Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಗುರುಪ್ರಸಾದ್ ತುರ್ತುನಿರ್ಗಮನ...!!

ಗುರುಪ್ರಸಾದ್ ತುರ್ತುನಿರ್ಗಮನ...!!

ಡಾ.ಚಮರಂ, ಮೈಸೂರುಡಾ.ಚಮರಂ, ಮೈಸೂರು11 Nov 2024 11:28 AM IST
share
ಗುರುಪ್ರಸಾದ್ ತುರ್ತುನಿರ್ಗಮನ...!!

ಚಿತ್ರ ನಿರ್ದೇಶಕ ಗುರುಪ್ರಸಾದ್ ಆತ್ಮಹತ್ಯೆ ನಿಜಕ್ಕೂ ಆಘಾತಕರವಾದ ಘಟನೆ.

ಅವರ ಓದು, ಬರಹ ಮತ್ತು ಮಾತುಗಳು ಬಹಳ ಸಕಾರಾತ್ಮಕವಾಗಿತ್ತು. ಅವರ ಮಾತಿನಲ್ಲಿ ಜೀವನ ಕುರಿತ ಮಹತ್ವಾಕಾಂಕ್ಷೆಗಳು ಕಾಣುತ್ತಿದ್ದವು.

ಈಗ ಅವರನ್ನು ಬಲ್ಲವರು ಅವರ ಜೀವನಶೈಲಿಯ ಕುರಿತ ಪೋಸ್ಟ್ ಮಾರ್ಟಮ್ ಅನ್ನು ಅವರದೇ ಧಾಟಿಯಲ್ಲಿ, ಅವರವರ ಅನುಭವದಲ್ಲಿ ಮಾಡುತ್ತಿದ್ದಾರೆ.

ಬಹಳ ಕುಡಿತದ ಚಟವಿತ್ತು, ಈಗೀಗ ಆನ್‌ಲೈನ್ ಗೇಮ್‌ಗಳ ಚಟವಿತ್ತು. ಇವೆಲ್ಲವೂ ಅವರನ್ನು ಸಾಲದ ಸುಳಿಗೆ ಸಿಲುಕಿಸಿತು. ವೈವಾಹಿಕ ಬದುಕಿನಲ್ಲೂ ಕೆಲವು ತಪ್ಪುಗಳಾಗಿದ್ದವು. ಇವೆಲ್ಲವು ಅವರನ್ನು ಸಂಕೀರ್ಣವಾದ ಮಾನಸಿಕ ಖಿನ್ನತೆಗೆ ದೂಡಿದ್ದವು ಎಂಬುದನ್ನೆಲ್ಲಾ ಅವರ ಒಡನಾಡಿಗಳು ವಿಶ್ಲೇಷಿಸುತ್ತಿದ್ದಾರೆ.

ಈ ಪೋಸ್ಟ್ ಮಾರ್ಟಮ್ ಈಗ ಉಪಯೋಗವಿಲ್ಲದ್ದು ಆದರೆ, ಮುಂದಿನವರಿಗೆ ಇದೆಲ್ಲವೂ ಒಂದು ಎಚ್ಚರಿಕೆಯಾದೀತು.

‘ಮಠ’ ಮತ್ತು ‘ಎದ್ದೇಳು ಮಂಜುನಾಥ’ ಎಂಬ ಭಿನ್ನ ಚಿತ್ರಗಳ ಮೂಲಕ ಕನ್ನಡ ಚಿತ್ರರಂಗದಲ್ಲಿ ಗುರುಪ್ರಸಾದ್ ಸಂಚಲನ ಸೃಷ್ಟಿಸಿದ್ದು ಸತ್ಯ. ಆ ಚಿತ್ರಗಳು ಅವರಲ್ಲಿನ ಪ್ರತಿಭೆಯನ್ನು ಅನಾವರಣಗೊಳಿಸಿದ್ದವು. ಆದರೆ ಮುಂದಿನ ಅವರ ಚಿತ್ರಗಳೇ ಅವರಲ್ಲಿನ ದೌರ್ಬಲ್ಯಗಳನ್ನೂ ಅನಾವರಣಗೊಳಿಸಿದವು. ‘ರಂಗನಾಯಕ’ ಚಿತ್ರದ ಮೂಲಕ ಗುರುಪ್ರಸಾದ್ ತಾವು ಎಷ್ಟು ಖಾಲಿಯಾಗಿದ್ದರೆಂಬುದನ್ನು ಸಾಬೀತುಪಡಿಸಿದ್ದರು. ಆ ಚಿತ್ರಕ್ಕೆ ಜನರು ತೋರಿದ ನಿರ್ಲಕ್ಷ್ಯ, ಉಗಿದ ರೀತಿ ಮತ್ತು ಅದು ಸೋತ ಪರಿಗೆ ಬಹುಶಃ ಗುರು ತತ್ತರಿಸಿಹೋಗಿರುತ್ತಾರೆ! ಕೇವಲ ಓದು ಮತ್ತು ಅಪ್ರತಿಮ ಜ್ಞಾನವಷ್ಟೇ ವ್ಯಕ್ತಿಯನ್ನು ಪ್ರತಿಭಾವಂತ ಮತ್ತು ಜನಪ್ರಿಯಗೊಳಿಸಲಾರದು. ಜ್ಞಾನವನ್ನು ಸರಿಯಾಗಿ ಕಾಲಕ್ಕೆ ತಕ್ಕಂತೆ ಬಳಸಿ ಸಮಾಜಕ್ಕೊಂದು ಸಕಾರಾತ್ಮಕ ಚಿಂತನೆಗೆ ಹಚ್ಚುವ ಮೂಲಕ ಜನಮನ ಗೆಲ್ಲಬಹುದು. ಹಾಗಲ್ಲದೇ ಹೋದರೆ ಜನರು ತಿರಸ್ಕರಿಸುತ್ತಾರೆ ಮತ್ತು ಈ ತಿರಸ್ಕಾರ ಎಂತಹ ಮನುಷ್ಯನ ಜಂಘಾಬಲವನ್ನಾದರೂ ಅಡಗಿಸುತ್ತದೆ, ಹತಾಶೆಗೆ ನೂಕುತ್ತದೆ ಎಂಬುದಕ್ಕೆ ಗುರು ನಿದರ್ಶನವಾದರಾ!?

ಇದು ನಿಜವಾಗಿ ತಮ್ಮ ಚಿತ್ರಗಳ ಮೂಲಕ ಅಥವಾ ಬರಹ ಭಾಷಣಗಳ ಮೂಲಕ ಜನರಿಗೆ ಉಪದೇಶ ಬೋಧಿಸುವ ಇತರ ಸಿನೆಮಾಕರ್ಮಿಗಳಿಗೆ, ಬರಹಗಾರರಿಗೆ ದೊಡ್ಡ ಪಾಠವಾಗಬೇಕು.

ಗುರುಪ್ರಸಾದ್ ಅವರನ್ನು ನಾನು ನಾಲ್ಕುಬಾರಿ ಭೇಟಿಯಾಗುವ ಅವಕಾಶ ಸಿಕ್ಕಿತ್ತು.

ನಾವು 2014ರಲ್ಲಿ ‘ಊಟಿ’ ಸಿನೆಮಾ ಮಾಡುವಾಗ ಒಂದು ಪ್ರಮುಖ ಪಾತ್ರಕ್ಕಾಗಿ ವಿಶೇಷವಾದ ಕಲಾವಿದರನ್ನು ಹುಡುಕುತ್ತಿದ್ದೆವು. ನಮಗೆ ಬೇಕಾದವರ ಡೇಟ್ಸ್ ಗಳು ನಮಗೆ ಸಿಗದೆ ಚಿತ್ರನಿರ್ಮಾಣ ತಡವಾಗುತ್ತಿತ್ತು. ಕಡೆಗೆ ನಮ್ಮ ಗೆಳೆಯರೂ ‘ಊಟಿ’ ಚಿತ್ರದ ಕಾರ್ಯಕಾರಿ ನಿರ್ಮಾಪಕರೂ ಆಗಿದ್ದ ಕನಕಪುರದ ನರೇಶ್ ಮಯ್ಯ ಆ ಪಾತ್ರಕ್ಕೆ ಗುರುಪ್ರಸಾದ್ ಹಾಕಿಕೊಂಡರೆ ಹೇಗೆ ಎಂದರು. ಅಷ್ಟೊತ್ತಿಗೆ ಗುರು ಅನೇಕ ಚಿತ್ರಗಳಲ್ಲಿಯೂ ನಟಿಸಿ ಫೇಮಸ್ ಆಗಿದ್ದರು. ಅವರ ‘ಡೈರೆಕ್ಟರ್ ಸ್ಪೆಷಲ್’ ಚಿತ್ರದಲ್ಲಿ ಮೊದಲ ಬಾರಿಗೆ ಚಿತ್ರದ ಡೈರೆಕ್ಟರ್ ಕಟೌಟ್ ಹಾಕುವ ಮೂಲಕ ಅವರ ಖ್ಯಾತಿಯನ್ನು ದಾಖಲುಮಾಡಿದ್ದರು!

ಹೀಗಾಗಿ ಅವರು ನಮ್ಮ ಚಿತ್ರದ ಪಾತ್ರಕ್ಕೆ ಸರಿ ಎನಿಸಿತು.

ನರೇಶ್ ಮಯ್ಯ ಒಂದು ಭೇಟಿ ನಿಗದಿಗೊಳಿಸಿ ಚಿತ್ರ ನಿರ್ಮಾಪಕರಾದ ಮೋಹನ್ ಕುಮಾರ್ ಅವರೊಡನೆ ನಮ್ಮನ್ನು ಅವರ ಮನೆಗೆ ಕರೆದೊಯ್ದರು. ಗುರು ನಮಗೆ ಸಮಯ ಕೊಟ್ಟಿದ್ದೇ ಮಧ್ಯಾಹ್ನ 12 ಗಂಟೆಗೆ. ನಾವು ಸಮಯಕ್ಕೆ ಸರಿಯಾಗಿ ಹೋದೆವು. ಆದರೂ ಗುರು ಎದ್ದು ಬಂದುದು 1:30ಕ್ಕೆ!

ಅವರ ಪ್ರೀತಿಯ ನಾಯಿಯೊಡನೆ ಬಂದು ಸಿಗರೇಟ್ ಹಚ್ಚಿ ಮಾತಿಗೆ ಕುಳಿತರು. ನಾವು ಪಾತ್ರದ ಬಗ್ಗೆ ಹೇಳಿದಾಗ...‘‘ಓಹೋ ಇದಕ್ಕೆ ನಾನು ಸೂಟ್ ಆಗ್ತಿನಿ ಅಂದ್ರೆ ಓಕೆ. ನಮ್ಮ ಗೆಳೆಯ ನರೇಶ ಹೇಳಿದ್ಮೇಲೆ ಮುಗೀತು’’ ಎಂದು ಹೇಳಿ ಒಪ್ಪಿಕೊಂಡರು.

ಶೂಟಿಂಗ್ ದಿನ ಸಹ ನಾವು ಬೆಳಗಿನಿಂದ ಕಾದಿದ್ದೆವು. ಅವರು ಮಧ್ಯಾಹ್ನ ಎರಡು ಗಂಟೆಗೆ ಬಂದರು. ಸಂಜೆತನಕ ಶೂಟಿಂಗ್ ಮಾಡಿಕೊಂಡೆವು.

ಸಿನೆಮಾ ಪೂರ್ತಿ ಆದಾಗ ದುರಂತವೊಂದು ನಡೆದು ನಮ್ಮ ಸಿನೆಮಾದ ಒಂದು ಹಾರ್ಡ್ ಡಿಸ್ಕ್ ಕರಪ್ಟ್ ಆಗಿತ್ತು. ಅದನ್ನು ರಿಕವರಿ ಮಾಡಲು ತಿಂಗಳು ಗಟ್ಟಲೆ ಹಿಡಿಯಿತು, ಸಿಂಗಾಪುರ, ಅಮೆರಿಕ ಎಲ್ಲಾ ಕಡೆಯ ಸಾಫ್ಟ್‌ವೇರ್ ತಜ್ಞರಿಗೂ ಕಳುಹಿಸಿದ್ದಾಯಿತು. ಆದರೆ ಅದರಲ್ಲಿದ್ದ ಫೂಟೇಜ್ ರಿಕವರಿ ಮಾಡಲು ಸಾಧ್ಯವೇ ಆಗಲಿಲ್ಲ. ಅದರಲ್ಲಿ ಅನೇಕ ಮುಖ್ಯವಾದ ದೃಶ್ಯಗಳಿದ್ದವು. ಗುರುಪ್ರಸಾದ್ ಚಿತ್ರಿಸಿದ್ದೂ ಅದರಲ್ಲೇ ಇತ್ತು! ಅದ್ಯಾವುದೂ ನಮಗೆ ಸಿಗಲಿಲ್ಲ.

ಅನ್ಯ ಮಾರ್ಗವಿಲ್ಲದೆ ರೀ ಶೂಟ್ ಮಾಡಲೇಬೇಕಾಯಿತು.

ಮತ್ತೆ ಗುರುಪ್ರಸಾದ್ ಬಳಿಗೆ ಹೋದೆವು. ಮತ್ತೆ ದುಬಾರಿ ಸಂಭಾವನೆ ನೀಡಿ ಕರೆಸಿದ್ದಾಯಿತು. ಆಗಲೂ ತಡವಾಗಿಯೇ ಬಂದರು. ಆದರೆ ನಮ್ಮ ಈ ಹಾರ್ಡ್ ಡಿಸ್ಕ್ ಕತೆ ಕೇಳಿ ಬಹಳ ಬೇಜಾರು ಮಾಡಿಕೊಂಡು, ಅವರ ಮಠ ಸಿನೆಮಾಕ್ಕೂ ಬೇರೆ ಕಾರಣಕ್ಕೆ ಮತ್ತೊಮ್ಮೆ ಚಿತ್ರಿಸಬೇಕಾದ ಸ್ಥಿತಿ ಹೇಳಿಕೊಂಡು ಅಂದು ನಮ್ಮೊಡನೆ ಬಹಳ ಹೊತ್ತು ಚರ್ಚಿಸಿದರು. ಇದರ ಚಿತ್ರೀಕರಣ ಬೆಂಗಳೂರಿನ ಸ್ಫೂರ್ತಿಧಾಮದ ಬುದ್ಧಪ್ರತಿಮೆಯ ಎದುರು ನಡೆಯಿತು. ಅಂದು ನನ್ನೊಡನೆ ಸಾವಕಾಶವಾಗಿ ಮಾತಾಡಿದರು. ಇಡೀ ಚಿತ್ರದ ಕತೆ ಕೇಳಿದರು. ನನ್ನ ಕಾದಂಬರಿ ಚಿತ್ರ ಎಂದು ಕೇಳಿ ಚಕಿತಗೊಂಡರು. ನಾನೂ ಸಹ ಬರಹಗಾರ ಎಂಬುದನ್ನು ಬೇಗನೆ ಗ್ರಹಿಸಿ ಬಹಳ ಸಂತೋಷದಿಂದ ಹಲವು ಸಾಹಿತ್ಯಕ ವಿಚಾರಗಳನ್ನು ಹಂಚಿಕೊಂಡರು. ಅವರ ಸಿನೆಮಾ ಮಾಡಲಾಗದ ಕತೆಗಳು ಕೃತಿಯನ್ನು ಅದಾಗಲೇ ಓದಿರುವುದನ್ನು ಅವರ ಗಮನಕ್ಕೆ ತಂದಾಗ ಅವರು ಇನ್ನಷ್ಟು ಚಕಿತರಾದರು. ಕೂಡಲೇ ಅವರ ‘ಡೈರೆಕ್ಟರ್ ಸ್ಪೆಷಲ್’ ಚಿತ್ರಕಥೆಯ ಕೃತಿಯನ್ನು ಕಾರಿಂದ ತರಿಸಿ ಹಸ್ತಾಕ್ಷರ ಹಾಕಿ ನನಗೆ ಕೊಟ್ಟರು. ಅಲ್ಲಿಂದ ನನಗೆ ಬಹಳವೇ ಕ್ಲೋಸ್ ಆಗಿ ‘‘ಹೇ ನೀವು ನನ್ನ ವೇವ್ ಲೆಂತ್ ಗೆ ಬಹಳ ಚೆನ್ನಾಗಿ ಮ್ಯಾಚ್ ಆಗ್ತಿರಿ ರೀ...ಇವತ್ತು ನಮ್ ಜೊತೆ ಎಣ್ಣೆ ಪಾರ್ಟಿ ಮಾಡಲೇಬೇಕು’’ ಅಂತ ಹೇಳಿದರು. ಅಂದು ಅವರ ಭಾಗದ ಚಿತ್ರೀಕರಣದೊಡನೆ ಚಿತ್ರದ ಪ್ಯಾಕಪ್ ಆಯಿತು. ನನ್ನನ್ನು ತಮ್ಮ ಕಾರಿಗೆ ಹತ್ತಿಸಿಕೊಂಡು ಮೆಜೆಸ್ಟಿಕ್ ಕಡೆ ಹೊರಟರು. ದಾರಿಯುದ್ದಕ್ಕೂ ಮಾತು ಮತ್ತು ಪಂಚಿಂಗ್ ಜೋಕ್‌ಗಳು ಅವರಂತೇ ನಾನೂ ಅನೇಕ ಪಂಚಿಂಗ್ ಜೋಕ್ ಗಳನ್ನು ಹೇಳಿದಾಗ ಬಹಳ ಎಂಜಾಯ್ ಮಾಡುತ್ತಾ...‘‘ಏಯ್ ನೀವು ಪರ್ಮನೆಂಟ್ ನಮ್ ಟೀಮ್ ಸೇರ್ಕೊಂಡ್ ಬಿಡ್ರಿ...’’ ಅಂದರು. ಆದರೆ ನಾನು ‘‘ಅಯ್ಯೋ ನನಗೆ ಈಗ ಫುಲ್‌ಟೈಮ್ ಸಿನೆಮಾರಂಗದಲ್ಲಿರುವ ಉಮೇದಿಲ್ಲ ಸಾರ್. ಅದಲ್ಲದೆ ನನಗೆ ಬೆಂಗಳೂರಲ್ಲಿರಲು ಆಗಲ್ಲ’’ ಎಂದೆ. ಅಂದು ಅವರ ಪಾರ್ಟಿಗೇನು ನಾನು ಸೇರಿಕೊಳ್ಳಲಿಲ್ಲ.

ಅದಾದ ನಂತರ ನಮ್ಮ ಭೇಟಿಯಾದುದು ಡಬ್ಬಿಂಗ್ ನಲ್ಲಿ. ಅಂದೂ ಡಬ್ಬಿಂಗ್ ಮುಗಿಸಿ ಬಹಳ ಹೊತ್ತು ಮಾತಾಡಿದರು. ಸಿನೆಮಾದ ಒಂದೆರಡು ದೃಶ್ಯಗಳನ್ನು ನೋಡಬಹುದಾ ಎಂದರು. ತೋರಿಸಿದೆವು. ‘‘ಓಹ್ ಬಹಳ ಸೊಗಸಾಗಿದೆ ಕಣ್ರಿ ದೃಶ್ಯಗಳು’’ ಎಂದು ಹೇಳಿ ಚಿತ್ರದ ಯಶಸ್ಸಿಗೆ ಶುಭಕೋರಿ ಹೋದರು.

ಈ ನನ್ನ ಒಡನಾಟದಲ್ಲಿ ಗುರು ಬಹಳ ಜೋವಿಯಲ್ ಮನುಷ್ಯನಾಗಿ, ಅಪರಿಮಿತ ಆತ್ಮವಿಶ್ವಾಸದ ವ್ಯಕ್ತಿಯಾಗಿಯೇ ಕಂಡರು. ಇಂತಹ ಗಟ್ಟಿಗ ಇಷ್ಟು ದುರ್ಬಲನಾದುದು ಹೇಗೆ? ಜೀವನದ ಪ್ರತೀ ಘಳಿಗೆಯನ್ನೂ ಎಂಜಾಯ್ ಮಾಡುವವರು ಆತ್ಮಹತ್ಯೆಯ ಯೋಚನೆಯನ್ನೇ ಮಾಡುವುದಿಲ್ಲ ಎಂದು ಹೇಳುತ್ತಾರೆ. ಅದನ್ನೆಲ್ಲಾ ಸುಳ್ಳುಮಾಡಿ ಸುಳಿಗೆ ಸೆಳೆದುಕೊಂಡ ಅಂತಹ ಒತ್ತಡವೇನಿತ್ತೊ? ಆ ಕ್ಷಣದ ಮನೋದೌರ್ಬಲ್ಯವೇನಿತ್ತೋ..? ಯಾರು ಬಲ್ಲರು? ಅತಿಯಾದ ಆತ್ಮವಿಶ್ವಾಸವೂ ಒಂದು ದೌರ್ಬಲ್ಯವಾಗುವುದುಂಟು! ನಮ್ಮನ್ನು ನಾವು ಗೆಲ್ಲುವುದೇ ಜೀವನದ ಬಹುದೊಡ್ಡ ಸಾಧನೆ.

ಅಲ್ಲವೇ??

share
ಡಾ.ಚಮರಂ, ಮೈಸೂರು
ಡಾ.ಚಮರಂ, ಮೈಸೂರು
Next Story
X