಾರಂಭವಾದ ಮೇಲೆ ಪರಿಸ್ಥಿತಿಯಲ್ಲಿ ಒಂದಿಷ್ಟು ಸುಧಾರಣೆಯಾಗಿತ್ತು. ಎಪ್ರಿಲ್‌ನಲ್ಲಿ ಯುಎಸ್‌ಏಡ್ ಸಂಸ್ಥೆಯ ಮುಖ್ಯಸ್ಥ ಸಾಮಾಂತ ಪೋವರ್ ‘‘ಗಾಝಾದಲ್ಲಿ ಕ್ಷಾಮ ಪ್ರಾರಂಭವಾಗಿದೆ’’ ಎಂದು ಎಚ್ಚರಿಸಿದ್ದರು. ನಂತರ ಜಾಗತಿಕ ಆಹಾರ ಕಾರ್ಯಕ್ರಮದ ನಿರ್ದೇಶಕ ‘‘ಉತ್ತರ ಗಾಝಾದಲ್ಲಿ ಕ್ಷಾಮ ಪೂರ್ಣ ಪ್ರಮಾಣದಲ್ಲಿ ಪ್ರಾರಂಭವಾಗಿದೆ’’ ಎಂದು ಘೋಷಿಸಿದ್ದರು.

ಹಸಿವನ್ನು ಯುದ್ಧದ ಅಸ್ತ್ರವಾಗಿ ಬಳಸುವುದನ್ನು ಅಂತರ್‌ರಾಷ್ಟ್ರೀಯ ಕಾನೂನು ನಿಷೇಧಿಸುತ್ತದೆ. ಗಾಝಾವನ್ನು ಇಸ್ರೇಲ್ ಆಕ್ರಮಿಸಿಕೊಂಡಿದೆ. ಅಲ್ಲಿಯ ನಾಗರಿಕರಿಗೆ ಕನಿಷ್ಠ ಆಹಾರ, ನೀರು ಮತ್ತು ಔಷಧಿ ಇತ್ಯಾದಿ ಅವಶ್ಯಕ ವಸ್ತುಗಳು ಸಿಗುವಂತೆ ನೋಡಿಕೊಳ್ಳುವುದು ಅದರ ಕರ್ತವ್ಯ. ಅಂತಹ ವಸ್ತುಗಳು ಗಾಝಾದಲ್ಲೇ ಸಿಗದಿದ್ದ ಪಕ್ಷದಲ್ಲಿ, ಇಸ್ರೇಲ್ ಸೇರಿದಂತೆ ಬೇರೆ ಕಡೆಗಳಿಂದ ಒದಗಿಸಬೇಕು. ಆದರೆ ತಾನು ಒದಗಿಸುವುದಿರಲಿ, ಬೇರೆಯವರು ಕೊಡುವುದಕ್ಕೂ ಅದು ಬಿಡುತ್ತಿಲ್ಲ. ಕಳೆದ 21 ತಿಂಗಳಿನಲ್ಲಿ ಹಲವು ಸರಕಾರಗಳು ಹಾಗೂ ಸಹಾಯ ಒದಗಿಸುವ ಸಂಸ್ಥೆಗಳು ಇಸ್ರೇಲ್‌ಗೆ ನೆರವನ್ನು ನೀಡುವುದಕ್ಕೆ ಅವಕಾಶ ಮಾಡಿಕೊಡಬೇಕೆಂದು ಮನವಿ ಮಾಡಿಕೊಂಡಿವೆ. ಹಾಗೆ ಅವಕಾಶ ಮಾಡಿಕೊಡುವುದು ಇಸ್ರೇಲ್‌ನ ಕಾನೂನಾತ್ಮಕ ಕರ್ತವ್ಯ. ಆದರೆ ಇಸ್ರೇಲ್ ಅಂತಹ ಎಲ್ಲಾ ಪ್ರಯತ್ನಗಳಿಗೂ ತಡೆಯೊಡ್ಡುತ್ತಾ ಬರುತ್ತಿದೆ. ಈಗಲೂ ಮಾನವೀಯ ಸಂಘಟನೆಗಳಿಗೆ ನೆರವು ನೀಡುವುದಕ್ಕೆ ಬಿಡುತ್ತಿಲ್ಲ.

ಜನವರಿ 2024ರಲ್ಲಿ, ಅಂತರ್‌ರಾಷ್ಟ್ರೀಯ ನ್ಯಾಯಾಲಯವು ಇಸ್ರೇಲ್‌ಗೆ ಅವಶ್ಯಕ ಮೂಲ ಸೇವೆಗಳನ್ನು ಹಾಗೂ ಮಾನವೀಯ ನೆರವನ್ನು ತುರ್ತಾಗಿ ಒದಗಿಸಲು ಪರಿಣಾಮಕಾರಿಯಾದ ಕ್ರಮಗಳನ್ನು ತಕ್ಷಣ ತೆಗೆದುಕೊಳ್ಳುವಂತೆ ಆದೇಶಿಸಿತು. ಎರಡು ತಿಂಗಳ ನಂತರ ಮತ್ತೆ ಆಜ್ಞೆ ಮಾಡಿತು. ಜೊತೆಗೆ ಸಂಯುಕ್ತ ರಾಷ್ಟ್ರಗಳ ಪೂರ್ಣ ಸಹಕಾರದೊಂದಿಗೆ ಕ್ರಮ ತೆಗೆದುಕೊಳ್ಳಲು ತಿಳಿಸಿತು. ಇಂದು ಗಾಝಾದಲ್ಲಿ ವ್ಯಾಪಕವಾಗಿ ಹರಡುತ್ತಿರುವ ಕ್ಷಾಮವನ್ನು ತಡೆಯುವುದಕ್ಕೆ ಸಂಯುಕ್ತ ರಾಷ್ಟ್ರಗಳ ಮುಂದಾಳತ್ವದ ಮಾನವೀಯ ವ್ಯವಸ್ಥೆಗಷ್ಟೇ ಸಾಮರ್ಥ್ಯವಿರುವುದು. ಜನವರಿ ಹಾಗೂ ಮಾರ್ಚ್‌ನಲ್ಲಿ ಕದನ ವಿರಾಮದ ಸಮಯದಲ್ಲಿ ಸಂಯುಕ್ತ ರಾಷ್ಟ್ರಗಳು ಹಾಗೂ ಇತರ ಮಾನವೀಯ ಸಂಘಟನೆಗಳು ಸುಮಾರು 400 ಕಡೆಗಳಲ್ಲಿ ಪರಿಹಾರ ಕಾರ್ಯಕ್ರಮ ಹಮ್ಮಿಕೊಂಡಿದ್ದವು. ಆದರೆ ಇಸ್ರೇಲ್ ಮಾರ್ಚ್ ನಲ್ಲಿ ಯುದ್ಧವಿರಾಮವನ್ನು ಉಲ್ಲಂಘಿಸಿ ಈ ಪರಿಹಾರ ಕಾರ್ಯಕ್ರಮವನ್ನು ನಿಲ್ಲಿಸಿತು. ಮತ್ತೆ ಗಾಝಾ ಮೇಲೆ ದಾಳಿ ಮಾಡಿತು.

ಇಸ್ರೇಲ್ ತನ್ನ ಹೊಸ ದಾಳಿಯನ್ನು ಸಮರ್ಥಿಸಿಕೊಳ್ಳುತ್ತಿದೆ. ಹಮಾಸ್ ಮೇಲೆ ಒತ್ತಡ ಹೇರಲು ನೆರವನ್ನು ತಡೆಯುತ್ತಿರುವುದಾಗಿ ಹೇಳಿಕೊಂಡಿದೆ. ಆ ಮೂಲಕ ಅದು ಹಸಿವನ್ನು ಆಯುಧವನ್ನಾಗಿ ಬಳಸುತ್ತಿದೆ ಎಂದು ಒಪ್ಪಿಕೊಂಡಿದೆ. ಮೇ ತಿಂಗಳಿನಲ್ಲಿ ಮತ್ತೆ ನೆರವು ಪ್ರಾರಂಭವಾದಾಗ ಇಸ್ರೇಲ್ ಸಂಯುಕ್ತ ರಾಷ್ಟ್ರಗಳಿಗೆ ಅವಕಾಶ ನೀಡಲಿಲ್ಲ. ಬದಲಿಗೆ ಖಾಸಗಿ ಆಹಾರ ವಿತರಣಾ ಸಂಘಟನೆ ಗಾಝಾ ಮಾನವೀಯ ಸಂಸ್ಥೆಗೆ ಅವಕಾಶ ಮಾಡಿಕೊಟ್ಟಿತು. ಇದು ಇಸ್ರೇಲ್ ಮಾಡಿದ ವ್ಯವಸ್ಥೆಯಾಗಿತ್ತು. ಇಲ್ಲಿ ಆಹಾರ ಪಡೆದುಕೊಳ್ಳುತ್ತಿರುವಾಗಲೇ ಸಾವಿರಾರು ಫೆಲೆಸ್ತೀನಿಯರು ಇಸ್ರೇಲ್ ಸೈನಿಕರಿಂದ ಪ್ರಾಣ ಕಳೆದುಕೊಂಡಿದ್ದಾರೆ. ನಾಲ್ಕು ಗಾಝಾ ಮಾನವೀಯ ಸಂಸ್ಥೆಯ ಕೇಂದ್ರಗಳಲ್ಲಿ ಇಂತಹ 1,400 ಸಾವು ಸಂಭವಿಸಿವೆ.

ದುರಂತ ಅಂದರೆ ಗಾಝಾ ಮಾನವೀಯ ಸಂಸ್ಥೆಯ ಯೋಜನೆ ಯಶಸ್ವಿಯಾಗುವುದಕ್ಕೆ ಸಾಧ್ಯವೇ ಇಲ್ಲ. ಇದನ್ನು ಕ್ಷಾಮ ಪರಿಶೀಲನಾ ಸಮಿತಿಯ ವರದಿ ಸ್ಪಷ್ಟವಾಗಿ ತಿಳಿಸಿದೆ. ‘‘ನಮ್ಮ ವಿಶ್ಲೇಷಣೆಯ ಪ್ರಕಾರ ಒಂದು ಪಕ್ಷ ಜಿಎಚ್‌ಎಫ್ ಈ ಪ್ರಮಾಣದ ಹಿಂಸೆಯಿಲ್ಲದೆ ಆಹಾರವನ್ನು ವಿತರಿಸುವುದಕ್ಕೆ ಸಾಧ್ಯವಾದರೂ ಅದು ನೀಡುತ್ತಿರುವ ಆಹಾರದ ಪ್ಯಾಕೆಟ್‌ಗಳನ್ನು ಗಮನಿಸಿದರೆ ಅದರ ವಿತರಣೆಯ ಯೋಜನೆ ಸಾಮೂಹಿಕವಾಗಿ ಜನ ಹಸಿವಿನಿಂದ ನರಳುವುದನ್ನು ತಪ್ಪಿಸುವುದಿಲ್ಲ ಅನ್ನುವುದು ಸ್ಪಷ್ಟ.’’

ಜನರಿಗೆ ಆಹಾರ ಸಿಗದಂತೆ ಮಾಡಿದಾಗಲೇ ಹಸಿವಿನ ಕದನ ಅಪರಾಧ ಪ್ರಾರಂಭವಾಯಿತು ಎಂದರ್ಥ ಎಂದು ಅಂತರ್‌ರಾಷ್ಟ್ರೀಯ ಕಾನೂನು ಹೇಳುತ್ತದೆ. ‘‘ಒಂದು ನಿರ್ದಿಷ್ಟ ರಾಷ್ಟ್ರೀಯ, ಜನಾಂಗೀಯ ಅಥವಾ ಧಾರ್ಮಿಕ ಗುಂಪನ್ನು ಪೂರ್ಣವಾಗಿ ಅಥವಾ ಭಾಗಶಃ ನಿರ್ಮೂಲ ಮಾಡಲು ಅದನ್ನು ಉದ್ದೇಶ ಪೂರ್ವಕವಾಗಿ ಒಂದು ವ್ಯಾಪಕ ನೀತಿಯನ್ನಾಗಿ ಬಳಸಿಕೊಂಡರೆ ಅದು ನರಮೇಧವಾಗುತ್ತದೆ’’ ಎಂದು ಅದು ಹೇಳುತ್ತದೆ. ಇಸ್ರೇಲ್‌ನ ಹಲವಾರು ಮಂತ್ರಿಗಳು ಇದು ತಮ್ಮ ಉದ್ದೇಶವೆಂದು ಬಹಿರಂಗವಾಗಿ ಹೇಳಿಕೊಂಡಿದ್ದಾರೆ. ಕಳೆದ ವರ್ಷ ಆಗಸ್ಟ್‌ನಲ್ಲಿ ಇಸ್ರೇಲ್‌ನ ವಿತ್ತಮಂತ್ರಿ ಬಿಜೆಲೆಲ್ ಸ್ಮಾಟ್‌ರಿಚ್ ‘‘ಎರಡು ದಶಲಕ್ಷ ನಾಗರಿಕರು ಹಸಿವಿನಿಂದ ಸಾಯುವುದು ನ್ಯಾಯಸಮ್ಮತವಾಗಿದೆ ಮತ್ತು ಅದು ನೈತಿಕವಾಗಿಯೂ ಸರಿ’’ ಎಂದು ಸಮರ್ಥಿಸಿ ಕೊಂಡಿದ್ದಾನೆ. ದೇಶದ ರಕ್ಷಣಾ ಸಚಿವ ಬೆನ್-ಗ್ವಿರ್ ‘‘ಆಹಾರ ಹಾಗೂ ನೆರವು ಕೇಂದ್ರಗಳ ಮೇಲೆ ಬಾಂಬ್ ಹಾಕಬೇಕು’’ ಎಂದು ಅಪ್ಪಣೆ ಕೊಟ್ಟಿದ್ದಾನೆ.

ಫೆಲೆಸ್ತೀನ್ ನಾಗರಿಕರನ್ನು ಉದ್ದೇಶಪೂರ್ವಕವಾಗಿ ಹೊಟ್ಟೆಗಿಲ್ಲದಂತೆ ಮಾಡಿ ಕೊಲ್ಲಲಾಗುತ್ತಿದೆ. ಯುದ್ಧ ಪ್ರಾರಂಭವಾಗುತ್ತಿದ್ದಂತೆ ಘಟಿಸಲಿರುವ ಈ ಕ್ರೌರ್ಯದ ಬಗ್ಗೆ ಸ್ಪಷ್ಟ ಅರಿವಿತ್ತು. ಆದರೂ ಹಲವು ದೇಶಗಳು ಕಣ್ಣು ಮುಚ್ಚಿಕೊಂಡವು. ನೆರವು ಹಮಾಸ್‌ಗೆ ಹೋಗಿಬಿಡುತ್ತದೆ ಎನ್ನುತ್ತಾ ನೆರವು ಗಾಝಾಗೆ ಹೋಗದಂತೆ ಇಸ್ರೇಲ್ ಒಡ್ಡುತ್ತಿರುವ ಅಡ್ಡಿಗಳನ್ನು ಸಮರ್ಥಿಸಿಕೊಂಡವು. ಈ ದೇಶಗಳು ಗಾಝಾಗೆ ನೆರವು ನೀಡುವುದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಇಸ್ರೇಲ್‌ಗೆ ಶಸ್ತ್ರಾಸ್ತ್ರಗಳನ್ನು ಸರಬರಾಜು ಮಾಡುತ್ತಿವೆ. ನರಮೇಧವನ್ನು ತಪ್ಪಿಸಬೇಕಾದ ತಮ್ಮ ಕರ್ತವ್ಯದಲ್ಲಿ ಪೂರ್ಣ ವಿಫಲರಾಗಿದ್ದಾರೆ.

ಚರಿತ್ರೆ ಈ ಕ್ಷಣವನ್ನು ಜಾಗತಿಕ ಲಜ್ಜೆಗೇಡಿತನವನ್ನಾಗಿ ದಾಖಲಿಸುತ್ತದೆ. ಹಿಂದೆಯೂ ಜಗತ್ತಿನಲ್ಲಿ ಇಂತಹ ಘಟನೆಗಳು ನಡೆದಿವೆ. ಆಗಲೂ ಹಲವು ದೇಶಗಳು ಸುಮ್ಮನಿದ್ದವು. ಆ ಘಟನೆಗಳ ಜೊತೆಯಲ್ಲಿ ಈಗ ಗಾಝಾದಲ್ಲಿ ಮೂಳೆ ಚಕ್ಕಳವಾಗಿರುವ ಮಕ್ಕಳ ಚಿತ್ರಗಳೂ ದಾಖಲಾಗುತ್ತವೆ. ಜಗತ್ತು ಈಗಲಾದರೂ ಮಾನವೀಯವಾಗಿ ನಡೆದುಕೊಂಡು ಇನ್ನೂ ಹೆಚ್ಚೆಚ್ಚು ಮಕ್ಕಳು ಸಾಯುವುದನ್ನು ತಪ್ಪಿಸುತ್ತದೆ ಎಂದು ಆಶಿಸಬಹುದೆ?

ಕೃಪೆ: ಪ್ರಾಜೆಕ್ಟ್ ಸಿಂಡಿಕೇಟ್

share
ವಾರ್ತಾಭಾರತಿ
ವಾರ್ತಾಭಾರತಿ
Next Story
X