Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. 2024ರ ಅಮೆರಿಕ ಅಧ್ಯಕ್ಷೀಯ ಚುನಾವಣೆಯ...

2024ರ ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಜಾಗತಿಕ ಪರಿಣಾಮಗಳು

ಡಾ.ಅಮರ್ ಕುಮಾರ್ಡಾ.ಅಮರ್ ಕುಮಾರ್ಡಾ. ಪದ್ಮಶ್ರೀ ಟಿ.ಡಾ. ಪದ್ಮಶ್ರೀ ಟಿ.5 Nov 2024 10:26 AM IST
share
2024ರ ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಜಾಗತಿಕ ಪರಿಣಾಮಗಳು
ಅಮೆರಿಕ ಒಂದೇ ಜಗತ್ತಿನ ಶಕ್ತಿಶಾಲಿ ರಾಷ್ಟ್ರವಾಗಿರುವುದು ಉತ್ತಮ ಬೆಳವಣಿಗೆಯಲ್ಲ. ಅದರ ಪ್ರಾಬಲ್ಯವು ಅಳಿಯಬೇಕು. ಜಾಗತಿಕವಾಗಿ ಶಾಂತಿ, ಸೌಹಾರ್ದ, ಪ್ರೀತಿ ಮತ್ತು ಭ್ರಾತೃತ್ವ ನೆಲೆಸಬೇಕು. ಅಮೆರಿಕದ ಮಾದರಿಯನ್ನು ಎಂದಿಗೂ ಒಪ್ಪುವಂತಹದ್ದಲ್ಲ. ಬಹುಸಂಖ್ಯಾತ ವರ್ಗವನ್ನು ತುಳಿದು, ಬಂಡವಾಳಿಗರನ್ನು ಪೋಷಿಸುವುದು ಸುಸ್ಥಿರವಾದ ಅಭಿವೃದ್ಧಿಯ ಮಾದರಿಯಲ್ಲ. ಶಸ್ತ್ರಾಸ್ತ್ರಗಳ ವ್ಯಾಪಾರ, ಲಾಭ ಮತ್ತು ಯುದ್ಧಗಳ ಮುಖೇನ ನಿಯಂತ್ರಿಸುವ ಮಾದರಿಯನ್ನು ಎಂದಿಗೂ ಮಾನ್ಯಮಾಡಬಾರದು.

ಅಮೆರಿಕದ ಪ್ರಸಕ್ತ ಪರಿಸ್ಥಿತಿ

ಅಮೆರಿಕದ ರಾಜಕೀಯ ಪರಿಸ್ಥಿತಿ ಕಳೆದ ಐವತ್ತು ವರ್ಷಗಳಲ್ಲಿ ಬಹಳಷ್ಟು ಬದಲಾಗಿದೆ. ಅಂದರೆ ಹಲವಾರು ಬಿಕ್ಕಟ್ಟುಗಳಿಂದ ಸುತ್ತುವರಿದಿದೆ. ಈ ಬಿಕ್ಕಟ್ಟಿನ ಪರಿಸ್ಥಿತಿ ನಿರ್ಮಾಣವಾಗಲು ಬಹಳಷ್ಟು ಕಾರಣಗಳಿವೆ ಮತ್ತು ಒಂದೆರಡು ವರ್ಷದಲ್ಲಿ ಅದು ಸಂಭವಿಸಿದ್ದೂ ಅಲ್ಲ. ಬಂಡವಾಳಶಾಹಿ ವ್ಯವಸ್ಥೆ, ಜಾತೀಕರಣ, ನವಉದಾರವಾದಿ ನೀತಿಗಳಿಂದ ಅಮೆರಿಕದ ನಾಗರಿಕರಲ್ಲಿ ಅಸಹನೆ, ಅಸಹಿಷ್ಣುತೆ, ಅಸಮಾಧಾನ ಉಂಟಾಗಿದೆ. ದ್ವೇಷದ ಭಾಷಣಗಳು, ಜನಾಂಗೀಯವಾದ, ಕೋಮುರಾಜಕಾರಣ ಹೆಚ್ಚಾದ ಹಿನ್ನೆಲೆಯಲ್ಲಿ ಅಮೆರಿಕ ವಿದ್ಯಾಂಸರು ದೇಶದಲ್ಲಿ ಮಂದಗತಿಯ ನಾಗರಿಕ ಸಮರವೊಂದು ಜಾರಿಯಲ್ಲಿದೆ ಎಂದು ಆತಂಕಿತರಾಗಿದ್ದಾರೆ.

1861-1865ರಲ್ಲಿ ಅಮೆರಿಕವು ನಾಗರಿಕ ಯುದ್ಧವೊಂದಕ್ಕೆ ಸಾಕ್ಷಿಯಾಯಿತು. ಕಾರಣ ಗುಲಾಮಿ ಪದ್ಧತಿ. ಈ ಪದ್ಧತಿಯ ವಿರುದ್ಧ ಮತ್ತು ಪರವಾಗಿದ್ದ ವರ್ಗಗಳ ನಡುವೆ ಈ ಸಮರ ಏರ್ಪಟ್ಟು 7ಲಕ್ಷಕ್ಕಿಂತ ಅಧಿಕ ಸಂಖ್ಯೆಯಲ್ಲಿ ನಾಗರಿಕರು ಮರಣವನ್ನಪ್ಪಿದರು. ಕಪ್ಪು ಜನರನ್ನು ಆಫ್ರಿಕಾದಿಂದ ಸೆರೆಹಿಡಿದು, ಗುಲಾಮರನ್ನಾಗಿ ಮಾರಾಟಮಾಡಿ ದೇಶಕ್ಕಾಗಿ ದುಡಿಸಿಕೊಂಡಿದ್ದಾರೆ. ದುಡಿಮೆಯ ತೀವ್ರತೆಯು ಅವರನ್ನು 10 ವರ್ಷಗಳಿಗಿಂತ ಹೆಚ್ಚುಕಾಲ ಜೀವಂತವಾಗಿಡಲಿಲ್ಲ. ಹೀಗೆ ಸೆರೆಹಿಡಿದ ಗುಲಾಮರ ಸಂಖ್ಯೆ ಸುಮಾರು 1 ಕೋಟಿ, 20 ಲಕ್ಷ. ಈ ಪದ್ಧತಿಯ ರದ್ದತಿಗಾಗಿ ನಡೆದ ಯುದ್ಧದ ಮಾದರಿಯಲ್ಲಿಯೇ ಸಮರವೊಂದು ಸದ್ಯ ಜಾರಿಯಲ್ಲಿದ್ದು ಚಲನೆಯ ವೇಗ ಕಡಿಮೆಯಿದೆ.

ಅಮೆರಿಕದ ಆಳುವ ವ್ಯವಸ್ಥೆ ತನ್ನ ನಿಯಂತ್ರಣಕ್ಕೆ ಸಿಗದ ದೇಶಗಳ ಮೇಲೆ ಯುದ್ಧವನ್ನು ಸಾರುವುದು, ಯುದ್ಧಕ್ಕೆ ಕುಮ್ಮಕ್ಕು ನೀಡುವುದು, ವಂಚಿಸುವುದು, ಹಣವನ್ನು ಮುನ್ನೆಲೆಗೆ ತರುವುದು ಹಾಗೂ ಕೆಲವರಲ್ಲಿ ಮಾತ್ರವೇ ಸಂಪತ್ತಿನ ಕ್ರೋಡೀಕರಣ ಹೆಚ್ಚಾಗಿ ಸಂಪತ್ತಿನ ಅಸಮಾನತೆ ಉಂಟಾಗಿದೆ. ಅಮೆರಿಕದ ಒಟ್ಟು ಜನಸಂಖ್ಯೆ 35 ಕೋಟಿ, ಆದರೆ 17 ಕೋಟಿ ಜನರಲ್ಲಿರುವಷ್ಟು ಸಂಪತ್ತು ಕೇವಲ ಮೂರು ಜನರ ಕೈಯಲ್ಲಿದೆ.

ಅತಿಯಾದ ಮಾದಕ ವಸ್ತುಗಳ ಸೇವನೆಯಿಂದ ಕಳೆದ 10 ವರ್ಷಗಳಲ್ಲಿ 5ಲಕ್ಷ ಜನ ಸಾವನ್ನಪ್ಪಿದ್ದಾರೆ. ಜಗತ್ತಿನ ಶೇ. 80 ಮಾದಕ ವಸ್ತುಗಳ ಬಳಕೆ ಅಮೆರಿಕದಲ್ಲಿಯೇ ಆಗುತ್ತದೆ. ಅಪರಾಧಗಳು ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಿದ್ದು, ವಾರ್ಷಿಕವಾಗಿ 45,000 ಜನ ಬಂದೂಕಿನ ಗುಂಡಿನಿಂದ ಸಾಯುತ್ತಿದ್ದಾರೆ. ಈ ದೇಶದಲ್ಲಿ ಜನರ ಸಂಖ್ಯೆಗಿಂತ ಬಂದೂಕಿನ ಸಂಖ್ಯೆಯೇ ಹೆಚ್ಚು ಮತ್ತು ದೊಡ್ಡದ್ದಾಗಿ ಸದ್ದು ಮಾಡುತ್ತಿವೆ. ಅಪರಾಧಗಳು ಸಾಂಕ್ರಾಮಿಕದಂತೆ ಬೆಳೆಯುತ್ತಲೇ ಇವೆ.

ಪ್ರಸಕ್ತ ಅಮೆರಿಕದ ರಾಜಕೀಯ

ಅಮೆರಿಕದ ರಾಜಕೀಯ ವ್ಯವಸ್ಥೆಯಲ್ಲಿ ಬಹುಪಕ್ಷ ಪದ್ಧತಿ ಅಸ್ತಿತ್ವದಲ್ಲಿದ್ದರೂ, ಪ್ರಬಲವಾಗಿ ಚುನಾವಣೆಗಳಲ್ಲಿ ಸ್ಫರ್ಧಿಸುತ್ತಿರುವುದು ಎರಡು ಪಕ್ಷಗಳು ಮಾತ್ರ. ಒಂದು ಡೆಮಾಕ್ರಟಿಕ್ ಪಕ್ಷ ಮತ್ತೊಂದು ರಿಪಬ್ಲಿಕನ್ ಪಕ್ಷ. ಇತರ ಯಾವುದೇ ಪಕ್ಷಗಳು ಮುನ್ನೆಲೆಗೆ ಬಾರದಂತೆ ಕಾನೂನಿನ ಅಸ್ತ್ರ ಬಳಸಿ ಈ ಎರಡು ಪಕ್ಷಗಳು ನಿಯಂತ್ರಿಸಿವೆ. ಕಮಲಾ ಹ್ಯಾರಿಸ್ ಡೆಮಾಕ್ರಟಿಕ್ ಪಕ್ಷದ ಮತ್ತು ಡೊನಾಲ್ಡ್ ಟ್ರಂಪ್ ರಿಪಬ್ಲಿಕನ್ ಪಕ್ಷದ 2024ರ ಚುನಾವಣೆಯ ಅಧ್ಯಕ್ಷೀಯ ಆಕಾಂಕ್ಷಿಗಳು. ಟ್ರಂಪ್ ರಿಪಬ್ಲಿಕನ್ ಪಕ್ಷದ ಹಳೆಯ ಮೌಲ್ಯಗಳನ್ನು ನಾಶಮಾಡಿ ತನ್ನದೇ ಹೊಸ ರಿಪಬ್ಲಿಕ್ ಪಕ್ಷವನ್ನು ಸ್ಥಾಪಿಸಿಕೊಂಡಿದ್ದಾರೆ. ಸ್ವಾರ್ಥಸಾಧನೆಯೇ ಆತನ ಮುಖ್ಯಗುರಿ. ಅಮೆರಿಕದ ರಾಜಕೀಯ ಪರಿಸ್ಥಿತಿಯಲ್ಲಿ ಆತನ ಗೆಲುವಿನ ಸಂಭವವಿದೆ. ಟ್ರಂಪ್‌ನ ಸೋಲು ಗಲಭೆಯನ್ನು ಹುಟ್ಟುಹಾಕುತ್ತದೆ. ಆತ ಸೋಲನ್ನು ಒಪ್ಪದೆ ಅದರ ಸೇಡಿಗಾಗಿ ಗಲಭೆಗಳನ್ನು ಸೃಷ್ಟಿಸಬಲ್ಲರು. ಅಮೆರಿಕವನ್ನು 50/50 ದೇಶವೆಂದು ಹೇಳಲಾಗುತ್ತದೆ. ಶೇ. 50ರಷ್ಟು ಜನಸಂಖ್ಯೆ ಟ್ರಂಪ್‌ನ ಬೆಂಬಲಿಗರು, ಉಳಿದ ಶೇ. 50ರಷ್ಟು ಜನ ಆತನನ್ನು ಬೆಂಬಲಿಸದವರು. ಹೀಗೆ ದೇಶ ಸ್ವಷ್ಟವಾಗಿ ವಿಘಟನೆಗೊಂಡಿದೆ.

ಟ್ರಂಪ್ ಬೆಂಗಲಿಗರು ಯಾರು?

ಅಮೆರಿಕದ ಹಳ್ಳಿಗಳಲ್ಲಿ ವಾಸವಿರುವವರು, ಕಾಲೇಜು ಶಿಕ್ಷಣವನ್ನು ಪಡೆಯದೇ ಇರುವವರು, ಕ್ರಿಶ್ಚಿಯನ್ ಧರ್ಮವನ್ನು ಕಟುವಾಗಿ ಒಪ್ಪುವವರು, ಕಾರ್ಮಿಕರು, ಪುರುಷರು ಮುಖ್ಯವಾಗಿ ಬಿಳಿಯರು ಮತ್ತು ದಿನನಿತ್ಯದ ಬದುಕು ದುಸ್ಥರದಲ್ಲಿರುವ ಬಹುಸಂಖ್ಯಾತ ವರ್ಗ ಟ್ರಂಪ್‌ನ ಬೆಂಬಲಿಗರು.

ಇನ್ನು ಕಾಲೇಜು ಶಿಕ್ಷಣ ಪಡೆದವರು, ಉತ್ತಮ ಜೀವನ ನಡೆಸುತ್ತಿರುವವರು, ಕರಾವಳಿ ಪ್ರದೇಶದಲ್ಲಿ ವಾಸಿಸುವ ಕೋಸ್ಟಲ್ ಎಲೈಟ್ ಅಂದರೆ ಕರಾವಳಿ ಗಣ್ಯವರ್ಗ ಟ್ರಂಪ್‌ನ ತಿಕ್ಕಲುತನವನ್ನು ಒಪ್ಪದವರು ಮತ್ತು ಡೆಮಾಕ್ರಟಿಕ್ ಪಕ್ಷದ ಬೆಂಬಲಿಗರು. ಕೋಸ್ಟಲ್ ಎಲೈಟ್ ವರ್ಗವು ನ್ಯೂಯಾರ್ಕ್, ನ್ಯೂಜರ್ಸಿ, ಸ್ಯಾನ್‌ಪ್ರಾನ್ಸಿಸ್ಕೊ, ಲಾಸ್‌ಏಂಜೆಲಿಸ್, ವಾಶಿಂಗ್‌ಟನ್‌ನ ಕರಾವಳಿಯಲ್ಲಿದ್ದಾರೆ. ಹೀಗೆ ಅಮೆರಿಕ ದೇಶ ಇತಿಹಾಸದಲ್ಲೇ ಕಂಡರಿಯದ ವಿಘಟನೆ ಈ ಎರಡು ವರ್ಗಗಳಲ್ಲಾಗಿದೆ.

ಅಧ್ಯಕ್ಷೀಯ ಚುನಾವಣೆಯಲ್ಲಿ ಪ್ರಭಾವ ಬೀರುವ ಅಂಶಗಳು

ನಿರುದ್ಯೋಗ: ನಿರುದ್ಯೋಗ ದೇಶದ ಬಹುದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಉದ್ಯೋಗಗಳಿದ್ದರೂ ಉತ್ತಮ ಜೀವನವನ್ನು ನಡೆಸಲು ಅದು ಸಹಕಾರಿಯಾಗುತ್ತಿಲ್ಲ. ಜಾಗತೀಕರಣದ ಸಂದರ್ಭದಲ್ಲಿ ಹೊರಗುತ್ತಿಗೆ ಪ್ರಾರಂಭವಾಗಿ ಉದ್ಯೋಗಗಳೆಲ್ಲ ಚೀನಾ, ಮೆಕ್ಸಿಕೊ ಪಾಲಾಗಿ ಉದ್ಯೋಗ ನಷ್ಟ ಸಂಭವಿಸಿತು.

ಯುದ್ಧ: ಅಮೆರಿಕ ಪ್ರೇರಿತ ಯುದ್ಧಗಳು ಜಗತ್ತಿನ ಅನೇಕ ರಾಷ್ಟ್ರಗಳಲ್ಲಿ ನಡೆಯುತ್ತಿದೆ. ಉಕ್ರೇನ್, ಇಸ್ರೇಲ್, ಮಧ್ಯಪ್ರಾಚ್ಯ ದೇಶಗಳಲ್ಲಿ ಯುದ್ಧವನ್ನು ಬೆಂಬಲಿಸಿ ಹಣ, ಸೈನ್ಯ, ಶಸ್ತ್ರಾಸ್ತ್ರಗಳ ನೆರವು ನೀಡುತ್ತಿರುವುದರಿಂದ ಅಮೆರಿಕದ ಬಹುಸಂಖ್ಯಾತ ವರ್ಗ ಬೇಸತ್ತಿದೆ. ಅಮೆರಿಕ 2,000 ಪೌಂಡ್ಸ್ ಬಾಂಬ್‌ಗಳನ್ನು ಇಸ್ರೇಲ್‌ಗೆ ನೀಡಿ ಮಾನವರ ಹತ್ಯಾಕಾಂಡವನ್ನು ಉತ್ತೇಜಿಸಿದೆ. ಅಮೆರಿಕದ ಬೆಂಬಲವಿಲ್ಲದಿದ್ದರೆ ಇಸ್ರೇಲ್‌ಗೆ ಈ ಮಾರಣ ಹೋಮ ಸಾಧ್ಯವಾಗುತ್ತಿರಲಿಲ್ಲ. ಅಮೆರಿಕ ಸರಕಾರದ ಬಳಿ ಜನರ ಜೀವನಮಟ್ಟ ಸುಧಾರಿಸಲು ಹಣವಿಲ್ಲ. ಆದರೆ ಯುದ್ಧವನ್ನು ಬೆಂಬಲಿಸುವುದಕ್ಕೆ ಹಣವಿದೆ. ಇದು ರಾಜಕೀಯ ಅಸ್ಥಿರತೆಗೆ ಕಾರಣವಾಗಿದೆ.

ಶಿಕ್ಷಣ: ಅಮೆರಿಕದಲ್ಲಿ ಅತ್ಯುತ್ತಮ ವಿಶ್ವವಿದ್ಯಾನಿಲಯಗಳಿವೆ. ಆದರೆ ಶಾಲಾ-ಕಾಲೇಜಿನ ಶಿಕ್ಷಣವು ತನ್ನ ಗುಣಮಟ್ಟವನ್ನು ಕಳೆದುಕೊಂಡಿದೆ. ಯಾವ ಸ್ಥಳಗಳಲ್ಲಿ ತೆರಿಗೆ ಸಂಗ್ರಹವು ಉತ್ತಮ ಸ್ಥಿತಿಯಲ್ಲಿದೆಯೋ ಅಲ್ಲಿ ಸರಕಾರಿ ಶಿಕ್ಷಣವು ಸುಧಾರಿತ ಮಟ್ಟದಲ್ಲಿದೆ. ತೆರಿಗೆ ಹಣ ಸಂಗ್ರಣೆ ಉತ್ತಮವಾಗಿಲ್ಲದ ಸ್ಥಳಗಳಲ್ಲಿನ ಸಾರ್ವಜನಿಕ ಶಿಕ್ಷಣ ಕುಂಠಿತವಾಗಿದೆ. ಅಮೆರಿಕದಂತಹ ದೇಶದಲ್ಲಿ ಮಕ್ಕಳ ವಿದ್ಯಾಭ್ಯಾಸ ಸೂಕ್ತ ಮಾದರಿಯಲ್ಲಿ ಇಲ್ಲದಿರುವುದು ದುರಂತವೇ ಸರಿ.

ಬಂದಿಖಾನೆಗಳು: ಅಮೆರಿಕದ ಜೈಲಿನಲ್ಲಿ 23 ಲಕ್ಷ ಜನ ಕೊಳೆಯುತ್ತಿದ್ದಾರೆ. ಭಾರತದ ಜನಸಂಖ್ಯೆ ಅಮೆರಿಕಗಿಂತ 4 ಪಟ್ಟು ಹೆಚ್ಚಿದ್ದರೂ ಕೈದಿಗಳ ಸಂಖ್ಯೆ 4 ಲಕ್ಷಗಳು ಮಾತ್ರ. ಅಮೆರಿಕದ ಜೈಲುಗಳಲ್ಲಿ ಕಪ್ಪುಪುರುಷರು, ಬಡವರು ಮತ್ತು ಯುವಕರೇ ತುಂಬಿದ್ದಾರೆ. ಜಗತ್ತಿನ ಯಾವ ದೇಶದ ಜೈಲುಗಳಲ್ಲಿಯೂ ಇಷ್ಟೊಂದು ಸಂಖ್ಯೆಯಲ್ಲಿ ಕೈದಿಗಳಿಲ್ಲ.

ನಿರಂಕುಶಾಧಿಕಾರ: ಅಮೆರಿಕದ ಆಳುವ ಸರಕಾರಗಳು ನೀತಿಗಳನ್ನು ರೂಪಿಸುವುದು, ಅದನ್ನು ಮುರಿಯುವುದು, ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳುವುದನ್ನು ತಾನೇ ಸಲೀಸಾಗಿ ಮಾಡುತ್ತಾ ಬಂದಿದೆ. ಉದಾ: ಅಮೆರಿಕದಲ್ಲಿ leahy law ಜಾರಿಲ್ಲಿದೆ. ಇದರರ್ಥ ಎಲ್ಲಿ ಮಾನವಹಕ್ಕುಗಳ ಉಲ್ಲಂಘನೆಯಾಗುತ್ತದೆಯೋ ಅಲ್ಲಿ ಸೈನ್ಯ ಮತ್ತು ಶಸ್ತ್ರಾಸ್ತ್ರಗಳ ನೆರವು ನೀಡಬಾರದು ಎಂದು. ಆದರೆ ಫೆಲೆಸ್ತೀನ್, ಗಾಝಾದಲ್ಲಿ ಇಸ್ರೇಲ್ ಮೂಲಭೂತ ಹಕ್ಕುಗಳನ್ನು ದಹಿಸುತ್ತಿದೆ. ಆದರೂ ಅವರಿಗೆ ಸೈನ್ಯ, ಧನ ಸಹಕಾರ ನೀಡಿ ತಾವು ಮಾಡಿದ್ದೇ ಸರಿ ಎನ್ನುವ ಅಹಂಕಾರದ ಧೋರಣೆ ಅಮೆರಿಕದ ಆಳುವ ಸರಕಾರಗಳದ್ದು. ಇದೇ ಆಳುವ ವ್ಯವಸ್ಥೆ ವಿಯೆಟ್ನಾಂನಲ್ಲಿ 20 ಲಕ್ಷ ಜನರನ್ನು ಕೊಂದಿದೆ. ಇರಾಕ್ ಯುದ್ಧ, ದಕ್ಷಿಣ ಅಮೆರಿಕದಲ್ಲಿ ಸರಕಾರಗಳನ್ನು ಉರುಳಿಸಿರುವುದು, ಚೀನಾವನ್ನು ಕಂಡರೆ ದ್ವೇಷ ಇವಕ್ಕೆಲ್ಲ ಮೂಲಭೂತ ಕಾರಣ ಜಗತ್ತನ್ನು ತನ್ನ ನಿಯಂತ್ರಣಕ್ಕೆ ಒಳಪಡಿಸಿಕೊಂಡು ಸಂಪತ್ತನ್ನು ಕೊಳ್ಳೆ ಹೊಡೆದು ಲಾಭ ಮಾಡುವ ಹಪಾಹಪಿತನ.

ಅಧ್ಯಕ್ಷೀಯ ಚುನಾವಣೆ ಪ್ರಕ್ರಿಯೆ

ಅಮೆರಿಕದಲ್ಲಿ ನೇರ ಚುನಾವಣಾ ಪದ್ಧತಿ ಜಾರಿಯಲ್ಲಿದ್ದು, ಆಯ್ಕೆಯಾದ ಅಧ್ಯಕ್ಷನು ರಾಷ್ಟ್ರದ ಮುಖ್ಯಸ್ಥನಾಗುತ್ತಾನೆ. ಪ್ರತಿಯೊಂದು ರಾಜ್ಯವೂ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸುತ್ತವೆ. ಇವುಗಳನ್ನು ಇಲೆಕ್ಟ್ರೋಲ್ ಕಾಲೇಜುಗಳೆಂದು ಕರೆಯಲಾಗುತ್ತವೆ. ಇವುಗಳ ಸಂಖ್ಯೆ ಒಟ್ಟು 538. ಪ್ರತೀ ರಾಜ್ಯದಲ್ಲೂ ಇಂತಿಷ್ಟು ಇಲೆಕ್ಟ್ರೋಲ್ ಕಾಲೇಜುಗಳಿರುತ್ತವೆ. ಅತಿಹೆಚ್ಚು ಕ್ಯಾಲಿಫೋರ್ನಿಯ ಮತ್ತು ನಂತರದ ಸ್ಥಾನ ಟೆಕ್ಸಾಸ್‌ನದ್ದು. ಅಧ್ಯಕ್ಷೀಯ ಚುನಾವಣೆಯಲ್ಲಿ ಇವುಗಳ ಪಾತ್ರ ಮಹತ್ವವಾದದ್ದು. ಅಮೆರಿಕವು 1776ರಲ್ಲಿ ಸ್ವಾತಂತ್ರ್ಯವನ್ನು ಪಡೆಯಿತು. 1789ರಲ್ಲಿ ಸಂವಿಧಾನದ ರಚನೆಯ ಸಂದರ್ಭದಲ್ಲಿ ಜನರನ್ನು ನಂಬಲು ಸಾಧ್ಯವಿಲ್ಲವೆಂದು ಇಲೆಕ್ಟ್ರೋಲ್ ಕಾಲೇಜುಗಳನ್ನು ಸೃಷ್ಟಿಸಲಾಯಿತು. ಜನರ ಪ್ರತಿನಿಧಿಗಳು ಅಧ್ಯಕ್ಷರ ಚುನಾವಣೆಯಲ್ಲಿ ಮತಚಲಾಯಿಸುವ ಗುಂಪನ್ನು ಇಲೆಕ್ಟ್ರೋಲ್ ಕಾಲೇಜುಗಳೆನ್ನಲಾಗುತ್ತದೆ.

ಈ ಬಾರಿಯ ಚುನಾವಣೆಯಲ್ಲಿ ನಿರ್ಣಾಯಕವೆಂದು 7 ರಾಜ್ಯಗಳನ್ನು ಗುರುತಿಸಲಾಗಿದ್ದು, ಇವುಗಳನ್ನು Battleground state ಎಂದು ಕರೆಯಲಾಗುತ್ತದೆ. ಆರಿರೆನ, ಪೆನ್ಸಿಲ್ವೇನಿಯ, ಮಿಷಿಗನ್, ನೆವಾಡಾ, ಜಾರ್ಜಿಯ, ವಿಸ್ಕೊನ್‌ಸಿನ್ ಮತ್ತು ನಾರ್ತ್‌ಕೆರೊಲಿನ ಇವೇ ಆ ಏಳು ರಾಜ್ಯಗಳು. ಈ ಏಳು ರಾಜ್ಯಗಳಲ್ಲಿ ಯಾರು ಗೆಲುವು ಸಾಧಿಸುತ್ತಾರೋ ಅವರೇ ಅಧ್ಯಕ್ಷರಾಗುತ್ತಾರೆ. ಪ್ರತೀ ಚುನಾವಣೆಯಲ್ಲಿ Battleground stateಗಳ ಸಂಖ್ಯೆಯಲ್ಲಿ, ರಾಜ್ಯಗಳಲ್ಲಿ ವ್ಯತ್ಯಾಸಗಳಾಗುತ್ತದೆ. ಅಮೆರಿಕದ ಚುನಾವಣಾ ಪದ್ಧತಿಯಲ್ಲಿ ಅತಿಹೆಚ್ಚು ಮತಗಳಿಸುವುದು ಮುಖ್ಯವಲ್ಲ. ಬದಲಿಗೆ ಇಲೆಕ್ಟ್ರೋಲ್ ಕಾಲೇಜುಗಳ ಮತಗಳನ್ನು ಗಳಿಸುವುದು ಮುಖ್ಯ. 270 ಇಲೆಕ್ಟ್ರೋಲ್ ಕಾಲೇಜುಗಳ ಮತನ್ನು ಗಳಿಸಿದವರು ಗೆಲುವು ಸಾಧಿಸುತ್ತಾರೆ. ಉದಾ: 2000ದಲ್ಲಿ ಆ್ಯಲ್‌ಗೋರ್‌ಗೆ ಬುಷ್‌ಗಿಂತ ಹೆಚ್ಚು ಮತ ಬಂದವು. ಆದರೆ ಸರ್ವೋಚ್ಚ ನ್ಯಾಯಾಲಯವು ಬುಷ್‌ರನ್ನು ಅಧ್ಯಕ್ಷನೆಂದು ಘೋಷಿಸಿತು. 2016ರಲ್ಲಿ ಹಿಲರಿ ಕ್ಲಿಂಟನ್‌ಗೆ ಟ್ರಂಪ್‌ಗಿಂತ ಹೆಚ್ಚಿನ ಮತಗಳು ಬಂದರೂ ಕೂಡ ಟ್ರಂಪ್ ಅಧ್ಯಕ್ಷರಾದರು.

ಅಧ್ಯಕ್ಷೀಯ ಆಕಾಂಕ್ಷಿಯಾಗಿ ಕಮಲಾ ಹ್ಯಾರಿಸ್:

ಡೆಮಾಕ್ರಟಿಕ್ ಪಕ್ಷವೂ ಕೂಡ ಸ್ವಾರ್ಥ, ಯುದ್ಧಪ್ರೀತಿಯನ್ನೇ ತುಂಬಿಕೊಂಡಿದೆ. ಕರಾವಳಿ ಗಣ್ಯವರ್ಗ ಈ ಪಕ್ಷದ ಬೆಂಬಲಿಗರು. ಡೆಮಾಕ್ರಟಿಕ್ ಪಕ್ಷದ 81 ವರ್ಷದ ಬೈಡನ್ ವಯೋಸಹಜ ತೊಂದರೆಗಳಿಂದ ರಾಜಕೀಯ ಕ್ಷೇತ್ರದಿಂದ ಹಿಂದೆಸರಿದರು. ಬೈಡನ್ ನಂತರ ಕಮಲಾ ನೇರವಾಗಿ ನೇಮಕಗೊಂಡರು. ಗುರುತರವಾದ, ನೆನಪಿಡುವಂತಹ ದೇಶದ ಜನತೆಯ ಹಿತದೃಷ್ಟಿಯಿಂದ ಯಾವುದೇ ಕೆಲಸ ಮಾಡದೆ ಏಕಾಏಕಿ ಆಯ್ಕೆಯಾಗಿ ಸ್ಥಾನ ಪಡೆದುಕೊಂಡ ಹಿನ್ನೆಲೆಯಲ್ಲಿ ಅನರ್ಹತೆಯ ಕೂಗೊಂದು ಎದ್ದಿದೆ. ಪ್ರಾರಂಭದಲ್ಲಿ ಕಮಲಾರ ವರ್ಚಸ್ಸು ಪ್ರವರ್ಧಮಾನದಲ್ಲಿದ್ದರೂ, ನಂತರದಲ್ಲಿ ಕ್ಷೀಣಿಸಿತು. ಅದಕ್ಕೆ ಹಲವು ಕಾರಣಗಳಿವೆ.

ಮೊದಲಿನದು, ಕಮಲಾ ಟ್ರಂಪ್‌ರನ್ನು ಬೈಯುವುದರಲ್ಲಿ ಕಾಲ ಕಳೆದರೇ ಹೊರತು, ತನ್ನ ರಾಜಕೀಯ ಅಜೆಂಡಾ, ಕಾರ್ಯಯೋಜನೆ, ನೀತಿನಿರೂಪಣೆಗಳ ಬಗ್ಗೆ ಚುನಾವಣಾ ಪ್ರಚಾರದಲ್ಲಿ ಎಲ್ಲಿಯೂ ಹೇಳದಿರುವುದು.

ಎರಡನೆಯದು, 2019ರ ಚುನಾವಣೆಯ ಪ್ರಚಾರದಲ್ಲಿ ನೀಡಿದ ಆಶ್ವಾಸನೆಗಳಿಗೂ, ಕಾರ್ಯಕ್ರಮಗಳಿಗೂ 2024ರಲ್ಲಿ ಹೇಳುತ್ತಿರುವುದಕ್ಕೂ ಸಂಬಂಧವೇ ಇಲ್ಲ. ಇದಕ್ಕೆ ಕಾರಣ ಕೇಳಿದರೆ ಆಕೆಯ ಬಳಿ ಉತ್ತರವಿಲ್ಲ. ವೃತ್ತಿಯಲ್ಲಿ ವಕೀಲರೂ, ಅಟಾರ್ನಿ ಜನರ್ ಆಗಿದ್ದ ಕಮಲಾ ಪ್ರಶ್ನಿಸುವುದನ್ನು ಚೆನ್ನಾಗಿ ಕಲಿತಿದ್ದಾರೆಯೇ ಹೊರತು ಉತ್ತರಿಸುವುದನ್ನಲ್ಲ.

ಮೂರನೆಯದು, ಅಮೆರಿಕ ವ್ಯವಸ್ಥೆಯಲ್ಲಿ ಮಹಿಳೆಯನ್ನು ಅದರಲ್ಲೂ ಭಾರತೀಯ ಮೂಲದ ಕಪ್ಪು ಮಹಿಳೆಯನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡುವುದು ಕಷ್ಟ.

ಕಮಲಾ ಹ್ಯಾರಿಸ್ ತಮ್ಮ ರಾಜಕೀಯ, ಸಾಮಾಜಿಕ, ಆರ್ಥಿಕ ನಿಲುವುಗಳ ಬಗ್ಗೆ ಸ್ಪಷ್ಟವಾಗಿ ಎಲ್ಲಿಯೂ ಪ್ರಸ್ತಾಪಿಸದಿರುವುದು. ಇಷ್ಟೆಲ್ಲದರ ನಡುವೆಯೂ ಅವರ ಗೆಲುವನ್ನು ನಿರಾಕರಿಸಲಾಗದು, ಆದರೆ ದಾರಿ ಕಠಿಣ.

ಟ್ರಂಪ್ ಸಂಭವನೀಯ ಗೆಲುವಿಗೆ ಕಾರಣಗಳು

2016ರಲ್ಲಿ ಟ್ರಂಪ್ ತಿಕ್ಕಲುತನವನ್ನು ಅಮೆರಿಕನ್ನರು ಮಾತ್ರವಲ್ಲ ಜಗತ್ತೇ ಕಂಡಿದೆ. ಇವರ ಅವಿವೇಕದಿಂದಾಗಿ ಕೋವಿಡ್‌ನಲ್ಲಿ 10 ಲಕ್ಷ ಜನ ಪ್ರಾಣ ಕಳೆದುಕೊಂಡಿದ್ದಾರೆ. ಆದರೆ ಜನರು ಹಿಂದಿನದ್ದನ್ನು ಪರಿಗಣಿಸುತ್ತಿಲ್ಲ. ಟ್ರಂಪ್ ಗೆಲುವಿಗೆ ಮುಂದಿನವು ಕಾರಣವಾಗಬಹುದು

ಮೊದಲಿನದು, ಯುದ್ಧವಿರೋಧಿ ನೀತಿ: ಆತನಿಗಿರುವ ತಿಕ್ಕಲುತನ, ಜನಾಂಗೀಯವಾದ, ಬಂಡವಾಳಶಾಹಿ ಏನೇ ಆಗಿದ್ದರೂ, ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಆತ ವ್ಯಕ್ತಪಡಿಸಿದ ಯುದ್ಧ ವಿರೋಧಿ ನೀತಿ ಮತ್ತು ಬೇರೆ ದೇಶಗಳ ಮೇಲೆ ನಿಯಂತ್ರಣದ ಬದಲಿಗೆ ‘ನಮ್ಮನ್ನು ನಾವು ಆಳಿಕೊಳ್ಳಬೇಕು’ ಎನ್ನುವ ಮಾತು.

ಎರಡನೆಯದು, 'Make America Great Again' ಘೋಷಣೆ: ಮರಳಿ ಬಿಳಿಯರ ರಾಷ್ಟ್ರವನ್ನಾಗಿ ಅಮೆರಿಕವನ್ನು ಕಟ್ಟುವ ಭರವಸೆ ನೀಡಿರುವುದು. ಮೆಕ್ಸಿಕೊದಂತಹ ಬೇರೆ ಬೇರೆ ದೇಶಗಳಿಂದ ಸಾವಿರಾರು ಸಂಖ್ಯೆಯಲ್ಲಿ ವಲಸಿಗರು ಕಾನೂನು ಬಾಹಿರವಾಗಿ ಅಮೆರಿಕವನ್ನು ಪ್ರವೇಶಿಸಿದ್ದಾರೆ. ಇವರುಗಳನ್ನು Undocumented Workers ಎಂದು ಕರೆಯಲಾಗಿದೆ. ಕಪ್ಪು ಮತ್ತು ಕಂದು ವರ್ಣೀಯರಿಂದ ಅಮೆರಿಕವನ್ನು ಮುಕ್ತಗೊಳಿಸುವ ಮಾತುಗಳನ್ನು ಪ್ರಚಾರದ ಸಂದರ್ಭದಲ್ಲಿ ಆಡಿರುವುದು. ನಮ್ಮಲ್ಲಿ ಹಿಂದುತ್ವ ಇದೆಯಲ್ಲ, ಹಾಗೆ ಅಲ್ಪಸಂಖ್ಯಾತರ ಮೇಲೆ ದ್ವೇಷವನ್ನು ಬಿತ್ತುವ ತಂತ್ರ.

ಮೂರನೆಯದು, ಸುಧಾರಿತವಲ್ಲದ ಜೀವನ ಮಟ್ಟ: ಕಳೆದ ನಾಲ್ಕುವರ್ಷಗಳಲ್ಲಿ ಜನರ ಜೀವನ ಮಟ್ಟ ದುಸ್ಥಿತಿಗೆ ತಲುಪಿದ್ದರೆ ಸರಕಾರವನ್ನು ಬದಲಿಸುವ ಪ್ರತೀತಿ ಆತನ ಗೆಲುವಿಗೆ ಕಾರಣವಾಗಬಹುದು. ಡೆಮಾಕ್ರಟಿಕ್‌ನ ಬೈಡನ್‌ರ ಮುಂದುವರಿದ ಭಾಗವಾಗಿ ಕಮಲಾ ಹ್ಯಾರಿಸ್‌ರನ್ನು ಕಾಣಲಾಗುತ್ತಿದೆ.

ನಾಲ್ಕನೆಯದು, ಆರ್ಥಿಕ ಹೊರೆ, ಹೆಚ್ಚಿದ ಮನೆಬಾಡಿಗೆ, ಬೆಲೆ ಏರಿಕೆ, ದುಬಾರಿ ಶಿಕ್ಷಣ, ಆರೋಗ್ಯ, ಜೀವಿತಾವಧಿಯಲ್ಲಿ ಕುಸಿತ, ಮಾದಕ ವಸ್ತುಗಳ ಅತಿಯಾದ ಸೇವನೆ, ಆರ್ಥಿಕ ಹಿಂಜರಿತದಿಂದ ಬೇಸತ್ತಿರುವ ವರ್ಗ.

ಐದನೆಯದು, ಟ್ರಂಪ್‌ನ ವ್ಯಕ್ತಿತ್ವ: ಯುದ್ಧಬೇಡವೆನ್ನುವ ಧೈರ್ಯ, ಮುನ್ನುಗ್ಗುವ ಸಾಹಸಿ ಪ್ರವೃತ್ತಿ, ಆತನ ಒಳ್ಳೆಯದ್ದು, ಕೆಟ್ಟದು ಎಲ್ಲವೂ ತೆರೆದ ಪುಸ್ತಕ. ಪ್ರಜಾಪ್ರಭುತ್ವದಿಂದ ಆಗಿರುವ ಉಪಯೋಗವೇನೂ ಇಲ್ಲ. ಟ್ರಂಪ್ ಮುಖಾಂತರ ನಿರಂಕುಶ ಪ್ರಭುತ್ವವೇ ಬರಲಿ ಎನ್ನುವ ಜನಸಾಮಾನ್ಯರ ಧೋರಣೆ. ಈ ಎಲ್ಲಾ ಅಂಶಗಳು ಅವರ ಗೆಲುವಿಗೆ ಕಾರಣವಾಗಬಹುದು.

ಭಾರತದ ಮೇಲೆ ಉಂಟಾಗುವ ಪರಿಣಾಮಗಳು

ಅಮೆರಿಕದ ಆಳುವ ವ್ಯವಸ್ಥೆಗೆ ಭಾರತದ ಮೇಲೆ ಯಾಕಿಷ್ಟು ಆಸಕ್ತಿ, ಪ್ರೀತಿ ಎಂದರೆ, ಚೀನಾಗೆ ಎದುರಾಳಿಯೆಂದು. ಹಾಗೆ ನೋಡಿದರೆ ಜಗತ್ತಿನ ಯಾರ ಮೇಲೂ ಅವರಿಗೆ ಪ್ರೀತಿ ಇಲ್ಲ. ಭಾರತ-ಚೀನಾದ ನಿಯಂತ್ರಣ ರೇಖೆಯ ಒಪ್ಪಂದದಿಂದ ಅಮೆರಿಕಕ್ಕೆ ಅಸಮಾಧಾನವಾಗಿದೆ. ಶಾಂತಿ ಇದ್ದಲ್ಲಿ ಅಮೆರಿಕದ ಆಳುವ ವರ್ಗಕ್ಕೆ ಜಾಗವಿಲ್ಲ. ಆದರೆ ಅಮೆರಿಕದ ಸಾಮಾನ್ಯ ಜನ ಮುಗ್ಧರು. ಇರಾಕ್‌ನಲ್ಲಿ ಯುದ್ಧ ನಡೆಯುತ್ತಿದೆ ಎಂದಾಗ, ಎಲ್ಲಿದೆ ಅದು ಎಂದು ಕೇಳಿದ್ದರು. ಸಾಕಪ್ಪ ಈ ಯುದ್ಧಗಳು ಎಂದವರಿದ್ದಾರೆ. ಕರಿಯರು, ಬಿಳಿಯರು ಸಹೋದರರೆಂದು ಅಪ್ಪಿಕೊಂಡವರಿದ್ದಾರೆ. ಹಾಗಾಗಿ ಆಳುವ ವರ್ಗಕ್ಕೆ ಮಾತ್ರವೇ ಯುದ್ಧಬೇಕು.

ಅಮೆರಿಕ ಒಂದೇ ಜಗತ್ತಿನ ಶಕ್ತಿಶಾಲಿ ರಾಷ್ಟ್ರವಾಗಿರುವುದು ಉತ್ತಮ ಬೆಳವಣಿಗೆಯಲ್ಲ. ಅದರ ಪ್ರಾಬಲ್ಯವು ಅಳಿಯಬೇಕು. ಜಾಗತಿಕವಾಗಿ ಶಾಂತಿ, ಸೌಹಾರ್ದ, ಪ್ರೀತಿ ಮತ್ತು ಭ್ರಾತೃತ್ವ ನೆಲೆಸಬೇಕು. ಅಮೆರಿಕದ ಮಾದರಿಯನ್ನು ಎಂದಿಗೂ ಒಪ್ಪುವಂತಹದ್ದಲ್ಲ. ಬಹುಸಂಖ್ಯಾತ ವರ್ಗವನ್ನು ತುಳಿದು, ಬಂಡವಾಳಿಗರನ್ನು ಪೋಷಿಸುವುದು ಸುಸ್ಥಿರವಾದ ಅಭಿವೃದ್ಧಿಯ ಮಾದರಿಯಲ್ಲ. ಶಸ್ತ್ರಾಸ್ತ್ರಗಳ ವ್ಯಾಪಾರ, ಲಾಭ ಮತ್ತು ಯುದ್ಧಗಳ ಮುಖೇನ ನಿಯಂತ್ರಿಸುವ ಮಾದರಿಯನ್ನು ಎಂದಿಗೂ ಮಾನ್ಯಮಾಡಬಾರದು.

share
ಡಾ.ಅಮರ್ ಕುಮಾರ್
ಡಾ.ಅಮರ್ ಕುಮಾರ್

ಅಮೆರಿಕ ಸಂಯುಕ್ತ ಸಂಸ್ಥಾನದ ಪ್ರಸಿದ್ಧ ವೈದ್ಯರು, ಸಾಮಾಜಿಕ ಚಿಂತಕರು

ಡಾ. ಪದ್ಮಶ್ರೀ ಟಿ.
ಡಾ. ಪದ್ಮಶ್ರೀ ಟಿ.

ಉಪನ್ಯಾಸಕರು, ಡಾ.ಬಿ.ಆರ್. ಅಂಬೇಡ್ಕರ್ ಸಂಶೋಧನಾ ಹಾಗೂ ವಿಸ್ತರಣಾ ಕೇಂದ್ರ, ಮೈವಿವಿ

Next Story
X