ಗುಡಿಬಂಡೆ: ಗುಂಡಿಗಳಾಗಿ ಮಾರ್ಪಟ್ಟ ಟಾರ್ ರಸ್ತೆ

ಗುಡಿಬಂಡೆ, ನ.19: ಗುತ್ತಿಗೆದಾರರು ಹಾಗೂ ಅಧಿಕಾರಿಗಳು ರಸ್ತೆ ಕಾಮಗಾರಿ ವೇಳೆ ಗುಣಮಟ್ಟವನ್ನು ಕಾಪಾಡದೆ ನಿರ್ಲಕ್ಷ್ಯ ತೋರಿದ್ದರಿಂದ ಗುಡಿಬಂಡೆ ಪಟ್ಟಣದ ಭತ್ತಲಹಳ್ಳಿ ಗ್ರಾಮದಿಂದ ಹಿಡಿದು ಪರುಗೋಡು ಗ್ರಾಮದವರೆಗಿನ ಟಾರ್ ರಸ್ತೆಯು ಗುಂಡಿಗಳಾಗಿ ಮಾರ್ಪಟ್ಟಿದೆ.
ಪ್ರದಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಲ್ಲಿ ಲಕ್ಷಾಂತರ ರೂ. ವೆಚ್ಚದಲ್ಲಿ ಟಾರ್ ರಸ್ತೆಯನ್ನು ನಿರ್ಮಿಸ ಲಾಗಿದ್ದು, ಕೇವಲ ಮೂರು ವರ್ಷ ಪೂರೈಸುವ ಮೊದಲೇ ಅಲ್ಲಲ್ಲಿ ಡಾಂಬರು ಕಿತ್ತು ಬಂದು ಜಲ್ಲಿ ರಸ್ತೆಯಾಗಿ ಮಾರ್ಪಾಡುತ್ತಿರುವುದನ್ನು ಕಾಣಬಹುದಾಗಿದೆ.
ರಸ್ತೆಗೆ ಡಾಂಬರು ಹಾಕುವಂತಹ ವೇಳೆ ಕಾಮಗಾರಿಯ ಗುಣಮಟ್ಟವನ್ನು ಕಾಪಾಡದೇ ಕಳಪೆ ಕಾಮಗಾರಿ ಮಾಡಿರುವುದರಿಂದ ಈ ರೀತಿಯಲ್ಲಿ ಗುಂಡಿಗಳಾಗುತ್ತಿವೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಹಾಗೂ ಇಂಜಿನಿಯರ್‌ಗೆ ಈ ಬಗ್ಗೆ ಮಾಹಿತಿ ನೀಡಿದ್ದರೂ ಕ್ರಮವಹಿಸಲಿಲ್ಲ. ಇನ್ನಾದರೂ ಪರಿಶೀಲಿಸಿ ರಸ್ತೆ ದುರಸ್ತಿ ಮಾಡಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.
ರಸ್ತೆಗೆ ಸರಿಯಾಗಿ ಟಾರ್ ಹಾಕಿದರೆ ರಸ್ತೆಗಳು ಚೆನ್ನಾಗಿ ಇರುತ್ತದೆ. ಅಧಿಕಾರಿಗಳ ಹಾಗೂ ಇಂಜಿನಿಯರ್‌ಗಳ ಬೇಜವಾಬ್ದಾರಿಯಿಂದ ರಸ್ತೆಯಲ್ಲಿ ಗುಂಡಿಗಳಾಗುತ್ತಿವೆ.
-ನರಸಿಂಹಪ್ಪ, ಸ್ಥಳೀಯ ನಿವಾಸಿ
ವಾಹನ ಸಂಚಾರಕ್ಕೆ ತುಂಬಾ ತೊಂದರೆಯಾಗುತ್ತಿದೆ. ಸರಕಾರದ ಹಣ ಸರಿಯಾಗಿ ಬಳಕೆ ಮಾಡಿದರೆ ಜನರಿಗೆ ತೊಂದರೆಯಾಗಲ್ಲ.
-ಶ್ರೀನಿವಾಸ್, ವಾಹನ ಸವಾರ







