Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಮಾನವೀಯತೆಯ ಸಾಕಾರಮೂರ್ತಿ ಹೆನ್ರಿ...

ಮಾನವೀಯತೆಯ ಸಾಕಾರಮೂರ್ತಿ ಹೆನ್ರಿ ಡ್ಯೂನಾಂಟ್

ಡಾ. ಎಚ್.ಎಸ್. ಸುರೇಶ್, ಬೆಂಗಳೂರುಡಾ. ಎಚ್.ಎಸ್. ಸುರೇಶ್, ಬೆಂಗಳೂರು8 May 2026 12:46 PM IST
share
ಮಾನವೀಯತೆಯ ಸಾಕಾರಮೂರ್ತಿ ಹೆನ್ರಿ ಡ್ಯೂನಾಂಟ್
ಇಂದು ವಿಶ್ವ ರೆಡ್ ಕ್ರಾಸ್ ದಿನ

ಯುದ್ಧಗಳು ಅದರಲ್ಲಿ ಭಾಗಿಯಾದ ಯಾವುದೇ ದೇಶದ ಗಡಿಗಳನ್ನು ಬದಲಿಸುತ್ತವೆ. ಕುಗ್ಗಿಸುತ್ತವೆ ಇಲ್ಲವೇ ಹಿಗ್ಗಿಸುತ್ತವೆ.

ಆದರೆ ಇತಿಹಾಸದಲ್ಲಿ ನಡೆದ ಕೆಲವೇ ಯುದ್ಧಗಳು ರಾಜರ ಮನಃಪರಿವರ್ತನೆಗೆ ಕಾರಣವಾಗಿದ್ದೂ ಇದೆ.

ಅಂತಹ ಒಂದು ಯುದ್ಧ ಕ್ರಿಸ್ತ ಪೂರ್ವ 261 ರಲ್ಲಿ ಪ್ರಾಚೀನ ಭಾರತದಲ್ಲಿ ನಡೆದು ಅದು ಕಳಿಂಗ ಯುದ್ಧ ವೆಂದೇ ಪ್ರಖ್ಯಾತವಾಗಿದೆ. ಅಪಾರ ಸಾವು ನೋವಿಗೆ ಕಾರಣವಾದ ಯುದ್ಧದಿಂದ ನೊಂದ ಸಾಮ್ರಾಟ್ ಅಶೋಕ ಶಾಂತಿ, ಅಹಿಂಸೆಗಳ ಸಾಕಾರವಾಗಿದ್ದ ಬೌದ್ಧ ಧರ್ಮಾವಲಂಬಿಯಾಗಿ, ಆ ಧರ್ಮದ ಗಡಿಗಳನ್ನು ಏಶ್ಯ ಖಂಡಕ್ಕೆ ಯುದ್ಧವಲ್ಲದ ಸದ್ಭಾವನೆಯಿಂದ ವಿಸ್ತರಿಸಿದ. ಅಂತಹದೇ ಮತ್ತೊಂದು ಘಟನೆ ‘ರೆಡ್ ಕ್ರಾಸ್’ನ ಜನನಕ್ಕೆ ಕಾರಣವಾಯಿತು!

ಇಟಲಿ ಮತ್ತು ಫ್ರಾನ್ಸ್ ಹಾಗೂ ಆಸ್ಟ್ರಿಯಾ ನಡುವೆ 24 ಜೂನ್ 1859ರಂದು ಸೋಲ್ಫೆರಿನೋ ಎಂಬಲ್ಲಿ ಮೂರನೇ ನೆಪೋಲಿಯನ್ ನಡೆಸಿದ 15 ತಾಸುಗಳ ಘೋರ ಕದನದ ಪರಿಣಾಮಗಳನ್ನು ಕಣ್ಣಾರೆ ಕಂಡ ಸ್ವಿಸ್ ವ್ಯಾಪಾರಿ ಜೀನ್ ಹೆನ್ರಿ ಡ್ಯೂನಾಂಟ್ ನಡೆಸಿದ ಮಾನವೀಯ ಪ್ರಯತ್ನಗಳ ಫಲವೇ ಅಂತರ್‌ರಾಷ್ಟ್ರೀಯ ರೆಡ್ ಕ್ರಾಸ್ ಸಂಸ್ಥೆ.

ಆಗ ಫ್ರಾನ್ಸ್‌ನ ವಶದಲ್ಲಿದ್ದ ಅಲ್ಜೀರಿಯಾದಲ್ಲಿ ಹಿಟ್ಟಿನ ಗಿರಣಿ ನಡೆಸಲು ನೆಪೋಲಿಯನ್‌ನ ಅನುಮತಿ ಪಡೆಯಲು ಬಂದಿದ್ದ ಡ್ಯೂನಾಂಟ್, ಯುದ್ಧದಲ್ಲಿ ಮಡಿದವರ ಮತ್ತು ಗಾಯಗೊಂಡು ನರಳುತ್ತಿರುವವರ ನಿಸ್ಸಹಾಯಕ ಸ್ಥಿತಿ ನೋಡಿ ಸ್ಥಳೀಯ ಹಳ್ಳಿಗರ ನೆರವಿನಿಂದ ಎತ್ತಿನ ಗಾಡಿಗಳಲ್ಲಿ ತಂದು ಮನೆ, ಚರ್ಚು, ಧರ್ಮಾಲಯಗಳಲ್ಲಿ ಇರಿಸಿ ಚಿಕಿತ್ಸೆ ಮಾಡಿಸಿದ.

ದಿನ ಕಳೆದಂತೆ ಯುದ್ಧದ ನೆನಪು ಮಾಸಿತು. ಆದರೆ ಯುದ್ಧದ ಭೀಕರ ಪರಿಣಾಮಗಳನ್ನು ಸ್ವತಃ ಕಂಡ ಡ್ಯೂನಾಂಟ್ ಮನಸ್ಸಿನಲ್ಲಿ ಎರಡು ವಿಚಾರಗಳು ಮೂಡಿದವು.

ಅಂತರ್‌ರಾಷ್ಟ್ರೀಯ ಸ್ವಯಂ ಸೇವಕರ ಪಡೆಯನ್ನು ಎಲ್ಲ ದೇಶಗಳಲ್ಲೂ ಸಂಘಟಿಸಿ, ಅದು ಯುದ್ಧ ದಲ್ಲಿನ ಗಾಯಾಳುಗಳನ್ನು ಯಾವುದೇ ರಾಷ್ಟ್ರೀಯತೆ ಯನ್ನು ಗಮನಿಸದೆ, ಸೇವೆ ಸಲ್ಲಿಸುವುದು ಮತ್ತು ಎಲ್ಲ ದೇಶಗಳೂ ಗಾಯಾಳು ಸೈನಿಕರು, ವೈದ್ಯರು ಮತ್ತು ಪರಿಹಾರ ಕಾರ್ಯಗಳಲ್ಲಿ ತೊಡಗಿರುವವರನ್ನು ತಟಸ್ಥರೆಂದು ಪರಿಗಣಿಸುವ ಒಪ್ಪಂದ ಕ್ಕೆ ಸಹಿಹಾಕುವುದು.

ಡ್ಯೂನಾಂಟ್ ಸೊಲ್ಫೆರಿನೊ ನೆನಪುಗಳು ಎಂಬ ಪುಸ್ತಕವನ್ನು ಅಚ್ಚು ಹಾಕಿಸಿ ಅದನ್ನು ವಿಶ್ವದ ಪ್ರಮುಖರಿಗೆಲ್ಲಾ ಕಳುಹಿಸಿದ.

26 ಅಕ್ಟೋಬರ್ 1863ರಂದು ಜಿನೀವಾದಲ್ಲಿ 16 ರಾಷ್ಟ್ರಗಳು ಸಭೆ ಸೇರಿ ‘ಗಾಯಾಳು ಸೈನಿಕರ ಚಿಕಿತ್ಸಾ ಸಂಸ್ಥೆ’ಯನ್ನು ಸ್ಥಾಪಿಸಿ, ಅದೇ ಮುಂದೆ ‘ರೆಡ್ ಕ್ರಾಸ್’ ಆಗಿ ಪರಿವರ್ತನೆ ಆಯಿತು.

ಈ ಪ್ರಯತ್ನಗಳೇ ಮುಂದುವರಿದು 12 ಆಗಸ್ಟ್ 1864ರಲ್ಲಿ ಮೊದಲ ಜಿನೀವಾ ಒಪ್ಪಂದದಿಂದ ಪ್ರಾರಂಭಿಸಿ 12 ಆಗಸ್ಟ್ 1949ರ ಅವಧಿಯಲ್ಲಿ ನಡೆದ ನಾಲ್ಕು ಜಿನೀವಾ ಒಪ್ಪಂದಗಳು ಪ್ರಪಂಚದ ಯುದ್ಧ ನೀತಿ ನಿಯಮಗಳನ್ನು ರೂಪಿಸಿದವು

ರೆಡ್ ಕ್ರಾಸ್‌ಗಾಗಿಯೇ ತನ್ನೆಲ್ಲ ಬದುಕು ಮತ್ತು ಆಸ್ತಿಯನ್ನು ಸವೆಸಿದ ಡ್ಯೂನಾಂಟ್ ತನ್ನ ನಲ್ವತ್ತೆಂಟನೇ ವಯಸ್ಸಿನಲ್ಲೇ ಬೀದಿಪಾಲಾದ.

ಮುಂದಿನ ಹನ್ನೊಂದು ವರ್ಷಗಳು ಯಾರ ಕಣ್ಣಿಗೂ ಬೀಳಲಿಲ್ಲ. ಪೂರ್ವ ಸ್ವಿಟ್ಸರ್‌ಲ್ಯಾಂಡ್‌ನ ಹಯಿಡೇನ್ ಎಂಬ ಸಣ್ಣ ನಗರದಲ್ಲಿ ಆತ ಇರುವುದು ಗಮನಕ್ಕೆ ಬಂದಿತು.

ಇದಾದ ಎಂಟು ವರ್ಷಗಳನಂತರ ಒಬ್ಬ ಪತ್ರಕರ್ತ ಆತನನ್ನು ಸಂದರ್ಶಿಸಿ ವ್ಯಾಪಕ ಪ್ರಚಾರ ನೀಡಿದ. ಆರು ವರ್ಷಗಳ ತರುವಾಯ ಅಂದರೆ ಅವನ 73ನೇ ವಯಸ್ಸಿನಲ್ಲಿ (1901ರಲ್ಲಿ) ಮೊದಲ ನೊಬೆಲ್ ಶಾಂತಿ ಪ್ರಶಸ್ತಿ ಡ್ಯೂನಾಂಟ್‌ನನ್ನು ಹುಡುಕಿಕೊಂಡು ಬಂದಿತು.

ಪ್ರಶಸ್ತಿ ಡ್ಯೂನಾಂಟ್ ಮೇಲೆ ಯಾವ ಪರಿಣಾಮವನ್ನೂ ಬೀರಲಿಲ್ಲ. ಹಲವು ವರ್ಷಗಳ ಕಾಲ, 1910 ಅಕ್ಟೋಬರ್ 30ರಂದು ತಾನು ಸಾಯುವವರೆಗೂ ಹಳ್ಳಿಯೊಂದರ ಶುಶ್ರೂಷಾ ಗೃಹ ವೊಂದರಲ್ಲಿದ್ದ.

ಅವನ ಇಚ್ಛೆಯಂತೆ ಅವನು ಸತ್ತಾಗ ಸಭೆ ಮಾಡಲಿಲ್ಲ. ‘ಮನೆಯ ನಾಯಿಯೊಂದನ್ನು ಮಣ್ಣು ಮಾಡುವಂತೆ ನನ್ನನ್ನು ಮಣ್ಣು ಮಾಡಿ’ ಎಂಬ ಡ್ಯೂನಾಂಟ್‌ನ ಆಶಯದಂತೆ ಅವನ ಅಂತ್ಯಕ್ರಿಯೆ ನಡೆಯಿತು. ಪ್ರಶಸ್ತಿ ಹಣವನ್ನೂ ಆತ ಮುಟ್ಟಲಿಲ್ಲ. ಆ ಧನ ರಾಶಿಯನ್ನು ತಾನು ಮಾಡಿದ ಸಾಲಗಳನ್ನು ತೀರಿಸಲು, ತನ್ನ ದೇಶದ ಸೇವಾ ಸಂಸ್ಥೆಗಳಿಗೆ, ಕಾಯಿಲೆಯಿಂದ ನರಳುತ್ತಿರುವ ಬಡವರಿಗೆ, ತನ್ನನ್ನು ಈವರೆಗೆ ನೋಡಿಕೊಂಡ ಕುಟುಂಬಕ್ಕೆ ಮತ್ತು ತಾನಿರುವ ಶುಶ್ರೂಷಾ ಗೃಹಕ್ಕೆ ಹಾಗೂ ಅತ್ಯಂತ ಬಡವನೊಬ್ಬನಿಗೆ ಒಂದು ಉಚಿತ ಹಾಸಿಗೆ-ಊಟದ ವ್ಯವಸ್ಥೆಗೆ ವಿನಿಯೋಗಿಸುವಂತೆ ಉಯಿಲು ಬರೆದಿದ್ದ . ‘‘ಎಲ್ಲಿ ಹೋಯಿತು ಮಾನವೀಯತೆ?’’ ಅಂದದ್ದು ಸಾವಿನ ಕಾಲದ ಅವನ ಅಂತಿಮ ಉದ್ಗಾರವಾಗಿತ್ತು!

8 ಮೇ 1928ರಂದು ಜಿನೀವಾದಲ್ಲಿ ಜೀನ್ ಜೇಕ್ಸ್ ಮತ್ತು ಅಂತೈನೆಟ್ ಡ್ಯೂನಾಂಟ್ ದಂಪತಿಗೆ ಜನಿಸಿದ ಹೆನ್ರಿ ಡ್ಯೂನಾಂಟ್, ಧರ್ಮ ಶ್ರದ್ಧೆ ಮತ್ತು ಸೇವಾ ಭಾವನೆಗಳನ್ನು ತನ್ನ ಹೆತ್ತವರಿಂದಲೇ ಪಡೆದಿದ್ದ. ಅವನ ಜನ್ಮದಿನವನ್ನು ಜಗತ್ತಿನಾದ್ಯಂತ ರೆಡ್ ಕ್ರಾಸ್ ದಿನವನ್ನಾಗಿ ಆಚರಿಸಲಾಗುತ್ತಿದೆ.

Tags

Henry DunantHumanity
share
ಡಾ. ಎಚ್.ಎಸ್. ಸುರೇಶ್, ಬೆಂಗಳೂರು
ಡಾ. ಎಚ್.ಎಸ್. ಸುರೇಶ್, ಬೆಂಗಳೂರು
Next Story
X