Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಉನ್ನತ ಶಿಕ್ಷಣ ಇಲಾಖೆ ವರ್ಗಾವಣೆಯಲ್ಲಿ...

ಉನ್ನತ ಶಿಕ್ಷಣ ಇಲಾಖೆ ವರ್ಗಾವಣೆಯಲ್ಲಿ ಅಧಿಕಾರಿಗಳ ತಂತ್ರ; ಪ್ರಾಧ್ಯಾಪಕರು ಅತಂತ್ರ

ಹಾಲಮ್ಮ ಕೆ. ಹಿರೆಮಠ್ಹಾಲಮ್ಮ ಕೆ. ಹಿರೆಮಠ್20 Feb 2025 12:28 PM IST
share
ಉನ್ನತ ಶಿಕ್ಷಣ ಇಲಾಖೆ ವರ್ಗಾವಣೆಯಲ್ಲಿ ಅಧಿಕಾರಿಗಳ ತಂತ್ರ; ಪ್ರಾಧ್ಯಾಪಕರು ಅತಂತ್ರ

ಉನ್ನತ ಶಿಕ್ಷಣ ಇಲಾಖೆಯು ವಿಶೇಷ ಕಡ್ಡಾಯ ವರ್ಗಾವಣೆ ತಿದ್ದುಪಡಿ ಎಂಬ ನೆಪದಲ್ಲಿ, ಪ್ರಾಧ್ಯಾಪಕರಿಗೆ ನರಕದ ದರ್ಶನ ಮಾಡಿಸಿದೆ. ವರ್ಗಾವಣೆಯಲ್ಲಿ ಸರಕಾರದ ನಡಾವಳಿಗಳನ್ನು ಬದಿಗೊತ್ತಿ, ಇಲಾಖೆ ಅಧಿಕಾರಿಗಳು, ತಮ್ಮ ಮಟ್ಟದಲ್ಲೇ ಒಂದು ವರ್ಗಾವಣೆಯ ಕರಡನ್ನು ಮನಬಂದಂತೆ ರೂಪಿಸಿಕೊಂಡು ಪ್ರಾಧ್ಯಾಪಕರುಗಳಿಗೆ ಪರದಾಟದ ಸ್ಥಿತಿಯನ್ನು ತಂದೊಡ್ಡಿದ್ದಾರೆ.

ಈ ವಿಶೇಷ ಕಡ್ಡಾಯ ವರ್ಗಾವಣೆ 2024ರ ನಿಯಮದಲ್ಲಿ ಸುಮಾರು 430 ಬೋಧಕ ಸಿಬ್ಬಂದಿ ವರ್ಗಾವಣೆಗೊಂಡಿದ್ದು, ಈ ತಿದ್ದುಪಡಿಯ ವಿರುದ್ಧ ಈಗಾಗಲೇ 88 ಪ್ರಾಧ್ಯಾಪಕರು ನ್ಯಾಯಾಲಯದ ಮೊರೆಹೋಗಿದ್ದಾರೆ. ಇನ್ನೂ ನೂರಾರು ಪ್ರಾಧ್ಯಾಪಕರು ನ್ಯಾಯಾಂಗದ ಮೆಟ್ಟಿಲೇರಲು ತಯಾರಾಗುತ್ತಿದ್ದಾರೆ. ಇಲಾಖೆಯು ರೂಪಿಸಿದ ವಿಶೇಷ ಕಡ್ಡಾಯ ವರ್ಗಾವಣೆ ನೀತಿಯು ಸುಮಾರು ಶೇ. 80 ಪ್ರಾಧ್ಯಾಪಕರಿಗೆ ತೊಂದರೆಯನ್ನುಂಟುಮಾಡಿದೆ ಎಂದು ತಮ್ಮ ಅಳಲನ್ನು ವ್ಯಕ್ತಪಡಿಸುತ್ತಾರೆ.

ಈ ವಿಶೇಷ ಕಡ್ಡಾಯ ವರ್ಗಾವಣೆ ಅಧಿಸೂಚನೆಯನ್ನು ಇಲಾಖೆಯು ಕಳೆದ ಫೆಬ್ರವರಿ ತಿಂಗಳಿನಲ್ಲಿ ಹೊರಡಿಸಿ, ಕೌನ್ಸಿಲಿಂಗ್ ಕಾರ್ಯ ಕೈಗೊಳ್ಳದೆ ಹಾಗೆಯೇ ಇಟ್ಟು, ಆಗಸ್ಟ್ ತಿಂಗಳಿನಲ್ಲಿ ಬೇರೊಂದು ಸಾರ್ವಜನಿಕ ಹಿತಾಸಕ್ತಿಯ ವರ್ಗಾವಣೆ ಅಧಿಸೂಚನೆಯನ್ನು ಹೊರಡಿಸಿ, ಸ್ಥಳ ನಿಯುಕ್ತಿ ಕಾರ್ಯ ಮುಗಿಸಿತು. ಆನಂತರ, ಅಕ್ಟೋಬರ್ ತಿಂಗಳಿನಲ್ಲಿ ಅರ್ಧಕ್ಕೆ ನಿಲ್ಲಿಸಿದ್ದ ಫೆಬ್ರವರಿಯ ವಿಶೇಷ ಕಡ್ಡಾಯ ವರ್ಗಾವಣೆಯನ್ನು ಮತ್ತೆ ಚಾಲ್ತಿಗೊಳಿಸಿತು. ಮೊದಲು ಹೊರಡಿಸಲಾದ ವರ್ಗಾವಣೆ ಅಧಿಸೂಚನೆಯನ್ನು ರದ್ದು ಪಡಿಸದೆ ಅದನ್ನು ಹಾಗೇ ಇಟ್ಟು ಮತ್ತೊಂದು ನಿಯಮದ ವರ್ಗಾವಣೆ ಅಧಿಸೂಚನೆ ಹೊರಡಿಸುವುದರ ಹಿಂದೆ, ಕೆಲವು ಆಮಿಷಕ್ಕೆ ಮತ್ತು ತನಗೆ ಬೇಕಾದವರಿಗೆ ಅನುಕೂಲ ಮಾಡಿಕೊಡಲು ಇಲಾಖೆಯ ಅಧಿಕಾರಿಗಳ ಕೈವಾಡ ಇದೆಯೆಂದು ಹಲವರು ತಮ್ಮ ಅನುಮಾನ ವ್ಯಕ್ತಪಡಿಸಿರುತ್ತಾರೆ.

ಸರಕಾರದ ಇತರ ಇಲಾಖೆಗಳಲ್ಲಿ, ಒಂದೇ ವರ್ಗಾವಣೆ ನೀತಿ ಇದ್ದರೆ, ಕಾಲೇಜು ಶಿಕ್ಷಣ ಇಲಾಖೆಯ ಅಧಿಕಾರಿಗಳು, ತಮ್ಮ ಆಪ್ತಬಳಗಕ್ಕಾಗಿ ಒಂದು ವರ್ಗಾವಣೆ ನೀತಿ ಮತ್ತು ಇತರ ಎಲ್ಲಾ ಸಿಬ್ಬಂದಿಗಾಗಿ ಒಂದು ವರ್ಗಾವಣೆ ನೀತಿ ರೂಪಿಸುವ ಮತ್ತು ಬದಲಿಸುವ ಪರಿಪಾಠವನ್ನು ರೂಡಿಸಿಕೊಂಡಿದೆ. ಕೆಲವರಿಗೆ ವಲಯ ಮುಕ್ತ ವರ್ಗಾವಣೆ ನೀತಿ, ಕೆಲವರಿಗೆ ವಲಯ ನಿರ್ಬಂಧಿತ ವರ್ಗಾವಣೆ ನಿಯಮವನ್ನು ರೂಪಿಸಲಾಗಿದೆ.

ವಿಶೇಷ ಕಡ್ಡಾಯ ವರ್ಗಾವಣೆಯಲ್ಲಿ ಇ ವಲಯದವರನ್ನು ಡಿ ವಲಯ ಮಾತ್ರ ಆಯ್ಕೆ ಮಾಡಬೇಕೆಂದು ನಿರ್ಬಂಧ ವಿಧಿಸಲಾಗಿದೆ ಹಾಗೂ ಡಿ ವಲಯದವರನ್ನು ಸಿ ವಲಯಕ್ಕೆ ಮಾತ್ರ ಹೋಗಬೇಕೆಂದು ತಿಳಿಸಲಾಗಿದೆ. ಇಲ್ಲಿ ಶೇ. 99ರಷ್ಟು ಇ ಮತ್ತು ಡಿ ವಲಯಗಳ ಪ್ರಾಧ್ಯಾಪಕರನ್ನು ಮಾತ್ರ ವರ್ಗಾವಣೆ ಮಾಡಲಾಗುತ್ತದೆ. ನಂತರ ಮತ್ತೊಂದು ವರ್ಗಾವಣೆ ನೀತಿಯಲ್ಲಿ ಮುಕ್ತ ವಲಯ ಆಯ್ಕೆಗೆ ಅವಕಾಶ ಕೊಟ್ಟು, ಸಿ, ಬಿ, ಮತ್ತು ಎ ವಲಯದವರಿಗೆ ವರ್ಗಾವಣೆ ಮಾಡಲಾಗುತ್ತದೆ. ಹೀಗಾಗಿ, ಈಗಾಗಲೇ ಸುಮಾರು 7 ರಿಂದ 12 ವರ್ಷಗಳ ಕಾಲ ಇ ವಲಯದಲಿ ಕರ್ತವ್ಯ ನಿರ್ವಹಿಸಿದ ಪ್ರಾಧ್ಯಾಪಕರು ಇವರ ದ್ವಿ-ವರ್ಗಾವಣೆ ನೀತಿಯಿಂದಾಗಿ ಮತ್ತೆ 7ರಿಂದ 12 ವರ್ಷಗಳ ಕಾಲ ಡಿ ವಲಯದಲ್ಲಿಯೇ ಉಳಿದುಕೊಳ್ಳುತ್ತಾರೆ. ಬಿ ಮತ್ತು ಎ ವಲಯಗಳಲ್ಲಿ ದುಡಿಯಬೇಕೆನ್ನುವ ಆಸೆ ಹಲವರ ಸೇವಾವಧಿಯಲ್ಲಿ ಸಾಧ್ಯವಾಗುವುದೇ ಇಲ್ಲ. ಇಲಾಖೆಯ ಅವೈಜ್ಞಾನಿಕ ವಲಯ ವರ್ಗಾವಣೆ ನೀತಿಯಿಂದಾಗಿ ಕೆಳ ಸ್ಥರದ ವಲಯಗಳಲ್ಲಿ ದುಡಿಯುತ್ತಿರುವ ಪ್ರಾಧ್ಯಾಪಕರು, ಕೆಳ ಸ್ತರದ ವಲಯಗಳಲ್ಲಿ ಹಾಗೂ ಮೇಲ್‌ಸ್ತರದ ವಲಯಗಳಲ್ಲಿ ದುಡಿಯುತ್ತಿರುವವರು ಮೇಲ್‌ಸ್ತರದ ವಲಯಗಳಲ್ಲಿ ತಮ್ಮ ಸೇವಾವಧಿ ಮುಗಿಯುವವರೆಗೆ ಉಳಿಯುವಂತೆ ನೀತಿ ರಚಿಸಿದೆ.

ವರ್ಗಾವಣೆ ಕೈಗೊಳ್ಳುವಾಗ, ಖಾಲಿ ಇರುವ ಎಲ್ಲಾ ಸ್ಥಳಗಳನ್ನು ತೋರಿಸಬೇಕು ಎಂಬ ಸರಕಾರದ ನಿಯಮವಿದೆ. ಆದರೆ, ಇಲಾಖೆಯ ಅಧಿಕಾರಿಗಳು, ಕೌನ್ಸಿಲಿಂಗ್ ಸಮಯದಲ್ಲಿ ಹಣದ ಆಮಿಷಕ್ಕೆ ಒಳಗಾಗಿ, ಕೆಲವು ಖಾಲಿ ಇದ್ದ ಸ್ಥಳಗಳನ್ನು ಮುಚ್ಚಿಟ್ಟು, ಕಾರ್ಯಭಾರ ಕಡಿಮೆ ಇದ್ದರೂ ಅಂತಹ ಕೆಲವು ಸ್ಥಳಗಳನ್ನು ತೆರೆದಿಟ್ಟು ಕೌನ್ಸಿಲಿಂಗ್ ನಡಿಸಿದ್ದಾರೆ. ಪ್ರಾಂಶುಪಾಲರುಗಳು ಲಿಖಿತವಾಗಿ ನೀಡಿದ ಕಾರ್ಯಭಾರಗಳ ಪತ್ರಗಳನ್ನು ಎಸೆದು, ತಮಗೆ ಬೇಕಾದವರಿಗೆ ಸ್ಥಳ ‘ಬಚ್ಚಿಡು’ ಮತ್ತು ‘ಹುಡುಕಿಡು’ ಇಂತಹ ಸಣ್ಣತನದ ಬುದ್ಧಿಯನ್ನು ಇಲಾಖೆಯ ಅಧಿಕಾರಿಗಳು ತೋರಿದ್ದಾರೆ. ಇಂತಹವರ ವಿರುದ್ಧ ಅನೇಕ ಬೋಧಕರು ಕೌನ್ಸಿಲಿಂಗ್ ಸಮಯದಲ್ಲೇ ಪ್ರಶ್ನಿಸಿದರೂ ಅದಕ್ಕೆ ಪ್ರತಿಕ್ರಿಯಿಸದೆ ವರ್ಗಾವಣೆ ಮಾಡಿದ್ದಾರೆ.

ಅಲ್ಲದೆ ಈ ಇಲಾಖೆಯಲ್ಲಿ ವಲಯಗಳ ವಿಂಗಡಣೆಯು ವಿಚಿತ್ರವಾಗಿದೆ. ಒಂದೇ ಜಿಲ್ಲಾ ಕೇಂದ್ರದಲ್ಲಿಯೇ ಇರುವ ಅಕ್ಕಪಕ್ಕದ ಕಾಲೇಜುಗಳಲ್ಲಿ ಒಂದನ್ನು ಸಿ ವಲಯದ ಕಾಲೇಜು ಎಂದು, ಮತ್ತೊಂದನ್ನು ಡಿ ವಲಯದ ಕಾಲೇಜು ಎಂದು ವಿಭಾಗಿಸಿದ್ದಾರೆ. ಒಂದೇ ತಾಲೂಕಿನಲ್ಲಿರುವ ಅಕ್ಕಪಕ್ಕದಲ್ಲಿಯೇ ಇರುವ ಕೆಲವು ಕಾಲೇಜುಗಳು ಡಿ ವಲಯವಾದರೆ, ಕೆಲವು ಸಿ ವಲಯ ಎಂದಿದ್ದಾರೆ. ಒಂದೇ ಸಮನಾದ ಜನವಸತಿ ಇರುವ ಹಳ್ಳಿಗಳಲ್ಲಿರುವ ಕೆಲವು ಕಾಲೇಜು ಇ ವಲಯ ಎಂದು ಕೆಲವನ್ನು ಡಿ ಮತ್ತು ಸಿ ವಲಯ ಎಂದಿದ್ದಾರೆ. ಈ ವಲಯ ವಿಂಗಡಣೆಯ ಬಗ್ಗೆ ಪ್ರಶ್ನಿಸಿದರೆ, ಇಲಾಖೆಯ ಬಳಿ ಸರಿಯಾದ ಉತ್ತರ ಸಿಗುತ್ತಿಲ್ಲ. ಒಂದು ನಿರ್ದಿಷ್ಟ ಮಾನದಂಡ ಇಲ್ಲದೆ ತಲೆಬುಡ ಸರಿ ಇಲ್ಲದ ಈ ವಲಯ ವಿಂಗಡಣೆಯೂ ಸಹ ಇಲಾಖೆಯ ಒಂದು ತಂತ್ರವಾಗಿದೆ.

ವರ್ಗಾವಣೆಗೆ ನಿಯಮದಲ್ಲಿ ಪತಿ-ಪತ್ನಿ ಪ್ರಕರಣದಲ್ಲಿ, ಕರ್ತವ್ಯ ನಿರ್ವಹಿಸುತ್ತಿರುವ ದಂಪತಿಗೆ ಲಭ್ಯವಿರುವ ಸಮೀಪದ ಸ್ಥಳಗಳಿಗೆ ಮಾತ್ರ ವರ್ಗಾವಣೆ ಮಾಡಬೇಕೆಂಬ ನಿಯಮವಿದೆ. ಇಲ್ಲಿ ಪತಿ ಅಥವಾ ಪತ್ನಿಗೆ ತಮ್ಮ ಸೇವಾ ಜ್ಯೇಷ್ಠತೆ ಮೇಲೆ ಒಂದೇ ಜಿಲ್ಲೆಯಲ್ಲಿ ಅಥವಾ ತಾಲೂಕಿನಲ್ಲಿ ಸ್ಥಳ ಸಿಗುವ ಸಾಧ್ಯತೆ ಇದ್ದರೂ ಇಲಾಖೆಯು ವಿಶೇಷ ಕಡ್ಡಾಯ ವರ್ಗಾವಣೆಯ ನೆಪದಲ್ಲಿ ಅವರನ್ನು ಬೇರೆ ಬೇರೆ ಜಿಲ್ಲೆಗಳನ್ನು ಆಯ್ಕೆ ಮಾಡಿಕೊಳ್ಳುವಂತೆ ನಿಯಮ ರೂಪಿಸಿ ವರ್ಗಾವಣೆ ಮಾಡಿದೆ. ನಿಯಮ ಉಲ್ಲಂಘಿಸಿದ ಇಲಾಖೆಯ ವಿರುದ್ಧ ಈಗಾಗಲೇ ಪತಿ-ಪತ್ನಿ ಪ್ರಕರಣದಡಿ ನ್ಯಾಯಾಲಯದ ಮೊರೆ ಹೋಗಿದ್ದಾರೆ.

ಇಲಾಖೆಯು ದಿನಾಂಕ 26-09-2024 ಮತ್ತೊಂದು ವಿಶೇಷ ತಿದ್ದುಪಡಿ ರಚಿಸಿತು. ಅದರಲ್ಲಿ, ನಿಯಮ 4(4)(ಬಿ)ಯ ತಿದ್ದುಪಡಿಯ ಪ್ರಕಾರ ಬೋಧಕರ ಅವಲಂಬಿತರು ಅಂಗವೈಕಲ್ಯವನ್ನು ಹೊಂದಿದ್ದರೆ, ಅವರಿಗೆ ವಿಶೇಷ ಪ್ರಕರಣದಡಿ ವರ್ಗಾವಣೆ ಮಾಡಲಾಗುವುದು ಎಂದು ತಿಳಿಸಿತ್ತು. ವಿಶೇಷ ಪ್ರಕರಣದಡಿ ವರ್ಗಾವಣೆ ಬಯಸುವವರಿಗೆ ಆನ್‌ಲೈನ್ ಅರ್ಜಿ ಹಾಗೂ ದಾಖಲೆಗಳನ್ನು ಸಲ್ಲಿಸಲು ತಿಳಿಸಲಾಗಿತ್ತು. ಇಲಾಖೆಯ ಅಧಿಕಾರಿಗಳು ಒಳಗೊಳಗೆ ತಮಗೆ ಬೇಕಾದವರಿಗೆ ಆನ್‌ಲೈನ್ ಅರ್ಜಿ ಸಲ್ಲಿಸಲು ಹೇಳಿ, ಭೌತಿಕ ತಪಾಸಣೆ ನಡೆಸದೆ ವರ್ಗಾವಣೆಯಲ್ಲಿ ವಿಶೇಷ ಅನುಕೂಲ ಮಾಡಿಕೊಟ್ಟಿದೆ. ಇದರಿಂದಾಗಿ ನಿಜವಾದ ಅವಲಂಬಿತ ಅಂಗವೈಕಲ್ಯ ಹೊಂದಿದ ವ್ಯಕ್ತಿಗಳಿಗೆ ಅನ್ಯಾಯವಾಗಿದೆ.

ಇದಲ್ಲದೆ, ವಿಶೇಷ ಕಡ್ಡಾಯ ವರ್ಗಾವಣೆಯು ನಿಯಮ ಬಾಹಿರವಾಗಿದೆಯೆಂದು, ಕೆಲವರು ನ್ಯಾಯಾಲಯದಿಂದ ತಡೆ ಆಜ್ಞೆಯನ್ನು ತಂದರು. ವರ್ಗಾವಣೆಗೊಂಡವರನ್ನು ಆಯಾ ಕಾಲೇಜಿನ ಕರ್ತವ್ಯದಿಂದ ಬಿಡುಗಡೆ ಮಾಡಬೇಕಾದುದು ಆಯಾ ಕಾಲೇಜಿನ ಪ್ರಾಂಶುಪಾಲರು. ಆದರೆ, ಇಲಾಖೆಯ ಆಯುಕ್ತರು ನ್ಯಾಯಾಲಯದ ತಡೆ ಆಜ್ಞೆಯನ್ನು ಉಲ್ಲಂಘಿಸಿ ತಾವೇ ನೇರವಾಗಿ ವರ್ಗಾವಣೆ ಗೊಂಡವರನ್ನು ಬಿಡುಗಡೆ ಗೊಳಿಸಿ, ನ್ಯಾಯಾಲಯದ ಆಜ್ಞೆಗೂ ಕಿಮ್ಮತ್ತು ಕೊಡದೆ ವರ್ತಿಸುತ್ತಿದ್ದಾರೆ. ಇದರಿಂದಾಗಿ, ಈ ಇಲಾಖೆಯಲ್ಲಿ ನ್ಯಾಯಾಲಯದ ಆದೇಶಗಳು ಕಸದ ಬುಟ್ಟಿಯ ಪತ್ರಗಳಂತಾಗಿವೆ.

ಉನ್ನತ ಶಿಕ್ಷಣ ಇಲಾಖೆಯ ವರ್ಗಾವಣೆಯ ಕರ್ಮಕಾಂಡಗಳನ್ನು ಹೇಳುತ್ತಾ ಹೋದರೆ ಇನ್ನೂ ಸಾಕಷ್ಟು ಇವೆ. ಶಿಕ್ಷಕರ ವರ್ಗಾವಣೆಯ ನೆಪದಲ್ಲಿ ಹಣ ಮಾಡುವ ಖಯಾಲಿ ಇಲಾಖೆಯ ಅಧಿಕಾರಿಗಳಲ್ಲಿ ಎದ್ದು ಕಾಣುತ್ತಿದೆ. ಈ ವಿಶೇಷ ಕಡ್ಡಾಯ ವರ್ಗಾವಣೆಯಲ್ಲಾಗುವ ಅನ್ಯಾಯದ ವಿರುದ್ಧ ನೂರಾರು ಪತ್ರಗಳು ಇಲಾಖೆಗೆ ಹೋಗಿದ್ದರೂ, ಇಲಾಖೆ ಒಂದು ಪತ್ರಕ್ಕೂ ಇದುವರೆಗೂ ಉತ್ತರ ನೀಡಿರುವುದಿಲ್ಲ. ವರ್ಗಾವಣೆಯ ತಿದ್ದುಪಡಿಯ ವಿರುದ್ಧ ಬರೆದ ಸಾವಿರಾರು ಪತ್ರ ಮತ್ತು ಇಮೇಲ್‌ಗಳನ್ನು ಇಲಾಖೆ ಪರಿಗಣಿಸಿಯೇ ಇಲ್ಲ. ಕಾಲೇಜು ಶಿಕ್ಷಣ ಇಲಾಖೆಯ ಅಧಿಕಾರಿಗಳು ನಿರಂಕುಶ ಆಡಳಿತರೂಢರಾಗಿದ್ದರೂ ಸಹ ಸರಕಾರದ ಉನ್ನತ ಶಿಕ್ಷಣ ಸಚಿವರು ತಮಗೂ ಮತ್ತು ಇಲಾಖೆಗೂ ಯಾವುದೇ ಸಂಬಂಧ ಇಲ್ಲದ ರೀತಿಯಲ್ಲಿ ಇದ್ದಾರೆ. ಇಲಾಖೆಯ ವಿಶೇಷ ಕಡ್ಡಾಯ ವರ್ಗಾವಣೆ ನಿಯಮದಿಂದ ತೊಂದರೆಗೀಡಾದ ಶಿಕ್ಷಕರು ಈ ವರ್ಷದ ಮಧ್ಯಂತರದಲ್ಲಿ ತಾವು ವರ್ಗಾವಣೆಗೊಂಡ ಸ್ಥಳಗಳಲ್ಲಿಯೂ ಉಳಿಯಲಾಗದೆ, ಕೆಲವರು ಪ್ರತೀ ದಿನ ನೂರಾರು ಕಿ.ಮೀ. ಸಂಚಾರ ಮಾಡಿ ತಡವಾಗಿ ಕಾಲೇಜಿಗೆ ಬಂದು ಬೇಗನೇ ಕಾಲೇಜು ತೊರೆಯುತ್ತಿದ್ದಾರೆ. ಇನ್ನು ಕೆಲವರು ರಜೆ ಹಾಕಲು ಕ್ಯಾಲೆಂಡರ್‌ನಲ್ಲಿ ರಜೆದಿನಗಳನ್ನು ಹುಡುಕುವುದರಲ್ಲೇ ಮಗ್ನರಾದರೆ, ಕೆಲವು ಶಿಕ್ಷಕಿಯರು ಸಿಸಿಎಲ್‌ನಲ್ಲಿ ದೀರ್ಘಕಾಲಿಕ ರಜೆ ಹಾಕಿ ಹೋಗುತ್ತಿದ್ದಾರೆ. ಶಿಕ್ಷಕರಿಗೆ ವರ್ಗಾವಣೆ ನಿಯಮ ಸಾಮಾನ್ಯ. ಆದರೆ, ನೀವು ವರ್ಗಾವಣೆಗೊಂಡ ಕಾಲೇಜಿಗೆ ಹೀಗೆ ಅನ್ಯಾಯ ಮಾಡುತ್ತಿರುವುದು ತಪ್ಪಲ್ಲವೇ ಎಂದು ಪ್ರಶ್ನಿಸಿದರೆ, ಅದಕ್ಕೆ ಅವರು, ‘‘ಇಲಾಖೆಯು ಎಲ್ಲಾ ಸಿಬ್ಬಂದಿಗೂ ಒಂದು ವರ್ಗಾವಣೆ ನಿಯಮ ಮಾಡಿದರೆ, ನಾವು ನಮ್ಮ ಸೇವಾ ಜ್ಯೇಷ್ಠತೆ ಮೇಲೆ ಸಿಕ್ಕಿದೆ ಫಲ ಎಂದು ಸಂತೋಷದಿಂದ ದುಡಿಯಬಹುದು. ಆದರೆ, ಇಲಾಖೆಯು ವಿಶೇಷ ಕಡ್ಡಾಯ ವರ್ಗಾವಣೆ ನಿಯಮ ಮಾಡಿ ಸಿಬ್ಬಂದಿಯನ್ನು ಬೇರೆ ಬೇರೆ ನಿಯಮದಡಿ ಪರಿಗಣಿಸಿದಾಗ, ಅಲ್ಲದೆ ಇಲಾಖೆಯ ಅಧಿಕಾರಿಗಳಿಂದ ಅನ್ಯಾಯಕ್ಕೊಳಗಾದಾಗ ನಮ್ಮ ಭಾವನೆಗೆ ಧಕ್ಕೆಯುಂಟಾಗುತ್ತದೆ. ಇದರಿಂದ, ನಮ್ಮ ಇಲಾಖೆಯ ಬಗ್ಗೆ ನಮಗೇ ಬೇಸರವಾಗುತ್ತದೆ’’ ಎಂದಿದ್ದಾರೆ. ಇಲಾಖೆಯ ವಿಶೇಷ ಕಡ್ಡಾಯ ವರ್ಗಾವಣೆಯು ಒಂದು ಕಡೆ ಶಿಕ್ಷಕರ ಮನಸ್ಸನ್ನು ಇನ್ನೊಂದು ಕಡೆ ವಿದ್ಯಾರ್ಥಿಗಳ ಭವಿಷ್ಯವನ್ನು ಹಾಳು ಮಾಡಿದೆ.

share
ಹಾಲಮ್ಮ ಕೆ. ಹಿರೆಮಠ್
ಹಾಲಮ್ಮ ಕೆ. ಹಿರೆಮಠ್
Next Story
X