Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಅರಮನೆ ಮೈದಾನದಲ್ಲಿ ‘ಜೆನ್ ಝೀ’ ತಲೆಮಾರು:...

ಅರಮನೆ ಮೈದಾನದಲ್ಲಿ ‘ಜೆನ್ ಝೀ’ ತಲೆಮಾರು: ‘ವಿಂಟೇಜ್’ ವಾಹನಗಳ ಮುಖಾಮುಖಿ

ಯೋಗೇಶ್ ಮಲ್ಲೂರುಯೋಗೇಶ್ ಮಲ್ಲೂರು15 Nov 2025 8:42 AM IST
share
ಅರಮನೆ ಮೈದಾನದಲ್ಲಿ ‘ಜೆನ್ ಝೀ’ ತಲೆಮಾರು: ‘ವಿಂಟೇಜ್’ ವಾಹನಗಳ ಮುಖಾಮುಖಿ

ಬೆಂಗಳೂರು, ನ.14: ಇವತ್ತಿನ ‘ಜೆನ್ ಝೀ’ ತಲೆಮಾರಿನ ಕಾಲಘಟ್ಟದ ನಡುವೆ ಶತಮಾನಗಳಷ್ಟು ಹಳೆಯದಾದ ‘ವಿಂಟೇಜ್’ ವಾಹನಗಳ ಶ್ರೀಮಂತ ಪರಂಪರೆಯನ್ನು ಪರಿಚಯಿಸುವ ನಿಟ್ಟಿನಲ್ಲಿ ರಾಜಧಾನಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ಗತಕಾಲದ ಅಪರೂಪದ ಕಾರು-ಬೈಕುಗಳ ಜಗತ್ತು ಅನಾವರಣಗೊಂಡಿದೆ.

ನಗರದ ಅರಮನೆ ಮೈದಾನದ ತ್ರಿಪುರವಾಸಿನ ಗೇಟ್‌ನಲ್ಲಿ ‘ಟ್ರೈಯೂನ್ ಎಕ್ಸಿಬಿಟರ್ಸ್’ ವತಿಯಿಂದ ನ.14ರಿಂದ 16ರವರೆಗೆ ಮೂರು ದಿನಗಳ ಕಾಲ ವಿಂಟೇಜ್ ವಾಹನಗಳ ಪ್ರದರ್ಶನ ನಡೆಯುತ್ತಿದ್ದು, ಹಳೆಯ ಕಾಲದ ಜೊತೆಗಿನ ಅದ್ಭುತ ಪಯಣವನ್ನು ಸಿಲಿಕಾನ್ ಸಿಟಿಯ ಜನರ ಮುಂದೆ ತಂದು ನಿಲ್ಲಿಸಲಾಗಿದೆ.

‘ಪಯಣ’ದೊಂದಿಗಿನ ಪಯಣ ಅದ್ಬುತ..! :

ಈ ಪ್ರದರ್ಶನದಲ್ಲಿ ಮೈಸೂರಿನ ‘ಪಯಣ’ ವಸ್ತು ಸಂಗ್ರಹಾಲಯವು ಈಗಲೂ ಸುಸ್ಥಿಯಲ್ಲಿರುವ ಶತಮಾನಕ್ಕೂ ಹಳೆಯ ಕಾರುಗಳ ವೈವಿಧ್ಯಮಯ ಲೋಕವನ್ನು ಸಾರ್ವಜನಿಕರ ವೀಕ್ಷಣೆಗೆ ತೆರೆದಿಟ್ಟಿದೆ. ಸಾಮಾನ್ಯವಾಗಿ ದೇವಾಲಯ, ಸ್ಮಾರಕ, ಹಸ್ತಪ್ರತಿಗಳಲ್ಲಿ ಮೂಡಿಬರುವ ನಮ್ಮ ಪರಂಪರೆ ಇಲ್ಲಿನ ವಸ್ತುಸಂಗ್ರಹಾಲಯದಲ್ಲಿ ಅಭಿವ್ಯಕ್ತಿಯಾಗುವ ಮೂಲಕ ಎಲ್ಲರ ಗಮನ ಸೆಳೆಯುತ್ತಿದೆ.

ಇಲ್ಲಿ ಪ್ರದರ್ಶನಕ್ಕಿರುವ ಪ್ರತಿಯೊಂದು ಕಾರುಗಳೂ ಸಹ ಉತ್ತಮವಾಗಿ ಸಂರಕ್ಷಿಸಲ್ಪಟ್ಟಿವೆ. ಕೇವಲ ಕಾರುಗಳ ಇತಿಹಾಸ ಮಾತ್ರವಲ್ಲದೆ ನಾವೀನ್ಯತೆ, ಕರಕುಶಲತೆ ಮತ್ತು ಸೌಂದರ್ಯದ ನಿರಂತರ ಅನ್ವೇಷಣೆಯನ್ನು ತೆರೆದಿಟ್ಟಿದೆ. ವಾಹನ ವಿನ್ಯಾಸದ ವಿಕಾಸ ಮತ್ತು ಉದ್ಯಮವನ್ನು ರೂಪಿಸಿದ ಪ್ರಮುಖ ಕ್ಷಣಗಳನ್ನು ನೋಡಿ ಅರ್ಥಮಾಡಿಕೊಳ್ಳಬಹುದಾಗಿದೆ. ಸುಮಾರು ಹತ್ತು ಗತಕಾಲದ ಅಪರೂಪದ ಕಾರುಗಳನ್ನು ಇಲ್ಲಿನ ಪ್ರದರ್ಶನಕ್ಕೆ ಇಡಲಾಗಿದೆ. ನಮ್ಮ ಮ್ಯೂಸಿಯಂ ಸಂಗ್ರಹಕ್ಕಿಂತ ಹೆಚ್ಚಾಗಿ ಶೈಕ್ಷಣಿಕ ಪ್ರವಾಸದಂತೆ ಗೋಚರಿಸುತ್ತದೆ. ಇಲ್ಲಿನ ಪ್ರತಿಯೊಂದು ಕಾರು ಒಂದು ಕಥೆಯನ್ನು ಹೇಳುತ್ತದೆ ಎನ್ನುತ್ತಾರೆ ಪಯಣ ವಸ್ತು ಸಂಗ್ರಹಾಲಯ ವ್ಯವಸ್ಥಾಪಕರು.

ಗಮನ ಸೆಳೆದ ‘ಕ್ಲಬ್ ಕ್ಯಾಂರ್ಸ್‌ :

ಪ್ರದರ್ಶನದಲ್ಲಿ ಕ್ಲಬ್ ಕ್ಯಾಂರ್ಸ್‌ ವಾಹನ ಹೆಚ್ಚು ವೀಕ್ಷಕರ ಗಮನ ಸೆಳೆಯಿತು. ಇದು ಭಾರತದಲ್ಲಿ ಆಧುನಿಕ ಕಾರವಾನ್ ಜೀವನ ಶೈಲಿಗೆ ಹೇಳಿ ಮಾಡಿಸಿದಂತಿರುವ ಕ್ಲಬ್ ಕ್ಯಾಂರ್ಸ್‌ ವಾಹನವಾಗಿದ್ದು, ಪ್ರಯಾಣದಲ್ಲಿ ಹೆಚ್ಚಿನ ಸಾಹಸ ಬಯಸುವವರಿಗೆಂದೇ ವಿನ್ಯಾಸಗೊಳಿಸಲಾಗಿದೆ. ಬೆಟ್ಟಗಳನ್ನು ಅನ್ವೇಷಿಸುವವರಿಗೆ, ಹಿನ್ನೀರಿನಲ್ಲಿ ಸವಾರಿ ಮಾಡುವವರಿಗೆ ಈ ವಾಹನ ಹೆಚ್ಚಿನ ಅನುಕೂಲವಾಗಿದೆ. ಈ ವಾಹನದಲ್ಲಿ ಅಡುಗೆಮನೆ, ಶೌಚಾಲಯ, ಮಲಗುವ ರೂಮ್‌ಗಳು, ಕ್ಯಾಬಿನ್, ಟಿವಿ, ರೇಡಿಯೋ ಸೇರಿದಂತೆ ಹಲವು ವ್ಯವಸ್ಥೆಗಳಿದ್ದು, ಸವಾರರಿಗೆ ಲಕ್ಸುರಿ ಮನೆಯಂಥಹ ಭಾವನೆ ಮೂಡುವಂತೆ ವಿನ್ಯಾಸ ಮಾಡಲಾಗಿದೆ.

ಸಾವಿಗೂ ಸವಾಲೆಸೆಯುವ ಬೈಕ್ ರೈಡಿಂಗ್ :

ಸಾವಿಗೂ ಸವಾಲೆಸೆಯುವ ಸಾಹಸಮಯ ಬೈಕ್ ರೈಡಿಂಗ್ ಪ್ರದರ್ಶನ ನೋಡುಗರನ್ನು ಹೆಚ್ಚು ಆಕರ್ಷಿಸಿತು. 20 ವರ್ಷಗಳ ಅನುಭವ-ಜಾಣ್ಮೆ-ಉಕ್ಕಿನ ಹೃದಯದ ಕಲಿಗಳಿಂದ ನಡೆದ ಈ ಸಾಹಸ ಪ್ರದರ್ಶನವು ಯುವಜನತೆಯನ್ನು ಮನಸೂರೆಗೊಳಿಸಿತು.

ಈ ಪ್ರದರ್ಶನದಲ್ಲಿ ನೂರಾರು ಯುವಕರು, ಯುವತಿಯರು ಭಾಗವಹಿಸಿ ವಿಂಟೇಜ್ ವಾಹನಗಳನ್ನು ಕಂಡು ಹರ್ಷ ವ್ಯಕ್ತಪಡಿಸಿದರು. ಪ್ರತಿಯೊಂದು ಕಾರು, ಬೈಕ್‌ಗಳ ಎದುರು ನಿಂತು ಸೆಲ್ಫೀ ತೆಗೆದುಕೊಳ್ಳುವ ಜೊತೆಗೆ ಅಲ್ಲಿದ್ದ ವ್ಯವಸ್ಥಾಪಕರೊಂದಿಗೆ ಮಾತಿಗಿಳಿದು ವಾಹನಗಳ ಇತಿಹಾಸ ಮುಂದಾಗಿದ್ದು ಕಂಡುಬಂತು.

ಬೈಕ್‌ಗಳ ಸಂಗ್ರಹ ಮಾಡುವುದೆಂದರೆ ಹೆಚ್ಚು ಆಸಕ್ತಿ ನನಗೆ, ಅದರಿಂದಲೇ 2000ನೇ ಇಸವಿಯಿಂದ ಇಲ್ಲಿಯವರೆಗಿನ ಎಲ್ಲ ಮಾದರಿಯ ಬೈಕ್‌ಗಳ ಸಂಗ್ರಹ ಮಾಡಿದ್ದೇನೆ. ಇದುವರೆಗೂ ವಿವಿಧ ರಾಜ್ಯಗಳು ಸೇರಿದಂತೆ 45ಕ್ಕೂ ಹೆಚ್ಚು ಪ್ರದರ್ಶನಗಳಲ್ಲಿ ಭಾಗವಹಿಸಿದ್ದು, ಹಲವು ಪ್ರಶಸ್ತಿಗಳನ್ನು ಪಡೆದಿದ್ದೇನೆ.

-ಡಾ.ಜೆಸ್ವಂತ್ ಥಾಮಸ್, ಬೈಕ್ ಸಂಗ್ರಹಕ, ಬೆಂಗಳೂರು

ಎರಡು ಕಾರಿನಿಂದ 250 ಕಾರುಗಳವರೆಗೆ ಧರ್ಮಸ್ಥಳದಲ್ಲಿ ಎರಡು ವಿಂಟೇಜ್ ಕಾರುಗಳಿಂದ ಆರಂಭವಾದ ‘ಪಯಣ’ ವಸ್ತುಸಂಗ್ರಹಾಲಯವು, ಇಂದು 250ಕ್ಕೂ ಹೆಚ್ಚಿನ ಕಾರುಗಳನ್ನು ಹೊಂದುವ ಮೂಲಕ ಪುನರ್ ಸ್ಥಾಪಿಸಲ್ಪಟ್ಟ ಕಾರುಗಳ ವಿಶಾಲವಾದ ವಸ್ತು ಸಂಗ್ರಹಾಲಯವಾಗಿ ವಿಕಸನಗೊಂಡಿದೆ. ‘ಪಯಣ’ವು ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳದಲ್ಲಿರುವ ಮಂಜುಷಾ ಮ್ಯೂಸಿಯಂನ ವಿಸ್ತರಣೆಯಾಗಿದೆ. ಸ್ಟಾಂಡರ್ಡ್ 2000, ಕಾಂಟೆಸ್ಸಾ, ಅಂಬಾಸಿಡರ್, ಮಾರುತಿ ಝೆನ್, ಫಿಯೆಟ್ ಪಾಲಿಯೋ, ರೀವಾ, ಮಟಿಜ್, ಡಾಲ್ಫಿನ್, ಮಾರಿಸ್ ಮೊದಲಾದ ಕಾರುಗಳು ನಮ್ಮ ಸಂಗ್ರಹದಲ್ಲಿವೆ ಎನ್ನುತ್ತಾರೆ ಪಯಣದ ವ್ಯವಸ್ಥಾಪಕ ವಿವೇಕ್.

Tags

vehicles
share
ಯೋಗೇಶ್ ಮಲ್ಲೂರು
ಯೋಗೇಶ್ ಮಲ್ಲೂರು
Next Story
X