Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಕರಾವಳಿ ಕರ್ನಾಟಕ-ಮುಂಬೈ ನಡುವಿನ...

ಕರಾವಳಿ ಕರ್ನಾಟಕ-ಮುಂಬೈ ನಡುವಿನ ಭಾವನಾತ್ಮಕ ‘ಸಂಪರ್ಕ ಸೇತು’ ರೈಲಿಗೆ ಹೈಟೆಕ್ ಸ್ಪರ್ಶ!

27 ವರ್ಷಗಳ ಬಳಿಕ ಮತ್ಸ್ಯಗಂಧ ಎಕ್ಸ್‌ಪ್ರೆಸ್ ಬೋಗಿಗಳು ಮೇಲ್ದರ್ಜೆಗೆ

ಯೋಗೀಶ್ ಕುಂಭಾಸಿಯೋಗೀಶ್ ಕುಂಭಾಸಿ10 Feb 2025 12:17 PM IST
share
ಕರಾವಳಿ ಕರ್ನಾಟಕ-ಮುಂಬೈ ನಡುವಿನ ಭಾವನಾತ್ಮಕ ‘ಸಂಪರ್ಕ ಸೇತು’ ರೈಲಿಗೆ ಹೈಟೆಕ್ ಸ್ಪರ್ಶ!
ಫೆ.17ರಂದು ಮಂಗಳೂರಿನಿಂದ ಹಾಗೂ ಫೆ.18ರಂದು ಮುಂಬೈ ಲೋಕಮಾನ್ಯ ತಿಲಕ್ ನಿಲ್ದಾಣದಿಂದ ಈ ರೈಲು ಆಧುನಿಕ 22 ಎಲ್‌ಎಚ್‌ಬಿ ಕೋಚ್‌ಗಳೊಂದಿಗೆ ಓಡಾಟ ನಡೆಸಲಿದೆ ಎಂದು ತಿಳಿದು ಬಂದಿದೆ.

ಕುಂದಾಪುರ, ಫೆ.9: ಕರಾವಳಿ ಭಾಗದ ಜನತೆಯ ದಶಕಗಳ ಕನಸಾದ ಮುಂಬೈ ಹಾಗೂ ಮಂಗಳೂರನ್ನು ನೇರವಾಗಿ ಸಂಪರ್ಕಿಸುವ ಕೊಂಕಣ ರೈಲು ಮಾರ್ಗದಲ್ಲಿ 1998ರ ಮೇ 1ರಂದು ಸಂಚರಿಸಿದ ಮೊತ್ತಮೊದಲ ‘ಮತ್ಸ್ಯಗಂಧ ಎಕ್ಸ್‌ಪ್ರೆಸ್’ ರೈಲು ತನ್ನ ಓಡಾಟ ಪ್ರಾರಂಭಿಸಿದ 27 ವರ್ಷಗಳ ಬಳಿಕ ಹೈಟೆಕ್ ಸ್ಪರ್ಶ ಪಡೆಯುತ್ತಿದೆ. ಫೆ.17ರಂದು ಮಂಗಳೂರಿನ ಸೆಂಟ್ರಲ್ ನಿಲ್ದಾಣದಿಂದ ಮುಂಬೈಯ ಲೋಕಮಾನ್ಯ ತಿಲಕ್ ಟರ್ಮಿನಸ್‌ಗೆ ಪ್ರಯಾಣ ಬೆಳೆಸುವ ಮತ್ಸ್ಯಗಂಧ ಎಕ್ಸ್‌ಪ್ರೆಸ್ ಅತ್ಯಾಧುನಿಕ ಜರ್ಮನ್ ತಂತ್ರಜ್ಞಾನದ ಎಲ್‌ಎಚ್‌ಬಿ (ಲಿಂಕ್ ಹಾಫ್‌ಮನ್‌ಬುಷ್) ಕೋಚ್‌ಗಳೊಂದಿಗೆ ಸಂಚರಿಸಲಿದೆ.

ಸುಮಾರು ಎರಡೂವರೆ ದಶಕಗಳಿಂದ ಕರಾವಳಿ ಕರ್ನಾಟಕ ಹಾಗೂ ಮುಂಬೈ ನಡುವಿನ ಸಂಪರ್ಕ ಕೊಂಡಿಯಾಗಿರುವ ‘ಮತ್ಸ್ಯಗಂಧ ಎಕ್ಸ್‌ಪ್ರೆಸ್’ ರೈಲು ಹಳೆಯದಾದ ಐಆರ್‌ಎಸ್ ಕೋಚ್‌ಗಳೊಂದಿಗೆ ಇದುವರೆಗೆ ಸಂಚರಿಸುತ್ತಿದ್ದು, ಶಿಥಿಲಾವಸ್ಥೆಗೆ ತಲುಪಿತ್ತು. ಸಂಚಾರದ ಬೆಳ್ಳಿಹಬ್ಬ ಪೂರ್ಣಗೊಂಡಾಗಲೇ ಕೋಚ್‌ಗಳನ್ನು ಬದಲಿಸುವಂತೆ ಕೊಂಕಣ ರೈಲ್ವೆ ನಿಗಮದ ಮೇಲೆ ಎಲ್ಲಾ ದಿಕ್ಕುಗಳಿಂದಲೂ ಒತ್ತಡ ಕೇಳಿಬಂದಿತ್ತು. ಈ ನಡುವೆ ಅವಘಡದಿಂದಾಗಿ ಶಿಥಿಲಗೊಂಡಿದ್ದ ರೈಲಿನ ಒಂದೆರಡು ಬೋಗಿಗಳನ್ನು ಬದಲಿಸಲೇ ಬೇಕಾದ ಅನಿವಾರ್ಯತೆಯೂ ಇತ್ತು.

ಕರಾವಳಿ ಕನ್ನಡಿಗರಿಗೆ ಹೆಚ್ಚು ಆಪ್ತವೆನಿಸಿರುವ ಮತ್ಸ್ಯ ಗಂಧ ಎಕ್ಸ್‌ಪ್ರೆಸ್ ರೈಲಿನ ಬೋಗಿಗಳನ್ನು ಬದಲಿಸುವಂತೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ರಿಗೆ ಆ.19ರಂದು ಪತ್ರ ಬರೆದು ಒತ್ತಾಯಿಸಿದ್ದರು. ಅಕ್ಟೋಬರ್‌ನಲ್ಲಿ ರೈಲ್ವೆ ಸಚಿವಾಲಯ ಮತ್ಸ್ಯಗಂಧ ರೈಲಿಗೆ ಎಲ್‌ಬಿಎಚ್ ಕೋಚ್‌ಗಳ ಅಳವಡಿಕೆಗೆ ಹಸಿರು ನಿಶಾನೆ ತೋರಿಸಿತ್ತು.

ಅಂತೂ 27 ವರ್ಷಗಳ ಸುದೀರ್ಘ ಸಂಚಾರದ ಬಳಿಕ ಮತ್ಸ್ಯಗಂಧ ರೈಲಿಗೆ ಹೈಟೆಕ್ ಸ್ಪರ್ಶ ನೀಡಲಾಗಿದೆ. ಜರ್ಮನ್ ವಿನ್ಯಾಸದ ಎಲ್‌ಎಚ್‌ಬಿ ಕೋಚ್‌ಗಳು ಆರಾಮದಾಯಕ ಹಾಗೂ ಸುಖಕರ ಸುದೀರ್ಘ ಪ್ರಯಾಣಕ್ಕೆ ಹೇಳಿ ಮಾಡಿಸಿದಂತಿವೆ. ಅಧಿಕ ವೇಗ ಹಾಗೂ ಹೆಚ್ಚು ಸುರಕ್ಷಿತವೆನಿಸಿದ ಈ ಕೋಚ್‌ಗಳಿಂದ ಶಬ್ದಮಾಲಿನ್ಯವೂ ಕಡಿಮೆ.

27 ವರ್ಷಗಳ ಸುದೀರ್ಘ ಸಂಚಾರ: ಸ್ವಾತಂತ್ರ್ಯದ ಸುವರ್ಣ ಮಹೋತ್ಸವದ ಸಂದರ್ಭದಲ್ಲಿ ಅಂದಿನ ಕೇಂದ್ರ ಸಚಿವ ದಿ.ಜಾರ್ಜ್ ಫೆರ್ನಾಂಡಿಸ್‌ರ ಪರಿಶ್ರಮದಿಂದ ಕರಾವಳಿ ಕನ್ನಡಿಗರ ಕೊಂಕಣ ರೈಲು ಮಾರ್ಗದ ಕನಸು ನನಸಾಗಿದ್ದು, ಅಂದಿನ ಪ್ರಧಾನಮಂತ್ರಿ ದಿ.ಅಟಲ್ ಬಿಹಾರಿ ವಾಜಪೇಯಿ 1998ರ ಮೇ 1ರಂದು ಕೊಂಕಣ ರೈಲ್ವೆ ನಿಗಮವನ್ನು ಮುಂಬೈಯಲ್ಲಿ ರಾಷ್ಟ್ರಕ್ಕೆ ಅರ್ಪಿಸಿದ ಸಂದರ್ಭದಲ್ಲೇ ಉದ್ಘಾಟನೆಗೊಂಡ ಮತ್ಸ್ಯಗಂಧ ಎಕ್ಸ್‌ಪ್ರೆಸ್ ರೈಲು ಈ ಮಾರ್ಗದಲ್ಲಿ ಸಂಚರಿಸಿದ ಮೊದಲ ರೈಲಾಗಿತ್ತು. ಅಂದಿನಿಂದ ಇಂದಿನವರೆಗೂ ಸುದೀರ್ಘ ಕಾಲ ಮಹಾರಾಷ್ಟ್ರ ಹಾಗೂ ಕರ್ನಾಟಕದ ಕರಾವಳಿಗರನ್ನು ಭಾವನಾತ್ಮಕವಾಗಿ ಈ ರೈಲು ಬೆಸೆದಿದೆ.

ಕೊಂಕಣ ರೈಲು ಮಾರ್ಗದ ಆರಂಭಕ್ಕೆ ಮೊದಲು ಕರಾವಳಿಯ ರೈಲು ಪ್ರಯಾಣಿಕರು ಮುಂಬೈಗೆ ರೈಲಿನಲ್ಲಿ ತೆರಳಲು ಕಡೂರು ಮೂಲಕ 40 ಗಂಟೆ ಪ್ರಯಾಣಿಸಬೇಕಿತ್ತು. ಬಸ್ ಪ್ರಯಾಣಿಕರೂ 30 ಗಂಟೆ ಕುಳಿತು ಮುಂಬೈಗೆ ತೆರಳಬೇಕಿತ್ತು.

ಅಪಘಾತವಾದರೂ ಜನರು ಸುರಕ್ಷಿತ

ಜರ್ಮನ್ ವಿನ್ಯಾಸದ ಎಲ್‌ಎಚ್‌ಬಿ ಕೋಚ್‌ಗಳು ರೈಲಿಗೆ ಆಕರ್ಷಕ ವಿನ್ಯಾಸವನ್ನು ನೀಡಲಿದ್ದು, ಇದರಲ್ಲಿ ಸುರಕ್ಷಿತ ಪ್ರಯಾಣಕ್ಕೆ ವಿಶೇಷ ಆದ್ಯತೆ ನೀಡಲಾಗಿದೆ. ಆರಾಮದ, ಸುಖಕರ ದೀರ್ಘ ಪ್ರಯಾಣಕ್ಕೆ ಇದು ಹೇಳಿಮಾಡಿಸಿದಂತಿದೆ. ಆಧುನಿಕ ತಂತ್ರಜ್ಞಾನದ ಕೋಚ್‌ಗಳನ್ನು ಹೊಂದಿರುವ ಈ ರೈಲು ಅಕಸ್ಮಾತ್ ಅಪಘಾತಕ್ಕೊಳಗಾದರೂ ಕೋಚ್‌ಗಳು ಪಲ್ಟಿ ಆಗದೆ ಝಿಗ್‌ಝ್ಯಾಗ್ ರೀತಿಯಲ್ಲಿ ವರ್ಗೀಕರಿಸಿ ನಿಲ್ಲುವುದರಿಂದ ಪ್ರಯಾಣಿಕರು ಸುರಕ್ಷಿತರಾಗಿರುತ್ತಾರೆ.

ಹೊಸ ಕೋಚ್‌ಗಳಲ್ಲಿ ಶಬ್ದದ ಸಮಸ್ಯೆ ಕಡಿಮೆ. ಶೌಚಾಲಯ ವ್ಯವಸ್ಥೆ ಸಂಪೂರ್ಣವಾಗಿ ಬದಲಾಗಲಿದ್ದು, ಆಧುನಿಕ ಶೈಲಿಯನ್ನು ಅಳವಡಿಸಲಾಗಿದೆ. ಫೆ.17ರಂದು ಉಡುಪಿಯಲ್ಲಿ ರೈಲನ್ನು ಸ್ವಾಗತಿಸಿ, ಮುಂದಿನ ರೈಲ್ವೆ ಯೋಜನೆಗಳ ಕುರಿತು ಅಧಿಕಾರಿಗಳು ಹಾಗೂ ರೈಲು ಪ್ರಯಾಣಿಕರು, ಬಳಕೆದಾರರೊಂದಿಗೆ ಚರ್ಚೆ ನಡೆಸಲಾಗುವುದು. ಮತ್ಸ್ಯಗಂಧ ರೈಲಿನ ಬೆನ್ನಲ್ಲೇ ಮಹಾರಾಷ್ಟ್ರಕ್ಕೆ ತೆರಳುವ ಮಂಗಳೂರು ಎಕ್ಸ್‌ಪ್ರೆಸ್ ರೈಲು ಮಾ.1 ರಿಂದ ನೂತನ ಎಲ್‌ಎಚ್‌ಬಿ ಕೋಚ್‌ಗಳೊಂದಿಗೆ ಪ್ರಯಾಣ ಬೆಳೆಸಲಿದೆ. ಈ ಎಲ್ಲಾ ಅಭಿವೃದ್ಧಿ ಕಾರ್ಯಗಳಿಗೆ ಪ್ರಧಾನಿ ನರೇಂದ್ರ ಮೋದಿ, ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹಾಗೂ ಸಚಿವ ವಿ.ಸೋಮಣ್ಣ ಬೆಂಬಲಿಸಿ ಸಹಕರಿಸಿದ್ದಾರೆ. ಹಾಗೆ ಕಾಲಕಾಲಕ್ಕೆ ರೈಲ್ವೆ ಅಭಿವೃದ್ಧಿ ಯೋಜನೆಗಳ ಕುರಿತು ರೈಲ್ವೆ ಬಳಕೆದಾರರ ಸಮಿತಿ ಅಗತ್ಯ ಸಲಹೆ ನೀಡುತ್ತಿದೆ.

-ಕೋಟ ಶ್ರೀನಿವಾಸ ಪೂಜಾರಿ, ಸಂಸದ

share
ಯೋಗೀಶ್ ಕುಂಭಾಸಿ
ಯೋಗೀಶ್ ಕುಂಭಾಸಿ
Next Story
X