Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಸಫ್ದರ್ ಬದುಕಿದ್ದರೆ ಫ್ಯಾಶಿಸಂ ವಿರುದ್ಧ...

ಸಫ್ದರ್ ಬದುಕಿದ್ದರೆ ಫ್ಯಾಶಿಸಂ ವಿರುದ್ಧ ಬೀದಿಯಲ್ಲಿರುತ್ತಿದ್ದರು...

ಇಂದು ಸಫ್ದರ್ ಹಷ್ಮಿ ಜನ್ಮದಿನ

ಕೆ. ಮಹಾಂತೇಶ, ಬೆಂಗಳೂರುಕೆ. ಮಹಾಂತೇಶ, ಬೆಂಗಳೂರು12 April 2024 12:20 PM IST
share
ಸಫ್ದರ್ ಬದುಕಿದ್ದರೆ ಫ್ಯಾಶಿಸಂ ವಿರುದ್ಧ ಬೀದಿಯಲ್ಲಿರುತ್ತಿದ್ದರು...

‘ಸಫ್ದರ್ ಹಷ್ಮಿ ಸ್ವತಃ ಕಲಾವಿದ ಹಾಗೂ ಪತ್ರಕರ್ತರಾಗಿದ್ದವರು. ಅವರದ್ದು ಕೇವಲ 34 ವರ್ಷಗಳ ಕಿರಿಯ ಕ್ರಾಂತಿಕಾರಿ ಬದುಕು. ಆದರೆ ಆ ಕಿರು ಅವಧಿಯಲ್ಲೇ ಶತಮಾನಗಳಷ್ಟು ಮರೆಯಲಾಗದ ಕೆಲಸ ಮಾಡಿದ ಕೀರ್ತಿ ಅವರದ್ದು. 2024 ಎಪ್ರಿಲ್ 12 ಸಫ್ದರ್ ಹಷ್ಮಿ ಜನ್ಮ ದಿನ. ಜನರಿಂದ ರೂಪಿತವಾಗಿ ಜನತೆಗಾಗಿ ಅರ್ಪಿಸಿಕೊಂಡು ಜನರಿಗಾಗಿಯೇ ತನ್ನ ಯವ್ವನವನ್ನೇ ಬಲಿನೀಡಿದ ಹಷ್ಮಿ ಎನ್ನುವ ಮಹಾನ್ ಕಲಾವಿದ ಸಮಕಾಲೀನ ಸಂದರ್ಭದಲ್ಲಿ ನಮ್ಮ ಜತೆ ಇರಲೇಬೇಕಾಗಿದ್ದ ಜೀವವಾಗಿತ್ತು.

ದೇಶದಲ್ಲಿ ಕಳೆದ ಹತ್ತು ವರ್ಷಗಳಿಂದ ಅಘೋಷಿತ ತುರ್ತು ಪರಿಸ್ಥಿತಿಯ ವಾತಾವರಣವಿದೆ. ಫ್ಯಾಶಿಸಂನ ಬೇರುಗಳು ದೇಶದ ಉದ್ದಗಲಕ್ಕೂ ವಿವಿಧ ಸ್ವರೂಪಗಳಲ್ಲಿ ಕವಲೊಡೆದಿವೆ. ದೂರದ ಯುರೋಪ್‌ನ ಜರ್ಮನಿ, ಇಟಲಿಗಳಲ್ಲಿ ಹಲವು ದಶಕಗಳ ಕಾಲ ಜನಾಂಗೀಯ ಮಾರಣಹೋಮಕ್ಕೆ ಕಾರಣವಾದ ಸ್ಥಿತಿ ಭಾರತದಂತಹ ಬಹುತ್ವದ, ಬಹುಸಂಸ್ಕೃತಿಯ, ಬಹುಜನಾಂಗೀಯ ಸಮಾಜದಲ್ಲಿ ನುಸುಳಲು ಸಾಧ್ಯವೇ ಇಲ್ಲ ಎಂದು ಆರಾಮವಾಗಿ ಕುಳಿತಿದ್ದವರ ಮನೆಯ ಅಂಗಳಕ್ಕೂ ಈಗ ತಲುಪಿಯಾಗಿದೆ. ಈ ಗಂಭೀರ ಸನ್ನಿವೇಶದಲ್ಲಿ ‘ಸಫ್ದರ್’ ಎನ್ನುವ ವ್ಯಕ್ತಿತ್ವವೊಂದು ಜೀವಂತವಿದ್ದಿದ್ದರೆ ಅವರು ಅಕ್ಷರಶಃ ತನ್ನ ಸಂಗಾತಿ ಕಲಾವಿದರೊಂದಿಗೆ ದೇಶದ ಬೀದಿಯಲ್ಲಿರುತ್ತಿದ್ದರು.

ಹೌದು ಸಫ್ದರ್ ಇಂದು ಬದುಕಿದ್ದರೆ, ದೇಶದ ಪ್ರಜಾತಂತ್ರದ ಅಳಿವು ಉಳಿವಿನ ಹಣೆ ಬರಹವನ್ನು ನಿರ್ಧರಿಸಬೇಕಾದ ಈ ಚುನಾವಣೆ ಎನ್ನುವ ಮಹಾಸಮರದಲ್ಲಿ ಜನತೆಯ ಬದುಕಿನ ಸಂಕಟಗಳಿಗೆ ಒಂದು ಸಾಂಸ್ಕೃತಿಕ ಧ್ವನಿಯಾಗಿರುತ್ತಿದ್ದರು. ಸದ್ಯ ಪ್ರಜಾಪ್ರಭುತ್ವದ ಮುಖವಾಡ ಹಾಕಿಕೊಂಡು ಸರ್ವಾಧಿಕಾರದೆಡೆಗೆ ಸಾಗುವ ಅದರ ಅಪಾಯಗಳ ಬಗೆಗೆ, ಜತೆಗೆ ಅದಕ್ಕೆ ನೀರೆರೆದು ಪೋಷಿಸುವ ಅವಕಾಶವಾದಿ ರಾಜಕಾರಣದ ಬಗ್ಗೆ ತಮ್ಮದೇ ತಂಡ ಜನಂ(ಜನನಾಟ್ಯ ಮಂಚ್) ಮೂಲಕ ಹಾಡು.. ನಾಟಕಾಭಿನಯ, ಕಾವ್ಯ ಹಾಗೂ ಬರಹಗಳ ಮೂಲಕ ಪ್ರಶ್ನಿಸುವ, ವಿಡಂಬನೆ ಮಾಡುವ ಅವಕಾಶವನ್ನು ಅವರು ಖಂಡಿತ ಕಳೆದುಕೊಳ್ಳುತ್ತಿರಲಿಲ್ಲ. ಆಳುವ ವರ್ಗದ ಜೊತೆ ಎಂದೂ ಅಧಿಕಾರಕ್ಕಾಗಿ ರಾಜಿಯಾಗದೆ ಪ್ರಭುತ್ವದ ಹುಳುಕುಗಳನ್ನು ಸದಾ ಹುಡುಕುತ್ತಾ ಅದಕ್ಕೆ ಅಕ್ಷರ, ಹಾಡು, ನಾಟಕದ ರೂಪಗಳನ್ನು ನೀಡಿ ಜನತೆಯನ್ನು ಸದಾ ಎಚ್ಚರಿಸುತ್ತಿದ್ದ ಶಕ್ತಿಯಾಗಿರುತ್ತಿದ್ದರು.

ಅದು 1989 ಜನವರಿ 1, ಸಫ್ದರ್ ಹಷ್ಮಿ ಮತ್ತು ಆತನ ಜನನಾಟ್ಯ ಮಂಚ್(ಜನಂ) ತಂಡ ‘ಹಲ್ಲಾ ಬೋಲ್’ ಎನ್ನುವ ವಿಡಂಬನಾತ್ಮಕ ಬೀದಿ ನಾಟಕದ ಮೂಲಕ ದಿಲ್ಲಿಯ ಸಾಹಿದಾಬಾದ್ ಪ್ರದೇಶದಲ್ಲಿದ್ದರು. ಆಗ ಅಲ್ಲಿನ ನಗರ ಸಭೆಗೆ ಚುನಾವಣೆಗಳು ಘೋಷಣೆಯಾಗಿದ್ದವು. ಆ ಪ್ರದೇಶದ ಕಾರ್ಮಿಕ ವರ್ಗ ಎದುರಿಸುತ್ತಿರುವ ಸಂಕಟಗಳನ್ನು ಹಾಗೂ ಸ್ಥಳೀಯ ಪೊಲೀಸರು-ಕೈಗಾರಿಕಾ ಮಾಲಕರು ಹಾಗೂ ಆ ಪ್ರದೇಶದ ರಾಜಕಾರಣದ ನಡುವಿದ್ದ ಕಾನೂನು ಬಾಹಿರ ನಂಟನ್ನು ಎಳೆ-ಎಳೆಯಾಗಿ ಬಿಡಿಸಿಟ್ಟು ಜನಜಾಗೃತಿ ಮೂಡಿಸುವ ಕೆಲಸದಲ್ಲಿ ಜನಂ ನಿರತವಾಗಿತ್ತು. ದಿಲ್ಲಿ ಸುತ್ತಮುತ್ತಲಿನ ಆ ಪ್ರದೇಶದಲ್ಲಿ ಜನಂ ತಂಡದ ಈ ಚಟುವಟಿಕೆಗಳು ಅದಾಗಲೇ ಬಹಳ ಜನಪ್ರಿಯವಾಗಿದ್ದವು. ಇದರಿಂದಾಗಿ ಕ್ರೋಧಗೊಂಡಿದ್ದ ರಾಜಕೀಯ ಪ್ರೇರಿತ ಶಕ್ತಿಗಳು ಜನವರಿ 1ರ ಮಧ್ಯಾಹ್ನ ನಾಟಕ ಪ್ರದರ್ಶಿಸುತ್ತಿದ್ದ ತಂಡದ ಮೇಲೆ ಸುಮಾರು 150 ಜನರ ಗೂಂಡಾಪಡೆಯೊಂದಿಗೆ ಏಕಾಏಕಿ ದಾಳಿ ನಡೆಸಿದವು. ಹಲ್ಲೆಕೋರರಿಂದ ಹೇಗೋ ತಪ್ಪಿಸಿಕೊಂಡ ಕಲಾವಿದರು ಸ್ಥಳೀಯ ಕಾರ್ಮಿಕ ಸಂಘದ ಕಚೇರಿಯಲ್ಲಿ ಆಶ್ರಯಪಡೆದರು. ಆದರೆ ಅಲ್ಲಿಗೂ ನುಗ್ಗಿದ ಗೂಂಡಾಪಡೆ ದೊಣ್ಣೆ, ಲಾಠಿ ಹಾಗೂ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದರು. ತನ್ನ ಸಹಕಲಾವಿದರಿಗೆಲ್ಲ ಬೆಂಗಾವಲಾಗಿ ರಕ್ಷಿಸುತ್ತಾ ಬಾಗಿಲಲ್ಲೇ ನಿಂತಿದ್ದ ಸಫ್ದರ್ ಹಷ್ಮಿ ಆ ಗೂಂಡಾಗಳು ನಡೆಸಿದ ಮಾರಣಾಂತಿಕ ಪೆಟ್ಟುಗಳಿಂದಾಗಿ ಜನವರಿ 2ರಂದು ಆಸ್ಪತ್ರೆಯಲ್ಲಿ ಆಳುವವರು ರೂಪಿಸಿದ ಸಂಚಿಗೆ ಬಲಿಯಾಗಿ ಹುತಾತ್ಮರಾದರು.

ಹಷ್ಮಿ ಮತ್ತವರ ಸಂಗಾತಿಗಳು ನಡೆಸುತ್ತಿದ್ದ ಕೆಲಸವೇ ಅಂತಹದ್ದು. ಇಡೀ ದಿಲ್ಲಿ ಮಾತ್ರವಲ್ಲ ಅದರ ಸುತ್ತಮುತ್ತಲಿನ ರಾಜ್ಯಗಳಲ್ಲಿ ಎಲ್ಲಿಯೇ ಅನ್ಯಾಯ, ದಬ್ಬಾಳಿಕೆ ಕೂಗು ಕೇಳಿದರೆ ಅಲ್ಲಿಗೆ ಪ್ರತ್ಯಕ್ಷವಾಗುತ್ತಿತ್ತು ಜನನಾಟ್ಯಮಂಚ್ ತಂಡ!. ಹೊಟೇಲ್ ತಿಂಡಿ ಬೆಲೆ ಏರಿಕೆ, ದಿಲ್ಲಿ ನಗರ ಬಸ್ ಪ್ರಯಾಣ ದರ ಏರಿಕೆ, ಕಾರ್ಮಿಕರ ನ್ಯಾಯಯುತ ಮುಷ್ಕರ ಸೇರಿದಂತೆ... ಜನತೆಯ ಮೇಲೆ ನಡೆಯುವ ಎಲ್ಲಾ ದಬ್ಬಾಳಿಕೆಗಳಿಗೆ ಉತ್ತರವಾಗಿ ಜನಂ ತಂಡ ದಿಲ್ಲಿಯ ಮಂಡಿಹೌಸ್ ಮತ್ತು ಕನಾಟ್‌ಪ್ಲೇಸ್‌ಗಳಲ್ಲಿ (ನಮ್ಮ ಬೆಂಗಳೂರಿನ ಕಲಾ ಕ್ಷೇತ್ರದಂತೆ) ಕುಳಿತು ಹಾಡು, ನಾಟಕಗಳನ್ನು ಸಿದ್ಧಪಡಿಸಿ ಅಲ್ಲೇ ರಿಹರ್ಸಲ್ ಮಾಡುತ್ತಿತ್ತು. ಅಲ್ಲಿ ಪ್ರತೀ ಶನಿವಾರ ನಡೆಯುತ್ತಿದ್ದ ಹೊಸ ನಾಟಕಗಳನ್ನು ವೀಕ್ಷಿಸಲು ನೂರಾರು ಜನರು ಸೇರುತ್ತಿದ್ದರು. ಹೀಗಾಗಿ 80ರ ದಶಕದಲ್ಲಿ ಕನಾಟ್‌ಪ್ಲೇಸ್ ಎಂದರೆ ದಿಲ್ಲಿ ಪೊಲೀಸರಿಗೆ ಬೆವರಿಳಿಯುತ್ತಿತ್ತು. ಆ ಕಾರಣದಿಂದಾಗಿ ಅವರು ಆ ಪ್ರದೇಶದ ಸುತ್ತಮುತ್ತ ಎಷ್ಟೋ ಬಾರಿ ಕಲಂ 144 ಹೇರುತ್ತಿದ್ದರು.!

ವಿದ್ಯಾರ್ಥಿ ದಿಸೆಯಿಂದಲೂ ಸಫ್ದರ್ ಪ್ರತಿಭಾವಂತರಾಗಿದ್ದರು. ದಿಲ್ಲಿ ವಿಶ್ವವಿದ್ಯಾನಿಲಯದಲ್ಲಿ ಶಿಕ್ಷಣ ಮುಗಿಸಿ ಕೆಲಕಾಲ ಕಾಶ್ಮೀರದಲ್ಲಿ ಅಧ್ಯಾಪಕನಾಗಿ ನಂತರ ಪ.ಬಂಗಾಳ ಸರಕಾರದ ವಾರ್ತಾಧಿಕಾರಿಯಾಗಿ ದಿಲ್ಲಿಯಲ್ಲಿದ್ದು ಕಾರ್ಯನಿರ್ವಹಿಸಿದ್ದರು. ಸಫ್ದರ್ ಹಷ್ಮಿ ಹತ್ಯೆಯಾಗಿದ್ದು ಕೇವಲ ತನ್ನ 34ನೇ ವರ್ಷದಲ್ಲಿ!. ನಿಜ, ಅದು ಸಾಯುವ ವಯಸ್ಸಲ್ಲ. ಆದರೆ ಆಳುವ ವರ್ಗದ ಜನರಿಗೆ ಅವರು ಹೆಚ್ಚು ದಿನಗಳು ಬದುಕಿದಷ್ಟು ಕಷ್ಟದ ದಿನಗಳು ಎಂಬುದು ಮನದಟ್ಟಾಗಿತ್ತು.

ಮಹಾನ್ ಕಲಾವಿದ ಹಷ್ಮಿ ಹತ್ಯೆಯನ್ನು ಇಡೀ ದೇಶವೇ ಒಂದಾಗಿ ಖಂಡಿಸಿತ್ತು. ದೇಶದ ಉದ್ದಗಲಕ್ಕೂ ಪ್ರತಿಭಟನೆಗಳು ನಡೆದವು. 1989 ಜನವರಿ 2ರಂದು 14ಕಿ.ಮೀ. ನಡೆದ ಅವರ ಅಂತಿಯಾತ್ರೆಯಲ್ಲಿ ಪಾಲ್ಗೊಂಡರ ಸಂಖ್ಯೆ 10 ಸಾವಿರ ದಾಟಿತ್ತು!. ಖ್ಯಾತ ನಾಮರಾದ ಭೀಷ್ಮ ಸಹಾನಿ, ಹಬೀಬ್ ತನ್ವೀರ್, ಯಶಪಾಲ, ಸಿಪಿಎಂ ನಾಯಕ ಸುರ್ಜಿತ್ ಸೇರಿದಂತೆ ನೂರಾರು ಗಣ್ಯರು ಭಾಗವಹಿಸಿದ್ದರು. ಇನ್ನೂ ಸ್ಫೂರ್ತಿ ನೀಡಿದ ಸಂಗತಿ ಎಂದರೆ ಜನವರಿ 3ರಂದು ಅಂದರೆ ಹಷ್ಮಿ ಹತ್ಯೆಯಾದ ಎರಡೇ ದಿನದಲ್ಲಿ ಅದೇ ಜನಂ ತಂಡ ಸಫ್ದರ್ ಪತ್ನಿ ಮಲಯಶ್ರೀ ಹಷ್ಮಿ ನೇತೃತ್ವದಲ್ಲಿ ಹಷ್ಮಿ ಹತ್ಯೆಯಾದ ಅದೇ ಸಾಹಿದಾಬಾದ್ ಪ್ರದೇಶದಲ್ಲೇ ‘‘ಭೂಖ್‌ಸೇ ಮರ್ನೇವಾಲೇ ಕ್ಯಾ ಮೌತ್‌ಸೇ ಹಾರ್ನೇ ವಾಲೇ?’’(ಹಸಿವಿನಿಂದ ಸಾಯುತ್ತಿರುವ ನಾವು ಸಾವಿಗೆ ಹೆದರುವೆವೇನು?) ಎನ್ನುವ ಘೋಷಣೆಯೊಂದಿಗೆ ಅರ್ಧಕ್ಕೆ ನಿಂತಿದ್ದ ಅದೇ ಹಲ್ಲಾಬೋಲ್ ನಾಟಕವನ್ನು ಪ್ರದರ್ಶಿಸಿ ಆಳುವವರಿಗೆ ನೇರ ಸವಾಲೆಸೆಯಿತು.

ಜಗತ್‌ಪ್ರಸಿದ್ಧ ಕಲಾವಿದ ಎಂ.ಎಫ್. ಹುಸೇನ್ ಹಷ್ಮಿ ಹತ್ಯೆ ಖಂಡಿಸಿ ರಚಿಸಿದ ಕಲಾಕೃತಿಯು ಮುಂಬೈಯಲ್ಲಿ ನಡೆದ ಪ್ರದರ್ಶನದಲ್ಲಿ ರೂ. 10 ಲಕ್ಷಕ್ಕೆ ಮಾರಾಟವಾಗುವ ಮೂಲಕ ಹಷ್ಮಿ ಜನಪ್ರಿಯತೆಗೆ ಸಾಕ್ಷಿಯಾಯಿತು. ಹಷ್ಮಿ ಅಮರರಾದ ನಂತರ ಅಸ್ತಿತ್ವಕ್ಕೆ ಬಂದಿರುವ ಸಹಮತ್(ಸಫ್ದರ್ ಹಷ್ಮಿ ಮೆಮೋರಿಯಲ್ ಟ್ರಸ್ಟ್) ಕಳೆದ ಮೂರುವರೆ ದಶಕಗಳಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯದ ರಕ್ಷಣೆ, ಜಾತಿವಾದ, ಕೋಮುವಾದ, ಭ್ರಷ್ಟಾಚಾರ ಹಾಗೂ ಜನರ ಬದುಕಿಗೆ ಸಂಬಂಧಿಸಿದ ವಿವಿಧ ಕೆಲಸಗಳಲ್ಲಿ ತನ್ನನ್ನು ತೊಡಗಿಸಿಕೊಂಡಿದೆ.

1989 ಎಪ್ರಿಲ್ 1 ರಿಂದ 16ರವರೆಗೆ ಬೆಂಗಳೂರಿನಲ್ಲಿ ಸಮುದಾಯ ಸಫ್ದರ್ ಹಷ್ಮಿ ಜನ್ಮದಿನದ ಅಂಗವಾಗಿ ಏರ್ಪಡಿಸಿದ್ದ ಸಮಗ್ರತಾ ಉತ್ಸವ ವನ್ನು ನಟ ಅನಂತನಾಗ್ ಉದ್ಘಾಟಿಸಿದ್ದರು. ಆ ಉತ್ಸವದಲ್ಲಿ ದಾವಣಗೆರೆ ಸಮುದಾಯ ಹಿರಿಯ ಚಿತ್ರಕಲಾವಿದ ಟಿ.ಬಿ. ಸೊಲಬಕ್ಕನವರ್ ಮಾರ್ಗದರ್ಶನ, ಸಮುದಾಯ ಕಾರ್ಯದರ್ಶಿ ಡಿ.ಯಾಕೂಬ್ ನಾಯಕತ್ವ ಹಾಗೂ ಇಸ್ಮಾಯೀಲ್ ಎಲಿಗಾರ್ ನಿರ್ದೇಶನದ ಮಾನವ ವಿಕಾಸ ಹಾದಿಯ ‘ಜನತೆ’ ನಾಟಕದಲ್ಲಿ ನಾನೂ ಒಬ್ಬ ಕಲಾವಿದನಾಗಿ ಮೊದಲ ಬಾರಿಗೆ ಬೆಂಗಳೂರಿನ ‘ಸಂಸ’ ಬಯಲು ರಂಗಮಂದಿರದಲ್ಲಿ ಅಭಿನಯಿಸಿದ್ದ ದೃಶ್ಯವಿನ್ನೂ ಕಣ್ಣಿಂದ ಮಾಸಿಲ್ಲ.

ಸಫ್ದರ್ ನಮ್ಮಿಂದ ದೂರವಾಗಿ ಮೂರೂವರೆ ದಶಕಗಳೇ ಕಳೆದವು ನಿಜ. ಆದರೆ ದಿಲ್ಲಿ ರಸ್ತೆಯಲ್ಲಿ ಯುವತಿಯರ ಮೇಲೆ ಸಾಮೂಹಿಕ ಅತ್ಯಾಚಾರ, ಮಣಿಪುರದಲ್ಲಿ ಹೆತ್ತಮ್ಮಗಳ ಬೆತ್ತಲೆ ಮೆರವಣಿಗೆ, ಉತ್ತರಪ್ರದೇಶ, ಹರ್ಯಾಣ, ಕರ್ನಾಟಕ ಮೊದಲಾದ ಕಡೆಗಳಲ್ಲಿ ಯುವಕ, ಯುವತಿಯರ ಮೇಲೆ ನೈತಿಕ ಪೊಲೀಸ್ ಗಿರಿ ನಡೆದಾಗ, ದೇಶದೆಲ್ಲೆಡೆ ದಲಿತರ ಮೇಲೆ ನಿರಂತರ ದೌರ್ಜನ್ಯ, ದಬ್ಬಾಳಿಕೆಗಳು ನಡೆಯುತ್ತಿರುವಾಗ, ಅಲ್ಪಸಂಖ್ಯಾತರ ಮೇಲೆ ಏಕ ಸಂಸ್ಕೃತಿಯ ಗೂಂಡಾಗಿರಿ, ಮತಾಂಧತೆಯ ದಾಳಿಗಳು ಎಗ್ಗಿಲ್ಲದೆ ನಡೆಯುವಾಗ ಫ್ಯಾಶಿಸಂನ ಕರಾಳಛಾಯೆಗಳು ದೇಶದ ಉದ್ದಗಲಕ್ಕೂ ಆವರಿಸಿರುವ ಈ ಹೊತ್ತಿನಲ್ಲಿ ಒಬ್ಬ ಹೋರಾಟಗಾರ, ಕಲಾವಿದ, ಪತ್ರಕರ್ತ ಹಾಗೂ ಎಲ್ಲಕ್ಕಿಂತ ಹೆಚ್ಚಾಗಿ ಸದಾ ಜನರ ನೋವುಗಳಿಗೆ ಮಿಡಿಯುವ ಸಂಗಾತಿಯಾಗಿ ಸಫ್ದರ್ ಇರುವಿಕೆ ಹಿಂದೆಂದಿಗಿಂತಲೂ ಇಂದು ತುಂಬಾ ಅವಶ್ಯವಾಗಿತ್ತು. ಅಂತಹ ಪ್ರೀತಿಯ ಸಂಗಾತಿ ಸಫ್ದರ್ ಹಷ್ಮಿಗೆ ಜನುಮ ದಿನದ ಶುಭಾಶಯಗಳು.

share
ಕೆ. ಮಹಾಂತೇಶ, ಬೆಂಗಳೂರು
ಕೆ. ಮಹಾಂತೇಶ, ಬೆಂಗಳೂರು
Next Story
X